ಸ್ನೇಹಿತರೆ ನೀವು ಕೂರ್ಗ್ ನ ಪ್ರವಾಸವನ್ನು ಏಕೆ ಮಾಡಬೇಕು ಎಂದು ನಮ್ಮ ಈ ಲೇಖನದಲ್ಲಿ ವಿವರಿಸಲಾಗಿದೆ.

ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು
ಭಾರತದ ಪ್ರಮುಖ ಹಲವಾರು ಪ್ರವಾಸ ಮಾಡುವ ತಾಣಗಳಲ್ಲಿ ಒಂದು ಕೊಡಗು ಜಿಲ್ಲೆಯಾಗಿದೆ. ಅದರಲ್ಲೂ ಕರ್ನಾಟಕದ ಜನರಿಗೆ ತುಂಬಾ ಇಷ್ಟವಾದಂತಹ ತಾಣವು ಇಲ್ಲಿದೆ. ಮಳೆಗಾಲದಲ್ಲಿ ಅಂತು ಪ್ರವಾಸ ಮಾಡಲು ಜನರು ಬಹಳ ಕಾತುರತೆಯಿಂದ ಕಾಯುತ್ತಾರೆ.
ನಮ್ಮ ದೇಶದಲ್ಲಿ ಅತಿ ಹೆಚ್ಚಾಗಿ ಕಾಫಿ ಉತ್ಪಾದನೆ ಮಾಡುವ ಪ್ರದೇಶಗಳಲ್ಲಿ ಕೂರ್ಗ್ ಒಂದಾಗಿದೆ, ಇಲ್ಲಿ ಐತಿಹಾಸಿಕ ಯೋಧರ ಜನಪ್ರಿಯ ಪ್ರದೇಶವಾಗಿದೆ . ಕೂರ್ಗ್ ನಲ್ಲಿ ಹಲವಾರು ಆಕರ್ಷಣೆ ಆಗುವಂತಹ ಪ್ರದೇಶಗಳು ಹೊಂದಿವೆ.
Table of Contents
ಪ್ರವಾಸ ಏಕೆ ಕೈಗೊಳ್ಳಬೇಕು

ಕೂರ್ಗ್ ನ ಜನರ ಸ್ಥಳೀಯ ಸಂಪ್ರದಾಯವನ್ನು ನಾವು ತಿಳಿಯಬಹುದು. ಕೂರ್ಗ್ ಪ್ರದೇಶದ ಸ್ಥಳೀಯ ಜನರು ತನ್ನದೇ ಆದ ಸಾಂಪ್ರದಾಯಿಕ ವೈವಿಧ್ಯತೆಯನ್ನು ಹೊಂದು ಹೆಸರುವಾಸಿಯಾಗಿದೆ.ಇಲ್ಲಿ ಹಲವು ರೀತಿಯ ವಿಭಿನ್ನ ಪದ್ಧತಿಗಳು, ಸಂಪ್ರದಾಯ ಮತ್ತು ಜೀವನ ಶೈಲಿಯನ್ನು ನಾವೆಲ್ಲರೂ ಕಾಣಬಹುದು, ಭಾಷೆಯಂತೆ ಮಾತನಾಡುವ ಜನರು ಇದ್ದಾರೆ.
ಹಾಗೆ ಇಲ್ಲಿನ ಜನರು ವಿಶೇಷವಾಗಿ ಕಾಣುವ ಶೈಲಿಯ ಬಟ್ಟೆಯನ್ನು ಇಲ್ಲಿಯ ಪುರುಷ ಮತ್ತು ಮಹಿಳೆಯರು ಧರಿಸಿಕೊಳ್ಳುತ್ತಾರೆ .ಕೊಡಗಿನವರ ವಿಶೇಷವೇಶಭೂಷಣಗಳು, ನೃತ್ಯದ ಶೈಲಿಯಿಂದ ನಮ್ಮ ಕರ್ನಾಟಕದ ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ಜನರು ಕೈಲ್ಪಾಡ್ , ಕಾವೇರಿ ಸಂಕ್ರಮಣ ಹಾಗೂ ಪುತ್ತರಿಯಂತಹ ಹಬ್ಬಗಳನ್ನು ಜನರ ಕಣ್ಣಿಗೆ ಕಟ್ಟುವಂತೆ ಆಚರಿಸುತ್ತಾರೆ.
ಸುಂದರವಾಗಿ ಕಾಣುವಂತಹ ಗಿರಿಧಾಮಗಳು

ಕೂರ್ಗ್ ಪ್ರದೇಶ ಕೇವಲ ಕಾಫಿ ತೋಟಗಳನ್ನು ಹೊಂದಿರುವ ಪ್ರದೇಶ ಮಾತ್ರವಲ್ಲ, ಬದಲಾಗಿ ಇದು ಕರ್ನಾಟಕದ ಜನಪ್ರಿಯ ಗಿರಿಧಾಮವು ಕೂಡ ಆಗಿದೆ. ಹೊಸದಾಗಿ ಮದುವೆಯಾದ ಜೋಡಿಗಳು ಮಧುಚಂದ್ರಕ್ಕಾಗಿ ಕೂರ್ಗ್ ತಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಮತ್ತು ಇಲ್ಲಿ ಪ್ರಶಾಂತವಾದ ಹವಾಮಾನ, ಕಾಫಿ ತೋಟಗಳು, ಮತ್ತು ರುದ್ರ ರಮಣೀಯ ಪ್ರಕೃತಿ ಸಂಪತ್ತುಗಳು ಎಂತಹ ವ್ಯಕ್ತಿಗಳಿಗೂ ಕೂಡ ಅಚ್ಚರಿ ಮೂಡಿಸುತ್ತದೆ. ಹಾಗೆ ಜನರ ಆಧ್ಯಾತ್ಮಿಕತೆಯನ್ನು ಹೆಚ್ಚು ಮಾಡುವ ತಲಕಾವೇರಿ, ಮಡಿಕೇರಿಯ ಹತ್ತಿರವಿರುವ ಹಲವು ಪ್ರವಾಸ ತಾಣಗಳಿಗೆ ನೀವೆಲ್ಲರೂ ಹೋಗಬಹುದು.
ಅಷ್ಟೇ ಅಲ್ಲದೆ ಇಲ್ಲಿನ ಹಲವು ತಾಣಗಳಾದ ಇರುಪ್ಪು ಜಲಪಾತ, ಮಲ್ಲಳ್ಳಿ ಜಲಪಾತ, ಲಕ್ಷ್ಮಣ ತೀರ್ಥ ನದಿ, ಗೋಲ್ಡನ್ ಟೆಂಪಲ್, ನಿಸರ್ಗಧಾಮ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ಇಡೀ ವರ್ಷ ಪ್ರವಾಸಿಗರನ್ನು ಬೆಳೆಯುತ್ತದೆ.
ಪರಿಶುದ್ಧವಾದ ವಾತಾವರಣ
ಈ ವಾತಾವರಣದಲ್ಲಿ ಅತ್ಯಂತ ಶ್ರೀಮಂತವಾಗಿ ಬೆಳೆದು ನಿಂತ ಸಸ್ಯ ಸಂಪತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಇಲ್ಲಿ ಹಲವು ರೀತಿಯ ಸಾವಿರಾರು ಜಾತಿಯ ಸಸ್ಯಗಳನ್ನು ನೀವು ನೋಡಬಹುದು, ಅದಲ್ಲದೆ ಅಕೇಶಿಯ, ಶ್ರೀಗಂಧ ಮತ್ತು ತೇಗವೃಕ್ಷಗಳು ಕೂರ್ಗ್ ಪ್ರದೇಶದ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ.
ಈ ಪ್ರದೇಶದಲ್ಲಿ ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ ಗಳಲ್ಲಿ ಇರುವಂತಹ ವನ್ಯಜೀವಿಗಳ ಅಭಯಾರಣ್ಯಗಳಲ್ಲಿ ನೀವು ಜೀವನದಲ್ಲಿ ನೋಡದೆ ಇರುವಂತಹ ಪ್ರಾಣಿಗಳನ್ನು ಕಾಣಬಹುದು, ರಾಷ್ಟ್ರೀಯ ಉದ್ಯಾನವನ ನಾಗರಹೊಳೆಯಲ್ಲಿ ಏಷ್ಯ್ಯಾಟಿಕ್ ಆನೆ, ಚಿರತೆ, ಕರಡಿಗಳು ಕೂಡಿ ಹಲವಾರು ಪ್ರಾಣಿಗಳನ್ನು ನೀವೆಲ್ಲರೂ ವೀಕ್ಷಿಸಬಹುದು.
ಕೂರ್ಗ್ ನ ಉಪಹಾರ
ಸ್ನೇಹಿತರೆ ನೀವೆಲ್ಲರೂ ಯಾವುದೇ ಒಂದು ಪ್ರವಾಸ ತಾಣಗಳು ಮತ್ತು ಯಾವುದೇ ಉದ್ಯಾನವನ ಗಳಿಗೆ ಹೋದಾಗ ನೀವು ಅಲ್ಲಿನ ಸ್ಥಳೀಯ ಪ್ರದೇಶದ ಆಹಾರವನ್ನು ಸವಿದಾಗ ಮಾತ್ರ ನಿಮ್ಮ ಪ್ರವಾಸಗಳು ಪರಿಪೂರ್ಣವಾಗುತ್ತದೆ. ಅದೇ ರೀತಿಯಲ್ಲಿ ಕೂರ್ಗ್ ನ ಪ್ರವಾಸದಲ್ಲಿ ನೀವು ಇದ್ದಾಗ ನೀವು ಅಲ್ಲಿನ ಸ್ವಾದಿಷ್ಟ ಆಹಾರವನ್ನು ಸೇವಿಸಲೇಬೇಕು.
ಈ ಕೂರ್ಗ್ ನಲ್ಲಿ ಹೆಸರುವಾಸಿ ಆಗಿರುವಂತಹ ಆಹಾರಗಳು ಬಿದಿರು ಚಿಗುರು ಕರಿ, ಕಡಂಬುಟ್ಟು, ಪಾಪುಟ್ಟ ,ಕೂರ್ಗ್ ಸ್ಟೈಲ್ ಕೋಳಿ ಸಾರು, ಅಕ್ಕಿ ರೊಟ್ಟಿ ಸೇರಿದಂತೆ ಹಲವಾರು ರೀತಿಯ ಆಹಾರಗಳು ಇಲ್ಲಿ ಜನಪ್ರಿಯವಾಗಿದೆ.
ಹಾಗೆ ಸ್ನೇಹಿತರೆ ನಾವೆಲ್ಲರೂ ಪ್ರವಾಸ ಮಾಡುವುದು ನಮ್ಮ ಪ್ರಕೃತಿಯನ್ನು ನೋಡಿ ಆನಂದ ಪಡುವುದಕ್ಕೆ ಪ್ರವಾಸ ಮಾಡುತ್ತೇವೆ. ನೀವೆಲ್ಲರೂ ಪ್ರವಾಸೋದ್ಯಮಗಳಲ್ಲಿ ಮುನ್ನೆಚ್ಚರಿಕೆಯಿಂದ ಹುಷಾರಾಗಿ ಬಂದು ಹುಷಾರಾಗಿ ಹಿಂದಿರುಗಿ ಹೋಗಿ ಯಾವುದೇ ತರಹದ ಅನಾಹುತಗಳನ್ನು ಮಾಡಿಕೊಳ್ಳಬೇಡಿ.
LATEST POSTS