ತಾಳಿಕೋಟೆ ಕದನ Talikote kadana in kannada

ತಾಳಿಕೋಟೆ ಕದನದ ಪರಿಚಯ

ತಾಳಿಕೋಟೆ ಕದನ ಅಥವಾ ರಕ್ಕಸ ತಂಗಡಿ ಕದನ 1565ರಲ್ಲಿ ಈ ಕದನ ನಡೆಯಿತು ಈ ಕದನವು ಇಡೀ ದಕ್ಷಿಣ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಯುದ್ಧಗಳಲ್ಲಿ ಒಂದಾಗಿದೆ. ಈ ಕಧನವು ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಕೋಟೆಯಾಗಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ದೊಡ್ಡ ರೀತಿಯ ಪೆಟ್ಟುಕೊಟ್ಟು ಧಖ್ಖನ್ ಮತ್ತು ದಕ್ಷಿಣ ಭಾರತದಲ್ಲಿ ಮುಸ್ಲಿಮರ ಸಾರ್ವಭೌಮತ್ವ ಪಡೆಯಲು ಸಹಾಯ ಮಾಡಿ ಕೊಟ್ಟಿದೆ. ಈ ಯುದ್ಧವು ವಿಜಯನಗರ ಸೈನ್ಯಗಳ ಸೋಲಿನೊಂದಿಗೆ ಮುಕ್ತಾಯವಾಗಿತ್ತು ವೈಭವದಿಂದ ಕೋಡಿದ್ದ ಮಹಾನಗರವಾದ ವಿಜಯನಗರ ವಿನಾಶದಿಂದ ಮುಕ್ತಾಯವಾಯಿತು. ಇದರಿಂದ ಉಂಟಾದ ವಿನಾಶದಿಂದ ವಿಜಯನಗರ ಸಾಮ್ರಾಜ್ಯ ಸಂಪೂರ್ಣವಾಗಿ ನೆಲಕಚ್ಚಿ ಮತ್ತೆ ಎದ್ದೇಳಲು ಆಗದಂತಹ ಸ್ಥಿತಿಯನ್ನು ತಲುಪಿತು.

ತಾಳಿಕೋಟೆ ಕದನ

ಯಾವುದೇ ಯುದ್ಧಗಳಾಗಲಿ ಪ್ರತಿಯೊಂದು ಯುದ್ದಕ್ಕೂ ಅದರದ್ದೆ ಆದ ಕಾರಣಗಳು ಇರುತ್ತವೆ ಈ ಯುದ್ಧದ ಕಾರಣಗಳು ತಿಳಿಯೋಣ

ಯುದ್ಧಕ್ಕೆ ಕಾರಣಗಳು

ರಾಜಕೀಯ ಒಡಕು :

  • ರಾಮಾಯಣ ಸಹೋದರರು ಮತ್ತು ಸೈನಿಕ ಸೇನಾಪತಿಗಳ ನಡುವೆ ವಿಶ್ವಾಸ ನಂಬಿಕೆ ಇಲ್ಲದ ಕಾರಣ
  • ಸುಲ್ತಾನರ ಒಕ್ಕೂಟ ಸುಲ್ತಾನರ ನಾಲ್ಕು ಮುಸ್ಲಿಂ ರಾಜ್ಯಗಳು ಅಂದರೆ ಬಿಜಾಪುರ ಗೋಲ್ಕೊಂಡ ಅಹಮದ್ನಗರ ಬೀದರ್ ಒಟ್ಟುಗೂಡಿ ತಾಳಿಕೋಟೆ ಕದನಕ್ಕೆ ಆಹ್ವಾನ ಕೊಟ್ಟರು
  • ಅಸಮರ್ಥ ನಾಯಕತ್ವ ವಿಜಯನಗರದ ಸೈನಿಕ ರಾಮಾಯಣ ನಾಯಕನಾಗಿದ್ದನು ಅವನು ವೃದ್ಧನು ಮತ್ತು ಅಹಂಕಾರನಾಗಿದ್ದನು ಸೈನ್ಯದ ಇನ್ನೆರಡು ವಿಭಾಗಗಳು ಸಾಕಷ್ಟು ವಯಸ್ಸಾದ ಅವನ ತಮ್ಮಂದಿರಾದ ವೆಂಕಟದ್ರಿ ಮತ್ತು ತಿರುಮಲ ಕೈ ಕೆಳಗಿದ್ದವು ಬಹಮನಿ ಸೈನ್ಯಗಳು ಯುವಕ ಉತ್ಸಾಹಿ ಮತ್ತು ಛಲದ ಸುಲ್ತಾನರ ಮುಖಂಡತ್ವವನ್ನು ಪಡೆದಿದ್ದವು
  • ಕದನದಲ್ಲಿ ರಾಮಾಯಣ ಸೈನ್ಯ ಅಧಿಕಾರಿಗಳು ದ್ರೋಹ ಮಾಡಿ ಸುಲ್ತಾನರಿಗೆ ಸಹಾಯ ಮಾಡಿದರು

ಧಾರ್ಮಿಕ ದುರ್ಬಲತೆಗಳು:

  • ತಾಳಿಕೋಟೆ ಕದನಕ್ಕೆ ಪ್ರಮುಖವಾದದ್ದು ಧಾರ್ಮಿಕತೆ ಹಿಂದೂ ಮುಸ್ಲಿಮರ ಸಂಘರ್ಷ ರಾಮಾಯಣ ಹಿಂದೂ ಧರ್ಮದ ಪಕ್ಷಪಾತ ಮಾಡುತ್ತಿರುವುದು ಸುಲ್ತಾನರ ಕಣ್ಣಿಗೆ ಯುದ್ಧಕ್ಕೆ ಬರಲು ಸಹಾಯ ಮಾಡಿತು
  • ತಾಳಿಕೋಟೆ ಕದನದ ಸಮಯದಲ್ಲಿ ಸೇನೆಯಲ್ಲಿ ಧರ್ಮ ವಿಭಜನೆಯಾಗಿತ್ತು ಹಿಂದೂ ಮುಸ್ಲಿಮರ ಸೈನ್ಯದ ನಡುವೆ ಒಗಟು ಇರಲಿಲ್ಲ
  • ಧಾರ್ಮಿಕ ಸಹಿಷ್ಣುತೆ ಕಡಿಮೆಯಾಗಿದ್ದು ಸೈನ್ಯದಲ್ಲಿ ಸಂತುಷ್ಟಿ
  • ಕದನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಮುಖವಾದ ದೇವಾಲಯಗಳ ರಕ್ಷಣೆ ಗೋಸ್ಕರ ತನ್ನ ಸೈನ್ಯದ ಅರ್ಧದಷ್ಟು ಸೈನ್ಯವನ್ನು ದೇವಾಲಯಗಳ ರಕ್ಷಣೆಗೆ ಕಳಿಸುತ್ತಾನೆ.

ಸೈನ್ಯದ ದುರ್ಬಲತೆ :

  • ತಾಳಿಕೋಟೆ ಕದನದಲ್ಲಿ ಹಳೆಯ ರೀತಿ ಯುದ್ಧ ತಂತ್ರಗಳನ್ನು ರಾಮರಾಯ ಬಳಸಿಕೊಂಡದ್ದು ಮತ್ತು ಆನೆಗಳು ಕತ್ತಿ ವರಸೆಗಳ ಮೇಲೆ ಅವಲಂಬನೆ ಯಾಗಿದ್ದರಿಂದ ಯುದ್ಧಕ್ಕೆ ಕಾರಣ
  • ಆಧುನಿಕ ಶಾಸ್ತ್ರಗಳ ಕೊರತೆ . ಸುಲ್ತಾನ ಹತ್ತಿರ ಆಧುನಿಕ ಶಸ್ತ್ರಗಳು ತೋಪುಗಳು ಮತ್ತು ಫಿರಂಗಿಗಳು ಇವುಗಳ ಮುಂದೆ ರಾಮರಾಯ ನಿಲ್ಲಲು ಆಗಿಲ್ಲ
  • ಸಂಚಾರ ಮತ್ತು ಸರಬರಾಜು ಸಮಸ್ಯೆ, ಸೈನ್ಯಕ್ಕೆ ಯುದ್ಧದ ನಡುವೆ ಸಂಚಾರ ಮಾಡಲು ಮತ್ತು ಸರೋವರಜು ಶಸ್ತ್ರಗಳನ್ನು ಮಾಡಲು ತೊಂದರೆ ಆಗುತ್ತಿತ್ತು .

ವಿಜಯನಗರ ಸಾಮ್ರಾಜ್ಯ ಸೈನಿಕವಾಗಿ ಮತ್ತು ಆರ್ಥಿಕವಾಗಿ ಸಮರ್ಥವಾಗಿದ್ದರೂ ತಾಳೀಕೋಟೆ ಯುದ್ಧದಲ್ಲಿ ಸೋಲುಂಟಾಗಲು ಕಾರಣವೇನು ಎಂಬುದು ಇತಿಹಾಸಕಾರರ ಜಿಜ್ಞಾಸೆಗೆ ಒಳಗಾಗಿದೆ. ಇದಕ್ಕೆ ಅವರು ಹಲವಾರು ಕಾರಣಗಳನ್ನು ನೀಡುತ್ತಾರೆ. ಅವೆಂದರೆ,

ಸಮರ್ಥ ಸೈನ್ಯದ ಕೊರತೆ: ವಿಜಯನಗರ ಸೈನ್ಯದ ಸಂಖ್ಯಾಬಲ ದೊಡ್ಡದಾಗಿದ್ದರೂ ಅದರ ಹೋರಾಟ, ಶಕ್ತಿ ಮತ್ತು ದಕ್ಷತೆಗಳು ಸಮರ್ಥವಾಗಿರಲಿಲ್ಲ. ಬಹುಮನಿಯ ಸೈನ್ಯಗಳಂತೆ ಅದು ಆಧುನಿಕ ಶಸ್ತ್ರಾಸ್ತ್ರಗಳನ್ನು ಮತ್ತು ಯುದ್ಧ ವಿದ್ಯೆಯನ್ನು ಕರಗತಗೊಳಿಸಿಕೊಂಡಿರಲಿಲ್ಲ. ರಾಮರಾಯನು ಅಶ್ವಪಡೆಗೆ ಕುದುರೆಗಳನ್ನು ದೊರಕಿಸಿಕೊಟ್ಟಿದ್ದನು. ಇದರಿಂದಾಗಿ ವಿಜಯನಗರದ ಅಶ್ವಪಡೆಯು ಕೃಷ್ಣದೇವರಾಯನ ಕಾಲದಷ್ಟು ಶಕ್ತವಾಗಿರಲಿಲ್ಲ. ಬಹಮನಿಯ ಸೈನ್ಯಗಳು ಪರ್ಷಿಯಾದ ಕುದುರೆಗಳಿಂದ ಸುಸಜ್ಜಿತವಾಗಿದ್ದು ಯುದ್ಧರಂಗದಲ್ಲಿ ತಮ್ಮ ಮಿಂಚಿನ ವೇಗದಿಂದ ಚಲಿಸುತ್ತ ಅವುಗಳ ಹೋರಾಟ ಶಕ್ತಿಯನ್ನು ಇಮ್ಮಡಿಗೊಳಿಸಿದ್ದವು. ವಿಜಯನಗರದ ಸೈನ್ಯಗಳು ಆನೆಗಳನ್ನು ಹೆಚ್ಚಾಗಿ ಯುದ್ಧದಲ್ಲಿ ತೊಡಗಿಸಿದುದು ಮತ್ತು ಅವಲಂಬಿಸಿದ್ದು ಅವರಿಗೆ ಅನಾನುಕೂಲಕರವಾಯಿತು. ಆನೆಗಳ ಚಲನೆ ನಿಧಾನವಾಗಿತಲ್ಲದೆ ಶತೃಗಳ ಫಿರಂಘಿ ದಾಳಿಗಳಿಂದ ಭೀತವಾದ ಆನೆಗಳು ಸಿಕ್ಕಾಪಟ್ಟೆನುಗ್ಗಿ ತಮ್ಮ ಸೈನಿಕರನ್ನೇ ತುಳಿದು ನಾಶಮಾಡುತ್ತಿದ್ದವು.

ಕೆಳದರ್ಜೆಯ ಶಸ್ತ್ರಾಸ್ತ್ರಗಳು: ವಿಜಯನಗರದ ಸೈನ್ಯಗಳು ಬಳಸುತ್ತಿದ್ದ ಶಸ್ತ್ರಾಸ್ತ್ರಗಳೂ ಕೂಡ ಬಹಳ ಹಳೆಯ ಕಾಲದವಾಗಿದ್ದವು. ಸುಲ್ತಾನರ ಸೈನ್ಯಗಳು ಲೋಹದಿಂದ ಮಾಡಿದ ಬಾಣಗಳನ್ನು ಉಪಯೋಗಿಸುತ್ತಿದ್ದರೆ, ವಿಜಯನಗರ ಸೈನ್ಯಗಳು ಬೊಂಬಿನ ಬಾಣಗಳನ್ನು ಬಳಸುತ್ತಿದ್ದವು. ವಿಜಯನಗರದ ಅಶ್ವದಳಗಳು ಹಳೆಯ ಈಟಿ ಮತ್ತು ಕತ್ತಿಗಳನ್ನು ಬಳಸುತ್ತಿದ್ದವು. ಇವರ ಈಟಿಗಳು ಏಳು ಅಡಿಗಿಂತ ಉದ್ದವಾಗಿರಲಿಲ್ಲ. ಶತೃಸೈನ್ಯದವರು 15 ಅಥವಾ 16 ಅಡಿ ಉದ್ದದ ಈಟಿಗಳನ್ನು ಉಪಯೋಗಿಸುತ್ತಿದ್ದರು. ಇದು ಆ ಸೈನ್ಯಗಳ ಶಕ್ತಿಯನ್ನು ವೃದ್ಧಿಗೊಳಿಸಿದ್ದಿತು. ಇದಲ್ಲದೆ ಸುಲ್ತಾನರು ತಮ್ಮ ಪಡೆಗಳನ್ನು ಇತ್ತೀಚಿನ ಫಿರಂಘಿಗಳಿಂದ ಬಲಪಡಿಸಿದ್ದರು. ಐರೋಪ್ಯ ಸೈನಿಕರ ಮತ್ತು ಗೋವಾದ ಕೈಸ್ತರ ಕೈಯಲ್ಲಿ ಈ ಫಿರಂಘಿ ಪಡೆ ಇದ್ದಿತು. ಇದು ವಿಜಯನಗರದ ಪ್ರಭಲ ನ್ಯೂನತೆಯಾಗಿದ್ದಿತು.

ಅಸಮರ್ಥ ನಾಯಕತ್ವ: ವಿಜಯನಗರದ ಸೈನ್ಯಕ್ಕೆ ರಾಮರಾಯನು ನಾಯಕನಾಗಿದ್ದನು. ಅವನು ವೃದ್ದನು, ಅಹಂಭಾವದವನು ಆಗಿದ್ದನು. ಸೈನ್ಯದ ಇನ್ನೆರಡು ವಿಭಾಗಗಳು ಸಾಕಷ್ಟುವಯಸ್ಸಾದ ಅವನ ತಮ್ಮಂದಿರಾದ ವೆಂಕಟಾದ್ರಿ ಮತ್ತು ತಿರುಮಲರ ಕೈಕೆಳಗಿದ್ದವು. ಆದರೆ ಬಹಮನಿ ಸೈನ್ಯಗಳು ಯುವಕ, ಉತ್ಸಾಹಿ, ಮತ್ತು ಛಲದ ಸುಲ್ತಾನರ ಮುಂಖಡತ್ವವನ್ನು ಪಡೆದಿದ್ದವು. ರಾಮರಾಯನ ಆಕಸ್ಮಿಕ ಮರಣದ ತರುವಾಯ ವೆಂಕಟಾದ್ರಿ ಮತ್ತು ತಿರುಮಲರು ಹೇಡಿಗಳಂತೆ ವರ್ತಿಸಿದರು. ಅವರು ತಮ್ಮ ಸೈನ್ಯಗಳನ್ನು ಸಂಘಟಿಸಿ ತಮ್ಮ ರಾಜಧಾನಿಯಾದ ವಿಜಯನಗರವನ್ನಾದರೂ ಉಳಿಸಿಕೊಳ್ಳಲು ಹೋರಾಟ ನಡೆಸಬಹುದಾಗಿತ್ತು, ಆದರೆ ಅವರು ಯುದ್ಧರಂಗದಿಂದ ಓಡಿ ಹೋದುದಲ್ಲದೆ ತಮ್ಮ ರಾಜಧಾನಿಯನ್ನೂ ತೊರೆದು ದೂರ ತೆರಳಿದರು. ಇದು ಅತ್ಯಂತ ಅವಮಾನಕರ ಕೃತ್ಯವಾಗಿದ್ದಿತು.

ನಂಬಿಕೆ ದ್ರೋಹ: ವಿಜಯನಗರದ ಸೋಲಿಗೆ ಮೋಸ ಪ್ರಮುಖ.ಕಾರಣವಾಯಿತು. ಮಧ್ಯಭಾಗದಲ್ಲಿ ಗಿಲಾನಿ ಸಹೋದರರು ರಾಮರಾಯನಿಗೆ ಮೋಸ ಮಾಡಿ ತಮ್ಮ ಸೈನಿಕರೊಂದಿಗೆ ಶತೃಪಕ್ಷವನ್ನು ಸೇರಿದರು. ಇದು ವಿಜಯನಗರದ ಸೈನ್ಯದಲ್ಲಿ ಅಸ್ತವ್ಯಸ್ತತೆಯನ್ನುಂಟು ಮಾಡಿತು. ರಾಮರಾಯನು ಅಂತಹವರನ್ನು ಬರಮಾಡಿಕೊಂಡು ತನ್ನ ಸೈನ್ಯದಲ್ಲಿನ ಮುಸ್ಲಿಂ ಸೈನಿಕರ ದಂಡನಾಯಕತ್ವವನ್ನು ವಹಿಸಿದುದು ಅವನು ಮಾಡಿದ ಘೋರ ಅಪರಾಧವಾಗಿದ್ದಿತು. ಇವರು ಮಾಡಿದ ಮೋಸ ವಿಜಯನಗರದ ಸೈನಿಕರ ಹೋರಾಟಕ್ಕೆ ಮಾರಕವಾಗಿ ಅವುಗಳ ಸೋಲಿಗೆ ಕಾರಣವಾಯಿತು.

ತಾಳಿಕೋಟೆ ಕದನ

ತಾಳಿಕೋಟೆ ಕದನದ ಪರಿಣಾಮಗಳು :

ಈ ಯುದ್ಧ ದರ್ಶನ ಭಾರತ ಮತ್ತು ಭಾರತೀಯ ಇತಿಹಾಸದ ನಿರ್ಣಾಯಕ ಯುದ್ಧಗಳಲ್ಲಿ ಒಂದಾಗಿದೆ

  • ವಿಜಯನಗರ ಸಾಮ್ರಾಜ್ಯ 3 ಶತಮಾನಗಳಿಂದ ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಭದ್ರತೆ ಮತ್ತು ರಕ್ಷಣೆ ಕೊಡುತ್ತಿದ್ದ ಸಾಮ್ರಾಜ್ಯ ತಾಳಿಕೋಟೆ / ರಕ್ಕಸ ತಂಗಡಿ ಕದನದಿಂದ ನಾಶವಾಗಿತ್ತು
  • ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಅಲೈಕ್ಯತೆ ಭದ್ರತೆ ಮತ್ತು ಅವ್ಯವಸ್ಥೆಗಳು ತಲೆದೂರಿ ರಾಜಕತೆ ಎಲ್ಲೆಡೆ ನೆಲೆಸಿದವು ಹಿಂದೂ ಸಂಸ್ಕೃತಿ ಮತ್ತು ಧರ್ಮಗಳಿಗೆ ಗರ ಹೊಡೆಯಿತು
  • ಈ ಯುದ್ಧದಿಂದಾಗಿ ವಿಜನಗರ ಸಾಮ್ರಾಜ್ಯದ ಪ್ರಭಲತೆ ಮತ್ತು ವೈಭವಗಳು ಸಂಪೂರ್ಣ ನಾಶವಾಗಿತ್ತು.
  • ಈ ಯುದ್ಧದ ಪರಿಣಾಮವಾಗಿ ಸುಲ್ತಾನರು ಪ್ರಬಲವಾಗಿ ಮತ್ತು ಅಧಿಪತ್ಯವನ್ನು ಎಲ್ಲೆಡೆ ವಿಸ್ತರಿಸಲು ದಾರಿ ಮಾಡಿತು
  • ಭಾರತದಲ್ಲಿ ಪಾಳೆಗಾರರು ಸ್ವತಂತ್ರವಾಗಿ ಪ್ರಭುತ್ವ ನಡೆಸಲು ಮುಂದಾಗುತ್ತಾರೆ
  • ಸುಲ್ತಾನರು ಯುದ್ಧ ಗೆದ್ದ ಮೇಲೆ ವಿಜಯನಗರ ಸಾಮ್ರಾಜ್ಯದ ದೇವಾಲಯಗಳನ್ನು ಲೂಟಿ ಮಾಡಿದರು
  • ಕೊನೆಯಲ್ಲಿ ವಿಜಯನಗರ ಸಾಮ್ರಾಜ್ಯ ಹಾಳಾಯಿತು ಇದರ ನಂತರ ಅರವೀಡು ಸಂತತಿ ಆಳ್ವಿಕೆಗೆ ಮುಂದೆ ಬರುತ್ತದೆ.

ತಾಳಿಕೋಟೆ ಯುದ್ಧ ನಡೆದ ವರ್ಷ

1565

ತಾಳಿಕೋಟೆ ಯುದ್ಧ ನಡೆದ ಸ್ಥಳ

ತಾಳಿಕೋಟೆ

ಆದಿಕವಿ ಪಂಪ
ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು
ಭಾರತದ 7 ಅದ್ಭುತಗಳು 2025
ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ 

ಸ್ಥಾಪನೆಯ ಬಗ್ಗೆ ವಿದ್ವಾಂಸರಲ್ಲಿ ಅನೇಕಅಭಿಪ್ರಾಯಗಳು ಇವೆ.


ವಿಜಯನಗರ ಸಾಮ್ರಾಜ್ಯ 

ಸಂಗಮನ ಐವರು ಮಕ್ಕಳದ ಹರಿಹರ, ಬುಕ್ಕ ,ಕಂಪಣ್ಣಾಯ,ಮಾರಪ್ಪ ಮತ್ತು ಮುದ್ದಪ್ಪ ಎಂಬುವರು ಈ ಸಾಮ್ರಾಜ್ಯವನ್ನು ಸ್ಥಾಪಿಸಿದರೆಂದು ಅಭಿಪ್ರಾಯ . ಆದರೆ ರಾಬರ್ಟ್ ಸೀವೆಲ್ ನ ಅಭಿಪ್ರಾಯ ಏನಿದೆ ಎಂದರೆ ಓರoಗಲ್ಲಿನ ಪ್ರತಾಪ ರುದ್ರದೇವನ ಆಸ್ಥಾನದಲ್ಲಿದ್ದ ಹರಿಹರ ಮತ್ತು ಬುಕ್ಕರಾಯ ಎಂಬ ಸಹೋದರರು ಮುಸ್ಲಿಮರ ದಾಳಿಯಿಂದ ವಾರಂಗಲ್ ನಾಶವಾದ ಮೇಲೆ ಆನೆಗೊಂದಿಯ ಕಪಿಲ ರಾಯನ ಆಸ್ಥಾನದಲ್ಲಿ ಉನ್ನತ ಅಧಿಕಾರವನ್ನು ಪಡೆದರು. ಮಧ್ಯ ದೆಹಲಿಯಿಂದ ಆನೆಗೊಂದಿಗೂ ಬಂದ ಮಹಮ್ಮದ್ ಬಿನ್ ತುಘಲಕ್ ಪ್ರತಿನಿಧಿ ತನ್ನ ಆಳ್ವಿಕೆಯಲ್ಲಿ ಯಶಸ್ಸು ಕಾಣದ ಕಾರಣವಾಗಿ ಹರಿಹರನನ್ನು ರಾಜನನ್ನಾಗಿ ಮತ್ತು ಬುಕ್ಕನನ್ನು ಮಂತ್ರಿ ಆಗಿ ಮಾಡಿ ಹಿಂದಿರುಗಿದನು. ಈ ಸಹೋದರರೇ ಮುಂದೆ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದರು
ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯದ ಇಬ್ಬರು ಸಹೋದರರ ಮೂಲದ ಎರಡು ಸಿದ್ಧಾಂತಗಳು

ಕನ್ನಡ ಮೂಲ :
ಕನ್ನಡ ಮೂಲದ ಪ್ರಕಾರ ವಿಜಯನಗರದ ಸ್ಥಾಪಕರು ಬೇರೆ ಕಡೆಯಿಂದ ಬಂದವರಲ್ಲ. ಅವರು ನಮ್ಮ ಕನ್ನಡ ನಾಡಿನವರೇ ಎಂಬುದು ಫಾದರ್ ಹೇರಾಸ್, ಬಿ ಎ ಸಾಲೆತ್ತೂರು , ಆಂಧ್ರ ಪ್ರೊಫೆಸರ್ K ಸತ್ಯನಾರಾಯಣ ಮತ್ತು PB ದೇಸಾಯಿ ಅವರ ವಾದವಾಗಿದೆ. ಮುಸ್ಲಿಂ ವಿದ್ವಾಂಸ ಫರಿಸ್ತ ವಿಜಯನಗರ ಅರಸರನ್ನು ಕರ್ನಾಟಕ್ ರಾಯರ್ ಎಂದು ಸಂಬೋಧಿಸಿದರು ಎಂದು PB ದೇಸಾಯಿ ಅವರು ವಿಜಯನಗರ ಮೂಲವನ್ನು ಪತ್ತೆಚ್ಚಿದ್ದಾರೆ.

ಶಾಸನಗಳು ದೊರಕಿರುವುದು :

  • ವಿಜಯನಗರ ಅರಸರುಗಳು ಹೊರಡಿಸಿರುವ ಶಾಸನಗಳಲ್ಲಿ ಸಿಕ್ಕಿರುವ 5000 ಶಾಸನಗಳಲ್ಲಿ ಅರ್ಧದಷ್ಟು ಕನ್ನಡದಲ್ಲಿ ಇವೆ ಎಂದು ತಿಳಿದುಬಂದಿದೆ. ತಮಿಳುನಾಡು ಆಂಧ್ರ ಪ್ರದೇಶದಲ್ಲಿ ದೊರಕಿರುವ ಶಾಸನಗಳು ಕೂಡ ಕನ್ನಡದಲ್ಲಿ ಇರುವುದು ಕಂಡುಬಂದಿದೆ
  • ಕರ್ನಾಟಕದ ಬೇಲೂರಿನ ಕೇಶವ ದೇವಸ್ಥಾನ ಮತ್ತು ಹಂಪಿಯಲ್ಲಿರುವ ವಿರೂಪಾಕ್ಷ ದೇವಸ್ಥಾನ ಸಂಗಮ ಸಹೋದರರ ಆರಾಧ್ಯ ದೈವ ಆಗಿರುವುದು ಕೂಡ ಕನ್ನಡ ಮೂಲವನ್ನು ಎತ್ತಿ ಹಿಡಿಯುತ್ತದೆ
  • ಜಾoಬವತೀ ಕಲ್ಯಾಣ ಎಂಬ ಸಂಸ್ಕೃತ ನಾಟಕದಲ್ಲಿ ಶ್ರೀ ಕೃಷ್ಣದೇವರಾಯನನ್ನು ಕರ್ನಾಟಕ ರಾಜ್ಯ ರಮಾ ರಮಣ ಎಂದು ಕರೆಯಲಾಗಿದೆ
  • ಶ್ರೀ ವಿರುಪಾಕ್ಷ ಇವರ ರಾಜ ಮುದ್ರೆ ಮತ್ತು ವರಾಹ ಸಾಮ್ರಾಜ್ಯದ ರಾಜ ಲಾಂಛನವಾಗಿದೆ.
ತೆಲುಗು ಮೂಲ :
  • ಕನ್ನಡ ಮೂಲದ ಪ್ರಕಾರ ವಿಜಯನಗರದ ಸ್ಥಾಪಕರು ಬೇರೆ ಕಡೆಯಿಂದ ಬಂದವರಲ್ಲ. ಅವರು ನಮ್ಮ ಕನ್ನಡ ನಾಡಿನವರೇ ಎಂಬುದು ಫಾದರ್ ಹೇರಾಸ್, ಬಿ ಎ ಸಾಲೆತ್ತೂರು , ಆಂಧ್ರ ಪ್ರೊಫೆಸರ್ K ಸತ್ಯನಾರಾಯಣ ಮತ್ತು PB ದೇಸಾಯಿ ಅವರ ವಾದವಾಗಿದೆ. ಮುಸ್ಲಿಂ ವಿದ್ವಾಂಸ ಫರಿಸ್ತ ವಿಜಯನಗರ ಅರಸರನ್ನು ಕರ್ನಾಟಕ್ ರಾಯರ್ ಎಂದು ಸಂಬೋಧಿಸಿದರು ಎಂದು PB ದೇಸಾಯಿ ಅವರು ವಿಜಯನಗರ ಮೂಲವನ್ನು ಪತ್ತೆಚ್ಚಿದ್ದಾರೆ.
 ಹರಿಹರನ ಆಳ್ವಿಕೆ : ಸಂಗಮ ವಂಶದ ಮೊದಲ ದೊರೆ ಹರಿಹರ .ಇವನು ಕ್ರಿ.ಶ 1336 ರಿಂದ ಹಿಡಿದು ಎರಡು ದಶಕಗಳ ಕಾಲದವರೆಗೆ ರಾಜ್ಯವನ್ನು ಆಳುತ್ತಾನೆ. ತಂದೆ ಭಾವನ ಸಂಗಮ ತಾಯಿ ಮರವ್ವೆ ನಾಯಕಿ .ಕೆಲವು ಸಿದ್ಧಾಂತಗಳ ಪ್ರಕಾರ ಹಕ್ಕ ಮತ್ತು ಬುಕ್ಕ ವಾರಂಗಲ್ ನ ಕಾಕತೀಯ ರಾಜನ ಸೈನ್ಯದಲ್ಲಿ ಕಮಾಂಡರ್ಗಳಾಗಿದ್ದರು. ವಾರಂಗಲ್ ರಾಜನನ್ನು ಮಹಮ್ಮದ್ ಬಿನ್ ತುಘಲಕ್ ಯುದ್ಧದಲ್ಲಿ ಸೋಲಿಸಿ ಹಕ್ಕ ಮತ್ತು ಬುಕ್ಕನ್ನು ಸೆರೆಹಿಡಿದು ದೆಹಲಿಗೆ ಕಳುಹಿಸಲಾಯಿತು ಅಲ್ಲಿ ಇಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರವಾದರು. ಆ ನಂತರ ಋಷಿ ವಿದ್ಯಾರಣ್ಯರ ಪ್ರಭಾವದಿಂದ ಹಿಂದೂ ಧರ್ಮಕ್ಕೆ ಮರಳಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.
  • ವಿಜಯನಗರ ಸಾಮ್ರಾಜ್ಯವು ತುಂಗಭದ್ರ ನದಿಯ ತೀರದಲ್ಲಿ ಸ್ಥಾಪಿಸಲಾಗಿದೆ
  • ವಿಜಯನಗರದ ರಾಜಧಾನಿ ಕಿಷ್ಕಿಂದೆಯೇ ಅಂದರೆ ಈಗಿನ ಹಂಪಿ
  • ವಿದ್ಯಾರಣ್ಯ ಕ್ರಿಯಾಶಕ್ತಿ ಪಂಡಿತರು ಹರಿಹರನ ಗುರುಗಳಾಗಿದ್ದರು
  • ಹರಿಹರನು ಮೊದಲು ಹೊಯ್ಸಳರ ಮಾಂಡಲಿಕನಾಗಿದ್ದನು, ಆದ ನಂತರ ಸ್ವಾತಂತ್ರ್ಯ ರಾಜ್ಯವನ್ನು ಸ್ಥಾಪಿಸಿದನು
  • ಚಾಲುಕ್ಯರು ಆಳಿದ ಬಾದಾಮಿ, ಉದಯಗಿರಿ, ಮೊದಲಾದವುಗಳನ್ನು ಕೋಟೆಗಳಿಂದ ಸುರಕ್ಷಿತ ಗೊಳಿಸಿ ಅಲ್ಲಿ ಅವನ ನಂಬಿಕಸ್ತರನ್ನು ನೇಮಿಸಿದನು
  • ಹೊಯ್ಸಳರ ಮೂರನೇ ಬಲ್ಲಾಳ ಸತ್ತು ಹೋದ ಮೇಲೆ ಅವನು ಸಂಪೂರ್ಣ ರಾಜ್ಯದ ಮೇಲೆ ಹತೋಟಿಯನ್ನು ಸ್ಥಾಪಿಸಿದನು. ಈ ಮಹತ್ವ ಕಾರ್ಯದಲ್ಲಿ ಇವನ ಸಹೋದರರು ಇವನ ಬೆನ್ನೆಲುಬು ಆಗಿ ನಿಂತಿದ್ದರು.
  • ಇವನ ಕಾಲದಲ್ಲಿ ಅಲ್ಲಾ-ಉದ್- ಹಸನ್ ಬಹುಮನ್ ಷಾ ಎಂಬುವನು 1347ರಲ್ಲಿ ಗುಲ್ಬರ್ಗದಲ್ಲಿ ಬಹಮನಿ ರಾಜ್ಯವನ್ನು ಸ್ಥಾಪಿಸುತ್ತಾನೆ
  • ಈ ಎರಡು ರಾಜ್ಯಗಳ ನಡುವೆ ನಿರಂತರ ಕದನ ನಡೆಯುತ್ತಿದ್ದವು ತಾಳಿಕೋಟೆ ಕದನ ( 1565 ಜನವರಿ 23 )ವಿಜಯನಗರದ ಪತನಕ್ಕೆ ಕಾರಣವಾಯಿತು.
ವಿಜಯನಗರ ಸಾಮ್ರಾಜ್ಯ

ಪ್ರಾಕ್ತನ ಇಲಾಖೆಯ ಇತ್ತೀಚಿನ ಸಂಶೋಧನೆಗಳು:

1985ರಿಂದ ಹಂಪೆಯಲ್ಲಿ ಉತ್ಖನನ ಹಾಗೂ ಸಂಶೋಧನೆ ಹಿಂದಿಗಿಂತ ಸ್ವಲ್ಪ ಚುರುಕಾಗಿ ನಡೆಯಲಾರಂಭಿದೆ. ಭಾರತ ಸರ್ವೇಕ್ಷಣ ಇಲಾಖೆ ಮತ್ತು ಕರ್ನಾಟಕ ಪ್ರಾಚ್ಯವಸ್ತು ಇಲಾಖೆಗಳು ಒಟ್ಟಾಗಿ ನಡೆಸಿರುವ ಉತ್ಪನನದ ಫಲವಾಗಿ ಕುತೂಹಲ ಅಂಶಗಳು ಬೆಳಕಿಗೆ ಬರಲಾರಂಭಿಸಿದೆ.ಸಂಶೋಧನೆಯಿಂದ ಬೆಳಕಿಗೆ ಬಂದಿರುವ ವಿಜಯನಗರ ಕಾಲದ ವಾಸ್ತುಶಿಲ್ಪ ನಗರ ಯೋಜನೆ, ಕೋಟೆ ನಿರ್ಮಾಣ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ ಮೊದಲಾದ ಸೌಲಭ್ಯಗಳ ಬಗ್ಗೆ ಅಂದಿನ ನಗರ ವಾಸ್ತುಶಿಲ್ಪಿಗಳು ಯೋಚಿಸಿರುವ ರೀತಿ ಎಲ್ಲರಿಗೂ ಕುತೂಹಲ ಹುಟ್ಟಿಸುತ್ತವೆ. ಲಭ್ಯವಿರುವ ಈಗಿನ ಮಾಹಿತಿಯ ಪ್ರಕಾರ ಹಂಪಿ ನಗರದ ವಿಸ್ತೀರ್ಣ ಸುಮಾರು 26 ಚದರ ಮೈಲುಗಳೆಂದು ಅಂದಾಜು ಮಾಡಲಾಗಿದ್ದು. ರಾಜಾಂಗಣ ಪ್ರದೇಶವನ್ನು ಶೋಧಿ ಸಲಾಗಿದ್ದು ಅಲ್ಲಿ ಮಣ್ಣಿನಡಿಯಲ್ಲಿ ಅಡಗಿ ಇದ್ದ ಭವ್ಯ ಕಟ್ಟಡಗಳ ಅಡಿಪಾಯಗಳನ್ನು ನೆಲದವರೆಗೆ, ಶೋಧಿಸಿ ಅವುಗಳನ್ನು ಮೂಲ ಸ್ವರೂಪದಲ್ಲೇ ಜೋಡಿಸಲಾಗಿದೆ. ಅರಸರ ಅರಮನೆಯ ಅಡಿಪಾಯ ಹಾಗೂ ಅರಮನೆಗೆ ಹೊಂದಿಕೊಂಡಂತೆ ಇದ್ದ ಇತರ ಕಟ್ಟಡಗಳ ಅಡಿಪಾಯಗಳು, ಪೂಜೆ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಲು ನಿರ್ಮಿಸಿದ್ದ ವಿಶೇಷವಾದ ಭವನದ ಅಡಿಪಾಯ, ಯಜ್ಞಕುಂಡ, ಸೇವಾ ಕಾರಗೃಹಗಳು ಮತ್ತು ಅಂಗರಕ್ಷಕ ಪಡೆಯವರ ನಿವಾಸಗಳ ಅಡಿಪಾಯಗಳನ್ನು ಶೋಧಿಸಲಾಗಿದೆ. ಯಜ್ಞಕುಂಡದಲ್ಲಿ ಬೂದಿ ಸಹ ದೊರಕಿದೆ.
ವಿದೇಶೀ ಪ್ರವಾಸಿಗರಾದ ಪಯಾಸ್, ನ್ಯೂನಿಜ್ ಮತ್ತು ಅಬ್ದುಲ್ ರಜಾಕ್ ಅವರ ದಾಖಲೆಗಳನ್ನು ಅಧಾರವಾಗಿಟ್ಟುಕೊಂಡು ಈ ಪ್ರದೇಶದಲ್ಲಿ ನಡೆಸಿದ ಉತ್ಪನನ ಸಂಶೋಧಕರಿಗೆ ಪ್ರೋತ್ಸಾಹದಾಯಕವಾಗಿದೆ. ರಾಜನ ಅರಮನೆಯಿಂದ ರಾಜಸಭಾಂಗಣಕ್ಕೆ ಹೋಗಲು ಇರುವ ಮೆಟ್ಟಿಲುಗಳು, ಇದರ ದಕ್ಷಿಣಕ್ಕಿರುವ ರಾಣಿ ನಿವಾಸ, ಪದ್ಮಸರೋವರ ಹಾಗೂ 40 40 ಅಡಿಗಳ ಕಲ್ಯಾಣಿಮೂಲಸ್ವರೂಪದಲ್ಲೇ ಇದೆ. ಸುಮಾರು 40 ಎಕರೆಗಳಷ್ಟು ವಿಸ್ತಾರದಲ್ಲಿರುವ ರಾಜಾಂಗಣದಲ್ಲಿ ನಾಣ್ಯಗಳು, ವಿಗ್ರಹಗಳು, ಮಡಕೆಗಳು, ಸುಣ್ಣ ಹಾಗೂ ಗಾರೆಯಿಂದ ನಿರ್ಮಿತವಾದ ಭಿತ್ತಿಫಲಕಗಳು ದೊರೆತಿವೆ. ಪಿಂಗಾಣಿ ಪಾತ್ರೆಗಳು ಚೀನಿ ಭಾಷೆಯ ಲಿಪಿಯನ್ನೊಳಗೊಂಡಿವೆ.
ರಾಜಧಾನಿ ಹಂಪೆಯ ಮುಖ್ಯ ಕೇಂದ್ರ ಅರಮನೆ. ಇದರ ರಕ್ಷಣೆಗೆ ಅವಶ್ಯವಿದ್ದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಕ್ಕೆ ಸಾಕ್ಷಾಧಾರ ದೊರೆತಿವೆ. ಅಂಗರಕ್ಷಕ ಪಡೆ ಅರಮನೆ ಸನಿಹದಲ್ಲೇ ಇದ್ದಿತು. ಇದಲ್ಲದೆ ಒಟ್ಟಾರೆ ರಾಜಧಾನಿಯ ರಕ್ಷಣೆಗಾಗಿ ಏಳು ಸುತ್ತಿನ ಕೋಟೆ ಇದ್ದು ನಾಶವಾಗಿರುವುದು ಬೆಳಕಿಗೆ ಬಂದಿದೆ.
ವಿಜಯನಗರ ಸಾಮ್ರಾಜ್ಯದ ವಿದೇಶೀ ದಾಖಲೆಗಳು ವಿಜಯನಗರದ ಹಿರಿಮೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವಂತಹುದಾಗಿದೆ. ಆದರ ಹಿರಿಮೆಯನ್ನು ಕಣ್ಣಾರೆ ಕಂಡು ಬೆರಗಾದ ವಿದೇಶಿಯರ ಅನುಭವ ಬಣ್ಣಿಸಲಸಾಧ್ಯ. ಅವರು ವಿವಿಧ ದೇಶ ಹಾಗೂ ಭಾಷೆಗಳಿಗೆ ಸೇರಿದವರಾದರೂ ವಿಜಯನಗರದ ಹಿರಿಮೆ ಹಾಗೂ ಅದರ ಭವ್ಯತೆಯ ಬಗ್ಗೆ ಅವರೆಲ್ಲರದೂ ಒಂದೇ ಅಭಿಪ್ರಾಯ. ಚೀನಾದ ಅನಾಮಿಕ, ಇಟಲಿಯ ನಿಕೊಲೊಕಾಂಟಿ, ಪರ್ಶಿಯಾದ ಅಬ್ದುಲ್ ರಜಾಕ್, ರಷ್ಯಾದ ನಿಕಿಟನ್, ಪೋಚ್‌ಗಲ್‌ನ ಬಾರ್ಬೋಸ, ಡೊಮಿಂಗೋ ಫಯಾಸ್ ಮತ್ತು ನ್ಯುನಿಜ್ ಇವರೆಲ್ಲರ ಪ್ರವಾಸ ಕಥನಗಳು, ಅನಿಸಿಕೆಗಳು ವಿಜಯನಗರದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಗಿವೆ 

ಸಾಳುವ ಮತ್ತು ತುಳುವ ವಂಶಗಳು

         ಸಾಳುವ ವಂಶ

  •  ಸಾಳುವ ವಂಶವು ವಿಜಯನಗರ ಸಾಮ್ರಾಜ್ಯದ ದ್ವಿತೀಯ ರಾಜವಂಶವಾಗಿದೆ.
  •  ಸಾಳುವ ವಂಶವು ಸಂಗಮ ವಂಶದ ನಂತರ ಹುಟ್ಟಿಕೊಂಡಿತು ಕ್ರಿಸ್ತಶಕ 15ನೇ ಶತಮಾನದ ಕೊನೆಯ ಕಾಲದಲ್ಲಿ ಸಾಳುವ ವಂಶವು ಪ್ರಭಾವಶಾಲಿ ಮತ್ತು ಶಕ್ತಿಶಾಲಿಯಾಗಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿತು.
  • ಸಾಳುವ ವಂಶವನ್ನು ನರಸಿಂಹ ದೇವರಾಯನು ಕ್ರಿ.ಶ 1485 ರಲ್ಲಿ ಸ್ಥಾಪಿಸಿದನು ಸಂಗಮರ ಕಾಲದಲ್ಲಿ ಮುಸ್ಲಿಮರ ದಾಳಿಗಳಿಂದ ವಿಜಯನಗರ ಸಾಮ್ರಾಜ್ಯ ದುರ್ಬಲವಾಗಿದ್ದು ಆ ಸಮಯದಲ್ಲಿ ನರಸಿಂಹನು ತನ್ನ ಪ್ರತಿಭೆಯಿಂದ ತನ್ನ ಶಕ್ತಿಯಿಂದ ಶತ್ರುಗಳ ದಾಳಿಯನ್ನು ತಡೆದು ಸಾಮ್ರಾಜ್ಯವನ್ನು ರಕ್ಷಿಸಿದನು. 
  • ನರಸಿಂಹನು ಸಾಳುವ ವಂಶವನ್ನು ಕ್ರಿಸ್ತ ಶಕ 1485 ರಿಂದ 1491 ರವರೆಗೆ ಸಾಮ್ರಾಜ್ಯವನ್ನು ಆಳಿದನು.
  • ತಾಳುವ ಪದದ ಅರ್ಥ ಸಾಳುವ ಎಂಬುವುದು ಆ ಕಾಲದ ಕ್ಷತ್ರಿಯ ಕುಲದವರು ಎಂದು ಹೇಳುತ್ತಾರೆ.  

                        
ತುಳುವ ವಂಶ 

  • ತುಳುವ ವಂಶ ವಿಜಯನಗರ ಸಾಮ್ರಾಜ್ಯದ ಮೂರನೇ ರಾಜವಂಶವಾಗಿದ್ದು ಸಾಳುವ ವಂಶದ ನಂತರ ಅಧಿಕಾರಕ್ಕೆ ಬರುತ್ತದೆ
  • ಈ ವಂಶದ ಮೊದಲ ಅರಸ ವೀರ ನರಸಿಂಹ ಇವನ ನಂತರ ಕೃಷ್ಣದೇವರಾಯನು ಈ ಸಾಮ್ರಾಜ್ಯದ ಶ್ರೇಷ್ಠ ಆಡಳಿತಗಾರನಾಗಿದ್ದನು ಮತ್ತು ವಿಶಾಲಸಾಮ್ರಾಜ್ಯವನ್ನು ಸ್ಥಾಪಿಸಿದನು
  • ಕೃಷ್ಣದೇವರಾಯನು ಕಲೆ ವಾಸ್ತು ಶಿಲ್ಪ ಸಾಹಿತ್ಯಕ್ಷದಲ್ಲಿ ಬಹಳಷ್ಟು ಸುಧಾರಣೆ ಮತ್ತು ಸಾಧನೆಗಳನ್ನು ಮಾಡುತ್ತಾನೆ
  • ಕೃಷ್ಣದೇವರಾಯ ಸಮರ್ಥ ಆಡಳಿತಗಾರ ಅಪ್ರತಿಮ ವೀರ ಘನವಿದ್ವಾಂಸ ವಿಜಯನಗರ ಅರಸರಲ್ಲಿ ಶ್ರೇಷ್ಠ ಅರಸನಾಗಿದ್ದನು
  • ಸದಾಶಿವ ರಾಯನ ಕಾಲದಲ್ಲಿ ಆಡಳಿತದ ಮೇಲ್ವಿಚಾರಣೆ ಮಾಡುತ್ತಿರುವ ಸಮಯದಲ್ಲಿ ರಾಮರಾಯನ ವಿದೇಶಾಂಗ ನೀತಿಯ ಪರಿಣಾಮವಾಗಿ ರಕ್ಕಸ ತಂಗಡಿಯಲ್ಲಿ ಬಹುಮನಿ ಸೈನ್ಯದಿಂದ ಅತ್ಯಂತ ಹೀನಾಯವಾಗಿ ಸಾಮ್ರಾಜ್ಯದ ಅವನತಿಗೆ ಕಾರಣವಾಗುತ್ತಾನೆ

ಹಂಪಿ – ಕಾಲದ ಒಂದು ಶಾಂತ ಗುಂಡಿ ಬೆಂಗಳೂರಿನ ಗದ್ದಲದಿಂದ ಸುಮಾರು 350 ಕಿ.ಮೀ ದೂರದಲ್ಲಿ, ತುಂಗಭದ್ರಾ ನದಿಯ ದಡದ ಮೇಲೆ ನಿಂತಿರುವ ಹಂಪಿ ಒಂದು ಕನಸಿನಂತಹ ಜಾಗ. ಇಲ್ಲಿ ಬೃಹತ್ ಬಂಡೆಗಳು ಆಕಾಶಕ್ಕೆ ತಲೆ ಎತ್ತಿ ನಿಂತು, ಹಳೆಯ ವಿಜಯನಗರದ ರಾಜಧಾನಿಯ ಭಗ್ನಾವಶೇಷಗಳನ್ನು ಕಾಪಾಡಿಕೊಂಡಿವೆ. ಸೂರ್ಯನ ಕಿರಣಗಳು ಕಲ್ಲಿನ ಮೇಲೆ ಬಿದ್ದಾಗ ಚಿನ್ನದಂತೆ ಹೊಳೆಯುತ್ತವೆ, ಮಟಂಗ ಬೆಟ್ಟದ ಮೇಲೆ ನಿಂತು ಸೂರ್ಯೋದಯ ನೋಡಿದರೆ ಜಗತ್ತೇ ಮರೆತುಹೋಗುತ್ತದೆ. ಕೊರಾಕಲ್ ದೋಣಿಯಲ್ಲಿ ನದಿ ದಾಟಿ, ವಿಠ್ಠಲ ದೇವಸ್ಥಾನದ ಸಂಗೀತ ಸ್ತಂಭಗಳನ್ನು ತಟ್ಟಿದರೆ ಇನ್ನೂ ಆ ಯುಗದ ರಾಜ-ರಾಣಿಯರ ನಗು ಕೇಳಿಸುವಂತೆ ಭಾಸವಾಗುತ್ತದೆ. ಇಲ್ಲಿ ಇತಿಹಾಸವೇ ಬದುಕುತ್ತದೆ, ಪ್ರತಿ ಕಲ್ಲು ಒಂದು ಕಥೆ ಹೇಳುತ್ತದೆ – ನಡೆದಾಡುವಾಗ ಕಾಲ ನಿಂತುಹೋಗಿ, ಮನಸ್ಸು ಮಾತ್ರ ಹಳೆಯ ರಾಜಪಥಗಳಲ್ಲಿ ಓಡಾಡುತ್ತದೆ. ಫೆಬ್ರವರಿಯ ತಂಗಾಳಿಯಲ್ಲಿ ಹಂಪಿ ಹೋದರೆ, ಬಿಸಿಲು ಕಾಡದೆ, ಹೃದಯ ತುಂಬಿ ಬರುತ್ತದೆ da… ಇದು ಕೇವಲ ಪ್ರವಾಸವಲ್ಲ, ಒಂದು ಭಾವನೆಯ ಪ್ರಯಾಣ!

ವಿಜಯನಗರ ಸಾಮ್ರಾಜ್ಯದ ಸ್ಥಾಪಕರು

ಹರಿಹರ ಮತ್ತು ಬುಕ್ಕ

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ವರ್ಷ

1336

ವಿಜಯನಗರ ಸಾಮ್ರಾಜ್ಯದ ರಾಜಧಾನಿ

ಹಂಪಿ

ವಿಜಯನಗರದ ಪ್ರಸಿದ್ಧ ರಾಜ

ಕೃಷ್ಣದೇವರಾಯ

ಕೃಷ್ಣದೇವರಾಯ ಸೇರಿದ ವಂಶ

ತುಳು ವಂಶ

ವಿಜಯನಗರದ ಮೊದಲ ವಂಶ

ಸಂಗಮ ವಂಶ

ವಿಜಯನಗರದ ಕೊನೆಯ ವಂಶ

ಅರವೀಡು ವಂಶ

ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣವಾದ ಯುದ್ಧ

ತಾಳಿಕೋಟೆ ಯುದ್ಧ

ತಾಳಿಕೋಟೆ ಯುದ್ಧ ನಡೆದ ವರ್ಷ

1565

ಕೃಷ್ಣದೇವರಾಯರ ಕೃತಿ

ಅಮುಕ್ತಮಾಲ್ಯ

ವಿಜಯನಗರದ ಪ್ರಸಿದ್ಧ ದೇವಾಲಯ

ವಿರೂಪಾಕ್ಷ ದೇವಾಲಯ

………………………………………………………………….