ಭಾರತದ 7 ಅದ್ಭುತಗಳು 2025

ಭಾರತದ 7 ಅದ್ಭುತಗಳು 2025

ವಿಶ್ವದ 7 ಅದ್ಭುತಗಳ ನಂತರ ಭಾರತದ ಸೂಪರ್ 7 WONDERS ಕರ್ನಾಟಕದವೇ 2 TOP ನಲ್ಲಿ – ನೋಡಿ ಶಾಕ್ ಆಗ್ತೀರಾ?

ಭಾರತದ 7 ಅದ್ಭುತಗಳು 2025

ಭಾರತವು ಶ್ರೀಮಂತ ಸಂಸ್ಕೃತಿ, ವೈವಿಧ್ಯತೆ, ಭೌಗೋಳಿಕ ಮತ್ತು ಇತಿಹಾಸದ ಭೂಮಿ. ಇದು ಪ್ರಪಂಚದ ಜನರನ್ನು ತನ್ನತ್ತ ಆಕರ್ಷಿಸುವಷ್ಟು ಶ್ರೀಮಂತ ಪ್ರವಾಸೋದ್ಯಮವನ್ನು ಹೊಂದಿದೆ.
ಭಾರತದ ಅದ್ಭುತಗಳನ್ನು ಕಣ್ತುಂಬಿಕೊಳ್ಳಲು ಜನರು ದೂರದೂರಿನಿಂದ ಬರುತ್ತಾರೆ. ಇಲ್ಲಿರುವ ಸಂಕೀರ್ಣ ಕೆತ್ತನೆಗಳನ್ನು ಹೊಂದಿರುವ ಸ್ಮಾರಕಗಳು, ಆಲಯಗಳು, ಕಟ್ಟಡಗಳು ಇತಿಹಾಸಕಾರರನ್ನೂ ಸೆಳೆಯುತ್ತವೆ.
ಅಷ್ಟಕ್ಕೂ ಭಾರತದ ಅದ್ಭುತಗಳಲ್ಲಿ ನಮ್ಮ ಕರ್ನಾಟಕದ ಯಾವೆಲ್ಲಾ ಸ್ಥಳವು ಸೇರ್ಪಡೆಯಾಗಿದೆ ಎಂಬುದನ್ನು ತಿಳಿಯಿರಿ.

ಶ್ರವಣಬೆಳಗೊಳದಲ್ಲಿ ಏಕಶಿಲಾ ಗೋಮಟೇಶ್ವರ

ಭಾರತದ 7 ಅದ್ಭುತಗಳು 2025

ಕರ್ನಾಟಕದ ಶ್ರವಣಬೆಳಗೊಳವು ಭಾರತದ ಅದ್ಭುತಗಳಲ್ಲಿ ಒಂದಾಗಿದೆ. ಏಕ ಶಿಲಾ ಗೊಮ್ಮಟೇಶ್ವರವು ಸುಮಾರು 57 ಅಡಿ ಎತ್ತರದಲ್ಲಿರುವ ದೈತ್ಯಾಕಾರದ ಒಂದು ಪ್ರತಿಮೆ ಆಗಿದೆ. ಈ ಅದ್ಭುತವಾಗಿರುವ ಪ್ರತಿಮೆಯನ್ನು ಗಂಗಾರಮಂತ್ರಿ ಆಗಿದ್ದ ಚಾಮುಂಡರಾಯ ಕೆತ್ತಿಸಿದ್ದಾರೆ ಎನ್ನಲಾಗಿದೆ.
ಇಲ್ಲಿಯ ವಿಶೇಷತೆ ಏನೆಂದರೆ,ಇಲ್ಲಿ 12 ವರ್ಷಕ್ಕೊಮ್ಮೆ ಈ ಪ್ರತಿಮೆಗೆ ಮಹಾ ಮಸ್ತಕಾಭಿಷೇಕವನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಈ ಸ್ಥಳಕ್ಕೆ ಲಕ್ಷಾಂತರ ಜನರು ಬಂದು ದರ್ಶನ ಪಡೆಯುತ್ತಾರೆ.
ಬೆಂಗಳೂರಿನಿಂದ 160 ಕಿ.ಮೀ ಮತ್ತು ಮೈಸೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಈ ಶ್ರವಣಬೆಳಗೊಳವು ಜೈನ ಧರ್ಮದ ಜನರಿಗೆ ಅತ್ಯಂತ ಪವಿತ್ರವಾದ ಧಾರ್ಮಿಕ ಕೇಂದ್ರವಾಗಿದೆ.

ಹಂಪಿ – ವಿಶ್ವ ಪ್ರಸಿದ್ಧ ಐತಿಹಾಸಿಕ ತಾಣ

ಭಾರತದ 7 ಅದ್ಭುತಗಳು 2025

ಭಾರತದ ಅದ್ಭುತಗಳಲ್ಲಿ ನಮ್ಮ ಕರ್ನಾಟಕದ ಐತಿಹಾಸಿಕ ತಾಣ ಹಂಪಿ ಕೂಡ ಸೇರಿದೆ. ಹಂಪಿಯ ಸೊಬಗನ್ನು ನೋಡಲು ಪ್ರಪಂಚದಾದ್ಯಂತ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ತಾಣವು ರಾಮಾಯಣದ ಜೊತೆ ತಳುಕನ್ನು ಹಾಕಿಕೊಂಡಿದೆ. ಇಲ್ಲಿಯೇ ಶ್ರೀರಾಮ ಮತ್ತು ಸೀತೆಯರು ವಾಸವಾಗಿದ್ದರು ಎಂಬ ಪುರಾಣ ಇದೆ.
ಅಷ್ಟೇ ಅಲ್ಲ, ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯು ವಿಜಯನಗರ ಕಾಲದ ಅವಶೇಷಗಳು ಮತ್ತು ಸ್ಮಾರಕಗಳನ್ನು ಸುಮಾರು 26 ಚದರ ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿರುವುದನ್ನು ಕಾಣಬಹುದು. ಇಲ್ಲಿ ಹಲವಾರು ಆಕರ್ಷಣೆಗಳಿವೆ. ಕರ್ನಾಟಕಕ್ಕೆ ಬರುವ ಪ್ರವಾಸಿಗರು ಇವುಗಳನ್ನು ತಪ್ಪದೇ ಅನ್ವೇಷಿಸಲೇಬೇಕು!

ತಾಜ್‌ ಮಹಲ್ – ಪ್ರೀತಿಯ ಅಮರ ಸಂಕೇತ

TAJMAHAL IN KANNADA

ತಾಜ್ ಮಹಲ್ ಭಾರತದ ಅದ್ಭುತ ಸ್ಮಾರಕ ಮಾತ್ರವಲ್ಲ, ಇದು ಪ್ರಪಂಚದ ಅದ್ಭುತಗಳಲ್ಲಿಯೇ ಒಂದು. ಪ್ರೀತಿಯ ಸಂಕೇತವಾದ ತಾಜ್ ಮಹಲ್ ಇತಿಹಾಸ ಪ್ರಿಯರ ಮೆಚ್ಚಿನ ತಾಣ.
17ನೇ ಶತಮಾನದಲ್ಲಿ ಷಹಜಹಾನ್ ತನ್ನ ಪ್ರಿಯ ಪತ್ನಿ ಮುಮ್ತಾಜ್‌ಗಾಗಿ ನಿರ್ಮಿಸಿದ ಈ ಸ್ಮಾರಕ ಪ್ರೀತಿಯ ಶಾಶ್ವತ ಸಾಕ್ಷಿಯಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ಇದು ಇಡೀ ವಿಶ್ವದ ಹೆಮ್ಮೆ.
ಈ ಅದ್ಭುತವನ್ನು ಕಾಣಲು ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲ, ವಿದೇಶದಿಂದಲೂ ಇತಿಹಾಸಕಾರರು ಮತ್ತು ಸಂದರ್ಶಕರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ.

ಅಮೃತಸರದ ಗೋಲ್ಡನ್‌ ಟೆಂಪಲ್‌ – ಚಿನ್ನದ ದೇವಾಲಯ

AMRITSAR

ಅಮೃತಸರದಲ್ಲಿರುವ ಗೋಲ್ಡನ್‌ ಟೆಂಪಲ್‌ ಸಿಖ್‌ರ ಪವಿತ್ರ ಧಾರ್ಮಿಕ ಕ್ಷೇತ್ರ. ಜನಪ್ರಿಯವಾಗಿ ಗೋಲ್ಡನ್‌ ಟೆಂಪಲ್‌ ಎಂದು ಕರೆಯಲ್ಪಡುವ ಈ ಆಲಯದ ನಿಜವಾದ ಹೆಸರು ಶ್ರೀ ಹರ್ಮಂದಿರ್ ಸಾಹಿಬ್‌.
1585 ರಿಂದ 1604 ರ ಅವಧಿಯಲ್ಲಿ ನೀರಿನ ಕೊಳದ ಸುತ್ತಲೂ ನಿರ್ಮಿಸಲಾದ ಈ ದೇವಾಲಯ ಭಾರತದ ಅದ್ಭುತಗಳಲ್ಲಿ ಒಂದು. ಅಷ್ಟೇ ಅಲ್ಲ, ಇದು ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.
ಪಂಜಾಬ್‌ನ ಈ ಪುಣ್ಯಕ್ಷೇತ್ರಕ್ಕೆ ಪ್ರತಿ ವರ್ಷ ಲಕ್ಷಾಂತರ ಜನರು ದರ್ಶನಕ್ಕಾಗಿ ಬರುತ್ತಾರೆ. ಇಲ್ಲಿಯ ಶಾಂತಿ ಮತ್ತು ಭಕ್ತಿಯ ವಾತಾವರಣ ಎಲ್ಲರನ್ನೂ ಆಕರ್ಷಿಸುತ್ತದೆ.

ಕೋನಾರ್ಕ್‌ ದೇವಾಲಯ – ಸೂರ್ಯನ ರಥ

KONARK TEMPLE

ಒಡಿಶಾದಲ್ಲಿರುವ ಕೋನಾರ್ಕ್‌ ದೇವಾಲಯವು ಸೂರ್ಯ ದೇವನಿಗೆ ಮುಡಿಪಾದ ಅದ್ಭುತ ದೇವಾಲಯ. ಈ ಆಲಯವು ಸಂಕೀರ್ಣವಾದ ಅವಶೇಷಗಳನ್ನು ಹೊಂದಿದ್ದು, ಸುಮಾರು 100 ಅಡಿ ಎತ್ತರದ ಭವ್ಯ ರಥದ ನೋಟವನ್ನು ಹೊಂದಿದೆ.
ಭಾರತದ ಅದ್ಭುತಗಳಲ್ಲಿ ಕೋನಾರ್ಕ್‌ ದೇವಾಲಯವು ಒಂದು. ಇಲ್ಲಿ ನೋಡತಕ್ಕಂತಹ ವಿಶೇಷತೆ ಏನೆಂದರೆ, ಸೂಕ್ಷ್ಮವಾದ ಕೆತ್ತನೆಗಳಿಂದ ಅಲಂಕೃತಗೊಂಡಿರುವ ಚಕ್ರಗಳು, ಕುದುರೆಗಳು, ಸಿಂಹಗಳು ಮತ್ತು ಕಾಮಪ್ರಚೋದಕ ಶಿಲ್ಪಗಳು.
ಈ ಪ್ರಾಚೀನ ವಾಸ್ತುಶಿಲ್ಪದ ಸೊಬಗು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಖಜುರಾಹೊ – ಶಿಲ್ಪಗಳ ನಗರಿ

KHAJURAHO

ಪ್ರಪಂಚದ ಪ್ರವಾಸಿಗರನ್ನು ಆಕರ್ಷಿಸುವ ಖಜುರಾಹೊ ಭಾರತದ ಅದ್ಭುತಗಳಲ್ಲಿ ಒಂದು. ಇದು ಮಧ್ಯಪ್ರದೇಶದ ಛತಾರ್ಪುರ್‌ ಜಿಲ್ಲೆಯಲ್ಲಿದೆ. ಖಜುರಾಹೊ ತನ್ನ ಕಾಮಪ್ರಚೋದಕ ಶಿಲ್ಪಗಳಿಂದ ವಿಶ್ವಪ್ರಸಿದ್ಧವಾಗಿದೆ.
ಇದನ್ನು 885 ರಿಂದ 1000 ರ ನಡುವೆ ಚಂದೇಲಾ ರಾಜವಂಶವು ನಿರ್ಮಿಸಿತು. ಹಿಂದೂ ಮತ್ತು ಜೈನ ದೇವಾಲಯಗಳ ಗುಂಪಾಗಿರುವ ಈ ಖಜುರಾಹೊ ವಿಶ್ವ ಪರಂಪರೆಯ ತಾಣವಾಗಿದೆ.
ಕಣ್ಣು ಸೆಳೆಯುವ ನಗರಾ ಶೈಲಿಯ ವಾಸ್ತುಶಿಲ್ಪಗಳು ಇತಿಹಾಸಕಾರರನ್ನು ಮತ್ತು ಕಲಾ ಪ್ರೇಮಿಗಳನ್ನು ಇಂದಿಗೂ ಆಕರ್ಷಿಸುತ್ತಿವೆ. ಈ ಪ್ರಾಚೀನ ಶಿಲ್ಪಕಲೆ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಸಾಕ್ಷಿ.

ಏಕತೆಯ ಪ್ರತಿಮೆ – ವಿಶ್ವದ ಅತಿ ಎತ್ತರದ ಪ್ರತಿಮೆ

The Statue of Unity

ಗುಜರಾತ್‌ನ ಏಕತೆಯ ಪ್ರತಿಮೆಯು ವಿಶ್ವದಲ್ಲೇ ಅತಿ ಎತ್ತರವಾದ ಪ್ರತಿಮೆ! ಭಾರತದ ಕಬ್ಬಿಣದ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ಸಮರ್ಪಿಸಲಾದ ಈ ಪ್ರತಿಮೆಯು ಭಾರತದ ಪ್ರಮುಖ ಆಕರ್ಷಣೆಗಳಲ್ಲಿ ಒಂದು.
ಸುಮಾರು 3,000 ಕೋಟಿ ರೂಪಾಯಿ ವೆಚ್ಚ ಮಾಡಿ ಈ ಭವ್ಯ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಇಲ್ಲಿ ಸಾರ್ವಜನಿಕರಿಗಾಗಿ ಮ್ಯೂಸಿಯಂ ಮತ್ತು ಗ್ಯಾಲರಿಯನ್ನು ತೆರೆಯಲಾಗಿದೆ.
ಹಾಗೆಯೇ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ಸಾಧನೆಗಳನ್ನು ಪ್ರದರ್ಶಿಸುವ ವಿಶೇಷ ಮ್ಯೂಸಿಯಂ ಇದೆ. ದೇಶ-ವಿದೇಶದ ಲಕ್ಷಾಂತರ ಪ್ರವಾಸಿಗರು ಈ ಅದ್ಭುತವನ್ನು ನೋಡಲು ಬರುತ್ತಾರೆ.

ಈ ಎಲ್ಲಾ ಅದ್ಭುತಗಳನ್ನು ನೋಡಿದ ನಂತರ ನನ್ನ ಫೇವರೇಟ್ ಯಾವುದು ಗೊತ್ತಾ? ಕರ್ನಾಟಕದ ಹಂಪಿ! ಯಾಕೆಂದರೆ ಇಲ್ಲಿ ರಾಮಾಯಣದ ಕಿಶ್ಕಿಂಧೆ ಇದೆ ಅಂತಾರಲ್ಲಾ? 2025ರಲ್ಲಿ ನಾನು ಹೋಗಿ ವೀಡಿಯೋ ತಗೊಂಡಿದ್ದೇನೆ – ನೀವು ಯಾವ ಅದ್ಭುತ ನೋಡಲು ಪ್ಲ್ಯಾನ್ ಮಾಡ್ತೀರಾ?

ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025<

ತಾಜ್ ಮಹಲ್ ಎಲ್ಲಿದೆ

ಆಗ್ರಾ

ತಾಜ್ ಮಹಲ್ ಯಾರು ನಿರ್ಮಿಸಿದರು

ಶಾಹಜಹಾನ್

ಹಂಪಿ ಯಾವ ರಾಜ್ಯದಲ್ಲಿದೆ

ಕರ್ನಾಟಕ

ಹಂಪಿ ಯಾವ ಸಾಮ್ರಾಜ್ಯದ ರಾಜಧಾನಿಯಾಗಿತ್ತು

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು

ಕೊಣಾರ್ಕ್ ದೇವಾಲಯ ಎಲ್ಲಿದೆ

ಒಡಿಶಾ

ಖಜುರಾಹೋ ದೇವಾಲಯಗಳು ಎಲ್ಲಿವೆ

ಮಧ್ಯಪ್ರದೇಶ

ಖಜುರಾಹೋ ಯಾರು ನಿರ್ಮಿಸಿದರು

ಚಂದೇಲರು

ತಾಜ್ ಮಹಲ್ ಯಾವ ಕಲ್ಲಿನಿಂದ ಮಾಡಲಾಗಿದೆ

ಅಮೃತಶಿಲೆ

ತಾಜ್ ಮಹಲ್ ಯಾವ ನದಿಯ ದಡದಲ್ಲಿದೆ

ಯಮುನಾ

ಹಂಪಿ ಯಾವ ನದಿಯ ದಡದಲ್ಲಿದೆ

ತುಂಗಭದ್ರಾ

ಗೋಲ್ ಗುಂಬಜ್ ಯಾವಾಗ ನಿರ್ಮಿತವಾಯಿತು

1656

ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು

ಕರ್ನಾಟಕದ ಏಳು ಅದ್ಭುತಗಳು

ಪ್ರಪಂಚದ ಏಳು ಅದ್ಭುತಗಳು ನೀವು ನೋಡಿರುತ್ತೀರಿ ಆದರೆ ನಮ್ಮ ಕರ್ನಾಟಕದಲ್ಲಿರುವ ಏಳು ಅದ್ಭುತಗಳನ್ನು ನಿಮ್ಮ ಜೀವಿತಾವಧಿಯಲ್ಲಿ ನೋಡಲೇಬೇಕು ನೀವೊಬ್ರೆ ಅಲ್ಲ ನಿಮ್ಮ ಕುಟುಂಬದ ಸಮೇತ ನೋಡಬೇಕು ಅವುಗಳು ಯಾವುದೆಂದರೆ.

ಹಿರೇಬೆಣಕಲ್

ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು

ಕರ್ನಾಟಕದ ಏಳು ಅದ್ಭುತಗಳು

ಹಿರೇಬೆಣಕಲ್ ಒಂದು ಅದ್ಭುತವಾಗಿದೆ ಈ ಸ್ಥಳದಲ್ಲಿ ಬೃಹತ್ ಕಲ್ಲಿನ ಶಿಲೆಗಳ ತಾಣವಾಗಿದೆ. ಈ ಸ್ಥಳವನ್ನು ಕ್ರಿಸ್ತಪೂರ್ವ 800 ರಿಂದ ಕ್ರಿಸ್ತಪೂರ್ವ 200 ರ ಅವಧಿಯಲ್ಲಿ ನಿರ್ಮಾಣ ಮಾಡಲಾಯಿತು.

ಈ ಸ್ಥಳವು ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿದೆ. ಈ ಸ್ಥಳವು ಗಂಗಾವತಿ ನಗರದಿಂದ 10 ಕಿ.ಮೀ ಇದೆ ಮತ್ತು ಕೊಪ್ಪಳ ನಗರದಿಂದ 43 ಕಿಲೋಮೀಟರ್ ದೂರವಿದೆ. ಈ ಹಿರೇ ಬಣಕಲ್ ನಲ್ಲಿ ಸುಮಾರು 300 ರಿಂದ 400 ಕ್ಕು ಹೆಚ್ಚು ಶಿಲಾಕೃತಿಯಲ್ಲಿರುವ ಗೋರಿಗಳಿವೆ. ಈ ಸ್ಮಾರಕಗಳನ್ನು ನವಶೀಲಾಯುಗ ಹಾಗೂ ಕಬ್ಬಿಣದ ಶಿಲಾಯುಗದ ನಡುವಿನ ಪರಿವರ್ತನೆಯ ಕಾಲವೆಂದು ಇತಿಹಾಸಕಾರರು ಹೇಳಿದ್ದಾರೆ.

  • ಈ ಸ್ಥಳವನ್ನು ಏಳು ಬೆಟ್ಟಗಳ ಜಾಗವೆಂದು ಸಹ ಕರೆಯುತ್ತಾರೆ.
  • ಈ ಸ್ಥಳ ಇರುವ ಗುಡ್ಡದ ಹೆಸರು ಮೋರ್ಯಾರ್ ಗುಡ್ಡ ಎಂದು ಸಹ ಕರೆಯುತ್ತಾರೆ.
  • 1955 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣೆ ಧಾರವಾಡ ವೃತ್ತದ ನಿರ್ವಹಣೆಯ ಅಡಿಯಲ್ಲಿದೆ.
  • 26 ಫೆಬ್ರವರಿ 2023 ರಂದು ಈ ತಾಣವನ್ನು ಕರ್ನಾಟಕದ ಅದ್ಭುತಗಳಲ್ಲಿ ಒಂದು ಎಂದು ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿಕೊಂಡಿದೆ.

ಹಂಪಿ

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದ ಏಳು ಅದ್ಭುತಗಳು ಇದರಲ್ಲಿ ಹಂಪಿ ಒಂದು ಆಗಿದೆ . ಅಲ್ಲದೆ ಯುನೆಸ್ಕೋ ವಿಶ್ವ ಪಾರಂಪರೆ ತಾಣಗಳಲ್ಲಿ ಒಂದಾಗಿದೆ. ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಂದು ಐತಿಹಾಸಿಕ ಸ್ಥಳವಾಗಿದೆ. ಹಂಪಿಯು 1336 ರಿಂದ 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು.

ಹಂಪಿಯ ಮೊದಲ ಹೆಸರು “ಪಂಪಾ” ಎಂದಾಗಿತ್ತು. ಇದನ್ನು ವರ್ಷಗಳು ಕಳೆದಂತೆ ವಿಜಯನಗರ ಮತ್ತು ವಿರೂಪಾಕ್ಷಪುರ ಎಂದು ಕರೆತೊಡಗಿದರು. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಮಾರುಕಟ್ಟೆಯಲ್ಲಿ ವಜ್ರಗಳನ್ನು ಸೇರಿನ ಅಳತೆಯಲ್ಲಿ ಮಾರಾಟ ಮಾಡುತ್ತಿದ್ದರು.

ಭೇಟಿ ಮಾಡಲು ಸೂಕ್ತ ಸಮಯ : ಅಕ್ಟೋಬರ್‌ ರಿಂದ ಫೆಬ್ರವರಿ ವರೆಗೆ ಹಂಪಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ.ಈ ಸಮಯದಲ್ಲಿ ಹವಾಮಾನ ತಂಪಾಗಿರುತ್ತದೆ ಮತ್ತು ವೀಕ್ಷಣೆಗೆ ಅನುಕೂಲ.

ಗೋಲ್ ಗುಂಬಜ್

ಕರ್ನಾಟಕದ ಏಳು ಅದ್ಭುತಗಳು

ಗೋಲ್ ಗುಂಬಜ್ ಇದು ಕರ್ನಾಟಕದ ಬಿಜಾಪುರ ಜಿಲ್ಲೆ (ಈಗಿನ ವಿಜಯಪುರ ನಗರದಲ್ಲಿ ಇರುವ) ಪ್ರಸಿದ್ಧ ಸ್ಮಾರಕವಾಗಿದೆ. ಇದರಲ್ಲಿ ನಿರ್ಮಾಣವು ಕ್ರಿಸ್ತಶಕ 1626 ರಿಂದ ಕ್ರಿಸ್ತಶಕ 1656 ರಲ್ಲಿ ಈ ಸ್ಮಾರಕ ನಿರ್ಮಾಣವಾಯಿತು. ಗೋಲ್ ಗುಂಬಜ್ ಅನ್ನು ಪ್ರಸಿದ್ಧ ಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ ಇವರಿಬ್ಬರೂ ನಿರ್ಮಿಸಿದ್ದಾರೆ.

ಗೋಲ್ ಗುಂಬಜ್ ಅಂದರೆ ಗೋಲಾಕಾರದ ಗುಮ್ಮಟ ಎಂದರ್ಥ ಇದನ್ನು ಮಹಮ್ಮದ್ ಆದಿಲ್ ಶಾ ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿಕೊಂಡನು. ಗೋಲ್ ಗುಂಬಜ್ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮಾನವ ನಿರ್ಮಿತ ಗುಮ್ಮಟವಾಗಿದೆ. ಗೋಲ್ ಗುಂಬಜ್ ನಲ್ಲಿ ಒಂದು ಬಾರಿ ಹೇಳಿದ ಮಾತು ಪ್ರತಿಧ್ವನಿಯಾಗಿ 7 ಬಾರಿ ನಮಗೆ ಕೇಳಿಸುತ್ತದೆ.

  • ಇದನ್ನು ಕರ್ನಾಟಕದ ತಾಜ್ಮಹಲ್ ಎಂದು ಸಹ ಕರೆಯುತ್ತಾರೆ. ಈ ಸ್ಮಾರಕವು ಇಸ್ಲಾಮಿಕ್ ಶೈಲಿಯನ್ನು ಪ್ರತಿನಿಧಿಸುತ್ತದೆ.
  • ಈ ಸ್ಥಳಕ್ಕೆ ಭೇಟಿ ನೀಡಲು ಸರಿಯಾದ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳಾಗಿದೆ.
ಕರ್ನಾಟಕದ ಏಳು ಅದ್ಭುತಗಳು

ಗೊಮ್ಮಟೇಶ್ವರ ಹಾಸನ ಜಿಲ್ಲೆಯಲ್ಲಿರುವ ಪ್ರಸಿದ್ಧ ಜೈನರ ಧಾರ್ಮಿಕ ಕ್ಷೇತ್ರವಾಗಿದೆ ಇದು ಭಾರತದ ಅತ್ಯಂತ ಹಳೆಯ ಮತ್ತು ಪವಿತ್ರ ಜೈನ ಧರ್ಮದ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಬಾಹುಬಲಿಯ ಮೂರ್ತಿ ಇದೆ. ಇದರ ನಿರ್ಮಾಣವು ಕ್ರಿಸ್ತಶಕ 981 ರಲ್ಲಿ ಗಂಗ ರಾಜ್ಯದ ಮಂತ್ರಿಯಾದ ಚಾವುಂಡರಾಯ ಇದನ್ನು ನಿರ್ಮಿಸಿದನು.

ಗೊಮ್ಮಟೇಶ್ವರದ ಎತ್ತರ 58 ಅಡಿ ಯ ಏಕಶಿಲಾ ಮೂರ್ತಿಯಾಗಿದೆ. ಇಲ್ಲಿ 12 ವರ್ಷಗಳಿಗೊಮ್ಮೆ ಮಹಾಮಸ್ತಾಭಿಷೇಕ ಮಾಡುತ್ತಾರೆ. ಮುಂದೆ 2030 ನೇ ವರ್ಷದಲ್ಲಿ ಮಹಾಮಸ್ತಭಿಷೇಕ ನಡೆಯುತ್ತದೆ. ಈ ಗೊಮ್ಮಟೇಶ್ವರ ಪ್ರತಿಮೆ ವಿಂಧ್ಯಗಿರಿ ಬೆಟ್ಟದ ಮೇಲೆ ನೆಲೆಸಿದೆ.

  • ಇದನ್ನು ಒಂದೇ ಕಲ್ಲಿನಿಂದ ನಿರ್ಮಿಸಲಾಗಿದೆ.
  • ಈ ಪ್ರತಿಮೆ ಪ್ರಪಂಚದ ಜನರನ್ನು ತನ್ನ ಕಡೆ ಸೆಳೆಯುತ್ತದೆ. ಗೊಮ್ಮಟೇಶ್ವರ ಕರ್ನಾಟಕದ ಏಳು ಅದ್ಭುತಗಳು ಇದರಲ್ಲಿ ಒಂದಾಗಿದೆ.

ಮೈಸೂರು ಅರಮನೆ

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದಲ್ಲಿ ಹಲವು ಅರೆಮನೆ ಗಳಿವೆ ಆದರೆ ನಮ್ಮ ಮೈಸೂರು ಅರಮನೆ ನಮ್ಮ ರಾಜ್ಯದ ಐತಿಹಾಸಿಕ ,ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಬಗ್ಗೆ ಹೆಗ್ಗಳಿಕೆಯನ್ನು ಪ್ರತಿಬಿಂಬಿಸುತ್ತದೆ.

ಮೈಸೂರು ನಗರದ ಹೃದಯವಾಗಿರುವ ಈ ಅರಮನೆಯು ವಿಶ್ವಪ್ರಸಿದ್ಧ ಆಕರ್ಷಣೆಯ ತಾಣವಾಗಿದೆ ಮತ್ತು ಮೈಸೂರು ಅರಮನೆಯನ್ನು “ಅಂಬಾ ವಿಲಾಸ್” ಎಂದು ಸಹ ಕರೆಯುತ್ತಾರೆ. ಇದು ದೇಶದಲ್ಲಿ ಅತ್ಯಂತ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ ಈ ಅರಮನೆಯನ್ನು “ಇಂಡೋ-ಸಾರ್ಸೆನಿಕ್” ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ ಈ ಅರಮನೆಯು ಒಡೆಯರ್ ರಾಜವಂಶದ ಅಧಿಕೃತ ನಿವಾಸವಾಗಿತ್ತು.ಈ ಅರಮನೆ ರಾತ್ರಿಯ ಬೆಳಕಿನಲ್ಲಿ ಕಣ್ಣಿಗೆ ತೊಟ್ಟುವಂತೆ ಕಾಣುತ್ತದೆ.

  • ಈ ಅರಮನೆಯು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ.
  • ಭೇಟಿ ನೀಡುವ ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ವರೆಗೆ ಇರುತ್ತದೆ.
  • ಅರಮನೆಯಲ್ಲಿ ಕ್ಯಾಮರಾಗಳಿಗೆ ಅನುಮತಿ ಕೊಟ್ಟರೆ ಫೋಟೋ ತೆಗೆಯುವುದನ್ನು ಮರೆಯಬೇಡಿ.
  • ಮೈಸೂರು ಅರಮನೆ ಇತಿಹಾಸ ತಿಳಿಯಲು ಅಲ್ಲಿನ ಗೈಡ್ಸ್ ಗಳ ಜೊತೆ ಹೋಗೋದು ಉತ್ತಮ.
  • ಇದರ ಹತ್ತಿರವೇ ಉಳಿದುಕೊಳ್ಳಲು ಹೋಟೆಲ್ ಗಳು ಮತ್ತು ಊಟ ಮಾಡುವುದಕ್ಕೆ ಖಾನಾವಳಿಗಳಿವೆ.
  • ಒಂದು ಬಾರಿ ಈ ಅರಮನೆಯನ್ನು ಭೇಟಿ ಮಾಡುವುದರಿಂದ ನಮಗೆ ನಮ್ಮ ರಾಜ್ಯದ ವೈಭವವನ್ನು ಕಾಣುತ್ತೇವೆ.

ಜೋಗ ಜಲಪಾತ

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದ 7 ಅದ್ಭುತಗಳು ಇದರಲ್ಲಿ ಜೋಗ ಜಲಪಾತ ಒಂದಾಗಿದೆ. ಜೋಗ ಜಲಪಾತ ಭಾರತದ ಎರಡನೇ ಅತ್ಯಂತ ಎತ್ತರವಾದ ಜಲಪಾತವಾಗಿದೆ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಈ ಜಲಪಾತ ಭಾರತದ ಪ್ರಕೃತಿ ಸೌಂದರ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯ ಜನರು ಈ ಜಲಪಾತವನ್ನು “ಗೇರುಸೊಪ್ಪಿನ ಜಲಪಾತ” ಅಥವಾ “ಜೋಗದ ಗುಡ್ಡೆ” ಎಂದು ಸಹ ಕರೆಯುತ್ತಾರೆ.

ಈ ಜಲಪಾತದ ವೈಶಿಷ್ಟತೆ

  • ಈ ಜಲಪಾತವನ್ನು ಶರಾವತಿ ನದಿ ರಚನೆ ಮಾಡಿದೆ ಈ ಜಲಪಾತ 830 ಅಡಿ ಎತ್ತರದಲ್ಲಿ ನಾಲ್ಕು ಭಾಗವಾಗಿ ನೀರನ್ನು ಬೀಳಿಸುತ್ತದೆ.
  • ರಾಜಾ -ನೇರವಾಗಿ ಬೀಳುವ ಮುಖ್ಯ ಧಾರೆ
  • ರಾಣಿ – ಸುಂದರವಾಗಿ ಹರಿಯುವ ಧಾರೆ
  • ರೋರರ್ – ಹೆಚ್ಚು ಶಬ್ದ ಮಾಡಿ ಹರಿಯುವ ಧಾರೆ
  • ರಾಕೇಟ್ – ವೇಗವಾಗಿ ಹರಿಯುವ ಧಾರೆ
  • ಮಳೆಗಾಲದಲ್ಲಿ ಇದು ಒಂದಾಗಿ ಕೂಡಿ ಹರಿಯುವ ದೃಶ್ಯ ಎಲ್ಲರ ಕಣ್ಣು ಕಂಗೊಳಿಸುತ್ತದೆ.

ಹತ್ತಿರದ ಪ್ರವಾಸಿ ತಾಣಗಳು

  • ಸಾಗರ ಪಟ್ಟಣ
  • ಹೊನ್ನಾವರ
  • ಶಿವಮೊಗ್ಗ ನೈಸರ್ಗಿಕ ಉದ್ಯಾನವನ
  • ಲಿಂಗನಮಕ್ಕಿ ಅಣೆಕಟ್ಟು
  • ಕೊಡಚಾದ್ರಿ ಬೆಟ್ಟ

ಸಲಹೆಗಳು

  • ಮಳೆಗಾಲದಲ್ಲಿ ಸುರಕ್ಷಿತವಾಗಿ ಹೋಗಿ ಮತ್ತು ಕಂದಕ ಬಳಿ ಹೋಗಬೇಡಿ
  • ಬೆಳ್ಳಂ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಜಲಪಾತ ಆಕರ್ಷಕವಾಗಿ ಕಾಣುತ್ತದೆ.
  • ಫೋಟೋಶೂಟ್ ಗೆ ಕ್ಯಾಮೆರಾ ತೆಗೆದುಕೊಂಡು ಹೋಗೋದು ಮರೆಯಬೇಡಿ.
  • ಊಟಕ್ಕೆ ಹತ್ತಿರದಲ್ಲಿರುವ ಅಕ್ಕಿ ರೊಟ್ಟಿ ಮತ್ತು ನೀರ್ ದೋಸೆ ತುಂಬ ರುಚಿ ಇರುತ್ತದೆ ಮರೆಯಬೇಡಿ.

ನೇತ್ರಾಣಿ ದ್ವೀಪ

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಸಮೀಪದಲ್ಲಿ ಈ ನೇತ್ರಾವತಿ ದ್ವೀಪ ಇದೆ. ಇದ್ವಪವನ್ನು “ಪಿಜನ್ ಐಲ್ಯಾಂಡ್” ( ಪಾರಿವಾಳಗಳ ದ್ವೀಪ ) ಎಂದು ಕರೆಯುತ್ತಾರೆ.
ಭಾರತದಲ್ಲಿ ಈ ದ್ವೀಪವು ಸ್ಕೊಬಾ ಡೈವಿಂಗೆ ಸರಿಯಾದ ಸ್ಥಳವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಂತರ ನೇತ್ರಾಣಿ ದ್ವೀಪವು ಎರಡನೆಯ ಸ್ಥಾನದಲ್ಲಿದೆ. ಇದು ನೀಲಿ ಸಮುದ್ರದ ಮಧ್ಯಭಾಗದಲ್ಲಿ ಕಣ್ಣಿನ ಆಕರದಲ್ಲಿ ಇರುವುದರಿಂದ ಇದನ್ನು ನೇತ್ರಾಣಿ ದ್ವೀಪ ಎಂದು ಕರೆಯಲಾಗಿದೆ.

  • ಇಲ್ಲಿ ಪ್ರವಾಸಿಗರು ಸ್ಕೊಬಾ ಡೈವಿಂಗ್ ಮಾಡಬಹುದು
  • ಬೋಟ್ ರೈಡಿಂಗ್ ಮಾಡಬಹುದು
  • ನೀರಿನ ಒಳಗೆ ವಿವಿಧ ಬಣ್ಣದ ರೀತಿಯ ಮೀನುಗಳನ್ನು ಕಾಣಬಹುದು
  • ಈ ದ್ವಿಪದ ವಿಸ್ತೀರ್ಣ 500 ಮೀಟರ್ ಇದೆ

ಭೇಟಿ ಮಾಡಲು ಸೂಕ್ತ ಸಮಯ

ನೇತ್ರಾಣಿ ದ್ವೀಪಕ್ಕೆ ಭೇಟಿ ಮಾಡುವ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಉತ್ತಮ.ಮಳೆಗಾಲದಲ್ಲಿ ಅಂದರೆ ಜೂನ್ ಇಂದ ಸೆಪ್ಟೆಂಬರ್ ವರೆಗೆ ಈ ದ್ವಿಪಕ್ಕೆ ಪ್ರಯಾಣ ಮಾಡುವುದು ನಿಧಿಸುತ್ತಾರೆ ಏಕೆಂದರೆ ಸಮುದ್ರದ ಅಲೆಗಳು ಹೆಚ್ಚು ಆಗುವುದರಿಂದ

ಸಲಹೆ

  • ಪ್ರವಾಸಿಗರು ಸ್ಕೊಬಾ ಡೈವಿಂಗ್ ಮಾಡುವವರು ಅಡ್ವಾನ್ಸ್ ಬುಕಿಂಗ್ ಮಾಡಿಕೊಳ್ಳಬೇಕು.
  • ಪ್ರವಾಸಿಗಳು ಸುರಕ್ಷಿತ ಸಲಕರಣೆಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು.
  • ಊಟಕ್ಕೆ ಆಹಾರ ಮತ್ತು ನೀರನ್ನು ಮುರುಡೇಶ್ವರ ದಲ್ಲೇ ಸಿದ್ದ ಮಾಡಿಕೊಂಡು ಹೋಗಬೇಕು ಏಕೆಂದರೆ ನೇತ್ರಾಣಿ ದ್ವೀಪದಲ್ಲಿ ಯಾವುದೇ ಸೌಲಭ್ಯಗಳಿಲ್ಲ.
  • ಫೋಟೋ ತೆಗೆದುಕೊಳ್ಳುವವರು ಮೊಬೈಲ್ ಗಳಿಗೆ ಮರೆಯದೆ ವಾಟರ್ ಪ್ರೂಫ್ ಕವರ್ ಗಳನ್ನು ಹಾಕಿಕೊಳ್ಳಬೇಕು

ಈ Blog ನಲ್ಲಿ ನಮ್ಮ ಕರ್ನಾಟಕದ ಏಳು ಅದ್ಭುತಗಳನ್ನು ನೀವು ತಿಳಿದುಕೊಂಡಿದ್ದೀರಾ ಹಾಗೆಯೇ ನಮ್ಮ ಪ್ರಪಂಚದ ಏಳು ಅದ್ಭುತಗಳನ್ನು ನೀವು ತಿಳಿದುಕೊಳ್ಳಬೇಕೆಂದರೆ ಈ ಲಿಂಕ್ ಅನ್ನು ಒತ್ತಿರಿ.

RECENT POST

ಕರ್ನಾಟಕದ ರಾಜಧಾನಿ ಯಾವುದು

ಬೆಂಗಳೂರು

ಮೈಸೂರು ಅರಮನೆ ಎಲ್ಲಿದೆ

ಮೈಸೂರು

ಜೋಗ ಜಲಪಾತ ಯಾವ ಜಿಲ್ಲೆಯಲ್ಲಿ ಇದೆ

ಶಿವಮೊಗ್ಗ

ಗೋಲ್ಗುಮ್ಮಟ ಎಲ್ಲಿದೆ

ವಿಜಯಪುರ

ಹಂಪಿ ಎಲ್ಲಿದೆ

BALLARI

ಕರ್ನಾಟಕದ ಅತ್ಯುನ್ನತ ಜಲಪಾತ ಯಾವದು

ಜೋಗ

ಗೋಲ್ಗುಮ್ಮಟ ಯಾರ ಸಮಾಧಿ

ಮೊಹಮ್ಮದ್ ಆದಿಲ್ ಶಾಹ್

ಕರ್ನಾಟಕದ ಅತ್ಯಂತ ಹಳೆಯ ರಾಜವಂಶ

ಚಾಲುಕ್ಯ

ಜೋಗ ಜಲಪಾತದ ನದಿ ಯಾವದು

ಶರಾವತಿ

ಹಂಪಿಯ ಪ್ರಸಿದ್ಧ ದೇವಾಲಯ

ವಿರೂಪಾಕ್ಷ ದೇವಾಲಯ

ಮೈಸೂರು ಅರಮನೆಯನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗಿದೆ

ಇಂಡೋ-ಸಾರ್ಸೆನಿಕ್

ಜೋಗ ಜಲಪಾತ ಯಾವ ನದಿಯಲ್ಲಿದೆ

ಶರಾವತಿ

ಕರ್ನಾಟಕದ ಏಳು ಅದ್ಭುತಗಳು, ಕರ್ನಾಟಕದ ಏಳು ಅದ್ಭುತಗಳು, ಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳುಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳುಕರ್ನಾಟಕದ ಏಳು ಅದ್ಭುತಗಳು ಕರ್ನಾಟಕದ ಏಳು ಅದ್ಭುತಗಳು ಕರ್ನಾಟಕದ ಏಳು ಕರ್ನಾಟಕದ ಏಳು ಅದ್ಭುತಗಳು ಕರ್ನಾಟಕದ ಏಳು ಅದ್ಭುತಗಳು ಏಳು ಅದ್ಭುತಗಳು ಕರ್ನಾಟಕದ ಏಳು ಅದ್ಭುತಗಳು

ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ

ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪ

ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ ಇಲ್ಲಿದೆ

ವಿಜಯನಗರ ಸಾಮ್ರಾಜ್ಯ (೧೩೩೬ ೧೬೪೬) ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಸಾಮ್ರಾಜ್ಯಗಳಲ್ಲಿ ಒಂದಾಗಿದೆ.ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಹರಿಹರ ಮತ್ತು ಬುಕ್ಕರಾಯ.
ವಿಜಯನಗರ ಸಾಮ್ರಾಜ್ಯೋ ತುಂಗಭದ್ರ ನದಿಯ ತೀರದಲ್ಲಿ ಹರಡಿದೆ .ಈ ಸಾಮ್ರಾಜ್ಯವು ಕೇವಲ ರಾಜಕೀಯ ಬಲದಿಂದ ಮಾತ್ರವಲ್ಲ ತನ್ನ ವಿಶಿಷ್ಟ ಕಲೆ ಮತ್ತು ವಾಸ್ತುಶಿಲ್ಪದಿಂದಲೂ ಪ್ರಸಿದ್ಧಿಯಾಗಿದೆ.ವಿಜಯನಗರ ಅಂದರೆ ಇಂದಿನ ಹಂಪಿ ಯು ಜಗತ್ತಿಗೆ ಗಮನ ಸೆಳೆಯುತ್ತಿದೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದೆ.
ವಿಜಯನಗರದ ಪ್ರತಿಯೊಂದು ಕಲ್ಲು ದೇವಸ್ಥಾನ ಮತ್ತು ಅರಮನೆಗಳು, ವಿಜಯನಗರದ ಶೌರ್ಯ ಮತ್ತು ಸಂಸ್ಕೃತಿ ಇನ್ನು ಬದುಕು ಉಳಿದಿದೆ ಎಂದು ತೋರಿಸಿಕೊಡುತ್ತದೆ.

ವಿಜಯನಗರ ಸಾಮ್ರಾಜ್ಯ
ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ

ವಿಜಯನಗರ ಸಾಮ್ರಾಜ್ಯದಕಲೆ

ವಿಜಯನಗರ ಸಾಮ್ರಾಜ್ಯ ದ್ರಾವಿಡ ಶೈಲಿಯಲ್ಲಿದೆ. ಧಾರ್ಮಿಕ ಭಕ್ತಿ ಶೌರ್ಯ ಮತ್ತು ವೈಭವವನ್ನು ಪ್ರತಿಬಿಂಬುಸುತ್ತದೆ. ದೇವಲಾಯಗಳ ಗೋಡೆಗಳು ಸ್ತಂಭಗಳು ಮಂಟಪಗಳು ಆನೆ ಕುದುರೆ ಸೈನಿಕರು ನೃತ್ಯ ಗಾರ್ತಿಗಯರು ಮತ್ತು ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ. ದೇವಾಲಯಗಳ ಒಳಗೆ ಬಿತ್ತಿ ಚಿತ್ರಗಳಲ್ಲಿ ರಾಮಾಯಣ ಮಹಾಭಾರತ ಮತ್ತು ಪುರಾಣಗಳ ದೃಶ್ಯಗಳನ್ನು ಬಣ್ಣಗಳಿಂದ ಬಿಡಿಸಲಾಗಿದೆ.

ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆ

ಸಾಮ್ರಾಜ್ಯ ಅರಸರುಗಳ ಕಾಲದಲ್ಲಿ ಶಿಲ್ಪ ಕಲೆಯು ಬಹಳ ಪ್ರಗತಿಯನ್ನು ಕಂಡಿ ಬಂದಿದೆ ಹಂಪಿಯ ದೇವಾಲಯಗಳಲ್ಲಿ ಶಿವಾ, ವಿಷ್ಣು ಸೂರ್ಯ, ಕೃಷ್ಣ, ನಟರಾಜ, ಯೋಗ ಲಕ್ಷ್ಮಿ ನರಸಿಂಹ ಮತ್ತು ಮಾದನಿಕ ವಿಗ್ರಹಗಳು ವಿಜಯನಗರದ ಕಲೆಯನ್ನು ಎತ್ತಿ ತೋರಿಸುತ್ತದೆ.

ಯೋಗಲಕ್ಷ್ಮಿ ನರಸಿಂಹ 6.7 ಮೀಟರ್ ಗಳಷ್ಟು ಎತ್ತರವಿರುವ ಬೃಹತ್ ಶಿಲ್ಪ. ಇದನ್ನು ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಉಗ್ರನರಸಿಂಹ ಎಂದು ಕರೆಯುತ್ತಾರೆ. ನರಸಿಂಹನು ಯೋಗಾಸನದಲ್ಲಿ ಕುಳಿತಿರುವ ಹಾಗೆ ತೋರಿಸಲಾಗಿದೆ. ಲೇಪಾಕ್ಷಿಯ ಏಕಶಿಲೆಯ ನಂದಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಂದಿಯಾಗಿದೆ. ಇದು 30 ಅಡಿ ಉದ್ದ ಮತ್ತು 20 ಅಡಿ ಎತ್ತರವಿದೆ. ಲೇಪಾಕ್ಷಿಯಲ್ಲಿರುವ ನಾಗಲಿಂಗ 7 ಎಡೆಗಳನ್ನು ಎತ್ತಿ ಮಲಗಿರುವ ಸರ್ಪದ ಮೇಲೆ ಲಿಂಗವನ್ನು ಸ್ಥಾಪಿಸಲಾಗಿದೆ. ಇದೆಲ್ಲವೂ ಶಿಲ್ಪಕಲೆಗೆ ಉದಾಹರಣೆಯಾಗಿದೆ.

ವಿಜಯನಗರ ಸಾಮ್ರಾಜ್ಯ ದ ಚಿತ್ರಕಲೆ

ವಿಜಯನಗರ ಅರಸರುಗಳ ಕಾಲದಲ್ಲಿ ಚಿತ್ರಕಲೆ ಸಾಕಷ್ಟು ಉನ್ನತಿಯನ್ನು ಹೊಂದಿತ್ತು. ವಿಜಯನಗರ ಅರಸರ ಕಾಲದಲ್ಲಿ ಚಿತ್ರಕಲೆ ಬಿತ್ತಿ ಚಿತ್ರಗಳಲ್ಲಿ ಮಾತ್ರವಲ್ಲದೆ ಜನ ಜೀವನದಲ್ಲಿ ಜನಪ್ರಿಯ ಕಲೆಯಾಗಿ ಬೆಳೆದಿತ್ತು , ರಾಜನ ಅಂತಪುರದಲ್ಲಿ ದೇಶ ವಿದೇಶಗಳ ಜನರ ಜೀವನವನ್ನು ವಿವರಿಸುವ ಚಿತ್ರಗಳನ್ನು ಕಾಣಬಹುದು.

ವಿಜಯನಗರದ ಅರಸರುಗಳು ಉನ್ನತ ದರ್ಜೆಯ ಕಲಾವಿದರನ್ನು ತಮ್ಮ ಬಳಿ ಇಟ್ಟುಕೊಂಡು ಚಿತ್ರಕಲೆ ಉನ್ನತಿಗಾಗಿ ಶ್ರಮಿಸಿದರು. ಇವರ ಪ್ರೋತ್ಸಾಹದ ಫಲವಾಗಿ ಹಂಪಿಯಲ್ಲಿರುವ ದೇವಸ್ಥಾನದ ರಂಗಮಂಟಪದ ಮೇಲ್ಚಾವಣಿಯಲ್ಲಿ ಕಲ್ಯಾಣ ಸುಂದ ಮತ್ತು ಪಾರ್ವತಿಯರ ವಿವಾಹದ ದೃಶ್ಯವನ್ನು ಕಾಣಬಹುದು.
ತಾಂಜ ಊರಿನಲ್ಲಿರುವ ರಾವಣ ಕೈಲಾಸವನ್ನು ಎತ್ತುತ್ತಿರುವ ದೃಶ್ಯ ಮತ್ತು ಬ್ರಹ್ಮ ಮಹೇಶ್ವರರಿಗೆ ಸಂಬಂಧಿಸಿದ ಚಿತ್ರಗಳನ್ನು ಸಹ ನಾವು ಕಾಣಬಹುದು.

ವಿಜಯನಗರ ಸಾಮ್ರಾಜ್ಯ ದ ವಾಸ್ತುಶಿಲ್ಪ

ವಿಜಯನಗರ ವಾಸ್ತುಶಿಲ್ಪ ದ್ರಾವಿಡಸಲ್ಲಿಯ ಶ್ರೇಷ್ಠ ರೂಪ ಆಗಿದೆ, ವಿಜಯನಗರ ವಾಸ್ತುಶಿಲ್ಪವನ್ನು 4 ಭಾಗಗಳಾಗಿ ನೋಡಬಹುದು.

  1. ದೇವಾಲಯ ವಾಸ್ತು ಶಿಲ್ಪ
  2. ಇಸ್ಲಾಮಿಕ್ ವಾಸ್ತು ಶಿಲ್ಪ
  3. ಪೌರವಾಸ್ತು ಶಿಲ್ಪ
  4. ಮಿಲಿಟರಿ ಅಥವಾ ಸೇನಾ ವಾಸ್ತು ಶಿಲ್ಪ

1) ದೇವಾಲಯ ವಾಸ್ತು ಶಿಲ್ಪ :

ವಿಜಯನಗರದಲ್ಲಿ ದೇವಾಲಯಗಳ ನಿರ್ಮಾಣಕ್ಕಾಗಿ ವಿಜಯನಗರದ ಹೆಸರು ಬಹಳ ಪ್ರೇರಣೆ ಕೊಟ್ಟಿದ್ದರು. ಧಾರ್ಮಿಕ ಉತ್ಸವ ನಿತ್ಯ ಜರುಗುತ್ತಿದ್ದ ಉತ್ಸವ 15 ದಿನಗಳಿಗೆ ಒಮ್ಮೆ ನಡೆಯುತ್ತಿದ್ದ ಉತ್ಸವ ತಿಂಗಳಿಗೊಮ್ಮೆ ಆಡುತ್ತಿದ್ದೋತ್ಸವ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಉತ್ಸವಗಳಿಗೆ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದರು.ಪೂಜಾ ಸಂದರ್ಭದಲ್ಲಿ ನೃತ್ಯ ಮತ್ತು ಸಂಗೀತಗಳ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತು.ದೇವಾಲಯಗಳ ನಿರ್ಮಾಣಕ್ಕಾಗಿ ಗ್ರಾನೆಟ್ ಮತ್ತು ಬೆಣಚು ಕಲ್ಲುಗಳನ್ನು ಬಳಸುತ್ತಿದ್ದರು.

ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ವಾಸ್ತುಶಿಲ್ಪದ ಮುಖ್ಯ ಅಂಗಗಳು:

  • 1 ಗರ್ಭಗೃಹ: ದೇವರು ಅಥವಾ ದೇವತೆಯನ್ನು ಪ್ರತಿಷ್ಠಾಪಿಸಿದ ಸ್ಥಳ
  • ಸುಕನಾಸಿ : ಗರ್ಭಗೃಹದ ಪಕ್ಕದ ಕೋಣೆ
  • ಅಂತರಾಳ : ಸುಖನಾಸಿ ಮತ್ತು ರಂಗಮಂಟಪದ ಮಧ್ಯ ಬರುವ ಭಾಗ
  • ರಂಗಮಂಟಪ : 4 ಅಥವಾ 16 ಕಂಬಗಳ ಹಜಾರ ಸಭೆಗಳನ್ನು ಮಾಡುವುದಕ್ಕೆ ಇದ್ದ ಜಾಗ
  • ಮಹಾ ರಂಗ ಮಂಟಪ ಹಾಗೂ ರಾಯ ಗೋಪುರಗಳು: ಮಹದ್ವಾರಗಳ ಮೇಲೆ ಕಟ್ಟಲ್ಪಡ್ತಿದ್ದ ಗೊಬ್ಬರಗಳು
ಪ್ರಮುಖ ದೇವಾಲಯಗಳು
  1. ವಿರೂಪಾಕ್ಷ ದೇವಾಲಯ
  2. ವಿಠಲ ಸ್ವಾಮಿ ದೇವಾಲಯ
  3. ಹಜಾರ ರಾಮಸ್ವಾಮಿ ದೇವಾಲಯ
1 ವಿರುಪಾಕ್ಷ ದೇವಾಲಯ :

ಈ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ. ಕೃಷ್ಣದೇವರಾಯ 1509 ರಲ್ಲಿ ದೇವಾಲಯದ ಮುಂದೆ ರಂಗ ಮಂಟಪವನ್ನು ನಿರ್ಮಿಸಿದನು. ಈ ದೇವಾಲಯದಲ್ಲಿ 2 ರಾಯ ಗೋಪುರಗಳನ್ನು ಕಾಣಬಹುದು, ಅದರಲ್ಲಿ ಒಂದು 165 ಅಡಿ ಎತ್ತರವಾಗಿದೆ. ದೇವಾಲಯದ ಒಳಾಂಗಣದಲ್ಲಿ ವಿರೂಪಾಕ್ಷನ ಗರ್ಭಗೃಹದ ಜೊತೆಗೆ ಭುವನೇಶ್ವರಿ, ಪಾತಾಳೇಶ್ವರಿ, ದುರ್ಗಿ ಮತ್ತು ಗಣಪತಿಯ ಗುಡಿಗಳು ಇದೆ.

ವಿಜಯನಗರ ಸಾಮ್ರಾಜ್ಯ
  • ವಿಜಯನಗರದ ದೇವಾಲಯಗಳು ಸಾಮಾನ್ಯವಾಗಿ ಶಿಲೆ (ಗ್ರಾನೈಟ್) ಅನ್ನು ಬಳಸಿ ಕಟ್ಟಲಾಗಿದೆ. ಗೋಪುರಗಳ ನಿರ್ಮಾಣಕ್ಕೆ ಇಟ್ಟಿಗೆ ಮತ್ತು ಗಾರೆಯನ್ನು ಬಳಸಲಾಗಿದೆ.
  • ದೇವಾಲಯಗಳಲ್ಲಿ ಗರ್ಭಗುಡಿ, ಸುಖನಾಸಿ, ನವರಂಗ, ಕಲ್ಯಾಣ ಮಂಟಪ, ವಸಂತ ಮಂಟಪ ಕಾಣಬಹುದು.
  • ಕಂಬಗಳಿಂದ ಕೂಡಿದ ದೇವಾಲಗಳನ್ನು ಕಾಣಬಹುದು.
  • ದ್ರಾವಿಡ ಶೈಲಿಯಲ್ಲಿರುವ ಕಂಬಗಳು ಅತ್ಯಂತ ಮನಮೋಹಕವಾಗಿ ಕೆತ್ತಲಾಗಿದೆ.
  • ಕಂಬಗಳ ಮೇಲೆ ಮುಂದಿನ ಕಾಲು ಎತ್ತಿ ನಿಂತಿರುವ ಕುದುರೆ ಮತ್ತು ಹುಲಿ ಶಿಲ್ಪವನ್ನು ಕಾಣಬಹುದು.
  • ಕಂಬಗಳ ಬೋಧಿಗೆಯ ಮೇಲಿಂದ ಚಾಚಿರುವ ಲೋಕದಲ್ಲಿ ಅನೇಕ ಸುರಳಿಗಳನ್ನು ಕೆತ್ತಿ ಅಂತಿಮವಾಗಿ ಕೆಳಕ್ಕೆ ಬಗ್ಗಿರುವ ಕಮಲದ ಮೊಗ್ಗನ್ನು ಬಿಡಿಸಲಾಗಿದೆ.
2 ವಿಠಲ ದೇವಾಲಯ :
ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ
ವಿಠಲ ದೇವಾಲಯವು ವಿಷ್ಣು ಅವತಾರ ಎಂದು ಹೇಳಲಾಗುತ್ತದೆ. ವಿಠಲ ಸ್ವಾಮಿ ದೇವಾಲಯವನ್ನು ಪ್ರೌಢ ದೇವರಾಯನ ಕಾಲ ಅವಧಿಯಲ್ಲಿ ಆರಂಭಿಸಿದರು ಈ ಕಾರ್ಯವನ್ನು 1565 ರವರೆಗೆ ಮುಂದುವರಿಸಿದರು. ಸುಮಾರು 500 ಅಡಿ ಉದ್ದ 310 ಅಗಲವಾದ ವಿಸ್ತೃತ ಅಂಗಳದ ಮಧ್ಯೆ ಈ ದೇವಾಲಯವನ್ನು ಪೂರ್ವಕ್ಕೆ ನಿರ್ಮಿಸಲಾಗಿದೆ. ಈ ಅಂಗಳದ ಸುತ್ತಲೂ 3 ಸಾಲು ಕಂಬಗಳಿಂದ ಕೂಡಿದ ಮಂಟಪದ ಸಾಲುಗಳಿವೆ. ಈ ದೇವಾಲಯವನ್ನು ಪೂರ್ವ ಉತ್ತರ ಮತ್ತು ದಕ್ಷಿಣ ಪ್ರವೇಶ ದ್ವಾರಗಳಿಂದ ಪ್ರವೇಶಿಸಬಹುದು. ಈ ದೇವಾಲಯ ಗರ್ಭಗೃಹ, ಅರ್ಧ ಮಂಟಪ ಹಾಗೂ ಮಹಾಮಂಟಪಗಳನ್ನು ಒಳಗೊಂಡಿರುತ್ತದೆ.
3 ಹಜಾರ ರಾಮಸ್ವಾಮಿ ದೇವಾಲಯ :
hajara ramasamy temple
ಹಜಾರ ರಾಮಸ್ವಾಮಿ ದೇವಾಲಯವನ್ನು 15ನೇ ಶತಮಾನದಲ್ಲಿ ಕೃಷ್ಣದೇವರಾಯ ತನ್ನ ಪೂರ್ವದ ದಿಗ್ವಿಜಯಗಳ ಸವಿನೆನಪಿಯಾಗಿ ಪೂರ್ವಕ್ಕೆ ಮುಖ ಮಾಡಿ ಈ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯದಲ್ಲಿ ಒಂದು ಸಾವಿರದಷ್ಟು ಶಿಲ್ಪಗಳನ್ನು ಕಾಣಬಹುದು, ಆ ಶಿಲ್ಪಗಳು ಸುಬ್ರಮಣ್ಯ, ಗಣೇಶ, ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಶಿಲ್ಪ ದೃಶ್ಯಗಳಾಗಿವೆ. ಈ ದೇವಾಲಯ ರಾಜ ಕುಟುಂಬದವರಿಗೆ ಮಾತ್ರ ಮೀಸಲಾಗಿತ್ತು.

2) ಇಸ್ಲಾಮಿಕ್ ವಾಸ್ತುಶಿಲ್ಪ :

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಲ್ಲಿ ಮುಸ್ಲಿಮರ ಬಡಾವಣೆಗಳು ಇದ್ದವು. ಇದರಲ್ಲಿ ಶ್ರೀಮಂತ ಮುಸ್ಲಿಮರು ಹಲವರು ಕಟ್ಟಡಗಳನ್ನು ನಿರ್ಮಿಸಿದರು. ಅವುಗಳೆಂದರೆ ಸಮಾಧಿಗಳು, ಗೋರಿಗಳು , ಮತ್ತು ಮಸೀದಿಗಳು, . ಈ ಕಟ್ಟಡಗಳು ಇಸ್ಲಾಮಿಕ್ ವಾಸ್ತು ಶೈಲಿಯ ಲಕ್ಷಣಗಳಾದ ಗುಮ್ಮಟಗಳು ಮತ್ತು ಕಮಾನುಗಳು ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ.

3) ಪೌರವಾಸ್ತು ಶಿಲ್ಪ :

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಅರಮನೆಗಳು, ಮಹಾನವಮಿ ದಿಬ್ಬ ರಾಜನ ಸಭಾಭವನ ಕೊಳ ಕಮಲ ಮಹಲ್ ರಾಣಿ ಸ್ನಾನ ಗೃಹ ಆನೆಲಾಯ ಮೇಲ್ಚಾವಣಿ ಇರುವ ಬಾವಿ ಮುಂತಾದವು ಪೌರ ವಾಸ್ತುಶಿಲ್ಪದ ಅಡಿಯಲ್ಲಿ ಬರುತ್ತದೆ.

  1. ಅರಮನೆ : ಟಂಕಶಾಲೆಯ ಪ್ರದೇಶದಲ್ಲಿ ಒಂದು ಅರಮನೆ ಇದ್ದು ಆ ಅರಮನೆ ತುಂಬಾ ಮುಖ್ಯವಾದದ್ದು. ಉತ್ಸವಗಳನ್ನು ಮಾಡುವಾಗ ಈ ಅರಮನೆಗಳನ್ನು ಬಳಸುತ್ತಿದ್ದರು ಇಲ್ಲಿಗೆ ಜನರು, ಪ್ರವಾಸಿಗರು ಮತ್ತು ಅಧಿಕಾರಿಗಳು ಬರುತ್ತಿದ್ದರು. ವಿಜಯನಗರ ಕಾಲದಲ್ಲಿ ರಾಜರು ಅಧಿಕಾರಿಗಳು ಅರಮನೆಯಲ್ಲಿ ವಿವಿಧ ಕಾರ್ಯ ಆಚರಣೆಗಳನ್ನು ಕಾಲದಿಂದ ಕಾಲಕ್ಕೆ ನಡೆದ ಯುದ್ಧಗಳ ಕಾರಣ ಕೆಲವು ಅರಮನೆಗಳು ಹಾಳಾಗಿದೆ
  2. ಮಹಾನವಮಿ ದಿಬ್ಬ :
    O* 14ನೇ ಶತಮಾನದ ಮಧ್ಯ ಭಾಗದಲ್ಲಿ ರಚಿಸಲ್ಪಟ್ಟ ಮಹಾನ್ ನವಮಿ ಉತ್ಸವದ ಈ ದಿಬ್ಬ ಹಂಪಿಯಲ್ಲಿ ನಿರ್ಮಿಸಲಾಗಿದೆ.
    O* ಇದನ್ನು ಸಿಂಹಾಸನದ ವೇದಿಕೆಯನ್ನು ಸಹ ಕರೆಯುತ್ತಾರೆ.
    O* ಇದು ಸುಮಾರು 22 ಚದರ ಮೀಟರ್ ಪ್ರದೇಶದಲ್ಲಿ 10 ಮೀಟರ್ ಎತ್ತರವಿರುವ ಹಾಗೆ ಕಟ್ಟಲಾಗಿದೆ.
    O* ಮಹಾನವಮಿ ಹಬ್ಬವನ್ನು ನಿರ್ಮಿಸಲು ಗ್ರಾನೈಟ್ ಮತ್ತು ಕ್ಲೋರೈಟ್ ಕಲ್ಲುಗಳನ್ನು ಬಳಸಲಾಗಿದೆ.
    O* ಮಹಾನ್ ನವಮಿ ದಿಬ್ಬ ಹೊರಮೈ ಉಬ್ಬು ಕೆತ್ತನೆಗಳಿಂದ ಅಲಂಕೃತ ಗೊಂಡಿದೆ. ಅವುಗಳೆಂದರೆ ಆನೆಗಳು, ಒಂಟೆಗಳು, ಕುದುರೆಗಳು ಮತ್ತು ಯುದ್ಧದ ದೃಶ್ಯಗಳು‌ ಇತ್ಯಾದಿ.
  3. ಕಮಲ್ ಮಹಲ್ : ಕಮಲ್ ಮಹಲ್ ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ವಿಜಯನಗರ ಸಾಮ್ರಾಜ್ಯದ ಅತ್ಯಂತ ಸುಂದರವಾದ ರಾಜಮನೆತನದ ಕಟ್ಟಡಗಳಲ್ಲಿ ಒಂದಾಗಿದೆ. ಈ ಕಟ್ಟಡದಲ್ಲಿ ತೆರೆದ ಕಮಾನುಗಳನ್ನು ಅಳವಡಿಸಲಾಗಿದೆ ಕಮಾನುಗಳನ್ನು ಬಳ್ಳಿಗಳು ಹೂವುಗಳು ಹಂಸಗಳಿಂದ ಅಲಂಕರಿಸಲಾಗಿದೆ ‌. ಕಮಲ ಮಹಲ್ 9 ಗೋಪುರಗಳನ್ನು ಒಳಗೊಂಡಿದೆ.
  4. ರಾಣಿಯ ಸ್ನಾನ ಗೃಹ : ಪ್ರಾಣಿಯ ಸ್ನಾನ ಗೃಹಗಳನ್ನು ಚೌಕಕಾರವಾಗಿ ನಿರ್ಮಿಸಲಾಗಿತ್ತು. ಇದರ ಸುತ್ತಮುತ್ತ ನಾಲೆಗಳು ಹರಿದು ಹೋಗುತ್ತಿತ್ತು. ಪೂರ್ವ ದಿಕ್ಕಿನಲ್ಲಿರುವ ಗುಂಡಿಗಳ ಸಹಾಯದಿಂದ ಸ್ನಾನ ಗೃಹಕ್ಕೆ ನೀರನ್ನು ಒದಗಿಸಿಕೊಡುತ್ತಿದ್ದರು. ಈ ಸ್ನಾನ ಗೃಹದ ಕಟ್ಟಡವು ವಿಭಿನ್ನ ವಾಸ್ತು ಶೈಲಿಗಳ ಮಿಶ್ರಣ ವಾಗಿದೆ
  5. ಆನೆಲಾಯ : ಇದು ಸರಿಸುಮಾರು 85 ಮೀಟರ್ ಉದ್ದವಿರುವ ಆಯತಾಕಾರದ ಕಟ್ಟಡವಾಗಿದೆ. ಈ ಕಟ್ಟಡವು ಪಶ್ಚಿಮಾಭಿಮುಖವಾಗಿ ಚೌಕಾಕಾರದ 11 ಕೊಠಡಿಗಳನ್ನು ಹೊಂದಿದೆ. ಪತಿ ಕೊಠಡಿಯು ಪ್ರವೇಶ ದ್ವಾರಗಳಲ್ಲಿ ಕಮಾನುಗಳನ್ನು ಕಾಣಬಹುದು.

4) ಮಿಲಿಟರಿ ಅಥವಾ ಸೇನಾ ವಾಸ್ತು ಶಿಲ್ಪ :

  • ವಿಜಯನಗರ ಅರಸರುಗಳು ತಮ್ಮ ರಾಜಧಾನಿ ಹಾಗೂ ಬೇರೆ ಬೇರೆ ಪ್ರದೇಶಗಳನ್ನು ಶತ್ರುಗಳಿಂದ ಕಾಪಡಲ್ಲಿ ಕೋಟೆಗಳನ್ನು ನಿರ್ಮಿಸುತ್ತಿದ್ದರು.
  • ಈ ರೀತಿ ನಿರ್ಮಾಣ ಮಾಡಿದ ಕೋಟೆಗಳು ಮಿಲಿಟರಿ ಅಥವಾ ಸೇನಾ ವಾಸ್ತುಶಿಲ್ಪದಲ್ಲಿ ಪ್ರಮುಖವಾದವು ಯಾವೆಂದರೆ ವಿಜಯನಗರ ರಾಜಧಾನಿ ಹಂಪಿ ಏಳು ಕೋಟಿಗಳಿಂದ ಸುತ್ತುವರೆಯಲ್ಪಟ್ಟಿರುತ್ತದೆ.
  • ಕೋಟೆಗಳಲ್ಲಿ ಹಲವು ರೀತಿಯ ಬಾಗಿಲುಗಳು ಗಮನಿಸಬಹುದು ನೀವು ಕೋಟೆಗೆ ಪ್ರಧಾನವಾದ ಬಾಗಿಲನ್ನು ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.
  • ಸಾಮಾನ್ಯ ದ್ವಾರಗಳನ್ನು ಬಾಗಿಲು ಎಂದು ಕರೆಯುತ್ತಿದ್ದರು. ಉದಾಹರಣೆ ಪೆನುಕೊಂಡೆ ಬಾಗಿಲು.

LATEST POSTS

ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು

ಆದಿಕವಿ ಪಂಪ

ಭಾರತದ 7 ಅದ್ಭುತಗಳು 2025

ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ.

ಹಂಪಿಯ ಮೊದಲನೆ ಹೆಸರು ಏನಿತ್ತು

ಹಂಪಿಯ ಮೊದಲನೆ ಹೆಸರು ‘ಪಂಪಾ’ ಎಂದಿತ್ತು

ಹಂಪಿಯ ಪ್ರಸಿದ್ಧ ದೇವಾಲಯ ಯಾವುದು

ವಿರೂಪಾಕ್ಷ ದೇವಸ್ಥಾನ

ತಾಳಿಕೋಟೆ ಯುದ್ಧ ಯಾವ ವರ್ಷ ನಡೆಯಿತು

ಕ್ರಿ.ಶ. 1565ರಲ್ಲಿ.

ವಿಜಯನಗರದ ಪ್ರಸಿದ್ಧ ದೇವಾಲಯಗಳ ಉದಾಹರಣೆಗಳು ಯಾವುವು

ಹಂಪಿಯ ವಿರೂಪಾಕ್ಷ ದೇವಾಲಯ, ವಿಠ್ಠಲಸ್ವಾಮಿ ದೇವಾಲಯ ಮತ್ತು ಹಜಾರರ ರಾಮಸ್ವಾಮಿ ದೇವಾಲಯ ಪ್ರಮುಖವು.

ಹಂಪಿಯಲ್ಲಿರುವ ಸಂಗೀತ ಸ್ತಂಭಗಳು ಯಾವ ದೇವಾಲಯದಲ್ಲಿ ಕಂಡುಬರುತ್ತವೆ

ವಿಠ್ಠಲಸ್ವಾಮಿ ದೇವಾಲಯದಲ್ಲಿ.

12.ಹಜಾರರ ರಾಮಸ್ವಾಮಿ ದೇವಾಲಯ ಎಲ್ಲಿದೆ

ಹಂಪಿಯಲ್ಲಿ.

ವಿರೂಪಾಕ್ಷ ದೇವಾಲಯ ಯಾವ ನಗರದಲ್ಲಿದೆ

ಹಂಪಿ.

ಹಂಪಿಯ ಸ್ಮಾರಕಗಳಿಗೆ ಯುನೆಸ್ಕೋ ನೀಡಿರುವ ಮಾನ್ಯತೆ ಏನು

ವಿಶ್ವ ಹೇರಿಟೇಜ್ ತಾಣ.

ವಿಜಯನಗರ ಶಿಲ್ಪಗಳಲ್ಲಿ ಮುಖ್ಯವಾಗಿ ಯಾವ ವಿಷಯಗಳನ್ನು ಕೆತ್ತಲಾಗಿದೆ

ಪೌರಾಣಿಕ ಕಥೆಗಳು, ನೃತ್ಯ–ಸಂಗೀತ ದೃಶ್ಯಗಳು.

ಹಂಪಿಯ ಪ್ರಸಿದ್ಧ ಉತ್ಸವ ಮಂಟಪದ ಹೆಸರು ಏನು

ಹಜಾರ ಮಂಟಪ.

ಹಂಪಿಯ ವಿಠ್ಠಲಸ್ವಾಮಿ ದೇವಾಲಯದಲ್ಲಿರುವ ರಥವನ್ನು ಏನೆಂದು ಕರೆಯುತ್ತಾರೆ

ಕಲ್ಲಿನ ರಥ.