ಚಿಕ್ಕಮಗಳೂರು ಪ್ರವಾಸ ಮಾಹಿತಿ

ಚಿಕ್ಕಮಗಳೂರು ಪ್ರವಾಸ ಮಾಹಿತಿ – ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕುದುರೆಮುಖ, ಕಾಫಿ ತೋಟಗಳು ಮತ್ತು ಝರಿ ಜಲಪಾತದ ಸಂಯೋಜಿತ ದೃಶ್ಯ

ಚಿಕ್ಕಮಗಳೂರು ಪ್ರವಾಸ ಮಾಹಿತಿ – ಚಿಕ್ಕಮಗಳೂರು ಕರ್ನಾಟಕದಲ್ಲಿರುವ ಕಾಫಿನಾಡು ಆಗಿದೆ ಇದು ಪಶ್ಚಿಮ ಘಟ್ಟಗಳಲ್ಲಿರುವ ಪ್ರಸಿದ್ಧ ಮತ್ತು ಅದ್ಭುತವಾದ ಪರ್ವತ ಸ್ಥಳವಾಗಿದೆ.

ಇಲ್ಲಿನ ದಟ್ಟ ಹೋದ ಹಸಿರು ಕಾಫಿ ತೋಟಗಳು ಮತ್ತು ಅದರ ಸುಗಂಧವಾದ ವಾಸನೆ ಮತ್ತು ಅಲ್ಲಿನ ಸುಂದರವಾದ ಪ್ರಕೃತಿಯ ಪ್ರವಾಸ ಮಾಡುವುದು ಬಹುಚಂದ.

ಚಿಕ್ಕಮಂಗಳೂರಿನಲ್ಲಿ ಮಂಜಿನಿಂದ ಕೂಡಿರುವ ಬೆಟ್ಟಗಳು ಮತ್ತು ಅಲ್ಲಿನ ರೋಮಾಂಚಕವಾಗಿರುವ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ.

ಪ್ರವಾಸಿಗರು ಮರೆಯಲಾಗದಿರುವ ಸ್ಥಳ ಇದಾಗಿದೆ ಕಾಫಿ ತೋಟಗಳಲ್ಲಿ ನಡೆದಾಡುವುದು ಜನರಿಗೆ ಆಕರ್ಷಮಯವಾಗಿರುತ್ತದೆ ಹಾಗೂ ಜರಿಯಂತೆ ಹೋಗುವ ಜಲಪಾತಗಳು ಮತ್ತು ತಂಪಾದ ಹವಾಮಾನವು ಪ್ರವಾಸಿಗರಿಗೆ ಮರೆಯಲಾಗದ ನೆನಪುಗಳನ್ನು ನೀಡುತ್ತದೆ.

ಚಿಕ್ಕಮಂಗಳೂರಿನಲ್ಲಿ ಪ್ರವಾಸದ ಪ್ರಸಿದ್ಧ ಸ್ಥಳಗಳು
  1. ಮುಳ್ಳಯ್ಯನಗಿರಿ ಪರ್ವತ
  2. ಬಾಬಾಬುಡನ್ ಗಿರಿ
  3. ಕುದುರೆಮುಖ
  4. ಕಾಫಿ ತೋಟಗಳು
  5. ಝರಿ ಜಲಪಾತ
  6. ಮುಳ್ಳಯ್ಯನಗಿರಿ ಪರ್ವತ

ಮುಳ್ಳಯ್ಯನಗಿರಿ ಪರ್ವತ

ಚಿಕ್ಕಮಗಳೂರು ಪ್ರವಾಸ ಮಾಹಿತಿ
ಮುಳ್ಳಯ್ಯನಗಿರಿ ಪರ್ವತ

ಕರ್ನಾಟಕದಲ್ಲೇ ಅತ್ಯಂತ ಎತ್ತರವಾದ ಶಿಖರ ಯಾವುದೆಂದರೆ ಅದು ಮುಳ್ಳಯ್ಯನಗಿರಿ
ಮುಳ್ಳಯ್ಯನಗಿದಿಯ ಸುತ್ತಲೂ ಮಂಜು ಕಾಫಿ ತೋಟಗಳು ಮತ್ತು ಪಶ್ಚಿಮ ಘಟ್ಟಗಳು ಹಚ್ಚು ಹಸಿರಾಗಿ ಕಾಣುತ್ತದೆ. ಮುಳ್ಳಯ್ಯನಗಿರಿ ಪರ್ವತವು ಸಮುದ್ರಮಟ್ಟದಿಂದ 6,336 ಅಡಿ ಎತ್ತರದಲ್ಲಿದೆ. ಮುಳ್ಳಯ್ಯನಗಿರಿಯಲ್ಲಿ ಬೆಳಗಿನ ಸೂರ್ಯೋದಯವನ್ನು ಕಾಣುವ ಮತ್ತು ಮೋಡಗಳ ಮಧ್ಯೆ ನಡೆದಾಡಿಕೊಂಡು ಹೋಗುವ ಅನುಭವ ಅದ್ಭುತವಾಗಿರುತ್ತದೆ. ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಮುಳ್ಳಯ್ಯ ಸ್ವಾಮಿ ದೇವಸ್ಥಾನ ವಿದೆ ಆದ್ದರಿಂದ ಈ ಸ್ಥಳಕ್ಕೆ ಮುಳ್ಳಯ್ಯನಗಿರಿ ಎಂದು ಹೆಸರು ಬಂದಿದೆ.

ಮುಳಿಗೇನಗಿರಿಯು ಚಿಕ್ಕಮಂಗಳೂರಿನಿಂದ ಅಂದಾಜು 20 ರಿಂದ 27 ಕಿಲೋಮೀಟರ್ ದೂರದಲ್ಲಿ ಇರಬಹುದು, ಅಲ್ಲಿನ ರಸ್ತೆಗಳು ಸಣ್ಣದಾಗಿರುತ್ತದೆ ಮತ್ತು ಸ್ವಲ್ಪ ತಿರುವು ರಸ್ತೆಗಳು ಇರುವುದರಿಂದ ಬಹಳ ಜಾಗೃತೆಯಿಂದ ಹೋಗಬೇಕು ಅದರಲ್ಲೂ ಮಳೆಗಾಲದಲ್ಲಿ ಅಂತೂ ಮೆಲ್ಲನೆ ಹೋಗಬೇಕು, ಇತ್ತೀಚಿನ ವೀಕೆಂಡ್ ದಿನಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಂದರ್ಭ ಇರುತ್ತದೆ ಮತ್ತು ಕೆಲವೊಮ್ಮೆ ರಿಜಿಸ್ಟ್ರೇಷನ್ ಅಥವಾ ವಾಹನಗಳ ಮಿತಿಯು ಇರುತ್ತದೆ ಹೋಗೋ ಮುಂಚೆ ಚೆಕ್ ಮಾಡಿಕೊಂಡು ಹೋಗಿ.

ಬಾಬಾಬುಡನ್ ಗಿರಿ

ಬೆಳಗಿನ ಮಂಜಿನಲ್ಲಿ ಬಾಬಾಬುಡನ್ ಗಿರಿ ಪರ್ವತದ 360 ಡಿಗ್ರಿ ದೃಶ್ಯ
ಬಾಬಾಬುಡನ್ ಗಿರಿ ಕಾಫಿಯ ಜನ್ಮಸ್ಥಳ

ಬಾಬಾಬುಡನ್ ಗಿರಿ ಚಿಕ್ಕಮಂಗಳೂರು ಜಿಲ್ಲೆಯಲ್ಲಿರುವ ಅದ್ಭುತವಾದ ಪರ್ವತ ಶ್ರೇಣಿಯ ಶಿಖರಗಳಲ್ಲಿ ಒಂದಾಗಿದೆ ಬಾಬಾಬುಡನ್ ಗಿರಿ ಯನ್ನು ದತ್ತಗಿರಿ ಅಥವಾ ಚಂದ್ರದ್ರೋಣ ಪರ್ವತ ಎಂದು ಸಹ ಕರೆಯುತ್ತಾರೆ ಈ ಪ್ರದೇಶವು ಪಶ್ಚಿಮ ಘಟ್ಟಗಳ ಭಾಗವಾಗಿದೆ.

ನೇ ಶತಮಾನದಲ್ಲಿ ಹಜರತ್ ಬಾಬಾ ಬುಡನ್ ಅಥವಾ ದಾದಾ ಹಯತ್ ಕಲಂದರ್ ಎಂಬ ಸೂಫಿ ಸಂತರು ಯಮನ್ ದೇಶದಿಂದ 7 ಕಾಫಿ ಬೀಜಗಳನ್ನು ತಂದು ಈ ಪ್ರದೇಶದಲ್ಲಿ ನೆಡುತ್ತಾರೆ ಆ ಸಮಯದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಾಫಿಯನ್ನು ಬೆಳೆಯುವುದು ಶುರುವಾಯಿತು. ಈ ಪ್ರದೇಶವನ್ನು ಭಾರತದಲ್ಲಿ ಕಾಫಿಯ ಜನ್ಮಸ್ಥಳ ಎಂದು ಕರೆಯುತ್ತೇವೆ.

ಈ ಬೆಟ್ಟದ ತುದಿಯಲ್ಲಿ ಇವರ ದರ್ಗಾವಿದೆ ಮತ್ತು ಇವರ ಜೊತೆಯಲ್ಲಿ ಶ್ರೀ ದತ್ತಾತ್ರೇಯ ಪೀಠ ಎರಡು ಒಂದೇ ಗುಹೆಯಲ್ಲಿದೆ ಇಲ್ಲಿಗೆ ಹಿಂದೂ ಮತ್ತು ಮುಸ್ಲಿಂ ಜನರು ಬರುತ್ತಾರೆ. ಈ ಪ್ರದೇಶವು ಜನರ ವಿವಿಧತೆಯಲ್ಲಿ ಏಕತೆ ತೋರಿಸುತ್ತದೆ.

  • ಈ ಪ್ರದೇಶವು ಚಿಕ್ಕಮಂಗಳೂರಿಂದ 25 ರಿಂದ 36 km ಇದೆ
  • ಬಾಬಾಬುಡನ್ ಗಿರಿಗೆ ಹೋಗುವುದೇ ಒಂದು ರೋಮಾಂಚನ

ಕುದುರೆಮುಖ

ಬೆಳಗಿನ ಸೂರ್ಯೋದಯದಲ್ಲಿ ಮಂಜಿನ ನಡುವೆ ಕಾಣಿಸುವ ಕುದುರೆಮುಖ ಪರ್ವತದ ಸುಂದರ ದೃಶ್ಯ
ಮಂಜಿನ ಸಮುದ್ರದ ನಡುವೆ ಕುದುರೆಮುಖ ಪರ್ವತ – ಪ್ರಕೃತಿಯ ಅದ್ಭುತ ಸೌಂದರ್ಯ.

ಕುದುರೆಮುಖ ಇದು ಕರ್ನಾಟಕದಲ್ಲಿ ಅತ್ಯಂತ ಸುಂದರವಾದ ಒಂದು ಪ್ರಸಿದ್ಧ ಸ್ಥಳವಾಗಿದೆ ಇದು ಚಿಕ್ಕಮಂಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಇದೆ. ಕುದುರೆಮುಖ ಬೆಟ್ಟವು ಕುದುರೆಮುಖ ದಂತೆ ಕಾಣುತ್ತಿರುವರಿಂದ ಇದಕ್ಕೆ ಕುದುರೆಮುಖ ಎಂದು ಹೆಸರು. (ಕುದುರೆಮುಖ ಅಂದರೆ ಕುದುರೆಯ ಮುಖ )

ಕುದುರೆಮುಖ ಶಿಖರವು ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಎರಡನೆಯ ಅಥವಾ ಮೂರನೇ ಸ್ಥಾನವನ್ನು ಹೊಂದಿದೆ
ಕುದುರೆಮುಖವು ರಾಷ್ಟ್ರೀಯ ಉದ್ಯಾನವನದ ಒಂದು ಭಾಗವಾಗಿದೆ ಇಲ್ಲಿ ವಿಶಾಲವಾಗಿರುವ ದಟ್ಟವಾದ ಕಾಡುಗಳಿವೆ ಮತ್ತು ಹಸಿರು ಗುಡ್ಡಗಳು ಅಪರೂಪದ ಹಲವಾರು ಪ್ರಾಣಿಗಳು ಮತ್ತು ಸಸ್ಯಗಳು ಇಲ್ಲಿ ನಾವು ಕಾಣಬಹುದು.

ಕುದುರೆಮುಖದ ಮೇಲಿನಿಂದ 360 ಡಿಗ್ರಿ ಸುತ್ತಲೂ ಪ್ರಕೃತಿ ಆನಂದಿಸಬಹುದು ಮಳೆಗಾಲದಂತು ಹೇಳಬಾರದು ಎಷ್ಟು ರೋಮಾಂಚನ ಸ್ವರ್ಗದಂತೆ ಕಾಣುತ್ತದೆ.ಕುದುರೆಮುಖ ಸ್ಥಳಕ್ಕೆ ಹೋಗುಕ್ಕಿಂತ ಮುಂಚೆ ಒಮ್ಮೆಯಾದರೂ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ವೆಬ್ಸೈಟ್ ಅನ್ನು ವೀಕ್ಷಣೆ ಮಾಡಿ ಆನಂತರ ಅಲ್ಲಿಗೆ ತೆರಳಿ.

  • ಕುದುರೆಮುಖವು ಚಿಕ್ಕಮಂಗಳೂರಿಂದ 70 ರಿಂದ 80 ಕಿಲೋಮೀಟರ್ ಇದೆ

ಕಾಫಿ ತೋಟಗಳು

ಚಿಕ್ಕಮಗಳೂರು ಜಿಲ್ಲೆಯ ಹಸಿರು ಕಾಫಿ ತೋಟಗಳು ಬೆಳಗಿನ ಮಂಜಿನಲ್ಲಿನ ಸುಂದರ ದೃಶ್ಯ
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಕಾಫಿ ತೋಟಗಳು – ಮಂಜಿನಲ್ಲಿನ ಹಸಿರು ಪ್ರಕೃತಿ ಸೌಂದರ್ಯ.

ಕರ್ನಾಟಕದ ಮಲೆನಾಡಿನ ಕಾಫಿ ತೋಟಗಳು ಅತ್ಯಂತ ಸುಂದರವಾದ ಆಗರ್ಷಣೆಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಕಾಫಿಯ ಜನುಮಸ್ಥಳವಾಗಿದೆ.ಕರ್ನಾಟಕದಲ್ಲಿ ಕಾಫಿ ತೋಟಗಳ ಪ್ರಮುಖ ಕೇಂದ್ರಗಳಲ್ಲಿ ಮೊದಲನೆಯದ್ದು ಚಿಕ್ಕಮಂಗಳೂರಿನ ಬಾಬಬಡನ್ ಗಿರಿ ಆಗಿದೆ ಮತ್ತು ಕೊಡಗು ಸಕಲೇಶಪುರ ಹಾಸನ ಮತ್ತು ಮೂಡಿಗೆರೆ ಭಾಗಗಳು ಬಹು ಪ್ರಸಿದ್ಧ.

ಕಾಫಿ ತೋಟಗಳ ನಡುವೆ ನಾವು ಓಡಾಡಬಹುದು ಅಲ್ಲಿ ಕಾಫಿ ತೋಟಗಳಿಂದ ಕಾಫಿ ಬೀಜಗಳನ್ನು ತೆಗೆದು ಕಾಫಿ ಹೇಗೆ ಮಾಡುತ್ತಾರೆ ಎಂದು ನಾವು ನೋಡಬಹುದು ಮತ್ತು ಅಲ್ಲಿ ಹೋಂ ಸ್ಟೇ ರೆಸಾರ್ಟ್ ಗಳು ಸಿಗುತ್ತವೆ . ರೆಸಾರ್ಟ್ ಗಳಲ್ಲಿ ಬೆಳ್ಳಂಬೆಳಗ್ಗೆ ಕಾಫಿಯ ಸವಿಯನ್ನು ಸವಿಯಬಹುದು ಮಳೆಗಾಲದ ನಂತರ ಕಾಫಿ ತೋಟದಲ್ಲಿ ಹೂಗಳು ಅರಳಿ ತೋರಣದಂತೆ ಕಾಣುತ್ತದೆ.

ಝರಿ ಜಲಪಾತ

ಚಿಕ್ಕಮಗಳೂರು ಜಿಲ್ಲೆಯ ಝರಿ ಜಲಪಾತದ ಹಸಿರು ಅರಣ್ಯದ ಮಧ್ಯೆ ಹರಿಯುವ ಸುಂದರ ದೃಶ್ಯ
ಹಸಿರು ಅರಣ್ಯದ ಮಧ್ಯೆ ಹರಿಯುವ ಝರಿ ಜಲಪಾತ – ಪ್ರಕೃತಿ ಪ್ರೇಮಿಗಳ ಸ್ವರ್ಗ.

ಜರಿ ಜಲಪಾತವು ಚಿಕ್ಕಮಗಳೂರಿನ ಅತ್ಯಂತ ಸುಂದರವಾದ ಮತ್ತು ಅರಣ್ಯದಲ್ಲಿ ಅಡಗಿರುವ ಜಲಪಾತವಾಗಿದೆ ಈ ಜರಿ ಜಲಪಾತವನ್ನು ಬಟರ್ ಮಿಲ್ಕ್ ಫಾಲ್ಸ್ ಎಂದು ಸಹ ಕರೆಯುತ್ತಾರೆ ಏಕೆಂದರೆ ಅಲ್ಲಿ ನೀರು ಬಿಳಿ ಬಣ್ಣದಂತೆ ಹರಿಯುತ್ತದೆ ಹಾಗಾಗಿ ಎಂದು ಕರೆಯುತ್ತಾರೆ.

ಈ ಸ್ಥಳವು ಬಾಬಾ ಬುಡನ್ ಗಿರಿ ಬೆಟ್ಟ ಮತ್ತು ಮುಳ್ಳಯ್ಯನಗಿರಿ ಬೆಟ್ಟಗಳ ಸಮೀಪ ಪಶ್ಚಿಮ ಘಟ್ಟಗಳ ಕಾಡುಗಳ ನಡುವೆಯಲ್ಲಿ ಹರಿದು ಹೋಗುತ್ತದೆ. ಇಲ್ಲಿ ಮಳೆಗಾಲದಲ್ಲಿ ಹೋಗಬೇಕು ಅತ್ಯಂತ ಆಕಾಶಮಯವಾಗಿ ಕಾಣುತ್ತದೆ ಸುತ್ತಲೂ ಹಸಿರು ಕಾಫಿ ತೋಟಗಳು ಜರಿಯಾದಂತಹ ಗಿಡಗಳು ಇಲ್ಲಿ ನಾವು ಕಾಣಬಹುದು ಪರಿಸರ ಪ್ರೇಮಿಗಳಿಗೆ ಇದು ಒಂದು ಸ್ವರ್ಗದ ರೀತಿಯಲ್ಲಿ ಕಾಣುತ್ತದೆ ಇದು ಚಿಕ್ಕಮಂಗಳೂರಿನಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತದೆ.

ಇಲ್ಲಿಗೆ ಹೋಗುವಾಗ ಖಾಸಗಿ ವಾಹನಗಳಿಗೆ ಜಲಪಾತದವರೆಗೂ ಹೋಗುವುದಕ್ಕೆ ಅನುಮತಿ ಇರುವುದಿಲ್ಲ ಈ ಚಲಪತಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದಿಂದ ಜೀಪ್ ರೈಡ್ ಮಾಡಬೇಕು ಮತ್ತು ಇದಕ್ಕೆ ಹಣಕೊಡಬೇಕು 600 ರಿಂದ 700 ರೂಪಾಯಿವರೆಗೂ ಇರುತ್ತದೆ ಪ್ರತಿ ಟ್ರಿಪ್ಪಿಗೂ 7 ರಿಂದ 8 ಜನವನ್ನು ಕಳೆದುಕೊಂಡು ಹೋಗುತ್ತಾರೆ. ಇಲ್ಲಿ ಸಮಯ ಬೆಳಗ್ಗೆ 8 ರಿಂದ ಸಂಜೆ 5 ವರೆಗೆ ಸಮಯವಿರುತ್ತದೆ.

ಹಲವು ಪ್ರಮುಖ ಸ್ಥಳಗಳು

ಸಿರಿ ಕೆಫೆ : ಶ್ರೀ ಕೆಫೆಯಲ್ಲಿ ಒಂದು ಅದ್ಭುತವಾದ ಮಹಿಳಾ ಶಿಲ್ಪ ವಿದೆ ಮತ್ತು ಕಾಫಿ ಕೆಫೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕಾಫಿ ಮತ್ತು ಸಿರಿ ಕೆಫೆಯ ವಶಿಷ್ಠತೆಯು ಮತ್ತು ಕಲಾ ಕೃತಿಗಳು ಫೋಟೋಗಳನ್ನು ತೆಗೆದುಕೊಳ್ಳಲು ಪ್ರಮುಖ ಸ್ಥಳವಾಗಿದೆ.

ಝೆಡ್ ಪಾಯಿಂಟ್ ( z point) : ಇದು ಕೆಮ್ಮಣ್ಣು ಗುಂಡಿಯಲ್ಲಿರುವ ಸ್ಥಳವಾಗಿದೆ ಈ ಸ್ಥಳದಲ್ಲಿ ಸೂರ್ಯನು ಸೂರ್ಯಸ್ತವಾಗುವುದನ್ನು ಸುಂದರವಾಗಿ ತೋರಿಸುತ್ತದೆ ಇದನ್ನು ಝೆಡ್ ಪಾರ್ಟಿ ಎಂದು ಹೇಳುತ್ತಾರೆ.

ಪ್ರೇಕ್ಷಣೀಯ ಸ್ಥಳಗಳು : ಹಬ್ಬಿ ಜಲಪಾತ, ಕಾಫಿ ತೋಟದ ಮಧ್ಯೆ ಇರುವ ಸುಂದರವಾದ ಜಲಪಾತ, ಜರಿ ಜಲಪಾತ, ಸೀತಾಳಯ್ಯನಗಿರಿ ಇನ್ನು ಹಲವಾರು ಸ್ಥಳಗಳಿವೆ ಇಲ್ಲಿ ನೀವು ಭೇಟಿಯಾಗಿ ಬರಬೇಕು.

  • Note : ಟ್ರಕಿಂಗ್ ಮಾಡುವಾಗ ಟ್ರಕಿಂಗ್ ಶೂಸ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳುವುದು, ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಹೋಗುವ ಮುನ್ನ ರೈನ್ ಕೋಟ್ ಮತ್ತು ಜಾಕೆಟ್ ಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.
  • ಟ್ರಕಿಂಗ್ ಮಾಡುವಾಗ ಹುಷಾರಾಗಿ ಮೆಲ್ಲನೆ ಪ್ರಯಾಣವನ್ನು ಮಾಡುವುದು ಉತ್ತಮ.

    LATEST POST

ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು

ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು

ಸ್ನೇಹಿತರೆ ನೀವು ಕೂರ್ಗ್ ನ ಪ್ರವಾಸವನ್ನು ಏಕೆ ಮಾಡಬೇಕು ಎಂದು ನಮ್ಮ ಈ ಲೇಖನದಲ್ಲಿ ವಿವರಿಸಲಾಗಿದೆ.

ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು

ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು

ಭಾರತದ ಪ್ರಮುಖ ಹಲವಾರು ಪ್ರವಾಸ ಮಾಡುವ ತಾಣಗಳಲ್ಲಿ ಒಂದು ಕೊಡಗು ಜಿಲ್ಲೆಯಾಗಿದೆ. ಅದರಲ್ಲೂ ಕರ್ನಾಟಕದ ಜನರಿಗೆ ತುಂಬಾ ಇಷ್ಟವಾದಂತಹ ತಾಣವು ಇಲ್ಲಿದೆ. ಮಳೆಗಾಲದಲ್ಲಿ ಅಂತು ಪ್ರವಾಸ ಮಾಡಲು ಜನರು ಬಹಳ ಕಾತುರತೆಯಿಂದ ಕಾಯುತ್ತಾರೆ.

ನಮ್ಮ ದೇಶದಲ್ಲಿ ಅತಿ ಹೆಚ್ಚಾಗಿ ಕಾಫಿ ಉತ್ಪಾದನೆ ಮಾಡುವ ಪ್ರದೇಶಗಳಲ್ಲಿ ಕೂರ್ಗ್ ಒಂದಾಗಿದೆ, ಇಲ್ಲಿ ಐತಿಹಾಸಿಕ ಯೋಧರ ಜನಪ್ರಿಯ ಪ್ರದೇಶವಾಗಿದೆ . ಕೂರ್ಗ್ ನಲ್ಲಿ ಹಲವಾರು ಆಕರ್ಷಣೆ ಆಗುವಂತಹ ಪ್ರದೇಶಗಳು ಹೊಂದಿವೆ.

ಪ್ರವಾಸ ಏಕೆ ಕೈಗೊಳ್ಳಬೇಕು

ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು

ಕೂರ್ಗ್ ನ ಜನರ ಸ್ಥಳೀಯ ಸಂಪ್ರದಾಯವನ್ನು ನಾವು ತಿಳಿಯಬಹುದು. ಕೂರ್ಗ್ ಪ್ರದೇಶದ ಸ್ಥಳೀಯ ಜನರು ತನ್ನದೇ ಆದ ಸಾಂಪ್ರದಾಯಿಕ ವೈವಿಧ್ಯತೆಯನ್ನು ಹೊಂದು ಹೆಸರುವಾಸಿಯಾಗಿದೆ.ಇಲ್ಲಿ ಹಲವು ರೀತಿಯ ವಿಭಿನ್ನ ಪದ್ಧತಿಗಳು, ಸಂಪ್ರದಾಯ ಮತ್ತು ಜೀವನ ಶೈಲಿಯನ್ನು ನಾವೆಲ್ಲರೂ ಕಾಣಬಹುದು, ಭಾಷೆಯಂತೆ ಮಾತನಾಡುವ ಜನರು ಇದ್ದಾರೆ.

ಹಾಗೆ ಇಲ್ಲಿನ ಜನರು ವಿಶೇಷವಾಗಿ ಕಾಣುವ ಶೈಲಿಯ ಬಟ್ಟೆಯನ್ನು ಇಲ್ಲಿಯ ಪುರುಷ ಮತ್ತು ಮಹಿಳೆಯರು ಧರಿಸಿಕೊಳ್ಳುತ್ತಾರೆ .ಕೊಡಗಿನವರ ವಿಶೇಷವೇಶಭೂಷಣಗಳು, ನೃತ್ಯದ ಶೈಲಿಯಿಂದ ನಮ್ಮ ಕರ್ನಾಟಕದ ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ಜನರು ಕೈಲ್ಪಾಡ್ , ಕಾವೇರಿ ಸಂಕ್ರಮಣ ಹಾಗೂ ಪುತ್ತರಿಯಂತಹ ಹಬ್ಬಗಳನ್ನು ಜನರ ಕಣ್ಣಿಗೆ ಕಟ್ಟುವಂತೆ ಆಚರಿಸುತ್ತಾರೆ.

ಸುಂದರವಾಗಿ ಕಾಣುವಂತಹ ಗಿರಿಧಾಮಗಳು

ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು

ಕೂರ್ಗ್ ಪ್ರದೇಶ ಕೇವಲ ಕಾಫಿ ತೋಟಗಳನ್ನು ಹೊಂದಿರುವ ಪ್ರದೇಶ ಮಾತ್ರವಲ್ಲ, ಬದಲಾಗಿ ಇದು ಕರ್ನಾಟಕದ ಜನಪ್ರಿಯ ಗಿರಿಧಾಮವು ಕೂಡ ಆಗಿದೆ. ಹೊಸದಾಗಿ ಮದುವೆಯಾದ ಜೋಡಿಗಳು ಮಧುಚಂದ್ರಕ್ಕಾಗಿ ಕೂರ್ಗ್ ತಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಮತ್ತು ಇಲ್ಲಿ ಪ್ರಶಾಂತವಾದ ಹವಾಮಾನ, ಕಾಫಿ ತೋಟಗಳು, ಮತ್ತು ರುದ್ರ ರಮಣೀಯ ಪ್ರಕೃತಿ ಸಂಪತ್ತುಗಳು ಎಂತಹ ವ್ಯಕ್ತಿಗಳಿಗೂ ಕೂಡ ಅಚ್ಚರಿ ಮೂಡಿಸುತ್ತದೆ. ಹಾಗೆ ಜನರ ಆಧ್ಯಾತ್ಮಿಕತೆಯನ್ನು ಹೆಚ್ಚು ಮಾಡುವ ತಲಕಾವೇರಿ, ಮಡಿಕೇರಿಯ ಹತ್ತಿರವಿರುವ ಹಲವು ಪ್ರವಾಸ ತಾಣಗಳಿಗೆ ನೀವೆಲ್ಲರೂ ಹೋಗಬಹುದು.

ಅಷ್ಟೇ ಅಲ್ಲದೆ ಇಲ್ಲಿನ ಹಲವು ತಾಣಗಳಾದ ಇರುಪ್ಪು ಜಲಪಾತ, ಮಲ್ಲಳ್ಳಿ ಜಲಪಾತ, ಲಕ್ಷ್ಮಣ ತೀರ್ಥ ನದಿ, ಗೋಲ್ಡನ್ ಟೆಂಪಲ್, ನಿಸರ್ಗಧಾಮ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ಇಡೀ ವರ್ಷ ಪ್ರವಾಸಿಗರನ್ನು ಬೆಳೆಯುತ್ತದೆ.

ಪರಿಶುದ್ಧವಾದ ವಾತಾವರಣ

ಈ ವಾತಾವರಣದಲ್ಲಿ ಅತ್ಯಂತ ಶ್ರೀಮಂತವಾಗಿ ಬೆಳೆದು ನಿಂತ ಸಸ್ಯ ಸಂಪತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಇಲ್ಲಿ ಹಲವು ರೀತಿಯ ಸಾವಿರಾರು ಜಾತಿಯ ಸಸ್ಯಗಳನ್ನು ನೀವು ನೋಡಬಹುದು, ಅದಲ್ಲದೆ ಅಕೇಶಿಯ, ಶ್ರೀಗಂಧ ಮತ್ತು ತೇಗವೃಕ್ಷಗಳು ಕೂರ್ಗ್ ಪ್ರದೇಶದ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ.

ಈ ಪ್ರದೇಶದಲ್ಲಿ ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ ಗಳಲ್ಲಿ ಇರುವಂತಹ ವನ್ಯಜೀವಿಗಳ ಅಭಯಾರಣ್ಯಗಳಲ್ಲಿ ನೀವು ಜೀವನದಲ್ಲಿ ನೋಡದೆ ಇರುವಂತಹ ಪ್ರಾಣಿಗಳನ್ನು ಕಾಣಬಹುದು, ರಾಷ್ಟ್ರೀಯ ಉದ್ಯಾನವನ ನಾಗರಹೊಳೆಯಲ್ಲಿ ಏಷ್ಯ್ಯಾಟಿಕ್ ಆನೆ, ಚಿರತೆ, ಕರಡಿಗಳು ಕೂಡಿ ಹಲವಾರು ಪ್ರಾಣಿಗಳನ್ನು ನೀವೆಲ್ಲರೂ ವೀಕ್ಷಿಸಬಹುದು.

ಕೂರ್ಗ್ ನ ಉಪಹಾರ

ಸ್ನೇಹಿತರೆ ನೀವೆಲ್ಲರೂ ಯಾವುದೇ ಒಂದು ಪ್ರವಾಸ ತಾಣಗಳು ಮತ್ತು ಯಾವುದೇ ಉದ್ಯಾನವನ ಗಳಿಗೆ ಹೋದಾಗ ನೀವು ಅಲ್ಲಿನ ಸ್ಥಳೀಯ ಪ್ರದೇಶದ ಆಹಾರವನ್ನು ಸವಿದಾಗ ಮಾತ್ರ ನಿಮ್ಮ ಪ್ರವಾಸಗಳು ಪರಿಪೂರ್ಣವಾಗುತ್ತದೆ. ಅದೇ ರೀತಿಯಲ್ಲಿ ಕೂರ್ಗ್ ನ ಪ್ರವಾಸದಲ್ಲಿ ನೀವು ಇದ್ದಾಗ ನೀವು ಅಲ್ಲಿನ ಸ್ವಾದಿಷ್ಟ ಆಹಾರವನ್ನು ಸೇವಿಸಲೇಬೇಕು.

ಈ ಕೂರ್ಗ್ ನಲ್ಲಿ ಹೆಸರುವಾಸಿ ಆಗಿರುವಂತಹ ಆಹಾರಗಳು ಬಿದಿರು ಚಿಗುರು ಕರಿ, ಕಡಂಬುಟ್ಟು, ಪಾಪುಟ್ಟ ,ಕೂರ್ಗ್ ಸ್ಟೈಲ್ ಕೋಳಿ ಸಾರು, ಅಕ್ಕಿ ರೊಟ್ಟಿ ಸೇರಿದಂತೆ ಹಲವಾರು ರೀತಿಯ ಆಹಾರಗಳು ಇಲ್ಲಿ ಜನಪ್ರಿಯವಾಗಿದೆ.

ಹಾಗೆ ಸ್ನೇಹಿತರೆ ನಾವೆಲ್ಲರೂ ಪ್ರವಾಸ ಮಾಡುವುದು ನಮ್ಮ ಪ್ರಕೃತಿಯನ್ನು ನೋಡಿ ಆನಂದ ಪಡುವುದಕ್ಕೆ ಪ್ರವಾಸ ಮಾಡುತ್ತೇವೆ. ನೀವೆಲ್ಲರೂ ಪ್ರವಾಸೋದ್ಯಮಗಳಲ್ಲಿ ಮುನ್ನೆಚ್ಚರಿಕೆಯಿಂದ ಹುಷಾರಾಗಿ ಬಂದು ಹುಷಾರಾಗಿ ಹಿಂದಿರುಗಿ ಹೋಗಿ ಯಾವುದೇ ತರಹದ ಅನಾಹುತಗಳನ್ನು ಮಾಡಿಕೊಳ್ಳಬೇಡಿ.

LATEST POSTS

ಭಾರತದ 7 ಅದ್ಭುತಗಳು 2025

ಭಾರತದ 7 ಅದ್ಭುತಗಳು 2025

ಭಾರತದ 7 ಅದ್ಭುತಗಳು 2025

ವಿಶ್ವದ 7 ಅದ್ಭುತಗಳ ನಂತರ ಭಾರತದ ಸೂಪರ್ 7 WONDERS ಕರ್ನಾಟಕದವೇ 2 TOP ನಲ್ಲಿ – ನೋಡಿ ಶಾಕ್ ಆಗ್ತೀರಾ?

ಭಾರತದ 7 ಅದ್ಭುತಗಳು 2025

ಭಾರತವು ಶ್ರೀಮಂತ ಸಂಸ್ಕೃತಿ, ವೈವಿಧ್ಯತೆ, ಭೌಗೋಳಿಕ ಮತ್ತು ಇತಿಹಾಸದ ಭೂಮಿ. ಇದು ಪ್ರಪಂಚದ ಜನರನ್ನು ತನ್ನತ್ತ ಆಕರ್ಷಿಸುವಷ್ಟು ಶ್ರೀಮಂತ ಪ್ರವಾಸೋದ್ಯಮವನ್ನು ಹೊಂದಿದೆ.
ಭಾರತದ ಅದ್ಭುತಗಳನ್ನು ಕಣ್ತುಂಬಿಕೊಳ್ಳಲು ಜನರು ದೂರದೂರಿನಿಂದ ಬರುತ್ತಾರೆ. ಇಲ್ಲಿರುವ ಸಂಕೀರ್ಣ ಕೆತ್ತನೆಗಳನ್ನು ಹೊಂದಿರುವ ಸ್ಮಾರಕಗಳು, ಆಲಯಗಳು, ಕಟ್ಟಡಗಳು ಇತಿಹಾಸಕಾರರನ್ನೂ ಸೆಳೆಯುತ್ತವೆ.
ಅಷ್ಟಕ್ಕೂ ಭಾರತದ ಅದ್ಭುತಗಳಲ್ಲಿ ನಮ್ಮ ಕರ್ನಾಟಕದ ಯಾವೆಲ್ಲಾ ಸ್ಥಳವು ಸೇರ್ಪಡೆಯಾಗಿದೆ ಎಂಬುದನ್ನು ತಿಳಿಯಿರಿ.

ಶ್ರವಣಬೆಳಗೊಳದಲ್ಲಿ ಏಕಶಿಲಾ ಗೋಮಟೇಶ್ವರ

ಭಾರತದ 7 ಅದ್ಭುತಗಳು 2025

ಕರ್ನಾಟಕದ ಶ್ರವಣಬೆಳಗೊಳವು ಭಾರತದ ಅದ್ಭುತಗಳಲ್ಲಿ ಒಂದಾಗಿದೆ. ಏಕ ಶಿಲಾ ಗೊಮ್ಮಟೇಶ್ವರವು ಸುಮಾರು 57 ಅಡಿ ಎತ್ತರದಲ್ಲಿರುವ ದೈತ್ಯಾಕಾರದ ಒಂದು ಪ್ರತಿಮೆ ಆಗಿದೆ. ಈ ಅದ್ಭುತವಾಗಿರುವ ಪ್ರತಿಮೆಯನ್ನು ಗಂಗಾರಮಂತ್ರಿ ಆಗಿದ್ದ ಚಾಮುಂಡರಾಯ ಕೆತ್ತಿಸಿದ್ದಾರೆ ಎನ್ನಲಾಗಿದೆ.
ಇಲ್ಲಿಯ ವಿಶೇಷತೆ ಏನೆಂದರೆ,ಇಲ್ಲಿ 12 ವರ್ಷಕ್ಕೊಮ್ಮೆ ಈ ಪ್ರತಿಮೆಗೆ ಮಹಾ ಮಸ್ತಕಾಭಿಷೇಕವನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಈ ಸ್ಥಳಕ್ಕೆ ಲಕ್ಷಾಂತರ ಜನರು ಬಂದು ದರ್ಶನ ಪಡೆಯುತ್ತಾರೆ.
ಬೆಂಗಳೂರಿನಿಂದ 160 ಕಿ.ಮೀ ಮತ್ತು ಮೈಸೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಈ ಶ್ರವಣಬೆಳಗೊಳವು ಜೈನ ಧರ್ಮದ ಜನರಿಗೆ ಅತ್ಯಂತ ಪವಿತ್ರವಾದ ಧಾರ್ಮಿಕ ಕೇಂದ್ರವಾಗಿದೆ.

ಹಂಪಿ – ವಿಶ್ವ ಪ್ರಸಿದ್ಧ ಐತಿಹಾಸಿಕ ತಾಣ

ಭಾರತದ 7 ಅದ್ಭುತಗಳು 2025

ಭಾರತದ ಅದ್ಭುತಗಳಲ್ಲಿ ನಮ್ಮ ಕರ್ನಾಟಕದ ಐತಿಹಾಸಿಕ ತಾಣ ಹಂಪಿ ಕೂಡ ಸೇರಿದೆ. ಹಂಪಿಯ ಸೊಬಗನ್ನು ನೋಡಲು ಪ್ರಪಂಚದಾದ್ಯಂತ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ತಾಣವು ರಾಮಾಯಣದ ಜೊತೆ ತಳುಕನ್ನು ಹಾಕಿಕೊಂಡಿದೆ. ಇಲ್ಲಿಯೇ ಶ್ರೀರಾಮ ಮತ್ತು ಸೀತೆಯರು ವಾಸವಾಗಿದ್ದರು ಎಂಬ ಪುರಾಣ ಇದೆ.
ಅಷ್ಟೇ ಅಲ್ಲ, ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯು ವಿಜಯನಗರ ಕಾಲದ ಅವಶೇಷಗಳು ಮತ್ತು ಸ್ಮಾರಕಗಳನ್ನು ಸುಮಾರು 26 ಚದರ ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿರುವುದನ್ನು ಕಾಣಬಹುದು. ಇಲ್ಲಿ ಹಲವಾರು ಆಕರ್ಷಣೆಗಳಿವೆ. ಕರ್ನಾಟಕಕ್ಕೆ ಬರುವ ಪ್ರವಾಸಿಗರು ಇವುಗಳನ್ನು ತಪ್ಪದೇ ಅನ್ವೇಷಿಸಲೇಬೇಕು!

ತಾಜ್‌ ಮಹಲ್ – ಪ್ರೀತಿಯ ಅಮರ ಸಂಕೇತ

TAJMAHAL IN KANNADA

ತಾಜ್ ಮಹಲ್ ಭಾರತದ ಅದ್ಭುತ ಸ್ಮಾರಕ ಮಾತ್ರವಲ್ಲ, ಇದು ಪ್ರಪಂಚದ ಅದ್ಭುತಗಳಲ್ಲಿಯೇ ಒಂದು. ಪ್ರೀತಿಯ ಸಂಕೇತವಾದ ತಾಜ್ ಮಹಲ್ ಇತಿಹಾಸ ಪ್ರಿಯರ ಮೆಚ್ಚಿನ ತಾಣ.
17ನೇ ಶತಮಾನದಲ್ಲಿ ಷಹಜಹಾನ್ ತನ್ನ ಪ್ರಿಯ ಪತ್ನಿ ಮುಮ್ತಾಜ್‌ಗಾಗಿ ನಿರ್ಮಿಸಿದ ಈ ಸ್ಮಾರಕ ಪ್ರೀತಿಯ ಶಾಶ್ವತ ಸಾಕ್ಷಿಯಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ಇದು ಇಡೀ ವಿಶ್ವದ ಹೆಮ್ಮೆ.
ಈ ಅದ್ಭುತವನ್ನು ಕಾಣಲು ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲ, ವಿದೇಶದಿಂದಲೂ ಇತಿಹಾಸಕಾರರು ಮತ್ತು ಸಂದರ್ಶಕರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ.

ಅಮೃತಸರದ ಗೋಲ್ಡನ್‌ ಟೆಂಪಲ್‌ – ಚಿನ್ನದ ದೇವಾಲಯ

AMRITSAR

ಅಮೃತಸರದಲ್ಲಿರುವ ಗೋಲ್ಡನ್‌ ಟೆಂಪಲ್‌ ಸಿಖ್‌ರ ಪವಿತ್ರ ಧಾರ್ಮಿಕ ಕ್ಷೇತ್ರ. ಜನಪ್ರಿಯವಾಗಿ ಗೋಲ್ಡನ್‌ ಟೆಂಪಲ್‌ ಎಂದು ಕರೆಯಲ್ಪಡುವ ಈ ಆಲಯದ ನಿಜವಾದ ಹೆಸರು ಶ್ರೀ ಹರ್ಮಂದಿರ್ ಸಾಹಿಬ್‌.
1585 ರಿಂದ 1604 ರ ಅವಧಿಯಲ್ಲಿ ನೀರಿನ ಕೊಳದ ಸುತ್ತಲೂ ನಿರ್ಮಿಸಲಾದ ಈ ದೇವಾಲಯ ಭಾರತದ ಅದ್ಭುತಗಳಲ್ಲಿ ಒಂದು. ಅಷ್ಟೇ ಅಲ್ಲ, ಇದು ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ.
ಪಂಜಾಬ್‌ನ ಈ ಪುಣ್ಯಕ್ಷೇತ್ರಕ್ಕೆ ಪ್ರತಿ ವರ್ಷ ಲಕ್ಷಾಂತರ ಜನರು ದರ್ಶನಕ್ಕಾಗಿ ಬರುತ್ತಾರೆ. ಇಲ್ಲಿಯ ಶಾಂತಿ ಮತ್ತು ಭಕ್ತಿಯ ವಾತಾವರಣ ಎಲ್ಲರನ್ನೂ ಆಕರ್ಷಿಸುತ್ತದೆ.

ಕೋನಾರ್ಕ್‌ ದೇವಾಲಯ – ಸೂರ್ಯನ ರಥ

KONARK TEMPLE

ಒಡಿಶಾದಲ್ಲಿರುವ ಕೋನಾರ್ಕ್‌ ದೇವಾಲಯವು ಸೂರ್ಯ ದೇವನಿಗೆ ಮುಡಿಪಾದ ಅದ್ಭುತ ದೇವಾಲಯ. ಈ ಆಲಯವು ಸಂಕೀರ್ಣವಾದ ಅವಶೇಷಗಳನ್ನು ಹೊಂದಿದ್ದು, ಸುಮಾರು 100 ಅಡಿ ಎತ್ತರದ ಭವ್ಯ ರಥದ ನೋಟವನ್ನು ಹೊಂದಿದೆ.
ಭಾರತದ ಅದ್ಭುತಗಳಲ್ಲಿ ಕೋನಾರ್ಕ್‌ ದೇವಾಲಯವು ಒಂದು. ಇಲ್ಲಿ ನೋಡತಕ್ಕಂತಹ ವಿಶೇಷತೆ ಏನೆಂದರೆ, ಸೂಕ್ಷ್ಮವಾದ ಕೆತ್ತನೆಗಳಿಂದ ಅಲಂಕೃತಗೊಂಡಿರುವ ಚಕ್ರಗಳು, ಕುದುರೆಗಳು, ಸಿಂಹಗಳು ಮತ್ತು ಕಾಮಪ್ರಚೋದಕ ಶಿಲ್ಪಗಳು.
ಈ ಪ್ರಾಚೀನ ವಾಸ್ತುಶಿಲ್ಪದ ಸೊಬಗು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ಖಜುರಾಹೊ – ಶಿಲ್ಪಗಳ ನಗರಿ

KHAJURAHO

ಪ್ರಪಂಚದ ಪ್ರವಾಸಿಗರನ್ನು ಆಕರ್ಷಿಸುವ ಖಜುರಾಹೊ ಭಾರತದ ಅದ್ಭುತಗಳಲ್ಲಿ ಒಂದು. ಇದು ಮಧ್ಯಪ್ರದೇಶದ ಛತಾರ್ಪುರ್‌ ಜಿಲ್ಲೆಯಲ್ಲಿದೆ. ಖಜುರಾಹೊ ತನ್ನ ಕಾಮಪ್ರಚೋದಕ ಶಿಲ್ಪಗಳಿಂದ ವಿಶ್ವಪ್ರಸಿದ್ಧವಾಗಿದೆ.
ಇದನ್ನು 885 ರಿಂದ 1000 ರ ನಡುವೆ ಚಂದೇಲಾ ರಾಜವಂಶವು ನಿರ್ಮಿಸಿತು. ಹಿಂದೂ ಮತ್ತು ಜೈನ ದೇವಾಲಯಗಳ ಗುಂಪಾಗಿರುವ ಈ ಖಜುರಾಹೊ ವಿಶ್ವ ಪರಂಪರೆಯ ತಾಣವಾಗಿದೆ.
ಕಣ್ಣು ಸೆಳೆಯುವ ನಗರಾ ಶೈಲಿಯ ವಾಸ್ತುಶಿಲ್ಪಗಳು ಇತಿಹಾಸಕಾರರನ್ನು ಮತ್ತು ಕಲಾ ಪ್ರೇಮಿಗಳನ್ನು ಇಂದಿಗೂ ಆಕರ್ಷಿಸುತ್ತಿವೆ. ಈ ಪ್ರಾಚೀನ ಶಿಲ್ಪಕಲೆ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಸಾಕ್ಷಿ.

ಏಕತೆಯ ಪ್ರತಿಮೆ – ವಿಶ್ವದ ಅತಿ ಎತ್ತರದ ಪ್ರತಿಮೆ

The Statue of Unity

ಗುಜರಾತ್‌ನ ಏಕತೆಯ ಪ್ರತಿಮೆಯು ವಿಶ್ವದಲ್ಲೇ ಅತಿ ಎತ್ತರವಾದ ಪ್ರತಿಮೆ! ಭಾರತದ ಕಬ್ಬಿಣದ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ಸಮರ್ಪಿಸಲಾದ ಈ ಪ್ರತಿಮೆಯು ಭಾರತದ ಪ್ರಮುಖ ಆಕರ್ಷಣೆಗಳಲ್ಲಿ ಒಂದು.
ಸುಮಾರು 3,000 ಕೋಟಿ ರೂಪಾಯಿ ವೆಚ್ಚ ಮಾಡಿ ಈ ಭವ್ಯ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಇಲ್ಲಿ ಸಾರ್ವಜನಿಕರಿಗಾಗಿ ಮ್ಯೂಸಿಯಂ ಮತ್ತು ಗ್ಯಾಲರಿಯನ್ನು ತೆರೆಯಲಾಗಿದೆ.
ಹಾಗೆಯೇ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ಸಾಧನೆಗಳನ್ನು ಪ್ರದರ್ಶಿಸುವ ವಿಶೇಷ ಮ್ಯೂಸಿಯಂ ಇದೆ. ದೇಶ-ವಿದೇಶದ ಲಕ್ಷಾಂತರ ಪ್ರವಾಸಿಗರು ಈ ಅದ್ಭುತವನ್ನು ನೋಡಲು ಬರುತ್ತಾರೆ.

ಈ ಎಲ್ಲಾ ಅದ್ಭುತಗಳನ್ನು ನೋಡಿದ ನಂತರ ನನ್ನ ಫೇವರೇಟ್ ಯಾವುದು ಗೊತ್ತಾ? ಕರ್ನಾಟಕದ ಹಂಪಿ! ಯಾಕೆಂದರೆ ಇಲ್ಲಿ ರಾಮಾಯಣದ ಕಿಶ್ಕಿಂಧೆ ಇದೆ ಅಂತಾರಲ್ಲಾ? 2025ರಲ್ಲಿ ನಾನು ಹೋಗಿ ವೀಡಿಯೋ ತಗೊಂಡಿದ್ದೇನೆ – ನೀವು ಯಾವ ಅದ್ಭುತ ನೋಡಲು ಪ್ಲ್ಯಾನ್ ಮಾಡ್ತೀರಾ?

ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025,ಭಾರತದ 7 ಅದ್ಭುತಗಳು 2025<

ತಾಜ್ ಮಹಲ್ ಎಲ್ಲಿದೆ

ಆಗ್ರಾ

ತಾಜ್ ಮಹಲ್ ಯಾರು ನಿರ್ಮಿಸಿದರು

ಶಾಹಜಹಾನ್

ಹಂಪಿ ಯಾವ ರಾಜ್ಯದಲ್ಲಿದೆ

ಕರ್ನಾಟಕ

ಹಂಪಿ ಯಾವ ಸಾಮ್ರಾಜ್ಯದ ರಾಜಧಾನಿಯಾಗಿತ್ತು

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು

ಕೊಣಾರ್ಕ್ ದೇವಾಲಯ ಎಲ್ಲಿದೆ

ಒಡಿಶಾ

ಖಜುರಾಹೋ ದೇವಾಲಯಗಳು ಎಲ್ಲಿವೆ

ಮಧ್ಯಪ್ರದೇಶ

ಖಜುರಾಹೋ ಯಾರು ನಿರ್ಮಿಸಿದರು

ಚಂದೇಲರು

ತಾಜ್ ಮಹಲ್ ಯಾವ ಕಲ್ಲಿನಿಂದ ಮಾಡಲಾಗಿದೆ

ಅಮೃತಶಿಲೆ

ತಾಜ್ ಮಹಲ್ ಯಾವ ನದಿಯ ದಡದಲ್ಲಿದೆ

ಯಮುನಾ

ಹಂಪಿ ಯಾವ ನದಿಯ ದಡದಲ್ಲಿದೆ

ತುಂಗಭದ್ರಾ

ಗೋಲ್ ಗುಂಬಜ್ ಯಾವಾಗ ನಿರ್ಮಿತವಾಯಿತು

1656

ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು

ಕರ್ನಾಟಕದ ಏಳು ಅದ್ಭುತಗಳು

ಪ್ರಪಂಚದ ಏಳು ಅದ್ಭುತಗಳು ನೀವು ನೋಡಿರುತ್ತೀರಿ ಆದರೆ ನಮ್ಮ ಕರ್ನಾಟಕದಲ್ಲಿರುವ ಏಳು ಅದ್ಭುತಗಳನ್ನು ನಿಮ್ಮ ಜೀವಿತಾವಧಿಯಲ್ಲಿ ನೋಡಲೇಬೇಕು ನೀವೊಬ್ರೆ ಅಲ್ಲ ನಿಮ್ಮ ಕುಟುಂಬದ ಸಮೇತ ನೋಡಬೇಕು ಅವುಗಳು ಯಾವುದೆಂದರೆ.

ಹಿರೇಬೆಣಕಲ್

ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು

ಕರ್ನಾಟಕದ ಏಳು ಅದ್ಭುತಗಳು

ಹಿರೇಬೆಣಕಲ್ ಒಂದು ಅದ್ಭುತವಾಗಿದೆ ಈ ಸ್ಥಳದಲ್ಲಿ ಬೃಹತ್ ಕಲ್ಲಿನ ಶಿಲೆಗಳ ತಾಣವಾಗಿದೆ. ಈ ಸ್ಥಳವನ್ನು ಕ್ರಿಸ್ತಪೂರ್ವ 800 ರಿಂದ ಕ್ರಿಸ್ತಪೂರ್ವ 200 ರ ಅವಧಿಯಲ್ಲಿ ನಿರ್ಮಾಣ ಮಾಡಲಾಯಿತು.

ಈ ಸ್ಥಳವು ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿದೆ. ಈ ಸ್ಥಳವು ಗಂಗಾವತಿ ನಗರದಿಂದ 10 ಕಿ.ಮೀ ಇದೆ ಮತ್ತು ಕೊಪ್ಪಳ ನಗರದಿಂದ 43 ಕಿಲೋಮೀಟರ್ ದೂರವಿದೆ. ಈ ಹಿರೇ ಬಣಕಲ್ ನಲ್ಲಿ ಸುಮಾರು 300 ರಿಂದ 400 ಕ್ಕು ಹೆಚ್ಚು ಶಿಲಾಕೃತಿಯಲ್ಲಿರುವ ಗೋರಿಗಳಿವೆ. ಈ ಸ್ಮಾರಕಗಳನ್ನು ನವಶೀಲಾಯುಗ ಹಾಗೂ ಕಬ್ಬಿಣದ ಶಿಲಾಯುಗದ ನಡುವಿನ ಪರಿವರ್ತನೆಯ ಕಾಲವೆಂದು ಇತಿಹಾಸಕಾರರು ಹೇಳಿದ್ದಾರೆ.

  • ಈ ಸ್ಥಳವನ್ನು ಏಳು ಬೆಟ್ಟಗಳ ಜಾಗವೆಂದು ಸಹ ಕರೆಯುತ್ತಾರೆ.
  • ಈ ಸ್ಥಳ ಇರುವ ಗುಡ್ಡದ ಹೆಸರು ಮೋರ್ಯಾರ್ ಗುಡ್ಡ ಎಂದು ಸಹ ಕರೆಯುತ್ತಾರೆ.
  • 1955 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣೆ ಧಾರವಾಡ ವೃತ್ತದ ನಿರ್ವಹಣೆಯ ಅಡಿಯಲ್ಲಿದೆ.
  • 26 ಫೆಬ್ರವರಿ 2023 ರಂದು ಈ ತಾಣವನ್ನು ಕರ್ನಾಟಕದ ಅದ್ಭುತಗಳಲ್ಲಿ ಒಂದು ಎಂದು ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿಕೊಂಡಿದೆ.

ಹಂಪಿ

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದ ಏಳು ಅದ್ಭುತಗಳು ಇದರಲ್ಲಿ ಹಂಪಿ ಒಂದು ಆಗಿದೆ . ಅಲ್ಲದೆ ಯುನೆಸ್ಕೋ ವಿಶ್ವ ಪಾರಂಪರೆ ತಾಣಗಳಲ್ಲಿ ಒಂದಾಗಿದೆ. ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಂದು ಐತಿಹಾಸಿಕ ಸ್ಥಳವಾಗಿದೆ. ಹಂಪಿಯು 1336 ರಿಂದ 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು.

ಹಂಪಿಯ ಮೊದಲ ಹೆಸರು “ಪಂಪಾ” ಎಂದಾಗಿತ್ತು. ಇದನ್ನು ವರ್ಷಗಳು ಕಳೆದಂತೆ ವಿಜಯನಗರ ಮತ್ತು ವಿರೂಪಾಕ್ಷಪುರ ಎಂದು ಕರೆತೊಡಗಿದರು. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಮಾರುಕಟ್ಟೆಯಲ್ಲಿ ವಜ್ರಗಳನ್ನು ಸೇರಿನ ಅಳತೆಯಲ್ಲಿ ಮಾರಾಟ ಮಾಡುತ್ತಿದ್ದರು.

ಭೇಟಿ ಮಾಡಲು ಸೂಕ್ತ ಸಮಯ : ಅಕ್ಟೋಬರ್‌ ರಿಂದ ಫೆಬ್ರವರಿ ವರೆಗೆ ಹಂಪಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ.ಈ ಸಮಯದಲ್ಲಿ ಹವಾಮಾನ ತಂಪಾಗಿರುತ್ತದೆ ಮತ್ತು ವೀಕ್ಷಣೆಗೆ ಅನುಕೂಲ.

ಗೋಲ್ ಗುಂಬಜ್

ಕರ್ನಾಟಕದ ಏಳು ಅದ್ಭುತಗಳು

ಗೋಲ್ ಗುಂಬಜ್ ಇದು ಕರ್ನಾಟಕದ ಬಿಜಾಪುರ ಜಿಲ್ಲೆ (ಈಗಿನ ವಿಜಯಪುರ ನಗರದಲ್ಲಿ ಇರುವ) ಪ್ರಸಿದ್ಧ ಸ್ಮಾರಕವಾಗಿದೆ. ಇದರಲ್ಲಿ ನಿರ್ಮಾಣವು ಕ್ರಿಸ್ತಶಕ 1626 ರಿಂದ ಕ್ರಿಸ್ತಶಕ 1656 ರಲ್ಲಿ ಈ ಸ್ಮಾರಕ ನಿರ್ಮಾಣವಾಯಿತು. ಗೋಲ್ ಗುಂಬಜ್ ಅನ್ನು ಪ್ರಸಿದ್ಧ ಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ ಇವರಿಬ್ಬರೂ ನಿರ್ಮಿಸಿದ್ದಾರೆ.

ಗೋಲ್ ಗುಂಬಜ್ ಅಂದರೆ ಗೋಲಾಕಾರದ ಗುಮ್ಮಟ ಎಂದರ್ಥ ಇದನ್ನು ಮಹಮ್ಮದ್ ಆದಿಲ್ ಶಾ ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿಕೊಂಡನು. ಗೋಲ್ ಗುಂಬಜ್ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮಾನವ ನಿರ್ಮಿತ ಗುಮ್ಮಟವಾಗಿದೆ. ಗೋಲ್ ಗುಂಬಜ್ ನಲ್ಲಿ ಒಂದು ಬಾರಿ ಹೇಳಿದ ಮಾತು ಪ್ರತಿಧ್ವನಿಯಾಗಿ 7 ಬಾರಿ ನಮಗೆ ಕೇಳಿಸುತ್ತದೆ.

  • ಇದನ್ನು ಕರ್ನಾಟಕದ ತಾಜ್ಮಹಲ್ ಎಂದು ಸಹ ಕರೆಯುತ್ತಾರೆ. ಈ ಸ್ಮಾರಕವು ಇಸ್ಲಾಮಿಕ್ ಶೈಲಿಯನ್ನು ಪ್ರತಿನಿಧಿಸುತ್ತದೆ.
  • ಈ ಸ್ಥಳಕ್ಕೆ ಭೇಟಿ ನೀಡಲು ಸರಿಯಾದ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳಾಗಿದೆ.
ಕರ್ನಾಟಕದ ಏಳು ಅದ್ಭುತಗಳು

ಗೊಮ್ಮಟೇಶ್ವರ ಹಾಸನ ಜಿಲ್ಲೆಯಲ್ಲಿರುವ ಪ್ರಸಿದ್ಧ ಜೈನರ ಧಾರ್ಮಿಕ ಕ್ಷೇತ್ರವಾಗಿದೆ ಇದು ಭಾರತದ ಅತ್ಯಂತ ಹಳೆಯ ಮತ್ತು ಪವಿತ್ರ ಜೈನ ಧರ್ಮದ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಬಾಹುಬಲಿಯ ಮೂರ್ತಿ ಇದೆ. ಇದರ ನಿರ್ಮಾಣವು ಕ್ರಿಸ್ತಶಕ 981 ರಲ್ಲಿ ಗಂಗ ರಾಜ್ಯದ ಮಂತ್ರಿಯಾದ ಚಾವುಂಡರಾಯ ಇದನ್ನು ನಿರ್ಮಿಸಿದನು.

ಗೊಮ್ಮಟೇಶ್ವರದ ಎತ್ತರ 58 ಅಡಿ ಯ ಏಕಶಿಲಾ ಮೂರ್ತಿಯಾಗಿದೆ. ಇಲ್ಲಿ 12 ವರ್ಷಗಳಿಗೊಮ್ಮೆ ಮಹಾಮಸ್ತಾಭಿಷೇಕ ಮಾಡುತ್ತಾರೆ. ಮುಂದೆ 2030 ನೇ ವರ್ಷದಲ್ಲಿ ಮಹಾಮಸ್ತಭಿಷೇಕ ನಡೆಯುತ್ತದೆ. ಈ ಗೊಮ್ಮಟೇಶ್ವರ ಪ್ರತಿಮೆ ವಿಂಧ್ಯಗಿರಿ ಬೆಟ್ಟದ ಮೇಲೆ ನೆಲೆಸಿದೆ.

  • ಇದನ್ನು ಒಂದೇ ಕಲ್ಲಿನಿಂದ ನಿರ್ಮಿಸಲಾಗಿದೆ.
  • ಈ ಪ್ರತಿಮೆ ಪ್ರಪಂಚದ ಜನರನ್ನು ತನ್ನ ಕಡೆ ಸೆಳೆಯುತ್ತದೆ. ಗೊಮ್ಮಟೇಶ್ವರ ಕರ್ನಾಟಕದ ಏಳು ಅದ್ಭುತಗಳು ಇದರಲ್ಲಿ ಒಂದಾಗಿದೆ.

ಮೈಸೂರು ಅರಮನೆ

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದಲ್ಲಿ ಹಲವು ಅರೆಮನೆ ಗಳಿವೆ ಆದರೆ ನಮ್ಮ ಮೈಸೂರು ಅರಮನೆ ನಮ್ಮ ರಾಜ್ಯದ ಐತಿಹಾಸಿಕ ,ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಬಗ್ಗೆ ಹೆಗ್ಗಳಿಕೆಯನ್ನು ಪ್ರತಿಬಿಂಬಿಸುತ್ತದೆ.

ಮೈಸೂರು ನಗರದ ಹೃದಯವಾಗಿರುವ ಈ ಅರಮನೆಯು ವಿಶ್ವಪ್ರಸಿದ್ಧ ಆಕರ್ಷಣೆಯ ತಾಣವಾಗಿದೆ ಮತ್ತು ಮೈಸೂರು ಅರಮನೆಯನ್ನು “ಅಂಬಾ ವಿಲಾಸ್” ಎಂದು ಸಹ ಕರೆಯುತ್ತಾರೆ. ಇದು ದೇಶದಲ್ಲಿ ಅತ್ಯಂತ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ ಈ ಅರಮನೆಯನ್ನು “ಇಂಡೋ-ಸಾರ್ಸೆನಿಕ್” ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ ಈ ಅರಮನೆಯು ಒಡೆಯರ್ ರಾಜವಂಶದ ಅಧಿಕೃತ ನಿವಾಸವಾಗಿತ್ತು.ಈ ಅರಮನೆ ರಾತ್ರಿಯ ಬೆಳಕಿನಲ್ಲಿ ಕಣ್ಣಿಗೆ ತೊಟ್ಟುವಂತೆ ಕಾಣುತ್ತದೆ.

  • ಈ ಅರಮನೆಯು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ.
  • ಭೇಟಿ ನೀಡುವ ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ವರೆಗೆ ಇರುತ್ತದೆ.
  • ಅರಮನೆಯಲ್ಲಿ ಕ್ಯಾಮರಾಗಳಿಗೆ ಅನುಮತಿ ಕೊಟ್ಟರೆ ಫೋಟೋ ತೆಗೆಯುವುದನ್ನು ಮರೆಯಬೇಡಿ.
  • ಮೈಸೂರು ಅರಮನೆ ಇತಿಹಾಸ ತಿಳಿಯಲು ಅಲ್ಲಿನ ಗೈಡ್ಸ್ ಗಳ ಜೊತೆ ಹೋಗೋದು ಉತ್ತಮ.
  • ಇದರ ಹತ್ತಿರವೇ ಉಳಿದುಕೊಳ್ಳಲು ಹೋಟೆಲ್ ಗಳು ಮತ್ತು ಊಟ ಮಾಡುವುದಕ್ಕೆ ಖಾನಾವಳಿಗಳಿವೆ.
  • ಒಂದು ಬಾರಿ ಈ ಅರಮನೆಯನ್ನು ಭೇಟಿ ಮಾಡುವುದರಿಂದ ನಮಗೆ ನಮ್ಮ ರಾಜ್ಯದ ವೈಭವವನ್ನು ಕಾಣುತ್ತೇವೆ.

ಜೋಗ ಜಲಪಾತ

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದ 7 ಅದ್ಭುತಗಳು ಇದರಲ್ಲಿ ಜೋಗ ಜಲಪಾತ ಒಂದಾಗಿದೆ. ಜೋಗ ಜಲಪಾತ ಭಾರತದ ಎರಡನೇ ಅತ್ಯಂತ ಎತ್ತರವಾದ ಜಲಪಾತವಾಗಿದೆ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಈ ಜಲಪಾತ ಭಾರತದ ಪ್ರಕೃತಿ ಸೌಂದರ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯ ಜನರು ಈ ಜಲಪಾತವನ್ನು “ಗೇರುಸೊಪ್ಪಿನ ಜಲಪಾತ” ಅಥವಾ “ಜೋಗದ ಗುಡ್ಡೆ” ಎಂದು ಸಹ ಕರೆಯುತ್ತಾರೆ.

ಈ ಜಲಪಾತದ ವೈಶಿಷ್ಟತೆ

  • ಈ ಜಲಪಾತವನ್ನು ಶರಾವತಿ ನದಿ ರಚನೆ ಮಾಡಿದೆ ಈ ಜಲಪಾತ 830 ಅಡಿ ಎತ್ತರದಲ್ಲಿ ನಾಲ್ಕು ಭಾಗವಾಗಿ ನೀರನ್ನು ಬೀಳಿಸುತ್ತದೆ.
  • ರಾಜಾ -ನೇರವಾಗಿ ಬೀಳುವ ಮುಖ್ಯ ಧಾರೆ
  • ರಾಣಿ – ಸುಂದರವಾಗಿ ಹರಿಯುವ ಧಾರೆ
  • ರೋರರ್ – ಹೆಚ್ಚು ಶಬ್ದ ಮಾಡಿ ಹರಿಯುವ ಧಾರೆ
  • ರಾಕೇಟ್ – ವೇಗವಾಗಿ ಹರಿಯುವ ಧಾರೆ
  • ಮಳೆಗಾಲದಲ್ಲಿ ಇದು ಒಂದಾಗಿ ಕೂಡಿ ಹರಿಯುವ ದೃಶ್ಯ ಎಲ್ಲರ ಕಣ್ಣು ಕಂಗೊಳಿಸುತ್ತದೆ.

ಹತ್ತಿರದ ಪ್ರವಾಸಿ ತಾಣಗಳು

  • ಸಾಗರ ಪಟ್ಟಣ
  • ಹೊನ್ನಾವರ
  • ಶಿವಮೊಗ್ಗ ನೈಸರ್ಗಿಕ ಉದ್ಯಾನವನ
  • ಲಿಂಗನಮಕ್ಕಿ ಅಣೆಕಟ್ಟು
  • ಕೊಡಚಾದ್ರಿ ಬೆಟ್ಟ

ಸಲಹೆಗಳು

  • ಮಳೆಗಾಲದಲ್ಲಿ ಸುರಕ್ಷಿತವಾಗಿ ಹೋಗಿ ಮತ್ತು ಕಂದಕ ಬಳಿ ಹೋಗಬೇಡಿ
  • ಬೆಳ್ಳಂ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಜಲಪಾತ ಆಕರ್ಷಕವಾಗಿ ಕಾಣುತ್ತದೆ.
  • ಫೋಟೋಶೂಟ್ ಗೆ ಕ್ಯಾಮೆರಾ ತೆಗೆದುಕೊಂಡು ಹೋಗೋದು ಮರೆಯಬೇಡಿ.
  • ಊಟಕ್ಕೆ ಹತ್ತಿರದಲ್ಲಿರುವ ಅಕ್ಕಿ ರೊಟ್ಟಿ ಮತ್ತು ನೀರ್ ದೋಸೆ ತುಂಬ ರುಚಿ ಇರುತ್ತದೆ ಮರೆಯಬೇಡಿ.

ನೇತ್ರಾಣಿ ದ್ವೀಪ

ಕರ್ನಾಟಕದ ಏಳು ಅದ್ಭುತಗಳು

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಸಮೀಪದಲ್ಲಿ ಈ ನೇತ್ರಾವತಿ ದ್ವೀಪ ಇದೆ. ಇದ್ವಪವನ್ನು “ಪಿಜನ್ ಐಲ್ಯಾಂಡ್” ( ಪಾರಿವಾಳಗಳ ದ್ವೀಪ ) ಎಂದು ಕರೆಯುತ್ತಾರೆ.
ಭಾರತದಲ್ಲಿ ಈ ದ್ವೀಪವು ಸ್ಕೊಬಾ ಡೈವಿಂಗೆ ಸರಿಯಾದ ಸ್ಥಳವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಂತರ ನೇತ್ರಾಣಿ ದ್ವೀಪವು ಎರಡನೆಯ ಸ್ಥಾನದಲ್ಲಿದೆ. ಇದು ನೀಲಿ ಸಮುದ್ರದ ಮಧ್ಯಭಾಗದಲ್ಲಿ ಕಣ್ಣಿನ ಆಕರದಲ್ಲಿ ಇರುವುದರಿಂದ ಇದನ್ನು ನೇತ್ರಾಣಿ ದ್ವೀಪ ಎಂದು ಕರೆಯಲಾಗಿದೆ.

  • ಇಲ್ಲಿ ಪ್ರವಾಸಿಗರು ಸ್ಕೊಬಾ ಡೈವಿಂಗ್ ಮಾಡಬಹುದು
  • ಬೋಟ್ ರೈಡಿಂಗ್ ಮಾಡಬಹುದು
  • ನೀರಿನ ಒಳಗೆ ವಿವಿಧ ಬಣ್ಣದ ರೀತಿಯ ಮೀನುಗಳನ್ನು ಕಾಣಬಹುದು
  • ಈ ದ್ವಿಪದ ವಿಸ್ತೀರ್ಣ 500 ಮೀಟರ್ ಇದೆ

ಭೇಟಿ ಮಾಡಲು ಸೂಕ್ತ ಸಮಯ

ನೇತ್ರಾಣಿ ದ್ವೀಪಕ್ಕೆ ಭೇಟಿ ಮಾಡುವ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಉತ್ತಮ.ಮಳೆಗಾಲದಲ್ಲಿ ಅಂದರೆ ಜೂನ್ ಇಂದ ಸೆಪ್ಟೆಂಬರ್ ವರೆಗೆ ಈ ದ್ವಿಪಕ್ಕೆ ಪ್ರಯಾಣ ಮಾಡುವುದು ನಿಧಿಸುತ್ತಾರೆ ಏಕೆಂದರೆ ಸಮುದ್ರದ ಅಲೆಗಳು ಹೆಚ್ಚು ಆಗುವುದರಿಂದ

ಸಲಹೆ

  • ಪ್ರವಾಸಿಗರು ಸ್ಕೊಬಾ ಡೈವಿಂಗ್ ಮಾಡುವವರು ಅಡ್ವಾನ್ಸ್ ಬುಕಿಂಗ್ ಮಾಡಿಕೊಳ್ಳಬೇಕು.
  • ಪ್ರವಾಸಿಗಳು ಸುರಕ್ಷಿತ ಸಲಕರಣೆಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು.
  • ಊಟಕ್ಕೆ ಆಹಾರ ಮತ್ತು ನೀರನ್ನು ಮುರುಡೇಶ್ವರ ದಲ್ಲೇ ಸಿದ್ದ ಮಾಡಿಕೊಂಡು ಹೋಗಬೇಕು ಏಕೆಂದರೆ ನೇತ್ರಾಣಿ ದ್ವೀಪದಲ್ಲಿ ಯಾವುದೇ ಸೌಲಭ್ಯಗಳಿಲ್ಲ.
  • ಫೋಟೋ ತೆಗೆದುಕೊಳ್ಳುವವರು ಮೊಬೈಲ್ ಗಳಿಗೆ ಮರೆಯದೆ ವಾಟರ್ ಪ್ರೂಫ್ ಕವರ್ ಗಳನ್ನು ಹಾಕಿಕೊಳ್ಳಬೇಕು

ಈ Blog ನಲ್ಲಿ ನಮ್ಮ ಕರ್ನಾಟಕದ ಏಳು ಅದ್ಭುತಗಳನ್ನು ನೀವು ತಿಳಿದುಕೊಂಡಿದ್ದೀರಾ ಹಾಗೆಯೇ ನಮ್ಮ ಪ್ರಪಂಚದ ಏಳು ಅದ್ಭುತಗಳನ್ನು ನೀವು ತಿಳಿದುಕೊಳ್ಳಬೇಕೆಂದರೆ ಈ ಲಿಂಕ್ ಅನ್ನು ಒತ್ತಿರಿ.

RECENT POST

ಕರ್ನಾಟಕದ ರಾಜಧಾನಿ ಯಾವುದು

ಬೆಂಗಳೂರು

ಮೈಸೂರು ಅರಮನೆ ಎಲ್ಲಿದೆ

ಮೈಸೂರು

ಜೋಗ ಜಲಪಾತ ಯಾವ ಜಿಲ್ಲೆಯಲ್ಲಿ ಇದೆ

ಶಿವಮೊಗ್ಗ

ಗೋಲ್ಗುಮ್ಮಟ ಎಲ್ಲಿದೆ

ವಿಜಯಪುರ

ಹಂಪಿ ಎಲ್ಲಿದೆ

BALLARI

ಕರ್ನಾಟಕದ ಅತ್ಯುನ್ನತ ಜಲಪಾತ ಯಾವದು

ಜೋಗ

ಗೋಲ್ಗುಮ್ಮಟ ಯಾರ ಸಮಾಧಿ

ಮೊಹಮ್ಮದ್ ಆದಿಲ್ ಶಾಹ್

ಕರ್ನಾಟಕದ ಅತ್ಯಂತ ಹಳೆಯ ರಾಜವಂಶ

ಚಾಲುಕ್ಯ

ಜೋಗ ಜಲಪಾತದ ನದಿ ಯಾವದು

ಶರಾವತಿ

ಹಂಪಿಯ ಪ್ರಸಿದ್ಧ ದೇವಾಲಯ

ವಿರೂಪಾಕ್ಷ ದೇವಾಲಯ

ಮೈಸೂರು ಅರಮನೆಯನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗಿದೆ

ಇಂಡೋ-ಸಾರ್ಸೆನಿಕ್

ಜೋಗ ಜಲಪಾತ ಯಾವ ನದಿಯಲ್ಲಿದೆ

ಶರಾವತಿ

ಕರ್ನಾಟಕದ ಏಳು ಅದ್ಭುತಗಳು, ಕರ್ನಾಟಕದ ಏಳು ಅದ್ಭುತಗಳು, ಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳುಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳುಕರ್ನಾಟಕದ ಏಳು ಅದ್ಭುತಗಳು ಕರ್ನಾಟಕದ ಏಳು ಅದ್ಭುತಗಳು ಕರ್ನಾಟಕದ ಏಳು ಕರ್ನಾಟಕದ ಏಳು ಅದ್ಭುತಗಳು ಕರ್ನಾಟಕದ ಏಳು ಅದ್ಭುತಗಳು ಏಳು ಅದ್ಭುತಗಳು ಕರ್ನಾಟಕದ ಏಳು ಅದ್ಭುತಗಳು

ಪ್ರಪಂಚದ ಏಳು ಅದ್ಭುತಗಳು

ಪ್ರಪಂಚದ ಏಳು ಅದ್ಭುತಗಳು ತಿಳಿಯೋಣ
  1. ಚೀನಾದ ಮಹಾ ಗೋಡೆ (Great Wall of China, China)
  2. ಪೆಟ್ರಾ ನಗರ (Petra, Jordan)
  3. ಕ್ರೈಸ್ಟ್ ದ ರಿಡೀಮರ್ ಪ್ರತಿಮೆ (Christ the Redeemer, Brazil)
  4. ಮಾಚು ಪಿಚ್ಚು (Machu Picchu, Peru)
  5. ಚಿಚೆನ್ ಇಟ್ಜಾ (Chichen Itza, Mexico)
  6. ಕೋಲೋಸಿಯಂ (Colosseum, Italy)
  7. ತಾಜ್ ಮಹಲ್ (Taj Mahal, India)

ಚೀನಾದ ಮಹಾ ಗೋಡೆ

ಪ್ರಪಂಚದ ಏಳು ಅದ್ಭುತಗಳು
  • ಚೀನಾದ ಮಹಾಗೋಡೆ ಜಗತ್ತಿನಲ್ಲೇ ಅತಿ ದೊಡ್ಡದಾದಮಾನವ ನಿರ್ಮಿತ ಕಟ್ಟಡವಾಗಿದೆ.
  • ಈ ಗೋಡೆಯ ಉದ್ದ ಸರಿ ಸುಮಾರು 21196 ಕಿಲೋಮಿಟರ್ ಇದೆ ಅಗಲ 4.5 ಮೀಟರ್ ಎತ್ತರ ಸರಾಸರಿ 7 ರಿಂದ 8 ಮೀಟರ್ ಇದೆ.
  • ಈ ಗೋಡೆಯ ನಿರ್ಮಾಣವು ಕ್ರಿಸ್ತಪೂರ್ವ 7 ಶತಮಾನದಿಂದ ಆರಂಭವಾಗಿ ಕ್ರಿಸ್ತಶಕ 16ನೇ ಶತಮಾನದವರೆಗೂ ಹಲವಾರು ರಾಜವಂಶಗಳ ಕಾಲದಲ್ಲಿ ಕಟ್ಟಲಾಯಿತು. ಅದರಲ್ಲಿ ಮುಖ್ಯವಾಗಿ ಚೀನ್ ವಂಶ ಮತ್ತು ಮಿಂಗ್ ವಂಶ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
  • ಇದನ್ನು ಕಟ್ಟಿರುವ ಉದ್ದೇಶ ಏನೆಂದರೆ ಉತ್ತರ ದಿಕ್ಕಿನಿಂದ ದಾಳಿ ಮಾಡುವ ಮಂಗೋಲ್ ಮತ್ತು ಇತರ ಶತ್ರುಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿದರು.
  • ಇಂದಿನ ದಿನದಲ್ಲಿ ಚೀನಾದ ಮಹಾಗೋಡೆ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಪೆಟ್ರಾ ನಗರ

ಪ್ರಪಂಚದ ಏಳು ಅದ್ಭುತಗಳು
  • ಪೆಟ್ರಾ ಜೋರ್ಡಾನ್ ದೇಶದಲ್ಲಿರುವ ಒಂದು ಪ್ರಸಿದ್ಧ ಐತಿಹಾಸಿಕ ನಗರವಾಗಿದೆ.
  • ಇದು ಕ್ರಿಸ್ತಪೂರ್ವ 300 ಸುಮಾರಿಗೆ ನಭಾಟಿಯನ್ ನಾಗರಿಕತೆಯ ಜನರು ನಿರ್ಮಿಸಿದ ಒಂದು ಪ್ರಸಿದ್ಧ ನಗರವಾಗಿದೆ.
  • ಇದರ ವಿಶೇಷತೆ ಏನೆಂದರೆ ಇದನ್ನು ಪರ್ವತ ಕಲ್ಲುಗಳನ್ನು ಕೊರೆದು ಕಟ್ಟಲಾಗಿದೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಅಲ್ಲಿನ ದೊಡ್ಡ ಬಾಗಿಲುಗಳು, ದೇವಾಲಯಗಳು, ಸಮಾಧಿಗಳು ಹಾಗೂ ಅರಮನೆಗಳು ಎಲ್ಲವೂ ಕೆಂಪು ಬಣ್ಣದಲ್ಲಿ ಹೊಳೆಯುತ್ತವೆ.
  • ಪೆಟ್ರಾವನ್ನೂ 2007 ರಲ್ಲಿ ಯುನೆಸ್ಕೋ ತಾಣವಾಗಿ ಘೋಷಿಸಲಾಯಿತು.
  • ಈ ಜಾಗದಲ್ಲಿ ಅಲೆಮಾರಿ ಅರಬ್ ಜನಾಂಗದ ನಬಟಿಯನ್ನರು ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ಸುಮಾರಾಗಿ ಈ ಪ್ರದೇಶದಲ್ಲಿ ಜೀವನ ಮಾಡುತ್ತಿದ್ದರು. ಅವರು ಇಂಜಿನಿಯರ್ ಮತ್ತು ವ್ಯಾಪಾರಿಗಳು ಆಗಿದ್ದರು ಮತ್ತು ಪೆಟ್ರಾ ಅವರ ರಾಜಧಾನಿಯಾಗಿತ್ತು.

ಕ್ರೈಸ್ಟ್ ದ ರಿಡೀಮರ್ ಪ್ರತಿಮೆ

ಪ್ರಪಂಚದ ಏಳು ಅದ್ಭುತಗಳು
  • ಇದು ಜಗತ್ತಿನ ಪ್ರಸಿದ್ಧ ಪ್ರತಿಮೆ ಆಗಿದೆ. ಇದು ಬ್ರೆಜಿಲ್ ನ ರಿಯೋ ಡಿ ಜನೇರೋ ನಗರದ ಕಾರ್ಕೋವಾಡೊ ಪರ್ವತದ ಶಿಖರದಲ್ಲಿ ಟಿಜುಕಾ ಅರಣ್ಯ ರಾಷ್ಟ್ರೀಯ ಉದ್ಯಾನವನದೊಳಗೆ ರಿಯೋ ನಗರದ ಮೇಲೆ ನಿಂತಿದೆ.
  • ಈ ಪ್ರತಿಮೆಯನ್ನು 1931ರಲ್ಲಿ ಕಟ್ಟಲಾಗಿದೆ.
  • ಈ ಪ್ರತಿಮೆ ಎತ್ತರ 98 ಅಡಿ ಇದರಲ್ಲಿ 26 ಅಡಿ ಎತ್ತರದ ವೇದಿಕೆಯನ್ನು ಒಳಗೊಂಡಿದೆ ಇದರ ಎರಡು ಕೈಗಳು 92 ಅಗಲವಾಗಿ ಚಾಚಿವೆ.
  • ಈ ಪ್ರತಿಮೆಯನ್ನು ಕಾಂಕ್ರೇಟ್ ಮತ್ತು ಸಾವಿರಾರು ಸ್ಟೋನ್ ಟೈಲ್ಸ್ ಬಳಸಿಕೊಂಡು ನಿರ್ಮಿಸಲಾಗಿದೆ.
  • ಈ ಪ್ರತಿಮೆಯು” Statue Art Deco ” ಶೈಲಿಯ ಅತ್ಯಂತ ದೊಡ್ಡ ಪ್ರತಿಮೆಯೆಂದು ಪರಿಗಣಿಸಲಾಗಿದೆ.
  • ಈ ಪ್ರತಿಮೆಯನ್ನು 2007ರಲ್ಲಿ ಪ್ರಪಂಚದ ಏಳು ಅದ್ಭುತಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
  • ಇದು ಕ್ರಿಶ್ಚಿಯನ್ ಸಮುದಾಯ ಹಾಗೂ ಬ್ರೆಜಿಲ್ ದೇಶದ ಖ್ಯಾತಿ ವಿಶ್ವಕ್ಕೆ ತೋರಿಸುವ ಹೃದಯ ಸ್ಫೂರ್ತಿಯ ಸಂಕೇತವಾಗಿದೆ.

ಮಾಚು ಪಿಚ್ಚು

ಪ್ರಪಂಚದ ಏಳು ಅದ್ಭುತಗಳು
  • ಮಾಚು ಪಿಚ್ಚು ಪೇರೋ ದೇಶದಲ್ಲಿರುವ ವಿಶ್ವಪ್ರಸಿದ್ಧಿ ಇಂಕಾ ನಾಗರಿಕತೆಯ ಪುರಾತನ ನಗರ.
  • ಇದು ಸಮುದ್ರ ಮಟ್ಟದಿಂದ ಸುಮಾರು 2430 ಮೀಟರ್ ಎತ್ತರ ಪರ್ವತ ಮೇಲ್ದಂಡೆಯಲ್ಲಿದೆ.
  • ಮಾಚು ಪಿಚ್ಚು ನಗರವನ್ನು ಇಂಕಾ ಸಾಮ್ರಾಜ್ಯದ ರಾಜ ಪಚಕುಟಿ ಯು 15ನೇ ಶತಮಾನದಲ್ಲಿ ನಿರ್ಮಿಸಲಾಯಿತು.
  • ಮಾಚು ಪಿಚ್ಚು ಹೆಸರಿನ ಅರ್ಥ ” ಹಳೆಯ ಪರ್ವತ”ಎಂದು ಹೇಳಲಾಗುತ್ತದೆ.
  • ಮಾಚು ಪಿಚ್ಚ ವನ್ನು ಪಾರಂಪರಿಕ ಇಂಕಾ ಶಾಲೆಯಲ್ಲಿ ನಿರ್ಮಿಸಲಾಗಿದೆ ಇದು ಮೆರಗು ತಂದುಕೊಂಡ ಒಣಗಿದ ಕಲ್ಲಿನ ಗೋಡೆಗಳೊಂದಿಗೆ ಅಲಂಕರಿಸಲಾಗಿದೆ.
ಇದರ ಪ್ರಮುಖ ಮೂರು ಕಟ್ಟಡಗಳು ಇಂಟಿ ವಾಟಾನಾ, ಸೂರ್ಯ ದೇವಾಲಯ, ಮೂರು ಕಿಟಕಿಗಳ ಕೊಠಡಿ ಗಳಾಗಿವೆ. ಪರಿಸರದಲ್ಲಿರುವ ಹೆಚ್ಚಿನ ಕಟ್ಟಡಗಳನ್ನು ಪ್ರವಾಸಿಗರಿಗೆ ಮೊದಲ ರೂಪದಲ್ಲಿ ಹೇಗಿತ್ತೋ ಅದೇ ರೀತಿಯಲ್ಲಿ ಪುನರ್ ನಿರ್ಮಿಸಲಾಗಿದೆ. 1976 ರ ವೇಳೆಗೆ ಮಾಚ್ಚು ಪಿಚ್ಚುವಿನ 30% ಭಾಗ ಪುನರ್ ನಿರ್ಮಾಣ ಮಾಡಿದರು. ಮತ್ತು ಇನ್ನೂ ಪುನಃ ನಿರ್ಮಾಣ ಮಾಡುತ್ತಿದ್ದಾರೆ. ಮಾಚು ಪಿಚ್ಚು 1981 ರಲ್ಲಿ ಪೆರುವಿಯನ್ ಇತಿಹಾಸದ ಪ್ರಸಿದ್ಧ ಧಾರ್ಮಿಕ ತಾಣವಾಗಿ ಘೋಷಿಸಲ್ಪಟ್ಟಿತು ಮತ್ತು 1983 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು. 2007ರಲ್ಲಿ ಮಾಚ್ ಪಿಚ್ಚು ವಿಶ್ವ ಇಂಟರ್ನೆಟ್ ಸಮೀಕ್ಷೆಯ ಮೂಲಕ ಹೊಸ ಏಳು ಅದ್ಭುತಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.

ಚಿಚೆನ್ ಇಟ್ಜಾ

ಪ್ರಪಂಚದ ಏಳು ಅದ್ಭುತಗಳು
  • ಇದು ಮೆಕ್ಸಿಕೋದ ಯುಕಾಟನ್ ಪ್ರಾಂತ್ಯದ ಬಳಿ ದಟ್ಟದಾದ ಕಾಡಿನ ನಡುವೆ ಇದೆ.
  • ಇದು ಅಲ್ಲಿನ ಪ್ರಾಚೀನ ಮಾಯಾನ್ ನಾಗರಿಕತೆಯ ಜನಗಳಿಗೆ ಸೇರಿದವೊಂದು ಮುಖ್ಯ ಸ್ಮಾರಕ ಆಗಿತ್ತು.
  • ಕ್ರಿಸ್ತಶಕ 9ನೇ ಶತಮಾನದಿಂದ 12ನೇ ಶತಮಾನದ ನಡುವೆ ಮಾಯಾನ್ ನಾಗರಿಕರು ಇದನ್ನು ನಿರ್ಮಿಸಿದರು.
  • ನೋಡುವುದಕ್ಕೆ ಇದು ಪಿರಮಿಡ್ ಆಕಾರದಲ್ಲಿರುವಂತಹ ಅಲ್ಲಿನ ಪ್ರಾಚೀನ ಪವಿತ್ರ ಗುಡಿ ಇದನ್ನು ಅಲ್ಲಿನ ಜನರು ಕುಕುಲ್ಕಾನ್ ಟೆಂಪಲ್( ಯುಕಾಟನ್ ಮಾಯನ್ ಜನರ ರೆಕ್ಕೆಗಳಿರುವ ಹಾವು ದೇವತೆ ) ಎಂದು ಕರೆಯುತ್ತಾರೆ.
  • ಇದನ್ನು ಮಾಯಾನ್ ಜನರು ಆರಾಧಿಸುವ ನಾಗದೇವತೆಗಾಗಿ ನಿರ್ಮಿಸಿದರು. ಇಲ್ಲಿ ಮೊದಲು ನರಬಲಿಯೂ ಜರಗುತ್ತಿತ್ತು.
  • ಈ ಪಿರಮಿಡ್ ನ ಸುತ್ತಲೂ ಒಟ್ಟು 365 ಮೆಟ್ಟಿಲುಗಳಿವೆ ಇದು ವರ್ಷದಲ್ಲಿ ಇರುವ ದಿನಗಳ ಸಂಖ್ಯೆಯನ್ನು ಸೂಚಿಸುತ್ತದೆ.
  • ಅಮೆರಿಕನ್ ಸಮಾಜಕ್ಕೆ ಮೊಟ್ಟ ಮೊದಲು ಕ್ಯಾಲೆಂಡರ್ ಹಾಗೂ ಗ್ರಹಗಳ ಚಲನೆಯ ಬಗ್ಗೆ ಮೊದಲು ಲೆಕ್ಕ ಹಾಕಿದ ಮಾಯನರು ತಾವು ಕಂಡುಕೊಂಡಿದ್ದ ದಿನಗಳ ಕಲ್ಪನೆಯನ್ನು ಈ ಸ್ಮಾರಕದ ರಚನೆಗೂ ಬಳಸಿಕೊಂಡರು.
ಇದರ ಹತ್ತಿರ ಎರಡು ಮಾನವ ನಿರ್ಮಿತ ಬೃಹತ್ ಬಾವಿಗಳು ನೀರಿನಿಂದ ತುಂಬಿರುತ್ತದೆ. ಆಗ ಇಲ್ಲಿನ ಜನ ಈ ಬಾವಿಗಳ ನೀರನ್ನು ಪ್ರತಿಯೊಂದಕ್ಕೂ ಬಳಸುತ್ತಿದ್ದರು. ಒಂದು ಕಾಲದಲ್ಲಿ ಬರಗಾಲ ಬಂದು ಮಳೆ ನಿಂತು ಹೋದಾಗ ಮಳೆಯ ದೇವರನ್ನು ಪೂಜೆ ಮಾಡುತ್ತಿದ್ದ ಈ ಜನರು ಮಳೆ ದೇವರನ್ನು ಸಂತೃಪ್ತಿಗೊಳಿಸಲು ನವಜಾತ ಶಿಶುಗಳು ಹಾಗೂ ಮಕ್ಕಳನ್ನು ಬಾವಿಗೆ ಎಸೆದು ಬಲಿಕೊಟ್ಟು ಪೂಜೆಯನ್ನು ಮಾಡುತ್ತಿದ್ದರಂತೆ. ಇದೇ ಕಾರಣಕ್ಕೆ ಈ ವಾಟರ್ ವೇವ್ ಗಳಿಗೆ ( wave of sacrifice) ಅಂದರೆ ಪರಿತ್ಯಾಗದ ಬಾವಿಗಳು ಎಂದು ಕರೆಯಲಾಗುತ್ತದೆ.

ಕೋಲೋಸಿಯಂ

ಪ್ರಪಂಚದ ಏಳು ಅದ್ಭುತಗಳು
  • ಕೊಲೋಸಿಯಂ ಇಟಲಿಯ ರೋಮ್ ನಗರದಲ್ಲಿರುವ ಪ್ರಸಿದ್ಧ ಐತಿಹಾಸಿಕ ಕ್ರೀಡಾಂಗಣವಾಗಿದೆ. ಇದು ಕ್ರಿಸ್ತಶಕ 70ರಿಂದ 80ರ ವರೆಗೆ ಸಾಮ್ರಾಟ ವೆಸ್ಟೇಶಿಯನ್ ಮತ್ತು ಅವನ ಮಗನದ ಟೈಟಸ್ ಅವರ ಕಾಲದಲ್ಲಿ ನಿರ್ಮಿಸಲಾಯಿತು.
  • ಇದು ಸುಮಾರು 50 ಸಾವಿರ ದಿಂದ 80 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ವಿರುವ ಬೃಹತ್ ದೊಡ್ಡ ಕ್ರೀಡಾಂಗಣವಾಗಿದೆ.
  • ಇಲ್ಲಿ ಗ್ಲಾಡಿಯೇಟರ್ ಹೋರಾಟಗಳು, ಯುದ್ಧ ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳನ್ನು ನ
  • ಇದಕ್ಕೆ ರೋಮನ್ ಕ್ಯಾಥೋಲಿಕ್ ಚರ್ಚ್ಗೂ ಸಂಬಂಧವಿದೆ, ಏಕೆಂದರೆ ಪ್ರತಿ ಗುಡ್ ಫ್ರೈಡೇಯಂದು ಪೋಪ್ ಅವರು ದೀಪ ಹಿಡಿದ “ವೇ ಆಫ್ ದ ಕ್ರಾಸ್” ಪ್ರಕ್ರಿಯೆಯನ್ನು ಕೋಲೋಸಿಯಮ್ ಸುತ್ತಲಿನ ಪ್ರದೇಶದಿಂದ ಪ್ರಾರಂಭಿಸುತ್ತಾರೆ.

ತಾಜ್ ಮಹಲ್

ಪ್ರಪಂಚದ ಏಳು ಅದ್ಭುತಗಳು
  • ತಾಜ್ ಮಹಲ್ ದೆಹಲಿಯ ಆಗ್ರಾ ನಗರದ ಯಮುನಾ ನದಿಯ ದಡದ ಮೇಲಿದೆ.
  • ಮೊಘಲ್ ಚಕ್ರವರ್ತಿ ಷಹಜಹಾನ್ ನ ಪ್ರೀತಿಯ ಪತ್ನಿ ಆದ ಮುಮ್ತಾಜ್ ಮಹಲ್ ಅವರ ನೆನಪಿಗೋಸ್ಕರ ಇದನ್ನು ಕಟ್ಟಿಸಿದರು.
  • ತಾಜ್ ಮಹಲ್ ನಿರ್ಮಾಣವು 1632 ರಿಂದ ಪ್ರಾರಂಭವಾಗಿ 1653 ರಲ್ಲಿ ಪೂರ್ಣಗೊಂಡಿತು.
  • ತಾಜ್ಮಹಲ್ ನಿರ್ಮಾಣದ ಸಮಯದಲ್ಲಿ ಸುಮಾರು 20 ಸಾವಿರ ಕಾರ್ಮಿಕರು ಮತ್ತು ಶಿಲ್ಪಿಗಳು ಭಾಗವಹಿಸಿದ್ದರು ಇದರ ನಿರ್ಮಾಣದ ಖರ್ಚು ವೆಚ್ಚ ಆಗಿನ ಕಾಲದಲ್ಲಿ30 ಲಕ್ಷ ರೂಪಾಯಿ ಎಂದೂ ಹೇಳಲಾಗಿದೆ.
  • ತಾಜ್ಮಹಲ್ ದಿನದ ವಿವಿಧ ಸಮಯದಲ್ಲಿ ತನ್ನ ಬಣ್ಣವನ್ನು ಬದಲಿಸುತ್ತದೆ. ಬೆಳಗಿನ ಸಮಯದಲ್ಲಿ ಗುಲಾಬಿ ಬಣ್ಣ, ಮಧ್ಯಾಹ್ನದ ಸಮಯದಲ್ಲಿ ಬಿಳಿ ಬಣ್ಣ ಮತ್ತು ರಾತ್ರಿಯ ಸಮಯದಲ್ಲಿ ಕೆಂಪು ಬಣ್ಣಗಳ ನಿಶ್ಚಿತ ಛಾಯೆಯನ್ನು ಹೊಳೆಯುತ್ತದೆ. ಇದನ್ನು ಚಿನ್ನದ ಅಭಾ ಇಂದು ಕರೆಯುತ್ತಾರೆ.
  • ತಾಜ್ ಮಹಲ್ ಒಳಗಡೆ ಮುಮ್ತಾಜ್ ಮಹಲ್ ಮತ್ತು ಷಹಜಹಾನ್ ಅವರ ಸಮಾದಿ ಇದೆ.
  • ತಾಜ್ ಮಹಲ್ ಭಾರತೀಯರ ಹೆಮ್ಮೆಯ ಸ್ಮಾರಕವಾಗಿದೆ.
  • ಪ್ರಪಂಚದ ಏಳು ಅದ್ಭುತಗಳು ದೇಶಗಳ ಆರ್ಥಿಕತೆ ಹಾಗೂ ಸಂಸ್ಕೃತಿಯನ್ನು ಬಲಪಡಿಸುತ್ತವೆ.
ಪ್ರಪಂಚದ ಏಳು ಅದ್ಭುತಗಳು ಮತ್ತು ನನ್ನ ಅನಿಸಿಕೆ

ಪ್ರಪಂಚದ ಏಳು ಅದ್ಭುತಗಳು ಮಾನವ ಕುಶಲತೆ, ಕಲಾತ್ಮಕತೆ, ತಾಂತ್ರಿಕ ಜ್ಞಾನ ಹಾಗೂ ಧಾರ್ಮಿಕ-ಸಾಂಸ್ಕೃತಿಕ ನಂಬಿಕೆಗಳ ಪ್ರತಿರೂಪವಾಗಿವೆ. ಇವುಗಳಲ್ಲಿ ಪ್ರತಿಯೊಂದು ಅದ್ಭುತವು ತನ್ನದೇ ಆದ ಇತಿಹಾಸ, ವಾಸ್ತುಶಿಲ್ಪದ ಶೈಲಿ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.

  • ಇವು ಮಾನವನ ಸೃಜನಶೀಲತೆ ಮತ್ತು ಶ್ರಮದ ಪರಮೋನ್ನತ ಉದಾಹರಣೆಗಳಾಗಿವೆ.
  • ಇತಿಹಾಸದ ವೈಭವ, ಧರ್ಮ ಹಾಗೂ ಕಲೆಗಳನ್ನು ಒಟ್ಟುಗೂಡಿಸಿ ತೋರಿಸುತ್ತವೆ.
  • ಇಂದಿಗೂ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ದೇಶಗಳ ಆರ್ಥಿಕತೆ ಹಾಗೂ ಸಂಸ್ಕೃತಿಯನ್ನು ಬಲಪಡಿಸುತ್ತವೆ.
  • ಮಾನವಕುಲಕ್ಕೆ “ನಾವು ಏಕತೆಯಿಂದ ದೊಡ್ಡದನ್ನು ನಿರ್ಮಿಸಬಹುದು” ಎಂಬ ಸಂದೇಶವನ್ನು ನೀಡುತ್ತವೆ.

👉 ಆದ್ದರಿಂದ, ಪ್ರಪಂಚದ ಅದ್ಭುತಗಳು ಕೇವಲ ಕಟ್ಟಡಗಳು ಅಥವಾ ಸ್ಮಾರಕಗಳಲ್ಲ, ಅವು ಮಾನವನ ಕನಸು, ಕಲೆ ಮತ್ತು ಶ್ರಮದ ಶಾಶ್ವತ ಸಂಕೇತಗಳು.

ಚೀನಾದ ಮಹಾಗೋಡೆ ಎಲ್ಲಿದೆ

ಚೀನಾ ದೇಶದಲ್ಲಿದೆ

ತಾಜ್ ಮಹಲ್ ಎಲ್ಲಿದೆ

ಭಾರತದ ಆಗ್ರಾಲ್ಲಿದೆ

ತಾಜ್ ಮಹಲನ್ನು ಯಾರು ಕಟ್ಟಿಸಿದರು

ಶಾಹಜಹಾನ್

ಮಾಚು ಪಿಚ್ಚು ಎಲ್ಲಿದೆ

ಪೆರು ದೇಶದಲ್ಲಿದೆ

ಕೊಲೊಸಿಯಂ ಎಲ್ಲಿದೆ

ರೋಮ್, ಇಟಲಿಯಲ್ಲಿದೆ

ಚಿಚೆನ್ ಇಟ್ಜಾ ಎಲ್ಲಿದೆ

ಮೆಕ್ಸಿಕೋ ದೇಶದಲ್ಲಿದೆ


RECENT POSTS

1 . ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪ

2 . ಸಿಂಧೂ ಬಯಲಿನ ನಾಗರಿಕತೆ

3 . ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ

4 . ವಿಜಯನಗರ ಸಾಮ್ರಾಜ್ಯದ

5 . ತಾಳಿಕೋಟೆ ಕದನ ಅಥವಾ ರಕ್ಕಸ ತಂಗಡಿ ಕದನ 1565ರಲ್ಲಿ