ಈ ಬ್ಲಾಗ್‌ನಲ್ಲಿ PSI QUESTION ANSWERS IN KANNADA AND KPSC, SDA, FDA ಹಾಗೂ ಕರ್ನಾಟಕ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಮತ್ತು ಉತ್ತರಗಳನ್ನು ಕನ್ನಡದಲ್ಲಿ ಸರಳವಾಗಿ ನೀಡಲಾಗಿದೆ. ಇಲ್ಲಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ ಪ್ರಶ್ನೆಗಳು, ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳ, ಸಂವಿಧಾನ, ವಿಜ್ಞಾನ ಹಾಗೂ ಕರ್ನಾಟಕ ವಿಶೇಷ ಮಾಹಿತಿಗಳ ಪ್ರಶ್ನೆ-ಉತ್ತರಗಳನ್ನು ಪರೀಕ್ಷೆಗೆ ಉಪಯುಕ್ತವಾಗುವಂತೆ ಸಂಗ್ರಹಿಸಲಾಗಿದೆ. PSI, KPSC, SDA ಪರೀಕ್ಷೆಗೆ ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಈ ಪ್ರಶ್ನೋತ್ತರಗಳು ಬಹಳ ಸಹಾಯವಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಪ್ರತಿದಿನ ಈ ಪ್ರಶ್ನೆ ಮತ್ತು ಉತ್ತರಗಳನ್ನು ಅಭ್ಯಾಸ ಮಾಡಬಹುದು.
GK QUESTIONS
ಬಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು. ? ಉತ್ತರ : ಕುಶಾನರು.
ವೈದಿಕ ಜನರು ಪ್ರಾಚೀನವಾಗಿ ಬಳಸಿದ ಲೋಹ. ? ಉತ್ತರ : ತಾಮ್ರ.
ಬೌದ್ಧ ಧರ್ಮದ ವ್ಯಾಪ್ತಿಗೆ ಪ್ರಮುಖ ಕಾರಣವಾದ ರಾಜ. ? ಉತ್ತರ :ಅಶೋಕ.
ಕರ್ನಾಟಕದಲ್ಲಿ ಒಂದು ನಗರದ ಅವಧಿ. ? ಉತ್ತರ : 262-261 ಕ್ರಿ.ಶ.
ಹರಪ್ಪಾ ಸಂಸ್ಕೃತಿಯಲ್ಲಿ ಭಾರತಕ್ಕೆ ಬೆಳೆಯುವುದು. ? ಉತ್ತರ : ಹತ್ತಿ.
ಚೋಳರು ನಾಮುದ್ರದ ಕಡೆಗೆ ಸೈನ್ಯ ಕಳುಹಿಸಿದ ರಾಜ. ? ಉತ್ತರ : ರಾಜೇಂದ್ರ ಚೋಳ.
ಆಶೋಕನ ಮೊದಲ ಹೆಸರು ಪ್ರಭಾವ ಬೀರಿದವರು. ? ಉತ್ತರ : ಅನುಬುದ್ಧ / ಬಿಂದುಸಾರ.
ನಾಲ್ಕು ವೇದಗಳಲ್ಲಿ ಮೊದಲನೆಯ ವೇದ.? ಉತ್ತರ : ಋಗ್ವೇದ.
“ಗೀತೆ ಗೋವಿಂದ” ಕೃತಿಯನ್ನು ಬರೆದವರು.? ಉತ್ತರ : ಜಯದೇವ.
ಮಹಾಬಲಿಪುರಂನಲ್ಲಿರುವ ಕೀರ್ತಿನಾರಾಯಣ ದೇವಾಲಯ ನಿರ್ಮಿಸಿದವರು.? ಉತ್ತರ : ಪಲ್ಲವರು.
ಇತ್ತೀಚಿಗೆ ಯಾವ ಕಂಪನಿಗೆ ಮಿನಿರತ್ನ ವರ್ಗ 1 ಹುದ್ದೆ ನೀಡಲಾಗಿದೆ ? ಉತ್ತರ : ಯಂತ್ರ-ಇಂಡಿಯಾ ಲಿಮಿಟೆಡ್
ಪೆನ್ನಯ್ಯರ್ ನದಿ ಜಲ ವಿವಾದಕ್ಕೆ ಸಂಬಂಧಿಸಿ ಯಾವ ಎರಡು ರಾಜ್ಯಗಳ ನಡುವೆ ವಿಶೇಷ ಜಲವಿವಾದ ನ್ಯಾಯಮಂಡಲವನ್ನು ರಚಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ ? ಉತ್ತರ : ತಮಿಳುನಾಡು ಮತ್ತು ಕರ್ನಾಟಕ
ಹವಮಾನ ಬದಲಾವಣೆಯ ಅಧ್ಯಯನಕ್ಕಾಗಿ ಇತ್ತೀಚಿಗೆ ಪ್ರತಿಷ್ಠಿತ ಕ್ರಾಫೋರ್ಡ್ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ ? ಉತ್ತರ : ವೀರಭದ್ರನ್ ರಾಮನಾಥನ್
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಮೊದಲ ಮಹಿಳಾ ಡೈರೆಕ್ಟರ್ ಆಗಿ ಯಾರನ್ನು ನೇಮಿಸಲಾಗಿದೆ ? ಉತ್ತರ : ನಿವೇದಿತಾ ದುಬೆ
13ನೇ ಭಾರತ ಕಿರ್ಗಿಸ್ತಾನ್ ಸಂಯುಕ್ತ ಸೈನಿಕ ಅಭ್ಯಾಸ ಖಂಜರ್ – 13 ಎಲ್ಲಿ ನಡೆಯಲಿದೆ ? ಉತ್ತರ : ಅಸ್ಸಾಂ
ವಿಶ್ವದ ಮೊದಲ ಖಾಸಗಿ ಸ್ಪೇಸ್ ಸ್ಟೇಷನ್ ಹೆವನ್ –1 ಯಾವ ದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ?ಉತ್ತರ : ಅಮೆರಿಕ ಸಂಯುಕ್ತ ಸಂಸ್ಥಾನ ( USA )
ಪಂಚಾಯತ್ ಅಡ್ವಾನ್ಸ್ ಮೆಂಟ್ ಇಂಡೆಕ್ಸ್ ( pai ) 2.0 ನಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು ? ಉತ್ತರ : ತ್ರಿಪುರಾ
ತಂತ್ರಜ್ಞಾನ ಮತ್ತು ತಂತ್ರ ಯುಕ್ತಿಯ ಆಧಾರದ ಮೇಲೆ ಮೂರನೇ future warfare course ಉದ್ಘಾಟನೆ ಎಲ್ಲಿ ನಡೆಯಿತು ? ಉತ್ತರ : ನವದೆಹಲಿ
ಭಾರತದ ನವೀಕರಿಸಬಹುದಾದ ಶಕ್ತಿಯ ಸಾಮರ್ಥ್ಯಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದ ರಾಜ್ಯ ಯಾವುದು ? ಉತ್ತರ : ಗುಜರಾತ್
ಭಾರತದಲ್ಲಿ ಮೊದಲ ಬಾರಿಗೆ ಹೈಡ್ರೋಜನ್ ಚಾಲಿತ ಬಸ್ಗಳು ಎಲ್ಲಿ ಪ್ರಾರಂಭವಾಗಲಿವೆ ? ಉತ್ತರ : ಕೊಚ್ಚಿ ( ಕೇರಳ )
ಇತ್ತೀಚಿಗೆ 16.5% ಹಂಚಿಕೆಯೊಂದಿಗೆ ಭಾರತದ ನವೀಕರಿಸಬಹುದಾದ ಶಕ್ತಿ ಪವರ್ ಹೌಸ್ ಆಗಿರುವ ರಾಜ್ಯ ಯಾವುದು ? ಉತ್ತರ : ಗುಜರಾತ್
95 ದೇಶಗಳನ್ನು ಒಳಗೊಂಡ ಮೊದಲ ಗ್ಲೋಬಲ್ ಬಿಗ್ ಕ್ಯಾಟ್ ಶಿಖರ ಸಮಾವೇಶವನ್ನು ಯಾವ ದೇಶ ಅತಿಥ್ಯಾ ವಹಿಸುತ್ತದೆ ? ಉತ್ತರ : ಭಾರತ
ಭಾರತೀಯ ಸೇನೆ ಮತ್ತು ITBP ಸಂಯುಕ್ತವಾಗಿ ನಡೆಸಿದ ಅಗ್ನಿ ಪರೀಕ್ಷಾ ಅಭ್ಯಾಸ ಯಾವ ರಾಜ್ಯದಲ್ಲಿ ನಡೆಯಿತು ? ಉತ್ತರ : ಅರುಣಾಚಲ ಪ್ರದೇಶ
ಇತ್ತೀಚೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಯಾರನ್ನು ನೇಮಕ ಮಾಡಲಾಗಿದೆ ? ಉತ್ತರ : ಸರ್ವೇಶ್ ರಂಜನ್
ಇತ್ತೀಚಿಗೆ ಆರ್ಕಿಡ್ ಹೂವಿನ ಹೊಸ ಪ್ರಭೇದವನ್ನು ಯಾವ ರಾಜ್ಯದಲ್ಲಿ ಕಂಡು ಹಿಡಿಯಲಾಗಿದೆ ?ಉತ್ತರ : ಕೇರಳ
ಅಂದಪುರ ವಿಮಾನ ನಿಲ್ದಾಣ ಹೊಸ ಹೆಸರು ಏನು ? ಉತ್ತರ : ಶ್ರೀ ಗುರು ರವಿ ದಾಸ್ ಮಹಾರಾಜ್.ಜಿ. ವಿಮಾನ ನಿಲ್ದಾಣ
ಸಿಂಧೂ ನಾಗರಿಕತೆ ಅತ್ಯಂತ ದೊಡ್ಡ ನಗರ ಯಾವುದು. ? ಉತ್ತರ : ಮಹೆಂಜೋದಾರೊ
ಜೈನ ಧರ್ಮದ ಪ್ರಥಮ ತೀರ್ಥಂಕ ಯಾರು. ? ಉತ್ತರ : ವೃಷಭನಾಥ
ಅಶೋಕನ ಯಾವ ಶಾಸನ ಕಾಳಿಂಗದ ವಿಜಯವನ್ನು ವರ್ಣಿಸಿವೆ. ? ಉತ್ತರ : 13 ನೇ ಶಾಸನ
ಹರಪ್ಪ ನಾಗರಿಕತೆಯ ಲೋಥಲ್ ಪ್ರದೇಶವನ್ನು ಯಾರು ಪರಿಚಯಿಸಿದರು. ? ಉತ್ತರ : ಎಸ್ ಆರ್ ರಾವ್
ಭಾರತದ ಇತಿಹಾಸದಲ್ಲಿ ವರಹಾಮಿಹಿರ ಯಾವುದಕ್ಕಾಗಿ ಪ್ರಸಿದ್ಧಿಯಾಗಿದ್ದಾನೆ. ? ಉತ್ತರ : ಜ್ಯೋತಿಷ್ಯ ಮತ್ತು ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದ್ದಾನೆ.
ಅದ್ವೈತ ಸಿದ್ದಾಂತವನ್ನು ಯಾರು ಪ್ರತಿಪಾದಿಸಿದರು. ? ಉತ್ತರ : ಶಂಕರಾಚಾರ್ಯ
ಮೌರ್ಯರು ಮತ್ತು ಗುಪ್ತರ ರಾಜಧಾನಿಯಾಗಿದ್ದ ಪಾಟಲಿಪುತ್ರವನ್ನು ಈಗ ಹೇಗೆ ಕರೆಯುತ್ತಾರೆ. ?ಉತ್ತರ : ಪಟ್ನಾ
ಮೊದಲನೇ ಚಂದ್ರಗುಪ್ತ ಯಾವ ರಾಜವಂಶದ ಪ್ರಮುಖ ರಾಜನಾಗಿದ್ದಾನೆ. ? ಉತ್ತರ : ಗುಪ್ತ
ಮಹಾವೀರ ಎಂಬ ಜೈನ ಸಂತರು ಎಷ್ಟನೇ ತೀರ್ಥಂಕರಾಗಿದ್ದಾರೆ. ? ಉತ್ತರ : 24ನೇ ತೀರ್ಥಂಕರಾಗಿದ್ದಾರೆ.
ಬೌದ್ಧ ಧರ್ಮದ 2 ಶಾಖೆಗಳನ್ನು ತಿಳಿಸಿ. ? ಉತ್ತರ : ಶ್ವೇತಾಂಬರ ಮತ್ತು ದಿಗಂಬರ
ಹರ್ಷ ಚರಿತ ವನ್ನು ಬರೆದವರು ಯಾರು. ? ಉತ್ತರ : ಬಾಣಭಟ್ಟ
ಹರ್ಷವರ್ಧನನ್ನು ಪೋಷಿಸಿದ ಉನ್ನತ ವಿದ್ಯೆ ಕೇಂದ್ರ ಯಾವುದು. ? ಉತ್ತರ : ನಳಂದಾ
ಅಜಾತಶತ್ರು ಯಾವ ರಾಜ್ಯದವರು ಆಗಿದ್ದನು. ? ಉತ್ತರ : ಮಗದ
ಗೌತಮ ಬುದ್ಧನು ಮರಣ ಹೊಂದಿದ ಸ್ಥಳ ಯಾವುದು. ? ಉತ್ತರ : ಕುಶಿನಗರ
ಚೋಳ ಸಾಮ್ರಾಜ್ಯವನ್ನು ಕಟ್ಟಿದವರು ಯಾರು. ? ಉತ್ತರ : ವಿಜಯಲ ಚೋಳ
ಗೌತಮ ಬುದ್ಧರು ಜನಿಸಿದ ಸ್ಥಳ ಯಾವುದು. ? ಉತ್ತರ : ಲುಂಬಿನಿ
ಹರ್ಷವರ್ಧನ ಕಾಲದಲ್ಲಿ ಬಂದ ವಿದೇಶಿ ಯಾತ್ರಿಕ ಯಾರು. ? ಉತ್ತರ : ಹ್ಯೂಯೆನ್ ತ್ಸಾಂಗ್
ವಿದ್ಯಾರ್ಥಿಗಳೇ, ನೀವು PSI, KPSC, SDA, FDA ಅಥವಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತಿದ್ದರೆ, ಕೇವಲ ಓದುವುದರಿಂದ ಮಾತ್ರ ಸಾಕಾಗುವುದಿಲ್ಲ, ಸರಿಯಾದ ವಿಧಾನದಲ್ಲಿ ಓದಬೇಕು. ಮೊದಲು ಪ್ರಶ್ನೆಯನ್ನು ಸಂಪೂರ್ಣವಾಗಿ ಓದಿ ಅದರ ಅರ್ಥವನ್ನು ತಿಳಿದುಕೊಳ್ಳಿ. ನಂತರ ಉತ್ತರವನ್ನು ಓದಿ, ಅದನ್ನು ಒಂದು ಬಾರಿ ಮನದಲ್ಲಿ ಪುನರಾವರ್ತನೆ ಮಾಡಿ. ಅದಾದ ನಂತರ ಆ ಪ್ರಶ್ನೆಯನ್ನು ಮುಚ್ಚಿ, ಉತ್ತರವನ್ನು ನೆನಪಿನಿಂದ ಹೇಳಲು ಪ್ರಯತ್ನಿಸಿ. ಈ ವಿಧಾನದಿಂದ ಓದಿದರೆ ಪ್ರಶ್ನೆ-ಉತ್ತರಗಳು ಹೆಚ್ಚು ದಿನ ನೆನಪಿನಲ್ಲಿ ಇರುತ್ತವೆ.
ಪ್ರತಿ ದಿನ 20 ರಿಂದ 30 ಪ್ರಶ್ನೆಗಳನ್ನು ಓದಿ ಮತ್ತು ಮುಂದಿನ ದಿನ ಹಿಂದಿನ ದಿನದ ಪ್ರಶ್ನೆಗಳನ್ನು ಮರುಪಠಣ ಮಾಡಿ. ವಾರಕ್ಕೆ ಒಂದು ಬಾರಿ ಎಲ್ಲಾ ಪ್ರಶ್ನೆಗಳನ್ನು ರಿವಿಷನ್ ಮಾಡುವುದು ಬಹಳ ಮುಖ್ಯ. ಇತಿಹಾಸ, ಭೂಗೋಳ, ಸಂವಿಧಾನ, ವಿಜ್ಞಾನ ಮತ್ತು ಕರ್ನಾಟಕ ಸಾಮಾನ್ಯ ಜ್ಞಾನ ವಿಷಯಗಳ ಪ್ರಶ್ನೆಗಳನ್ನು ಬೇರೆ ಬೇರೆ ವಿಭಾಗಗಳಲ್ಲಿ ಓದಿದರೆ ಇನ್ನೂ ಸುಲಭವಾಗಿ ನೆನಪಿಡಬಹುದು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಓದುವುದು ಮಾತ್ರವಲ್ಲ, ಮರುಪಠಣ (Revision) ಮತ್ತು ಅಭ್ಯಾಸ (Practice) ಬಹಳ ಮುಖ್ಯ. ಪ್ರತಿದಿನ ಸ್ವಲ್ಪ ಸ್ವಲ್ಪ ಓದಿದರೆ ದೊಡ್ಡ ಸಿಲೆಬಸ್ ಕೂಡ ಸುಲಭವಾಗಿ ಮುಗಿಸಬಹುದು.
ಚಿಕ್ಕಮಗಳೂರು ಪ್ರವಾಸ ಮಾಹಿತಿ – ಚಿಕ್ಕಮಗಳೂರು ಕರ್ನಾಟಕದಲ್ಲಿರುವ ಕಾಫಿನಾಡು ಆಗಿದೆ ಇದು ಪಶ್ಚಿಮ ಘಟ್ಟಗಳಲ್ಲಿರುವ ಪ್ರಸಿದ್ಧ ಮತ್ತು ಅದ್ಭುತವಾದ ಪರ್ವತ ಸ್ಥಳವಾಗಿದೆ.
ಇಲ್ಲಿನ ದಟ್ಟ ಹೋದ ಹಸಿರು ಕಾಫಿ ತೋಟಗಳು ಮತ್ತು ಅದರ ಸುಗಂಧವಾದ ವಾಸನೆ ಮತ್ತು ಅಲ್ಲಿನ ಸುಂದರವಾದ ಪ್ರಕೃತಿಯ ಪ್ರವಾಸ ಮಾಡುವುದು ಬಹುಚಂದ.
ಚಿಕ್ಕಮಂಗಳೂರಿನಲ್ಲಿ ಮಂಜಿನಿಂದ ಕೂಡಿರುವ ಬೆಟ್ಟಗಳು ಮತ್ತು ಅಲ್ಲಿನ ರೋಮಾಂಚಕವಾಗಿರುವ ವಾತಾವರಣ ಪ್ರವಾಸಿಗರನ್ನು ಸೆಳೆಯುತ್ತದೆ.
Table of Contents
ಪ್ರವಾಸಿಗರು ಮರೆಯಲಾಗದಿರುವ ಸ್ಥಳ ಇದಾಗಿದೆ ಕಾಫಿ ತೋಟಗಳಲ್ಲಿ ನಡೆದಾಡುವುದು ಜನರಿಗೆ ಆಕರ್ಷಮಯವಾಗಿರುತ್ತದೆ ಹಾಗೂ ಜರಿಯಂತೆ ಹೋಗುವ ಜಲಪಾತಗಳು ಮತ್ತು ತಂಪಾದ ಹವಾಮಾನವು ಪ್ರವಾಸಿಗರಿಗೆ ಮರೆಯಲಾಗದ ನೆನಪುಗಳನ್ನು ನೀಡುತ್ತದೆ.
ಚಿಕ್ಕಮಂಗಳೂರಿನಲ್ಲಿ ಪ್ರವಾಸದ ಪ್ರಸಿದ್ಧ ಸ್ಥಳಗಳು
ಮುಳ್ಳಯ್ಯನಗಿರಿ ಪರ್ವತ
ಬಾಬಾಬುಡನ್ ಗಿರಿ
ಕುದುರೆಮುಖ
ಕಾಫಿ ತೋಟಗಳು
ಝರಿ ಜಲಪಾತ
ಮುಳ್ಳಯ್ಯನಗಿರಿ ಪರ್ವತ
ಮುಳ್ಳಯ್ಯನಗಿರಿ ಪರ್ವತ
ಮುಳ್ಳಯ್ಯನಗಿರಿ ಪರ್ವತ
ಕರ್ನಾಟಕದಲ್ಲೇ ಅತ್ಯಂತ ಎತ್ತರವಾದ ಶಿಖರ ಯಾವುದೆಂದರೆ ಅದು ಮುಳ್ಳಯ್ಯನಗಿರಿ ಮುಳ್ಳಯ್ಯನಗಿದಿಯ ಸುತ್ತಲೂ ಮಂಜು ಕಾಫಿ ತೋಟಗಳು ಮತ್ತು ಪಶ್ಚಿಮ ಘಟ್ಟಗಳು ಹಚ್ಚು ಹಸಿರಾಗಿ ಕಾಣುತ್ತದೆ. ಮುಳ್ಳಯ್ಯನಗಿರಿ ಪರ್ವತವು ಸಮುದ್ರಮಟ್ಟದಿಂದ 6,336 ಅಡಿ ಎತ್ತರದಲ್ಲಿದೆ. ಮುಳ್ಳಯ್ಯನಗಿರಿಯಲ್ಲಿ ಬೆಳಗಿನ ಸೂರ್ಯೋದಯವನ್ನು ಕಾಣುವ ಮತ್ತು ಮೋಡಗಳ ಮಧ್ಯೆ ನಡೆದಾಡಿಕೊಂಡು ಹೋಗುವ ಅನುಭವ ಅದ್ಭುತವಾಗಿರುತ್ತದೆ. ಮುಳ್ಳಯ್ಯನಗಿರಿ ಬೆಟ್ಟದ ತುದಿಯಲ್ಲಿ ಮುಳ್ಳಯ್ಯ ಸ್ವಾಮಿ ದೇವಸ್ಥಾನ ವಿದೆ ಆದ್ದರಿಂದ ಈ ಸ್ಥಳಕ್ಕೆ ಮುಳ್ಳಯ್ಯನಗಿರಿ ಎಂದು ಹೆಸರು ಬಂದಿದೆ.
ಮುಳಿಗೇನಗಿರಿಯು ಚಿಕ್ಕಮಂಗಳೂರಿನಿಂದ ಅಂದಾಜು 20 ರಿಂದ 27 ಕಿಲೋಮೀಟರ್ ದೂರದಲ್ಲಿ ಇರಬಹುದು, ಅಲ್ಲಿನ ರಸ್ತೆಗಳು ಸಣ್ಣದಾಗಿರುತ್ತದೆ ಮತ್ತು ಸ್ವಲ್ಪ ತಿರುವು ರಸ್ತೆಗಳು ಇರುವುದರಿಂದ ಬಹಳ ಜಾಗೃತೆಯಿಂದ ಹೋಗಬೇಕು ಅದರಲ್ಲೂ ಮಳೆಗಾಲದಲ್ಲಿ ಅಂತೂ ಮೆಲ್ಲನೆ ಹೋಗಬೇಕು, ಇತ್ತೀಚಿನ ವೀಕೆಂಡ್ ದಿನಗಳಲ್ಲಿ ಟ್ರಾಫಿಕ್ ಜಾಮ್ ಆಗುವ ಸಂದರ್ಭ ಇರುತ್ತದೆ ಮತ್ತು ಕೆಲವೊಮ್ಮೆ ರಿಜಿಸ್ಟ್ರೇಷನ್ ಅಥವಾ ವಾಹನಗಳ ಮಿತಿಯು ಇರುತ್ತದೆ ಹೋಗೋ ಮುಂಚೆ ಚೆಕ್ ಮಾಡಿಕೊಂಡು ಹೋಗಿ.
ಬಾಬಾಬುಡನ್ ಗಿರಿ
ಬಾಬಾಬುಡನ್ ಗಿರಿ ಕಾಫಿಯ ಜನ್ಮಸ್ಥಳ
ಬಾಬಾಬುಡನ್ ಗಿರಿ ಚಿಕ್ಕಮಂಗಳೂರು ಜಿಲ್ಲೆಯಲ್ಲಿರುವ ಅದ್ಭುತವಾದ ಪರ್ವತ ಶ್ರೇಣಿಯ ಶಿಖರಗಳಲ್ಲಿ ಒಂದಾಗಿದೆ ಬಾಬಾಬುಡನ್ ಗಿರಿ ಯನ್ನು ದತ್ತಗಿರಿ ಅಥವಾ ಚಂದ್ರದ್ರೋಣ ಪರ್ವತ ಎಂದು ಸಹ ಕರೆಯುತ್ತಾರೆ ಈ ಪ್ರದೇಶವು ಪಶ್ಚಿಮ ಘಟ್ಟಗಳ ಭಾಗವಾಗಿದೆ.
ನೇ ಶತಮಾನದಲ್ಲಿ ಹಜರತ್ ಬಾಬಾ ಬುಡನ್ ಅಥವಾ ದಾದಾ ಹಯತ್ ಕಲಂದರ್ ಎಂಬ ಸೂಫಿ ಸಂತರು ಯಮನ್ ದೇಶದಿಂದ 7 ಕಾಫಿ ಬೀಜಗಳನ್ನು ತಂದು ಈ ಪ್ರದೇಶದಲ್ಲಿ ನೆಡುತ್ತಾರೆ ಆ ಸಮಯದಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಾಫಿಯನ್ನು ಬೆಳೆಯುವುದು ಶುರುವಾಯಿತು. ಈ ಪ್ರದೇಶವನ್ನು ಭಾರತದಲ್ಲಿ ಕಾಫಿಯ ಜನ್ಮಸ್ಥಳ ಎಂದು ಕರೆಯುತ್ತೇವೆ.
ಈ ಬೆಟ್ಟದ ತುದಿಯಲ್ಲಿ ಇವರ ದರ್ಗಾವಿದೆ ಮತ್ತು ಇವರ ಜೊತೆಯಲ್ಲಿ ಶ್ರೀ ದತ್ತಾತ್ರೇಯ ಪೀಠ ಎರಡು ಒಂದೇ ಗುಹೆಯಲ್ಲಿದೆ ಇಲ್ಲಿಗೆ ಹಿಂದೂ ಮತ್ತು ಮುಸ್ಲಿಂ ಜನರು ಬರುತ್ತಾರೆ. ಈ ಪ್ರದೇಶವು ಜನರ ವಿವಿಧತೆಯಲ್ಲಿ ಏಕತೆ ತೋರಿಸುತ್ತದೆ.
ಈ ಪ್ರದೇಶವು ಚಿಕ್ಕಮಂಗಳೂರಿಂದ 25 ರಿಂದ 36 km ಇದೆ
ಬಾಬಾಬುಡನ್ ಗಿರಿಗೆ ಹೋಗುವುದೇ ಒಂದು ರೋಮಾಂಚನ
ಕುದುರೆಮುಖ
ಮಂಜಿನ ಸಮುದ್ರದ ನಡುವೆ ಕುದುರೆಮುಖ ಪರ್ವತ – ಪ್ರಕೃತಿಯ ಅದ್ಭುತ ಸೌಂದರ್ಯ.
ಕುದುರೆಮುಖ ಇದು ಕರ್ನಾಟಕದಲ್ಲಿ ಅತ್ಯಂತ ಸುಂದರವಾದ ಒಂದು ಪ್ರಸಿದ್ಧ ಸ್ಥಳವಾಗಿದೆ ಇದು ಚಿಕ್ಕಮಂಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಇದೆ. ಕುದುರೆಮುಖ ಬೆಟ್ಟವು ಕುದುರೆಮುಖ ದಂತೆ ಕಾಣುತ್ತಿರುವರಿಂದ ಇದಕ್ಕೆ ಕುದುರೆಮುಖ ಎಂದು ಹೆಸರು. (ಕುದುರೆಮುಖ ಅಂದರೆ ಕುದುರೆಯ ಮುಖ )
ಕುದುರೆಮುಖ ಶಿಖರವು ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಎರಡನೆಯ ಅಥವಾ ಮೂರನೇ ಸ್ಥಾನವನ್ನು ಹೊಂದಿದೆ ಕುದುರೆಮುಖವು ರಾಷ್ಟ್ರೀಯ ಉದ್ಯಾನವನದ ಒಂದು ಭಾಗವಾಗಿದೆ ಇಲ್ಲಿ ವಿಶಾಲವಾಗಿರುವ ದಟ್ಟವಾದ ಕಾಡುಗಳಿವೆ ಮತ್ತು ಹಸಿರು ಗುಡ್ಡಗಳು ಅಪರೂಪದ ಹಲವಾರು ಪ್ರಾಣಿಗಳು ಮತ್ತು ಸಸ್ಯಗಳು ಇಲ್ಲಿ ನಾವು ಕಾಣಬಹುದು.
ಕುದುರೆಮುಖದ ಮೇಲಿನಿಂದ 360 ಡಿಗ್ರಿ ಸುತ್ತಲೂ ಪ್ರಕೃತಿ ಆನಂದಿಸಬಹುದು ಮಳೆಗಾಲದಂತು ಹೇಳಬಾರದು ಎಷ್ಟು ರೋಮಾಂಚನ ಸ್ವರ್ಗದಂತೆ ಕಾಣುತ್ತದೆ.ಕುದುರೆಮುಖ ಸ್ಥಳಕ್ಕೆ ಹೋಗುಕ್ಕಿಂತ ಮುಂಚೆ ಒಮ್ಮೆಯಾದರೂ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ವೆಬ್ಸೈಟ್ ಅನ್ನು ವೀಕ್ಷಣೆ ಮಾಡಿ ಆನಂತರ ಅಲ್ಲಿಗೆ ತೆರಳಿ.
ಕುದುರೆಮುಖವು ಚಿಕ್ಕಮಂಗಳೂರಿಂದ 70 ರಿಂದ 80 ಕಿಲೋಮೀಟರ್ ಇದೆ
ಕಾಫಿ ತೋಟಗಳು
ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಕಾಫಿ ತೋಟಗಳು – ಮಂಜಿನಲ್ಲಿನ ಹಸಿರು ಪ್ರಕೃತಿ ಸೌಂದರ್ಯ.
ಕರ್ನಾಟಕದ ಮಲೆನಾಡಿನ ಕಾಫಿ ತೋಟಗಳು ಅತ್ಯಂತ ಸುಂದರವಾದ ಆಗರ್ಷಣೆಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಕಾಫಿಯ ಜನುಮಸ್ಥಳವಾಗಿದೆ.ಕರ್ನಾಟಕದಲ್ಲಿ ಕಾಫಿ ತೋಟಗಳ ಪ್ರಮುಖ ಕೇಂದ್ರಗಳಲ್ಲಿ ಮೊದಲನೆಯದ್ದು ಚಿಕ್ಕಮಂಗಳೂರಿನ ಬಾಬಬಡನ್ ಗಿರಿ ಆಗಿದೆ ಮತ್ತು ಕೊಡಗು ಸಕಲೇಶಪುರ ಹಾಸನ ಮತ್ತು ಮೂಡಿಗೆರೆ ಭಾಗಗಳು ಬಹು ಪ್ರಸಿದ್ಧ.
ಕಾಫಿ ತೋಟಗಳ ನಡುವೆ ನಾವು ಓಡಾಡಬಹುದು ಅಲ್ಲಿ ಕಾಫಿ ತೋಟಗಳಿಂದ ಕಾಫಿ ಬೀಜಗಳನ್ನು ತೆಗೆದು ಕಾಫಿ ಹೇಗೆ ಮಾಡುತ್ತಾರೆ ಎಂದು ನಾವು ನೋಡಬಹುದು ಮತ್ತು ಅಲ್ಲಿ ಹೋಂ ಸ್ಟೇ ರೆಸಾರ್ಟ್ ಗಳು ಸಿಗುತ್ತವೆ . ರೆಸಾರ್ಟ್ ಗಳಲ್ಲಿ ಬೆಳ್ಳಂಬೆಳಗ್ಗೆ ಕಾಫಿಯ ಸವಿಯನ್ನು ಸವಿಯಬಹುದು ಮಳೆಗಾಲದ ನಂತರ ಕಾಫಿ ತೋಟದಲ್ಲಿ ಹೂಗಳು ಅರಳಿ ತೋರಣದಂತೆ ಕಾಣುತ್ತದೆ.
ಝರಿ ಜಲಪಾತ
ಹಸಿರು ಅರಣ್ಯದ ಮಧ್ಯೆ ಹರಿಯುವ ಝರಿ ಜಲಪಾತ – ಪ್ರಕೃತಿ ಪ್ರೇಮಿಗಳ ಸ್ವರ್ಗ.
ಜರಿ ಜಲಪಾತವು ಚಿಕ್ಕಮಗಳೂರಿನ ಅತ್ಯಂತ ಸುಂದರವಾದ ಮತ್ತು ಅರಣ್ಯದಲ್ಲಿ ಅಡಗಿರುವ ಜಲಪಾತವಾಗಿದೆ ಈ ಜರಿ ಜಲಪಾತವನ್ನು ಬಟರ್ ಮಿಲ್ಕ್ ಫಾಲ್ಸ್ ಎಂದು ಸಹ ಕರೆಯುತ್ತಾರೆ ಏಕೆಂದರೆ ಅಲ್ಲಿ ನೀರು ಬಿಳಿ ಬಣ್ಣದಂತೆ ಹರಿಯುತ್ತದೆ ಹಾಗಾಗಿ ಎಂದು ಕರೆಯುತ್ತಾರೆ.
ಈ ಸ್ಥಳವು ಬಾಬಾ ಬುಡನ್ ಗಿರಿ ಬೆಟ್ಟ ಮತ್ತು ಮುಳ್ಳಯ್ಯನಗಿರಿ ಬೆಟ್ಟಗಳ ಸಮೀಪ ಪಶ್ಚಿಮ ಘಟ್ಟಗಳ ಕಾಡುಗಳ ನಡುವೆಯಲ್ಲಿ ಹರಿದು ಹೋಗುತ್ತದೆ. ಇಲ್ಲಿ ಮಳೆಗಾಲದಲ್ಲಿ ಹೋಗಬೇಕು ಅತ್ಯಂತ ಆಕಾಶಮಯವಾಗಿ ಕಾಣುತ್ತದೆ ಸುತ್ತಲೂ ಹಸಿರು ಕಾಫಿ ತೋಟಗಳು ಜರಿಯಾದಂತಹ ಗಿಡಗಳು ಇಲ್ಲಿ ನಾವು ಕಾಣಬಹುದು ಪರಿಸರ ಪ್ರೇಮಿಗಳಿಗೆ ಇದು ಒಂದು ಸ್ವರ್ಗದ ರೀತಿಯಲ್ಲಿ ಕಾಣುತ್ತದೆ ಇದು ಚಿಕ್ಕಮಂಗಳೂರಿನಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಬರುತ್ತದೆ.
ಇಲ್ಲಿಗೆ ಹೋಗುವಾಗ ಖಾಸಗಿ ವಾಹನಗಳಿಗೆ ಜಲಪಾತದವರೆಗೂ ಹೋಗುವುದಕ್ಕೆ ಅನುಮತಿ ಇರುವುದಿಲ್ಲ ಈ ಚಲಪತಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪಾಕಿಸ್ತಾನದಿಂದ ಜೀಪ್ ರೈಡ್ ಮಾಡಬೇಕು ಮತ್ತು ಇದಕ್ಕೆ ಹಣಕೊಡಬೇಕು 600 ರಿಂದ 700 ರೂಪಾಯಿವರೆಗೂ ಇರುತ್ತದೆ ಪ್ರತಿ ಟ್ರಿಪ್ಪಿಗೂ 7 ರಿಂದ 8 ಜನವನ್ನು ಕಳೆದುಕೊಂಡು ಹೋಗುತ್ತಾರೆ. ಇಲ್ಲಿ ಸಮಯ ಬೆಳಗ್ಗೆ 8 ರಿಂದ ಸಂಜೆ 5 ವರೆಗೆ ಸಮಯವಿರುತ್ತದೆ.
ಹಲವು ಪ್ರಮುಖ ಸ್ಥಳಗಳು
ಸಿರಿ ಕೆಫೆ : ಶ್ರೀ ಕೆಫೆಯಲ್ಲಿ ಒಂದು ಅದ್ಭುತವಾದ ಮಹಿಳಾ ಶಿಲ್ಪ ವಿದೆ ಮತ್ತು ಕಾಫಿ ಕೆಫೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕಾಫಿ ಮತ್ತು ಸಿರಿ ಕೆಫೆಯ ವಶಿಷ್ಠತೆಯು ಮತ್ತು ಕಲಾ ಕೃತಿಗಳು ಫೋಟೋಗಳನ್ನು ತೆಗೆದುಕೊಳ್ಳಲು ಪ್ರಮುಖ ಸ್ಥಳವಾಗಿದೆ.
ಝೆಡ್ ಪಾಯಿಂಟ್ ( z point) : ಇದು ಕೆಮ್ಮಣ್ಣು ಗುಂಡಿಯಲ್ಲಿರುವ ಸ್ಥಳವಾಗಿದೆ ಈ ಸ್ಥಳದಲ್ಲಿ ಸೂರ್ಯನು ಸೂರ್ಯಸ್ತವಾಗುವುದನ್ನು ಸುಂದರವಾಗಿ ತೋರಿಸುತ್ತದೆ ಇದನ್ನು ಝೆಡ್ ಪಾರ್ಟಿ ಎಂದು ಹೇಳುತ್ತಾರೆ.
ಪ್ರೇಕ್ಷಣೀಯ ಸ್ಥಳಗಳು : ಹಬ್ಬಿ ಜಲಪಾತ, ಕಾಫಿ ತೋಟದ ಮಧ್ಯೆ ಇರುವ ಸುಂದರವಾದ ಜಲಪಾತ, ಜರಿ ಜಲಪಾತ, ಸೀತಾಳಯ್ಯನಗಿರಿ ಇನ್ನು ಹಲವಾರು ಸ್ಥಳಗಳಿವೆ ಇಲ್ಲಿ ನೀವು ಭೇಟಿಯಾಗಿ ಬರಬೇಕು.
Note : ಟ್ರಕಿಂಗ್ ಮಾಡುವಾಗ ಟ್ರಕಿಂಗ್ ಶೂಸ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳುವುದು, ಮಳೆಗಾಲದಲ್ಲಿ ಅಥವಾ ಚಳಿಗಾಲದಲ್ಲಿ ಹೋಗುವ ಮುನ್ನ ರೈನ್ ಕೋಟ್ ಮತ್ತು ಜಾಕೆಟ್ ಗಳನ್ನು ತೆಗೆದುಕೊಂಡು ಹೋಗುವುದು ಉತ್ತಮ.
ಟ್ರಕಿಂಗ್ ಮಾಡುವಾಗ ಹುಷಾರಾಗಿ ಮೆಲ್ಲನೆ ಪ್ರಯಾಣವನ್ನು ಮಾಡುವುದು ಉತ್ತಮ.
ಈ ಲೇಖನದಲ್ಲಿ 2026ರ ಜನವರಿ ತಿಂಗಳ ಪ್ರಮುಖ ಪ್ರಚಲಿತ ಘಟನೆಗಳ { Current Affairs in Kannada }ಪ್ರಮುಖ ಪ್ರಶ್ನೋತ್ತರಗಳನ್ನು ನೀಡಲಾಗಿದೆ. KPSC, PSI, FDA, SDA ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದು ಬಹಳ ಉಪಯುಕ್ತವಾಗಿದೆ.
ಪ್ರಶ್ನೆ:
2026ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಮೊದಲು ಬಹುಮಾನ ಪಡೆದ ರಾಜ್ಯ ಯಾವುದು ? ಉತ್ತರ:ಮಹಾರಾಷ್ಟ್ರ
ಪ್ರಶ್ನೆ:
ಭಾರತದ ಅತ್ಯುನ್ನತ ಶಾಂತಿಕಾಲದ ವೀರತಾ ಪ್ರಶಸ್ತಿ ಅಶೋಕ ಚಕ್ರ 2026ರಲ್ಲಿ ಯಾರಿಗೆ ನೀಡಲಾಯಿತು ? ಉತ್ತರ: IAF ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ
ಪ್ರಶ್ನೆ:
2026ರಲ್ಲಿ ಎಷ್ಟು ಜನರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಯಿತು ? ಉತ್ತರ:5 ಜನರಿಗೆ ನೀಡಲಾಯಿತು
ಪ್ರಶ್ನೆ:
ಉತ್ತರ ಪ್ರದೇಶದ ಮೊದಲ ಜೀರೋ ಫ್ರೆಶ್ ವೆಸ್ಟ್ ಡಂಪ್ ನಗರ ಯಾವುದು? ಉತ್ತರ: ಲಖನೌ (Lucknow)
ಪ್ರಶ್ನೆ:
ಉತ್ತರಖಂಡದಲ್ಲಿ ಸಮಾನ ನಾಗರಿಕ ಸಂಹಿತೆ UCC ಅಧಿಸೂಚನೆಯನ್ನು ಸಂವಿಧಾನದ ಯಾವ ವಿಧಿಯಲ್ಲಿ ಜಾರಿಗೆ ತರಲಾಯಿತು ? ಉತ್ತರ:ಸಂವಿಧಾನದ 213 ನೇ ವಿಧಿ
ಪ್ರಶ್ನೆ:
ಭಾರತೀಯ ರೈಲ್ವೆ ಮೊದಲ ಹ್ಯೂಮನಾಯ್ಡ್ ರೋಬೋಟ್ ನಾ ? ಹೆಸರೇನು ಮತ್ತು ಎಲ್ಲಿ ಸ್ಥಾಪಿಸಲಾಯಿತು ? ಉತ್ತರ: ASC ಅರ್ಜುನ್ – ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಲಾಯಿತು.
ಪ್ರಶ್ನೆ:
7.ಭಾರತದ ಮೊದಲ ಮೆನೋಪಾಸ್ ಕ್ಲಿನಿಕ್ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು ? ಉತ್ತರ: ಮಹಾರಾಷ್ಟ್ರ
ಪ್ರಶ್ನೆ:
ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಬರುವುದಾಗಿ ಯಾವ ದೇಶ ಘೋಷಿಸಿದೆ ? ಉತ್ತರ:ಅಮೇರಿಕಾ
ಪ್ರಶ್ನೆ:
15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ತಡೆಗಟ್ಟುವ ಕಾನೂನು ಯಾವ ದೇಶ ಅಂಗೀಕರಿಸಿತು ? ಉತ್ತರ: ಫ್ರಾನ್ಸ್
ಪ್ರಶ್ನೆ:
ICC ಪುರುಷರ ಟಿ20 ವಿಶ್ವಕಪ್ 2026ರಲ್ಲಿ ಬಾಂಗ್ಲಾದೇಶ ಬದಲಿಗೆ ಯಾವ ತಂಡವನ್ನು ಸೇರಿಸಲಾಯಿತು ? ಉತ್ತರ: Scotland ( ಸ್ಕಾಟ್ಲೆಂಡ್ )
ಪ್ರಶ್ನೆ:
99 ನೇ ವಯಸ್ಸಿನಲ್ಲಿ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪಡೆದ ಶಿಕ್ಷಣ ತಜ್ಞರು ಯಾರು ? ಉತ್ತರ: ಫಾದರ್ ಥಾಮಸ್ ವಿ. ಕುನ್ನುಂಕಲ್
ಪ್ರಶ್ನೆ:
ಭಾರತ ಮತ್ತು ಅರಬ್ ದೇಶಗಳ ವಿದೇಶಾಂಗ ಸಚಿವರ ಮೊದಲ ಸಭೆ ಎಲ್ಲಿ ನಡೆಯಿತು ? ಉತ್ತರ: ದೆಹಲಿ
ಪ್ರಶ್ನೆ:
13.ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ 9 ನೇ ರಾಷ್ಟ್ರೀಯ ಸಮ್ಮೇಳನ ಯಾವ ರಾಜ್ಯದಲ್ಲಿ ನಡೆಯಿತು ? ಉತ್ತರ: ಆಂಧ್ರಪ್ರದೇಶ
ಪ್ರಶ್ನೆ:
30 ಜನವರಿ 2026 ರಂದು ಯಾರ 78 ನೇ ಪುಣ್ಯತಿಥಿಯನ್ನು ಆಚರಿಸಲಾಯಿತು ? ಉತ್ತರ: ಮಹಾತ್ಮ ಗಾಂಧಿ
ಪ್ರಶ್ನೆ:
ಆಧಾರ್ ಅನ್ನು ಪಥಿಕ್ ಆಫ್ ಜೊತೆ ಏಕೀಕೃತಗೊಳಿಸಿದ ಭಾರತದ ಮೊದಲ ಕಾನೂನು ಜಾರಿ ತಂದ ಸಂಸ್ಥೆ ಯಾವುದು ? ಉತ್ತರ: ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್ (Ahmedabad City Crime Branch)
ಪ್ರಶ್ನೆ:
ಆರ್ಥಿಕ ಸಮೀಕ್ಷೆ 2025 – 26 ರ ಪ್ರಕಾರ ಫೈನಾನ್ಸಿಲ್ ಇಯರ್ ( FY ) 2026 ಕ್ಕೆ ಅಂದಾಜಿಸಿದ ನಿಜವಾದ ಜಿಡಿಪಿ ವೃದ್ಧಿ ಧರ ಎಷ್ಟು ? ಉತ್ತರ: 7.4%
ಪ್ರಶ್ನೆ:
ಭಾರತದ ಮೊದಲ AI ಸಹಾಯಕ ವಿಶ್ವವಿದ್ಯಾಲಯ ಯಾವ ನಗರದಲ್ಲಿ ಪ್ರಾರಂಭಿಸಲಾಯಿತು ? ಉತ್ತರ: ಮೀರತ್
ಪ್ರಶ್ನೆ:
ಮೇಘಾಲಯದ ಯಾವ ಪಾರಂಪರಿಕ ಸ್ಥಳವನ್ನು UNESCO 2026 – 27 ವಿಶ್ವ ಪರಂಪರೆ ಪಟ್ಟಿಗೆ ಭಾರತ ನಾಮನಿರ್ದೇಶನ ಮಾಡಿದೆ ? ಉತ್ತರ: ಜೀವಂತ ಮೂಲ ಸೇತುವೆ ( living route bridges )
ಪ್ರಶ್ನೆ:
ನಿಫಾ ವೈರಸ್ ಹರಡುವ ಆತಂಕದ ನಡುವೆ ಭಾರತದಿಂದ ಪ್ರಾಣಿಗಳು ಮತ್ತು ಪ್ರಾಣಿ ಉತ್ಪನ್ನಗಳ ಆಮದು ಮೇಲೆ ಯಾವ ದೇಶ ನಿಷೇಧ ಮಾಡಿದೆ ? ಉತ್ತರ: ಕಿರ್ಗಿಸ್ತಾನ್
ಪ್ರಶ್ನೆ:
ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯ ಮಂತ್ರಿಯಾಗಿ ಯಾರನ್ನು ನೇಮಿಸಲಾಗಿದೆ ? ಉತ್ತರ: ಸುನೇತ್ರಾ ಪವಾರ್
ಪ್ರಶ್ನೆ:
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು ? ಉತ್ತರ: ಗುಜರಾತ್
ಪ್ರಶ್ನೆ:
6 ನೇ ರಾಷ್ಟ್ರೀಯ ಪಸಲು ಘೋಷಣ ಶಿಖರ ಸಮ್ಮೇಳನ 2026 ರಲ್ಲಿ ಎಲ್ಲಿ ನಡೆಯಲಿದೆ ? ಉತ್ತರ: ಮುಂಬೈ
ಪ್ರಶ್ನೆ:
ಇತ್ತೀಚಿಗೆ ರಾಮ್ಸರ್ ಅರ್ಧ ಭೂಮಿ ಎಂದು ಘೋಷಿಸಿದ ಪಟ್ಟಣ ಪಕ್ಷಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ? ಉತ್ತರ: ಉತ್ತರ ಪ್ರದೇಶ
ಪ್ರಶ್ನೆ:
2026 ರ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ ? ಉತ್ತರ: ಕಾರ್ಲೋಸ್ ಅಲ್ಕರಾಜ್
ಪ್ರಶ್ನೆ:
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಭಯೋತ್ಪಾದಕ ಸಂಘಟನೆ ಎಂದು ಯಾವ ಸಂಸ್ಥೆ ಘೋಷಿಸಿದೆ ? ಉತ್ತರ: ಯುರೋಪಿಯನ್ ಸಂಸ್ಥೆ ( E U )
ಪ್ರಶ್ನೆ:
ಹತ್ತು ದಿನಗಳ ಸರಸ್ ಮೇಳವನ್ನು ಯಾವ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು ? ಉತ್ತರ: ಜಮ್ಮು ಮತ್ತು ಕಾಶ್ಮೀರ
ಪ್ರಶ್ನೆ:
39 ನೇ ಭಾರತೀಯ ಅಂತರಾಷ್ಟ್ರೀಯ ಚರ್ಮ ಮೇಳ ಎಲ್ಲಿ ನಡೆಯಿತು ? ಉತ್ತರ: ಚೆನ್ನೈ
24 ಗಂಟೆಗಳಲ್ಲಿ 5555 ವಿದ್ಯಾರ್ಥಿನಿಯರಿಗೆ ಇ-ಸೈಕಲ್ ವಿತರಿಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ರಾಜ್ಯ ಯಾವುದು ? ಉತ್ತರ: ಆಂಧ್ರ ಪ್ರದೇಶ
ಪ್ರಶ್ನೆ:
ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಡ್ವೋಕೇಟ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ ? ಉತ್ತರ: ಮುಂಬೈ
ಪ್ರಶ್ನೆ:
ಜಲಂಧರ್ ನಗರದ ಅಂದಪುರದ ವಿಮಾನ ನಿಲ್ದಾಣದ ಹೊಸ ಹೆಸರೇನು ? ಉತ್ತರ: ಶ್ರೀ ಗುರು ರವಿ ದಾಸ್ ಮಹಾರಾಜ್ ಜಿ ವಿಮಾನ ನಿಲ್ದಾಣ
ಪ್ರಶ್ನೆ:
ವಿಶ್ವ ಅರ್ಧ ಭೂಮಿ ದಿನವನ್ನು ಪ್ರತಿ ವರ್ಷ ಯಾವ ದಿನಾಂಕದಲ್ಲಿ ಆಚರಿಸಲಾಗುತ್ತದೆ ? ಉತ್ತರ: ಫೆಬ್ರವರಿ 2
ಪ್ರಶ್ನೆ:
ಅಗ್ನಿ ಪರೀಕ್ಷಾ ಎಂಬ ಸೈನಿಕ ಅಭ್ಯಾಸ ಯಾವ ರಾಜ್ಯದಲ್ಲಿ ನಡೆಯಿತು ? ಉತ್ತರ: ಅರುಣಾಚಲ ಪ್ರದೇಶ
ಪ್ರಶ್ನೆ:
ಮೊದಲ ಗ್ಲೋಬಲ್ ಬಿಗ್ ಕ್ಯಾಟ್ಸ್ ಸಮ್ಮೇಳನವನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ ? ಉತ್ತರ: ಭಾರತ
ಪ್ರಶ್ನೆ:
ಭಾರತದ ಮೊದಲ LNG ಡೀಸೆಲ್ , ಡ್ಯುಯಲ್ ಫ್ಯೂಯಲ್ DEMU ರೈಲು ಯಾವ ನಗರದಲ್ಲಿ ಪ್ರಾರಂಭಿಸಲಾಯಿತು ? ಉತ್ತರ: ಅಹಮದಾಬಾದ್
ಪ್ರಶ್ನೆ:
2026 ರ ಆಸ್ಟ್ರೇಲಿಯನ್ ಓಪನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಯಾರು ಗೆದ್ದರು ? ಉತ್ತರ: ಎಲೆನಾ ರೈಬಾಕಿನಾ ಗೆದ್ದರು
ಪ್ರಶ್ನೆ:
ಗ್ರಾಮೀಣ ಪ್ರಶಸ್ತಿ 2026 ರಲ್ಲಿ ಉತ್ತಮ ಧ್ವನಿ ಪುಸ್ತಕ ನಿರೂಪಣೆ ಮತ್ತು ಕಥನ ಧ್ವನಿ ಮುದ್ರಣ ವಿಭಾಗದಲ್ಲಿ ಮೊದಲ ಬಾರಿಗೆ ಗ್ರಾಮೀಣ ಪ್ರಶಸ್ತಿಯನ್ನು ಗೆದ್ದ ಆಧ್ಯಾತ್ಮಿಕ ನಾಯಕ ಯಾರು ? ಉತ್ತರ: ದಲೈ ಲಾಮಾ
ಪ್ರಶ್ನೆ:
B37. ರಾಮ್ಸರ್ ಪಟ್ಟಿಗೆ ಸೇರಿಸಲಾದ ವಾರಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ? ಉತ್ತರ: ಗುಜರಾತ್
ಪ್ರಶ್ನೆ:
ಮೇಬಲಿನ್ ನ್ಯೂಯಾರ್ಕ್ ಭಾರತಕ್ಕಾಗಿ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಕ ಮಾಡಿದೆ ? ಉತ್ತರ: ಕಿಯಾರಾ ಅಡ್ವಾಣಿ
ಪ್ರಶ್ನೆ:
6 ನೇ ನ್ಯಾಷನಲ್ ( ಕ್ರಾಪ್ ನ್ಯೂಟ್ರಿಷನ್ ) ಬೇಳೆ ಪೌಷ್ಟಿಕ ಆಹಾರ ಸಮ್ಮೇಳನ 2026 ರಲ್ಲಿ ಯಾವ ನಗರದಲ್ಲಿ ನಡೆಯಿತು ? ಉತ್ತರ: ಮುಂಬೈ ನಗರ ( ಫೆಬ್ರವರಿ 5 and 6 )
ಪ್ರಶ್ನೆ:
ಗ್ರಾಮ ಒನ್ ಯೋಜನೆಯ ಮುಖ್ಯ ಉದ್ದೇಶವೇನು? ಉತ್ತರ: ಗ್ರಾಮೀಣ ಡಿಜಿಟಲ್ ಸೇವೆಗಳ ಒದಗಿಕೆ
ಸ್ನೇಹಿತರೆ ನೀವು ಕೂರ್ಗ್ ನ ಪ್ರವಾಸವನ್ನು ಏಕೆ ಮಾಡಬೇಕು ಎಂದು ನಮ್ಮ ಈ ಲೇಖನದಲ್ಲಿ ವಿವರಿಸಲಾಗಿದೆ.
ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು
ಭಾರತದ ಪ್ರಮುಖ ಹಲವಾರು ಪ್ರವಾಸ ಮಾಡುವ ತಾಣಗಳಲ್ಲಿ ಒಂದು ಕೊಡಗು ಜಿಲ್ಲೆಯಾಗಿದೆ. ಅದರಲ್ಲೂ ಕರ್ನಾಟಕದ ಜನರಿಗೆ ತುಂಬಾ ಇಷ್ಟವಾದಂತಹ ತಾಣವು ಇಲ್ಲಿದೆ. ಮಳೆಗಾಲದಲ್ಲಿ ಅಂತು ಪ್ರವಾಸ ಮಾಡಲು ಜನರು ಬಹಳ ಕಾತುರತೆಯಿಂದ ಕಾಯುತ್ತಾರೆ.
ನಮ್ಮ ದೇಶದಲ್ಲಿ ಅತಿ ಹೆಚ್ಚಾಗಿ ಕಾಫಿ ಉತ್ಪಾದನೆ ಮಾಡುವ ಪ್ರದೇಶಗಳಲ್ಲಿ ಕೂರ್ಗ್ ಒಂದಾಗಿದೆ, ಇಲ್ಲಿ ಐತಿಹಾಸಿಕ ಯೋಧರ ಜನಪ್ರಿಯ ಪ್ರದೇಶವಾಗಿದೆ . ಕೂರ್ಗ್ ನಲ್ಲಿ ಹಲವಾರು ಆಕರ್ಷಣೆ ಆಗುವಂತಹ ಪ್ರದೇಶಗಳು ಹೊಂದಿವೆ.
Table of Contents
ಪ್ರವಾಸ ಏಕೆ ಕೈಗೊಳ್ಳಬೇಕು
ಕೂರ್ಗ್ ನ ಜನರ ಸ್ಥಳೀಯ ಸಂಪ್ರದಾಯವನ್ನು ನಾವು ತಿಳಿಯಬಹುದು. ಕೂರ್ಗ್ ಪ್ರದೇಶದ ಸ್ಥಳೀಯ ಜನರು ತನ್ನದೇ ಆದ ಸಾಂಪ್ರದಾಯಿಕ ವೈವಿಧ್ಯತೆಯನ್ನು ಹೊಂದು ಹೆಸರುವಾಸಿಯಾಗಿದೆ.ಇಲ್ಲಿ ಹಲವು ರೀತಿಯ ವಿಭಿನ್ನ ಪದ್ಧತಿಗಳು, ಸಂಪ್ರದಾಯ ಮತ್ತು ಜೀವನ ಶೈಲಿಯನ್ನು ನಾವೆಲ್ಲರೂ ಕಾಣಬಹುದು, ಭಾಷೆಯಂತೆ ಮಾತನಾಡುವ ಜನರು ಇದ್ದಾರೆ.
ಹಾಗೆ ಇಲ್ಲಿನ ಜನರು ವಿಶೇಷವಾಗಿ ಕಾಣುವ ಶೈಲಿಯ ಬಟ್ಟೆಯನ್ನು ಇಲ್ಲಿಯ ಪುರುಷ ಮತ್ತು ಮಹಿಳೆಯರು ಧರಿಸಿಕೊಳ್ಳುತ್ತಾರೆ .ಕೊಡಗಿನವರ ವಿಶೇಷವೇಶಭೂಷಣಗಳು, ನೃತ್ಯದ ಶೈಲಿಯಿಂದ ನಮ್ಮ ಕರ್ನಾಟಕದ ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ಜನರು ಕೈಲ್ಪಾಡ್ , ಕಾವೇರಿ ಸಂಕ್ರಮಣ ಹಾಗೂ ಪುತ್ತರಿಯಂತಹ ಹಬ್ಬಗಳನ್ನು ಜನರ ಕಣ್ಣಿಗೆ ಕಟ್ಟುವಂತೆ ಆಚರಿಸುತ್ತಾರೆ.
ಸುಂದರವಾಗಿ ಕಾಣುವಂತಹ ಗಿರಿಧಾಮಗಳು
ಕೂರ್ಗ್ ಪ್ರದೇಶ ಕೇವಲ ಕಾಫಿ ತೋಟಗಳನ್ನು ಹೊಂದಿರುವ ಪ್ರದೇಶ ಮಾತ್ರವಲ್ಲ, ಬದಲಾಗಿ ಇದು ಕರ್ನಾಟಕದ ಜನಪ್ರಿಯ ಗಿರಿಧಾಮವು ಕೂಡ ಆಗಿದೆ. ಹೊಸದಾಗಿ ಮದುವೆಯಾದ ಜೋಡಿಗಳು ಮಧುಚಂದ್ರಕ್ಕಾಗಿ ಕೂರ್ಗ್ ತಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಮತ್ತು ಇಲ್ಲಿ ಪ್ರಶಾಂತವಾದ ಹವಾಮಾನ, ಕಾಫಿ ತೋಟಗಳು, ಮತ್ತು ರುದ್ರ ರಮಣೀಯ ಪ್ರಕೃತಿ ಸಂಪತ್ತುಗಳು ಎಂತಹ ವ್ಯಕ್ತಿಗಳಿಗೂ ಕೂಡ ಅಚ್ಚರಿ ಮೂಡಿಸುತ್ತದೆ. ಹಾಗೆ ಜನರ ಆಧ್ಯಾತ್ಮಿಕತೆಯನ್ನು ಹೆಚ್ಚು ಮಾಡುವ ತಲಕಾವೇರಿ, ಮಡಿಕೇರಿಯ ಹತ್ತಿರವಿರುವ ಹಲವು ಪ್ರವಾಸ ತಾಣಗಳಿಗೆ ನೀವೆಲ್ಲರೂ ಹೋಗಬಹುದು.
ಅಷ್ಟೇ ಅಲ್ಲದೆ ಇಲ್ಲಿನ ಹಲವು ತಾಣಗಳಾದ ಇರುಪ್ಪು ಜಲಪಾತ, ಮಲ್ಲಳ್ಳಿ ಜಲಪಾತ, ಲಕ್ಷ್ಮಣ ತೀರ್ಥ ನದಿ, ಗೋಲ್ಡನ್ ಟೆಂಪಲ್, ನಿಸರ್ಗಧಾಮ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ಇಡೀ ವರ್ಷ ಪ್ರವಾಸಿಗರನ್ನು ಬೆಳೆಯುತ್ತದೆ.
ಪರಿಶುದ್ಧವಾದ ವಾತಾವರಣ
ಈ ವಾತಾವರಣದಲ್ಲಿ ಅತ್ಯಂತ ಶ್ರೀಮಂತವಾಗಿ ಬೆಳೆದು ನಿಂತ ಸಸ್ಯ ಸಂಪತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಇಲ್ಲಿ ಹಲವು ರೀತಿಯ ಸಾವಿರಾರು ಜಾತಿಯ ಸಸ್ಯಗಳನ್ನು ನೀವು ನೋಡಬಹುದು, ಅದಲ್ಲದೆ ಅಕೇಶಿಯ, ಶ್ರೀಗಂಧ ಮತ್ತು ತೇಗವೃಕ್ಷಗಳು ಕೂರ್ಗ್ ಪ್ರದೇಶದ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ.
ಈ ಪ್ರದೇಶದಲ್ಲಿ ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ ಗಳಲ್ಲಿ ಇರುವಂತಹ ವನ್ಯಜೀವಿಗಳ ಅಭಯಾರಣ್ಯಗಳಲ್ಲಿ ನೀವು ಜೀವನದಲ್ಲಿ ನೋಡದೆ ಇರುವಂತಹ ಪ್ರಾಣಿಗಳನ್ನು ಕಾಣಬಹುದು, ರಾಷ್ಟ್ರೀಯ ಉದ್ಯಾನವನ ನಾಗರಹೊಳೆಯಲ್ಲಿ ಏಷ್ಯ್ಯಾಟಿಕ್ ಆನೆ, ಚಿರತೆ, ಕರಡಿಗಳು ಕೂಡಿ ಹಲವಾರು ಪ್ರಾಣಿಗಳನ್ನು ನೀವೆಲ್ಲರೂ ವೀಕ್ಷಿಸಬಹುದು.
ಕೂರ್ಗ್ ನ ಉಪಹಾರ
ಸ್ನೇಹಿತರೆ ನೀವೆಲ್ಲರೂ ಯಾವುದೇ ಒಂದು ಪ್ರವಾಸ ತಾಣಗಳು ಮತ್ತು ಯಾವುದೇ ಉದ್ಯಾನವನ ಗಳಿಗೆ ಹೋದಾಗ ನೀವು ಅಲ್ಲಿನ ಸ್ಥಳೀಯ ಪ್ರದೇಶದ ಆಹಾರವನ್ನು ಸವಿದಾಗ ಮಾತ್ರ ನಿಮ್ಮ ಪ್ರವಾಸಗಳು ಪರಿಪೂರ್ಣವಾಗುತ್ತದೆ. ಅದೇ ರೀತಿಯಲ್ಲಿ ಕೂರ್ಗ್ ನ ಪ್ರವಾಸದಲ್ಲಿ ನೀವು ಇದ್ದಾಗ ನೀವು ಅಲ್ಲಿನ ಸ್ವಾದಿಷ್ಟ ಆಹಾರವನ್ನು ಸೇವಿಸಲೇಬೇಕು.
ಈ ಕೂರ್ಗ್ ನಲ್ಲಿ ಹೆಸರುವಾಸಿ ಆಗಿರುವಂತಹ ಆಹಾರಗಳು ಬಿದಿರು ಚಿಗುರು ಕರಿ, ಕಡಂಬುಟ್ಟು, ಪಾಪುಟ್ಟ ,ಕೂರ್ಗ್ ಸ್ಟೈಲ್ ಕೋಳಿ ಸಾರು, ಅಕ್ಕಿ ರೊಟ್ಟಿ ಸೇರಿದಂತೆ ಹಲವಾರು ರೀತಿಯ ಆಹಾರಗಳು ಇಲ್ಲಿ ಜನಪ್ರಿಯವಾಗಿದೆ.
ಹಾಗೆ ಸ್ನೇಹಿತರೆ ನಾವೆಲ್ಲರೂ ಪ್ರವಾಸ ಮಾಡುವುದು ನಮ್ಮ ಪ್ರಕೃತಿಯನ್ನು ನೋಡಿ ಆನಂದ ಪಡುವುದಕ್ಕೆ ಪ್ರವಾಸ ಮಾಡುತ್ತೇವೆ. ನೀವೆಲ್ಲರೂ ಪ್ರವಾಸೋದ್ಯಮಗಳಲ್ಲಿ ಮುನ್ನೆಚ್ಚರಿಕೆಯಿಂದ ಹುಷಾರಾಗಿ ಬಂದು ಹುಷಾರಾಗಿ ಹಿಂದಿರುಗಿ ಹೋಗಿ ಯಾವುದೇ ತರಹದ ಅನಾಹುತಗಳನ್ನು ಮಾಡಿಕೊಳ್ಳಬೇಡಿ.
ನಮಸ್ಕಾರ, ಸಾಹಿತ್ಯಪ್ರಿಯರೇ ! ಇಂದು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಕನ್ನಡ ಸಾಹಿತ್ಯದ ಆದಿಕವಿ ಪಂಪನ ಪಂಪಭಾರತ ಬಗ್ಗೆ ನನ್ನ ವೈಯಕ್ತಿಕ ದೃಷ್ಟಿಕೋನ. ಇದು ಕೇವಲ ಒಂದು ಮಹಾಕಾವ್ಯವಲ್ಲ ಅದು ಕರ್ನಾಟಕದ ಆತ್ಮದ ಧ್ವನಿ, ರಾಜನೀತಿಯ ಮಿಶ್ರಣ ಮತ್ತು ಮಾನವೀಯ ಭಾವನೆಗಳ ಗಂಗಾ. ವಿಶೇಷವಾಗಿ, ಮೊದಲ ಪರ್ವದ (ಆದಿ ಪರ್ವ) ಉಪಸಂಹಾರದ ಮೂಲಕ, ಪಂಪನ ಕಲಾತ್ಮಕ ಚಮತ್ಕಾರವನ್ನು ನಾನು ಹೇಗೆ ನೋಡುತ್ತೇನೆಂದು ಹೇಳುತ್ತೇನೆ.
ಪಂಪನ ಕಾಲ ಕ್ರಿ.ಶ 902 – 955 CE ಆಗಿದೆ. ಪಂಪ ಅವರು ಕನ್ನಡದ ಆದಿಕವಿ ಎಂದು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಇಮ್ಮಡಿ ಅರಿಕೇಸರಿಯ ಆಸ್ಥಾನದ ಕವಿಯಾಗಿದ್ದ ಪಂಪನು ಗದ್ಯ ಮತ್ತು ಪದ್ಯ ಸೇರಿದ “ಚಂಪೂ” ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಅಧಿಕವಿ ಎಂದು ಹೆಸರು ಪಡೆದ ಪಂಪನು ಕನ್ನಡದ ರತ್ನಾತ್ರಯರಲ್ಲಿ ( ಪಂಪ, ಪೊನ್ನ ಮತ್ತು ರನ್ನ ) ಒಬ್ಬರು. ಪಂಪನನ್ನು ಯುಗ ಪ್ರವರ್ತಕನೆಂದು ಕನ್ನಡಿಗರು ಗೌರವಿಸಿ ಪಂಪರ ಕಾಲವನ್ನು “ಪಂಪಯುಗ” ವೆಂದು ಕರೆದಿದ್ದಾರೆ.
“ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ” ಇವೆರಡೂ ಪಂಪನ ಎರಡು ಪ್ರಮುಖ ಕೃತಿಗಳಾಗಿವೆ.
Table of Contents
ಪಂಪರ ಜೀವನ : ( ಆರಂಭಿಕ )
ಪಂಪನು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದರು. ಇವನ ತಂದೆ ಭೀಮಪ್ಪಯ್ಯ ಮತ್ತು ತಾಯಿ ಅಬ್ಬಣಬ್ಬೆ. ಕ್ರಿ.ಶ ಸುಮಾರು 902 ರಿಂದ 955 ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸ ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದರು.
ಪಂಪರ ಪೂರ್ವಜರು ವೆಂಗಿ ಮಂಡಲದವರು. ವೆಂಗಿಮಂಡಲವು ಕೃಷ್ಣ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶವಾಗಿದೆ. ಇದು ಇಂದಿನ ತೆಲಂಗಾಣ ರಾಜ್ಯದ ಕರೀಮ್ ನಗರ ಜಿಲ್ಲೆಯ ವೇಮುಲವಾಡ ಎಂಬ ಊರು. ಇದರ ಏಳು ಗ್ರಾಮಗಳಲ್ಲಿ ವೆಂಗಿಪಳು ಎಂಬುದು ಪ್ರಸಿದ್ಧ ಅಗ್ರಹಾರ. ಅಲ್ಲಿದ್ದ ಜಮದಗ್ನಿ ಪಂಚಾರ್ಷೆಯ ಪ್ರವಾಸ ಶ್ರೀವತ್ಸ ಗೋತ್ರಕ್ಕೆ ಸೇರಿದ ಕುಟುಂಬಕ್ಕೆ ಸೇರಿದವನು ಪಂಪ. ಈ ಕುಟುಂಬದವರು ಬನವಾಸಿ ( ಕರ್ನಾಟಕದ ಉತ್ತರ ಕನ್ನಡ ಮತ್ತು ಧಾರವಾಡ ಪ್ರದೇಶಕ್ಕೆ ) ವಲಸೆ ಬಂದರು.
ಪಂಪ ಅವರ ಕುಟುಂಬದವರು ಹಲವು ತಲೆಮಾರುಗಳಿಂದ ಸಂಪ್ರದಾಯವಾದಿ ಹಿಂದುಗಳಾಗಿದ್ದರು. ಪಂಪನ ತಂದೆಯಾದ ಭೀಮಪ್ಪಯ್ಯ ಯಜ್ಞಯಾಗದಿಗಳಲ್ಲಿ ಹಿಂಸೆಯನ್ನು ವಿರೋಧಿಸಿ, ತಮ್ಮ ಕುಟುಂಬದೊಂದಿಗೆ ಜೈನ ಧರ್ಮಕ್ಕೆ ಮತಾಂತ ಗೊಂಡರು. ಇದು ಪಂಪರ ಮೇಲೆ ಆಳವಾದ ಧಾರ್ಮಿಕ ಮತ್ತು ತಾತ್ವಿಕ ಪ್ರಭಾವವನ್ನು ಬೀರಿತು.
ಆದಿಕವಿ ಪಂಪ
ಜೀವನ
ಆಧಿಕವಿ ಪಂಪನು ( ಪಂಪ ಅವರ ನಿಜವಾದ ಹೆಸರು ಜಯಂತ ) ದೇಶಿಯ ಮಾರ್ಗವನ್ನು ಸೇರಿಕೊಂಡು ಕೃತಿಯನ್ನು ರಚಿಸಿದನು. ಸಂಸ್ಕೃತ ಸಾಹಿತ್ಯದಂತಿ ರುವುದು ‘ಮಾರ್ಗ’ ಅಚ್ಚ ಕನ್ನಡದ ಶೈಲಿಯೂ ‘ದೇಶೀ’ ಎನಿಸಿತ್ತು. ತನ್ನ ಕೃತಿಗಳ ರಚನೆಯ ಕಾಲಕ್ಕೆ ಪಂಪ ಅರಿ ಕೇಸರಿಯ ಆಶ್ರಯದಲ್ಲಿದ್ದ. ಪಂಪ ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತು ಇದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡವಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತವುಳ್ಳವನು ಮತ್ತು ಪ್ರೀತಿ ಇದ್ದವನು.
ತನ್ನ ದೇಶ ಪ್ರೇಮವನ್ನು”ಆರಂಕುಶವಿಟ್ಟೋಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂದು ವರ್ಣಿಸಿ ಪಂಪ ತನ್ನ ತಾಯಿನಡನ್ನು ಹೊಗಳಿದ್ದಾರೆ.
ಪಂಪರು ಪುಲಿಗೆರೆಯ ತಿರುಳ್ ಗನ್ನಡ ದಲ್ಲಿ ಕಾವ್ಯ ರಚಿಸಿದ್ದೇನೆ ಎಂದಿದ್ದಾರೆ. ಪಂಪರು ಆದಿಪುರಾಣವನ್ನು ಕ್ರಿ. ಶ. 941-42 ರಲ್ಲಿ ರಚಿಸಿದ್ದಾರೆ. ಇದು ಗುಣ ಸೇನಾಚಾರ್ಯನ ಪೂರ್ವ ಪುರಾಣದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಹೇಳುತ್ತದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಲ್ಲಿ ರಚಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಪಂಪನ ಪ್ರಮುಖ ಕೃತಿಗಳು
ಆದಿಪುರಾಣ
ಆದಿಪುರಾಣ ಪಂಪನ ಮೊದಲ ಮಹಾಕಾವ್ಯ ಆಗಿದೆ ಇದು ಜೈನ ಧರ್ಮದ ಮೊದಲ ತೀರ್ಥಂಕರಾದ ವೃಷಬನಾತರ ಜೀವನ ಚರಿತ್ರೆಯನ್ನು ವಿವರಿಸುತ್ತದೆ.
ಇದರಲ್ಲಿ 16 ಆಶ್ವಾಸಗಳಲ್ಲಿ ಮೊದಲ ಆರು ವೃಷಭನ ಹಿಂದಿನ 9 ಜನ್ಮಗಳು, 7 ರಿಂದ 10 ವೃಷಭನ ಹುಟ್ಟು , ಬಾಲ್ಯ ಮತ್ತು ತಪಸ್ಸುಗಳನ್ನು ಹಾಗೂ ಉಳಿದ 6 ಆಶ್ವಾಸಗಳು ಬಾಹುಬಲಿಯ ಕಥೆಯನ್ನು ವಿವರಿಸುತ್ತದೆ.
ಚಂಪೂ ಶೈಲಿಯಲ್ಲಿ ( ಗದ್ಯ – ಪದ್ಯ ಮಿಶ್ರಣ ) ರಚಿಸಲ್ಪಟ್ಟ ಈ ಕೃತಿಯು ಆತ್ಮದ ಪರಿಪೂರ್ಣತೆಯ ಪ್ರವಾಸ ಮತ್ತು ಮೋಕ್ಷದ ಸಾಧನೆಗೆ ಕಾವ್ಯ ಮಯ ರೂಪವನ್ನು ನೀಡುತ್ತದೆ.
ಈ ಕೃತಿ ಮಧ್ಯಯುಗದ ಜೈನ ಪುರಾಣಗಳಿಗೆ ಮಾದರಿಯಾಗಿದೆ.
ವಿಕ್ರಮಾರ್ಜುನ ವಿಜಯ
ಪಂಪ ಅವರು ಮಹಾಭಾರತವನ್ನು ಆಚರಿಸಿ ಈ ಕೃತಿಯನ್ನು ರಚಿಸಿದ್ದಾರೆ.
14 ಆಶ್ವಾಸಗಳು ಮತ್ತು 1609 ಪದ್ಯಗಳನ್ನು ಒಳಗೊಂಡಿದೆ.
ಪಂಪನು ತನ್ನ ರಾಜ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಮಹಾಭಾರತದ ಕಥೆಯನ್ನು ಕರ್ನಾಟಕದ ಸಾಂಸ್ಕೃತಿಕ ಮತ್ತು ಜೈನ ಧಾರ್ಮಿಕ ಹಿನ್ನೆಲೆಯಾಗಿ ಹೊಂದಿಕೊಳ್ಳುವಂತೆ ಪುನರ್ ರಚನೆ ಮಾಡಿದ್ದಾರೆ.
ಈ ಕೃತಿಯಲ್ಲಿ ಬನವಾಸಿಯ ಸೌಂದರ್ಯ ಚಿತ್ರಣವನ್ನು ಕಾಣುತ್ತೇವೆ.
ಶಿಕ್ಷಣ
ಪಂಪ ಅವರು ದೇವೇಂದ್ರ ಮುನಿ ಎಂಬ ಜೈನ ಗುರುಗಳ ಬಳಿ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಗಣಿತ, ವ್ಯಾಕರಣ, ಅಲಂಕಾರ ಶಾಸ್ತ್ರ, ಸಂಗೀತ, ನಾಟ್ಯ, ಶಿಲ್ಪ ಕಲೆ ಹಾಗೂ ವೈದ್ಯಶಾಸ್ತ್ರವನ್ನು ದೇವೇಂದ್ರ ಮುನಿಯ ಮಾರ್ಗದರ್ಶನದಲ್ಲಿ ಕಲಿತರು. ಈ ವಿದ್ಯಾಭ್ಯಾಸವು ಪಂಪನ ಸಾಹಿತ್ಯಿಕ ವಿಕಸಕ್ಕೆ ಮಹತ್ವದ ಪಾತ್ರವನ್ನು ವಹಿಸಿತು. ಪಂಪನು ಕೇವಲ ಸಾಹಿತ್ಯದಲ್ಲಿ ಮಾತ್ರವಲ್ಲದೆ ವಿಜ್ಞಾನ ಮತ್ತು ಕಲೆಯ ವಿವಿಧ ಕ್ಷೇತ್ರಗಳಲ್ಲಿ ಪರಿಣಿತರಾಗಿದ್ದರು.
ಸಾಹಿತ್ಯ ಪ್ರಾರಂಭ
ಬಾಲ್ಯದ ದಿನಗಳಲ್ಲಿ ಪಂಪರು ತನ್ನ ತಾಯ್ನಾಡಿನ ಪ್ರಕೃತಿಯೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದರು. ಬನವಾಸಿಯ ಸೌಂದರ್ಯ ಅವರ ಜನಜೀವನ ಸಂಸ್ಕೃತಿ ಮತ್ತು ಪ್ರಕೃತಿ ವೈವಿಧ್ಯತೆ ಪಂಪನ ಮನಸ್ಸನ್ನು ಆಕರ್ಷಿಸಿತು. ಈ ಪ್ರೀತಿಯನ್ನು ಅವರು ತಮ್ಮ ಕಾವ್ಯಗಳಲ್ಲಿ ವ್ಯಕ್ತಪಡಿಸಿಕೊಂಡಿದ್ದಾರೆ.
ಪಂಪರು ತನ್ನ ಬಾಲ್ಯದ ಅನುಭವಗಳಿಂದ ಪ್ರೇರಿತವಾಗಿ ಸಾಹಿತ್ಯದಲ್ಲಿ ತನ್ನ ಮೊದಲ ಹೆಜ್ಜೆ ಇಟ್ಟನು. ಅವರ ಬಾಲ್ಯದ ದಿನಗಳಲ್ಲಿ ಕಂಡುಬಂದ ಪ್ರಕೃತಿಯ ವೈವಿಧ್ಯತೆ ಮತ್ತು ಜೀವನದ ಸರಳತೆಯು ಅವರ ಕಾವ್ಯಗಳಲ್ಲಿ ಪ್ರಮುಖವಾಗಿ ತೋರಿದೆ. ಬನವಾಸಿಯ ಜೀವನಶೈಲಿ ಜನಸಾಮಾನ್ಯರ ಸಂಸ್ಕೃತಿ ಹಾಗೂ ಸ್ಥಳೀಯ ಸಂಪ್ರದಾಯಗಳನ್ನು ಅವರು ತಮ್ಮ ಕೃತಿಗಳಲ್ಲಿ ವರ್ಣಿಸಿದ್ದಾರೆ.
ಪ್ರಶಸ್ತಿ , ಪುರಸ್ಕಾರ , ಬಿರುದು
ಸಂಸಾರ ಸಾರೋದಯ, ಸರಸ್ವತಿ ಮಣಿಹಾರ, ಕವಿತಾಗುಣಾರ್ಣವ,ಆದಿಕವಿ, ಕನ್ನಡ, ಕಾವ್ಯಗಳ ಜನಕ, ನಾಡೋಜ, ನೂತನ ಯುಗ ಪ್ರವರ್ತಕ.
ಏಂ ಕಲಿಯೋ, ಸತ್ಕವಿಯೂ, ಕವಿತಾಗುಣಾರ್ಣಭವಂ” ಎಂದು ಪಂಪನನ್ನು ಹೊಗಳಿದ್ದಾರೆ.
ಪಂಪನು ತನ್ನ ಬಾಲ್ಯದ ದಿನಗಳನ್ನು ಬನವಾಸಿ ಪ್ರದೇಶದಲ್ಲಿ ಕಳೆದನು ಬನವಾಸಿಯು ಪ್ರಕೃತಿ ಸೌಂದರ್ಯ ದಟ್ಟ ಕಾಡುಗಳು, ತೊರೆಗಳು, ಜಲಪಾತಗಳು ಹಾಗೂ ಪರ್ವತಗಳು ಪಂಪನ ಕಾವ್ಯ ಮಯ ಮನಸ್ಸಿಗೆ ಪ್ರೇರಣೆ ನೀಡಿದವು. ಈ ಪ್ರಭಾವವು ಅವರ ಕೃತಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಬನವಾಸಿಯ ಬಗ್ಗೆ ಪಂಪನು ” ಆರಂಕುಶ ವೊಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶ ಮಂ ” ಎಂದು ಹೊಗಳಿದ್ದಾರೆ. ಅಲ್ಲದೆ ” ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ | ನಾಗಿಯುಮೇನೊ ತೀರ್ದಪುದೆ ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್ | ಎಂಬಂತಹ ವರ್ಣನೆಗಳಲ್ಲಿ ಬನವಾಸಿಯ ಸೌಂದರ್ಯವನ್ನು ಕಾವ್ಯಮಯವಾಗಿ ಚಿತ್ರಿಸಿದ್ದಾರೆ.
ಮಹತ್ವ ಮತ್ತು ವಿಶಿಷ್ಟತೆ
ಪಂಪ ಕಾವ್ಯಗಳಲ್ಲಿ ಆಧುನಿಕತೆ ಶಕ್ತಿಶಾಲಿ ವ್ಯಕ್ತಿತ್ವ ಕವನ ಶೈಲಿಯ ನವೀನತೆ ಹಾಗೂ ಜೈನ ಧರ್ಮದ ಮೌಲ್ಯಗಳು ಪ್ರತಿಬಿಂಬಿಸುತ್ತವೆ.
ಪಂಪನಿಗೆ ” ಕನ್ನಡದ ಕವಿ ಕುಲ ಗುರು ” , ” ನೂತನ ಯುಗ ಪ್ರವರ್ತಕ ” ನಾಡೋಜ ಎಂಬ ಬಿರುದುಗಳಿವೆ.
ಪಂಪನ ಕಾವ್ಯಗಳ ವೈಶಿಷ್ಟತೆ
ಪಂಪನು ಗದ್ಯ ಮತ್ತು ಪದ್ಯ ಶೈಲಿಯ ಸಮನ್ವಯವನ್ನು ತಂದುಕೊಂಡು ಹಳೆಯ ಮತ್ತು ಹೊಸ ಸಾಹಿತ್ಯ ಪರಂಪರೆಯ ಸೇತುವೆಯಾಗಿದ್ದರು.
ಜೈನ ಧರ್ಮದ ತತ್ವ, ಮಾನವೀಯತೆ, ಭಾಷೆ, ಶೈಲಿ ಎಲ್ಲವನ್ನು ಸಂಯೋಜನೆಗೊಳಿಸಿ ಕನ್ನಡ ಸಾಹಿತ್ಯವನ್ನು ಹೆಚ್ಚುಮಾಡಿದ್ದಾರೆ.
ಪಂಪ ಸಾಹಿತ್ಯವೆಂದರೆ ಸೃಜನಶೀಲತೆ ಮತ್ತು ಕನ್ನಡಿಗರ ಜೀವನ ದೃಷ್ಟಿಯ ಒಂದು ಪ್ರತಿಕಾರವಾಗಿ ಇಂದಿಗೂ ಮೆಚ್ಚುಗೆಯನ್ನು ಗಳಿಸಿದೆ.
ಪಂಪನ ಋಣವನ್ನು ಕನ್ನಡ ಸಂಗಾತಿಗರು ಗುಣಿಸುವಂತಿಲ್ಲ ಆತನ ಸಾಹಿತ್ಯ ಹಾಗೂ ವ್ಯಕ್ತಿತ್ವ ಯಾವತ್ತೂ ಕನ್ನಡಿಗರ ಹೃದಯದಲ್ಲಿ ಇರುತ್ತದೆ.
ಭಾರತವು ಶ್ರೀಮಂತ ಸಂಸ್ಕೃತಿ, ವೈವಿಧ್ಯತೆ, ಭೌಗೋಳಿಕ ಮತ್ತು ಇತಿಹಾಸದ ಭೂಮಿ. ಇದು ಪ್ರಪಂಚದ ಜನರನ್ನು ತನ್ನತ್ತ ಆಕರ್ಷಿಸುವಷ್ಟು ಶ್ರೀಮಂತ ಪ್ರವಾಸೋದ್ಯಮವನ್ನು ಹೊಂದಿದೆ. ಭಾರತದ ಅದ್ಭುತಗಳನ್ನು ಕಣ್ತುಂಬಿಕೊಳ್ಳಲು ಜನರು ದೂರದೂರಿನಿಂದ ಬರುತ್ತಾರೆ. ಇಲ್ಲಿರುವ ಸಂಕೀರ್ಣ ಕೆತ್ತನೆಗಳನ್ನು ಹೊಂದಿರುವ ಸ್ಮಾರಕಗಳು, ಆಲಯಗಳು, ಕಟ್ಟಡಗಳು ಇತಿಹಾಸಕಾರರನ್ನೂ ಸೆಳೆಯುತ್ತವೆ. ಅಷ್ಟಕ್ಕೂ ಭಾರತದ ಅದ್ಭುತಗಳಲ್ಲಿ ನಮ್ಮ ಕರ್ನಾಟಕದ ಯಾವೆಲ್ಲಾ ಸ್ಥಳವು ಸೇರ್ಪಡೆಯಾಗಿದೆ ಎಂಬುದನ್ನು ತಿಳಿಯಿರಿ.
ಶ್ರವಣಬೆಳಗೊಳದಲ್ಲಿ ಏಕಶಿಲಾ ಗೋಮಟೇಶ್ವರ
ಕರ್ನಾಟಕದ ಶ್ರವಣಬೆಳಗೊಳವು ಭಾರತದ ಅದ್ಭುತಗಳಲ್ಲಿ ಒಂದಾಗಿದೆ. ಏಕ ಶಿಲಾ ಗೊಮ್ಮಟೇಶ್ವರವು ಸುಮಾರು 57 ಅಡಿ ಎತ್ತರದಲ್ಲಿರುವ ದೈತ್ಯಾಕಾರದ ಒಂದು ಪ್ರತಿಮೆ ಆಗಿದೆ. ಈ ಅದ್ಭುತವಾಗಿರುವ ಪ್ರತಿಮೆಯನ್ನು ಗಂಗಾರಮಂತ್ರಿ ಆಗಿದ್ದ ಚಾಮುಂಡರಾಯ ಕೆತ್ತಿಸಿದ್ದಾರೆ ಎನ್ನಲಾಗಿದೆ. ಇಲ್ಲಿಯ ವಿಶೇಷತೆ ಏನೆಂದರೆ,ಇಲ್ಲಿ 12 ವರ್ಷಕ್ಕೊಮ್ಮೆ ಈ ಪ್ರತಿಮೆಗೆ ಮಹಾ ಮಸ್ತಕಾಭಿಷೇಕವನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಈ ಸ್ಥಳಕ್ಕೆ ಲಕ್ಷಾಂತರ ಜನರು ಬಂದು ದರ್ಶನ ಪಡೆಯುತ್ತಾರೆ. ಬೆಂಗಳೂರಿನಿಂದ 160 ಕಿ.ಮೀ ಮತ್ತು ಮೈಸೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಈ ಶ್ರವಣಬೆಳಗೊಳವು ಜೈನ ಧರ್ಮದ ಜನರಿಗೆ ಅತ್ಯಂತ ಪವಿತ್ರವಾದ ಧಾರ್ಮಿಕ ಕೇಂದ್ರವಾಗಿದೆ.
Table of Contents
ಹಂಪಿ – ವಿಶ್ವ ಪ್ರಸಿದ್ಧ ಐತಿಹಾಸಿಕ ತಾಣ
ಭಾರತದ ಅದ್ಭುತಗಳಲ್ಲಿ ನಮ್ಮ ಕರ್ನಾಟಕದ ಐತಿಹಾಸಿಕ ತಾಣ ಹಂಪಿ ಕೂಡ ಸೇರಿದೆ. ಹಂಪಿಯ ಸೊಬಗನ್ನು ನೋಡಲು ಪ್ರಪಂಚದಾದ್ಯಂತ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ತಾಣವು ರಾಮಾಯಣದ ಜೊತೆ ತಳುಕನ್ನು ಹಾಕಿಕೊಂಡಿದೆ. ಇಲ್ಲಿಯೇ ಶ್ರೀರಾಮ ಮತ್ತು ಸೀತೆಯರು ವಾಸವಾಗಿದ್ದರು ಎಂಬ ಪುರಾಣ ಇದೆ. ಅಷ್ಟೇ ಅಲ್ಲ, ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯು ವಿಜಯನಗರ ಕಾಲದ ಅವಶೇಷಗಳು ಮತ್ತು ಸ್ಮಾರಕಗಳನ್ನು ಸುಮಾರು 26 ಚದರ ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿರುವುದನ್ನು ಕಾಣಬಹುದು. ಇಲ್ಲಿ ಹಲವಾರು ಆಕರ್ಷಣೆಗಳಿವೆ. ಕರ್ನಾಟಕಕ್ಕೆ ಬರುವ ಪ್ರವಾಸಿಗರು ಇವುಗಳನ್ನು ತಪ್ಪದೇ ಅನ್ವೇಷಿಸಲೇಬೇಕು!
ತಾಜ್ ಮಹಲ್ – ಪ್ರೀತಿಯ ಅಮರ ಸಂಕೇತ
ತಾಜ್ ಮಹಲ್ ಭಾರತದ ಅದ್ಭುತ ಸ್ಮಾರಕ ಮಾತ್ರವಲ್ಲ, ಇದು ಪ್ರಪಂಚದ ಅದ್ಭುತಗಳಲ್ಲಿಯೇ ಒಂದು. ಪ್ರೀತಿಯ ಸಂಕೇತವಾದ ತಾಜ್ ಮಹಲ್ ಇತಿಹಾಸ ಪ್ರಿಯರ ಮೆಚ್ಚಿನ ತಾಣ. 17ನೇ ಶತಮಾನದಲ್ಲಿ ಷಹಜಹಾನ್ ತನ್ನ ಪ್ರಿಯ ಪತ್ನಿ ಮುಮ್ತಾಜ್‌ಗಾಗಿ ನಿರ್ಮಿಸಿದ ಈ ಸ್ಮಾರಕ ಪ್ರೀತಿಯ ಶಾಶ್ವತ ಸಾಕ್ಷಿಯಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿರುವ ಇದು ಇಡೀ ವಿಶ್ವದ ಹೆಮ್ಮೆ. ಈ ಅದ್ಭುತವನ್ನು ಕಾಣಲು ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲ, ವಿದೇಶದಿಂದಲೂ ಇತಿಹಾಸಕಾರರು ಮತ್ತು ಸಂದರ್ಶಕರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ.
ಅಮೃತಸರದ ಗೋಲ್ಡನ್ ಟೆಂಪಲ್ – ಚಿನ್ನದ ದೇವಾಲಯ
ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಸಿಖ್‌ರ ಪವಿತ್ರ ಧಾರ್ಮಿಕ ಕ್ಷೇತ್ರ. ಜನಪ್ರಿಯವಾಗಿ ಗೋಲ್ಡನ್ ಟೆಂಪಲ್ ಎಂದು ಕರೆಯಲ್ಪಡುವ ಈ ಆಲಯದ ನಿಜವಾದ ಹೆಸರು ಶ್ರೀ ಹರ್ಮಂದಿರ್ ಸಾಹಿಬ್. 1585 ರಿಂದ 1604 ರ ಅವಧಿಯಲ್ಲಿ ನೀರಿನ ಕೊಳದ ಸುತ್ತಲೂ ನಿರ್ಮಿಸಲಾದ ಈ ದೇವಾಲಯ ಭಾರತದ ಅದ್ಭುತಗಳಲ್ಲಿ ಒಂದು. ಅಷ್ಟೇ ಅಲ್ಲ, ಇದು ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಪಂಜಾಬ್‌ನ ಈ ಪುಣ್ಯಕ್ಷೇತ್ರಕ್ಕೆ ಪ್ರತಿ ವರ್ಷ ಲಕ್ಷಾಂತರ ಜನರು ದರ್ಶನಕ್ಕಾಗಿ ಬರುತ್ತಾರೆ. ಇಲ್ಲಿಯ ಶಾಂತಿ ಮತ್ತು ಭಕ್ತಿಯ ವಾತಾವರಣ ಎಲ್ಲರನ್ನೂ ಆಕರ್ಷಿಸುತ್ತದೆ.
ಕೋನಾರ್ಕ್ ದೇವಾಲಯ – ಸೂರ್ಯನ ರಥ
ಒಡಿಶಾದಲ್ಲಿರುವ ಕೋನಾರ್ಕ್ ದೇವಾಲಯವು ಸೂರ್ಯ ದೇವನಿಗೆ ಮುಡಿಪಾದ ಅದ್ಭುತ ದೇವಾಲಯ. ಈ ಆಲಯವು ಸಂಕೀರ್ಣವಾದ ಅವಶೇಷಗಳನ್ನು ಹೊಂದಿದ್ದು, ಸುಮಾರು 100 ಅಡಿ ಎತ್ತರದ ಭವ್ಯ ರಥದ ನೋಟವನ್ನು ಹೊಂದಿದೆ. ಭಾರತದ ಅದ್ಭುತಗಳಲ್ಲಿ ಕೋನಾರ್ಕ್ ದೇವಾಲಯವು ಒಂದು. ಇಲ್ಲಿ ನೋಡತಕ್ಕಂತಹ ವಿಶೇಷತೆ ಏನೆಂದರೆ, ಸೂಕ್ಷ್ಮವಾದ ಕೆತ್ತನೆಗಳಿಂದ ಅಲಂಕೃತಗೊಂಡಿರುವ ಚಕ್ರಗಳು, ಕುದುರೆಗಳು, ಸಿಂಹಗಳು ಮತ್ತು ಕಾಮಪ್ರಚೋದಕ ಶಿಲ್ಪಗಳು. ಈ ಪ್ರಾಚೀನ ವಾಸ್ತುಶಿಲ್ಪದ ಸೊಬಗು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ಖಜುರಾಹೊ – ಶಿಲ್ಪಗಳ ನಗರಿ
ಪ್ರಪಂಚದ ಪ್ರವಾಸಿಗರನ್ನು ಆಕರ್ಷಿಸುವ ಖಜುರಾಹೊ ಭಾರತದ ಅದ್ಭುತಗಳಲ್ಲಿ ಒಂದು. ಇದು ಮಧ್ಯಪ್ರದೇಶದ ಛತಾರ್ಪುರ್ ಜಿಲ್ಲೆಯಲ್ಲಿದೆ. ಖಜುರಾಹೊ ತನ್ನ ಕಾಮಪ್ರಚೋದಕ ಶಿಲ್ಪಗಳಿಂದ ವಿಶ್ವಪ್ರಸಿದ್ಧವಾಗಿದೆ. ಇದನ್ನು 885 ರಿಂದ 1000 ರ ನಡುವೆ ಚಂದೇಲಾ ರಾಜವಂಶವು ನಿರ್ಮಿಸಿತು. ಹಿಂದೂ ಮತ್ತು ಜೈನ ದೇವಾಲಯಗಳ ಗುಂಪಾಗಿರುವ ಈ ಖಜುರಾಹೊ ವಿಶ್ವ ಪರಂಪರೆಯ ತಾಣವಾಗಿದೆ. ಕಣ್ಣು ಸೆಳೆಯುವ ನಗರಾ ಶೈಲಿಯ ವಾಸ್ತುಶಿಲ್ಪಗಳು ಇತಿಹಾಸಕಾರರನ್ನು ಮತ್ತು ಕಲಾ ಪ್ರೇಮಿಗಳನ್ನು ಇಂದಿಗೂ ಆಕರ್ಷಿಸುತ್ತಿವೆ. ಈ ಪ್ರಾಚೀನ ಶಿಲ್ಪಕಲೆ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ಸಾಕ್ಷಿ.
ಏಕತೆಯ ಪ್ರತಿಮೆ – ವಿಶ್ವದ ಅತಿ ಎತ್ತರದ ಪ್ರತಿಮೆ
ಗುಜರಾತ್‌ನ ಏಕತೆಯ ಪ್ರತಿಮೆಯುವಿಶ್ವದಲ್ಲೇ ಅತಿ ಎತ್ತರವಾದ ಪ್ರತಿಮೆ! ಭಾರತದ ಕಬ್ಬಿಣದ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರಿಗೆ ಸಮರ್ಪಿಸಲಾದ ಈ ಪ್ರತಿಮೆಯು ಭಾರತದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಸುಮಾರು 3,000 ಕೋಟಿ ರೂಪಾಯಿ ವೆಚ್ಚ ಮಾಡಿ ಈ ಭವ್ಯ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಇಲ್ಲಿ ಸಾರ್ವಜನಿಕರಿಗಾಗಿ ಮ್ಯೂಸಿಯಂ ಮತ್ತು ಗ್ಯಾಲರಿಯನ್ನು ತೆರೆಯಲಾಗಿದೆ. ಹಾಗೆಯೇ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಾಧನೆಗಳನ್ನು ಪ್ರದರ್ಶಿಸುವ ವಿಶೇಷ ಮ್ಯೂಸಿಯಂ ಇದೆ. ದೇಶ-ವಿದೇಶದ ಲಕ್ಷಾಂತರ ಪ್ರವಾಸಿಗರು ಈ ಅದ್ಭುತವನ್ನು ನೋಡಲು ಬರುತ್ತಾರೆ.
ಈ ಎಲ್ಲಾ ಅದ್ಭುತಗಳನ್ನು ನೋಡಿದ ನಂತರ ನನ್ನ ಫೇವರೇಟ್ ಯಾವುದು ಗೊತ್ತಾ? ಕರ್ನಾಟಕದ ಹಂಪಿ! ಯಾಕೆಂದರೆ ಇಲ್ಲಿ ರಾಮಾಯಣದ ಕಿಶ್ಕಿಂಧೆ ಇದೆ ಅಂತಾರಲ್ಲಾ? 2025ರಲ್ಲಿ ನಾನು ಹೋಗಿ ವೀಡಿಯೋ ತಗೊಂಡಿದ್ದೇನೆ – ನೀವು ಯಾವ ಅದ್ಭುತ ನೋಡಲು ಪ್ಲ್ಯಾನ್ ಮಾಡ್ತೀರಾ?
ಪ್ರಪಂಚದ ಏಳು ಅದ್ಭುತಗಳು ನೀವು ನೋಡಿರುತ್ತೀರಿ ಆದರೆ ನಮ್ಮ ಕರ್ನಾಟಕದಲ್ಲಿರುವ ಏಳು ಅದ್ಭುತಗಳನ್ನು ನಿಮ್ಮ ಜೀವಿತಾವಧಿಯಲ್ಲಿ ನೋಡಲೇಬೇಕು ನೀವೊಬ್ರೆ ಅಲ್ಲ ನಿಮ್ಮ ಕುಟುಂಬದ ಸಮೇತ ನೋಡಬೇಕು ಅವುಗಳು ಯಾವುದೆಂದರೆ.
ಹಿರೇಬೆಣಕಲ್
ಕರ್ನಾಟಕದ ಏಳು ಅದ್ಭುತಗಳು
ಹಿರೇಬೆಣಕಲ್ ಒಂದು ಅದ್ಭುತವಾಗಿದೆ ಈ ಸ್ಥಳದಲ್ಲಿ ಬೃಹತ್ ಕಲ್ಲಿನ ಶಿಲೆಗಳ ತಾಣವಾಗಿದೆ. ಈ ಸ್ಥಳವನ್ನು ಕ್ರಿಸ್ತಪೂರ್ವ 800 ರಿಂದ ಕ್ರಿಸ್ತಪೂರ್ವ 200 ರ ಅವಧಿಯಲ್ಲಿ ನಿರ್ಮಾಣ ಮಾಡಲಾಯಿತು.
ಈ ಸ್ಥಳವು ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿದೆ. ಈ ಸ್ಥಳವು ಗಂಗಾವತಿ ನಗರದಿಂದ 10 ಕಿ.ಮೀ ಇದೆ ಮತ್ತು ಕೊಪ್ಪಳ ನಗರದಿಂದ 43 ಕಿಲೋಮೀಟರ್ ದೂರವಿದೆ. ಈ ಹಿರೇ ಬಣಕಲ್ ನಲ್ಲಿ ಸುಮಾರು 300 ರಿಂದ 400 ಕ್ಕು ಹೆಚ್ಚು ಶಿಲಾಕೃತಿಯಲ್ಲಿರುವ ಗೋರಿಗಳಿವೆ. ಈ ಸ್ಮಾರಕಗಳನ್ನು ನವಶೀಲಾಯುಗ ಹಾಗೂ ಕಬ್ಬಿಣದ ಶಿಲಾಯುಗದ ನಡುವಿನ ಪರಿವರ್ತನೆಯ ಕಾಲವೆಂದು ಇತಿಹಾಸಕಾರರು ಹೇಳಿದ್ದಾರೆ.
ಈ ಸ್ಥಳವನ್ನು ಏಳು ಬೆಟ್ಟಗಳ ಜಾಗವೆಂದು ಸಹ ಕರೆಯುತ್ತಾರೆ.
ಈ ಸ್ಥಳ ಇರುವ ಗುಡ್ಡದ ಹೆಸರು ಮೋರ್ಯಾರ್ ಗುಡ್ಡ ಎಂದು ಸಹ ಕರೆಯುತ್ತಾರೆ.
1955 ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣೆ ಧಾರವಾಡ ವೃತ್ತದ ನಿರ್ವಹಣೆಯ ಅಡಿಯಲ್ಲಿದೆ.
26 ಫೆಬ್ರವರಿ 2023 ರಂದು ಈ ತಾಣವನ್ನು ಕರ್ನಾಟಕದ ಅದ್ಭುತಗಳಲ್ಲಿ ಒಂದು ಎಂದು ಕರ್ನಾಟಕ ಸರ್ಕಾರ ಸೇರ್ಪಡೆ ಮಾಡಿಕೊಂಡಿದೆ.
ಕರ್ನಾಟಕದ ಏಳು ಅದ್ಭುತಗಳು ಇದರಲ್ಲಿ ಹಂಪಿ ಒಂದು ಆಗಿದೆ . ಅಲ್ಲದೆ ಯುನೆಸ್ಕೋ ವಿಶ್ವ ಪಾರಂಪರೆ ತಾಣಗಳಲ್ಲಿ ಒಂದಾಗಿದೆ. ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಂದು ಐತಿಹಾಸಿಕ ಸ್ಥಳವಾಗಿದೆ. ಹಂಪಿಯು 1336 ರಿಂದ 1565 ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು.
ಹಂಪಿಯ ಮೊದಲ ಹೆಸರು “ಪಂಪಾ” ಎಂದಾಗಿತ್ತು. ಇದನ್ನು ವರ್ಷಗಳು ಕಳೆದಂತೆ ವಿಜಯನಗರ ಮತ್ತು ವಿರೂಪಾಕ್ಷಪುರ ಎಂದು ಕರೆತೊಡಗಿದರು. ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ಮಾರುಕಟ್ಟೆಯಲ್ಲಿ ವಜ್ರಗಳನ್ನು ಸೇರಿನ ಅಳತೆಯಲ್ಲಿ ಮಾರಾಟ ಮಾಡುತ್ತಿದ್ದರು.
ಹಂಪಿಯು ವಿಶ್ವದ ಅತಿ ದೊಡ್ಡ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ
ಭೇಟಿ ಮಾಡಲು ಸೂಕ್ತ ಸಮಯ : ಅಕ್ಟೋಬರ್ ರಿಂದ ಫೆಬ್ರವರಿ ವರೆಗೆ ಹಂಪಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ.ಈ ಸಮಯದಲ್ಲಿ ಹವಾಮಾನ ತಂಪಾಗಿರುತ್ತದೆ ಮತ್ತು ವೀಕ್ಷಣೆಗೆ ಅನುಕೂಲ.
ಗೋಲ್ ಗುಂಬಜ್
ಗೋಲ್ ಗುಂಬಜ್ ಇದು ಕರ್ನಾಟಕದ ಬಿಜಾಪುರ ಜಿಲ್ಲೆ (ಈಗಿನ ವಿಜಯಪುರ ನಗರದಲ್ಲಿ ಇರುವ) ಪ್ರಸಿದ್ಧ ಸ್ಮಾರಕವಾಗಿದೆ. ಇದರಲ್ಲಿ ನಿರ್ಮಾಣವು ಕ್ರಿಸ್ತಶಕ 1626 ರಿಂದ ಕ್ರಿಸ್ತಶಕ 1656 ರಲ್ಲಿ ಈ ಸ್ಮಾರಕ ನಿರ್ಮಾಣವಾಯಿತು. ಗೋಲ್ ಗುಂಬಜ್ ಅನ್ನು ಪ್ರಸಿದ್ಧ ಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ ಇವರಿಬ್ಬರೂ ನಿರ್ಮಿಸಿದ್ದಾರೆ.
ಗೋಲ್ ಗುಂಬಜ್ ಅಂದರೆ ಗೋಲಾಕಾರದ ಗುಮ್ಮಟ ಎಂದರ್ಥ ಇದನ್ನುಮಹಮ್ಮದ್ ಆದಿಲ್ ಶಾ ತನ್ನ ಸಮಾಧಿ ಹಾಗೂ ಸ್ಮಾರಕವಾಗಿ ನಿರ್ಮಿಸಿಕೊಂಡನು. ಗೋಲ್ ಗುಂಬಜ್ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮಾನವ ನಿರ್ಮಿತ ಗುಮ್ಮಟವಾಗಿದೆ. ಗೋಲ್ ಗುಂಬಜ್ ನಲ್ಲಿ ಒಂದು ಬಾರಿ ಹೇಳಿದ ಮಾತು ಪ್ರತಿಧ್ವನಿಯಾಗಿ 7 ಬಾರಿ ನಮಗೆ ಕೇಳಿಸುತ್ತದೆ.
ಇದನ್ನು ಕರ್ನಾಟಕದ ತಾಜ್ಮಹಲ್ ಎಂದು ಸಹ ಕರೆಯುತ್ತಾರೆ. ಈ ಸ್ಮಾರಕವು ಇಸ್ಲಾಮಿಕ್ ಶೈಲಿಯನ್ನು ಪ್ರತಿನಿಧಿಸುತ್ತದೆ.
ಈ ಸ್ಥಳಕ್ಕೆ ಭೇಟಿ ನೀಡಲು ಸರಿಯಾದ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳಾಗಿದೆ.
ಗೊಮ್ಮಟೇಶ್ವರ (ಶ್ರವಣಬೆಳಗೊಳ)
ಗೊಮ್ಮಟೇಶ್ವರ ಹಾಸನ ಜಿಲ್ಲೆಯಲ್ಲಿರುವ ಪ್ರಸಿದ್ಧ ಜೈನರ ಧಾರ್ಮಿಕ ಕ್ಷೇತ್ರವಾಗಿದೆ ಇದು ಭಾರತದ ಅತ್ಯಂತ ಹಳೆಯ ಮತ್ತು ಪವಿತ್ರ ಜೈನ ಧರ್ಮದ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಬಾಹುಬಲಿಯ ಮೂರ್ತಿ ಇದೆ. ಇದರ ನಿರ್ಮಾಣವು ಕ್ರಿಸ್ತಶಕ 981 ರಲ್ಲಿ ಗಂಗ ರಾಜ್ಯದ ಮಂತ್ರಿಯಾದ ಚಾವುಂಡರಾಯ ಇದನ್ನು ನಿರ್ಮಿಸಿದನು.
ಗೊಮ್ಮಟೇಶ್ವರದ ಎತ್ತರ 58 ಅಡಿ ಯ ಏಕಶಿಲಾ ಮೂರ್ತಿಯಾಗಿದೆ. ಇಲ್ಲಿ 12 ವರ್ಷಗಳಿಗೊಮ್ಮೆ ಮಹಾಮಸ್ತಾಭಿಷೇಕ ಮಾಡುತ್ತಾರೆ. ಮುಂದೆ 2030 ನೇ ವರ್ಷದಲ್ಲಿ ಮಹಾಮಸ್ತಭಿಷೇಕ ನಡೆಯುತ್ತದೆ. ಈ ಗೊಮ್ಮಟೇಶ್ವರ ಪ್ರತಿಮೆ ವಿಂಧ್ಯಗಿರಿ ಬೆಟ್ಟದ ಮೇಲೆ ನೆಲೆಸಿದೆ.
ಇದನ್ನು ಒಂದೇ ಕಲ್ಲಿನಿಂದ ನಿರ್ಮಿಸಲಾಗಿದೆ.
ಈ ಪ್ರತಿಮೆ ಪ್ರಪಂಚದ ಜನರನ್ನು ತನ್ನ ಕಡೆ ಸೆಳೆಯುತ್ತದೆ. ಗೊಮ್ಮಟೇಶ್ವರ ಕರ್ನಾಟಕದ ಏಳು ಅದ್ಭುತಗಳು ಇದರಲ್ಲಿ ಒಂದಾಗಿದೆ.
ಮೈಸೂರು ಅರಮನೆ
ಕರ್ನಾಟಕದಲ್ಲಿ ಹಲವು ಅರೆಮನೆ ಗಳಿವೆ ಆದರೆ ನಮ್ಮ ಮೈಸೂರು ಅರಮನೆ ನಮ್ಮ ರಾಜ್ಯದ ಐತಿಹಾಸಿಕ ,ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಬಗ್ಗೆ ಹೆಗ್ಗಳಿಕೆಯನ್ನು ಪ್ರತಿಬಿಂಬಿಸುತ್ತದೆ.
ಮೈಸೂರು ನಗರದ ಹೃದಯವಾಗಿರುವ ಈ ಅರಮನೆಯು ವಿಶ್ವಪ್ರಸಿದ್ಧ ಆಕರ್ಷಣೆಯ ತಾಣವಾಗಿದೆ ಮತ್ತು ಮೈಸೂರು ಅರಮನೆಯನ್ನು “ಅಂಬಾ ವಿಲಾಸ್” ಎಂದು ಸಹ ಕರೆಯುತ್ತಾರೆ. ಇದು ದೇಶದಲ್ಲಿ ಅತ್ಯಂತ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣವಾಗಿದೆ ಈ ಅರಮನೆಯನ್ನು “ಇಂಡೋ-ಸಾರ್ಸೆನಿಕ್” ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಿಸಲಾಗಿದೆ ಈ ಅರಮನೆಯು ಒಡೆಯರ್ ರಾಜವಂಶದ ಅಧಿಕೃತ ನಿವಾಸವಾಗಿತ್ತು.ಈ ಅರಮನೆ ರಾತ್ರಿಯ ಬೆಳಕಿನಲ್ಲಿ ಕಣ್ಣಿಗೆ ತೊಟ್ಟುವಂತೆ ಕಾಣುತ್ತದೆ.
ಈ ಅರಮನೆಯು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ.
ಭೇಟಿ ನೀಡುವ ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30 ವರೆಗೆ ಇರುತ್ತದೆ.
ಅರಮನೆಯಲ್ಲಿ ಕ್ಯಾಮರಾಗಳಿಗೆ ಅನುಮತಿ ಕೊಟ್ಟರೆ ಫೋಟೋ ತೆಗೆಯುವುದನ್ನು ಮರೆಯಬೇಡಿ.
ಮೈಸೂರು ಅರಮನೆ ಇತಿಹಾಸ ತಿಳಿಯಲು ಅಲ್ಲಿನ ಗೈಡ್ಸ್ ಗಳ ಜೊತೆ ಹೋಗೋದು ಉತ್ತಮ.
ಇದರ ಹತ್ತಿರವೇ ಉಳಿದುಕೊಳ್ಳಲು ಹೋಟೆಲ್ ಗಳು ಮತ್ತು ಊಟ ಮಾಡುವುದಕ್ಕೆ ಖಾನಾವಳಿಗಳಿವೆ.
ಒಂದು ಬಾರಿ ಈ ಅರಮನೆಯನ್ನು ಭೇಟಿ ಮಾಡುವುದರಿಂದ ನಮಗೆ ನಮ್ಮ ರಾಜ್ಯದ ವೈಭವವನ್ನು ಕಾಣುತ್ತೇವೆ.
ಜೋಗ ಜಲಪಾತ
ಕರ್ನಾಟಕದ 7 ಅದ್ಭುತಗಳು ಇದರಲ್ಲಿ ಜೋಗ ಜಲಪಾತ ಒಂದಾಗಿದೆ. ಜೋಗ ಜಲಪಾತ ಭಾರತದ ಎರಡನೇ ಅತ್ಯಂತ ಎತ್ತರವಾದ ಜಲಪಾತವಾಗಿದೆ. ಇದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಈ ಜಲಪಾತ ಭಾರತದ ಪ್ರಕೃತಿ ಸೌಂದರ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಸ್ಥಳೀಯ ಜನರು ಈ ಜಲಪಾತವನ್ನು “ಗೇರುಸೊಪ್ಪಿನ ಜಲಪಾತ” ಅಥವಾ “ಜೋಗದ ಗುಡ್ಡೆ” ಎಂದು ಸಹ ಕರೆಯುತ್ತಾರೆ.
ಈ ಜಲಪಾತದ ವೈಶಿಷ್ಟತೆ
ಈ ಜಲಪಾತವನ್ನು ಶರಾವತಿ ನದಿ ರಚನೆ ಮಾಡಿದೆ ಈ ಜಲಪಾತ 830 ಅಡಿ ಎತ್ತರದಲ್ಲಿ ನಾಲ್ಕು ಭಾಗವಾಗಿ ನೀರನ್ನು ಬೀಳಿಸುತ್ತದೆ.
ರಾಜಾ -ನೇರವಾಗಿ ಬೀಳುವ ಮುಖ್ಯ ಧಾರೆ
ರಾಣಿ – ಸುಂದರವಾಗಿ ಹರಿಯುವ ಧಾರೆ
ರೋರರ್ – ಹೆಚ್ಚು ಶಬ್ದ ಮಾಡಿ ಹರಿಯುವ ಧಾರೆ
ರಾಕೇಟ್ – ವೇಗವಾಗಿ ಹರಿಯುವ ಧಾರೆ
ಮಳೆಗಾಲದಲ್ಲಿ ಇದು ಒಂದಾಗಿ ಕೂಡಿ ಹರಿಯುವ ದೃಶ್ಯ ಎಲ್ಲರ ಕಣ್ಣು ಕಂಗೊಳಿಸುತ್ತದೆ.
ಹತ್ತಿರದ ಪ್ರವಾಸಿ ತಾಣಗಳು
ಸಾಗರ ಪಟ್ಟಣ
ಹೊನ್ನಾವರ
ಶಿವಮೊಗ್ಗ ನೈಸರ್ಗಿಕ ಉದ್ಯಾನವನ
ಲಿಂಗನಮಕ್ಕಿ ಅಣೆಕಟ್ಟು
ಕೊಡಚಾದ್ರಿ ಬೆಟ್ಟ
ಸಲಹೆಗಳು
ಮಳೆಗಾಲದಲ್ಲಿ ಸುರಕ್ಷಿತವಾಗಿ ಹೋಗಿ ಮತ್ತು ಕಂದಕ ಬಳಿ ಹೋಗಬೇಡಿ
ಬೆಳ್ಳಂ ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಜಲಪಾತ ಆಕರ್ಷಕವಾಗಿ ಕಾಣುತ್ತದೆ.
ಫೋಟೋಶೂಟ್ ಗೆ ಕ್ಯಾಮೆರಾ ತೆಗೆದುಕೊಂಡು ಹೋಗೋದು ಮರೆಯಬೇಡಿ.
ಊಟಕ್ಕೆ ಹತ್ತಿರದಲ್ಲಿರುವ ಅಕ್ಕಿ ರೊಟ್ಟಿ ಮತ್ತು ನೀರ್ ದೋಸೆ ತುಂಬ ರುಚಿ ಇರುತ್ತದೆ ಮರೆಯಬೇಡಿ.
ನೇತ್ರಾಣಿ ದ್ವೀಪ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಸಮೀಪದಲ್ಲಿ ಈ ನೇತ್ರಾವತಿ ದ್ವೀಪ ಇದೆ. ಇದ್ವಪವನ್ನು “ಪಿಜನ್ ಐಲ್ಯಾಂಡ್” ( ಪಾರಿವಾಳಗಳ ದ್ವೀಪ ) ಎಂದು ಕರೆಯುತ್ತಾರೆ. ಭಾರತದಲ್ಲಿ ಈ ದ್ವೀಪವು ಸ್ಕೊಬಾ ಡೈವಿಂಗೆ ಸರಿಯಾದ ಸ್ಥಳವಾಗಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಂತರ ನೇತ್ರಾಣಿ ದ್ವೀಪವು ಎರಡನೆಯ ಸ್ಥಾನದಲ್ಲಿದೆ. ಇದು ನೀಲಿ ಸಮುದ್ರದ ಮಧ್ಯಭಾಗದಲ್ಲಿ ಕಣ್ಣಿನ ಆಕರದಲ್ಲಿ ಇರುವುದರಿಂದ ಇದನ್ನು ನೇತ್ರಾಣಿ ದ್ವೀಪ ಎಂದು ಕರೆಯಲಾಗಿದೆ.
ಇಲ್ಲಿ ಪ್ರವಾಸಿಗರು ಸ್ಕೊಬಾ ಡೈವಿಂಗ್ ಮಾಡಬಹುದು
ಬೋಟ್ ರೈಡಿಂಗ್ ಮಾಡಬಹುದು
ನೀರಿನ ಒಳಗೆ ವಿವಿಧ ಬಣ್ಣದ ರೀತಿಯ ಮೀನುಗಳನ್ನು ಕಾಣಬಹುದು
ಈ ದ್ವಿಪದ ವಿಸ್ತೀರ್ಣ 500 ಮೀಟರ್ ಇದೆ
ಭೇಟಿ ಮಾಡಲು ಸೂಕ್ತ ಸಮಯ
ನೇತ್ರಾಣಿ ದ್ವೀಪಕ್ಕೆ ಭೇಟಿ ಮಾಡುವ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಉತ್ತಮ.ಮಳೆಗಾಲದಲ್ಲಿ ಅಂದರೆ ಜೂನ್ ಇಂದ ಸೆಪ್ಟೆಂಬರ್ ವರೆಗೆ ಈ ದ್ವಿಪಕ್ಕೆ ಪ್ರಯಾಣ ಮಾಡುವುದು ನಿಧಿಸುತ್ತಾರೆ ಏಕೆಂದರೆ ಸಮುದ್ರದ ಅಲೆಗಳು ಹೆಚ್ಚು ಆಗುವುದರಿಂದ
ಸಲಹೆ
ಪ್ರವಾಸಿಗರು ಸ್ಕೊಬಾ ಡೈವಿಂಗ್ ಮಾಡುವವರು ಅಡ್ವಾನ್ಸ್ ಬುಕಿಂಗ್ ಮಾಡಿಕೊಳ್ಳಬೇಕು.
ಪ್ರವಾಸಿಗಳು ಸುರಕ್ಷಿತ ಸಲಕರಣೆಗಳನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು.
ಊಟಕ್ಕೆ ಆಹಾರ ಮತ್ತು ನೀರನ್ನು ಮುರುಡೇಶ್ವರ ದಲ್ಲೇ ಸಿದ್ದ ಮಾಡಿಕೊಂಡು ಹೋಗಬೇಕು ಏಕೆಂದರೆ ನೇತ್ರಾಣಿ ದ್ವೀಪದಲ್ಲಿ ಯಾವುದೇ ಸೌಲಭ್ಯಗಳಿಲ್ಲ.
ಫೋಟೋ ತೆಗೆದುಕೊಳ್ಳುವವರು ಮೊಬೈಲ್ ಗಳಿಗೆ ಮರೆಯದೆ ವಾಟರ್ ಪ್ರೂಫ್ ಕವರ್ ಗಳನ್ನು ಹಾಕಿಕೊಳ್ಳಬೇಕು
ಈ Blog ನಲ್ಲಿ ನಮ್ಮ ಕರ್ನಾಟಕದ ಏಳು ಅದ್ಭುತಗಳನ್ನು ನೀವು ತಿಳಿದುಕೊಂಡಿದ್ದೀರಾ ಹಾಗೆಯೇ ನಮ್ಮ ಪ್ರಪಂಚದ ಏಳು ಅದ್ಭುತಗಳನ್ನು ನೀವು ತಿಳಿದುಕೊಳ್ಳಬೇಕೆಂದರೆ ಈ ಲಿಂಕ್ ಅನ್ನು ಒತ್ತಿರಿ.
ಕರ್ನಾಟಕದ ಏಳು ಅದ್ಭುತಗಳು, ಕರ್ನಾಟಕದ ಏಳು ಅದ್ಭುತಗಳು, ಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳುಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳು,ಕರ್ನಾಟಕದ ಏಳು ಅದ್ಭುತಗಳುಕರ್ನಾಟಕದ ಏಳು ಅದ್ಭುತಗಳು ಕರ್ನಾಟಕದ ಏಳು ಅದ್ಭುತಗಳು ಕರ್ನಾಟಕದ ಏಳು ಕರ್ನಾಟಕದ ಏಳು ಅದ್ಭುತಗಳು ಕರ್ನಾಟಕದ ಏಳು ಅದ್ಭುತಗಳು ಏಳು ಅದ್ಭುತಗಳು ಕರ್ನಾಟಕದ ಏಳು ಅದ್ಭುತಗಳು
ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಚೋಳ ಮನೆತನವು ಪ್ರಾಚೀನ ಅರಸು ಮನೆತನಗಳಲ್ಲೊಂದಾಗಿದೆ. ಕ್ರಿ.ಶ. 3ನೇ ಶತಮಾನದಿಂದ ದಕ್ಷಿಣದಲ್ಲಿ ಆಳ್ವಿಕೆ ನಡೆಸಿರುವ ಚೇರ, ಪಾಂಡ್ಯ ಮತ್ತು ಚೋಳ ಮನೆತನಗಳ ಮಾಹಿತಿ ಅಶೋಕನ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಚೋಳ ಮನತನದ ರಾಜರ ವಂಶಾವಳಿಯನ್ನು ನಿರ್ದಿಷ್ಟವಾಗಿ ಗುರುತಿಸುವದು ಸಾಧ್ಯವಾಗಿಲ್ಲ. ಈ ಮನೆತನದ ಅರಸರುಗಳ ಹೆಸರು ಸಂಘಂ ಸಾಹಿತ್ಯದಲ್ಲಿದ್ದರೂ ಸಹ ಇತಿಹಾಸಕಾರರಲ್ಲಿ ಒಮ್ಮತ ಮೂಡಿಲ್ಲ ತಂಜಾವೂರಿನ ಚೋಳ ಮನೆತನ ಕ್ರಿ.ಶ. 9ನೇ ಶತಮಾನದಿಂದ 13ನೇ ಶತಮಾನದವರೆಗೆ ಆಳ್ವಿಕೆ ನಡೆಸಿದರು ಇವರ ಸಾಮ್ರಾಜ್ಯವು ಕೊರಮಂಡಲದಿಂದ ಪುದುಕೋಟೆಯವರೆಗೂ ಹಬ್ಬಿತ್ತು ಅಲ್ಲದೆ ಇಂದಿನ ಕರ್ನಾಟಕದ ಹಲವು ಭಾಗಗಳು ಚೋಳರ ಆಳ್ವಿಕೆಗೆ ಒಳಪಟ್ಟಿದ್ದವು. ಸಂಘಂ ಸಾಹಿತ್ಯದಲ್ಲಿ ಉಲ್ಲೇಖಿಸಿರುವಂತೆ ಚೋಳರ ಮೊದಲ ರಾಜಧಾನಿ ಉರೈಯೂರುಯಾಗಿತ್ತೆಂದು ಮತ್ತು ಕಾವೇರಿ ನದಿ ದಂಡೆ ಮೇಲಿರುವ ಕಾವೇರಿ ಪಟ್ಟಣಂ ಪ್ರಮುಖ ಪಟ್ಟಣವಾಗಿತ್ತೆಂದು ಗ್ರೀಕ್‌ನ ಅನಾಮಧೇಯ ಕೃತಿ ‘ಪೆರಿಪ್ಲಸ್ ಆಫ್ ಅರೆದಿರಿಯನ್‌ಸಿ’ದಿಂದ ತಿಳಿದು ಬರುತ್ತದೆ.
ಭಾರತೀಯ ಸಂಸ್ಕೃತಿಯನ್ನು ವಿದೇಶಗಳಲ್ಲಿ ಹರಡಿ ಚರಿತ್ರೆಯುದ್ದಕ್ಕೂ ಮೆರೆದಿರುವ ಚೋಳ ಸಾಮ್ರಾಜ್ಯ ನಿಜವಾಗಿಯೂ ಅವಿಸ್ಮರಣೀಯವೆಂದೇ ಹೇಳಬಹುದು. ತಮ್ಮ ವಿಜಯ ಪತಾಕೆಯನ್ನು ಕೇವಲ ಭಾರತದ ಮೇರೆಗಳಿಗಷ್ಟೇ ಸೀಮಿತವಾಗಿರಿಸದೆ. ಸೀಲೋನ, ಆಗ್ನೆಯ ಏಷ್ಯಾದ ರಾಜ್ಯಗಳು ಮತ್ತು 12 ಸಾವಿರ ಮಾಲ್ಡಿವ್ ದ್ವೀಪಗಳಲ್ಲಿಯೂ ಸಹ ಇವರ ಕೀರ್ತಿ ಹಬ್ಬಿತ್ತು.
ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ
ಚೋಳ ಸಂತತಿಯ ಇತಿಹಾಸ:
ಚೋಳ ಸಂತತಿಯ ಆಳ್ವಿಕೆಯ ಕಾಲವನ್ನು ನಿರ್ಧಿಷ್ಟವಾಗಿ ಗುರುತಿಸುವದು ಮತ್ತು ಮೂಲಪುರುಷನ ಬಗೆಗೆ ಅನೆ ಅನೇಕ ಭಿನ್ನಾಭಿಪ್ರಾಯಗಳನ್ನು ನಾವು ಕಾಣಬಹುದು ಸಂಘಂ ಸಾಹಿತ್ಯದಲ್ಲಿ ಅನೇಕ ಚೋಳ ರಾಜರ ಉಲ್ಲೇಖಗಳಿದ್ದರೂ ಸಹ ಸಂತತಿಯ ಬಗ್ಗೆ ನಿಖರ ಮಾಹಿತಿಗಳಿಲ್ಲ, ಆದಾಗ್ಯೂ ಪ್ರೊ. ಕೆ.ಕೆ. ಪಿಳ್ಳೆಯವರ ಅಭಿಪ್ರಾಯದಂತೆ ಸಂಘಂ ಸಾಹಿತ್ಯ ಚೋಳ ಸಂತತಿಯ ಬಗೆಗೆ ಮಾಹಿತಿ ನೀಡುವಲ್ಲಿ ನಮಗೆ ಸಹಾಯಕಾರಿಯಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಅದರನ್ವಯ ಇಳಿಯಾನ್ ಚೋಳ ಎಂಬುವವನು ಸಂಘಂ ಕಾಲದ ಚೋಳವಂಶದ ಮೂಲ ಪುರುಷ ಎಂದು ನಂಬಲಾಗಿದೆ ಮತ್ತು ಚೋಳರ ಪ್ರಸಿದ್ಧ ಅರಸ. ಕರಿಕಾಲ ಚೋಳನಾಗಿದ್ದು. ಈತನು ಕ್ರಿ.ಶ. ಆರನೇ ಶತಮಾನದಲ್ಲಿ ಆಳ್ವಿಕೆ ನಡೆಸಿದನೆಂದು ಪ್ರೊ. ಕೆ.ಎ. ನೀಲಕಂಠಶಾಸ್ತ್ರಿಯವರು ಅಭಿಪ್ರಾಯ ಪಡುತ್ತಾರೆ.
ಇಳಿಯಾನ್ ಚೋಳ:
ಸಂಘಂ ಕಾಲದಲ್ಲಿ ಆಳ್ವಿಕೆ ನಡೆಸಿರುವ ಮತ್ತು ಅಂದಿನ ವಿಫುಲ ಸಾಹಿತ್ಯ ರಚನೆಗೆ ಹೆಚ್ಚಿನ ಪ್ರೋತ್ಸಾಹ ನೀಡಿರುವ ಚೇರ, ಚೋಳ, ಮತ್ತು ಪಾಂಡ್ಯ ಮನೆತನಗಳಲ್ಲಿ ಒಂದಾದ ಚೋಳ ಸಾಮ್ರಾಜ್ಯದ ಮೂಲ ಪುರುಷ ಇಚ್ಛೆಯಾನ್ ಚೋಳ ಎಂಬುದಾಗಿ ಐತಿಹ್ಯಗಳಿವೆ. ಈತನು ಕ್ರಿ.ಶ. ಒಂದನೆ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದು. ಉರೈಯೂರು ಅವನ ರಾಜಧಾನಿಯಾಗಿತ್ತೆಂದು, ಸಂಘಂ ಸಾಹಿತ್ಯವಲ್ಲದೆ ಅನಾಮಧೆಯ ಗ್ರಂಥವಾದ “ಪೆರಿಪ್ಲಸ್ ಆಪ್ ಅರೆದ್ರಿಯನ್ ಸಿ” ಎಂಬ ಗ್ರಂಥದಲ್ಲಿ ರಾಜಧಾನಿ ಉರೈಯೂರ ಬಗ್ಗೆ ಉಲ್ಲೇಖ ಬರುತ್ತದೆ. ಈತನ ನಂತರ ಚೋಳ ವಂಶದ ಅರಸರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವದಿಲ್ಲ. ಆದರೆ ಅಂದಿನ ಪ್ರಸಿದ್ಧ ಅರಸನಾದ ಕರಿಕಾಲನು ಚೋಳರ ಅರಸನೆಂಬುವದು ಮಾತ್ರ ಅನೇಕ ಆಧಾರಗಳಿಂದ ತಿಳಿದು ಬರುತ್ತದೆ.
ಕರಿಕಾಲ ಚೋಳ:
ಈತನು ಚಿಕ್ಕವನಿರುವಾಗ ಬೆಂಕಿಯಲ್ಲಿ ಸಿಕ್ಕಿಕೊಂಡು ಆತನ ಕಾಲು ಸುಟ್ಟಿದ್ದರಿಂದ ಈತನಿಗೆ ಕರಿಕಾಲನೆಂದು ಹೆಸರು ಬಂದಿತೆಂಬುದು ಇತಿಹಾಸಕಾರರ ನಂಬಿಕೆಯಾಗಿದೆ. ತನ್ನ ಆಳ್ವಿಕೆಯ ಕಾಲದಲ್ಲಿ ಅನೇಕ ಯುದ್ಧಗಳಲ್ಲಿ ಜಯಗಳಿಸಿ ನೆರೆಹೊರೆ ರಾಜರನ್ನು ಸದೆಬಡೆದು ಪರಾಕ್ರಮಿ ಅರಸನೆಂದೇ ಪ್ರಖ್ಯಾತಿಯಾಗಿದ್ದಾನೆ. ಆತನು ಕೆಲವು ಕಾಲ ವೈರಿ ಸೈನ್ಯದ ಸೆನೆಯಲ್ಲಿದ್ದು ಉಪಾಯದಿಂದ ಹೊರಬಂದು ಸಿಂಹಾಸನ ಪಡೆದುಕೊಂಡಿದ್ದನು ಎಂದು ಹೇಳಲಾಗಿದೆ. ಕರಿಕಾಲನು ಪಾಂಡ್ಯ ಮತ್ತು ಚೇರೆ ಅರಸರನ್ನು “ವೆಣ್ಣೆ” ಕದನದಲ್ಲಿ ಸಂಪೂರ್ಣವಾಗಿ ಸೋಲಿಸಿ ಚೋಳರ ಪ್ರಭಾವನ್ನು ಹೆಚ್ಚಿಸಿದನು. ತದನಂತರ “ಬಾಹ್ಯಪರಂದಲೈ” ಎಂಬಲ್ಲಿ ನಡೆದ ಕದನದಲ್ಲಿ ವೈರಿ ಒಕ್ಕೂಟದ ಒಂಬತ್ತು ಜನ ಶತ್ರು ಅರಸರನ್ನು ಸದೆಬಡಿಯುವಲ್ಲಿ ಯಶಸ್ವಿಯಾದನು. ತಮಿಳು ಗ್ರಂಥವಾದ “ಶಿಲಪ್ಪಾದಿಕಾರಂ’ದಲ್ಲಿ ನಿರೂಪಿಸಿರುವಂತೆ ಕರಿಕಾಲನು ಹಿಮಾಲಯದ ಪರ್ವತದವರೆಗೆ ತನ್ನ ದಿಗ್ವಿಜಯಗಳನ್ನು ಕೈಗೊಂಡಿದ್ದನೆಂದು ಮತ್ತು ಉರೈಯೂರು ತನ್ನ ರಾಜಧಾನಿಯನ್ನಾಗಿ ಮುಂದುವರೆಸಿದನು ಮತ್ತು ಕಾವೇರಿಪಟ್ಟಣ ತನ್ನ 2ನೇ ರಾಜಧಾನಿಯನ್ನಾಗಿಸಿದನೆಂದು ತಿಳಿದು ಬಂದಿದೆ. ದಕ್ಷಿಣದ ಸಿಂಹಳದ ಮೇಲೆ ದಂಡೆತ್ತಿ ಹೋಗಿ ಅಲ್ಲಿಯ ಅರಸನನ್ನು ಸದೆಬಡೆದು ಅನೇಕ ಸೈನಿಕರನ್ನು ಸೆರೆ ಹಿಡಿದು ತಂದು ಅವರಿಂದ ಕಾವೇರಿ ನದಿಗೆ ಕಲ್ಲಣಿ ಎಂಬಲ್ಲಿ ಆಣೆಕಟ್ಟನ್ನು ನಿರ್ಮಿಸಿದನೆಂದು ತಿಳಿದು ಬರುತ್ತದೆ.
( ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ )
ಈ ಆಣೆಕಟ್ಟು 1080 ಅಡಿ ಉದ್ದವಾಗಿದ್ದು ಕಲ್ಲಿನಿಂದ ನಿರ್ಮಿಸಿರುವ ನೀರಾವರಿ ಅನುಕೂಲತೆಗೋಸ್ಕರ ನಿರ್ಮಿಸಲಾಗಿದೆ. ಅಲ್ಲದೆ ಇದರ ವಿಶೇಷತೆಯೆಂದರೆ ಬಹುಶ: ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ನಿರ್ಮಿಸಿರುವ ನೀರಾವರಿ ಆಣೆಕಟ್ಟಾಗಿದೆ. ಇದು ಕರಿಕಾಲ ಚೋಳಿ ವ್ಯವಸಾಯ ಮತ್ತು ನೀರಾವರಿಗೆ ಕೊಟ್ಟಿರುವ ಮಹತ್ವವನ್ನು ತಿಳಿಸುತ್ತದೆ. ಈತನ ಕಾಲದಲ್ಲಿ ವ್ಯಾಪಾರ ಸಮೃದ್ಧಿಯಿಂದ ಕೂಡಿದ್ದು ದೇಶ ವಿದೇಶಿಗಳಿಗೆಲ್ಲ ರಫ್ತು, ಆಮದು ವಹಿವಾಟು ಇದ್ದಿತ್ತೆಂದು ತಿಳಿಯುತ್ತದೆ. ಕರಿಕಾಲನು ಸಾಹಿತ್ಯ ಮತ್ತು ಕಲೆಗೆ ವಿಶೇಷ ಪ್ರೋತ್ಸಾಹ ನೀಡಿದನೆಂದು ಸಂಘಂ ಸಾಹಿತ್ಯವು ವರ್ಣಿಸುತ್ತದೆ. ಕಾವೇರಿ ಪಟ್ಟಣ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು ಜನತೆ ಶಾಂತಿ ಸುಭಿಕ್ಷೆಯಿಂದ ಜೀವನ ಸಾಗಿಸುತ್ತಿರುವ ಸಮಯದಲ್ಲಿಯೇ ಕರಿಕಾಲನು ಮರಣ ಹೊಂದಿದನು. ಈತನ ಮರಣದ ನಂತರ ಸೆಂಗಣ್ಣನ್ ಎಂಬುವವನು ಪಟ್ಟಕ್ಕೆ ಬಂದನಾದರೂ ಸಿಂಹಾಸನಕ್ಕಾಗಿ ಒಳಜಗಳಗಳು ಪ್ರಾರಂಭವಾಗಿ ಈ ಮನೆತನ ದುರ್ಬಲವಾಗುತ್ತಾ ಬಂದಿತು. ಕಾಲಕ್ರಮೇಣದಲ್ಲಿ ಪಲ್ಲವರು ಪ್ರಬಲರಾಗಿದ್ದ ಸಮಯದಲ್ಲಿ ಅವರ ಆಧೀನ ಅರಸರಾಗಿ ಸಣ್ಣ ಪುಟ್ಟ ಸಂಸ್ಥಾನಗಳ ಅರಸರಾಗಿ ಬಾಳಬೇಕಾಯಿತು. ಪುನಃ ಕಾಲಚಕ್ರದಲ್ಲಿ ಪಲ್ಲವರು ದುರ್ಬಲರಾಗಿ ಚೋಳ ಮನೆತನ ಪುನಸ್ಥಾಪಿತವಾಯಿತು. ಹೀಗಾಗಿ ಸುಮಾರು ಮೂರು ಶತಮಾನಗಳ ಕಾಲ ಚೋಳರು ದಕ್ಷಿಣ ಭಾರತದ ಇತಿಹಾಸದಲ್ಲಿ ಹೆಸರಿಗೆ ಮಾತ್ರ ಉಳಿದುಕೊಂಡಿದ್ದರು.
Table of Contents
ವಿಜಯಾಲಯ (೮೫೦-೮೭೧):
ಸುಮಾರು ಕ್ರಿ.ಶ. 850ರಲ್ಲಿ ಪುನಃಸ್ಥಾಪಿತವಾದ ಚೋಳ ಮನೆತನಕ್ಕೆ ತನ್ನ ಹಳೆಯ ಪ್ರಭಾವವನ್ನು ದೊರಕಿಸಿಕೊಟ್ಟವನೆಂದರೆ ವಿಜಯಾಲಯನು. ಆರಂಭದಲ್ಲಿ ಪಲ್ಲವರ ಸಾಮಂತ ಅರಸನಾಗಿದ್ದ ಈತನು ತನ್ನ ಶೌರ್ಯ ಪರಾಕ್ರಮದಿಂದ ಪಾಂಡ್ಯ ಅರಸ ವರಗುಣನನ್ನು ಸೋಲಿಸಿ ಅವರ ಆಧೀನದಲ್ಲಿದ್ದ ತಂಜಾವೂರು ಪ್ರಾಂತವನ್ನು ವಶಪಡಿಸಿಕೊಂಡರು. ಈ ಪ್ರಾಂತ ವಶಪಡಿಸಿಕೊಂಡ ನೆನಪಿಗಾಗಿ ವಿಜಯಾಲಯ ದೇವಾಲಯ ನಿರ್ಮಿಸಿದನೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ತದನಂತರ ವಿಜಯಾಲಯನ ಮಗ ಒಂದನೇ ಆದಿತ್ಯನೊಂದಿಗೆ ಪಲ್ಲವರ ಮೇಲೆ ದಾಳಿ ಮಾಡಿ ಪಲ್ಲವರ ಕೊನೆಯ ಅರಸರುಗಳಾದ ಅಪರಾಜಿತ, ಮರ್ಮನ್ ಮತ್ತು ನಂದಿವರ್ಮನ್‌ರನ್ನು ಕ್ರಮೇಣವಾಗಿ ತಿರುಪ್ಪರಂಬಿಯಂ ಮತ್ತು ತಿರುಮಲಂಕಾಡು ಯುದ್ಧಗಳಲ್ಲಿ ಸೋಲಿಸಿ ಇಂದಿನ ಕುಂಬಕೋಣದ ಪ್ರದೇಶಗಳನ್ನೆಲ್ಲ ತಮ್ಮ ವಶಕ್ಕೆ ತೆಗೆದುಕೊಂಡರು.
ಎಸ್. ಕೃಷ್ಣಸ್ವಾಮಿ ಅಯ್ಯಂಗಾರರು ವಿಜಯಾಲಯನನ್ನು ಕುರಿತು, ಈ ರೀತಿ ವರ್ಣಿಸಿದ್ದಾರೆ. “ಚೋಳರ ಉರ್ದ್ಬದಿಶೆಯು ವಿಜಯಾಲಯನಿಂದ ಆರಂಭವಾಗಿ ರಾಜರಾಜ ಮಹಾಶಯನ ಆಳ್ವಿಕೆಯ ಕೊನೆಯವರೆಗೂ ಮುಂದುವರೆಯಿತು. ಆದ್ದರಿಂದ ಇವನನ್ನು ಚೋಳ ಸಾಮ್ರಾಜ್ಯದ ಕರ್ತಾರನೆಂದು ಕರೆಯಬಹುದು” ಎಂದಿದ್ದಾರೆ.
ವಿಜಯಾಲಯನ ಶೌರತ್ವ ಮತ್ತು ಪರಾಕ್ರಮದ ಕುರುಹಾಗಿ ಆತನನ್ನು ‘ವರಕೇಸರಿ’ ಮತ್ತು ‘ರಾಜಕೇಸರಿ’ ಎಂಬ ಬಿರುದಾಂಕಿತಗಳು ಇದ್ದವು. ಹೀಗೆ ಚೋಳ ಸಾಮ್ರಾಜ್ಯವನ್ನು ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾದ ವಿಜಯಾಲಯನಿಗೆ ಚೋಳರ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಕಲ್ಪಿಸಲಾಗಿದೆ.
ಒಂದನೇ ಆದಿತ್ಯ (೮೭೧-೯೦೭)
ಕ್ರಿ.ಶ. 871ರಲ್ಲಿ ವಿಜಯಾಲಯನ ನಂತರ ಆತನ ಮಗ ಅಧಿಕಾರಕ್ಕೆ ಬಂದನು. 1ನೇ ಆದಿತ್ಯ ಯುವರಾಜನಿರುವಾಗಲೇ ತನ್ನ ತಂದೆಯೊಡನೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ ಉದಾಹರಣೆಗಳಿವೆ. ಆದಿತ್ಯನ ಒಂದು ಶಾಸನದ ಪ್ರಕಾರ “ಈ ಯುವರಾಜ ಎತ್ತರವಾದ ಆನೆಯ ಮೇಲೆ ಕುಳಿತು ಪಲ್ಲವ ರಾಜನತ್ತ ಹಾರಿ ಆತನನ್ನು ಕೈಯಲ್ಲಿ ಎತ್ತಿ ವೇಗವಾಗಿ ತಿರುಗಿಸಿ ನೆಲಕ್ಕೆ ಉರುಳಿಸಿದ್ದನು ಈ ಒಂದು ಸಂಕೇತಕ್ಕಾಗಿ ಆತನನ್ನು “ಕೋದಂಡರಾಮ” ಎಂಬ ಬಿರುದಿನಿಂದ ಪ್ರಶಂಸಿಸಲಾಗಿದೆ. ಈತನು ಕೈಗೊಂಡ ದಿಗ್ವಿಜಯಗಳಲ್ಲಿ ಮುಖ್ಯವಾದವುಗಳೆಂದರೆ ಪಾಂಡ್ಯರ ಮೇಲೆ ದಾಳಿ ಮಾಡಿ ಅರಸ ವೀರನಾರಾಯಣನನ್ನು ಸೋಲಿಸಿ ಪಾಂಡ್ಯರ ಅಧೀನದಲ್ಲಿರುವ ಕೊಂಗುದೇಶವನ್ನು ಚೋಳ ಸಾಮ್ರಾಜ್ಯದಲ್ಲಿ ಸೇರ್ಪಡೆಗೊಳಿಸಿದ್ದನು. ಅಲ್ಲದೆ ತಲಕಾಡಿನ ಗಂಗ ಅರಸ ಇಮ್ಮಡಿಪೃಥ್ವಿ ಪತಿಯ ಮೇಲೆ ದಾಳಿ ಮಾಡಿ ಅವನು ತನ್ನ ಸಾಮಂತನಾಗಿರುವಂತೆ ಮಾಡಿದ್ದನು. ಚೋಳ ಅರಸ ಆದಿತ್ಯನು ಕ್ರಿ.ಶ. 890ರಲ್ಲಿ ಕುಂಬಕೋಣಂ ಸಮೀಪದ “ತಿರುವೊಲಂ” ಎಂಬಲ್ಲಿ ಪಲ್ಲವ ಅರಸ ಅಪರಾಜಿತ ವರ್ಮನನ್ನು ಸೋಲಿಸಿ ಪಲ್ಲವ ರಾಜಕುಮಾರಿಯನ್ನು ವರಿಸಿದ್ದನ್ನು ಆ ರಾಜಕುಮಾರನಿಗೆ ಹುಟ್ಟಿದ ಮಕ್ಕಳೆ ಪಾರಾಂತರ ಮತ್ತು ಕನ್ನರದೇವ ಒಂದನೇ ಆದಿತ್ಯ ಅನೇಕ ವರ್ಷಗಳ ಆಳ್ವಿಕೆ ಮಾಡಿ ಶೈವ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾನೆ. ಈತನ ಕಾಲವನ್ನು ಚೋಳವಂಶದ ವಿಸ್ತರಣೆಯ ಪರ್ವಕಾಲವೆಂದು ಹೇಳಬಹುದು. ತೊಂಡೈಮಂಡಲಿ’ನಲ್ಲಿ ಒಂದನೇ ಆದಿತ್ಯನು ನಿಧನ ಹೊಂದಿದ್ದಾಗ ಅವನ ಹಿರಿಯ ಮಗ ತಂದೆಯ ನೆನಪಿಗಾಗಿ “ಅದಿತ್ಯೇಶ್ವರದೇವಾಲವನ್ನು” ನಿರ್ಮಿಸಿದ್ದನು, ಅಲ್ಲದೆ ಪರಂಪರಾ ನೀತಿಗನುಗುಣವಾಗಿ ವಂಶದ ಹಿರಿಯಮಗನಾದ ಪಾರಾಂತಕನು ಚೋಳ ಸಾಮ್ರಾಜ್ಯದ ಸಿಂಹಾಸನವನ್ನು ಏರಿ ತನ್ನ ತಂದೆಯಂತೆ ಪರಾಕ್ರಮದಿಂದ ರಾಜ್ಯವನ್ನು ವಿಸ್ತರಿಸುವಲ್ಲಿ ಕಾರ್ಯಪ್ರವೃತ್ತನಾದನು.
1ನೇ ಪರಾಂತಕ (907-953)
ಕ್ರಿ.ಶ. 907ರಲ್ಲಿ ಪಟ್ಟಕ್ಕೆ ಬಂದ 1ನೇ ಪರಾಂತಕನು ತನ್ನ ತಂದೆಯಂತೆ ಪರಾಕ್ರಮಿಯಾಗಿದ್ದು ಪಟ್ಟಾಭಿಷೇಕವಾದ ತಕ್ಷಣ ಆತನು ಕೈಗೊಂಡ ಮೊದಲ ಕಾರ್ಯವೆಂದರೆ ಸೈನ್ಯವನ್ನು ಬಲಪಡಿಸುವುದು ಮತ್ತು ಚೋಳ ಸಾಮ್ರಾಜ್ಯದ ಮೇರೆಗಳನ್ನು ವಿಸ್ತರಿಸಿ ರಾಜ್ಯದಲ್ಲಿ ಶಾಂತಿ ಸುಭಿಕ್ಷೆ ಸ್ಥಾಪಿಸಲುಪ್ರಯತ್ನಿಸಿದನು.
(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)
ಪಾಂಡ್ಯರ ಮೇಲೆ ದಾಳಿ:
‘ಸಮರ್ಥವಾದ ಸೈನ್ಯದೊಂದಿಗೆ ಪಾರಾಂತಕನು ತನ್ನ ಪ್ರಥಮ ದಂಡಯಾತ್ರೆಯನ್ನು ಪಾಂಡ್ಯ ಅರಸ ಇಮ್ಮಡಿ ರಾಜಸಿಂಹ ಮಾರವವರ್ಮನ ಮೇಲೆ ನಡೆಸಿದ್ದನು. ಚೋಳ ಸೈನ್ಯವನ್ನು ನೋಡಿ ಹೆದರಿದ ಮಾರವವರ್ಮನು ಸಿಂಹಳ ಅರಸ 5ನೇ ಕಸ್ಸಪನ ಸಹಾಯವನ್ನು ಯಾಚಿಸಿದನು. ಆದರೆ ಪಾರಾಂತಕನು ಸಿಂಹಳ ಸೈನ್ಯವನ್ನು ವೆಲ್ಲೂರಿನ ಬಳಿ ತಡೆಗಟ್ಟಿ ಸೋತು ಶರಣಾಗುವಂತೆ ಮಾಡಿದ್ದನು. ಇದರಿಂದ ಧೃತಿಗೆಟ್ಟ ಪಾಂಡ್ಯ ಅರಸ ರಾಜಸಿಂಹ ಮಾರವರ್ಮನು ಸಿಂಹಳಕ್ಕೆ ಓಡಿಹೋದನು. ಆಗ ಪಾಂಡ್ಯ ರಾಜ್ಯ ಚೋಳರ ಕೈ ಸೇರಿತು. ಇದರ ನೆನಪಿಗಾಗಿ ಮಧುರೈಕೊಂಡ’ ಎಂಬ ಬಿರುದನ್ನು ಪಾರಾಂತಕನು ಧರಿಸಿದನು ಸಿಂಹಳದ ಸೈನ್ಯವನ್ನು ಸದೆ ಬಡಿದ ಕುರುಹುವಾಗಿ “ಇಲ್ಲಮಂಕ್ಕೊಂಡ” ಎಂಬ ಬಿರುದನ್ನು ಸಹ ಪಡೆದನು.
ಬಾಣರ ಮೇಲೆ ದಾಳಿ:
ಕ್ರಿ.ಶ. 778ರ ಸುಮಾರಿಗೆ ಪಲ್ಲವರ ಸಾಮಂತರಾಗಿ ಆಳುತ್ತಿದ್ದ ಬಾಣರು ಪಶ್ಚಿಮದ ಗಂಗರನ್ನು ಸೋಲಿಸಿ ಸ್ವತಂತ್ರರಾದರು ಇವರ ಮೇಲೆ 1ನೇ ಪರಾಂತಕನು ಯುದ್ಧ ಸಾರಿದನು ಈ ಯುದ್ಧದಲ್ಲಿ ಬಾಣರನ್ನು ನಿರ್ಮೂಲಗೊಳಿಸಿರುವುದಾಗಿ ಪರಾಂತಕನು ಹೇಳಿಕೊಂಡಿದ್ದಾನೆ. ಸೋತ ಬಾಣರು ಚೋಳರ ವಿರುದ್ಧ ರಾಷ್ಟ್ರಕೂಟರ ಸಹಾಯವನ್ನು ಪಡೆದುಕೊಂಡರುದರಿಂದಾಗಿ ಕ್ರಿ.ಶ. 946ರಲ್ಲಿ ನಡೆದ ‘ತೆಕ್ಕೊಲಂ’ ಯುದ್ಧವು ಅನಿವಾರ್ಯವಾಯಿತು.
ತಿರುವಲಂ ಯುದ್ಧ:
ವಿಜಯಾಲ ಮತ್ತು ಆದಿತ್ಯನಿಂದ ನಿರ್ಮಿಸಲ್ಪಟ್ಟ ಚೋಳ ಸಾಮ್ರಾಜ್ಯ ಒಂದನೆ ಪಾರಾಂತಕನ ಕಾಲದಲ್ಲಿ ಕೈ ತಪ್ಪುವ ಹಂತಕ್ಕೆ ಬಂದಿತು. ಇದನ್ನು ಚೋಳ ಇತಿಹಾಸದ ಸಂಧಿಗ್ಧಕಾಲವೆಂದೇ ಕರೆಯಲಾಗಿದೆ. ಏಕೆಂದರೆ ಚೋಳ ಸಾಮ್ರಾಜ್ಯವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಪಾರಾಂತಕನು ಉತ್ತರ ಭಾಗದ ರಾಷ್ಟ್ರಕೂಟರ ಮೇಲೆ ತನ್ನ ದಂಡ ಯಾತ್ರೆಯನ್ನು ಕೈಗೊಂಡನು. ಅಲ್ಲಿ ಎರಡನೆ ಕೃಷ್ಣನು ಅರಸನಾಗಿದ್ದನು. ಪರಾಂತಕನ ತಂದೆಯಾದ ಆದಿತ್ಯನ ಮರಣದ ನಂತರ ಸಿಂಹಾಸನವನ್ನು ಪಡೆದುಕೊಳ್ಳುವಲ್ಲಿ ಪರಾಂತಕನ ಸಹೋದರ ಕನ್ನರದೇವನಿಗೆ ಮತ್ಸರ ಹುಟ್ಟಿಕೊಂಡು ಸದಾಕಾಲ ವೈರತ್ವದಿಂದಲೆ ಇದ್ದನು. ಇದೇ ಸಮಯಕ್ಕೆ ಪರಾಂತಕನು ರಾಷ್ಟ್ರಕೂಟರ ದಾಳಿಯ ಸದುಪಯೋಗ ಪಡೆದು. ರಾಷ್ಟ್ರಕೂಟ ಇಮ್ಮಡಿ ಕೃಷ್ಣನೊಂದಿಗೆ ವೈವಾಹಿಕ ಸಂಬಂದ ಬೆಳೆಸಿ ಕೃಷ್ಣನ ಭಾವಮೈದುನನಾಗಿದ್ದನು. ತನ್ನ ಭಾವನ ಮೇಲೆ ದಂಡೆತ್ತಿ ಹೋಗುವದನ್ನು ಕನ್ನರದೇವಿ ವಿರೋಧಿಸಿದನು. ಸಹಜವಾಗಿ ಇಮ್ಮಡಿ ಕೃಷ್ಣನನ್ನು ಸಹಾಯ ಮಾಡುವದರ ಜೊತೆಗೆ ಚೋಳರಿಂದ ಸೋಲನುಭವಿಸಿದ ಬಾಣರು ಮತ್ತು ಮೈದುಂಬರು ರಾಷ್ಟ್ರಕೂಟರ ಪರ ವಹಿಸುವಂತೆ ಮಾಡಿ ಪರಾಂತಕನ ಮೇಲೆ ಮೂರು ಮನೆತನಗಳು ಮತ್ತು ಕನ್ನದೇವ ಒಡಗೂಡಿ ವಲ್ಲಾಲದ (ತಿರುವಲು) ಎಂಬಲ್ಲಿ ದಾಳಿ ಮಾಡಿದರು ಈ ಯುದ್ಧದಲ್ಲಿ ಚೋಳ ಅರಸ ಸೋತು-ಶರಣಾದನು ಇದರಿಂದಾಗಿ ಪರಾಂತಕನ ವಿಸ್ತಾರ ಸಾಮ್ರಾಜ್ಯ ಆತನ ಕೈ ತಪ್ಪುವ ಸಂದಿಗ್ಧಕಾಲ ಒದಗಿತು.
(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)
ತೆಕ್ಕೊಲಂ ಯುದ್ಧ:
ಪರಾಂತಕನು ತಿರುವಲಂ ಯುದ್ಧದಲ್ಲಿ ಸೋಲಿನ ಕಹಿ ಅನುಭವಿಸಿದ ಬೆನ್ನಲ್ಲೇ ಆತನಿಗೆ ಇನ್ನೊಂದು ಸೋಲಿನ ಸಂದರ್ಭ ಒದಗಿ ಬಂದಿತು. ಚೋಳರ ಬದ್ಧ ವೈರಿಗಳಾದ ರಾಷ್ಟ್ರಕೂಟರು ಗಂಗ ಅರಸರೊಂದಿಗೆ ವೈವಾಹಿಕ ಸಂಬಂದ ಬೆಳೆಸಿ ಪರಸ್ಪರರು ಸಮೀಪವರ್ತಿಗಳಾಗಿದ್ದರು. ರಾಷ್ಟ್ರಕೂಟರ ಇಮ್ಮಡಿ ಕೃಷ್ಣನ ಸಹೋದರಿಯನ್ನು ಗಂಗಭೂತಗನಿಗೆ ಕೊಟ್ಟು ಮದುವೆ ಮಾಡಿಸಿ ಭೂತುಗನನ್ನು ಬಲಿಷ್ಠಗೊಳಿಸಲು ಪ್ರಯತ್ನಿಸತೊಡಗಿದನು.
ಭೂತುಗನು ಕೈವಾರಗಂಗ ಶಾಖೆಯ ಪ್ರೈಪತಿಯನ್ನು ಸೋಲಿಸಿ ಇಡೀ ಗಂಗವಾಡಿಯ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಲು ಉತ್ಸುಕನಾದನು. ಗಂಗವಾಡಿಯೂ ಚೋಳರ ವಶದಲ್ಲಿರುವದರಿಂದ ಸಹಜವಾಗಿಯೇ ಪರಾಂತಕನನ್ನು ಕೆರಳಿಸಿತು. ಭೂತುಗ ಚೋಳರ ಮೇಲೆ ದಾಳಿ ಮಾಡಲು ರಾಷ್ಟ್ರಕೂಟರ ಸಹಾಯ ಯಾಚಿಸಿದನು ಗಂಗ ಮತ್ತು ರಾಷ್ಟ್ರ ಕೂಟರ ಬಲಾಡ್ಯ ಸೈನ್ಯ ತೆಕ್ಕೊಲು ಎಂಬಲ್ಲಿ ಯುದ್ಧ ಮಾಡಿ ಪರಾಂತಕನನ್ನು ಶರಣಾಗುವಂತೆ ಮಾಡಿದರು. ವೈರಿ ಸೈನ್ಯದಿಂದ ತತ್ತರಿಸಿದ ಪರಾಂತಕನು ವಿರಾವೇಶದಿಂದ ಹೋರಾಡಿದರೂ ಸಹ ಜಯಮಾಲೆ ರಾಷ್ಟ್ರಕೂಟರ ವಶವಾಯಿತು. ಈ ಯುದ್ಧದ ಇನ್ನೊಂದು ಮಹತ್ವದ ಘಟನೆಯೆಂದರೆ ಪಾರುಂತಕನ ಹಿರಿಯ ರಾಜಕುಮಾರ ಯುದ್ಧದಲ್ಲಿಯೇ ಕೊಲೆಗೈಯಲ್ಪಟ್ಟನು ಹೀಗಾಗಿ ರಾಷ್ಟ್ರಕೂಟ ಅರಸ ಕೃಷ್ಣನು ಚೋಳ ರಾಜ್ಯವನ್ನು 909ರಲ್ಲಿ ಆಕ್ರಮಿಸಿ ತಂಜಾವುರಕೊಂಡ ಎಂಬ ಅನ್ವರ್ಥನಾಮವನ್ನು ಧರಿಸಿದನು. ಈತನ ದಾಳಿ ಕಂಚಿ ಮತ್ತು ತಂಜಾವೂರಗಳಲ್ಲದೆ ರಾಮೇಶ್ವರದವರೆಗೂ ಮುಂದುವರೆಸಿ ಸಂಪೂರ್ಣ ಚೋಳ ಪ್ರದೇಶದ ಒಡೆಯನಾದನು, ಏತನ್ಮಧ್ಯೆ ಪರಾಂತಕನು ರಾಜಧಾನಿ ತಂಜಾವುರಿನಿಂದ ತಲೆ ಮರೆಸಿಕೊಂಡು ಕಾಲಕಳೆದನೆಂದು ರಾಷ್ಟ್ರ ಕೂಟರ ಶಾಸನಗಳ ಮೂಲಕ ತಿಳಿದು ಬರುತ್ತದೆ. ಹೀಗಾಗಿ ತೆಕ್ಕೊಲಂ ಯುದ್ಧ ಚೋಳ ರಾಜ್ಯದ ನಿರ್ಣಾಯಕ ಯುದ್ಧವೆಂದು ಹೇಳಲಾಗಿದೆ.
ಶೈವ ಧರ್ಮಿಯನಾಗಿದ್ದ ಪಾರಾಂತಕನು ಹಲವಾರು ಶಿವಾಲಯಗಳನ್ನು ನಿರ್ಮಿಸಿದ್ದಾನೆ. ಚಿದಂಬರು ದೇವಾಲಯಕ್ಕೆ ಚಿನ್ನದ ತಗಡನ್ನು ಹೊದಿಸಿದನು. ತನ್ನ ಆಳ್ವಿಕೆಯ ಉದ್ದಕ್ಕೂ ಏಳು ಬೀಳುಗಳು ಮಧ್ಯೆ ಜೀವಿಸಿರುವ ಈತನು ಕೊನೆ ದಿನಗಳಲ್ಲಿ ರಾಷ್ಟ್ರಕೂಟರ ಅರಸ ಕೃಷ್ಣನ ಮರಣದ ನಂತರ ಚೋಳರ ಕೆಲವು ಭಾಗಗಳನ್ನು ಪುನಃ ಪಡೆದು ಕಳೆದ ಸಾಮ್ರಾಜ್ಯದ ಪುನ: ಸ್ಥಾಪನೆಗೆ ಕಾರಣೀಭೂತನಾದನು. ಕಾಳಾಮುಖ ಮತ್ತು ಪಾಶುಪತ ಶಿವಾಲಯಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ತನ್ನ ಆಳ್ವಿಕೆಯ ಕೊನೆಯ ಕಾಲ ಶಾಂತಿಯಿಂದ ಕಳೆದನೆಂದು ಇತಿಹಾಸಕಾರರು ಹೇಳುತ್ತಾರೆ. ಚೋಳರ ಸ್ಥಳೀಯ ಆಡಳಿತವನ್ನು ತಿಳಿಹೇಳುವ ಪ್ರಸಿದ್ಧಶಾಸನ ತನ್ನ ಆಡಳಿತದ 14ನೇ ವರ್ಷದಲ್ಲಿ ಚಂಗಲ್ ಪೇಟ ಜಿಲ್ಲೆಯ ಉತ್ತರ್ಮೇರುರ ಎಂಬಲ್ಲಿ ಎರಡು ಶಾಸನಗಳು ಕೆತ್ತಿಸಿರುವ ಕೀರ್ತಿ ಮೊದಲನೇ ಪರಾಂತಕನಿಗೆ ಸಲ್ಲುತ್ತದೆ.
ಒಂದನೆ ರಾಜ ರಜ ಚೋಳ :
ಚೋಳರ ಇತಿಹಾಸದಲ್ಲಿ ಅದ್ವಿತೀಯ ಸಾಧನೆಗೈದು ಪ್ರಸಿದ್ದಿಯನ್ನು ಪಡೆದ ರಾಜನು ತನ್ನ ತಂದೆ ಪಾರಂತಕನ ಕಾಲದಲ್ಲಿ ಇವರ ಮನೆತನಕ್ಕೆ ಕವಿದಿದ್ದ ಕತ್ತಲೆಯನ್ನು ಹೊಡೆದೋಡಿಸಿ ಇತಿಹಾಸದ ಪುಟಗಳಲ್ಲಿ ಚೋಳರು ಮೆರೆಯುವಂತೆ ಮಾಡಿದನು. ತಂದೆ ಪಾರಂತಕ ಮತ್ತು ತಾಯಿ ದಾನವನ್ ಮಹಾದೇವಿಯರ ಮಗನಾಗಿ ಜನಿಸಿದ ರಾಜ ರಾಜನು ಅರಸನಾಗುವದಕ್ಕಿಂತ ಮೊದಲೇ ತನ್ನ ತಂದೆಯೊಡನೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿ ಯುದ್ಧ ಕೌಶಲ್ಯದಲ್ಲಿ ನಿಪುಣನಾಗಿದ್ದನು. ಆಡಳಿತ ಮತ್ತು ಪ್ರಜೆಗಳ ಹಿತರಕ್ಷಣೆಯ ಬಗ್ಗೆ ಕಾಳಜಿ ವಹಿಸಿದ್ದನು ತಮ್ಮ ರಾಜ್ಯಕ್ಕೆ ಹಿಂದೆ ಕಿರುಕುಳ ಕೊಟ್ಟಿರುವ ಅರಸು ಮನೆತನಗಳ ಬಗ್ಗೆ ದ್ವೇಷ ಆತನಲ್ಲಿ ಉಕ್ಕುತ್ತಿತ್ತು. ಆ ಅರಸರ ವಿರುದ್ಧ ಸೇಡು ತೀರಿಸಿಕೊಳ್ಳುವವರೆಗೆ ರಾಜರಾಜನಿಗೆ ಸಮಾಧಾನ ಇರಲ್ಲಿಲ್ಲ.
(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)
ರಾಜರಾಜನು ಪಟ್ಟಕ್ಕೆ ಬಂದನಂತರ ವಿಳಂಬ ಮಾಡದೆ ಕ್ರಮಬದ್ಧವಾದ ದಂಡಯಾತ್ರೆಗಳನ್ನು ಕೈಕೊಂಡು ಯಶಸ್ವಿಯಾದನು ಅವುಗಳಲ್ಲಿ ಮುಖ್ಯವಾದ ದಿಗ್ವಿಜಯಗಳೆಂದರೆ,
ದಕ್ಷಿಣ ದಂಡಯಾತ್ರೆ:
ಚೇರರ ಮೇಲೆ ದಾಳಿ:
ಚೇರರ ರಾಜ್ಯದ ಅರಸರು ಆಧುನಿಕ ಕೇರಳದ ಪ್ರದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದರು ಇವರು ಪ್ರಬಲ ನೌಕಾದಳವನ್ನು ಹೊಂದಿ ಕುಂಡಲುಶಾಲು ಬಂದರು ಸ್ಥಾಪಿಸಿ ಅದು ನೌಕಾ ನೆಲೆಯಾಗಿಸಿದ್ದರು ಅದನ್ನು ವಶಪಡಿಸಿಕೊಂಡು ವಿದೇಶಗಳೊಡನೆ ಸಂಪರ್ಕವೇರ್ಪಡಿಸಲು ಸುಲಭ ಮಾರ್ಗವಾಗುವದೆಂದು ಯೋಚಿಸಿ ರಾಜರಾಜನು ಚೇರರ ನೌಕಾಯಾನದ ಮೇಲೆ ದಾಳಿ ಮಾಡಿ, ಅಲ್ಲಿನ ನೌಕಾ ಪಡೆ ಶರಣಾಗುವಂತೆ ಮಾಡಿದ್ದಲ್ಲದೆ ಚೇರ ಅರಸ ಭಾಸ್ಕರ ರವಿವರ್ಮನ್ನು ಚೋಳರ ಸಾಮಂತನಾಗಿಸಿಕೊಂಡನು. ಇದರಿಂದಾಗಿ ಕೇರಳದ ಹಲವು ಭಾಗಗಳು ಚೋಳರ ವಶವಾದವು ಇದರ ನೆನಪಿಗೊಸ್ಕರ “ಕಾನ್ಗಳುರ್ಶಾಲೈಕ್ಕಳ್ ಮರುತ್ತ” ಎಂಬ ಬಿರುದನ್ನು ಧರಿಸಿದನು. ಇದರ ಅರ್ಥ ಕಂಡಲೂರಲ್ಲಿನ (ಕಾನ್ಗಳೂರು) ಊಟೋಪಚಾರದ ಗೃಹದಲ್ಲಿನ ತಟ್ಟೆಗಳನ್ನು ಒಡೆದು ಹಾಕಿ ಸಂತೋಷ ಪಟ್ಟನೆಂದು ಅಥವಾ ಕಂಡಲೂರಿನಲ್ಲಿದ್ದ ಆಹಾರ ಕೊಡುವ ವ್ಯವಸ್ಥೆಯನ್ನು ರದ್ದು ಪಡಿಸಿದನೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಆದರೆ ಈ ವಿವರಣೆ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತವಿಲ್ಲ.
ಮಧುರೈ ಪಾಂಡ್ಯರು:
ಪಾಂಡ್ಯರು ತಮಿಳುನಾಡಿನ ಮಧುರೈಯಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ ರಾಜರಾಜನು ತನ್ನ ಆಧೀನದಲ್ಲಿ ಪಾಂಡ್ಯ ಅರಸನಾದ ಅಮರಭುಜಂಗನನ್ನು ಸಾಮಂತನಾಗಿರುವಂತೆ ಒತ್ತಾಯಿಸಿದನು. ಇದಕ್ಕೆ ಮಣಿಯದ ಭುಜಂಗನ ಮೇಲೆ ದಾಳಿ ಮಾಡಿ ರಾಜಧಾನಿ ಮಧುರೆಯನ್ನು ವಶಪಡಿಸಿಕೊಂಡು ಅರಸ ಭುಜಂಗನನ್ನು ಸೆರೆಯಾಳಾಗಿಸಿದನು. ಹೀಗಾಗಿ ಪಾಂಡ್ಯರು ಚೋಳರ ಆದೀನರಾಗಿ ಬಾಳಬೇಕಾಯಿತು.
ಮಲೆನಾಡಿನ ದಾಳಿ:
ಕರ್ನಾಟಕದ ಪ್ರದೇಶದ ಮಲೆನಾಡಿನ ಮೇಲೆ ಆಕ್ರಮಣ ಮಾಡಿ. ಅಲ್ಲಿ ತನ್ನ ಅಧಿಕಾರ ಸ್ಥಾಪಿಸಿದನು. ಅಂದು ರಾಜರಾಜನು ದಾಳಿ ಮಾಡಿದ ಪ್ರದೇಶ ಇಂದಿನ ಕೊಡಗು ಜಿಲ್ಲೆಯ ಪ್ರದೇಶವಾಗಿತ್ತೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.
ಸಿಂಹಳದ ದಾಳಿ:
ಚೋಳರ ಕೀರ್ತಿ ಕೇವಲ ದಕ್ಷಿಣ ಭಾರತಕಷ್ಟೇ ಸೀಮಿತಗೊಳಿಸದೆ ಭಾರತದಾಚೆಗಿನ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮಹಾತ್ವಾಕಾಂಕ್ಷೆ ಹೊಂದಿದ್ದ ರಾಜರಾಜನು ಸಿಂಹಳದಲ್ಲಿ ಆಳುತ್ತಿದ್ದ. ಐದನೇ ಮಹೇಂದನ ಮೇಲೆ ಆಕ್ರಮಣ ನಡೆಸಿದನು. ರಾಜರಾಜನ ಸೈನ್ಯಕ್ಕೆ ಹೆದರಿದ ಸಿಂಹಳ ಅರಸ ಮಹೇಂದ್ರನು ಹೆದರಿಕೊಂಡು ದಟ್ಟವಾದ ಕಾಡಿನಲ್ಲಿ ತಲೆಮರೆಸಿಕೊಂಡನು. ಆಗ ರಾಜರಾಜನ ಸೈನ್ಯ ರಾಜಧಾನಿ ಅನುರಾಧಪುರವನ್ನು ಲೂಟಿ ಮಾಡಿ ಸಂಪೂರ್ಣವಾಗಿ ಆ ನಗರವನ್ನು ನೆಲಸಮಗೊಳಿಸಿದರು. ಇದರಿಂದಾಗಿ ಸಿಂಹಳದ ಉತ್ತರ ಭಾಗ ಚೋಳರ ಆಧೀನಕ್ಕೆ ಬಂದಿತು. ಆ ಪ್ರದೇಶವನ್ನು ತನ್ನ ಹಿಡಿತದಲ್ಲಿರಲು ಪೊಲನ್ನೂರು ಎಂಬ ಪಟ್ಟಣವನ್ನು ಆ ಪ್ರಾಂತದ ರಾಜಧಾನಿಯನ್ನಾಗಿಸಿದನು. ಈ ನಗರಕ್ಕೆ ಜಗನ್ನಾಥ ಮಂಗಲ ಎಂದು ನಾಮಕರಣ ಮಾಡಿದನು. ಸಿಂಹಳದ ಇಡಿ ಉತ್ತರ ಭಾಗವನ್ನು “ಮುಮ್ಮಡಿ ಚೋಳ ಮಂಡಲ”ವೆಂದು ಕರೆಯಲಾಯಿತು. ಈ ವಿಜಯೋತ್ಸವದ ನೆನಪಿಗಾಗಿ ಆ ಪ್ರದೇಶದಲ್ಲಿ ಶಿವದೇವಾಲಯಯೊಂದನ್ನು ನಿರ್ಮಿಸಿದನು.
ಗಂಗರ ಮೇಲೆ ದಾಳಿ:
ಚೇರ, ಪಾಂಡ್ಯ ಮತ್ತು ಸಿಂಹಳದ ಮೇಲಿನ ದಾಳಿಗಳ ನಂತರ ರಾಜರಾಜನು ಕರ್ನಾಟಕ ಗಂಗ ಅರಸರ ಮೇಲೆ ತನ್ನ ದೃಷ್ಟಿ ಹಾಯಿಸಿದನು. ಗಂಗರಸರ ಮೇಲೆ ದಾಳಿ ಮಾಡುವ ಮುಖ್ಯವಾದ ಕಾರಣವೆಂದರೆ ತನ್ನ ಸಾಮ್ರಾಜ್ಯ ವಿಸ್ತರಣೆ ಜೊತೆಗೆ ಹಿಂದೆ ಗಂಗರ ರಾಜನಾದ ಎರಡನೇ ಭೂತುಗನು ರಾಷ್ಟ್ರಕೂಟರ ಪರವಹಿಸಿ ಚೋಳ ಅರಸ ಪರಾಂತಕನ ಮಗನಾದ ಎರಡನೆ ಆದಿತ್ಯನನ್ನು ರಣರಂಗದಲ್ಲಿಯೇ ಸಂಹರಿಸಿದ್ದರು. ಇದರ ಸೇಡಿನ ಕಿಡಿ ರಾಜರಾಜನಲ್ಲಿ ಭುಗಿಲೆದ್ದಿತು. ಅದರ ಸೇಡು ತೀರಿಸಿಕೊಳ್ಳುವವರೆಗೆ ಈತನಿಗೆ ಸಮಾಧಾನವಿರಲಿಲ್ಲ. ಈ ಕಾರಣದಿಂದಾಗಿ ರಾಜರಾಜನು ಗಂಗರ ಮೇಲೆ ದಾಳಿ ಮಾಡಿ ಗಂಗ ಸೈನ್ಯದ ಬಲಾಡ್ಯ ದಂಡ ನಾಯಕ ರಣವಿಕ್ರಾಂತನೆಂಬ ಬಿರುದು ಹೊಂದಿರುವ ಚಾವುಂಡರಾಯನನ್ನು ಸದೆ ಬಡೆಯಲಾಯಿತು. ದಂಡನಾಯಕನ ಮರಣದ ನಂತರ ಎದುರಾಳಿಯಾಗಿ ಬಂದ ಗಂಗ ಅರಸ ರಕ್ಕಸಗಂಗನು ರಾಜರಾಜನ ಪರಾಕ್ರಮಕ್ಕೆ ತಕ್ಕ ವೀರಯೋದನಾಗಿರಲಿಲ್ಲ. ಕ್ರಿ.ಶ. 992ರ ವೇಳೆಗೆ ರಕ್ಕಸಂಗಂಗ ಸೋತು ಶರಣಾದನು ಅಲ್ಲದೆ ಆತನ ವಶದಲ್ಲಿದ್ದ ಗಂಗವಾಡಿಯನ್ನು ರಾಜರಾಜನಿಗೆ ಬಿಟ್ಟು ಕೊಟ್ಟನು. ಕೆಲ ಕಾಲದ ನಂತರ ಅಂದರೆ 1004ರಲ್ಲಿ ಗಂಗರು ಪುನಃ ಅವರ ಸಾಮಂತರಾಗಿದ್ದ ಹೊಯ್ಸಳರು, ನೊಳಂಬರು ಒಟ್ಟಾಗಿ ಸೇರಿ ಚೋಳರ ಮೇಲೆ ದಾಳಿಯಿಟ್ಟರು. ಈ ದಾಳಿಯಲ್ಲಿ ರಾಜರಾಜನು ತನ್ನ ಮಗ ರಾಜೇಂದ್ರ ಚೋಳನ ಮುಂದಾಳತ್ವದಲ್ಲಿ ಅಪ್ರಮೇಯ ಎಂಬ ದಂಡನಾಯಕನೊಂದಿಗೆ ಒಕ್ಕೂಟ ಸೈನ್ಯದೊಂದಿಗೆ ಹೋರಾಡಿ ಸಂಪೂರ್ಣವಾಗಿ ಗಂಗರನ್ನು ಸದೆಬಡೆದರು. ಈ ನಿರ್ಣಾಯಕ ಯುದ್ಧದಿಂದಾಗಿ ಗಂಗರಾಜರ ರಾಜಧಾನಿ ತಲಕಾಡನ್ನು ವಶಪಡಿಸಿಕೊಂಡು ಅದಕ್ಕೆ ರಾಜರಾಜಪುರವೆಂದು ಹೆಸರಿಡಲಾಯಿತು. ಹೀಗಾಗಿ ಗಂಗರಾಜ್ಯದ ಬಹುಭಾಗ ಚೋಳರ ವಶವಾಯಿತು.
ರಾಜರಾಜ ಮತ್ತು ವೆಂಗಿ ಮಂಡಲ:
ಆಂಧ್ರ ದೇಶದ ವೆಂಗಿ ಮಂಡಲ ಪ್ರದೇಶವನ್ನು ದಾನಾರ್ಣನೆಂಬ ಅರಸ ಆಳುತ್ತಿದ್ದನು ಈತನ ನಂತರ ಉತ್ತರಾಧಿಕಾರತ್ವಕ್ಕಾಗಿ ಅವನ ಇಬ್ಬರು ಮಕ್ಕಳಲ್ಲಿ ಸಿಂಹಾಸನಕ್ಕಾಗಿ ಆಂತರಿಕ ಕಲಹವರ್ಪಟ್ಟಿತ್ತು. ಇದೆ ಸಮಯವನ್ನು ಕಾಯುತ್ತಿದ್ದ ರಾಜರಾಜನಿಗೆ ಆಂಧ್ರದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಸುವರ್ಣ ಅವಕಾಶ ಒದಗಿ ಬಂದಿತು. ದಾನಾರ್ಣನ ಮಗ ಶಕ್ತಿವರ್ಮನು ಚೋಳರ ಸಹಾಯ ಯಾಚಿಸಿದರೆ ಇನ್ನೊಬ್ಬ ಮಗ ಜಾತಚೋಡಭೀಮ ಚಾಲುಕ್ಯರ ಸಹಾಯ ಪಡೆದನು ಹೀಗಾಗಿ ಚಾಲುಕ್ಯ ಚೋಳರ ಈ ಕದನ ಐತಿಹಾಸಿಕವಾಗಿ ಮಹತ್ವ ಪಡೆದುಕೊಂಡಿತು. ಈ ಯುದ್ಧದಲ್ಲಿ ಚೋಳರು ಮೆಲುಗೈ ಸ್ಥಾಪಿಸಿ ಶಕ್ತಿವರ್ಮನನ್ನು ಅರಸನನ್ನಾಗಿಸಿದರು. ಆಗ ಶಕ್ತಿವರ್ಮನು ಚೋಳರ ಅಧೀನ ಅರಸನಾಗಿರಲು ಒಪ್ಪಿಕೊಂಡನು. ದೂರದರ್ಶಿಯಾದ ರಾಜರಾಜನು ವೆಂಗಿ ಮಂಡಲ ತನ್ನ ಕೈ ತಪ್ಪಿಹೋಗಬಾರದೆಂಬ ಉದ್ದೇಶದಿಂದ ಶಕ್ತಿವರ್ಮನ ಮಗನಾದ ವಿಮಲಾದಿತ್ಯನಿಗೆ ತನ್ನ ಮಗಳಾದ ಕುಂದವೆಯನ್ನು ಕೊಟ್ಟು ಶಕ್ತಿ ವರ್ಮನೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದನು. ಇದರಿಂದಾಗಿ ವೆಂಗಿ ಮಂಡಲ ಚಾಲುಕ್ಯರ ಹಿಡಿತದಿಂದ ಪಾರಾಗಿ ಚೋಳರ ಆಧಿನಕ್ಕೆ ಒಳಪಟ್ಟಿತು. ವೆಂಗಿ ಚೋಳರ ಶಾಶ್ವತ ರಾಜ್ಯವಾಗಿ ಮುಂದುವರೆಯಿತು. ಇದರಿಂದಾಗಿ ಚೋಳರು ಆಂಧ್ರದಲ್ಲಿ ತಮ್ಮ ಪರಮಾಧಿಕಾರ ಸ್ಥಾಪಿಸುವಲ್ಲಿ ಯಶಸ್ವಿಯಾದರು.
ಕಳಿಂಗ:
ಆಂಧ್ರದ ವೆಂಗಿ ಮಂಡಲದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿದ ನಂತರ ರಾಜರಾಜನು ಉತ್ತರದ ಕಳಿಂಗದ ಮೇಲೆ ಯುದ್ಧ ನಡೆಸಿದನೆಂದು ತಿಳಿದು ಬರುತ್ತದೆ. ಅನಂತರ ಕಳಿಂಗದ ಸುತ್ತಮುತ್ತಲಿನ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡು ಮಹತ್ವಕಾಂಕ್ಷೆಯಾದ ರಾಜ ರಾಜನು ಮಾಲ್ಡಿವ್ ದ್ವೀಪಗಳನ್ನು ವಶಪಡಿಸಿಕೊಂಡನು. ಈ ವೇಳೆಗಾಗಲೇ ಚೋಳರ ನೌಕಾ ಪಡೆ ಪ್ರಬಲವಾಗಿತ್ತೆಂಬುದಕ್ಕೆ ಈ ದಿಗ್ವಿಜಯವೇ ಸಾಕ್ಷಿಯಾಗಿದೆ.
ರಟ್ಟವಾಡಿಯ ಆಕ್ರಮಣ:
ಅನೇಕ ವಿಜಯಗಳ ಸರಮಾಲೆಯೊಂದಿಗೆ ರಾಜರಾಜನು ರಟ್ಟವಾಡಿಯನ್ನು ಆಕ್ರಮಿಸಲು ಪ್ರಯತ್ನಿಸಿದನು. ಆದರೆ ಆ ವೇಳೆಗಾಗಲೇ ಕಲ್ಯಾಣದಲ್ಲಿ ತೈಲಪನೆಂಬುವವನಿಂದ ಚಾಲುಕ್ಯ ಸಾಮ್ರಾಜ್ಯ ಸ್ಥಾಪಿತವಾಗಿದ್ದು. ತೈಲಪ ಮತ್ತು ಆತನ ಮಗ “ಇರಿವಬೆಡಿಂಗ ಸತ್ಯಾಶ್ರಮ ಇಬ್ಬರು ಸೇರಿ ಚೋಳ ರಾಜ ರಾಜನ ಸೈನ್ಯಕ್ಕೆ ಹಿಮ್ಮೆಟ್ಟಿಸಿದರು. ಈ ಯುದ್ಧ ಯಾವುದೆ ಗುಂಪಿಗೆ ಜಯ ಸಿಗದಿದ್ದಾಗ ಚೋಳರ ಸೈನ್ಯ ಹಿಂದಿರುಗಬೇಕಾಯಿತು. ಆದಾಗ್ಯೂ ಕುಂತಳ ಪ್ರದೇಶದ ಹಲವಾರು ಹಳ್ಳಿಗಳು ಚೋಳರ ದಾಳಿಗೆ ಸಿಕ್ಕ ಹಾಳಾಗಿದ್ದವು. ಈ ಯುದ್ಧದಲ್ಲಿ ಸೊರೆಹೊಡೆದ ಅಪಾರ ಸಂಪತ್ತಿನಿಂದಲೆ, ತಂಜಾವುರಿನಲ್ಲಿ ರಾಜರಾಜೇಶ್ವರ ದೇವಾಲಯ ನಿರ್ಮಿಸಿದನೆಂದು ಹೇಳಲಾಗಿದೆ. ರಾಜರಾಜನ ಕಾಲಕ್ಕೆ ಆರಂಭವಾದ ಚೋಳ ಮತ್ತು ಕಲ್ಯಾಣಿ ಚಾಲುಕ್ಕರ ಹಗೆತನ ಸುಮಾರು ವರ್ಷಗಳ ಕಾಲ ಮುಂದುವರೆದು ಎರಡು ಸಾಮ್ರಾಜ್ಯಗಳು ಅವಸಾನ ಹೊಂದುವವರೆಗೆ ಒಂದುಗೂಡಲಿಲ್ಲ.
(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)
ಶೂರ ಅರಸ ರಾಜರಾಜನು ಚೋಳ ರಾಜ್ಯದ ಇತಿಹಾಸದಲ್ಲಿ ಸುಮಾರು 30 ವರ್ಷಗಳ ಕಾಲ ವಿಜೃಂಭಿಸಿ ಚೋಳ ಸಾಮ್ರಾಜ್ಯ ಆಂಧ್ರ, ತಮಿಳುನಾಡು, ಕರ್ನಾಟಕದ ಹಲವು ಭಾಗಗಳಲ್ಲದೆ ಸಾಗರದಾಚೆಗಿನ ಸಿಂಹಳ ಮತ್ತು ಮಾಲ್ಡಿವ್ ದ್ವೀಪಗಳ ಒಡೆಯನಾಗಿದ್ದನು. ಈತನನ್ನು ದಕ್ಷಿಣ ಭಾರತದ ಅಜೇಯ ಸಾಮ್ರಾಜ್ಯದರಸ ಎಂದು ಇತಿಹಾಸಕಾರರು ಹೊಗಳಿದ್ದಾರೆ. ಉತ್ತರದ ಓರಿಸ್ಸಾದಿಂದ ದಕ್ಷಿಣದ ಸಿಂಹಳದವರೆಗೆ ಪೂರ್ವದ ಲಕ್ಷದ್ವೀಪ ಮಾಲಿವಗಳಿಂದ ಪಶ್ಚಿಮ ಕೊಡಗಿನವರೆಗೆ ರಾಜರಾಜನ ಕಾಲದಲ್ಲಿ ಚೋಳ ಸಾಮ್ರಾಜ್ಯ ಹರಡಿತ್ತು.
ರಾಜರಾಜ ಚೋಳನ ದಕ್ಷಿಣಭಾರತ ಆಳಿದ ಅರಸರಲ್ಲಿಯೇ ಪರಾಕ್ರಮಿ ಎಂದು ಹೆಸರುವಾಸಿಯಾಗುವದರ ಜೊತೆಗೆ ದಕ್ಷ ಆಡಳಿತವನ್ನು ಸ್ಥಾಪಿಸಿದನು. ತನ್ನ ಸಾಮ್ರಾಜ್ಯದಲ್ಲಿ ಪ್ರಜೆಗಳು ಶಾಂತಿಸುಭಿಕ್ಷೆಯಿಂದ ಇರಲು ಅನೇಕ ಜನೋಪಕಾರಿ ಕೆಲಸಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರನಾಗಿದ್ದನು.
ತನ್ನ ಸಾಮ್ರಾಜ್ಯದಲ್ಲಿರುವ ಭೂಮಿಯನ್ನು ಸಾಗುವಳಿಗೊಳಿಸಿ ವ್ಯವಸಾಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದನು. ರಾಜ್ಯದಲ್ಲಿ ಅನೇಕ ಕಡೆ ಕೆರೆಕಟ್ಟೆಗಳನ್ನು ನಿರ್ಮಿಸಿ ನೀರಾವರಿಗೆ ಅನುಕೂಲ ಮಾಡಿದನು. ಭೂಮಿಯ ಫಲವತ್ತತ್ತೆನುಗುಣವಾಗಿ ವಿಂಗಡಿಸಿ ಲಾಭಕ್ಕನುಗುಣವಾಗಿ ಭೂಕಂದಾಯವನ್ನು ವಿಧಿಸುತ್ತಿದ್ದನು. ಶೈವ ಧರ್ಮಿಯನಾಗಿದ್ದರಿಂದ ಆ ಪಂಥದ ಬೆಳೆವಣಿಗೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದನು. ಈಶ್ವರನ ಪರಮಭಕ್ತನಾಗಿದ್ದ ರಾಜರಾಜನು ಇತರೆ ಧರ್ಮಗಳಿಗೂ ಕಡೆಗಣಿಸಿರಲಿಲ್ಲ. ತನ್ನ ಸಾಮ್ರಾಜ್ಯದಲ್ಲಿ ನಾಗಪಟ್ಟಣದ ಬಳಿಯ ಶ್ರೀವಿಜಯ್ ಸಾಮ್ರಾಜ್ಯದ ಅರಸ ಶ್ರೀಮಾರವಿಜಯೊತ್ತುಂಗವರ್ಮನ್ ಎಂಬುವವನು ಕಟ್ಟಿಸಿದ “ಚುಡಾಮಣಿ” ಎಂಬ ಬೌದ್ಧ ವಿಹಾರದ ರಕ್ಷಣೆ ಹಾಗೂ ಉಸ್ತುವಾರಿ ನೋಡಿಕೊಳ್ಳಲು ಮತ್ತು ಅದರ ಖರ್ಚು ವೆಚ್ಚಗಳಿಗಾಗಿ ಒಂದು ಗ್ರಾಮವನ್ನೇ ದತ್ತಿ ನೀಡಿದನೆಂಬುದಾಗಿ ತಿಳಿದು ಬರುತ್ತದೆ. ಇದು ರಾಜ ರಾಜನ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದೆ.
ರಾಜೇಂದ್ರ ಚೋಳ
ಒಂದನೆ ರಾಜರಾಜನ ನಂತರ ಪಟ್ಟಕ್ಕೆ ಬಂದ ರಾಜೇಂದ್ರ ಚೋಳನು ದಕ್ಷ ಮತ್ತು ಪರಾಕ್ರಮಿ ಅರಸನೆಂದೆ ಖ್ಯಾತಿ ಪಡೆದಿದ್ದಾನೆ. ತನ್ನ ತಂದೆಯ ಆಳ್ವಿಕೆ ಕಾಲಕ್ಕೆ ಯುವರಾಜನಾಗಿ ಅನೇಕ ಯುದ್ಧಗಳಲ್ಲಿ ಪಾಲ್ಗೊಂಡು ಸಾಮ್ರಾಜ್ಯ ವಿಸ್ತರಣಾ ನೀತಿ ಚೆನ್ನಾಗಿ ಅರಿತುಕೊಂಡಿದ್ದನು. ಈತನ ಕಾಲದಲ್ಲಿ ಕೈಗೊಂಡ ಅನೇಕ ದಿಗ್ವಿಜಯಗಳು ಚೋಳರ ಕೀರ್ತಿ ಪ್ರತಿಷ್ಠತೆಗಳನ್ನು ಹೆಚ್ಚಿಸಿದವು. ಹೀಗಾಗಿ ರಾಜೇಂದ್ರ ಚೋಳನ ಆಳ್ವಿಕೆ ದಕ್ಷಿಣ ಭಾರತದಲ್ಲಿ ಅಪ್ರತಿಮ ಶೂರ ಮತ್ತು ದಕ್ಷತೆಗೆ ಹೆಸರಾಯಿತು. ರಾಜೇಂದ್ರ ಚೋಳನ ಅಸಾಧರಣ ಯುದ್ಧ ಕೌಶಲ್ಯ ಮತ್ತು ಆಡಳಿತ ಕ್ರಮವನ್ನು ಚೋಳರ ಅನೇಕ ಶಾಸನಗಳಲ್ಲಿ ನೋಡಬಹುದು. ಪಟ್ಟಕ್ಕೆ ಬಂದ ಆರಂಭದಲ್ಲಿ ಮಣ್ಣೆಕಡಂ (ಮಾನ್ಯಖೇಟೆ) ಬನಾಸಿ ಮತ್ತು ಎಡತೊರೈನಾಡು (ಗಂಗವಾಡಿಯ ಭಾಗ) ಮತ್ತು ಕೊಲ್ಲಿಪಾಕ ಪ್ರದೇಶಗಳು ತನ್ನ ವಶಕ್ಕೆ ತೆಗೆದುಕೊಂಡನು. ತನ್ನ ತಂದೆಯ ಕಾಲಕ್ಕೆ ಗೆದ್ದ ಕೆಲವು ಪ್ರದೇಶಗಳು ಇನ್ನೂ ಸಂಪೂರ್ಣವಾಗಿ ಚೋಳರ ವಶದಲ್ಲಿರಲಿಲ್ಲ ಅವೆಲ್ಲವು ಚೋಳರ ಅಧೀನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾದವು.
ಸಿಂಹಳ ದಾಳಿ ೧೦೧೮:
ರಾಜೇಂದ್ರ ಚೋಳನು ಅರಸನಾದ ಕೆಲವೇ ವರ್ಷಗಳಲ್ಲಿ ಸಿಂಹಳದ ಮೇಲೆ ದಾಳಿ ಮಾಡಿದನು. ತಂದೆ ರಾಜರಾಜನ ಕಾಲಕ್ಕೆ ಸಿಂಹಳದ ಅರಸ ಮಹಿಂದ್ರನು ಸೋತು ಶರಣಾಗಿ ಚೋಳರ ಅದಿಪತ್ಯವನ್ನು ಒಪ್ಪಿಕೊಂಡಿದ್ದನು. ಆದರೆ ರಾಜೇಂದ್ರನು ಪಟ್ಟಕ್ಕೇರಿದಾಗ ಸಿಂಹಳದ ದಕ್ಷಿಣ ಭಾಗದಲ್ಲಿ ತನ್ನ ಪ್ರಭಾವವನ್ನು ಬೀರುವದರ ಜೊತೆಗೆ ಚೋಳರ ಹಿಡಿತದಿಂದ ಪಾರಾಗಲು ಹವಣಿಸತೊಡಗಿದನು. ಇದನ್ನು ಮನಗಂಡ ರಾಜೇಂದ್ರ ಚೋಳನು ಅಪಾರ ಸೈನ್ಯದೊಂದಿಗೆ ಸಿಂಹಳಕ್ಕೆ ಮುತ್ತಿಗೆ ಹಾಕಿ ಮಹೇಂದ್ರನನ್ನು ಸಂಪೂರ್ಣವಾಗಿ ಸೋಲಿಸಿ ಆತನನ್ನು ಸೇರೆ ಹಿಡಿದು ರಾಜೇಂದ್ರನ ಆಸ್ಥಾನಕ್ಕೆ ತಂದು ಚೋಳರ ಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಮಾಡಲಾಯಿತು. ಅಲ್ಲದೆ ಸಿಂಹಳ, ಚೋಳರು ಸಾಮ್ರಾಜ್ಯದಲ್ಲಿ ಸಂಪೂರ್ಣವಾಗಿ ವಿಲೀನಗೊಳಿಸಲಾಯಿತು.
ಪಾಂಡ್ಯ ಮತ್ತು ಚೇರರ ಮೇಲೆ ದಾಳಿ:
ವೀರರಾಜೇಂದ್ರನು ಸಿಂಹಳದ ಮೇಲೆ ದಾಳಿಯಲ್ಲಿ ನಿರತನಾಗಿದ್ದಾಗ ಇತ್ತ ಪಾಂಡ್ಯ ಮತ್ತು ಚೇರರು ಸ್ವತಂತ್ರರಾಗಲು ಹವಣಿಸಿದರು. ಇದನ್ನರಿತ ರಾಜೇಂದ್ರ ಚೋಳನು ಅವರ ಮೇಲೆ ದಾಳಿ ಮಾಡಿ ಪಾಂಡ್ಯ ಮತ್ತು ಚೇರರನ್ನು ಸದೆಬಡೆದು ಚೋಳ ಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಮಾಡಿದನು. ಗೆದ್ದ ಪ್ರದೇಶಗಳ ಆಡಳಿತ ಚೋಳರ ಕೈಯಲ್ಲಿದ್ದರೆ ಮುಂದೆ ಆ ಪ್ರದೇಶಗಳು ಕೈ ತಪ್ಪುವ ಸಂದರ್ಭ ಬರಲಾರದು ಎಂಬ ಉದ್ದೇಶದಿಂದ ತನ್ನ ಮಗ ಜಟಾವರ್ಮಸುಂದರ ಎಂಬುವವನನ್ನು ಚೋಳಪಾಂಡ್ಯನೆಂಬ ಹೆಸರಿನಿಂದ ಪಾಂಡ್ಯ ರಾಜ್ಯದಲ್ಲಿ ರಾಜ ಪ್ರತಿನಿಧಿಯಾಗಿ ನೇಮಿಸಿದನು. ಇದು ರಾಜೇಂದ್ರ ಚೋಳನ ಯುದ್ಧ ನೀತಿಯ ಚಾಣಕ್ಷತನವೆಂದು ಹೇಳಬಹುದು.
ಕಲ್ಯಾಣಿ ಚಾಲುಕ್ಯ ಮತ್ತು ಚೋಳರು:
ದಕ್ಷಿಣದಲ್ಲಿ ಚೇರ, ಪಾಂಡ್ಯ ಮತ್ತು ಸಿಂಹಳಗಳ ಮೇಲೆ ಯುದ್ಧ ಮಾಡಿ ಅಲ್ಲಿನ ಗೊಂದಲವನ್ನು ನಿವಾರಿಸಿದ ಬೆನ್ನಲ್ಲೆ ಕಲ್ಯಾಣಿ ಚಾಲುಕ್ಯರ ಅರಸ ಜಯಸಿಂಹನು ಚೋಳ ಪ್ರದೇಶಗಳನ್ನು ಪಡೆಯುವ ಹವಣಿಕೆಯಲ್ಲಿದ್ದನು. ಆಗ ರಾಜೇಂದ್ರನು ಜಯಸಿಂಹನೊಡನೆ ಕಾದಾಡಬೇಕಾಯಿತು. ಆದರೆ ಈ ಯುದ್ಧದ ಬಗೆಗೆ ನಿಖರವಾದ ವಿವರಗಳು ದೊರೆತಿಲ್ಲ. ಚೋಳ ಸೈನ್ಯವನ್ನು ರಾಜೇಂದ್ರನು ಹಿಮ್ಮೆಟ್ಟಿಸಿದನು ಎಂದು ಶಾಸನ ವರ್ಣಿಸುತ್ತವೆ. ತಮಿಳು ಪ್ರಶಸ್ತಿಯೊಂದರ ಪ್ರಕಾರ ಮುಸಂಗಿವೆಂಬಲ್ಲಿ ಚೋಳರನ್ನು ಹೆಮ್ಮೆಟ್ಟಿ ತುಂಗಭದ್ರಾ ನದಿಯವರೆಗೆ ಚಾಲುಕ್ಯರ ತಮ್ಮ ಮೇರೆಗಳನ್ನು ವಿಸ್ತರಿಸಿದರೆಂದು ತಿಳಿಯುತ್ತದೆ. ಆದಾಗ್ಯೂ ಯುದ್ಧದ ನಿರ್ಣಯ ಮಾತ್ರ ಅಸ್ಪಷ್ಟವಾಗಿದೆ.
(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)
ವೆಂಗಿ ಮಂಡಲ :
ವೆಂಗಿ ಮಂಡಲದ ಸಾಮಂತನಾಗಿ ಆಳುತ್ತಿದ್ದ ರಾಜೇಂದ್ರ ಚೋಳನ ಭಾವಮೈದುನನಾದ ವಿಮಲಾದಿತ್ಯನು ಮರಣ ಹೊಂದಿದ್ದನು. ಆಗ ವಿಮಲಾದಿತ್ಯನ ದಾಯಾದಿಯಾದ ವಿಜಯಾದಿತ್ಯನು ವೆಂಗಿ ಮಂಡಲದ ಸಿಂಹಾಸನವನ್ನು ಪಡೆದುಕೊಳ್ಳಬೇಕೆಂಬ ಆಸೆಯಿಂದ ವಿಮಲಾದಿತ್ಯನ ಮಗ ಮತ್ತು ಸಿಂಹಾಸನಕ್ಕೆ ಉತ್ತರಾಧಿಕಾರಿಯಾದ ನರೇಂದ್ರನ ಮೇಲೆ ದಾಳಿ ಮಾಡಲು ಯತ್ನಿಸತೊಡಗಿದನು. ಆಗ ವೆಂಗಿ ನರೇಂದ್ರನು ತನ್ನ ಸಹಾಯಕ್ಕಾಗಿ ರಾಜೇಂದ್ರ ಚೋಳನನ್ನು ವಿನಂತಿಸಿಕೊಂಡನು. ನರೇಂದ್ರನ ಸಹಾಯಕ್ಕಾಗಿ ರಾಜೇಂದ್ರ ಚೋಳ ಅಪಾರ ಸೈನ್ಯವನ್ನು ವೆಂಗಿ ಮಂಡಲಕ್ಕೆ ಕಳಿಸಿ, ವಿಜಯಾದಿತ್ಯನನ್ನು ಸೋಲಿಸಿ ನರೇಂದ್ರನನ್ನು ವೆಂಗಿ ಮಂಡಲದ ಸಾಮಂತನಾಗಿ ಮುಂದುವರೆಯುವಂತೆ ಮಾಡಿದ್ದಲ್ಲದೆ ಆತನೊಡನೆ ಉತ್ತಮ ಬಾಂದವ್ಯ ಬೆಳೆಸಲು ತನ್ನ ಮಗಳಾದ ಅಮ್ಮಂಗದೇವಿಯನ್ನು ನರೇಂದ್ರನಿಗೆ ಕೊಟ್ಟು ರಕ್ತ ಸಂಬಂಧಿಯಾಗಿಸಿಕೊಂಡನು. ಏತನ್ಮದ್ದೆ ಚೋಳರ ಮತ್ತು ಚಾಲುಕ್ಯರ ಹಗೆತನ ಮುಂದುವರೆದಿತ್ತು. ಜಯಸಿಂಹನು ಚೋಳರನ್ನು ಸೋಲಿಸಿದ್ದೇನೆ ಎಂಬ ಗರ್ವದಿಂದಿದ್ದಾಗಲೆ ವೆಂಗಿ ಮಂಡಲ ಚೋಳರ ಅಧೀನವಾದಾಗ ಚಾಲುಕ್ಯ ವಂಶದಲ್ಲಿ ಒಂದನೇ ಸೋಮೇಶ್ವರನು ಪಟ್ಟಕ್ಕೆ ಬಂದಿದ್ದನು. ವೆಂಗಿಯ ಸಿಂಹಾಸನ ವಿಜಯಾದಿತ್ಯನಿಗೆ ದೊರಕಿಸಿಕೊಡಲು. ನರೇಂದ್ರನ ಮೇಲೆ ದಾಳಿ ಮಾಡಿ ಕೆಲ ಕಾಲ ವೆಂಗಿ ಮಂಡಲ ಸೋಮೇಶ್ವರನ ಆಧೀನವಾಗಿ ವೆಂಗಿ ಮಂಡಲದಲ್ಲಿ ವಿಜಯಾದಿತ್ಯನು ರಾಜನೆಂದು ಘೋಷಿಸಲಾಯಿತು. ಇದರಿಂದ ಕೋಪಿತಗೊಂಡ ರಾಜೇಂದ್ರ ಚೋಳನು ಎರಡನೇ ಸಲ ವೆಂಗಿ ಮಂಡಲದ ಮೇಲೆ ದಾಳಿ ಮಾಡಿ ತನ್ನ ಅಳಿಯ ನರೇಂದ್ರನನ್ನು ಪುನಃ ಅಧಿಕಾರಕ್ಕೆ ತರಲು ಚಾಲುಕ್ಯ ಸೈನ್ಯವನ್ನು ಹಿಮ್ಮೆಟ್ಟಿಸಿ ಯಶಸ್ಸು ಸಾಧಿಸಿದನು. ವೆಂಗಿ ಪ್ರದೇಶ ಚೋಳರ ಚಾಲುಕ್ಯರ ಬಲಾ ಬಲ ಪರೀಕ್ಷೆಯ ಪ್ರದೇಶವಾಗಿತ್ತೆಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ರಾಜೇಂದ್ರ ಚೋಳನು ಚಾಲುಕ್ಕರನ್ನು ಯಾವುದೇ ಕಾರಣಕ್ಕೆ ವೆಂಗಿ ಪ್ರದೇಶದಲ್ಲಿ ಮತ್ತೆ ಪ್ರವೇಶಿಸದಂತೆ ನೋಡಿಕೊಂಡನು ಮತ್ತು ಚೋಳರ ಪರಮಾಧಿಕಾರ ಚಾಲುಕ್ಯರ ಕೈಗೆ ಹೋಗದಂತೆ ಎಚ್ಚರ ವಹಿಸಿದನು. ವೆಂಗಿ ಮಂಡಲದ ದಾಳಿಯ ನಂತರ ಸಾಮ್ರಾಜ್ಯ ವಿಸ್ತಾರದ ಮಹಾತ್ವಾಕಾಂಕ್ಷೆ ಹೊಂದಿರುವ ರಾಜೇಂದ್ರನು ತನ್ನ ದಾಳಿಯನ್ನು ಸಮರ್ಥ ದಂಡನಾಯಕರೊಂದಿಗೆ ಉತ್ತರದ ಬಂಗಾಳ ಮತ್ತು ಗಂಗಾನದಿಯವರೆಗೂ ಮುಂದುವರೆಸಿದನು. ಚೋಳ ಸೈನ್ಯವು ತನ್ನ ದಾಳಿಯುದ್ದಕ್ಕೂ ಪಂಜುಪಳ್ಳಿ, ಮೆಸ್ಸುನಿ, ಕಳಿಂಗ ಕೋಸಲ, ಅಂಗ ಮತ್ತು ವಂಗ ರಾಜ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ವಿಜಯ ಯಾತ್ರೆಯಲ್ಲಿ ಸೋತ ಅನೇಕ ಅರಸರು ಚೋಳರಿಗೆ ಅಪಾರ ಕಪ್ಪು ಕಾಣಿಕೆಯನ್ನು ಅರ್ಪಿಸಿದರು. ಈ ದಿಗ್ವಿಜಯ ರಾಜೇಂದ್ರನ ಆಳ್ವಿಕೆಯ ಪ್ರಮುಖ ವಿಜಯವೆಂದೇ ಬಣ್ಣಿಸಲಾಗಿದೆ. ಇದರ ನೆನಪಿನ ಕುರುಹು ಆಗಿ ಒಂದು ಹೊಸ ನಗರವನ್ನೇ ನಿರ್ಮಿಸಿದನು. ಗಂಗಾ ನದಿಯವರೆಗೆ ತನ್ನ ಸೈನ್ಯವು ದಿಗ್ವಿಜಯ ಸಾಧಿಸಿರುವ ನೆನಪಿಗಾಗಿ ನಿರ್ಮಿಸಿದ ನಗರಕ್ಕೆ `ಗಂಗೈಕೊಂಡಚೋಳಪುರಂ’ ಎಂದು ಕರೆದು ಅದನ್ನೆ ತನ್ನ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿದನು. ಇಂದಿನ ತಿರುಚನಾಪಳ್ಳಿ ಜಿಲ್ಲೆಯಲ್ಲಿರುವ ಈ ರಾಜಧಾನಿಯ ಸಮೀಪ ಒಂದು ದೊಡ್ಡ ಕೆರೆಯನ್ನು ನಿರ್ಮಿಸಿ “ಚೋಳಗಂಗಂ” ಎಂದು ಹೆಸರಿಟ್ಟನು ಇದಕ್ಕೆ ಈ ಹೆಸರಿಡಲು ಕಾರಣವೆಂದರೆ ತನ್ನ ಉತ್ತರದ ದಿಗ್ವಿಜಯದ ಕಾಲಕ್ಕೆ ಗಂಗಾನದಿಯವರೆಗೂ ಯುದ್ಧ ಮಾಡಿ ಯಶಸ್ವಿಯಾಗಿ ಹಿಂದುರಿಗಿದಾಗ ಗಂಗಾಜಲವನ್ನು ತಂದು ದಕ್ಷಿಣದ ಈ ಕೆರೆಯಲ್ಲಿ ಬೆರೆಸಿದನಂತೆ.
ಕದರಮ್ ಯುದ್ಧ:
ಕ್ರಿ.ಶ. 1025ರಲ್ಲಿ ರಾಜೇಂದ್ರ ಚೋಳರು ಇತಿಹಾಸ ಪ್ರಸಿದ್ಧ ದಾಳಿ ಮಾಡಿದ್ದಾನೆಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಆ ಕಾಲದಲ್ಲಿ ಶೈಲೆಂದ್ರ ಸಾಮ್ರಾಜ್ಯವು, ತನ್ನ ನೌಕಾಪಡೆಗೆ ಪ್ರಸಿದ್ದಿಯಾಗಿತ್ತು. ಅಂತಹ ಬಲಿಷ್ಠ ಸಾಮ್ರಾಜ್ಯ ತನ್ನ ಅಧೀನದಲ್ಲಿರಬೇಕೆಂಬ ಮತ್ತು ರಾಜ್ಯ ವಿಸ್ತರಣಾ ನೀತಿ ಹೊಂದಿರುವ ರಾಜೇಂದ್ರ ಚೋಳನು ಅಪಾರವಾದ ಭೂಸೈನ್ಯ ಮತ್ತು ನೌಕಾಪಡೆಯನ್ನು ಕಳಿಸಿ ದಾಳಿಗೈದನು. ಚೋಳರು ನೌಕಾಪಡೆಯು ಬಂಗಾಳಕೊಲ್ಲಿಯನ್ನು ದಾಟಿ ಜಾವಾ ಸುಮತ್ರಾ ಮತ್ತು ಮಲಯಾ ಪರ್ಯಯಾ ದ್ವೀಪಗಳ ಮೇಲೆ ಆಕ್ರಮಣವೆಸಗಿತು. ಈ ಸೈನ್ಯಕ್ಕೆ ಹೆದರಿ ತತ್ತರಿಸಿದ ಶೈಲೆಂದ್ರ ಸೈನ್ಯವು ರಣರಂಗದಿಂದ ಪಲಾಯನ ಮಾಡಿತು. ಆಗ ಅದರ ರಾಜಧಾನಿಯಾದ ಕದರಮ್ ಅನ್ನು ಮುತ್ತಿ ಅಪಾರ ಸಂಪತ್ತು ಚೋಳರ ವಶವಾಯಿತು. ಅಲ್ಲದೆ ಅಲ್ಲಿನ ಅರಸ ವಿಜಯೊತ್ತಾಂಗನು ಸೋತು ಶರಣಾದನು. ಈ ವಿಜಯ ಚೋಳರ ಕೀರ್ತಿಪತಾಕೆಯು ದಶದಿಕ್ಕುಗಳಿಗೆ ಹಬ್ಬುವಂತೆ ಮಾಡಿತು. “ಈ ದಿಗ್ವಿಜಯ ಪ್ರಾಚೀನ ಭಾರತದ ಇತಿಹಾಸದಲ್ಲಿ ಎಣೆಯಿಲ್ಲದ ಘಟನೆಯಾಗಿದೆ’ ಎಂದು ಪ್ರೊ. ಬಿ. ಷೇಕ್‌ಅಲಿ ಅಭಿಪ್ರಾಯ ಪಡುತ್ತಾರೆ.
ದಕ್ಷಿಣದಲ್ಲಿ ಆಳಿದ ಅರಸರಲ್ಲಿಯೇ ಮಹಾ (ಶ್ರೇಷ್ಠ) ಪರಾಕ್ರಮಿ, ವೀರಯೋಧ, ಚೋಳ ಸಾಮ್ರಾಜ್ಯವನ್ನು ಗಟ್ಟಿಯಾದ ನೆಲೆಗಟ್ಟಿನ ಮೇಲೆ ನೆಲೆಸಿ, ಸುಮಾರು 32 ವರ್ಷಗಳ ಕಾಲ ರಾಜ್ಯವಾಳಿದ ತಮಿಳು ಸಂಸ್ಕೃತಿಯ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿ ಇತಿಹಾಸದಲ್ಲಿ ಅದ್ವಿತೀಯ ವ್ಯಕ್ತಿಯೆನಿಸಿಕೊಂಡಿದ್ದಾನೆ. ತನ್ನ ಆಡಳಿತದ ಉದ್ದಕ್ಕೂ ಅನೇಕ ಯುದ್ಧಗಳಲ್ಲಿ ವಿಜಯನಾಗಿ ಗಂಗೈಕೊಂಡ ಮುಡಿಕೊಂಡ, ಕದರನಗೊಂಡ ಮತ್ತು ಪಂಡಿತ ಚೋಳಗಳೆಂಬ ಬಿರುದುಗಳೊಂದಿಗೆ ಚೋಳರ ಇತಿಹಾಸದಲ್ಲಿ ಅಪ್ರತಿಮ ವೀರನೆನಿಸಿಕೊಂಡಿದ್ದಾನೆ.
ಚೋಳರ ಆಡಳಿತ:
ವಿಸ್ತಾರವಾದ ಸಾಮ್ರಾಜ್ಯ ಮತ್ತು ಚಕ್ರಾದಿಪತ್ಯದ ಪ್ರಭುತ್ವದ ಜೊತೆಗೆ ಪ್ರಜೆಗಳಿಗೆ ಗೌರವಾದರಗಳಿಂದ ಕೂಡಿರುವ ಚೋಳರ ಆಡಳಿತ ಕ್ರಮವು ಅಷ್ಟೇ ಜನಪ್ರಿಯವಾಗಿತ್ತು. ಆಧುನಿಕ ಸರಕಾರಗಳು ಅಳವಡಿಸಿಕೊಂಡಿರುವ ಸ್ಥಳೀಯಾಡಳಿತ ಕ್ರಮ ಕ್ರಿ.ಶ. 9ನೇ ಶತಮಾನದಲ್ಲಿಯೇ ಅಳವಡಿಸಿಕೊಂಡಿರುವದು ಅವರ ಆಡಳಿತ ದಕ್ಷತೆ ಮತ್ತು ಸುಧಾರಣೆಯ ಕೈಗನ್ನಡಿಯಾಗಿದೆ. ಘನವಂತನಾದ ರಾಜರಾಜ ಮತ್ತು ಅಪ್ರತಿಮ ಶೂರ ರಾಜೇಂದ್ರ ಚೋಳರು ಆಳಿರುವ ಈ ಸಾಮ್ರಾಜ್ಯದ ಆಡಳಿತವು ಸಹ ಇತಿಹಾಸದಲ್ಲಿ ಅಷ್ಟೆ ಮಹತ್ವವನ್ನು ಪಡೆದಿದೆ.
ಚೋಳರ ಕೇಂದ್ರಾಡಳಿತ:
ಚೋಳರ ಆಡಳಿತ ಕ್ರಮದಲ್ಲಿ ಅರಸನೆ ಸರ್ವೋಚ್ಚನಾಗಿದ್ದು, ಜನರು ಆತನ ಸರ್ವಾಧಿಕಾರವನ್ನು ಸದಾ ಮನ್ನಿಸುತ್ತಿದ್ದರು. ಅರಸೊತ್ತಿಗೆ ದೈವಿ ಪ್ರತೀಕವೆಂದು ಪರಿಗಣಿಸಿದ್ದರಿಂದ ಚಕ್ರಾಧಿಪತ್ಯದ ಪ್ರಭುತ್ವ ಮತ್ತು ಗೌರವಗಳು ಸಾಕಷ್ಟು ಹೆಚ್ಚಿಸಿದವು. ಅತ್ಯಂತ ವೈಭವೋಪೇತವಾದ ರಾಜಧಾನಿಗಳು ವಿಶಾಲ ಆಸ್ಥಾನ ಮಂತ್ರಿ ಪರಿಷತ್ ಹೊಂದಿರುವ ಅರಮನೆಯು ಸಂಬಂಧಿಕರನ್ನೊಳಗೊಂಡಿದ್ದ ಅರಸ ಪ್ರಜೆಗಳ ದೃಷ್ಟಿಯಲ್ಲಿ ದೇವರಂತೆ ಗೋಚರಿಸುತ್ತಿದ್ದನೆಂಬುವುದರಲ್ಲಿ ಯಾವುದೇ ಉತ್ಕೃಕ್ಷವಿಲ್ಲ. ಏಕೆಂದರೆ ಅನೇಕ ದೇವಾಲಯಗಳು ಮತ್ತು ದೇವತೆಗಳ ಮೂರ್ತಿಗಳಿಗೆ ರಾಜ ಮತ್ತು ರಾಣಿಯರ ಹೆಸರು ನೋಡಿದರೆ ಇವರು ದೇವರಿಗೆ ಸಮಾನರಾದವರೆಂದು ಭಾವಿಸಲಾಗುತ್ತಿತ್ತು.
ಚೋಳರ ಕಾಲದಲ್ಲಿ ರಾಜತ್ವವು ವಂಶಪಾರಂಪರೆಯಾಗಿತ್ತು ಆದರೆ ರಾಜನು ನಿರಂಕುಶವಾಗಿ ಆಡಳಿತ ನಡೆಸುತ್ತಿರಲಿಲ್ಲ. ಪ್ರಜಾಹಿತವೆ ಆತನ ಮುಖ್ಯ ದ್ವೇಯವಾಗಿತ್ತು. ಸಾಮಾನ್ಯವಾಗಿ ಅರಸನ ಹಿರಿಯ ಮಗ ಯುವರಾಜನಾಗಿದ್ದು ತಂದೆಯ ನಂತರ ಪಟ್ಟಕ್ಕೆ ಬರುತ್ತಿದ್ದನು. ಅರಸನಿಗೆ ಆಡಳಿತದಲ್ಲಿ ಸಲಹೆ ಸೂಚನೆಗಳನ್ನು ನೀಡಲು ಮಂತ್ರಿ ಪರಿಷತ್ ಅಥವಾ ಸಲಹಾ ಸಮಿತಿ ಇದ್ದಿತು. ರಾಜನ ಯಾವುದೇ ಆಜ್ಞೆಗಳು ಜಾರಿಗೊಳಿಸಲು ಮಂತ್ರಿ ಮಂಡಲದ ಕನಿಷ್ಟ ಇಬ್ಬರ ಸಮ್ಮತಿ ಪಡೆದುಕೊಳ್ಳಲೇಬೇಕಾಗಿತ್ತು. ರಾಜಧಾನಿಯಲ್ಲಿ ಒಡೋಲಗ ನಡೆದಾಗ ಸಾಮಂತರು, ಮಂಡಲಾಧಿಪತಿಗಳು, ಮಂತ್ರಿಗಳು, ದಂಡನಾಯಕರು, ವಿದ್ವಾಂಸರು, ಕಲಾತಜ್ಞರು ಉಪಸ್ಥಿತರಿರುತ್ತಿದ್ದರು. ಕೇಂದ್ರ ಸರಕಾರದ ಆಡಳಿತ ನಿರ್ವಹಣೆಯಲ್ಲಿ ಮಂತ್ರಿಗಳಲ್ಲದೆ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರುತ್ತಿದ್ದರು. ಅಧಿಕಾರಿ ವರ್ಗವನ್ನು “ಪೆರೆಂದರೆ”ಎಂದು ಮತ್ತು ಸಿಬ್ಬಂದಿ ವರ್ಗವನ್ನು “ನಿರಂತರಂ”ಎಂದು ಕರೆಯಲಾಗುತ್ತಿತ್ತು.
ಸಾಮಾನ್ಯವಾಗಿ ಅರಸನು ಕೇವಲ ರಾಜಧಾನಿಯಲ್ಲಿ ಕುಳಿತು ಪ್ರಜೆಗಳ ಕಷ್ಟಸುಖಗಳನ್ನು ವಿಚಾರಿಸದೆ ರಾಜ್ಯದ ಅನೇಕ ಭಾಗಗಳಲ್ಲಿ ಸಂಚರಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದನು. ಆಸ್ಥಾನದ ಒಡೋಲಗವು ರಾಜ್ಯದ ವಿವಿಧ ಪಟ್ಟಣಗಳಲ್ಲಿ ನಡೆಸುತ್ತಿದ್ದನು. ಇವರ ಕಾಲದಲ್ಲಿ ಒಡೋಲಗ ನಡೆಸಿದ ಸ್ಥಳಗಳೆಂದರೆ, ತಂಜಾವೂರು, ಕಾಂಚಿಪುರ, ಗಂಗೈಕೊಂಡ ಚೋಳಾಪುರ, ಚಿದಂಬರಂ ಮುಂತಾದವುಗಳು ಕೇಂದ್ರ ಸರಕಾರದಲ್ಲಿ ಹಣಕಾಸಿನ ಮೇಲ್ವಿಚಾರಣೆ, ವಿದೇಶಾಂಗನೀತಿ, ಸೈನ್ಯಾಡಳಿತ ಮುಂತಾದವುಗಳು ಕೇಂದ್ರದ ಅಧೀನದಲ್ಲಿದ್ದವು ಒಡೋಲಗಗಳಲ್ಲಿ ಅರಸನು ವಿದ್ವಾಂಸರಿಗೆ, ಬ್ರಾಹ್ಮಣರಿಗೆ, ಕಲಾಕಾರರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ವಿಶೇಷ ಕಾರ್ಯವನ್ನು ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತಿದ್ದನು. ಅರಸನು ವಿವಿಧ ಪ್ರದೇಶಗಳಲ್ಲಿ ಸಂಚರಿಸುವಾಗ ಆತನ ಬೆಂಗಾವಲಾಗಿ ಅಂಗ ರಕ್ಷಕರು ಇರುತ್ತಿದ್ದರು.
(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)
ಯುವರಾಜ:
ಚೋಳ ಸಾಮ್ರಾಜ್ಯದಲ್ಲಿ ಸಾಮಾನ್ಯವಾಗಿ ಜೇಷ್ಠ ಪುತ್ರನನ್ನೇ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಪದ್ಧತಿ ಇದ್ದಿತು. ಆದಾಗ್ಯೂ ಕೆಲವು ಸಂದರ್ಭದಲ್ಲಿ ಸಿಂಹಾಸನಕ್ಕಾಗಿ ಸಹೋದರರ ಮಧ್ಯೆ ಕಾದಾಟ ನಡೆದಿದ್ದು ನೋಡಬಹುದು ರಾಜರಾಜ ಚೋಳನ ನಂತರ ಜೇಷ್ಠ ಪುತ್ರನಿಗೆ ಸೂಕ್ತ ಕಾಲದಲ್ಲಿಯೇ ಯುವರಾಜ ಪಟ್ಟಾಭಿಷೇಕವನ್ನು ನೇರವೇರಿಸುತ್ತಿದ್ದರು. ಇದು ಸಿಂಹಾಸನಕ್ಕಾಗಿ ಕಚ್ಚಾಟಗಳು ತಪ್ಪಿಸುವ ಸುಲಭ ಉಪಾಯವಾಗಿತ್ತು. ಯುವರಾಜನಿಗೆ ಆಡಳಿತ ಪದ್ಧತಿಯ ನಿರ್ವಹಣೆ, ಯುದ್ಧ ಕೌಶಲ್ಯ ಮುಂತಾದ ವಿಷಯಗಳಲ್ಲಿ ಪರಿಣಿತ ಹೊಂದಲು ಅರಸನು ಏರ್ಪಾಡು ಮಾಡುತ್ತಿದ್ದನು. ಇವರ ಕಾಲದಲ್ಲಿ ಅರಸನಾಗುವ ವ್ಯಕ್ತಿ ಸುಶಿಕ್ಷಿತನಾಗಿರಬೇಕೆಂಬ ಜನರ ಅಭಿಪ್ರಾಯವಾಗಿತ್ತು. ಯುವರಾಜನು ತನ್ನ ತಂದೆಯ ಬೆಂಗಾವಲಾಗಿ ಅನೇಕ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದನು. ಉದಾಹರಣೆಗೆ ರಾಜರಾಜ ಚೋಳನ ಮಗ ರಾಜೇಂದ್ರ ಚೋಳನು ತನ್ನ ತಂದೆಯೊಡನೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದುಂಟು.
ಚೋಳರ ಸೈನ್ಯಾಡಳಿತ
ಚೋಳರು ಪ್ರಬಲವಾದ ಭೂಸೈನ್ಯ ಮತ್ತು ನೌಕಾದಳವನ್ನು ಹೊಂದಿದ್ದರು. ಅವರ ಸೈನ್ಯಾಡಳಿತದಲ್ಲಿ ಮುಖ್ಯವಾಗಿ ಗಜದಳ, ಅಶ್ವದಳ, ಪದಾತಿದಳ, ಇದ್ದವು ಭೂಸೈನ್ಯವನ್ನು ಸುಮಾರು 70 ಶಾಖೆಗಳಲ್ಲಿ ವಿಂಗಡಿಸಲಾಗಿತ್ತು ಎಂದು ಶಾಸನದ ಮೂಲಕ ತಿಳಿದು ಬರುತ್ತದೆ. ಸೈನಿಕರಿಗಾಗಿ ತರಬೇತಿ ಕೇಂದ್ರಗಳು ಮತ್ತು ಆಯುಧಗಾರಗಳು ಇದ್ದವು. ಅವರ ತರಬೇತಿ ಮತ್ತು ಶಿಸ್ತಿಗೆ ಹೆಚ್ಚಿನ ಮಹತ್ವವನ್ನು ಕೊಡಲಾಗುತ್ತಿತ್ತು. ಚೋಳರ ಸೈನ್ಯದಲ್ಲಿ 60,000 ಆನೆಗಳಿದ್ದು ಸುಮಾರು 1 ಲಕ್ಷ 50 ಸಾವಿರ ಸೇನಾ ಪಡೆ ಇದ್ದಿತ್ತು. ಸೈನ್ಯದಲ್ಲಿ “ವೇಳ್ವೆಕರ” ಎಂಬುವವರು ರಾಜನಿಗೆ ಅಂಗರಕ್ಷಕರಾಗಿದ್ದರು. ಯುದ್ಧದ ಸಂದರ್ಭದಲ್ಲಿ ಇವರು ಮಹತ್ವದ ಪಾತ್ರವಹಿಸುತ್ತಿದ್ದರು. ಯುದ್ಧದಲ್ಲಿ ಒಂದು ವೇಳೆ ರಾಜನ ಜೀವಕ್ಕೆ ಅಪಾಯ ಒದಗುವ ಸಂದರ್ಭ ಬಂದರೆ ಪ್ರಾಣಾರ್ಪಣೆ ಮಾಡಿ ರಾಜನನ್ನು ರಕ್ಷಿಸುತ್ತಿದ್ದರು. ಕೆಲವು ಸಂದರ್ಭದಲ್ಲಿ ತಾವು ಸಜೀವ ದಹನಗೊಂಡು ರಾಜನನ್ನು ರಕ್ಷಣೆ ಮಾಡಿದ ಉದಾಹರಣೆಗಳಿವೆ. ಸೈನ್ಯದ ಮುಂದಾಳತ್ವವನ್ನು ಸೇನಾಪತಿ, ದಂಡನಾಯಕ ಮತ್ತು ಮಹಾಪ್ರಚಂಡ ದಂಡನಾಯಕರು ವಹಿಸಿಕೊಳ್ಳುತ್ತಿದ್ದರು. ಅರಸನು ಈ ಎಲ್ಲಾ ದಂಡನಾಯಕರ ಸರ್ವಶ್ರೇಷ್ಟ ದಂಡನಾಯಕನಾಗಿದ್ದನು. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಜಯಗಳಿಸಲು ಸಹಾಯಕಾರಿಯಾದ ಯೋಧನಿಗೆ ”ಕ್ಷತ್ರಿಯಾ ಶಿಖಾಮಣಿ” ಎಂಬ ಬಿರುದನ್ನು ನೀಡಿ ಗೌರವಿಸಲಾಗುತ್ತಿತ್ತು. ಸೈನಿಕರಿಗಾಗಿಯೇ ಅನೇಕ ವಸಾಹತುಗಳನ್ನು ಸ್ಥಾಪಿಸಲಾಗಿತ್ತು. ಆ ವಸಾಹತುಗಳಿಗೆ ‘ಕಟಕ’ ಎಂದು ಕರೆಯಲಾಗುತ್ತಿತ್ತು. 1178ರಲ್ಲಿ ಚೀನಾ ಯಾತ್ರಿಕನು ವಿವರಿಸುವಂತೆ ಚೋಳರ ಸೈನ್ಯದಲ್ಲಿ ಸೈನಿಕರು ಆನೆಯ ಮೇಲೆ ಕುಳಿತು ಬಿಲ್ಲು ಬಾಣ ಮತ್ತು ಈಟಿಗಳನ್ನು ಹಿಡಿದು ಯುದ್ಧ ಮಾಡುತ್ತಿದ್ದರು. ಅಶ್ವದಳ, ಬಿಲ್ಲುಗಾರರು ಮತ್ತು ಕತ್ತಿ ಗುರಾಣಿ ಹಿಡಿದು ಹೋರಾಟ ಮಾಡುವ ಪ್ರತ್ಯೇಕ ತುಕಡಿಗಳಿದ್ದವೆಂದು ವರ್ಣಿಸಿದ್ದಾನೆ. ಇವರ ಸೈನ್ಯಕ್ಕೆ ಕುದುರೆಗಳನ್ನು ಅರಬ್ಬ ದೇಶದಿಂದ ತರಿಸಿಕೊಳ್ಳುತ್ತಿದ್ದರು. ಚೇರ, ಸಿಂಹಳ ಮತ್ತು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸುಮಾರು ದ್ವೀಪಗಳನ್ನು ಗೆದ್ದುದಲ್ಲದೆ ಮಲಯಾ ಪರ್ಯಾಯ ದ್ವೀಪಗಳ ಮೇಲೆ ಸಾಧಿಸಿದ ವಿಜಯವು ಚೋಳರ ನೌಕಾಪಡೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಸೈನಿಕರಿಗೆ ಜೀವನ ನಿರ್ವಹಣೆಗಾಗಿ ನಗದು ರೂಪದಲ್ಲಿ ಅಥವಾ ಭೂಮಿಯನ್ನು ಉಂಬಳಿಯಾಗಿ ಕೊಡಲಾಗುತ್ತಿತ್ತು.
ಚೋಳರ ಸ್ಥಳೀಯ ಆಡಳಿತ:
ಚೋಳ ಅರಸ ಒಂದನೆ ರಾಜರಾಜನ ಕಾಲಕ್ಕೆ ತನ್ನ ಸಾಮ್ರಾಜ್ಯವನ್ನು ಎಂಟು ಮಂಡಲ ಅಥವಾ ಪ್ರಾಂತಗಳಾಗಿ ವಿಂಗಡಿಸಿದ್ದನು. ಈ ಮಂಡಲಗಳು ಪುನ: `ವಳನಾಡು’ ಮತ್ತು ‘ನಾಡು’ಗಳಾಗಿ ವಿಂಗಡಿಸಿ ಆಡಳಿತಾತ್ಮಕ ದೃಷ್ಟಿಯಿಂದ ನಾಡುಗಳನ್ನು ‘ಕುದ್ರಂ’ ಅಥವಾ ‘ಕೊಟ್ಟಂ’ಗಳಾಗಿ ಮಾರ್ಪಡಿಸಿ ಪ್ರತಿ ಕೊಟ್ಟಂಗಳ ಅಥವಾ ಉಪವಿಭಾಗದಲ್ಲಿ ಆಂತರಿಕ ಸ್ವಾತಂತ್ರ್ಯವುಳ್ಳ ಅನೇಕ ಹಳ್ಳಿಗಳಿದ್ದವು. ಚೋಳರ ಆಡಳಿತದಲ್ಲಿ ಈ ಹಳ್ಳಿಗಳು ಸ್ಥಳೀಯ ಆಡಳಿತದಲ್ಲಿ ಅತ್ಯಂತ ವೈಶಿಷ್ಟ್ಯ ಪೂರ್ಣವಾದ ಪಾತ್ರವಹಿಸಿದ್ದವು. ಕ್ರಿ.ಶ. 8 ಮತ್ತು 9 ಶತಮಾನದಲ್ಲಿದ್ದ ಪಲ್ಲವರು ಮತ್ತು ಪಾಂಡ್ಯರ ಕಾಲದಲ್ಲಿದ್ದ ‘ಸಭಾ’ಗಳು ಮತ್ತು ಸಮಿತಿಗಳು ಹಳ್ಳಿಗಳಲ್ಲಿದ್ದವು. ಅವು ಸಹ ಸ್ವಾಯತ್ತತೆ ಹೊಂದಿದ್ದವಾದರೂ ಅವುಗಳ ಬೆಳವಣಿಗೆ ಸಂಪೂರ್ಣವಾಗಿರಲಿಲ್ಲ. ಕ್ರಿ.ಶ. ಹತ್ತನೇ ಶತಮಾನದ ಚೋಳರ ಕಾಲದ ಹಳ್ಳಿಗಳ ಸ್ವಾಯತ್ತತೆ ಪರಿಪೂರ್ಣವಾಗಿತ್ತೆಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಚೋಳರ ಕಾಲದ ಹಳ್ಳಿಗಳಲ್ಲಿರುವ ಮುಖ್ಯವಾದ ಆಡಳಿತಾಂಗಗಳೆಂದರೆ ‘ಉರ್’ ಮತ್ತು ‘ಸಭಾ’ಗಳು ಈ ಸಂಸ್ಥೆಗಳಲ್ಲಿ ‘ಉರ್’ ಸಾಮಾನ್ಯ ಮಾದರಿಯ ಸಂಸ್ಥೆಯಾಗಿದ್ದರೆ ‘ಸಭಾ’ ಅಗ್ರಹಾರ ಅಥವಾ ಬ್ರಾಹ್ಮಣರ ವಸಾಹತು ಸಮೂಹ ಅಥವಾ ಸಭೆಯಾಗಿತ್ತು. ಈ ವಿಧವಾದ ಸಭಾ ಮತ್ತು ಸಮಿತಿಗಳ ಮೂಲವು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿದೆ ಎಂಬುದು ಸತ್ಯನಾಥ ಅಯ್ಯರ್ ಅಭಿಪ್ರಾಯ ಪಡುತ್ತಾರೆ.
ಉತ್ತರ ಮೇರುರ್ ಶಿಲಾಶಾಸನಗಳು:
ಚಂಗ್ಲಪುಟ ಜಿಲ್ಲೆಯ ಉತ್ತರ್‌ಮೆರುರ್ ಎಂಬಲ್ಲಿ ಸಿಕ್ಕಿರುವ ಎರಡು ಶಿಲಾಶಾಸನಗಳು ಚೋಳರ ಸ್ಥಳೀಯ ಆಡಳಿತವನ್ನು ತಿಳಿಯಲು ಅತ್ಯಂತ ಮಹತ್ವ ಪೂರ್ಣ ದಾಖಲೆಗಳಾಗಿವೆ. ಕ್ರಿ.ಶ. 919 ಮತ್ತು 921ರಲ್ಲಿ ಚೋಳ ಅರಸ ಒಂದನೇ ಪಾರಾಂತಕನು. ತನ್ನ ಆಡಳಿತದ 12 ಮತ್ತು 14ನೇ ವರ್ಷಗಳ ಕಾಲದಲ್ಲಿ ರಾಜ್ಯದ ಪ್ರಮುಖರೊಡನೆ ಸಭೆ ನಡೆಸಿ ಒಂದು ಮಹತ್ವವಾದ ನಿರ್ಣಯವೊಂದನ್ನು ಕೈಗೊಂಡನು ಅದರನ್ವಯ ಹಳ್ಳಿಗಳಿಗೆ ಸಂಪೂರ್ಣ ಸ್ವಾಯತ್ತತೆ ನೀಡಿ ಅಲ್ಲಿ ಹೆಚ್ಚಿನ ಅಧಿಕಾರದ ಬಗ್ಗೆ ಚರ್ಚಿಸಲಾಯಿತಾದರೂ ಅದು ಅಪೂರ್ಣವಾಗಿ ಉಳಿಯಿತು. ತದನಂತರ ಎರಡನೇ ಸಭೆ ಅಂದರೆ 921ರಲ್ಲಿ ಮತ್ತೆ ಒಂದು ಠರಾವು ಮಂಡಿಸಿ ಅದರನ್ವಯ ಹಳ್ಳಿಗಳಲ್ಲಿರುವ ಪ್ರತಿವಿಭಾಗಗಳು ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಮತ್ತು ಎಲ್ಲಾ ಆಡಳಿತಾತ್ಮಕ ನಿರ್ಣಯಗಳು ಈ ಚುನಾಯಿತ ಪ್ರತಿನಿಧಿಗಳು ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಮತ್ತು ಎಲ್ಲಾ ಆಡಳಿತಾತ್ಮಕ ನಿರ್ಣಯಗಳು ಈ ಚುನಾಯಿತ ಪ್ರತಿನಿಧಿಗಳಿಂದಲೆ ಕೈಗೊಳ್ಳಬೇಕೆಂಬ ನಿರ್ಣಯ ಅಂಗಿಕರಿಸಲಾಯಿತು. ಆ ಪ್ರತಿನಿಧಿಗಳ ಚುನಾವಣೆ, ಅರ್ಹತೆ ಅಧಿಕಾರ ಮತ್ತು ಕಾರ್ಯಗಳ ಸ್ಕೂಲ ನಿರೂಪಣೆಯೆ ಉತ್ತರ ಮೇರುರ್ ಶಾಸನದ ಸಾರವಾಗಿದೆ.
(ಚೋಳ ಸಂತತಿಯ ಇತಿಹಾಸ – ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)
ಅಭ್ಯರ್ಥಿಯ ಅರ್ಹತೆಗಳು:
ಹಳ್ಳಿಯ ಸ್ಥಳೀಯ ಸಂಸ್ಥೆಗೆ ಸದಸ್ಯನಾಗಬಯಸುವ ಅಭ್ಯರ್ಥಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕಾಗಿತ್ತು.
ಅವನು ಕನಿಷ್ಠ 1/4 ‘ಮೈಲಿ’ (ಒಂದುವರೆ ಎಕರೆಯಾಗುವಷ್ಟು) ಸ್ವಂತ ಜಮೀನನ್ನು ಹೊಂದಿರಬೇಕು.
ಸ್ವಂತ ಜಾಗದಲ್ಲಿ ನಿರ್ಮಿಸಿರುವ ಒಂದು ಮನೆ ಇರಬೇಕು.
ಚುನಾವಣೆಗೆ ಸ್ಪರ್ಧಿಸಬೇಕಾದರೆ ಕನಿಷ್ಠ 35 ವರ್ಷದವರಾಗಿರಬೇಕು ಮತ್ತು ಗರಿಷ್ಠ ವಯಸ್ಸು 70ಕ್ಕೆ ನಿಗದಿ ಪಡಿಸಲಾಗಿತ್ತು.
ವೈದಿಕ ಮಂತ್ರ ಮತ್ತು ಬ್ರಾಹ್ಮಣಗಳ ಜ್ಞಾನವಿರಬೇಕು ಅಥವಾ ಆತನಿಗೆ 1/8 ಮೈಲಿಯಷ್ಟು ಭೂಮಿಯಿದ್ದು ಯಾವುದಾದರೂ ಒಂದು ವೇದ ಮತ್ತು ಒಂದು ಭಾಷ್ಯದಲ್ಲಿ ಪರಿಣಿತನಾಗಿದ್ದರೆ ಸಾಕು.
ಸ್ಥಳೀಯವಾಗಿಯೂ ಜನಪರವ್ಯಕ್ತಿಯಾಗಿರಬೇಕು
ಯಾವುದಾದರು ಉದ್ಯೋಗ ವಹಿವಾಟುಗಳಲ್ಲಿ ನಿಪುಣನಾಗಿರುವದು ಅವಶ್ಯವಾಗಿತ್ತು
ನೈತಿಕ ಮಟ್ಟದಿಂದ ಪ್ರಾಮಾಣಿಕತನವನ್ನು ಹೊಂದಿದವನಾಗಿರಬೇಕು.
ಪ್ರಜಾಹಿತ ಚಿಂತಕನಾಗಿ ಆಡಳಿತ ವ್ಯವಸ್ಥೆ ಉನ್ನತ ಅಧಿಕಾರಿಗಳ ಬಗ್ಗೆ ಗೌರವ ಮನೋಭಾವನೆ ಉಳ್ಳವನಾಗಿರಬೇಕು.
ಅರಸರ ಬಗ್ಗೆ ಗೌರವ ಮನೋಭಾವನೆ ಹೊಂದಿರಬೇಕು.
ಆನರ್ಹತೆಗಳು
ಕಳೆದ ಮೂರು ವರ್ಷಗಳಿಂದ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿ ಇದ್ದರೆ.
ಹಿಂದೆ ಯಾವುದಾದರೂ ಒಂದು ಸಮಿತಿಯಲ್ಲಿದ್ದು ಆ ಸಮಿತಿಗೆ ಸಂಬಂದಪಟ್ಟಂತೆ ಸಮರ್ಪಕವಾದ ಲೆಕ್ಕ ಪತ್ರಗಳು ಮತ್ತು ಇತರೆ ಮಾಹಿತಿಗಳು ಕೊಡದೆ ಇದ್ದವರು.
ಹಿಂದಿನ ವರ್ಷಗಳಲ್ಲಿ ಯಾವುದಾದರೊಂದು ಸಮಿತಿಯ ಸದಸ್ಯನಾಗಿದ್ದು, ನಿಯಮಾನುಸಾರ ವರ್ತನೆ ಮಾಡದಿದ್ದ ಸದಸ್ಯನ ಸಮೀಪದ ಸಂಬಂಧಿಗಳು, ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವರು.
ಧರ್ಮಕ್ಕನುಸಾರವಾಗಿ ಸಮಾಜದಲ್ಲಿ ಯಾವುದಾದರು ಪಾಪಕಾರ್ಯಗಳನ್ನು ಮಾಡಿದ್ದವರು.
ರಾಜ್ಯದಲ್ಲಿ ಕೊಲೆ, ದರೋಡೆ, ಸುಲಿಗೆಯನ್ನು ಮಾಡಿದ್ದವರು, ಅಥವಾ ಬೇರೆಯವರ ಆಸ್ತಿಯನ್ನು ಕಬಳಿಸಿದ್ದವರು ಮತ್ತು ಇವರ ಸಂಬಂಧಿಕರು.
ಸಮಾಜದ ಕೀಳು ಜಾತಿಯವರೊಂದಿಗೆ ಬೆರೆತವರು ಮತ್ತು ಒಂದು ವೇಳೆ ಬೆರೆತರೂ ಸಹ ಅದಕ್ಕೆ ತಕ್ಕ ಪ್ರಾಯಶ್ಚಿತಗಳನ್ನು ಮಾಡಿಕೊಳ್ಳದೆ ಇರುವವರು.
ಸಮಾಜ ಬಾಹಿರವಾದ ಅಥವಾ ಪ್ರತಿಬಂಧಿಕವಾದ ಆಹಾರವನ್ನು ತಿಂದು ಶುದ್ದಿ ಮಾಡಿಕೊಳ್ಳದವರಿಗೆ,
ಬ್ರಾಹ್ಮಣನ ಹತ್ಯೆಗೈದವರು.
ಮಧ್ಯಪಾನ ಸೇವನೆಯನ್ನು ಮಾಡುವವರು.
ಆನರ್ಹತೆಗಳು :
ಕಳೆದ ಮೂರು ವರ್ಷಗಳಿಂದ ಸತತವಾಗಿ ಯಾವುದೇ ಒಂದು ಸಮಿತಿಯಲ್ಲಿ ಇದ್ದರೆ.
ಹಿಂದೆ ಯಾವುದಾದರೂ ಒಂದು ಸಮಿತಿಯಲ್ಲಿದ್ದು ಆ ಸಮಿತಿಗೆ ಸಂಬಂದಪಟ್ಟಂತೆ ಸಮರ್ಪಕವಾದ ಲೆಕ್ಕ ಪತ್ರಗಳು ಮತ್ತು ಇತರೆ ಮಾಹಿತಿಗಳು ಕೊಡದೆ ಇದ್ದವರು.
ಹಿಂದಿನ ವರ್ಷಗಳಲ್ಲಿ ಯಾವುದಾದರೊಂದು ಸಮಿತಿಯ ಸದಸ್ಯನಾಗಿದ್ದು, ನಿಯಮಾನುಸಾರ ವರ್ತನೆ ಮಾಡದಿದ್ದ ಸದಸ್ಯನ ಸಮೀಪದ ಸಂಬಂಧಿಗಳು, ಪರಸ್ತ್ರೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದವರು.
ಧರ್ಮಕ್ಕನುಸಾರವಾಗಿ ಸಮಾಜದಲ್ಲಿ ಯಾವುದಾದರು ಪಾಪಕಾರ್ಯಗಳನ್ನು ಮಾಡಿದ್ದವರು.
ರಾಜ್ಯದಲ್ಲಿ ಕೊಲೆ, ದರೋಡೆ, ಸುಲಿಗೆಯನ್ನು ಮಾಡಿದ್ದವರು, ಅಥವಾ ಬೇರೆಯವರ ಆಸ್ತಿಯನ್ನು ಕಬಳಿಸಿದ್ದವರು ಮತ್ತು ಇವರ ಸಂಬಂಧಿಕರು.
ಸಮಾಜದ ಕೀಳು ಜಾತಿಯವರೊಂದಿಗೆ ಬೆರೆತವರು ಮತ್ತು ಒಂದು ವೇಳೆ ಬೆರೆತರೂ ಸಹ ಅದಕ್ಕೆ ತಕ್ಕ ಪ್ರಾಯಶ್ಚಿತಗಳನ್ನು ಮಾಡಿಕೊಳ್ಳದೆ ಇರುವವರು.
ಸಮಾಜ ಬಾಹಿರವಾದ ಅಥವಾ ಪ್ರತಿಬಂಧಿಕವಾದ ಆಹಾರವನ್ನು ತಿಂದು ಶುದ್ದಿ ಮಾಡಿಕೊಳ್ಳದವರಿಗೆ,
ಬ್ರಾಹ್ಮಣನ ಹತ್ಯೆಗೈದವರು.
ಮಧ್ಯಪಾನ ಸೇವನೆಯನ್ನು ಮಾಡುವವರು.
ವಾರಿಯಮ್ ಪದ್ದತಿ:
ಚೋಳರ ಸ್ಥಳೀಯ ಆಡಳಿತದಲ್ಲಿ ಗ್ರಾಮ ಸಭೆಯ ಚುನಾಯಿತ ಸದಸ್ಯರಿಂದ ಅನೇಕ ಉಪಸಮಿತಿಗಳನ್ನು ನೇಮಿಸಲಾಗುತ್ತಿತ್ತು. ಅವುಗಳನ್ನು ವಾರಿಯಮ್ ಎಂದು ಕರೆಯಲಾಗುತ್ತಿತ್ತು. ಅವುಗಳಲ್ಲಿ ಮುಖ್ಯವಾದ ವಾರಿಯಮ್ ಗಳೆಂದರೆ 1. ಸವೆಂತ್ಸರ ವಾರಿಯಮ್ (ವಾರ್ಷಿಕ ಸಮಿತಿ) 2. ತೊಟ್ಟಿ ವಾರಿಯನ್ (ತೋಟ ಸಮಿತಿ) 3. ಏರಿವಾರಿಯಮ್ (ಕೆರೆ ಸಮಿತಿ), 4. ಪೊನ್ ವಾರಿಯಮ್ (ಬಂಗಾರ ಸಮಿತಿ) 5. ನ್ಯಾಯ ಮಹತ್ವರ ವಾರಿ (ನ್ಯಾಯ ಪದ್ಧತಿ), 6. ಉದಾಸೀನ ವಾರಿಯಮ್ (ವಿದೇಶಿಯರ ಉಸ್ತುವಾರಿ).
ಸಂವತ್ಸರ ವಾರಿಯನ್: ಈ ಸಮಿತಿಯಲ್ಲಿ 12 ಜನ ಸದಸ್ಯರಿರುತ್ತಿದ್ದರು, ಈ ಸದಸ್ಯರು ವಯೋವೃದ್ಧರು ಮತ್ತು ಜ್ಞಾನಿಗಳಾಗಿರಬೇಕಾಗಿರುತ್ತಿತ್ತು.
ತೊಟ್ಟವಾರಿಯಮ್: ಈ ಸಮಿತಿಯಲ್ಲಿ 12 ಜನ ಸದಸ್ಯರಿದ್ದು ಅವರಿಗೆ ತೋಟ ನಿರ್ವಹಣೆ ಉಸ್ತುವಾರಿಯನ್ನು ವಹಿಸಿಕೊಡಲಾಗಿದ್ದು ಈ
ಪಂಚಾರ ಫೊನ್ ಸಮಿತಿ ಎಂದರೆ ಬಂಗಾರ ಸಮಿತಿಯೆಂದೆ ಕರೆಯಲಾಗುತ್ತಿದ್ದು. ಈ ಸಮಿತಿಯಲ್ಲಿ 12 ಜನ ಸದಸ್ಯರಿರುತ್ತಿದ್ದರು. ಅಂದರೆ ಪಂಚಾವಾರ ಸಮಿತಿಯ ಆರು ಜನ ಪೊನ್ ಸಮಿತಿಗೆ ಆರು ಜನ.
ನ್ಯಾಯ ಮಹತ್ವರ ಸಮಿತಿ: ಹಳ್ಳಿಯ ನ್ಯಾಯಾಂಗ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಈ ಸಮಿತಿಗೆ ಇತ್ತು.
ಉದಾಸೀನ ಈ ಸಮಿತಿಯ ಬಗ್ಗೆ ನಿರ್ದಿಷ್ಟವಾಗಿ ಹೇಳಲಾಗದಿದ್ದರು ಉತ್ತರ ಮೇರುರು ಗ್ರಾಮವನ್ನು ಬಿಟ್ಟು ಬೇರೆ ಗ್ರಾಮಗಳಲ್ಲಿ ಈ ಸಮಿತಿ ಅಸ್ತಿತ್ವದಲ್ಲಿದ್ದಿತೆಂದು ತಿಳಿದು ಬರುತ್ತದೆ. ಉದಾಸೀನ ಎಂದರೆ ಸನ್ಯಾಸಿಗಳೆಂದು ವಿವರಣೆ ಕೊಡಲಾಗಿದೆ. ಹಾಗೆಂದರೆ ಗ್ರಾಮದಲ್ಲಿನ ಸನ್ಯಾಸಿಗಳ ಉಸ್ತುವಾರಿಯೆ? ಅಥವಾ ಗ್ರಾಮಕ್ಕೆ ಬೇರೆಡೆಯಿಂದ ಬಂದ ಹೊಸಬರೆ? ಅಥವಾ ವಿದೇಶಿಯರೇ ಎಂಬುದರ ಬಗ್ಗೆ ಜಿಜ್ಞಾಸೆಗಳಿವೆ. ಈ ಮೇಲಿನ ಸಮಿತಿಗಳಲ್ಲದೆ ಇನ್ನೂ ಅನೇಕ ಚಿಕ್ಕಪುಟ್ಟ ಸಮಿತಿಗಳ ಅಸ್ತಿತ್ವದಲ್ಲಿದ್ದವು ಈ ಸಮಿತಿಯ ಸದಸ್ಯರುಗಳಿಗೆ “ವರಿಯ ಪೇರು ಮಕ್ಕಳ್” ಎಂದು ಕರೆಯಲಾಗುತ್ತಿತ್ತು.
ವರಿಯ ಪೆರು ಮಕ್ಕಳ್:
ಕುಡುವಲೈ ಪದ್ಧತಿಗಳ ಅನ್ವಯ ತಮ್ಮ ಅದೃಷ್ಟ ಪರೀಕ್ಷಾ ಪದ್ಧತಿಯ ಚುನಾವಣೆಯ ಪ್ರಕಾರ ಆಯಾ ವಿಭಾಗಗಳಿಂದ ಚುನಾಯಿತರಾಗಿ ಬಂದ ಸದಸ್ಯರು ಯಾವುದಾದರೊಂದು ಸಮಿತಿಗೆ ಸದಸ್ಯರಾಗುತ್ತಿದ್ದರು ಈ ಸಮಿತಿಗಳಲ್ಲಿ ಸೇವೆ ಮಾಡುವ ಸದಸ್ಯರಿಗೆ ಅಥವಾ ವ್ಯಕ್ತಿಗಳಿಗೆ “ವರಿಯಪೆರುಮಕ್ಕಳ್” ಎಂದು ಕರೆಯಲಾಗುತ್ತಿತ್ತು. ‘ವರಿಯಪೆರುಮಕ್ಕಳ್’ಗಳಿಗೆ ಯಾವುದೇ ರೀತಿಯ ಸಂಭಾವನೆಯಾಗಲಿ ಪ್ರತಿಫಲವನ್ನಾಗಲಿ ಅಥವಾ ಸಂಬಳವನ್ನಾಗಿ ಕೊಡುತ್ತಿರಲಿಲ್ಲ. ಅಲ್ಲಿ ಮಹಾಸಭಾ ಮತ್ತು ‘ಪೆರುಂಗಿರಿ’ ಎಂಬ ಸಮಿತಿಗಳು ಸಹ ಇದ್ದವು ಅ ಸಮಿತಿಯ ಸದಸ್ಯರನ್ನು ‘ಪೆರುಮಕ್ಕಳ್’ ಎಂದು ಕರೆಯಲಾಗುತ್ತಿತ್ತು.
ಸದಸ್ಯರ ಆಯ್ಕೆ ಪದ್ಧತಿ :
ಒಂದು ಖಾಲಿ ಮಡಿಕೆಯನ್ನಿಟ್ಟು ಅದಕ್ಕೆ ಒಂದು ಚಿಕ್ಕ ರಂಧ್ರವನ್ನು ಮಾಡಿ ಆ ರಂಧ್ರದ ಮೂಲಕ ಸದಸ್ಯನಾಗುವವನ ಹೆಸರನ್ನು ತಾಳೆಯ ಎಲೆಯ ಮೇಲೆ ಬರೆದು ಮಡಿಕೆಯಲ್ಲಿ ಹಾಕಲಾಗುತ್ತಿತ್ತು. ಎಲ್ಲಾ ಮಡಿಕೆಯಲ್ಲಿ ಇರುವ ಚೀಟಿಯನ್ನು ಮತ್ತೊಂದು ಮಡಿಕೆಗೆ ಸುರಿದು ಚೆನ್ನಾಗಿ ಕಲುಕಿ ಚುನಾವಣಾ ಅಧಿಕಾರಿಯ ಸಮಕ್ಷಮದಲ್ಲಿ ಒಬ್ಬ ಚಿಕ್ಕ ಹುಡುಗನಿಂದ ಚೀಟಿಗಳನ್ನು ತೆಗೆಸಿ ಚುನಾ ನಾಯಿತ ಸದಸ್ಯನ ಸದಸ್ಯನ ಹೆಸರನ್ನು ಪ್ರಕಟಿಸಲಾಗುತ್ತಿತ್ತು. ಚುನಾವಣೆಯ ಸಂದರ್ಭದಲ್ಲಿ ಗ್ರಾಮದ ಯುವಕ ಮತ್ತು ವೃದ್ಧ ಸದಸ್ಯರೆಲ್ಲರೂ ಸೇರುತ್ತಿದ್ದರು ಇದನ್ನು ಮಹಾಸಭೆ ಎಂದು ಕರೆಯಲಾಗುತ್ತಿತ್ತು.
ಒಂದು ಖಾಲಿ ಮಡಿಕೆಯನ್ನಿಟ್ಟು ಅದಕ್ಕೆ ಒಂದು ಚಿಕ್ಕ ರಂಧ್ರವನ್ನು ಮಾಡಿ ಆ ರಂಧ್ರದ ಮೂಲಕ ಸದಸ್ಯನಾಗುವವನ ಹೆಸರನ್ನು ತಾಳೆಯ ಎಲೆಯ ಮೇಲೆ ಬರೆದು ಮಡಿಕೆಯಲ್ಲಿ ಹಾಕಲಾಗುತ್ತಿತ್ತು. ಎಲ್ಲಾ ಮಡಿಕೆಯಲ್ಲಿ ಇರುವ ಚೀಟಿಯನ್ನು ಮತ್ತೊಂದು ಮಡಿಕೆಗೆ ಸುರಿದು ಚೆನ್ನಾಗಿ ಕಲುಕಿ ಚುನಾವಣಾ ಅಧಿಕಾರಿಯ ಸಮಕ್ಷಮದಲ್ಲಿ ಒಬ್ಬ ಚಿಕ್ಕ ಹುಡುಗನಿಂದ ಚೀಟಿಗಳನ್ನು ತೆಗೆಸಿ ಚುನಾ ನಾಯಿತ ಸದಸ್ಯನ ಸದಸ್ಯನ ಹೆಸರನ್ನು ಪ್ರಕಟಿಸಲಾಗುತ್ತಿತ್ತು. ಚುನಾವಣೆಯ ಸಂದರ್ಭದಲ್ಲಿ ಗ್ರಾಮದ ಯುವಕ ಮತ್ತು ವೃದ್ಧ ಸದಸ್ಯರೆಲ್ಲರೂ ಸೇರುತ್ತಿದ್ದರು ಇದನ್ನು ಮಹಾಸಭೆ ಎಂದು ಕರೆಯಲಾಗು ಲಾಗುತ್ತಿತ್ತು.
ಮಹಾಸಭೆಯ ಅಧಿಕಾರ ಮತ್ತು ಕರ್ತವ್ಯಗಳು:
ಚೋಳರ ಕಾಲದಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಸ್ಥಳೀಯ ಸ್ವಾಯತ್ತತೆಯ ಸಂಸ್ಥೆಯಾದ ಮಹಾಸಭೆಯು ತನ್ನದೆ ಆದ ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತಿತ್ತು. ಕೇಂದ್ರ ಸರ್ಕಾರದೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದಿ ಕೇಂದ್ರಾಡಳಿತದ ವ್ಯಾಪ್ತಿಯಲ್ಲಿ ಬರುವ ದೇಶದ ಬಾಹ್ಯ ರಕ್ಷಣೆ, ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದು ಸಾಮ್ರಾಜ್ಯದ ಸಾಂಸ್ಕೃತಿಕ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಉಳಿದೆಲ್ಲವು ಸ್ಥಳೀಯ ಆಡಳಿತದ ಅಧಿಕಾರದ ವ್ಯಾಪ್ತಿಯಲ್ಲಿರುತ್ತಿದ್ದವು. ಆದರೆ ಸ್ಥಳೀಯ ಆಡಳಿತದ ಎರಡು ಸಭೆಗಳ ಅಥವಾ 2 ಗ್ರಾಮಗಳ ಮಧ್ಯೆ ಸಂಘರ್ಷ ಉಂಟಾದಾಗ ಕೇಂದ್ರಸರ್ಕಾರವು ಮದ್ಯಪ್ರವೇಶಿಸಿ ತನ್ನ ತೀರ್ಮಾನವನ್ನು ಕೊಡುತ್ತಿತ್ತು. ಚೋಳರ ಕಾಲದ ಸ್ಥಳೀಯ
ಆಡಳಿತದ ಪರಮಾಧಿಕಾರದಲ್ಲಿ ಮುಖ್ಯವಾದವುಗಳೆಂದರೆ ಸ್ಥಳೀಯ ಮಹಾಸಭೆಯ
1. ಸ್ವಾಯತ್ತತೆ,
2. ಕೆಲವು ಪಂಥಗಳಿಗೆ ಸಂಬಂಧಪಟ್ಟ ಜಮೀನಿನ ಮೇಲೆ ಒಡೆತನ,
3. ಖಾಸಗಿ ಭೂಮಿಯು ಮಹಾ ಸಭೆಯ ಅಂಕಿತದಲ್ಲಿರಬೇಕೆಂಬ ಕಟ್ಟಳೆ,
4. ಆಸ್ತಿ ವರ್ಗಾವಣೆ ಮಾಡಬೇಕಾದರೆ ಮಹಾಸಭೆಯ ಪೂರ್ವಾನುಮತಿ ಅವಶ್ಯಕವಾಗಿತ್ತು.
5. ಬಂಜರು ಪ್ರದೇಶ ಮತ್ತು ಅರಣ್ಯಗಳನ್ನು ಸಾಗುವಳಿ ಯೋಗ್ಯ ಭೂಮಿಯನ್ನಾಗಿ ಮಾಡುವುದು.
6.ಸಾಗುವಳಿ ಮಾಡಿದ ಭೂಮಿಯಲ್ಲಿ ಬರುವ ಆದಾಯದ ಆಧಾರದ ಮೇಲೆ ಭೂಕಂದಾಯ ನಿಗದಿಗೊಳಿಸುವುದು.
7.ಭೂಕಂದಾಯವನ್ನು ಯಾವುದೇ ಒಬ್ಬ ರೈತ ಹಲವು ದಿನಗಳವರೆಗೆ ಕೊಡದೇ ಇದ್ದಾಗ ಆತನಿಗೆ ಸಂಬಂಧ ಪಟ್ಟ ಭೂಮಿಯನ್ನು ಹರಾಜಿನಲ್ಲಿ ಮಾರಾಟ ಮಾಡಿ ಕಂದಾಯ ವಸೂಲಿ ಮಾಡುವುದು.
8. ಮಹಾಸಭೆಯ ಅಧಿಕಾರದಲ್ಲಿದ್ದ ಭೂಮಿಗಳಲ್ಲಿ ಒಂದು ವೇಳೆ ಕೇಂದ್ರ ಸರಕಾರವು ವಪಡೆದುಕೊಳ್ಳಬೇಕಾದರೆ ಮಹಾಸಭೆಗೆ ಮುಂಚಿತವಾಗಿ ತಿಳಿಸಿ ಸಭೆಯ ಸರ್ವಾನುಮತವನ್ನು ಪಡೆದುಕೊಳ್ಳಬೇಕಾಗಿತ್ತು.
9. ಅಭಿವೃದ್ಧಿಗೋಸ್ಕರ ವಸೂಲಿ ಸೂಲಿ ಮಾಡುತ್ತಿರುವ ಇತರೆ ತೆರಿಗೆಗಳನ್ನು ಕೆಲವು ಸಂದರ್ಭದಲ್ಲಿ ಮನ್ನಾ ಮಾಡಲಾಗುತ್ತಿತ್ತು.
10. ಪ್ರತಿವರ್ಷವು ಕೊಡಾಬೇಕಾಗಿದ್ದ ಭೂಕಂದಾಯವಾಗಲಿ ಅಥವಾ ತೆರಿಗೆಗಳಾಗಲಿ ಭೂಒಡೆಯನು ಒಂದೇ ಸಲ ಸಲ್ಲಿಸಬಹುದಾಗಿತ್ತು.
ಕರ್ತವ್ಯಗಳು :
ಪ್ರಾಂತಾಡಳಿತದಲ್ಲಿ ಪ್ರಮುಖ ಪಾತ್ರವಹಿಸಿರುವ ಮಹಾ ಸಭೆಯು ತನ್ನದೇ ಆದ ಕೆಲವು ಕರ್ತವ್ಯಗಳನ್ನು ಹೊಂದಿತ್ತು ಅವುಗಳೆಂದರೆ,
ರಸ್ತೆಗಳ ದುರಸ್ತಿ
ಗ್ರಾಮ ರಕ್ಷಣೆ
ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು
ಚಿಕ್ಕ ಕೆರೆಗಳ ನಿರ್ವಹಣೆ ಮತ್ತು ಕಾಲುವೆಗಳ ದುರಸ್ತಿ
ದಾನದತ್ತಿಗಳಿಂದ ಬರುವ ಆದಾಯದ ಮೇಲ್ವಿಚಾರಣೆ ಮತ್ತು ಅದರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದು.
ಧಾರ್ಮಿಕ, ವೈದ್ಯಕೀಯ, ಶೈಕ್ಷಣಿಕ, ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಡಿಸಿ ಅದರ ಉಸ್ತುವಾರಿ ಮಾಡುವುದು.
ಒಟ್ಟಿನಲ್ಲಿ ಹಳ್ಳಿಯ ಜೀವನವನ್ನು ಸುಖ ಸಂತೋಷ ಸಮೃದ್ಧಿಯಿಂದ ಕೂಡಿಸಿ. ಜನತೆಗೆ ಕಷ್ಟ ನೋವುಗಳನ್ನು ಬರದಂತೆ ನೋಡಿಕೊಳ್ಳುವುದು. ಈ ಮಹಾ ಸಭೆಯ ಕರ್ತವ್ಯಗಳಾಗಿದ್ದವು.
(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ) (ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)VVV(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)V(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)V(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ)(ಚೋಳ ಸಂತತಿಯ ಇತಿಹಾಸ - ದಕ್ಷಿಣ ಭಾರತದ ಮಹಾನ್ ಸಾಮ್ರಾಜ್ಯ))
Kannada Gk Questions With Answers : ಈ ಬ್ಲಾಗಿನಲ್ಲಿ ನೀಡಿರುವ ಪ್ರಶ್ನೆಗಳು ಮತ್ತು ಉತ್ತರಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಮಗೆ ಸಹಾಯವಾಗಬಹುದು. ಇಲ್ಲಿ ನೀವು ಕನ್ನಡದಲ್ಲಿ ಸಾಮಾನ್ಯ ಜ್ಞಾನ ಮತ್ತು ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಓದಬಹುದು, ಇದು ನಿಮ್ಮ ಪರೀಕ್ಷಾ ಸಿದ್ಧತೆಯಲ್ಲಿ ಅಗತ್ಯವಾದ ಮಾಹಿತಿ ಮತ್ತು ವಿಶ್ವಾಸವನ್ನು ನೀಡುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ, ಎಸ್‌ಎಸ್‌ಸಿ, ಬ್ಯಾಂಕ್ ಪರೀಕ್ಷೆ, ಶಿಕ್ಷಕರ ನೇಮಕಾತಿ ಪರೀಕ್ಷೆ ಮುಂತಾದವುಗಳಿಗೆ ಬಳಸಬಹುದಾದ ಪ್ರಶ್ನೆಗಳು ಇಲ್ಲಿ ಒದಗಿಸಲ್ಪಟ್ಟಿವೆ. ನಿಯಮಿತ ಅಭ್ಯಾಸದಿಂದ ಸಾಮಾನ್ಯ ಜ್ಞಾನವನ್ನು ವರ್ಧಿಸಿಕೊಳ್ಳಬಹುದು ಮತ್ತು ಉತ್ತಮ ಸಾಧನೆ ಸಾಧಿಸಬಹುದು
Table of Contents
ಸ್ವಾತಂತ್ರ್ಯ ಸಂಬಂಧಿತ ವಿಶೇಷ ಪ್ರಶ್ನೋತ್ತರ
ಪ್ರಶ್ನೆ: ಸ್ವಾತಂತ್ರ್ಯ ದಿನದಂದು ಭಾರತದ ರಾಷ್ಟ್ರೀಯ ಧ್ವಜವನ್ನು ಯಾರು ಹಾರಿಸುತ್ತಾರೆ? ಉತ್ತರ: ಪ್ರಧಾನಮಂತ್ರಿ
ಪ್ರಶ್ನೆ: ಭಾರತದ ಮೊದಲ ಸ್ವಾತಂತ್ರ್ಯ ದಿನದಂದು ಪ್ರಧಾನಮಂತ್ರಿ ಯಾರು? ಉತ್ತರ: ಪಂಡಿತ್ ಜವಾಹರಲಾಲ್ ನೆಹರೂ
ಪ್ರಶ್ನೆ: ಭಾರತಕ್ಕೆ ಸ್ವಾತಂತ್ರ್ಯ ಯಾವ ಕಾಯಿದೆಯ ಅಡಿಯಲ್ಲಿ ಸಿಕ್ಕಿತು? ಉತ್ತರ: ಭಾರತೀಯ ಸ್ವಾತಂತ್ರ್ಯ ಕಾಯಿದೆ 1947
ಪ್ರಶ್ನೆ: 15 ಆಗಸ್ಟ್‌ನಂದು ಭಾರತದೊಂದಿಗೆ ಯಾವ ದೇಶಕ್ಕೂ ಸ್ವಾತಂತ್ರ್ಯ ಸಿಕ್ಕಿತು? ಉತ್ತರ: ದಕ್ಷಿಣ ಕೊರಿಯಾ
ಪ್ರಶ್ನೆ: ಭಾರತದ ಕೊನೆಯ ವೈಸ್ರಾಯ್ ಯಾರು? ಉತ್ತರ: ಲಾರ್ಡ್ ಮೌಂಟ್‌ಬ್ಯಾಟನ್ kannadafactsli.in Kannada Gk Questions With Answers
ಪ್ರಶ್ನೆ: “ಎ ಟ್ರಿಸ್ಟ್ ವಿತ್ ಡೆಸ್ಟಿನಿ” ಭಾಷಣವನ್ನು ಯಾರು ನೀಡಿದರು? ಉತ್ತರ: ಪಂಡಿತ್ ನೆಹರೂ
ಪ್ರಶ್ನೆ: ಭಾರತೀಯ ಸಂವಿಧಾನ ಜಾರಿಗೆ ಬರುವ ಮೊದಲು ಭಾರತ ಯಾವ ಕಾಯಿದೆಯ ಅಡಿಯಲ್ಲಿ ಆಡಳಿತ ನಡೆಸಲ್ಪಡುತ್ತಿತ್ತು? ಉತ್ತರ: ಗವರ್ನ್‌ಮೆಂಟ್ ಆಫ್ ಇಂಡಿಯಾ ಆಕ್ಟ್ 1935
ಪ್ರಶ್ನೆ: ಭಾರತದಲ್ಲಿ 1947 ರ ನಂತರ ಮೊದಲ ಜನಗಣತಿ ಯಾವಾಗ ನಡೆಯಿತು? ಉತ್ತರ: 1951 ರಲ್ಲಿ
ಪ್ರಶ್ನೆ: ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ‘ಇಂಕಲಾಬ್ ಜಿಂದಾಬಾದ್’ ಘೋಷಣೆಯನ್ನು ಯಾರು ನೀಡಿದರು? ಉತ್ತರ: ಭಗತ್ ಸಿಂಗ್
ಪ್ರಶ್ನೆ: ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಬ್ರಿಟನ್‌ನ ಪ್ರಧಾನಮಂತ್ರಿ ಯಾರು? ಉತ್ತರ: ಕ್ಲೆಮೆಂಟ್ ಎಟ್ಲಿ
ಪ್ರಶ್ನೆ: ಭಾರತದಲ್ಲಿ ‘ವಂದೇ ಮಾತರಂ್’ ಗೀತೆಯನ್ನು ಮೊದಲ ಬಾರಿಗೆ ಯಾವಾಗ ಹಾಡಲಾಯಿತು? ಉತ್ತರ: 1896, ಕಾಂಗ್ರೆಸ್ ಅಧಿವೇಶನದಲ್ಲಿ
kannadafactsli.in Kannada Gk Questions With Answers
ಪ್ರಶ್ನೆ: ಇಂಗ್ಲಿಷರ ವಿರುದ್ಧ 1857 ರ ಕ್ರಾಂತಿಯ ನೇತೃತ್ವ ಯಾರು ವಹಿಸಿದ್ದರು? ಉತ್ತರ: ಬಹಾದೂರ್ ಶಾ ಜಫರ್
ಪ್ರಶ್ನೆ: ಸ್ವಾತಂತ್ರ್ಯ ದಿನ ಸಮಾರಂಭದ ಲೈವ್ ಕವರೇಜ್ ಯಾವಾಗ ಪ್ರಾರಂಭವಾಯಿತು? ಉತ್ತರ: 1980 ರಿಂದ
ಪ್ರಶ್ನೆ: ಭಾರತದ ಸ್ವಾತಂತ್ರ್ಯದ ಮೊದಲು ರಾಜಧಾನಿ ಎಲ್ಲಿತ್ತು? ಉತ್ತರ: ಕೋಲ್ಕತ್ತಾ (1911 ರವರೆಗೆ), ನಂತರ ದೆಹಲಿ
ಪ್ರಶ್ನೆ: ಬಂಗಾಳ ವಿಭಜನೆ ಯಾವ ವರ್ಷ ನಡೆಯಿತು? ಉತ್ತರ: 1905 ರಲ್ಲಿ
Kannada Gk Questions With Answers
ಪ್ರಮುಖ ಕ್ರೀಡಾ ಪುರಸ್ಕಾರ ಪ್ರಶ್ನೋತ್ತರ
ಪ್ರಶ್ನೆ: ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರವನ್ನು ಈಗ ಯಾವ ಹೆಸರಿನಿಂದ ಕರೆಯಲಾಗುತ್ತದೆ? ಉತ್ತರ: ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪುರಸ್ಕಾರ
ಪ್ರಶ್ನೆ: ಅರ್ಜುನ ಪುರಸ್ಕಾರವನ್ನು ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ? ಉತ್ತರ: ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರದರ್ಶನ
ಈ “Top 50 GK Question and Answers in Kannada” ಪಟ್ಟಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗಾಗಿ ಸಿದ್ಧತೆಯಲ್ಲಿ ಸಹಾಯ ಮಾಡುತ್ತದೆ. ಸರ್ಕಾರಿ ಮತ್ತು ಖಾಸಗಿ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನವು ಮುಖ್ಯವಾದ ವಿಷಯವಾಗಿದ್ದು, ಈ ಪ್ರಶ್ನೋತ್ತರಗಳು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸಲು ಮತ್ತು ತ್ವರಿತವಾಗಿ ಓದಿಕೊಳ್ಳಲು ನೆರವಾಗುತ್ತದೆ. ವಿದ್ಯಾರ್ಥಿಗಳು ಇದನ್ನು ದಿನನಿತ್ಯ ಅಭ್ಯಾಸ ಮಾಡಿಕೊಳ್ಳುವುದರಿಂದ ಒಳ್ಳೆಯ ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಸಂಪೂರ್ಣ GK ಪ್ರಶ್ನೋತ್ತರ ಸಂಗ್ರಹವು ಅತ್ಯಂತ ಉಪಯುಕ್ತವಾಗಿದೆ.
Table of Contents
ಹಿಸ್ಟರಿ ಪದದ ಅರ್ಥವೇನು ? ಉ: ವಿಚಾರಣೆ ತನಿಕೆ or ಅನ್ವೇಷಣೆ ಎಂದರ್ಥ
ಹಿಸ್ಟರಿ ಪದವು ಯಾವ ಭಾಷೆಯಿಂದ ಬಂದಿದೆ ? ಉ: ಗ್ರೀಕಿನ ಲ್ಯಾಟಿನ್ ಪದದಿಂದ (ಭಾಷೆ) ಬಂದಿದೆ.
“ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ ? ಉ; “ಹೆರೋಡೋಟಾಸ್“.
ಹೆರೋಡೋಸ್ ಯಾವ ದೇಶಕ್ಕೆ ಸೇರಿದವರು ? ಉ: ಗ್ರೀಕ್ ದೇಶಕ್ಕೆ ಸೇರಿದವರು.
ಹೆರೊಡೋಟಾಸನ ಕೃತಿಯನ್ನು ಹೆಸರಿಸಿ ? ಉ: “ಪರ್ಷಿಯನ್ ಕದನಗಳು & ( Histories) ಇತಿಹಾಸ.
ದಿ, ಸಿಟಿ ಆಫ್ ಗಾಢ ಕೃತಿಯನ್ನು ಬರೆದವರು ಯಾರು ? ಉ: “ಸಂತ್ ಅಗಸ್ಟೈನ್“.
ಇತಿಹಾಸದ ಆರ್ಥಿಕ ಅರ್ಥ ವಿವರಣೆಯನ್ನು ನೀಡಿದವನು ಯಾರು ? ಉ: “ಕಾರ್ಲ್ ಮಾರ್ಕ್ಸ್“
ಕಾರ್ಲ್‌ಮಾರ್ಕ್ಸ್‌ನ ಇತಿಹಾಸದ ವ್ಯಾಖ್ಯೆಯನ್ನು ಬರೆಯಿರಿ. ಉ: “ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ” ಎಂದಿದ್ದಾರೆ.
ಇತಿಹಾಸಕ್ಕೆ ಸಂಬಂಧಿಸಿದಂತೆ ಜೆ.ಬಿ. ಬ್ಯೂರಿಯ ವ್ಯಾಖ್ಯೆ ಯಾವುದು ? ಉ: “ಇತಿಹಾಸ ಒಂದು ವಿಜ್ಞಾನ ಹೆಚ್ಚು ಅಲ್ಲ ಕಡಿಮೆಯು ಅಲ್ಲ ಎಂದಿದ್ದಾರೆ.
ಆರ್ನಾಲ್ಡ್ ಟಾಯಬಿಯ ಕೃತಿಯ ತಿಳಿಸಿ ? ಉ: “ಇತಿಹಾಸದ ಅಧ್ಯಯನ” (A Study of History)
Top 50 Gk question and answers in kannada
ಇತಿಹಾಸವನ್ನು “ನಾಗರಿಕತೆಳ ಏಳು ಬೀಳಿನ ಕಥೆ” ಎಂದು ವ್ಯಾಖ್ಯಾನಿಸಿದ್ದು ಯಾರು ? ಉ: “ಆರ್ನಾಲ್ಡ್ ಟಾಬಿ”
ಇತಿಹಾಸಕ್ಕೆ ಜವಾಹರಲಾಲ್ ನೆಹರು ನೀಡಿದ ವ್ಯಾಖ್ಯೆ ಏನು ? ಉ: ಅನಾಗರಿಕತೆಯಿಂದ ನಾಗರೀಕತೆಯಡೆಗೆ ಸಾಗಿದ ಮಾನವನ ಕಥೆಯ ಇತಿಹಾಸ.
ಇತಿಹಾಸವನ್ನು ಕಾಲ ಮತ್ತು ಅಂತರಿಕ್ಷದ ಸುಧೀರ್ಘ ಪ್ರಯಾಣ ಎಂದು ಕರೆದವರು ಯಾರು ? ಅವನ ದೇಶ ಯಾವುದು ? ಉ: “ಆರ್ನಾಲ್ಡ್ ಟಾಯಬಿ, ಮತ್ತುಇವನ ದೇಶ ಬ್ರಿಟನ್” ಆಗಿದೆ.
ಹ್ಯೂಮನ್ (Human) ಪದವು ಯಾವ ಭಾಷೆಯಿಮದ ಬಂದಿದೆ ? ಉ: ಹ್ಯೂಮನ್ ಪದವು ಲ್ಯಾಟಿನ್ ಭಾಷೆಯ ಹ್ಯೋಮನಸ್ ಎಂಬ ಪದದಿಂದ ಬಂದಿದೆ.
‘ಹೋಮೊ‘ ಪದದ ಅರ್ಥವೇನು ? ಉ: ಹೋಮೊ ಪದದ ಅರ್ಥ ಮಾನವ ಅಥವಾ ಮನುಷ್ಯ
ಭೂಮಿ ಯಾವಾಗ ಉಗಮಿಸಿತು ? ಉ: ಭೂಮಿಯು ಉಗಮಿಸಿದ್ದು 4.5 ಬಿಲಿಯನ್ ವರ್ಷದಲ್ಲಿ
ಚಾರ್ಲ್ಸ್ ಡಾರ್ವಿನ್ ರಚಿಸಿದ ಕೃತಿ ಯಾವುದು ? ಉ: ಚಾರ್ಲ್ಸ್ ಡಾರ್ವಿನ್ ಆನ್ ದಿ ಒರಿಜನ್ ಆಫ್ ಸ್ಪೀಷಿಸ್ (the origin of the species (1859))
ಮಾನವನ ಹಾಗೆ ಕಾಣುವ ಜೀವಿಗಳು ಭೂಮಿಯ ಮೇಲೆ ಯಾವಾಗ ಹುಟ್ಟಿಕೊಂಡವು? ಉ: ಮಾನವನ ಹಾಗೆ ಕಾಣುವ ಜೀವಿಗಳು ಸುಮಾರು 20 ಲಕ್ಷ ವರ್ಷಗಳ ಹಿಂದೆ (2 million years ago) ಭೂಮಿಯ ಮೇಲೆ ಕಾಣಿಸಿಕೊಂಡವು.
ಮೇಲುಕುಟುಂಬ ಹೋಮಿನಾಯ್ಕೆಯಿಂದ ಹೋಮಾ ಕುಲವು ಉತ್ಪತ್ತಿಯಾಗಿಲು ಎಷ್ಟು ವರ್ಷಗಳು ಬೇಕಾದವು ? ಉ: 30 ಮಿಲಿಯನ್ ವರ್ಷಗಳು.
ಹೋಮೊ ಕುಲ ಯಾವಾಗ ಅಸ್ತಿತ್ವಕ್ಕೆ ಬಂದಿತು ? ಉ: ಹೋಮೊ ಕುಲ ಸುಮಾರು ೨೫ ಲಕ್ಷ ವರ್ಷಗಳ ಹಿಂದೆ (2.5 million years ago) ಅಸ್ತಿತ್ವಕ್ಕೆ ಬಂದಿತು.
Top 50 Gk question and answers in kannada
ಶಿಲೆಗಳಿಂದ ಆಯುಧಗಳನ್ನು ತಯಾರಿಸಿದ ಪ್ರಥಮ ಮಾನವ ಪ್ರಜಾತಿ ಯಾವುವು? ಉ: ಹೋಮೊ ಹಬಿಲಿಸ್
ದ್ವಿಪಾದಚಲನೆ ಎಂದರೇನು ? ಉ: ಎರಡು ಕಾಲುಗಳನ್ನು ಉಪಯೋಗಿಸಿಕೊಂಡು ನಡೆದಾಡುವುದು ಅಥವ ಓಡಾಡುವುದು ಎಂದರ್ಥ.
ಯಾವ ನದಿಯ ದಂಡೆಯ ಮೇಲೆ ಈಜಿಪ್ಟ್ ನಾಗರಿಕತೆ ಬೆಳವಣಿಗೆ ಆಯಿತು? ಉ: “ನೈಲ್ ನದಿ“
ಮಹಾತ್ಮ ಗಾಂಧೀಜಿಯವರು ನಮ್ಮ ಭಾರತ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟ ಗಾರರಾಗಿದ್ದರು . ಅವರು ಅಕ್ಟೋಬರ್ 2 ರಂದು 1869 ರಲ್ಲಿ ಗುಜರಾತಿನ ಪೂರ ಬಂದರು ಗ್ರಾಮದಲ್ಲಿ ಜನಿಸಿದರು.
ಮಹಾತ್ಮ ಗಾಂಧೀಜಿಯವರ ತಂದೆಯ ಹೆಸರು ಕರಮಚಂದ್ ಗಾಂಧಿ ಮತ್ತು ತಾಯಿಯ ಹೆಸರು ಪುತಲೀ ಬಾಯಿ ಗಾಂಧಿಯವರ ಪೂರ್ಣ ಹೆಸರು ಮೋಹನ್ ದಾಸ್ ಕರಮಚಂದ್ ಗಾಂಧಿ, ನಾವೆಲ್ಲರೂ ಅವರನ್ನು ಬಾಪು ಮತ್ತು ರಾಷ್ಟ್ರಪಿತ ಎಂದು ಕರೆಯುತ್ತೇವೆ.
ಗಾಂಧೀಜಿಯವರು ತಮ್ಮ ಆರಂಭಿಕ ಶಿಕ್ಷಣವನ್ನು ಪೋರ ಬಂದರ್ ನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ರಾಜ್ ಕೋಟ್ ನಲ್ಲಿ ಪೂರ್ಣಗೊಳಿಸಿದರು. ಅವರು ಇಂಗ್ಲೆಂಡಿಗೆ ಹೋಗಿ ಕಾನೂನು ಓದಿ ಕಾನೂನಿನ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಸತ್ಯ (ನಿಜ): ಮಹಾತ್ಮ ಗಾಂಧೀಜಿ ಅವರು ಎಲ್ಲಾ ಸಮಯದಲ್ಲೂ ಸತ್ಯದ ಶಕ್ತಿಯನ್ನು ಒತ್ತಿ ಹೇಳಿದರು ಮಾತಿನಲ್ಲಿ ಮಾತ್ರವಲ್ಲ, ಮನಸ್ಸಿನಲ್ಲೂ ನಿಜ ಮತ್ತು ಸತ್ಯತೆ ಇರಬೇಕು ಎಂದು ಪ್ರತಿಪಾದಿಸಿದರು.
ಅಹಿಂಸಾ (ಹಿಂಸೆ ಮಾಡಬೇಡಿ): ಯಾವುದೇ ಜೀವಿಗೆ ಹಾನಿ ಮಾಡಬಾರದು, ಮಾತು, ಚಿಂತನೆ, ಕಾರ್ಯಗಳಲ್ಲಿ ತಾಳ್ಮೆ ಇರಬೇಕು.ಇದನ್ನು ಸತ್ಯದ ಹಾದಿ ಎಂದು ಪರಿಗಣಿಸಲಾಗಿದೆ.
ಬ್ರಹ್ಮಚರ್ಯ (ಸ್ವ ನಿಯಂತ್ರಣ): ಮನಸ್ಸಿನ ಎಲ್ಲಾ ಇಚ್ಛೆಗಳನು ನಿಯಂತ್ರಿಸಬೇಕು, ಬ್ರಹ್ಮಚರ್ಯ ಎಂದರೆ ಸಂಪೂರ್ಣ ಜೀವನಶೈಲಿಯ ಬದಲಾವಣೆ, ಕೇವಲ ಬ್ರಹ್ಮಚರ್ಯವಲ್ಲ, ಮತ್ತು ಆಹಾರ ಪದ್ಧತಿ ಮತ್ತು ದೈನಂದಿನ ಜೀವನದ ಇತರ ಅಂಶಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣವನ್ನು ಸಹ ಒಳಗೊಂಡಿದೆ.
ಅಸ್ತೇಯ (ಚೋರಿ ಮಾಡಬೇಡಿ): ಹೊರಗಿನ ವಸ್ತುಗಳನ್ನು ಕಳ್ಳತನ ಮಾಡಬೇಡಿ, ಅಗತ್ಯವಿಲ್ಲದ ವಸ್ತುಗಳು ಬೇಡ.ಬೇರೆ ಅವರ ಸ್ವತ್ತು ಅಥವಾ ಹಕ್ಕನ್ನು ಅನ್ಯಾಯವಾಗಿ ಪಡೆದರೆ ಅದು ನೈತಿಕ ತಪ್ಪು, ಹಂಚುವ ಮನೋಭಾವ ಹಾಗೂ ಸರಳ ಬದುಕು ಎಲ್ಲರಿಗು ಸಮಾನತೆ ತರಲು ಸಹಕಾರಿ. ಎಂದು ಅಸ್ತೇಯ ಬಗ್ಗೆ ಹೇಳಿದ್ದಾರೆ.
ಅಪರಿಗ್ರಹ (ಕಡಿಮೆ ಸ್ವಾಮ್ಯ): ಅನಾವಶ್ಯಕ ವಸ್ತುಗಳನ್ನು ಸಂಗ್ರಹಿಸಬೇಡಿ, ಅಗತ್ಯವಿಲ್ಲದದ್ದನ್ನು ಒಬ್ಬ ವ್ಯಕ್ತಿಯು ತನ್ನಲ್ಲಿಯೇ ಸಂಗ್ರಹಿಸಬಾರದು ಮತ್ತು ಜನರು ತಮ್ಮ ಜೀವನವನ್ನು ಸರಳ ರೀತಿಯಲ್ಲಿ ನಡೆಸಬೇಕು ಎಂದು ಅವರು ಪ್ರತಿಪಾದಿಸಿದರು.
ಶರೀರಶ್ರಮ (ದೇಹಕಾರ್ಯ): ಪ್ರತಿಯೊಬ್ಬ ವ್ಯಕ್ತಿಯು ದೈನಂದಿನ ಆಹಾರಕ್ಕೋಸ್ಕರ ದೈಹಿಕ ಶ್ರಮದಿಂದ ಗಳಿಸಬೇಕು ಮತ್ತು ತಮ್ಮ ಬೌದ್ಧಿಕ ಪ್ರತಿಭೆಯನ್ನು ಸಮಾಜದ ಸೇವೆಗೆ ಬಳಸಬೇಕು ಎಂದು ಗಾಂಧಿ ನಂಬಿದ್ದರು.
ಆಸ್ವಾದ (ಆಹಾರದ ನಿಯಂತ್ರಣ): ಆಹಾರವನ್ನು ಕೇವಲ ದೇಹದ ಪೋಷಣೆಗೆ ಮಾತ್ರ ಸೇವಿಸಬೇಕು. ಅಗತ್ಯಕ್ಕಿಂತ ಹೆಚ್ಚು ಪೋಷಣೆ ಮಾಡಿದರೆ ಆಸ್ವಾದ ತತ್ವಕ್ಕೆ ವಿರುದ್ಧವಾಗಿತ್ತು.
ಅಭಯ (ಭಯ ಮುಕ್ತತೆ): ರೋಗ, ಗಾಯ, ಸಾವು, ಸಂಪತ್ತಿನ ನಷ್ಟ, ಬಡತನ, ಪ್ರತಿಷ್ಠೆಯ ನಷ್ಟ, ಪ್ರೀತಿಪಾತ್ರರ ನಷ್ಟ, ಸಾವು,ಯಾವುದರಿಂದಲೂ ಭಯಪಡಬೇಡಿ, ಧೈರ್ಯದಿಂದ ಬದುಕಿ ಎಂಬುದು ಗಾಂಧೀಜಿ ಅವರ ತತ್ವ ಆಗಿತ್ತು.
ಸರ್ವ-ಧರ್ಮ-ಸಮಾನತ್ವ ಎಲ್ಲಾ ಧರ್ಮಗಳಿಗೆ ಸಮಾನ ಗೌರವ ನೀಡಬೇಕು.
ಸ್ವದೇಶಿ (ದೇಶೋದ್ಯಮ ಪ್ರೋತ್ಸಾಹ): ದೇಶದ ಜನರಿಗೆ ಪ್ರಯೋಜನವಾಗದ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬದಲು ಜನರು ತಮ್ಮ ತಾಯ್ನಾಡಿನಿಂದಲೇ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವರು ಅಧಿಕಾರ ನೀಡಿದರು.
ಅಸ್ಪೃಶ್ಯತ ನಿವಾರಣ (ಅಸ್ಪೃಶ್ಯತೆ ಬಗೆಹರಿಸಬೇಕು): ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಟೀಕಿಸಿದರು, ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಹಕ್ಕು ಮತ್ತು ಗೌರವ ಇರಬೇಕು.ಮತ್ತು ಅಸ್ಪೃಶ್ಯರಿಗೆ ‘ಹರಿಜನ’ ಎಂಬ ಹೆಸರನ್ನು ನೀಡಿದರು.
ಮಹಾತ್ಮ ಗಾಂಧೀಜಿಯವರ ಈ ತತ್ವಗಳನ್ನು ನಮ್ಮೆಲ್ಲರ ಜೀವನದಲ್ಲಿ ಪಾಲಿಸಿಕೊಂಡು ಹೋಗಬೇಕು. ಇದು ನಮ್ಮ ಬದುಕನ್ನು ಸರಳ ಮತ್ತು ಸತ್ಯ ಸಹಭಾಗಿತ್ವದ ಮಾರ್ಗದರ್ಶಕ ವಾಗಿಸುತ್ತದೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ
ಮಹಾತ್ಮ ಗಾಂಧೀಜಿಯವರ ಪಾತ್ರ
ಖೇಡ ಸತ್ಯಾಗ್ರಹ 1918
ರೈತರಿಗೆ ಆರ್ಥಿಕ ಹಿಂಸೆಯಿಂದ ರಕ್ಷಿಸುವ ಹೋರಾಟ ವಾಗಿತ್ತು.
1918ರಲ್ಲಿ ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯಲ್ಲಿ ನಡೆದ ಪ್ರಮುಖ ಸತ್ಯಾಗ್ರಹ.
ಆ ಕಾಲದಲ್ಲಿ ಭಾರೀ ಮಳೆ ಹಾಗೂ ಬರದ ಕಾರಣ ಬೆಳೆ ನಾಶವಾಯಿತು. ರೈತರು ಭಾರೀ ಸಂಕಷ್ಟಕ್ಕೆ ಒಳಗಾದರು.
ಬೆಳೆ ಹಾನಿಯಾದರೂ, ಬ್ರಿಟಿಷ್ ಸರ್ಕಾರವು ಭೂಮಿಕರ (Land Revenue) ತೆರಿಗೆ ಮನ್ನಾ ಮಾಡದೆ, ರೈತರಿಂದ ಬಲವಂತವಾಗಿ ತೆರಿಗೆ ವಸೂಲಿ ಮಾಡಲು ಯತ್ನಿಸಿತು.
ಬೆಳೆ ಹಾನಿಯಿಂದ ತೆರಿಗೆ ಪಾವತಿಸಲು ಸಾಧ್ಯವಿಲ್ಲ ಎಂದು ರೈತರ ತೆರಿಗೆ ಮನ್ನಾ ಮಾಡಬೇಕು ಎಂದು ಹೋರಾಟ ಮಾಡುತ್ತಾರೆ
ಚಂಪಾರಣ್ ಸತ್ಯಾಗ್ರಹ – 1917
ಇದು ಮಹಾತ್ಮ ಗಾಂಧೀಜಿಯವರ ಮೊದಲ ಸತ್ಯಾಗ್ರಹ ಆಗಿತ್ತು, ಬಿಹಾರ ರಾಜ್ಯದ ಚಂಪಾರಣ್ ಜಿಲ್ಲೆಯಲ್ಲಿ ನಡೆಯಿತು.
ಚಂಪಾರಣ್ ಪ್ರದೇಶದ ರೈತರು ನೀಲ ಬೆಳೆ (Indigo cultivation) ಬೆಳೆಸಬೇಕೆಂದು ಬ್ರಿಟಿಷ್ ಜಮೀನುದಾರರು ರೈತರಿಗೆ ಬಲವಂತ ಮಾಡುತ್ತಿದ್ದರು.
ರೈತರು ಇದರಿಂದ ಬಹಳ ನಷ್ಟಪಟ್ಟು ಬಡತನಕ್ಕೆ ತಳ್ಳಲ್ಪಟ್ಟಿದ್ದರು.
ಬೆಳೆಯನ್ನು ಬೆಳೆಯದೇ ಇದ್ದರೂ ಕೂಡಾ ಭೂಮಿಯ ತೆರಿಗೆ (rent) ಪಾವತಿಸಬೇಕಾಗಿತ್ತು.
1917 ರಲ್ಲಿ ಗಾಂಧಿ ಅವರು ಚಂಪಾರಣ್ ಪ್ರದೇಶದ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಹ್ವಾನಿಸಿದರು.
ಗಾಂಧೀಜಿ ಅವರು ರೈತರ ಪರವಾಗಿ ಸತ್ಯಾಗ್ರಹ ನಡೆಸಿ, ಅವರ ನ್ಯಾಯಕ್ಕಾಗಿ ಹೋರಾಟ ಮಾಡಿದರು.
ಇದು ಗಾಂಧೀಜಿಯ ಅಹಿಂಸೆ ಮತ್ತು ಸತ್ಯಾಗ್ರಹ ತತ್ವದ ಮೊದಲ ದೊಡ್ಡ ಪ್ರಯೋಗ ಆಗಿದೆ.
ಬ್ರಿಟಿಷ್ ಸರ್ಕಾರವು ಚಂಪಾರಣ್ ಕೃಷಿ ಸಮಿತಿ ರಚಿಸಿ,
ರೈತರು ನೀಲ ಬೆಳೆಯನ್ನು ಬಲವಂತವಾಗಿ ಬೆಳೆಸುವ ಪದ್ಧತಿ ರದ್ದು ಮಾಡಲಾಯಿತು.
ಬ್ರಿಟಿಷರು ಸಾಮಾನ್ಯ ಜನರಿಗೆ ಉಪ್ಪು ತಯಾರಿಸಲು ಅಥವಾ ಮಾರಾಟ ಮಾಡಲು ನಿರ್ಬಂಧ ಹೇರಿದ್ದರು.
ಎಲ್ಲರೂ ಬಳಸುವ ಉಪ್ಪಿಗೂ ತೆರಿಗೆ ಹಾಕಲಾಗುತ್ತಿತ್ತು.ಇದನ್ನು ಜನರ ಜೀವನದ ಮೇಲೆ ಬಲವಂತದ ಶೋಷಣೆ ಎಂದು ಗಾಂಧೀಜಿ ವಿರೋಧಿಸಿದರು.
1930ರ ಮಾರ್ಚ್ 12ರಂದು ಗಾಂಧೀಜಿ ಅಹಮದಾಬಾದ್‌ನ ಸಬರ್ಮತಿ ಆಶ್ರಮದಿಂದ 78 ಅನುಯಾಯಿಗಳೊಂದಿಗೆ ಪಾದಯಾತ್ರೆ ಆರಂಭಿಸಿದರು.
ಸುಮಾರು 390 ಕಿಮೀ ದೂರವನ್ನು 24 ದಿನಗಳಲ್ಲಿ ನಡೆದು ಏಪ್ರಿಲ್ 6ರಂದು ಗುಜರಾತ್‌ನ ದಂಡಿ ತೀರಕ್ಕೆ ತಲುಪಿದರು.
ಅಲ್ಲಿ ಸಮುದ್ರದ ನೀರಿನಿಂದ ಉಪ್ಪು ತಯಾರಿಸಿ ಕಾನೂನು ಉಲ್ಲಂಘನೆ ಮಾಡಿದರು.
ಈ ಚಳುವಳಿಗೆ ಲಕ್ಷಾಂತರ ಜನರು ಸೇರಿಕೊಂಡರು.
ದೇಶದಾದ್ಯಂತ ಉಪ್ಪು ಸತ್ಯಾಗ್ರಹ ಹರಡಿತು.ಗಾಂಧೀಜಿ ಹಾಗೂ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಬಂಧಿತರಾದರು.
ಅಹಮದಾಬಾದ್ ಮಿಲ್ಲು ಮುಷ್ಕರ (1918)
ಮಿಲ್ಲು ಮಾಲೀಕರು ಕಾರ್ಮಿಕರ ವೇತನ ಕಡಿತ ಮಾಡಲು ಯೋಚಿಸಿದಾಗ, ಕಾರ್ಮಿಕರು ತೊಂದರೆಗೆ ಸಿಲುಕಿದರು.
ಗಾಂಧೀಜಿ ಕಾರ್ಮಿಕರ ಪಕ್ಷ ವಹಿಸಿ, ಅವರ ನ್ಯಾಯವಾದ ವೇತನಕ್ಕಾಗಿ ಮುಷ್ಕರ ಮಾಡಲು ನೆರವಾದರು. ಇದರಲ್ಲಿ ಅವರು ಉಪವಾಸವೂ ಕೂಡ ಆರಂಭಿಸಿದರು.
ರೌಲಟ್ ಆಕ್ಟ್ ವಿರೋಧ (1919)
ಬ್ರಿಟಿಷ್ ಸರಕಾರ ಒಂದು ಕ್ರೂರ ಕಾನೂನು ಮಾಡಿತು. ಈ ಕಾನೂನಿನ ಪ್ರಕಾರ, ಯಾರನ್ನಾದರೂ ಬಂಧಿಸಬಹುದು, ವಿಚಾರಣೆ ಮಾಡದೆ ಜೈಲಿಗೆ ಹಾಕಬಹುದು.
ಈ ಕರಾಳ ಕಾನೂನು ಗೆ ವಿರೋಧಿಸಿ ಗಾಂಧೀಜಿ ದೇಶವ್ಯಾಪಿ ಸತ್ಯಾಗ್ರಹ ಮಾಡಲು ಕರೆ ನೀಡಿದರು.
ಅಸಹಕಾರ ಚಳುವಳಿ (1920–22)
ಗಾಂಧೀಜಿ ಜನರಿಗೆ ಒಂದು ಸರಳ ಯೋಜನೆ ತಂದರು: “ಬ್ರಿಟಿಷ್ ಸರಕಾರಕ್ಕೆ ಸಹಕರಿಸಬೇಡಿ.”
ಕ್ರಮ ಜನರು ಬ್ರಿಟಿಷ್ ಸರಕಾರಿ ಶಾಲೆ-ಕಾಲೇಜು, ನ್ಯಾಯಾಲಯ, ಕಚೇರಿಗಳನ್ನು ಬಿಟ್ಟು ಬಂದರು. ವಿದೇಶಿ ಬಟ್ಟೆ ಬಳಸುವುದನ್ನು ನಿಲ್ಲಿಸಿ, ಸ್ವದೇಶಿ ಬಟ್ಟೆಗಳನ್ನು ಧರಿಸಲಾರಂಭಿಸಿದರು
ಭಾರತ ಬಿಟ್ಟಿ ತೊಲಗಿ ಚಳುವಳಿ (1942)
ಬ್ರಿಟಿಷರನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿದ ಗಾಂಧೀಜಿ, “ಭಾರತ ಬಿಟ್ಟು ತೊಲಗಿ” (Quit India) ಎಂದು ಘೋಷಿಸಿದರು.
ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುವ ಮೊದಲು ಗಾಂಧಿಯವರು ಅನ್ಯಾಯ ಮತ್ತು ವರ್ಗ ವಿಭಜನೆಯ ವಿರುದ್ಧ ಹೋರಾಡಲು ದಕ್ಷಿಣ ಆಫ್ರಿಕಾದಲ್ಲಿ ವಾಸಿಸುತ್ತಿದ್ದರು
ಹತ್ತು ವರ್ಷಗಳಲ್ಲಿ ಗಾಂಧಿಯವರು ಅಲ್ಲಿನ ಸತ್ಯಾಗ್ರಹದ ತತ್ವವನ್ನು ಪ್ರಚಾರ ಮಾಡಿದರು ಮತ್ತು ದೇಶವನ್ನು ವರ್ಗ ಅಥವಾ ಜನಾಂಗೀಯಾ ತಾರತಮ್ಯವಿಲ್ಲದೆ ಸಮಾಜದತ್ತ ಪ್ರೇರೇಪಿಸಿದರು ಗಾಂಧಿಯವರು 1893ರಲ್ಲಿ ಡರ್ಬನ್ ಗೆ ಬಂದರು
ಗಾಂಧಿಯವರು ಸ್ವಲ್ಪ ಸಮಯದೊಳಗೆ ದಕ್ಷಿಣ ಆಫ್ರಿಕಾದ ಭಾರತೀಯ ಸಮುದಾಯದ ನಾಯಕರಾದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಹಿಂಸಾತ್ಮಕ ಚಳುವಳಿಯಲ್ಲಿ ಅವರ ಪಾಲ್ಗೊಳ್ಳುವಿಕೆ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪ್ರೇರಣೆಯಾಗಿತ್ತು. ಅಲ್ಲಿಯವರನ್ನು ಒಬ್ಬ ನಾಯಕ ಎಂದು ಗೌರವಿಸುತ್ತಿದ್ದರು.
1893 ರಿಂದ 1914ರವರೆಗೆ ಗಾಂಧಿಯವರು ವಕೀಲರಾಗಿ ಮತ್ತು ಸಾರ್ವಜನಿಕ ಕಾರ್ಯಕರ್ತರಾಗಿ ಕೆಲಸ ಮಾಡಿದರು.
1901ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದರು ಮತ್ತು ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡಲು ಪ್ರಾರಂಭಿಸಿದರು ಅವರು ಮುಫಸಿಲ್ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳನ್ನು ಗೆದ್ದಲು ಮತ್ತು ಅವರ ಆತ್ಮವಿಶ್ವಾಸ ಹೆಚ್ಚಾಯಿತು.
ರಾಷ್ಟ್ರಪಿತ ಗೌರವ
ಗಾಂಧಿಯವರು ವಿಶ್ವಾದ್ಯಂತ ಮಹಾತ್ಮ ಗಾಂಧಿಯಂತೆ ಚಿರಪರಿಚಿತರು. ಮಹಾತ್ಮ ಅಥವಾ ಮಹಾನ್ ಆತ್ಮ ಎಂಬ ಗೌರವ ಸೂಚಕ ಪದವನ್ನು ಅವರಿಗೆ ಮೊದಲು ನೀಡಿದವರು ಮಿಸ್ಟರ್ ರವೀಂದ್ರನಾಥ ಠಾಗೂರ್ ರವರು ಆಗಿದ್ದಾರೆ.
ಭಾರತದಲ್ಲಿ ಮಹಾತ್ಮ ಗಾಂಧೀಜಿಯವರನ್ನು ಬಾಪೂ ಎಂದು ಕರೆಯುತ್ತಿದ್ದರು ಮೊದಲ ಬಾರಿಗೆ ಸುಭಾಷ್ ಚಂದ್ರ ಬೋಸ್ ಅವರು ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆದರು.
ಭಾರತದಲ್ಲಿ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಅಧಿಕೃತವಾಗಿ ಗೌರವಿಸಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂಬ ಸ್ಮರಣೀಯ ದಿನವನ್ನಾಗಿಸಿ ರಾಷ್ಟ್ರೀಯ ರಜಾ ದಿನವನ್ನಾಗಿಸಿ ಮತ್ತು ವಿಶ್ವದ್ಯಂತ ಈ ದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.
ಮಹಾತ್ಮ ಗಾಂಧೀಜಿಯವರ ಪೂರ್ಣ ಹೆಸರೇನು
ಮೋಹನದಾಸ್ ಕರಂಚಂದ್ ಗಾಂಧೀ
ಗಾಂಧೀಜಿಯವರ ಜನ್ಮ ದಿನಾಂಕ ಮತ್ತು ಸ್ಥಳ ಯಾವುದು
ಅಕ್ಟೋಬರ್ 2, 1869, ಪೋರಬಂದರ್, ಗುಜರಾತ್
ಗಾಂಧೀಜಿಯವರ ತಂದೆಯ ಹೆಸರೇನು
ಕರಂಚಂದ್ ಗಾಂಧೀ
ಗಾಂಧೀಜಿಯವರ ತಾಯಿಯ ಹೆಸರೇನು
ಪುತ್ಲೀಬಾಯಿ
ಗಾಂಧೀಜಿಯವರ ಪತ್ನಿಯ ಹೆಸರೇನು
ಕಸ್ತೂರಬಾ ಗಾಂಧಿ
ಗಾಂಧೀಜಿ ಯಾವ ದೇಶದಲ್ಲಿ ವಕೀಲರ ಶಿಕ್ಷಣ ಪಡೆದರು
ಇಂಗ್ಲೆಂಡ್
ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಎಷ್ಟು ವರ್ಷಗಳ ಕಾಲ ಇದ್ದರು
ಸುಮಾರು 21 ವರ್ಷಗಳು (1893-1914)
ಗಾಂಧೀಜಿ ಭಾರತಕ್ಕೆ ದಕ್ಷಿಣ ಆಫ್ರಿಕಾದಿಂದ ಯಾವಾಗ ಮರಳಿದರು
1915
ಗಾಂಧೀಜಿಯವರ ಮೊದಲ ಸತ್ಯಾಗ್ರಹ ಭಾರತದಲ್ಲಿ ಎಲ್ಲಿ ನಡೆಯಿತು
ಚಂಪಾರಣ್, ಬಿಹಾರ (1917)
ಅಸಹಕಾರ ಚಳುವಳಿ ಯಾವಾಗ ಪ್ರಾರಂಭವಾಯಿತು
1920
ಉಪ್ಪು ಸತ್ಯಾಗ್ರಹ ಯಾವಾಗ ನಡೆಯಿತು
1930
ದಂಡಿಸತ್ಯಾಗ್ರಹಯಾವಾಗ ನಡೆಯಿತು
1930
ಭಾರತ ಬಿಟ್ಟು ತೊಲಗಿ ಚಳುವಳಿ ಯಾವಾಗ ಪ್ರಾರಂಭವಾಯಿತು
ಆಗಸ್ಟ್ 8, 1942
ಗಾಂಧೀಜಿಯವರ ಆತ್ಮಕಥೆಯ ಹೆಸರೇನು
ಸತ್ಯದ ಪ್ರಯೋಗಗಳು ಅಥವಾ My Experiments with Truth
ಗಾಂಧೀಜಿ ಸ್ಥಾಪಿಸಿದ ಆಶ್ರಮದ ಹೆಸರೇನು
ಸಾಬರಮತಿ ಆಶ್ರಮ, ಅಹಮದಾಬಾದ್
ಗಾಂಧೀಜಿಗೆ ಮಹಾತ್ಮ ಎಂಬ ಬಿರುದನ್ನು ಯಾರು ನೀಡಿದರು
ರವೀಂದ್ರನಾಥ ಟಾಗೋರ್
ಗಾಂಧೀಜಿ ಯಾವ ತತ್ವವನ್ನು ಅನುಸರಿಸಿದರು
ಸತ್ಯ ಮತ್ತು ಅಹಿಂಸೆ
ಗಾಂಧೀಜಿ ಯಾವಾಗ ಹತ್ಯೆಯಾದರು
ಜನವರಿ 30, 1948
ಗಾಂಧೀಜಿಯನ್ನು ಯಾರು ಹತ್ಯೆ ಮಾಡಿದರು
ನಾಥೂರಾಮ್ ಗಾಡ್ಸೆ
ಗಾಂಧೀಜಿಯವರ ಜನ್ಮದಿನವನ್ನು ಭಾರತದಲ್ಲಿ ಯಾವುದಾಗಿ ಆಚರಿಸುತ್ತಾರೆ
ಕ್ರೈಸ್ಟ್ ದ ರಿಡೀಮರ್ ಪ್ರತಿಮೆ (Christ the Redeemer, Brazil)
ಮಾಚು ಪಿಚ್ಚು (Machu Picchu, Peru)
ಚಿಚೆನ್ ಇಟ್ಜಾ (Chichen Itza, Mexico)
ಕೋಲೋಸಿಯಂ (Colosseum, Italy)
ತಾಜ್ ಮಹಲ್ (Taj Mahal, India)
ಚೀನಾದ ಮಹಾ ಗೋಡೆ
ಚೀನಾದ ಮಹಾಗೋಡೆ ಜಗತ್ತಿನಲ್ಲೇ ಅತಿ ದೊಡ್ಡದಾದಮಾನವ ನಿರ್ಮಿತ ಕಟ್ಟಡವಾಗಿದೆ.
ಈ ಗೋಡೆಯ ಉದ್ದ ಸರಿ ಸುಮಾರು 21196 ಕಿಲೋಮಿಟರ್ ಇದೆ ಅಗಲ 4.5 ಮೀಟರ್ ಎತ್ತರ ಸರಾಸರಿ 7 ರಿಂದ 8 ಮೀಟರ್ ಇದೆ.
ಈ ಗೋಡೆಯ ನಿರ್ಮಾಣವು ಕ್ರಿಸ್ತಪೂರ್ವ 7 ಶತಮಾನದಿಂದ ಆರಂಭವಾಗಿ ಕ್ರಿಸ್ತಶಕ 16ನೇ ಶತಮಾನದವರೆಗೂ ಹಲವಾರು ರಾಜವಂಶಗಳ ಕಾಲದಲ್ಲಿ ಕಟ್ಟಲಾಯಿತು. ಅದರಲ್ಲಿ ಮುಖ್ಯವಾಗಿ ಚೀನ್ ವಂಶ ಮತ್ತು ಮಿಂಗ್ ವಂಶ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಇದನ್ನು ಕಟ್ಟಿರುವ ಉದ್ದೇಶ ಏನೆಂದರೆ ಉತ್ತರ ದಿಕ್ಕಿನಿಂದ ದಾಳಿ ಮಾಡುವ ಮಂಗೋಲ್ ಮತ್ತು ಇತರ ಶತ್ರುಗಳಿಂದ ರಕ್ಷಣೆ ಪಡೆಯಲು ನಿರ್ಮಿಸಿದರು.
ಇಂದಿನ ದಿನದಲ್ಲಿ ಚೀನಾದ ಮಹಾಗೋಡೆ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.
Table of Contents
ಪೆಟ್ರಾ ನಗರ
ಪೆಟ್ರಾ ಜೋರ್ಡಾನ್ ದೇಶದಲ್ಲಿರುವ ಒಂದು ಪ್ರಸಿದ್ಧ ಐತಿಹಾಸಿಕ ನಗರವಾಗಿದೆ.
ಇದು ಕ್ರಿಸ್ತಪೂರ್ವ 300 ಸುಮಾರಿಗೆ ನಭಾಟಿಯನ್ ನಾಗರಿಕತೆಯ ಜನರು ನಿರ್ಮಿಸಿದ ಒಂದು ಪ್ರಸಿದ್ಧ ನಗರವಾಗಿದೆ.
ಇದರ ವಿಶೇಷತೆ ಏನೆಂದರೆ ಇದನ್ನು ಪರ್ವತ ಕಲ್ಲುಗಳನ್ನು ಕೊರೆದು ಕಟ್ಟಲಾಗಿದೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಅಲ್ಲಿನ ದೊಡ್ಡ ಬಾಗಿಲುಗಳು, ದೇವಾಲಯಗಳು, ಸಮಾಧಿಗಳು ಹಾಗೂ ಅರಮನೆಗಳು ಎಲ್ಲವೂ ಕೆಂಪು ಬಣ್ಣದಲ್ಲಿ ಹೊಳೆಯುತ್ತವೆ.
ಪೆಟ್ರಾವನ್ನೂ 2007 ರಲ್ಲಿ ಯುನೆಸ್ಕೋ ತಾಣವಾಗಿ ಘೋಷಿಸಲಾಯಿತು.
ಈ ಜಾಗದಲ್ಲಿ ಅಲೆಮಾರಿ ಅರಬ್ ಜನಾಂಗದ ನಬಟಿಯನ್ನರು ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ಸುಮಾರಾಗಿ ಈ ಪ್ರದೇಶದಲ್ಲಿ ಜೀವನ ಮಾಡುತ್ತಿದ್ದರು. ಅವರು ಇಂಜಿನಿಯರ್ ಮತ್ತು ವ್ಯಾಪಾರಿಗಳು ಆಗಿದ್ದರು ಮತ್ತು ಪೆಟ್ರಾ ಅವರ ರಾಜಧಾನಿಯಾಗಿತ್ತು.
ಕ್ರೈಸ್ಟ್ ದ ರಿಡೀಮರ್ ಪ್ರತಿಮೆ
ಇದು ಜಗತ್ತಿನ ಪ್ರಸಿದ್ಧ ಪ್ರತಿಮೆ ಆಗಿದೆ. ಇದು ಬ್ರೆಜಿಲ್ ನ ರಿಯೋ ಡಿ ಜನೇರೋ ನಗರದ ಕಾರ್ಕೋವಾಡೊ ಪರ್ವತದ ಶಿಖರದಲ್ಲಿ ಟಿಜುಕಾ ಅರಣ್ಯ ರಾಷ್ಟ್ರೀಯ ಉದ್ಯಾನವನದೊಳಗೆ ರಿಯೋ ನಗರದ ಮೇಲೆ ನಿಂತಿದೆ.
ಈ ಪ್ರತಿಮೆಯನ್ನು 1931ರಲ್ಲಿ ಕಟ್ಟಲಾಗಿದೆ.
ಈ ಪ್ರತಿಮೆ ಎತ್ತರ 98 ಅಡಿ ಇದರಲ್ಲಿ 26 ಅಡಿ ಎತ್ತರದ ವೇದಿಕೆಯನ್ನು ಒಳಗೊಂಡಿದೆ ಇದರ ಎರಡು ಕೈಗಳು 92 ಅಗಲವಾಗಿ ಚಾಚಿವೆ.
ಈ ಪ್ರತಿಮೆಯನ್ನು ಕಾಂಕ್ರೇಟ್ ಮತ್ತು ಸಾವಿರಾರು ಸ್ಟೋನ್ ಟೈಲ್ಸ್ ಬಳಸಿಕೊಂಡು ನಿರ್ಮಿಸಲಾಗಿದೆ.
ಈ ಪ್ರತಿಮೆಯು” Statue Art Deco ” ಶೈಲಿಯ ಅತ್ಯಂತ ದೊಡ್ಡ ಪ್ರತಿಮೆಯೆಂದು ಪರಿಗಣಿಸಲಾಗಿದೆ.
ಈ ಪ್ರತಿಮೆಯನ್ನು 2007ರಲ್ಲಿ ಪ್ರಪಂಚದ ಏಳು ಅದ್ಭುತಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇದು ಕ್ರಿಶ್ಚಿಯನ್ ಸಮುದಾಯ ಹಾಗೂ ಬ್ರೆಜಿಲ್ ದೇಶದ ಖ್ಯಾತಿ ವಿಶ್ವಕ್ಕೆ ತೋರಿಸುವ ಹೃದಯ ಸ್ಫೂರ್ತಿಯ ಸಂಕೇತವಾಗಿದೆ.
ಮಾಚು ಪಿಚ್ಚು
ಮಾಚು ಪಿಚ್ಚು ಪೇರೋ ದೇಶದಲ್ಲಿರುವ ವಿಶ್ವಪ್ರಸಿದ್ಧಿ ಇಂಕಾ ನಾಗರಿಕತೆಯ ಪುರಾತನ ನಗರ.
ಇದು ಸಮುದ್ರ ಮಟ್ಟದಿಂದ ಸುಮಾರು 2430 ಮೀಟರ್ ಎತ್ತರ ಪರ್ವತ ಮೇಲ್ದಂಡೆಯಲ್ಲಿದೆ.
ಮಾಚು ಪಿಚ್ಚು ನಗರವನ್ನು ಇಂಕಾ ಸಾಮ್ರಾಜ್ಯದ ರಾಜ ಪಚಕುಟಿ ಯು 15ನೇ ಶತಮಾನದಲ್ಲಿ ನಿರ್ಮಿಸಲಾಯಿತು.
ಮಾಚು ಪಿಚ್ಚು ಹೆಸರಿನ ಅರ್ಥ ” ಹಳೆಯ ಪರ್ವತ”ಎಂದು ಹೇಳಲಾಗುತ್ತದೆ.
ಮಾಚು ಪಿಚ್ಚ ವನ್ನು ಪಾರಂಪರಿಕ ಇಂಕಾ ಶಾಲೆಯಲ್ಲಿ ನಿರ್ಮಿಸಲಾಗಿದೆ ಇದು ಮೆರಗು ತಂದುಕೊಂಡ ಒಣಗಿದ ಕಲ್ಲಿನ ಗೋಡೆಗಳೊಂದಿಗೆ ಅಲಂಕರಿಸಲಾಗಿದೆ.
ಇದರ ಪ್ರಮುಖ ಮೂರು ಕಟ್ಟಡಗಳು ಇಂಟಿ ವಾಟಾನಾ, ಸೂರ್ಯ ದೇವಾಲಯ, ಮೂರು ಕಿಟಕಿಗಳಕೊಠಡಿ ಗಳಾಗಿವೆ. ಪರಿಸರದಲ್ಲಿರುವ ಹೆಚ್ಚಿನ ಕಟ್ಟಡಗಳನ್ನು ಪ್ರವಾಸಿಗರಿಗೆ ಮೊದಲ ರೂಪದಲ್ಲಿ ಹೇಗಿತ್ತೋ ಅದೇ ರೀತಿಯಲ್ಲಿ ಪುನರ್ ನಿರ್ಮಿಸಲಾಗಿದೆ. 1976 ರ ವೇಳೆಗೆ ಮಾಚ್ಚು ಪಿಚ್ಚುವಿನ 30% ಭಾಗ ಪುನರ್ ನಿರ್ಮಾಣ ಮಾಡಿದರು. ಮತ್ತು ಇನ್ನೂ ಪುನಃ ನಿರ್ಮಾಣ ಮಾಡುತ್ತಿದ್ದಾರೆ. ಮಾಚು ಪಿಚ್ಚು 1981 ರಲ್ಲಿ ಪೆರುವಿಯನ್ ಇತಿಹಾಸದ ಪ್ರಸಿದ್ಧ ಧಾರ್ಮಿಕ ತಾಣವಾಗಿ ಘೋಷಿಸಲ್ಪಟ್ಟಿತು ಮತ್ತು 1983 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು. 2007ರಲ್ಲಿ ಮಾಚ್ ಪಿಚ್ಚು ವಿಶ್ವ ಇಂಟರ್ನೆಟ್ ಸಮೀಕ್ಷೆಯ ಮೂಲಕ ಹೊಸ ಏಳು ಅದ್ಭುತಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.
ಚಿಚೆನ್ ಇಟ್ಜಾ
ಇದು ಮೆಕ್ಸಿಕೋದ ಯುಕಾಟನ್ ಪ್ರಾಂತ್ಯದ ಬಳಿ ದಟ್ಟದಾದ ಕಾಡಿನ ನಡುವೆ ಇದೆ.
ಇದು ಅಲ್ಲಿನ ಪ್ರಾಚೀನ ಮಾಯಾನ್ ನಾಗರಿಕತೆಯ ಜನಗಳಿಗೆ ಸೇರಿದವೊಂದು ಮುಖ್ಯ ಸ್ಮಾರಕ ಆಗಿತ್ತು.
ಕ್ರಿಸ್ತಶಕ 9ನೇ ಶತಮಾನದಿಂದ 12ನೇ ಶತಮಾನದ ನಡುವೆ ಮಾಯಾನ್ ನಾಗರಿಕರು ಇದನ್ನು ನಿರ್ಮಿಸಿದರು.
ನೋಡುವುದಕ್ಕೆ ಇದು ಪಿರಮಿಡ್ ಆಕಾರದಲ್ಲಿರುವಂತಹ ಅಲ್ಲಿನ ಪ್ರಾಚೀನ ಪವಿತ್ರ ಗುಡಿ ಇದನ್ನು ಅಲ್ಲಿನ ಜನರು ಕುಕುಲ್ಕಾನ್ ಟೆಂಪಲ್( ಯುಕಾಟನ್ ಮಾಯನ್ ಜನರ ರೆಕ್ಕೆಗಳಿರುವ ಹಾವು ದೇವತೆ ) ಎಂದು ಕರೆಯುತ್ತಾರೆ.
ಇದನ್ನು ಮಾಯಾನ್ ಜನರು ಆರಾಧಿಸುವ ನಾಗದೇವತೆಗಾಗಿ ನಿರ್ಮಿಸಿದರು. ಇಲ್ಲಿ ಮೊದಲು ನರಬಲಿಯೂ ಜರಗುತ್ತಿತ್ತು.
ಈ ಪಿರಮಿಡ್ ನ ಸುತ್ತಲೂ ಒಟ್ಟು 365 ಮೆಟ್ಟಿಲುಗಳಿವೆ ಇದು ವರ್ಷದಲ್ಲಿ ಇರುವ ದಿನಗಳ ಸಂಖ್ಯೆಯನ್ನು ಸೂಚಿಸುತ್ತದೆ.
ಅಮೆರಿಕನ್ ಸಮಾಜಕ್ಕೆ ಮೊಟ್ಟ ಮೊದಲು ಕ್ಯಾಲೆಂಡರ್ ಹಾಗೂ ಗ್ರಹಗಳ ಚಲನೆಯ ಬಗ್ಗೆ ಮೊದಲು ಲೆಕ್ಕ ಹಾಕಿದ ಮಾಯನರು ತಾವು ಕಂಡುಕೊಂಡಿದ್ದ ದಿನಗಳ ಕಲ್ಪನೆಯನ್ನು ಈ ಸ್ಮಾರಕದ ರಚನೆಗೂ ಬಳಸಿಕೊಂಡರು.
ಇದರ ಹತ್ತಿರ ಎರಡು ಮಾನವ ನಿರ್ಮಿತ ಬೃಹತ್ ಬಾವಿಗಳು ನೀರಿನಿಂದ ತುಂಬಿರುತ್ತದೆ. ಆಗ ಇಲ್ಲಿನ ಜನ ಈ ಬಾವಿಗಳ ನೀರನ್ನು ಪ್ರತಿಯೊಂದಕ್ಕೂ ಬಳಸುತ್ತಿದ್ದರು. ಒಂದು ಕಾಲದಲ್ಲಿ ಬರಗಾಲ ಬಂದು ಮಳೆ ನಿಂತು ಹೋದಾಗ ಮಳೆಯ ದೇವರನ್ನು ಪೂಜೆ ಮಾಡುತ್ತಿದ್ದ ಈ ಜನರು ಮಳೆ ದೇವರನ್ನು ಸಂತೃಪ್ತಿಗೊಳಿಸಲು ನವಜಾತ ಶಿಶುಗಳು ಹಾಗೂ ಮಕ್ಕಳನ್ನು ಈ ಬಾವಿಗೆ ಎಸೆದು ಬಲಿಕೊಟ್ಟು ಪೂಜೆಯನ್ನು ಮಾಡುತ್ತಿದ್ದರಂತೆ. ಇದೇ ಕಾರಣಕ್ಕೆ ಈ ವಾಟರ್ ವೇವ್ ಗಳಿಗೆ ( wave of sacrifice) ಅಂದರೆ ಪರಿತ್ಯಾಗದ ಬಾವಿಗಳು ಎಂದು ಕರೆಯಲಾಗುತ್ತದೆ.
ಕೋಲೋಸಿಯಂ
ಕೊಲೋಸಿಯಂ ಇಟಲಿಯ ರೋಮ್ ನಗರದಲ್ಲಿರುವ ಪ್ರಸಿದ್ಧ ಐತಿಹಾಸಿಕ ಕ್ರೀಡಾಂಗಣವಾಗಿದೆ. ಇದು ಕ್ರಿಸ್ತಶಕ 70ರಿಂದ 80ರ ವರೆಗೆ ಸಾಮ್ರಾಟ ವೆಸ್ಟೇಶಿಯನ್ ಮತ್ತು ಅವನ ಮಗನದ ಟೈಟಸ್ ಅವರ ಕಾಲದಲ್ಲಿ ನಿರ್ಮಿಸಲಾಯಿತು.
ಇದು ಸುಮಾರು 50 ಸಾವಿರ ದಿಂದ 80 ಸಾವಿರ ಜನರು ಕುಳಿತುಕೊಳ್ಳುವ ಸಾಮರ್ಥ್ಯ ವಿರುವ ಬೃಹತ್ ದೊಡ್ಡ ಕ್ರೀಡಾಂಗಣವಾಗಿದೆ.
ಇಲ್ಲಿ ಗ್ಲಾಡಿಯೇಟರ್ ಹೋರಾಟಗಳು, ಯುದ್ಧ ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳನ್ನು ನ
ಇದಕ್ಕೆ ರೋಮನ್ ಕ್ಯಾಥೋಲಿಕ್ ಚರ್ಚ್ಗೂ ಸಂಬಂಧವಿದೆ, ಏಕೆಂದರೆ ಪ್ರತಿ ಗುಡ್ ಫ್ರೈಡೇಯಂದು ಪೋಪ್ ಅವರು ದೀಪ ಹಿಡಿದ “ವೇ ಆಫ್ ದ ಕ್ರಾಸ್” ಪ್ರಕ್ರಿಯೆಯನ್ನು ಕೋಲೋಸಿಯಮ್ ಸುತ್ತಲಿನ ಪ್ರದೇಶದಿಂದ ಪ್ರಾರಂಭಿಸುತ್ತಾರೆ.
ತಾಜ್ ಮಹಲ್ ದೆಹಲಿಯ ಆಗ್ರಾ ನಗರದ ಯಮುನಾ ನದಿಯ ದಡದ ಮೇಲಿದೆ.
ಮೊಘಲ್ ಚಕ್ರವರ್ತಿ ಷಹಜಹಾನ್ ನ ಪ್ರೀತಿಯ ಪತ್ನಿ ಆದ ಮುಮ್ತಾಜ್ ಮಹಲ್ ಅವರ ನೆನಪಿಗೋಸ್ಕರ ಇದನ್ನು ಕಟ್ಟಿಸಿದರು.
ತಾಜ್ ಮಹಲ್ ನಿರ್ಮಾಣವು 1632 ರಿಂದ ಪ್ರಾರಂಭವಾಗಿ 1653 ರಲ್ಲಿ ಪೂರ್ಣಗೊಂಡಿತು.
ತಾಜ್ಮಹಲ್ ನಿರ್ಮಾಣದ ಸಮಯದಲ್ಲಿ ಸುಮಾರು 20 ಸಾವಿರ ಕಾರ್ಮಿಕರು ಮತ್ತು ಶಿಲ್ಪಿಗಳು ಭಾಗವಹಿಸಿದ್ದರು ಇದರ ನಿರ್ಮಾಣದ ಖರ್ಚು ವೆಚ್ಚ ಆಗಿನ ಕಾಲದಲ್ಲಿ30 ಲಕ್ಷ ರೂಪಾಯಿ ಎಂದೂ ಹೇಳಲಾಗಿದೆ.
ತಾಜ್ಮಹಲ್ ದಿನದ ವಿವಿಧ ಸಮಯದಲ್ಲಿ ತನ್ನ ಬಣ್ಣವನ್ನು ಬದಲಿಸುತ್ತದೆ. ಬೆಳಗಿನ ಸಮಯದಲ್ಲಿ ಗುಲಾಬಿ ಬಣ್ಣ, ಮಧ್ಯಾಹ್ನದ ಸಮಯದಲ್ಲಿ ಬಿಳಿ ಬಣ್ಣ ಮತ್ತು ರಾತ್ರಿಯ ಸಮಯದಲ್ಲಿ ಕೆಂಪು ಬಣ್ಣಗಳ ನಿಶ್ಚಿತ ಛಾಯೆಯನ್ನು ಹೊಳೆಯುತ್ತದೆ. ಇದನ್ನು ಚಿನ್ನದ ಅಭಾ ಇಂದು ಕರೆಯುತ್ತಾರೆ.
ತಾಜ್ ಮಹಲ್ ಒಳಗಡೆ ಮುಮ್ತಾಜ್ ಮಹಲ್ ಮತ್ತು ಷಹಜಹಾನ್ ಅವರ ಸಮಾದಿ ಇದೆ.
ತಾಜ್ ಮಹಲ್ ಭಾರತೀಯರ ಹೆಮ್ಮೆಯ ಸ್ಮಾರಕವಾಗಿದೆ.
ಪ್ರಪಂಚದ ಏಳು ಅದ್ಭುತಗಳು ದೇಶಗಳ ಆರ್ಥಿಕತೆ ಹಾಗೂ ಸಂಸ್ಕೃತಿಯನ್ನು ಬಲಪಡಿಸುತ್ತವೆ.
ಪ್ರಪಂಚದ ಏಳು ಅದ್ಭುತಗಳುಮತ್ತು ನನ್ನ ಅನಿಸಿಕೆ
ಪ್ರಪಂಚದ ಏಳು ಅದ್ಭುತಗಳು ಮಾನವ ಕುಶಲತೆ, ಕಲಾತ್ಮಕತೆ, ತಾಂತ್ರಿಕ ಜ್ಞಾನ ಹಾಗೂ ಧಾರ್ಮಿಕ-ಸಾಂಸ್ಕೃತಿಕ ನಂಬಿಕೆಗಳ ಪ್ರತಿರೂಪವಾಗಿವೆ. ಇವುಗಳಲ್ಲಿ ಪ್ರತಿಯೊಂದು ಅದ್ಭುತವು ತನ್ನದೇ ಆದ ಇತಿಹಾಸ, ವಾಸ್ತುಶಿಲ್ಪದ ಶೈಲಿ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.
ಇವು ಮಾನವನ ಸೃಜನಶೀಲತೆ ಮತ್ತು ಶ್ರಮದ ಪರಮೋನ್ನತ ಉದಾಹರಣೆಗಳಾಗಿವೆ.
ಇತಿಹಾಸದ ವೈಭವ, ಧರ್ಮ ಹಾಗೂ ಕಲೆಗಳನ್ನು ಒಟ್ಟುಗೂಡಿಸಿ ತೋರಿಸುತ್ತವೆ.
ಇಂದಿಗೂ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ದೇಶಗಳ ಆರ್ಥಿಕತೆ ಹಾಗೂ ಸಂಸ್ಕೃತಿಯನ್ನು ಬಲಪಡಿಸುತ್ತವೆ.
ಮಾನವಕುಲಕ್ಕೆ “ನಾವು ಏಕತೆಯಿಂದ ದೊಡ್ಡದನ್ನು ನಿರ್ಮಿಸಬಹುದು” ಎಂಬ ಸಂದೇಶವನ್ನು ನೀಡುತ್ತವೆ.
👉 ಆದ್ದರಿಂದ, ಪ್ರಪಂಚದ ಅದ್ಭುತಗಳು ಕೇವಲ ಕಟ್ಟಡಗಳು ಅಥವಾ ಸ್ಮಾರಕಗಳಲ್ಲ, ಅವು ಮಾನವನ ಕನಸು, ಕಲೆ ಮತ್ತು ಶ್ರಮದ ಶಾಶ್ವತ ಸಂಕೇತಗಳು.
ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ ತಿಳಿಯೋಣ ವಿಶ್ವದ ಅತ್ಯಂತ ಪ್ರಾಚೀನ ಸಂಸ್ಕೃತಿಕ ಪರಂಪರೆ ಹೊಂದಿರುವ ರಾಷ್ಟ್ರಗಳಲ್ಲಿ ಭಾರತ ಪ್ರಮುಖವಾಗಿದೆ. ಭಾರತವು ಭೌಗೋಳಿಕವಾಗಿ ವೈದ್ಯಮಯವಾದ ಮೇಲ್ಮೈ ಲಕ್ಷಣಗಳನ್ನು ಹೊಂದಿದೆ.
ಭಾರತವು ಸಂಪದ್ಭರಿತ ದೇಶವಾಗಿದೆ, ಇಲ್ಲಿನ ಭೂಮಿಯು ಫಲವತ್ತಾಗಿದೆ. ಇಲ್ಲಿನ ಸುಂದರವಾದ ಗಿರಿ ಶಿಖರಗಳು, ನದಿಗಳು, ದಟ್ಟವಾದ ಅರಣ್ಯಗಳು, ವಿಶಾಲವಾದ ಮತ್ತು ಸುಂದರವಾದ ಮೈದಾನಗಳು ಭಾರತದ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಭಾರತದ ಭೌಗೋಳಿಕ ಲಕ್ಷಣಗಳು
ಹಿಮಾಲಯ ಪರ್ವತಶ್ರೇಣಿ
ಸಿಂಧೂ ಗಂಗಾ ನದಿ ಬಯಲು
ಧಖನ್ ಪ್ರಸ್ಥಭೂಮಿ
ಪೂರ್ವ ಮತ್ತು ಪಶ್ಚಿಮ ಘಟ್ಟಗಳು
ತೀರ ಪ್ರದೇಶಗಳು
ಹಿಮಾಲಯ ಪರ್ವತಶ್ರೇಣಿ
ಹಿಮಾಲಯ ಪರ್ವತವು ಸುಮಾರು 1500 ಮೈಲಿ ಉದ್ದ ಮತ್ತು 150 ರಿಂದ 170 ಮೈಲಿ ಅಗಲವಾಗಿ ಹಬ್ಬಿರುವ ಹಿಮಾಲಯ ಪರ್ವತಗಳು ಭಾರತಕ್ಕೆ ಸ್ವಾಭಾವಿಕವಾಗಿ ರಕ್ಷಣಾ ಗೋಡೆಯಾಗಿ ನಿಂತಿವೆ.
ಈ ಪರ್ವತ ಶ್ರೇಣಿಗಳು ಉತ್ತರ ಕಡೆಯಿಂದ ವಿದೇಶಿಯರು ಅಕ್ರಮಣ ಮಾಡದಂತೆ ನಮ್ಮ ದೇಶವನ್ನು ರಕ್ಷಿಸುತ್ತವೆ.
ಈ ಪರ್ವತಗಳು ಸೈಬೀರಿಯಾ ಕಡೆಯಿಂದ ಬಿಸಿ ಬರುವ ಶೀತಲಾ ಮಾರುತಗಳನ್ನು ತಡೆದು ಹಿಡತಕರವಾದ ವಾಯುಗುಣವನ್ನು ಒದಗಿಸುತ್ತದೆ.
ಹಿಮಾಲಯ ಪರ್ವತಗಳು ಹಿಂಗಾರು ಮತ್ತು ಮುಂಗಾರು ಮಾರುತಗಳನ್ನು ತಡೆದು ದೇಶದಲ್ಲಿ ಹೆಚ್ಚು ಮಳೆಯನ್ನು ಸುರಿಸುತ್ತದೆ. ಇದರಿಂದ ಹುಟ್ಟುವ ನದಿಗಳಿಂದ ಭಾರತೀಯ ಕೃಷಿಯನ್ನು ಅಭಿವೃದ್ಧಿಪಡಿಸಿದೆ.
ಇದು ಸದಾ ಕಾಲ ಹರಿಯುವ ನದಿಗಳಿಗೆ ಜನ್ಮ ನೀಡಿದೆ.
ಹಿಮಾಲಯವು ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಕೇಂದ್ರಗಳ ಜನ್ಮಸ್ಥಳವಾಗಿದೆ. ಕೇದರನಾಥ, ಬದ್ರಿನಾಥ, ಅಮರನಾಥ, ಕೈಲಾಸ ಮಾನಸ ಸರೋವರ ಮುಂತಾದ ಪವಿತ್ರ ಕ್ಷೇತ್ರಗಳಾವುವು ಇಲ್ಲಿವೆ
ಉತ್ತರದ ಕಣಿವೆಗಳಾದ ಕೈಬರ್ ಮತ್ತು ಬೋಲಾನ್ ಭಾರತೀಯರಿಗೆ ಪಶ್ಚಿಮಾತ್ಯರೊಂದಿಗೆ ವಾಣಿಜ್ಯ ಹಾಗೂ ಸಂಸ್ಕೃತಿಯ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡಿದ್ದಲ್ಲದೆ ಭಾರತವನ್ನು ಆರ್ಯರು, ಪರ್ಶಿಯನ್ನರು, ಗ್ರೀಕರು, ಅಫ್ಘನ್ನರು ಮತ್ತು ಹುಣರಿಂದ ನಿರಂತರ ದಾಳಿಗಳಿಗೆ ದಾರಿ ಮಾಡಿ ಕೊಟ್ಟಿತು.
ಸಿಂಧೂ ಗಂಗಾ ನದಿ ಬಯಲು
ಒಂದು ದೇಶದ ಇತಿಹಾಸವನ್ನು ರೂಪಿಸುವುದರಲ್ಲಿ ಅಲ್ಲಿನ ನದಿಗಳ ಪಾತ್ರವು ದೊಡ್ಡದಾಗಿರುತ್ತದೆ.
ಭಾರತದ ಉತ್ತರ ಭಾಗದಿಂದ ಹರಿದು ಬರುವ ಸಿಂಧೂ ಗಂಗಾ ಯಮುನಾ ಬ್ರಹ್ಮಪುತ್ರ ನದಿಗಳು ಇಲ್ಲಿನ ಜನರ ಆಧಾರ ಸ್ತಂಭವಾಗಿದೆ.
ಹಿಮಾಲಯದಲ್ಲಿ ಹುಟ್ಟಿ ಬರುವಂತಹ ಈ ಜೀವಂತ ನದಿಗಳಿಂದ ಬಯಲು ಪ್ರದೇಶವು ಅತ್ಯಂತ ಫಲವತ್ತಾದ ಮತ್ತು ಜನಭರಿತವಾದ ಪ್ರದೇಶಗಳಾಗಿವೆ.
ಈ ಬಯಲುಗಳು ಭಾರತೀಯ ಜನರ ಸಾಂಸ್ಕೃತಿಕ ಹಾಗು ಐತಿಹಾಸಿಕ ಕೇಂದ್ರ ಸ್ಥಳಗಳು ಎಂದು ಹೇಳಲಾಗಿದೆ. ಅಲ್ಲದೆ ಇತಿಹಾಸಗಳು ಹುಟ್ಟಿ ಬೆಳೆದಿದ್ದು ಇಲ್ಲಿಯೇ.
ಈ ನದಿ ಬಯಲುಗಳಿಂದ ಪ್ರಪಂಚದ ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಒಂದಾದ ಸಿಂಧೂ ನಾಗರಿಕತೆಯು ಇಲಿ ಜನ್ಮ ತಾಳಿತು.
ಭಾರತವನ್ನು ಆಳಿದ ಶ್ರೇಷ್ಠ ಸಮಾಜಗಳಾದ ಮೌರ್ಯ ಗುಪ್ತ ವರ್ಧನ ಮೊಘಲ್ ಮುಂತಾದ ಸಾಮ್ರಾಜ್ಯಗಳು ಇಲ್ಲಿ ಹುಟ್ಟಿ ಬೆಳೆದಿದೆ.
ಇಲ್ಲಿನ ವ್ಯವಸ್ಥೆ ಜನರ ಬೌದ್ಧಿಕ ಮತ್ತು ಸಾಂಸ್ಕೃತಿಕ ಪ್ರಗತಿಗೆ ಕಾರಣವಾಗಿದೆ.
ಈ ಪ್ರದೇಶದ ಫಲವತ್ತಾದ ಭೂಮಿ ಮತ್ತು ನೀರಾವರಿ ಸೌಲಭ್ಯ ಹೆಚ್ಚಿನ ಆಹಾರ ಉತ್ಪಾದನೆ ಮತ್ತು ಜನಭರಿತತೆಗೆ ಕಾರಣವಾಗಿದೆ.
ಇದರ ಕಾರಣದಿಂದಾಗಿ ಇಲ್ಲಿ ಹಲವಾರು ಪಟ್ಟಣಗಳು ಕೈಗಾರಿಕಾ ಕೇಂದ್ರಗಳು ವಾಣಿಜ್ಯ ಕೇಂದ್ರಗಳು ಅಭಿವೃದ್ಧಿ ಹೊಂದುವುದಕ್ಕೆ ಸಾಧ್ಯವಾಗಿದೆ.
ಇಲ್ಲಿನ ಅತ್ಯಧಿಕ ಸಂಪತ್ತು ವಿದೇಶಿ ದಾಳಿಕೋರರನ್ನು ಆಕರ್ಷಿಸಿದವು ಅಲ್ಲದೆ ಹಲವಾರು ವಿನಾಶಕಾರಿ ಯುದ್ಧಗಳಿಗೆ ಕಾರಣವಾದವು.
Table of Contents
ಧಖನ್ ಪ್ರಸ್ಥಭೂಮಿ
ಧಖನ್ ಎನ್ನುವ ಪದವು ದಕ್ಷಿಣ ಪಥ ಎಂಬ ಪದದಿಂದ ಬಂದಿದೆ.
ಧಕನ್ ಪ್ರಸ್ಥಭೂಮಿ ಭಾರತದ ಉಪಖಂಡದ ದಕ್ಷಿಣ ಭಾಗದಲ್ಲಿ ವಿಸ್ತರಿಸಿದೆ.
ಧಕನ್ ಪ್ರಸ್ಥಭೂಮಿಯು ಚಪ್ಪಟೆಯಾಗಿದ್ದು ಪಶ್ಚಿಮದಿಂದ ಪೂರ್ವದ ಕಡೆ ಇಳಿಭಾಗವಾಗಿ ಮುಂದುವರೆಯುತ್ತದೆ.
ಇಲ್ಲಿನ ಪ್ರಮುಖ ನದಿಗಳಾದ ನರ್ಮದಾ ಮತ್ತು ತಪತಿ ನದಿಗಳು ಪೂರ್ವದಿಂದ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ.
ಇದು ತ್ರಿಕೋನಾಕಾರದ ಆಕಾರ ಹೊಂದಿದ್ದು ಉತ್ತರದಲ್ಲಿ ವಿಂಧ್ಯ ಪರ್ವತಗಳು ಪಶ್ಚಿಮದಲ್ಲಿ ಸಹ್ಯಾದ್ರಿ ಮತ್ತು ಪೂರ್ವಘಟ್ಟಗಳಿವೆ.
ಪೂರ್ವ ಮತ್ತು ಪಶ್ಚಿಮ ಘಟ್ಟಗಳು
ಪುರು ಮತ್ತು ಪಶ್ಚಿಮ ಘಟ್ಟಗಳು ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಅಂಚಿನಲ್ಲಿ ದಕ್ಷಿಣ ಅಭಿಮುಖವಾಗಿ ಮುಂದುವರೆಯುತಾ ಬಂದು ನೀಲಾಗಿರಿಯಬಳಿ ಒಟ್ಟುಗೂಡಿ ಮುಂದುವರೆದು ಭಾರತದ ದಕ್ಷಿಣದ ತುತ್ತ ತುದಿಯಾದ ಕನ್ಯಾಕುಮಾರಿಗೆ ಸೇರುತ್ತದೆ.
ಪಶ್ಚಿಮ ಘಟ್ಟಗಳು ಪೂರ್ವಘಟ್ಟಗಳಿಗಿಂತ ವಿಶಾಲವಾಗಿಲ್ಲ, ಪಶ್ಚಿಮ ಘಟ್ಟಗಳು ಪಶ್ಚಿಮ ತೀರ ಪ್ರದೇಶ ಹಾಗೂ ಅರೇಬಿಯನ್ ಸಮುದ್ರ ನಡುವಿನ ಪ್ರದೇಶವಾಗಿದೆ.
ಈ ಪ್ರದೇಶವು ಬಹಳ ಫಲವತ್ತಾಗಿದ್ದು ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ ಅಲ್ಲದೆ ಇಲ್ಲಿ ದಟ್ಟವಾದ ಅರಣ್ಯವನ್ನು ಕಾಣಬಹುದು.
ಈ ಪ್ರದೇಶದಲ್ಲಿ ಹವಾಗುಣವು ಉತ್ತಮವಾಗಿದ್ದು ನೈಸರ್ಗಿಕ ಸಂಪತ್ತಿನ ತಾಣವಾಗಿದೆ.
ಇಲ್ಲಿ ಬೆಲೆ ಬಾಳುವ ಮರಗಳಾದ ಬಿಟ್ಟೆ, ಹೊನ್ನೇ, ಗಂಧದ ಮರಗಳು ಈ ಪ್ರದೇಶದಲ್ಲಿ ಅತಿ ಹೇಳಲವಾಗಿ ಬೆಳೆಯುತ್ತವೆ.
ಇಲ್ಲಿ ಕಂಡು ಬರುವ ಹಲವಾರು ಬಂದರುಗಳು ದೇಶದ ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿಗೆ ಕಾರಣವಾಗಿದೆ.
ಇಲ್ಲಿನ ಕೊಂಕಣ ಮತ್ತು ಮುಂಬಾರ್ ಪ್ರದೇಶವು ಪ್ರಕೃತಿಯ ಸೌಂದರ್ಯಕ್ಕೆ ಪ್ರಸಿದ್ಧಿಯಾಗಿದೆ.
ಈ ಪ್ರದೇಶದಲ್ಲಿ ನದಿಗಳ ಆಸರೆ ಇಲ್ಲದಿರುವ ಪ್ರದೇಶ ಬರಡು ಭೂಮಿಯಾಗಿ ಉಳಿದಿದೆ.
ಇಲ್ಲಿನ ಪ್ರಮುಖ ನದಿಗಳೆಂದರೆ ಕೃಷ್ಣ ಗೋದಾವರಿ ಮಹಾನದಿ ಕಾವೇರಿ ಮುಂತಾದವುಗಳು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ
ತೀರ ಪ್ರದೇಶಗಳು
ಭಾರತವು 7516 km ಉದ್ದವಾದ ಕರಾವಳಿ ತೀರಗಳನ್ನು ಹೊಂದಿದೆ.
ಭಾರತ ಕರಾವಳಿ ತೀರವನ್ನು ಎರಡು ಭಾಗವಾಗಿಸಿದೆ 1 ಪಶ್ಚಿಮ ಕರಾವಳಿ – ಅರೇಬಿಯನ್ ಸಮುದ್ರದತಿರ ( ಗುಜರಾತ್ ಇಂದ ಕೇರಳದವರೆಗೂ ) 2 ಪೂರ್ವ ಕರಾವಳಿ – ಬಂಗಾಳಕೊಲ್ಲಿಯ ತೀರ ( ಪಶ್ಚಿಮ ಬಂಗಾಳದಿಂದ ತಮಿಳುನಾಡಿನ ವರೆಗೆ)
ತೀರ ಪ್ರದೇಶಗಳು ಮೀನುಗಾರಿಕೆ ವ್ಯಾಪಾರ ಮತ್ತು ಬಂದರುಗಳ ಅಭಿವೃದ್ಧಿಗೆ ಮುಖ್ಯ ಕೇಂದ್ರವಾಗಿದೆ ಪ್ರಮುಖ ಬಂದರುಗಳು – ಮುಂಬೈ ಕೊಚ್ಚಿ ಚೆನ್ನೈ ವಿಶಾಖಪಟ್ಟಣಂ ಕ್ಯಾಂಬೆ ಮರ್ಮಗೋವಾ ಮತ್ತು ಕಾಲಿಕಟ್ ಆಗಿವೆ.
ತೀರ ಪ್ರದೇಶಗಳು ತೆಂಗು ಅಕ್ಕಿ ಸಕ್ಕರೆ ಕಬ್ಬು ಮಸಾಲೆ ಬೆಳೆಗಳ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ.
ತೀರ ಪ್ರದೇಶಗಳು ಭಾರತದ ಆರ್ಥಿಕತೆ ವಾಣಿಜ್ಯ ಮತ್ತು ಸಂಸ್ಕೃತಿಕ ವೈವಿಧ್ಯತೆಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ – ಉಪಸಂಹಾರ
ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ ಭಾರತದ ಭೌಗೋಳಿಕ ಲಕ್ಷಣಗಳು – ಹಿಮಾಲಯ ಪರ್ವತಗಳು, ನದಿ ತಟಗಳು, ಮರುಭೂಮಿಗಳು, ಕರಾವಳಿ ತೀರಗಳು ಮತ್ತು ಪ್ರಸ್ಥಭೂಮಿಗಳು ಇವುಗಳು ಭಾರತದ ಇತಿಹಾಸದ ದಿಕ್ಕನ್ನು ನಿರ್ಧರಿಸಿದ್ದವೆ. ಹಿಮಾಲಯ ಆಕ್ರಮಣಕಾರರಿಂದ ರಕ್ಷಣೆ ನೀಡಿದರೆ, ನದಿಗಳು ಫಲವತ್ತಾದ ಭೂಮಿಯನ್ನು ನೀಡುವ ಮೂಲಕ ಮಹಾನ್ ನಾಗರಿಕತೆಗಳ ಹುಟ್ಟಿಗೆ ಕಾರಣವಾದವು. ಕರಾವಳಿ ತೀರಗಳು ಭಾರತದ ವ್ಯಾಪಾರ ಮತ್ತು ವಿದೇಶಿ ಸಂಬಂಧಗಳನ್ನು ವಿಸ್ತರಿಸಿದರೆ, ಮರುಭೂಮಿ ಮತ್ತು ಕಾಡುಗಳು ಜನರನ್ನು ಪರಿಶ್ರಮಿ ಹಾಗೂ ಶೂರರನ್ನಾಗಿ ರೂಪಿಸಿದವು. ಹೀಗಾಗಿ, ಭಾರತದ ಭೌಗೋಳಿಕ ವೈವಿಧ್ಯತೆಯೇ ಅದರ ಸಂಸ್ಕೃತಿ, ರಾಜಕೀಯ ವ್ಯವಸ್ಥೆ, ಆರ್ಥಿಕತೆ ಮತ್ತು ಸಾಮಾಜಿಕ ಬೆಳವಣಿಗೆಯ ಪ್ರಮುಖ ಆಧಾರವಾಗಿದೆ.
ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವಕ್ಕೆ ಮುಖ್ಯ ಕಾರಣ ಯಾವುದು
ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ ಇಲ್ಲಿದೆ
ವಿಜಯನಗರ ಸಾಮ್ರಾಜ್ಯ (೧೩೩೬ ೧೬೪೬) ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಸಾಮ್ರಾಜ್ಯಗಳಲ್ಲಿ ಒಂದಾಗಿದೆ.ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಹರಿಹರ ಮತ್ತು ಬುಕ್ಕರಾಯ. ವಿಜಯನಗರ ಸಾಮ್ರಾಜ್ಯೋ ತುಂಗಭದ್ರ ನದಿಯ ತೀರದಲ್ಲಿ ಹರಡಿದೆ .ಈ ಸಾಮ್ರಾಜ್ಯವು ಕೇವಲ ರಾಜಕೀಯ ಬಲದಿಂದ ಮಾತ್ರವಲ್ಲ ತನ್ನ ವಿಶಿಷ್ಟ ಕಲೆ ಮತ್ತು ವಾಸ್ತುಶಿಲ್ಪದಿಂದಲೂ ಪ್ರಸಿದ್ಧಿಯಾಗಿದೆ.ವಿಜಯನಗರ ಅಂದರೆ ಇಂದಿನ ಹಂಪಿ ಯು ಜಗತ್ತಿಗೆ ಗಮನ ಸೆಳೆಯುತ್ತಿದೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದೆ. ವಿಜಯನಗರದ ಪ್ರತಿಯೊಂದು ಕಲ್ಲು ದೇವಸ್ಥಾನ ಮತ್ತು ಅರಮನೆಗಳು, ವಿಜಯನಗರದ ಶೌರ್ಯ ಮತ್ತು ಸಂಸ್ಕೃತಿ ಇನ್ನು ಬದುಕು ಉಳಿದಿದೆ ಎಂದು ತೋರಿಸಿಕೊಡುತ್ತದೆ.
ಅದ್ಭುತವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ
ವಿಜಯನಗರ ಸಾಮ್ರಾಜ್ಯ ದ್ರಾವಿಡ ಶೈಲಿಯಲ್ಲಿದೆ. ಧಾರ್ಮಿಕ ಭಕ್ತಿ ಶೌರ್ಯ ಮತ್ತು ವೈಭವವನ್ನು ಪ್ರತಿಬಿಂಬುಸುತ್ತದೆ. ದೇವಲಾಯಗಳ ಗೋಡೆಗಳು ಸ್ತಂಭಗಳು ಮಂಟಪಗಳು ಆನೆ ಕುದುರೆ ಸೈನಿಕರು ನೃತ್ಯ ಗಾರ್ತಿಗಯರು ಮತ್ತು ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ. ದೇವಾಲಯಗಳ ಒಳಗೆ ಬಿತ್ತಿ ಚಿತ್ರಗಳಲ್ಲಿ ರಾಮಾಯಣ ಮಹಾಭಾರತ ಮತ್ತು ಪುರಾಣಗಳ ದೃಶ್ಯಗಳನ್ನು ಬಣ್ಣಗಳಿಂದ ಬಿಡಿಸಲಾಗಿದೆ.
ಸಾಮ್ರಾಜ್ಯ ಅರಸರುಗಳ ಕಾಲದಲ್ಲಿ ಶಿಲ್ಪ ಕಲೆಯು ಬಹಳ ಪ್ರಗತಿಯನ್ನು ಕಂಡಿ ಬಂದಿದೆ ಹಂಪಿಯ ದೇವಾಲಯಗಳಲ್ಲಿ ಶಿವಾ, ವಿಷ್ಣು ಸೂರ್ಯ, ಕೃಷ್ಣ, ನಟರಾಜ, ಯೋಗ ಲಕ್ಷ್ಮಿ ನರಸಿಂಹ ಮತ್ತು ಮಾದನಿಕ ವಿಗ್ರಹಗಳು ವಿಜಯನಗರದ ಕಲೆಯನ್ನು ಎತ್ತಿ ತೋರಿಸುತ್ತದೆ.
ಯೋಗಲಕ್ಷ್ಮಿ ನರಸಿಂಹ 6.7 ಮೀಟರ್ ಗಳಷ್ಟು ಎತ್ತರವಿರುವ ಬೃಹತ್ ಶಿಲ್ಪ. ಇದನ್ನು ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಉಗ್ರನರಸಿಂಹ ಎಂದು ಕರೆಯುತ್ತಾರೆ. ನರಸಿಂಹನು ಯೋಗಾಸನದಲ್ಲಿ ಕುಳಿತಿರುವ ಹಾಗೆ ತೋರಿಸಲಾಗಿದೆ. ಲೇಪಾಕ್ಷಿಯ ಏಕಶಿಲೆಯ ನಂದಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಂದಿಯಾಗಿದೆ. ಇದು 30 ಅಡಿ ಉದ್ದ ಮತ್ತು 20 ಅಡಿ ಎತ್ತರವಿದೆ. ಲೇಪಾಕ್ಷಿಯಲ್ಲಿರುವ ನಾಗಲಿಂಗ 7 ಎಡೆಗಳನ್ನು ಎತ್ತಿ ಮಲಗಿರುವ ಸರ್ಪದ ಮೇಲೆ ಲಿಂಗವನ್ನು ಸ್ಥಾಪಿಸಲಾಗಿದೆ. ಇದೆಲ್ಲವೂ ಶಿಲ್ಪಕಲೆಗೆ ಉದಾಹರಣೆಯಾಗಿದೆ.
ವಿಜಯನಗರ ಸಾಮ್ರಾಜ್ಯ ದ ಚಿತ್ರಕಲೆ
ವಿಜಯನಗರ ಅರಸರುಗಳ ಕಾಲದಲ್ಲಿ ಚಿತ್ರಕಲೆ ಸಾಕಷ್ಟು ಉನ್ನತಿಯನ್ನು ಹೊಂದಿತ್ತು. ವಿಜಯನಗರ ಅರಸರ ಕಾಲದಲ್ಲಿ ಚಿತ್ರಕಲೆ ಬಿತ್ತಿ ಚಿತ್ರಗಳಲ್ಲಿ ಮಾತ್ರವಲ್ಲದೆ ಜನ ಜೀವನದಲ್ಲಿ ಜನಪ್ರಿಯ ಕಲೆಯಾಗಿ ಬೆಳೆದಿತ್ತು , ರಾಜನ ಅಂತಪುರದಲ್ಲಿ ದೇಶ ವಿದೇಶಗಳ ಜನರ ಜೀವನವನ್ನು ವಿವರಿಸುವ ಚಿತ್ರಗಳನ್ನು ಕಾಣಬಹುದು.
ವಿಜಯನಗರದ ಅರಸರುಗಳು ಉನ್ನತ ದರ್ಜೆಯ ಕಲಾವಿದರನ್ನು ತಮ್ಮ ಬಳಿ ಇಟ್ಟುಕೊಂಡು ಚಿತ್ರಕಲೆ ಉನ್ನತಿಗಾಗಿ ಶ್ರಮಿಸಿದರು. ಇವರ ಪ್ರೋತ್ಸಾಹದ ಫಲವಾಗಿ ಹಂಪಿಯಲ್ಲಿರುವ ದೇವಸ್ಥಾನದ ರಂಗಮಂಟಪದ ಮೇಲ್ಚಾವಣಿಯಲ್ಲಿ ಕಲ್ಯಾಣ ಸುಂದ ಮತ್ತು ಪಾರ್ವತಿಯರ ವಿವಾಹದ ದೃಶ್ಯವನ್ನು ಕಾಣಬಹುದು. ತಾಂಜ ಊರಿನಲ್ಲಿರುವ ರಾವಣ ಕೈಲಾಸವನ್ನು ಎತ್ತುತ್ತಿರುವ ದೃಶ್ಯ ಮತ್ತು ಬ್ರಹ್ಮ ಮಹೇಶ್ವರರಿಗೆ ಸಂಬಂಧಿಸಿದ ಚಿತ್ರಗಳನ್ನು ಸಹ ನಾವು ಕಾಣಬಹುದು.
ವಿಜಯನಗರ ವಾಸ್ತುಶಿಲ್ಪ ದ್ರಾವಿಡಸಲ್ಲಿಯ ಶ್ರೇಷ್ಠ ರೂಪ ಆಗಿದೆ, ವಿಜಯನಗರ ವಾಸ್ತುಶಿಲ್ಪವನ್ನು 4 ಭಾಗಗಳಾಗಿ ನೋಡಬಹುದು.
ದೇವಾಲಯ ವಾಸ್ತು ಶಿಲ್ಪ
ಇಸ್ಲಾಮಿಕ್ ವಾಸ್ತು ಶಿಲ್ಪ
ಪೌರವಾಸ್ತು ಶಿಲ್ಪ
ಮಿಲಿಟರಿ ಅಥವಾ ಸೇನಾ ವಾಸ್ತು ಶಿಲ್ಪ
1) ದೇವಾಲಯ ವಾಸ್ತು ಶಿಲ್ಪ :
ವಿಜಯನಗರದಲ್ಲಿ ದೇವಾಲಯಗಳ ನಿರ್ಮಾಣಕ್ಕಾಗಿ ವಿಜಯನಗರದ ಹೆಸರು ಬಹಳ ಪ್ರೇರಣೆ ಕೊಟ್ಟಿದ್ದರು. ಧಾರ್ಮಿಕ ಉತ್ಸವ ನಿತ್ಯ ಜರುಗುತ್ತಿದ್ದ ಉತ್ಸವ 15 ದಿನಗಳಿಗೆ ಒಮ್ಮೆ ನಡೆಯುತ್ತಿದ್ದ ಉತ್ಸವ ತಿಂಗಳಿಗೊಮ್ಮೆ ಆಡುತ್ತಿದ್ದೋತ್ಸವ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಉತ್ಸವಗಳಿಗೆ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದರು.ಪೂಜಾ ಸಂದರ್ಭದಲ್ಲಿ ನೃತ್ಯ ಮತ್ತು ಸಂಗೀತಗಳ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತು.ದೇವಾಲಯಗಳ ನಿರ್ಮಾಣಕ್ಕಾಗಿ ಗ್ರಾನೆಟ್ ಮತ್ತು ಬೆಣಚು ಕಲ್ಲುಗಳನ್ನು ಬಳಸುತ್ತಿದ್ದರು.
ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ವಾಸ್ತುಶಿಲ್ಪದ ಮುಖ್ಯ ಅಂಗಗಳು:
1 ಗರ್ಭಗೃಹ: ದೇವರು ಅಥವಾ ದೇವತೆಯನ್ನು ಪ್ರತಿಷ್ಠಾಪಿಸಿದ ಸ್ಥಳ
ಸುಕನಾಸಿ : ಗರ್ಭಗೃಹದ ಪಕ್ಕದ ಕೋಣೆ
ಅಂತರಾಳ : ಸುಖನಾಸಿ ಮತ್ತು ರಂಗಮಂಟಪದ ಮಧ್ಯ ಬರುವ ಭಾಗ
ರಂಗಮಂಟಪ : 4 ಅಥವಾ 16 ಕಂಬಗಳ ಹಜಾರ ಸಭೆಗಳನ್ನು ಮಾಡುವುದಕ್ಕೆ ಇದ್ದ ಜಾಗ
ಮಹಾ ರಂಗ ಮಂಟಪ ಹಾಗೂ ರಾಯ ಗೋಪುರಗಳು: ಮಹದ್ವಾರಗಳ ಮೇಲೆ ಕಟ್ಟಲ್ಪಡ್ತಿದ್ದ ಗೊಬ್ಬರಗಳು
ಈ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ. ಕೃಷ್ಣದೇವರಾಯ 1509 ರಲ್ಲಿ ದೇವಾಲಯದ ಮುಂದೆ ರಂಗ ಮಂಟಪವನ್ನು ನಿರ್ಮಿಸಿದನು. ಈ ದೇವಾಲಯದಲ್ಲಿ 2 ರಾಯ ಗೋಪುರಗಳನ್ನು ಕಾಣಬಹುದು, ಅದರಲ್ಲಿ ಒಂದು 165 ಅಡಿ ಎತ್ತರವಾಗಿದೆ. ದೇವಾಲಯದ ಒಳಾಂಗಣದಲ್ಲಿ ವಿರೂಪಾಕ್ಷನ ಗರ್ಭಗೃಹದ ಜೊತೆಗೆ ಭುವನೇಶ್ವರಿ, ಪಾತಾಳೇಶ್ವರಿ, ದುರ್ಗಿ ಮತ್ತು ಗಣಪತಿಯ ಗುಡಿಗಳು ಇದೆ.
ವಿಜಯನಗರದ ದೇವಾಲಯಗಳು ಸಾಮಾನ್ಯವಾಗಿ ಶಿಲೆ (ಗ್ರಾನೈಟ್) ಅನ್ನು ಬಳಸಿ ಕಟ್ಟಲಾಗಿದೆ. ಗೋಪುರಗಳ ನಿರ್ಮಾಣಕ್ಕೆ ಇಟ್ಟಿಗೆ ಮತ್ತು ಗಾರೆಯನ್ನು ಬಳಸಲಾಗಿದೆ.
ದೇವಾಲಯಗಳಲ್ಲಿ ಗರ್ಭಗುಡಿ, ಸುಖನಾಸಿ, ನವರಂಗ, ಕಲ್ಯಾಣ ಮಂಟಪ, ವಸಂತ ಮಂಟಪ ಕಾಣಬಹುದು.
ಕಂಬಗಳಿಂದ ಕೂಡಿದ ದೇವಾಲಗಳನ್ನು ಕಾಣಬಹುದು.
ದ್ರಾವಿಡ ಶೈಲಿಯಲ್ಲಿರುವ ಕಂಬಗಳು ಅತ್ಯಂತ ಮನಮೋಹಕವಾಗಿ ಕೆತ್ತಲಾಗಿದೆ.
ಕಂಬಗಳ ಮೇಲೆ ಮುಂದಿನ ಕಾಲು ಎತ್ತಿ ನಿಂತಿರುವ ಕುದುರೆ ಮತ್ತು ಹುಲಿ ಶಿಲ್ಪವನ್ನು ಕಾಣಬಹುದು.
ಕಂಬಗಳ ಬೋಧಿಗೆಯ ಮೇಲಿಂದ ಚಾಚಿರುವ ಲೋಕದಲ್ಲಿ ಅನೇಕ ಸುರಳಿಗಳನ್ನು ಕೆತ್ತಿ ಅಂತಿಮವಾಗಿ ಕೆಳಕ್ಕೆ ಬಗ್ಗಿರುವ ಕಮಲದ ಮೊಗ್ಗನ್ನು ಬಿಡಿಸಲಾಗಿದೆ.
2 ವಿಠಲ ದೇವಾಲಯ :
ವಿಠಲ ದೇವಾಲಯವು ವಿಷ್ಣು ಅವತಾರ ಎಂದು ಹೇಳಲಾಗುತ್ತದೆ. ವಿಠಲ ಸ್ವಾಮಿ ದೇವಾಲಯವನ್ನು ಪ್ರೌಢ ದೇವರಾಯನ ಕಾಲ ಅವಧಿಯಲ್ಲಿ ಆರಂಭಿಸಿದರು ಈ ಕಾರ್ಯವನ್ನು 1565 ರವರೆಗೆ ಮುಂದುವರಿಸಿದರು. ಸುಮಾರು 500 ಅಡಿ ಉದ್ದ 310 ಅಗಲವಾದ ವಿಸ್ತೃತ ಅಂಗಳದ ಮಧ್ಯೆ ಈ ದೇವಾಲಯವನ್ನು ಪೂರ್ವಕ್ಕೆ ನಿರ್ಮಿಸಲಾಗಿದೆ. ಈ ಅಂಗಳದ ಸುತ್ತಲೂ 3 ಸಾಲು ಕಂಬಗಳಿಂದ ಕೂಡಿದ ಮಂಟಪದ ಸಾಲುಗಳಿವೆ. ಈ ದೇವಾಲಯವನ್ನು ಪೂರ್ವ ಉತ್ತರ ಮತ್ತು ದಕ್ಷಿಣ ಪ್ರವೇಶ ದ್ವಾರಗಳಿಂದ ಪ್ರವೇಶಿಸಬಹುದು. ಈ ದೇವಾಲಯ ಗರ್ಭಗೃಹ, ಅರ್ಧ ಮಂಟಪ ಹಾಗೂ ಮಹಾಮಂಟಪಗಳನ್ನು ಒಳಗೊಂಡಿರುತ್ತದೆ.
ಹಜಾರ ರಾಮಸ್ವಾಮಿ ದೇವಾಲಯವನ್ನು 15ನೇ ಶತಮಾನದಲ್ಲಿ ಕೃಷ್ಣದೇವರಾಯ ತನ್ನ ಪೂರ್ವದ ದಿಗ್ವಿಜಯಗಳ ಸವಿನೆನಪಿಯಾಗಿ ಪೂರ್ವಕ್ಕೆ ಮುಖ ಮಾಡಿ ಈ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯದಲ್ಲಿ ಒಂದು ಸಾವಿರದಷ್ಟು ಶಿಲ್ಪಗಳನ್ನು ಕಾಣಬಹುದು, ಆ ಶಿಲ್ಪಗಳು ಸುಬ್ರಮಣ್ಯ, ಗಣೇಶ, ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಶಿಲ್ಪ ದೃಶ್ಯಗಳಾಗಿವೆ. ಈ ದೇವಾಲಯ ರಾಜ ಕುಟುಂಬದವರಿಗೆ ಮಾತ್ರ ಮೀಸಲಾಗಿತ್ತು.
2) ಇಸ್ಲಾಮಿಕ್ ವಾಸ್ತುಶಿಲ್ಪ :
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಲ್ಲಿ ಮುಸ್ಲಿಮರ ಬಡಾವಣೆಗಳು ಇದ್ದವು. ಇದರಲ್ಲಿ ಶ್ರೀಮಂತ ಮುಸ್ಲಿಮರು ಹಲವರು ಕಟ್ಟಡಗಳನ್ನು ನಿರ್ಮಿಸಿದರು. ಅವುಗಳೆಂದರೆ ಸಮಾಧಿಗಳು, ಗೋರಿಗಳು , ಮತ್ತು ಮಸೀದಿಗಳು, . ಈ ಕಟ್ಟಡಗಳು ಇಸ್ಲಾಮಿಕ್ ವಾಸ್ತು ಶೈಲಿಯ ಲಕ್ಷಣಗಳಾದ ಗುಮ್ಮಟಗಳು ಮತ್ತು ಕಮಾನುಗಳು ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ.
3) ಪೌರವಾಸ್ತು ಶಿಲ್ಪ :
ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಅರಮನೆಗಳು, ಮಹಾನವಮಿ ದಿಬ್ಬ ರಾಜನ ಸಭಾಭವನ ಕೊಳ ಕಮಲ ಮಹಲ್ ರಾಣಿ ಸ್ನಾನ ಗೃಹ ಆನೆಲಾಯ ಮೇಲ್ಚಾವಣಿ ಇರುವ ಬಾವಿ ಮುಂತಾದವು ಪೌರ ವಾಸ್ತುಶಿಲ್ಪದ ಅಡಿಯಲ್ಲಿ ಬರುತ್ತದೆ.
ಅರಮನೆ : ಟಂಕಶಾಲೆಯ ಪ್ರದೇಶದಲ್ಲಿ ಒಂದು ಅರಮನೆ ಇದ್ದು ಆ ಅರಮನೆ ತುಂಬಾ ಮುಖ್ಯವಾದದ್ದು. ಉತ್ಸವಗಳನ್ನು ಮಾಡುವಾಗ ಈ ಅರಮನೆಗಳನ್ನು ಬಳಸುತ್ತಿದ್ದರು ಇಲ್ಲಿಗೆ ಜನರು, ಪ್ರವಾಸಿಗರು ಮತ್ತು ಅಧಿಕಾರಿಗಳು ಬರುತ್ತಿದ್ದರು. ವಿಜಯನಗರ ಕಾಲದಲ್ಲಿ ರಾಜರು ಅಧಿಕಾರಿಗಳು ಅರಮನೆಯಲ್ಲಿ ವಿವಿಧ ಕಾರ್ಯ ಆಚರಣೆಗಳನ್ನು ಕಾಲದಿಂದ ಕಾಲಕ್ಕೆ ನಡೆದ ಯುದ್ಧಗಳ ಕಾರಣ ಕೆಲವು ಅರಮನೆಗಳು ಹಾಳಾಗಿದೆ
ಮಹಾನವಮಿ ದಿಬ್ಬ : O* 14ನೇ ಶತಮಾನದ ಮಧ್ಯ ಭಾಗದಲ್ಲಿ ರಚಿಸಲ್ಪಟ್ಟ ಮಹಾನ್ ನವಮಿ ಉತ್ಸವದ ಈ ದಿಬ್ಬ ಹಂಪಿಯಲ್ಲಿ ನಿರ್ಮಿಸಲಾಗಿದೆ. O* ಇದನ್ನು ಸಿಂಹಾಸನದ ವೇದಿಕೆಯನ್ನು ಸಹ ಕರೆಯುತ್ತಾರೆ. O* ಇದು ಸುಮಾರು 22 ಚದರ ಮೀಟರ್ ಪ್ರದೇಶದಲ್ಲಿ 10 ಮೀಟರ್ ಎತ್ತರವಿರುವ ಹಾಗೆ ಕಟ್ಟಲಾಗಿದೆ. O* ಮಹಾನವಮಿ ಹಬ್ಬವನ್ನು ನಿರ್ಮಿಸಲು ಗ್ರಾನೈಟ್ ಮತ್ತು ಕ್ಲೋರೈಟ್ ಕಲ್ಲುಗಳನ್ನು ಬಳಸಲಾಗಿದೆ. O* ಮಹಾನ್ ನವಮಿ ದಿಬ್ಬ ಹೊರಮೈ ಉಬ್ಬು ಕೆತ್ತನೆಗಳಿಂದ ಅಲಂಕೃತ ಗೊಂಡಿದೆ. ಅವುಗಳೆಂದರೆ ಆನೆಗಳು, ಒಂಟೆಗಳು, ಕುದುರೆಗಳು ಮತ್ತು ಯುದ್ಧದ ದೃಶ್ಯಗಳು ಇತ್ಯಾದಿ.
ಕಮಲ್ ಮಹಲ್ : ಕಮಲ್ ಮಹಲ್ ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ವಿಜಯನಗರ ಸಾಮ್ರಾಜ್ಯದ ಅತ್ಯಂತ ಸುಂದರವಾದ ರಾಜಮನೆತನದ ಕಟ್ಟಡಗಳಲ್ಲಿ ಒಂದಾಗಿದೆ. ಈ ಕಟ್ಟಡದಲ್ಲಿ ತೆರೆದ ಕಮಾನುಗಳನ್ನು ಅಳವಡಿಸಲಾಗಿದೆ ಕಮಾನುಗಳನ್ನು ಬಳ್ಳಿಗಳು ಹೂವುಗಳು ಹಂಸಗಳಿಂದ ಅಲಂಕರಿಸಲಾಗಿದೆ . ಕಮಲ ಮಹಲ್ 9 ಗೋಪುರಗಳನ್ನು ಒಳಗೊಂಡಿದೆ.
ರಾಣಿಯ ಸ್ನಾನ ಗೃಹ : ಪ್ರಾಣಿಯ ಸ್ನಾನ ಗೃಹಗಳನ್ನು ಚೌಕಕಾರವಾಗಿ ನಿರ್ಮಿಸಲಾಗಿತ್ತು. ಇದರ ಸುತ್ತಮುತ್ತ ನಾಲೆಗಳು ಹರಿದು ಹೋಗುತ್ತಿತ್ತು. ಪೂರ್ವ ದಿಕ್ಕಿನಲ್ಲಿರುವ ಗುಂಡಿಗಳ ಸಹಾಯದಿಂದ ಸ್ನಾನ ಗೃಹಕ್ಕೆ ನೀರನ್ನು ಒದಗಿಸಿಕೊಡುತ್ತಿದ್ದರು. ಈ ಸ್ನಾನ ಗೃಹದ ಕಟ್ಟಡವು ವಿಭಿನ್ನ ವಾಸ್ತು ಶೈಲಿಗಳ ಮಿಶ್ರಣ ವಾಗಿದೆ
ಆನೆಲಾಯ : ಇದು ಸರಿಸುಮಾರು 85 ಮೀಟರ್ ಉದ್ದವಿರುವ ಆಯತಾಕಾರದ ಕಟ್ಟಡವಾಗಿದೆ. ಈ ಕಟ್ಟಡವು ಪಶ್ಚಿಮಾಭಿಮುಖವಾಗಿ ಚೌಕಾಕಾರದ 11 ಕೊಠಡಿಗಳನ್ನು ಹೊಂದಿದೆ. ಪತಿ ಕೊಠಡಿಯು ಪ್ರವೇಶ ದ್ವಾರಗಳಲ್ಲಿ ಕಮಾನುಗಳನ್ನು ಕಾಣಬಹುದು.
4) ಮಿಲಿಟರಿ ಅಥವಾ ಸೇನಾ ವಾಸ್ತು ಶಿಲ್ಪ :
ವಿಜಯನಗರ ಅರಸರುಗಳು ತಮ್ಮ ರಾಜಧಾನಿ ಹಾಗೂ ಬೇರೆ ಬೇರೆ ಪ್ರದೇಶಗಳನ್ನು ಶತ್ರುಗಳಿಂದ ಕಾಪಡಲ್ಲಿ ಕೋಟೆಗಳನ್ನು ನಿರ್ಮಿಸುತ್ತಿದ್ದರು.
ಈ ರೀತಿ ನಿರ್ಮಾಣ ಮಾಡಿದ ಕೋಟೆಗಳು ಮಿಲಿಟರಿ ಅಥವಾ ಸೇನಾ ವಾಸ್ತುಶಿಲ್ಪದಲ್ಲಿ ಪ್ರಮುಖವಾದವು ಯಾವೆಂದರೆ ವಿಜಯನಗರ ರಾಜಧಾನಿ ಹಂಪಿ ಏಳು ಕೋಟಿಗಳಿಂದ ಸುತ್ತುವರೆಯಲ್ಪಟ್ಟಿರುತ್ತದೆ.
ಕೋಟೆಗಳಲ್ಲಿ ಹಲವು ರೀತಿಯ ಬಾಗಿಲುಗಳು ಗಮನಿಸಬಹುದು ನೀವು ಕೋಟೆಗೆ ಪ್ರಧಾನವಾದ ಬಾಗಿಲನ್ನು ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.
ಸಾಮಾನ್ಯ ದ್ವಾರಗಳನ್ನು ಬಾಗಿಲು ಎಂದು ಕರೆಯುತ್ತಿದ್ದರು. ಉದಾಹರಣೆ ಪೆನುಕೊಂಡೆ ಬಾಗಿಲು.
ತಾಳಿಕೋಟೆ ಕದನ ಅಥವಾ ರಕ್ಕಸ ತಂಗಡಿ ಕದನ 1565ರಲ್ಲಿ ಈ ಕದನ ನಡೆಯಿತು ಈ ಕದನವು ಇಡೀ ದಕ್ಷಿಣ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಯುದ್ಧಗಳಲ್ಲಿ ಒಂದಾಗಿದೆ. ಈ ಕಧನವು ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಕೋಟೆಯಾಗಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ದೊಡ್ಡ ರೀತಿಯ ಪೆಟ್ಟುಕೊಟ್ಟು ಧಖ್ಖನ್ ಮತ್ತು ದಕ್ಷಿಣ ಭಾರತದಲ್ಲಿ ಮುಸ್ಲಿಮರ ಸಾರ್ವಭೌಮತ್ವ ಪಡೆಯಲು ಸಹಾಯ ಮಾಡಿ ಕೊಟ್ಟಿದೆ. ಈ ಯುದ್ಧವು ವಿಜಯನಗರ ಸೈನ್ಯಗಳ ಸೋಲಿನೊಂದಿಗೆ ಮುಕ್ತಾಯವಾಗಿತ್ತು ವೈಭವದಿಂದ ಕೋಡಿದ್ದ ಮಹಾನಗರವಾದ ವಿಜಯನಗರ ವಿನಾಶದಿಂದ ಮುಕ್ತಾಯವಾಯಿತು. ಇದರಿಂದ ಉಂಟಾದ ವಿನಾಶದಿಂದ ವಿಜಯನಗರ ಸಾಮ್ರಾಜ್ಯ ಸಂಪೂರ್ಣವಾಗಿ ನೆಲಕಚ್ಚಿ ಮತ್ತೆ ಎದ್ದೇಳಲು ಆಗದಂತಹ ಸ್ಥಿತಿಯನ್ನು ತಲುಪಿತು.
Table of Contents
ಯಾವುದೇ ಯುದ್ಧಗಳಾಗಲಿ ಪ್ರತಿಯೊಂದು ಯುದ್ದಕ್ಕೂ ಅದರದ್ದೆ ಆದ ಕಾರಣಗಳು ಇರುತ್ತವೆ ಈ ಯುದ್ಧದ ಕಾರಣಗಳು ತಿಳಿಯೋಣ
ಯುದ್ಧಕ್ಕೆ ಕಾರಣಗಳು
ರಾಜಕೀಯ ಒಡಕು :
ರಾಮಾಯಣ ಸಹೋದರರು ಮತ್ತು ಸೈನಿಕ ಸೇನಾಪತಿಗಳ ನಡುವೆ ವಿಶ್ವಾಸ ನಂಬಿಕೆ ಇಲ್ಲದ ಕಾರಣ
ಸುಲ್ತಾನರ ಒಕ್ಕೂಟ ಸುಲ್ತಾನರ ನಾಲ್ಕು ಮುಸ್ಲಿಂ ರಾಜ್ಯಗಳು ಅಂದರೆ ಬಿಜಾಪುರ ಗೋಲ್ಕೊಂಡ ಅಹಮದ್ನಗರ ಬೀದರ್ ಒಟ್ಟುಗೂಡಿ ತಾಳಿಕೋಟೆ ಕದನಕ್ಕೆ ಆಹ್ವಾನ ಕೊಟ್ಟರು
ಅಸಮರ್ಥ ನಾಯಕತ್ವ ವಿಜಯನಗರದ ಸೈನಿಕ ರಾಮಾಯಣ ನಾಯಕನಾಗಿದ್ದನು ಅವನು ವೃದ್ಧನು ಮತ್ತು ಅಹಂಕಾರನಾಗಿದ್ದನು ಸೈನ್ಯದ ಇನ್ನೆರಡು ವಿಭಾಗಗಳು ಸಾಕಷ್ಟು ವಯಸ್ಸಾದ ಅವನ ತಮ್ಮಂದಿರಾದ ವೆಂಕಟದ್ರಿ ಮತ್ತು ತಿರುಮಲ ಕೈ ಕೆಳಗಿದ್ದವು ಬಹಮನಿ ಸೈನ್ಯಗಳು ಯುವಕ ಉತ್ಸಾಹಿ ಮತ್ತು ಛಲದ ಸುಲ್ತಾನರ ಮುಖಂಡತ್ವವನ್ನು ಪಡೆದಿದ್ದವು
ಕದನದಲ್ಲಿ ರಾಮಾಯಣ ಸೈನ್ಯ ಅಧಿಕಾರಿಗಳು ದ್ರೋಹ ಮಾಡಿ ಸುಲ್ತಾನರಿಗೆ ಸಹಾಯ ಮಾಡಿದರು
ಧಾರ್ಮಿಕ ದುರ್ಬಲತೆಗಳು:
ತಾಳಿಕೋಟೆ ಕದನಕ್ಕೆ ಪ್ರಮುಖವಾದದ್ದು ಧಾರ್ಮಿಕತೆ ಹಿಂದೂ ಮುಸ್ಲಿಮರ ಸಂಘರ್ಷ ರಾಮಾಯಣ ಹಿಂದೂ ಧರ್ಮದ ಪಕ್ಷಪಾತ ಮಾಡುತ್ತಿರುವುದು ಸುಲ್ತಾನರ ಕಣ್ಣಿಗೆ ಯುದ್ಧಕ್ಕೆ ಬರಲು ಸಹಾಯ ಮಾಡಿತು
ತಾಳಿಕೋಟೆ ಕದನದ ಸಮಯದಲ್ಲಿ ಸೇನೆಯಲ್ಲಿ ಧರ್ಮ ವಿಭಜನೆಯಾಗಿತ್ತು ಹಿಂದೂ ಮುಸ್ಲಿಮರ ಸೈನ್ಯದ ನಡುವೆ ಒಗಟು ಇರಲಿಲ್ಲ
ಧಾರ್ಮಿಕ ಸಹಿಷ್ಣುತೆ ಕಡಿಮೆಯಾಗಿದ್ದು ಸೈನ್ಯದಲ್ಲಿ ಸಂತುಷ್ಟಿ
ಕದನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಮುಖವಾದ ದೇವಾಲಯಗಳ ರಕ್ಷಣೆ ಗೋಸ್ಕರ ತನ್ನ ಸೈನ್ಯದ ಅರ್ಧದಷ್ಟು ಸೈನ್ಯವನ್ನು ದೇವಾಲಯಗಳ ರಕ್ಷಣೆಗೆ ಕಳಿಸುತ್ತಾನೆ.
ಸೈನ್ಯದ ದುರ್ಬಲತೆ :
ತಾಳಿಕೋಟೆ ಕದನದಲ್ಲಿ ಹಳೆಯ ರೀತಿ ಯುದ್ಧ ತಂತ್ರಗಳನ್ನು ರಾಮರಾಯ ಬಳಸಿಕೊಂಡದ್ದು ಮತ್ತು ಆನೆಗಳು ಕತ್ತಿ ವರಸೆಗಳ ಮೇಲೆ ಅವಲಂಬನೆ ಯಾಗಿದ್ದರಿಂದ ಯುದ್ಧಕ್ಕೆ ಕಾರಣ
ಆಧುನಿಕ ಶಾಸ್ತ್ರಗಳ ಕೊರತೆ . ಸುಲ್ತಾನ ಹತ್ತಿರ ಆಧುನಿಕ ಶಸ್ತ್ರಗಳು ತೋಪುಗಳು ಮತ್ತು ಫಿರಂಗಿಗಳು ಇವುಗಳ ಮುಂದೆ ರಾಮರಾಯ ನಿಲ್ಲಲು ಆಗಿಲ್ಲ
ಸಂಚಾರ ಮತ್ತು ಸರಬರಾಜು ಸಮಸ್ಯೆ, ಸೈನ್ಯಕ್ಕೆ ಯುದ್ಧದ ನಡುವೆ ಸಂಚಾರ ಮಾಡಲು ಮತ್ತು ಸರೋವರಜು ಶಸ್ತ್ರಗಳನ್ನು ಮಾಡಲು ತೊಂದರೆ ಆಗುತ್ತಿತ್ತು .
ವಿಜಯನಗರ ಸಾಮ್ರಾಜ್ಯ ಸೈನಿಕವಾಗಿ ಮತ್ತು ಆರ್ಥಿಕವಾಗಿ ಸಮರ್ಥವಾಗಿದ್ದರೂ ತಾಳೀಕೋಟೆ ಯುದ್ಧದಲ್ಲಿ ಸೋಲುಂಟಾಗಲು ಕಾರಣವೇನು ಎಂಬುದು ಇತಿಹಾಸಕಾರರ ಜಿಜ್ಞಾಸೆಗೆ ಒಳಗಾಗಿದೆ. ಇದಕ್ಕೆ ಅವರು ಹಲವಾರು ಕಾರಣಗಳನ್ನು ನೀಡುತ್ತಾರೆ. ಅವೆಂದರೆ,
ಸಮರ್ಥ ಸೈನ್ಯದ ಕೊರತೆ: ವಿಜಯನಗರ ಸೈನ್ಯದ ಸಂಖ್ಯಾಬಲ ದೊಡ್ಡದಾಗಿದ್ದರೂ ಅದರ ಹೋರಾಟ, ಶಕ್ತಿ ಮತ್ತು ದಕ್ಷತೆಗಳು ಸಮರ್ಥವಾಗಿರಲಿಲ್ಲ. ಬಹುಮನಿಯ ಸೈನ್ಯಗಳಂತೆ ಅದು ಆಧುನಿಕ ಶಸ್ತ್ರಾಸ್ತ್ರಗಳನ್ನು ಮತ್ತು ಯುದ್ಧ ವಿದ್ಯೆಯನ್ನು ಕರಗತಗೊಳಿಸಿಕೊಂಡಿರಲಿಲ್ಲ. ರಾಮರಾಯನು ಅಶ್ವಪಡೆಗೆ ಕುದುರೆಗಳನ್ನು ದೊರಕಿಸಿಕೊಟ್ಟಿದ್ದನು. ಇದರಿಂದಾಗಿ ವಿಜಯನಗರದ ಅಶ್ವಪಡೆಯು ಕೃಷ್ಣದೇವರಾಯನ ಕಾಲದಷ್ಟು ಶಕ್ತವಾಗಿರಲಿಲ್ಲ. ಬಹಮನಿಯ ಸೈನ್ಯಗಳು ಪರ್ಷಿಯಾದ ಕುದುರೆಗಳಿಂದ ಸುಸಜ್ಜಿತವಾಗಿದ್ದು ಯುದ್ಧರಂಗದಲ್ಲಿ ತಮ್ಮ ಮಿಂಚಿನ ವೇಗದಿಂದ ಚಲಿಸುತ್ತ ಅವುಗಳ ಹೋರಾಟ ಶಕ್ತಿಯನ್ನು ಇಮ್ಮಡಿಗೊಳಿಸಿದ್ದವು. ವಿಜಯನಗರದ ಸೈನ್ಯಗಳು ಆನೆಗಳನ್ನು ಹೆಚ್ಚಾಗಿ ಯುದ್ಧದಲ್ಲಿ ತೊಡಗಿಸಿದುದು ಮತ್ತು ಅವಲಂಬಿಸಿದ್ದು ಅವರಿಗೆ ಅನಾನುಕೂಲಕರವಾಯಿತು. ಆನೆಗಳ ಚಲನೆ ನಿಧಾನವಾಗಿತಲ್ಲದೆ ಶತೃಗಳ ಫಿರಂಘಿ ದಾಳಿಗಳಿಂದ ಭೀತವಾದ ಆನೆಗಳು ಸಿಕ್ಕಾಪಟ್ಟೆನುಗ್ಗಿ ತಮ್ಮ ಸೈನಿಕರನ್ನೇ ತುಳಿದು ನಾಶಮಾಡುತ್ತಿದ್ದವು.
ಕೆಳದರ್ಜೆಯ ಶಸ್ತ್ರಾಸ್ತ್ರಗಳು: ವಿಜಯನಗರದ ಸೈನ್ಯಗಳು ಬಳಸುತ್ತಿದ್ದ ಶಸ್ತ್ರಾಸ್ತ್ರಗಳೂ ಕೂಡ ಬಹಳ ಹಳೆಯ ಕಾಲದವಾಗಿದ್ದವು. ಸುಲ್ತಾನರ ಸೈನ್ಯಗಳು ಲೋಹದಿಂದ ಮಾಡಿದ ಬಾಣಗಳನ್ನು ಉಪಯೋಗಿಸುತ್ತಿದ್ದರೆ, ವಿಜಯನಗರ ಸೈನ್ಯಗಳು ಬೊಂಬಿನ ಬಾಣಗಳನ್ನು ಬಳಸುತ್ತಿದ್ದವು. ವಿಜಯನಗರದ ಅಶ್ವದಳಗಳು ಹಳೆಯ ಈಟಿ ಮತ್ತು ಕತ್ತಿಗಳನ್ನು ಬಳಸುತ್ತಿದ್ದವು. ಇವರ ಈಟಿಗಳು ಏಳು ಅಡಿಗಿಂತ ಉದ್ದವಾಗಿರಲಿಲ್ಲ. ಶತೃಸೈನ್ಯದವರು 15 ಅಥವಾ 16 ಅಡಿ ಉದ್ದದ ಈಟಿಗಳನ್ನು ಉಪಯೋಗಿಸುತ್ತಿದ್ದರು. ಇದು ಆ ಸೈನ್ಯಗಳ ಶಕ್ತಿಯನ್ನು ವೃದ್ಧಿಗೊಳಿಸಿದ್ದಿತು. ಇದಲ್ಲದೆ ಸುಲ್ತಾನರು ತಮ್ಮ ಪಡೆಗಳನ್ನು ಇತ್ತೀಚಿನ ಫಿರಂಘಿಗಳಿಂದ ಬಲಪಡಿಸಿದ್ದರು. ಐರೋಪ್ಯ ಸೈನಿಕರ ಮತ್ತು ಗೋವಾದ ಕೈಸ್ತರ ಕೈಯಲ್ಲಿ ಈ ಫಿರಂಘಿ ಪಡೆ ಇದ್ದಿತು. ಇದು ವಿಜಯನಗರದ ಪ್ರಭಲ ನ್ಯೂನತೆಯಾಗಿದ್ದಿತು.
ಅಸಮರ್ಥ ನಾಯಕತ್ವ: ವಿಜಯನಗರದ ಸೈನ್ಯಕ್ಕೆ ರಾಮರಾಯನು ನಾಯಕನಾಗಿದ್ದನು. ಅವನು ವೃದ್ದನು, ಅಹಂಭಾವದವನು ಆಗಿದ್ದನು. ಸೈನ್ಯದ ಇನ್ನೆರಡು ವಿಭಾಗಗಳು ಸಾಕಷ್ಟುವಯಸ್ಸಾದ ಅವನ ತಮ್ಮಂದಿರಾದ ವೆಂಕಟಾದ್ರಿ ಮತ್ತು ತಿರುಮಲರ ಕೈಕೆಳಗಿದ್ದವು. ಆದರೆ ಬಹಮನಿ ಸೈನ್ಯಗಳು ಯುವಕ, ಉತ್ಸಾಹಿ, ಮತ್ತು ಛಲದ ಸುಲ್ತಾನರ ಮುಂಖಡತ್ವವನ್ನು ಪಡೆದಿದ್ದವು. ರಾಮರಾಯನ ಆಕಸ್ಮಿಕ ಮರಣದ ತರುವಾಯ ವೆಂಕಟಾದ್ರಿ ಮತ್ತು ತಿರುಮಲರು ಹೇಡಿಗಳಂತೆ ವರ್ತಿಸಿದರು. ಅವರು ತಮ್ಮ ಸೈನ್ಯಗಳನ್ನು ಸಂಘಟಿಸಿ ತಮ್ಮ ರಾಜಧಾನಿಯಾದ ವಿಜಯನಗರವನ್ನಾದರೂ ಉಳಿಸಿಕೊಳ್ಳಲು ಹೋರಾಟ ನಡೆಸಬಹುದಾಗಿತ್ತು, ಆದರೆ ಅವರು ಯುದ್ಧರಂಗದಿಂದ ಓಡಿ ಹೋದುದಲ್ಲದೆ ತಮ್ಮ ರಾಜಧಾನಿಯನ್ನೂ ತೊರೆದು ದೂರ ತೆರಳಿದರು. ಇದು ಅತ್ಯಂತ ಅವಮಾನಕರ ಕೃತ್ಯವಾಗಿದ್ದಿತು.
ನಂಬಿಕೆ ದ್ರೋಹ: ವಿಜಯನಗರದ ಸೋಲಿಗೆ ಮೋಸ ಪ್ರಮುಖ.ಕಾರಣವಾಯಿತು. ಮಧ್ಯಭಾಗದಲ್ಲಿ ಗಿಲಾನಿ ಸಹೋದರರು ರಾಮರಾಯನಿಗೆ ಮೋಸ ಮಾಡಿ ತಮ್ಮ ಸೈನಿಕರೊಂದಿಗೆ ಶತೃಪಕ್ಷವನ್ನು ಸೇರಿದರು. ಇದು ವಿಜಯನಗರದ ಸೈನ್ಯದಲ್ಲಿ ಅಸ್ತವ್ಯಸ್ತತೆಯನ್ನುಂಟು ಮಾಡಿತು. ರಾಮರಾಯನು ಅಂತಹವರನ್ನು ಬರಮಾಡಿಕೊಂಡು ತನ್ನ ಸೈನ್ಯದಲ್ಲಿನ ಮುಸ್ಲಿಂ ಸೈನಿಕರ ದಂಡನಾಯಕತ್ವವನ್ನು ವಹಿಸಿದುದು ಅವನು ಮಾಡಿದ ಘೋರ ಅಪರಾಧವಾಗಿದ್ದಿತು. ಇವರು ಮಾಡಿದ ಮೋಸ ವಿಜಯನಗರದ ಸೈನಿಕರ ಹೋರಾಟಕ್ಕೆ ಮಾರಕವಾಗಿ ಅವುಗಳ ಸೋಲಿಗೆ ಕಾರಣವಾಯಿತು.
ತಾಳಿಕೋಟೆ ಕದನದ ಪರಿಣಾಮಗಳು :
ಈ ಯುದ್ಧ ದರ್ಶನ ಭಾರತ ಮತ್ತು ಭಾರತೀಯ ಇತಿಹಾಸದ ನಿರ್ಣಾಯಕ ಯುದ್ಧಗಳಲ್ಲಿ ಒಂದಾಗಿದೆ
ವಿಜಯನಗರ ಸಾಮ್ರಾಜ್ಯ 3 ಶತಮಾನಗಳಿಂದ ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಭದ್ರತೆ ಮತ್ತು ರಕ್ಷಣೆ ಕೊಡುತ್ತಿದ್ದ ಸಾಮ್ರಾಜ್ಯ ತಾಳಿಕೋಟೆ / ರಕ್ಕಸ ತಂಗಡಿ ಕದನದಿಂದ ನಾಶವಾಗಿತ್ತು
ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಅಲೈಕ್ಯತೆ ಭದ್ರತೆ ಮತ್ತು ಅವ್ಯವಸ್ಥೆಗಳು ತಲೆದೂರಿ ರಾಜಕತೆ ಎಲ್ಲೆಡೆ ನೆಲೆಸಿದವು ಹಿಂದೂ ಸಂಸ್ಕೃತಿ ಮತ್ತು ಧರ್ಮಗಳಿಗೆ ಗರ ಹೊಡೆಯಿತು
ಈ ಯುದ್ಧದಿಂದಾಗಿ ವಿಜನಗರ ಸಾಮ್ರಾಜ್ಯದ ಪ್ರಭಲತೆ ಮತ್ತು ವೈಭವಗಳು ಸಂಪೂರ್ಣ ನಾಶವಾಗಿತ್ತು.
ಈ ಯುದ್ಧದ ಪರಿಣಾಮವಾಗಿ ಸುಲ್ತಾನರು ಪ್ರಬಲವಾಗಿ ಮತ್ತು ಅಧಿಪತ್ಯವನ್ನು ಎಲ್ಲೆಡೆ ವಿಸ್ತರಿಸಲು ದಾರಿ ಮಾಡಿತು
ಭಾರತದಲ್ಲಿ ಪಾಳೆಗಾರರು ಸ್ವತಂತ್ರವಾಗಿ ಪ್ರಭುತ್ವ ನಡೆಸಲು ಮುಂದಾಗುತ್ತಾರೆ
ಸುಲ್ತಾನರು ಯುದ್ಧ ಗೆದ್ದ ಮೇಲೆ ವಿಜಯನಗರ ಸಾಮ್ರಾಜ್ಯದ ದೇವಾಲಯಗಳನ್ನು ಲೂಟಿ ಮಾಡಿದರು
ಕೊನೆಯಲ್ಲಿ ವಿಜಯನಗರ ಸಾಮ್ರಾಜ್ಯ ಹಾಳಾಯಿತು ಇದರ ನಂತರ ಅರವೀಡು ಸಂತತಿ ಆಳ್ವಿಕೆಗೆ ಮುಂದೆ ಬರುತ್ತದೆ.
ನಾಗರಿಕತೆಗಳ ತೊಟ್ಟಿಲು ಎಂದು ಕರೆಯುವ ಸಿಂಧೂ ನಾಗರಿಕತೆ, ಭಾರತದ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದೆ. ಇದು ಸುಮಾರು ಕ್ರಿಸ್ತಪೂರ್ವ 2500 ರಿಂದ 1700 ರ ವರೆಗೂ ಅಸ್ತಿತ್ವದಲ್ಲಿತ್ತು. ಈ ನಾಗರಿಕತೆಯು ಸಿಂಧೂ ಮತ್ತು ಅದರ ಉಪನದಿಗಳ ಕಣಿವೆಗಳಲ್ಲಿ ಹರಡಿತ್ತು. ಈ ನಾಗರಿಕತೆಯು ಈಗಿನ ಪಾಕಿಸ್ತಾನ ವಾಯುವ್ಯ ಭಾರತ ಮತ್ತು ಆಫ್ಘಾನಿಸ್ತಾನದ ಭಾಗಗಳನ್ನು ಒಳಗೊಂಡಿದೆ.
ಸಿಂಧೂ ನಾಗರಿಕತೆಯನ್ನು ನಾಗರಿಕತೆಗಳ ತೊಟ್ಟಿಲು ಎಂದು ಕರೆಯುತ್ತಾರೆ.
1862 ರಲ್ಲಿ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್ ಸಿಂಧೂ ನಾಗರಿಕತೆಯನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದರು.
ಈ ನಾಗರಿಕತೆಯ ಮೊದಲ ಕುರುಹುಗಳು ಲಾಹೋರ್ ನಲ್ಲಿ ರೈಲ್ವೆ ಮಾರ್ಗ ಹಾಕೋವಾಗ 1856 ರಲ್ಲಿ ಪತ್ತೆಯಾಗಿದೆ.
ದಯಾರಾಮ್ ಸಹನಿ ಅವರು 1921 ರಲ್ಲಿ ಸಿಂಧೂ ಬಯಲಿನ ಹರಪ್ಪ ನೆಲೆಯನ್ನು ಹುಡುಕುವ ಮೂಲಕ ಈ ನಾಗರಿಕತೆಯ ಅಧ್ಯಯನ ಕೈಗೊಂಡರು.
ಭಾರತದ ಪುರಾತತ್ವ ಇಲಾಖೆಯ ಪಿತಾಮಹ ಅಲೆಕ್ಸಾಂಡರ್ ಕಮಿಂಗ್ ಹ್ಯಾಮ್.
ಲಾಲ್ ಬಹದ್ದೂರ್ ಕೆಎನ್ ದೀಕ್ಷಿತ್ ಭಾರತದ ಪ್ರಾರ್ಥನಾ ಇಲಾಖೆ ಅಧ್ಯಕ್ಷರಾದ ಮೊದಲ ಭಾರತೀಯರು.
ಹಿಂದೂ ಜನರು ದ್ರಾವಿಡ ಜನಾಂಗಕ್ಕೆ ಸೇರಿದವರು ಎಂದು ಹೇಳಲಾಗಿದೆ.
ಇತ್ತೀಚಿನ ಸಂಶೋಧನೆಗಳಿಂದ ಈ ನಾಗರಿಕತೆಯನ್ನು ಸಿಂಧೂ ನಾಗರಿಕತೆಯ ಬದಲಾಗಿ ಹರಪ್ಪ ಸಂಸ್ಕೃತಿ ಎಂಬ ಹೆಸರಿನಿಂದ ಕರೆಯುತ್ತಾರೆ.
ನಗರ ಯೋಜನೆ ಮತ್ತು ಪ್ರಮುಖ ಕಟ್ಟಡಗಳು
ಸಿಂಧು ನಾಗರಿಕತೆಯ ಪ್ರಮುಖ ಕೇಂದ್ರಗಳಾದ ಹರಪ್ಪ ಮತ್ತು ಮಹೆಂಜೋದಾರೋ ನಗರಗಳನ್ನು ಒಂದೇ ರೀತಿಯಲ್ಲಿ ಕಟ್ಟಲಾಗಿದೆ. ಮಹೆಂಜೋದಾರೋ ಎಂಬ ಪ್ರಾಚೀನ ನಾಗರಿಕತೆಯ ನಗರ ಯೋಜನೆಗೆ ಮಾದರಿಯಾಗಿದೆ ಇದು ಜಗತ್ತಿನಲ್ಲಿ ಕ್ರಮಬದ್ಧವಾಗಿ ಕಟ್ಟಲಾಗಿದೆ ಎಂದು ಹೆಗ್ಗಳಿಕೆಯನ್ನು ಹೊಂದಿದೆ.
ಈ ನಾಗರಿಕತೆಯು ಭಾರತದ ಮೊಟ್ಟ ಮೊದಲ ನಾಗರಿಕತೆಯಾಗಿದೆ.
ಹರಪ್ಪ ಮತ್ತು ಮಹೆಂಜೋದಾರೋ ನಗರ ವ್ಯವಸ್ಥೆ ಬೇರೆ ಯಾವ ನಾಗರಿಕಗಳಲ್ಲಿ ಕಂಡು ಬರುವುದಿಲ್ಲ.
ನಗರಗಳು ಕ್ರಮಬದ್ಧವಾಗಿ ನಿರ್ಮಾಣ ಮಾಡಲಾಗಿದ್ದು ಮನೆಗಳು ಸಾಲು ಪಟ್ಟಣಗಳ ಚೌಕದ ವಿನ್ಯಾಸ, ಒಳಚಂಡಿ ವ್ಯವಸ್ಥೆ , ರಸ್ತೆ ಇವೆಲ್ಲವೂ ವ್ಯವಸ್ಥಿತವಾಗಿ ನಿರ್ಮಿಸಲಾಗಿತ್ತು.
ಮನೆಗಳು
ಸಿಂಧೂ ಬಯಲಿನ ನಾಗರಿಕತೆಯ ಪ್ರಮುಖ ಪಟ್ಟಣಗಳಾದ ಹರಪ್ಪ ಮತ್ತು ಮಹೆಂಜೋದಾರೂದಲ್ಲಿ ಸಣ್ಣ ಹಾಗೂ ದೊಡ್ಡ ಮನೆಗಳು ಇದ್ದವು. ಕೇವಲ ಎರಡು ಕೋಣೆಗಳನ್ನು ಹೊಂದಿರುವ ಮನೆಗಳು ಮತ್ತು ಎರಡು ಮೂರು ಅಂತಸ್ತಿನ ಮನೆಗಳನ್ನು ಹೊಂದಿದ್ದರು. ಮನೆಗಳನ್ನು ಅವರು ಸುಟ್ಟ ಇಟ್ಟಿಗೆಗಳಿಂದ ಕಟ್ಟುತ್ತಿದ್ದರು ಪ್ರತಿಯೊಂದು ಮನೆಗಳು ಸಾಮಾನ್ಯವಾಗಿ ಮತ್ತು ಸುಂದರವಾಗಿ ಕಾಣುತ್ತಿದ್ದವು ಪ್ರತಿಯೊಂದು ಮನೆಗಳು ಸ್ವಲ್ಪ ಜಾಗವನ್ನು ಬಿಟ್ಟು ಮನೆಗಳನ್ನು ಕಟ್ಟು ಕೊಳ್ಳುತ್ತಿದ್ದರು ಪ್ರತಿಯೊಂದು ದೊಡ್ಡ ಮನೆಗೆ ಅಂಗಳವಿತ್ತು ಪಾಠಶಾಲೆ ಅಡುಗೆಮನೆ ಬಚ್ಚಲು ಮನೆ ಮತ್ತು ಬಾವಿಗಳು ಇದ್ದವು, ಎರಡು ಮೂರು ಅಂತಸಿನ ದೊಡ್ಡ ಮನೆಗಳಲ್ಲಿ ಸುಮಾರು 25 ಕೋಣೆಗಳನ್ನು ಒಳಗೊಂಡು ಇರುತ್ತಿದ್ದವು. ಸ್ನಾನದ ಗೃಹ ನೀರು ಹೋಗಲು ಕಾರಣಗಳು ಇದ್ದವು
ದೊಡ್ಡ ಪ್ರಮಾಣದ ಮನೆ ಮತ್ತು ಕೋಣೆಗಳನ್ನು ಹೊಂದಿದ್ದ ಒಂದಿದ್ದ ಮನೆಯ ಮೇಲ್ಚಾವಣಿಗೆ ಹುಲ್ಲು ಮತ್ತು ಮಣ್ಣನ್ನು ಬಳಸಲಾಗಿದೆ.
ಮೇಲಿನ ಮಹಡಿಯನ್ನು ಮರದಿಂದ ನಿರ್ಮಿಸಲಾಗಿದ್ದು ಮೆಟ್ಟಿಲುಗಳನ್ನು ಇಟ್ಟಿಗೆ ಮತ್ತುಕಟ್ಟಿಗೆಯಿಂದ ನಿರ್ಮಿಸಿದ್ದರು.
ಮನೆ ನಿರ್ಮಾಣಕ್ಕೆ ಸುಟ್ಟ ಇಟ್ಟಿಗೆಗಳನ್ನು ಬಳಸಿದ್ದರು.
ಗೋಡೆಗಳನ್ನು ಕಟ್ಟುವಾಗ ಇಟ್ಟಿಗೆ ಜೊತೆಗೆ ಜೇಡಿಮಣ್ಣನ್ನು ಬಳಸಲಾಗುತ್ತಿತ್ತು.
Table of Contents
ರಸ್ತೆಗಳು
ಸಿಂಧೂ ನಾಗರಿಕತೆಯಲ್ಲಿ ರಸ್ತೆಗಳು ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ರಸ್ತೆಗಳ ವಿನ್ಯಾಸ
ಈ ನಾಗರಿಕತೆಯ ರಸ್ತೆಗಳು ಪೂರ್ವ ಪಶ್ಚಿಮ ಮತ್ತು ಉತ್ತರ ದಕ್ಷಿಣ ದಿಕ್ಕಿನಲ್ಲಿ ನೇರವಾಗಿ ನಿರ್ಮಿಸಲಾಗಿದ್ದವು.
ರಸ್ತೆಗಳನ್ನು ಸಮಕೋನದಲ್ಲಿ ನಿರ್ಮಿಸಿ, ನಗರವನ್ನು ಚೌಕಾಕಾರದ ವಿಭಾಗದಲ್ಲಿ ಹಂಚಲಾಗಿತ್ತು.
ಮುಖ್ಯಬೀದಿಗಳು
ಈ ನಗರದ ಮುಖ್ಯಬೀದಿಗಳ ಅಗಲ 9 ಅಡಿಯಿಂದ 34 ಅಡಿ ಆಗಿದ್ದವು
ಮಹೆಂಜೋದಾರೂದ ಮುಖ್ಯಬೀದಿಗಳು 32 ಅಡಿ ಅಗಲ ಮಾಡಿದ್ದರು
ಇತರೆ ಬೀದಿಗಳು ಸಾಮಾನ್ಯವಾಗಿ ಹನ್ನೊಂದರಿಂದ 12 ಅಡಿಗೆ ಅಗಲವಿದ್ದವು
ಲೋತಾಲ್ ಪಟ್ಟಣದಲ್ಲಿ 38 ರಿಂದ 39 ಅಡಿ ಅಗಲದ ಹೆದ್ದಾರಿ ಪತ್ತೆಯಾಗಿದೆ
ರಸ್ತೆಗಳನ್ನು ನಿರ್ಮಿಸಲು ಮುರಿದ ಇಟ್ಟಿಗೆ ಮತ್ತು ಮಡಿಕೆ ಚೂರುಗಳಿಂದ ರಸ್ತೆಗಳನ್ನು ನಿರ್ಮಿಸಿದ್ದರು
ಪ್ರತಿಯೊಂದು ರಸ್ತೆಯ ಪಕ್ಕದಲ್ಲಿ ಬಾವಿ ಮತ್ತು ಕಸದ ತೊಟ್ಟಿಗಳು ಇದ್ದವು.
ಸಿಂಧೂ ನಾಗರಿಕತೆಯಲ್ಲಿ ಬೀದಿ ದೀಪದ ಸ್ತಂಭಗಳನ್ನು ಬಳಸುತ್ತಿದ್ದರು.
ಒಳಚರಂಡಿ
ನಗರ ಯೋಜನೆಯ ಇನ್ನೊಂದು ಪ್ರಮುಖ ಅಂಶವೆಂದರೆ ಒಳ ಚರಂಡಿ ವ್ಯವಸ್ಥೆಯಾಗಿದೆ.
ಇಲ್ಲಿನ ನಗರಗಳು ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಾಣವಾಗಿದೆ
ಒಳ ಚರಂಡಿ ವ್ಯವಸ್ಥೆ, ನಾಗರೀಕತೆಯ ಶ್ಲಾಘನೀಯ ಒಂದು ಸಾಧನೆಯಾಗಿದೆ
ಅಡುಗೆ ಮತ್ತು ಸ್ನಾನ ಕೊಳದ ನೀರು ಸಣ್ಣ ಚರಂಡಿ ಮೂಲಕ ರಸ್ತೆ ಪಕ್ಕದ ಚರಂಡಿಗೆ ಹರಿಯುತ್ತಿತ್ತು
ರಸ್ತೆ ಪಕ್ಕದ ಚರಂಡಿ ನೀರು ದೊಡ್ಡ ಚರಂಡಿಗೆ ಸೇರಿ ನಂತರ ನದಿಗೆ ಸೇರುವ ವ್ಯವಸ್ಥೆ ಇತ್ತು
ಚರಂಡಿಗಳನ್ನು ಸುಟ್ಟ ಇಟ್ಟಿಗೆ ಮತ್ತು ಗಾರೆಯಿಂದ ಕಟ್ಟಲಾಗಿದೆ .
ನಿರಂತರ ಸ್ವಚ್ಛತೆ ಮಾಡಲು ಕಂಡಿಗಳನ್ನು ಅಳವಡಿಸಲಾಗಿತ್ತು.
ಸಣ್ಣ ಚರಂಡಿಗಳ ಆಳ ಒಂದರಿಂದ ಮೂರು ಅಡಿ ದೊಡ್ಡ ಚರಂಡಿಗಳು 2.5 ರಿಂದ 5 ಅಡಿ ಇದ್ದವು.
ನಗರ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯದ ಕಡೆ ಜನರು ಜಾಗೃತಿಯನ್ನು ಹೊಂದಿದ್ದರು.
ಸಾರ್ವಜನಿಕ ಸ್ನಾನಗೃಹ
ಸಿಂಧೂ ನಾಗರಿಕತೆಯ ಮಹೋನ್ ದಾರದಲ್ಲಿ ಪತ್ತೆಯಾದ ದೊಡ್ಡದಾದ ಸ್ನಾನ ಗೃಹವು ಸಿಂಧೂ ಜನರು ಸ್ವಚ್ಛತೆಗೆ ಮಹತ್ವ ನೀಡುತ್ತಿದ್ದರು ಎಂಬುದನ್ನು ತಿಳಿಯಬಹುದು.
ಮಹೆಂಜೋದಾರದ ದೊಡ್ಡ ಸ್ನಾನಗೃಹವು ಉತ್ತರದಿಂದ ದಕ್ಷಿಣಕ್ಕೆ 180 ಅಡಿ ಮತ್ತು ಪೂರ್ವದಿಂದ ಪಶ್ಚಿಮಕ್ಕೆ 108 ಅಡಿ ಸುತ್ತತೆಯನ್ನು ಹೊಂದಿದ್ದು ಇದರ ಹೊರಗಡೆಯೂ ಏಳರಿಂದ ಎಂಟು ಹಡಿ ದಪ್ಪವಾಗಿದೆ.
ಈ ಕಟ್ಟಡವನ್ನು ಜಿಪ್ಸಂ ಮತ್ತು ಗಾರೆ ಮಣ್ಣಿನಿಂದ ನಿರ್ಮಿಸಲಾಗಿದೆ ಇದರ ಸುತ್ತಲೂ ಪ್ರಾಂಗಣಗಳಿವೆ
ಮಹೆಂಜೋದಾರೋವಿನ ದೊಡ್ಡ ನಾನ ಗೃಹದ ಮಧ್ಯ ಭಾಗವೂ 39 ಅಡಿ ಉದ್ದ 23 ಅಡಿ ಅಗಲ ಎಂಟು ಅಡಿ ಆಳವನ್ನು ಹೊಂದಿದ್ದು ಎರಡು ಬದಿಯಲ್ಲಿ ಮೆಟ್ಟಿಲುಗಳು ಮತ್ತು ಸುತ್ತಲೂ ಕೊಠಡಿಗಳನ್ನು ನಿರ್ಮಿಸಲಾಗಿದೆ.
ಈ ಕೊಠಡಿಯಲ್ಲಿರುವ ಬಾವಿಯಿಂದ ನೀರು ಹಾಯಿಸಿ ಕೊಳವನ್ನು ತುಂಬುತ್ತಿದ್ದರು.
ಇಲ್ಲಿ ಬಿಸಿನೀರು ಸ್ನಾನಕ್ಕೆ ಅವಕಾಶವಿತ್ತು.
ಇಲ್ಲಿ ಸಣ್ಣ ಸ್ಥಾನದ ಕೊಳಗಳನ್ನು ಪುರೋಹಿತರು ಮತ್ತು ದೊಡ್ಡ ಸ್ಥಾನದ ಕೊಳಗಳನ್ನು ಸಾರ್ವಜನಿಕರು ಬಳಸುತ್ತಿದ್ದರು.
ಬಳಸಿದ ನೀರನ್ನು ಹೊರ ತೆಗೆಯಲು 1.8 ಮೀಟರ್ ಎತ್ತರವಿದ್ದ ಹಾಗೂ ಮೇಲ್ಬಾಗದ ಮುಚ್ಚಿದ ಚರಂಡಿ ವ್ಯವಸ್ಥೆ ಇತ್ತು.
ಈ ಕಟ್ಟಡವು ಸರಿಸುಮಾರು 5,000 ವರ್ಷಗಳ ಕಾಲ ಗಟ್ಟಿಯಾಗಿರುವುದರಿಂದ ಸಿಂಧೂ ಜನರ ಕಲೆಯ ಸಂಕೇತವಾಗಿದೆ
ಸಿಂಧೂ ನಾಗರಿಕತೆಯಲ್ಲಿ ಆಶ್ಚರ್ಯ ಗೊಳಿಸುವ ಮತ್ತೊಂದು ಕಟ್ಟಡವೆಂದರೆ ಅದು ಬೃಹತ್ ಸಾರ್ವಜನಿಕ ಉಗ್ರಾಣಗಳಿವೆ. ಇದು ಹರಪ್ಪ ನಗರದಲ್ಲಿ ಕಂಡು ಬಂದಿದೆ.
ಸಿಂಧೂ ನಾಗರಿಕತೆಯಲ್ಲಿ ಆಶ್ಚರ್ಯ ಗೊಳಿಸುವ ಮತ್ತೊಂದು ಕಟ್ಟಡವೆಂದರೆ ಅದು ಬೃಹತ್ ಸಾರ್ವಜನಿಕ ಉಗ್ರಾಣಗಳಿವೆ. ಇದು ಹರಪ್ಪ ನಗರದಲ್ಲಿ ಕಂಡು ಬಂದಿದೆ.
ಈ ನಾಗರಿಕತೆಯ ವ್ಯವಸ್ಥೆಯಲ್ಲಿ ತೆರಿಗೆಯನ್ನು ಧಾನ್ಯಗಳ ರೂಪದಲ್ಲಿ ಸಂಗ್ರಹಿಸುತ್ತಿದ್ದರು
ಈ ಜಗದಲ್ಲಿ ಹೆಚ್ಚಾಗಿ ಗೋಧಿ, ಬಾರ್ಲಿ ಧಾನ್ಯಗಳನ್ನು ಸ್ವೀಕರಿಸುತ್ತಿದ್ದರು
ಸಂಗ್ರಹಿಸಿದ ಧಾನ್ಯಗಳನ್ನು ದೊಡ್ಡ ಪ್ರಮಾಣದ ಕಟ್ಟಡಗಳಲ್ಲಿ ಶೇಖರಿಸಿ ಇಡಲಾಗುತ್ತಿತ್ತು ಈ ಕಟ್ಟಡಗಳನ್ನೇ ಉಗ್ರಾಣಗಳೆಂದು ಕರೆಯುತ್ತಾರೆ.
ಇದು 169 ಅಡಿ ಉದ್ದ, 135 ಅಡಿ ಅಗಲವಾಗಿದೆ. ಇರಲಿ ಕೆಲವು ಒಂದೊಂದು ಸಾಲಿನಲ್ಲಿ 6 ರಂತೆ 3 ಸಾಲುಗಳಲ್ಲಿ 12 ಉಗ್ರಾಣಗಳಿವೆ.
ಹರಪ್ಪ ಮತ್ತು ಮಹೆಂಜೋದಾರೋ ಈ ಎರಡು ಪ್ರಾಂತ್ಯಗಳಲ್ಲದೆ ಇತರೆ ಸ್ಥಳಗಳಾದ ಲೋಥಾಲ್, ಕಾಲಿ ಬಂಗನ್ ಸ್ಥಳಗಳಲ್ಲಿಯೂ ಉಗ್ರಾಣಗಳು ದೊರೆತಿವೆ.
ಸಿಂಧೂ ನಾಗರಿಕತೆಯ ಜನರ ಸಾಮಾಜಿಕ ಜೀವನ
ಸಿಂಧೂ ನಾಗರಿಕತೆಯ ಜನರು ಉತ್ತಮ ಸಾಮಾಜಿಕ ಜೀವನ ಪದ್ಧತಿಯನ್ನು ಹೊಂದಿದ್ದರು. ಅವರು ಸಂಘ ಜೀವಿಗಳಾಗಿದ್ದರು ಮತ್ತು ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದರು. ಅಲ್ಲದೆ ಅವರು ಸಂಸ್ಕೃತರಾಗಿದ್ದರು.ಈ ಜನರು ಸಾಮಾಜಿಕವಾಗಿ ಬಹಳ ಮುಂದುವರೆದಿದ್ದವರು ವ್ಯವಸಾಯ ಮತ್ತು ಪಶು ಪಾಲನೆ ಇವರ ಮುಖ್ಯ ಕಸುಬಾಗಿತ್ತು.
ಸಾಮಾಜಿಕ ವರ್ಗಗಳು
ಸಾಮಾಜಿಕ ವರ್ಗದಲ್ಲಿ ನಾಲ್ಕು ವರ್ಗಗಳು ಇವೆ ಅವುಗಳೆಂದರೆ ಕೃಷಿಕರು, ಪುರೋಹಿತರು, ವರ್ತಕರು ಮತ್ತು ಕುಶಲ ಕಾರ್ಮಿಕರು
ಸಮಾಜದಲ್ಲಿ ಎಲ್ಲಾ ವರ್ಗದವರು ಒಂದೇ ಕಡೆ ವಾಸವಾಗಿರುವಂತೆ ವಿವಿಧ ವರ್ಗದ ಬಡಾವಣೆಗಳನ್ನು ಮಾಡಿಕೊಂಡಿದ್ದರು.
ಕೃಷಿ ಕಾರ್ಮಿಕರ ಬಡಾವಣೆಗಳ ಬೇರೆ ಶ್ರೀಮಂತರು ಮತ್ತು ಆಡಳಿತಗಾರರ ಬಡಾವಣೆಗಳು ಬೇರೆ ಬೇರೆ ಇರುತ್ತಿದ್ದವು.
ಈ ನಾಗರಿಕತೆಯಲ್ಲಿ ಯಾವುದೇ ಭೇದಭಾವವಿಲ್ಲದೆ ಕೂಡಿ ಬಾಳುತ್ತಿದ್ದರೂ.
ಹರಪ್ಪ ಸಂಸ್ಕೃತಿಯ ಸಾಮಾಜಿಕ ವ್ಯವಸ್ಥೆಯಲ್ಲಿ ಪುರೋಹಿತರು ದೇಶವನ್ನು ಆಳುತ್ತಿದ್ದರು. ಕೃಷಿಕರು ಕೃಷಿಯನ್ನು ಅವಲಂಬಿಸಿದ್ದರು ವರ್ತಕರು ವ್ಯಾಪಾರ ಮತ್ತು ಕಾರ್ಮಿಕರು ಕೆಳದರ್ಜೆಯ ಕೆಲಸದಲ್ಲಿ ನಿರತರಾಗಿದ್ದರು.
ಆಹಾರ ಪದ್ಧತಿ
ಈ ಸಂಸ್ಕೃತಿಯ ಜನರು ಸಸ್ಯಹಾರಿ ಮತ್ತು ಮಾಂಸಾಹಾರಿಗಳಾಗಿದ್ದರು.
ಸಸ್ಯಹಾರಿಗಳು ಗೋಧಿ, ಬಾರ್ಲಿ, ಅಕ್ಕಿ, ಸಜ್ಜೆ, ಹಾಲು ಮತ್ತು ತರಕಾರಿಗಳನ್ನು ತಮ್ಮ ಆಹಾರವಾಗಿ ಬಳಸುತ್ತಿದ್ದರು.
ಮಾಂಸಾರಿಗಳು ಧನ, ಕೋಳಿ, ಮೀನು, ಕುರಿ, ಹಂದಿ, ಮೊಲ ಮತ್ತು ಪಕ್ಷಿಗಳನ್ನು ತಿನ್ನುತ್ತಿದ್ದರು.
ಹಣ್ಣು, ಖರ್ಜೂರ ಮತ್ತು ದಾಳಿಂಬೆಗಳನ್ನು ಸಹ ಸೇವಿಸುತ್ತಿದ್ದರು.
ಇವರು ಆಹಾರವನ್ನು ಇಟ್ಟು ಮಾಡಿ ತಿನ್ನುವ ಪದ್ಧತಿಯನ್ನು ಚೆನ್ನಾಗಿ ಕಲಿತಿದ್ದರು.
ಹಾಲು, ಮೊಸರು , ಬೆಣ್ಣೆ ಉಪಯೋಗದ ಆಧಾರದ ಮೇಲೆ ಸಿಂಧೂ ಬಯಲಿನ ನಾಗರಿಕರಿಗೆ ಹೈನುಗಾರಿಕೆ ಚೆನ್ನಾಗಿ ಗೊತ್ತಿರುವುದು ತಿಳಿದು ಬಂದಿದೆ
ಉಡುಪುಗಳು
ಹರಪ್ಪ ಸಂಸ್ಕೃತಿಯ ಅನೇಕ ಮೂರ್ತಿ ಶಿಲ್ಪಿಗಳು ಹಾಗೂ ವರ್ಣ ಚಿತ್ರಗಳು ಅವರು ಧರಿಸುತ್ತಿದ್ದ ವಸ್ತ್ರಗಳ ಮಾಹಿತಿಯನ್ನು ನೀಡುತ್ತದೆ.
ಇವರು ಹೆಚ್ಚಾಗಿ ಹತ್ತಿ ಮತ್ತು ಉಣ್ಣೆಯ ಬಟ್ಟೆಗಳನ್ನು ಧರಿಸುತ್ತಿದ್ದರು ಸ್ತ್ರೀ ಪುರುಷರ ಉಡುಪುಗಳಲ್ಲಿ ಅಷ್ಟೊಂದು ವ್ಯತ್ಯಾಸಗಳು ಕಾಣುವುದಿಲ್ಲ ಇವರು ಎರಡು ಮುಖ್ಯ ಉಡುಪುಗಳನ್ನು ಧರಿಸುತ್ತಿದ್ದರು. ಅವುಗಳೆಂದರೆ ಒಂದು ಅವರ ಸೊಂಟಕ್ಕೆ ಸುತ್ತಿಕೊಂಡ ವಸ್ತ್ರ, ಅಂದರೆ ಧೋತಿ ಅಥವಾ ಪಂಚೆಯನ್ನು ಹೊಲುತ್ತದೆ. ಇನ್ನೊಂದು ಶಾಲಿನಂತಹ ಹೊದಿಕೆಯನ್ನು ಎಡ ಭುಜದ ಮೇಲಿನಿಂದ ಬಲಗೈಯವರೆಗೂ ಹಾದು ಬರುವಂತೆ ಉಡುಪುಗಳನ್ನು ಹಾಕಿಕೊಳ್ಳುತ್ತಿದ್ದರು
ಈ ನಾಗರಿಕತೆಯಲ್ಲಿ ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಆಭರಣಗಳನ್ನು ಧರಿಸುತ್ತಿದ್ದರು
ಇವರು ತಮ್ಮ ಆಭರಣಗಳನ್ನು ಚಿನ್ನ, ಬೆಳ್ಳಿ, ತಾಮ್ರ, ದಂತ ಇನ್ನು ಹಲವು ಬೆಲೆ ಬಾಳುವ ವಸ್ತುಗಳಿಂದ ಆಭರಣಗಳನ್ನು ತಯಾರಿಸುತ್ತಿದ್ದರು.
ಕಿವಿಯೋಲೆ, ಕೈ ಬೆರಳಿನ ಉಂಗುರಗಳು ಮತ್ತು ಖಡಗ ಮುಂತಾದ ಆಭರಣಗಳನ್ನು ಧರಿಸುತ್ತಿದ್ದರು.
ಬಡ ಜನರು ಸಾಮಾನ್ಯವಾಗಿ ಕಪ್ಪೇ ಚಿಪ್ಪಿನಿಂದ ಮಾಡಿದ ಹಾಗೂ ಕಂಚು ಹಿತ್ತಾಳೆಯ ಆಭರಣಗಳನ್ನು ಧರಿಸುತ್ತಿದ್ದರು
ಅಲಂಕಾರ ವ್ಯವಸ್ಥೆ
ಸಿಂಧು ಜನರು ಅಲಂಕಾರ ಪ್ರಿಯರಾಗಿದ್ದರು
ಸಿಂಧೂ ಜನರು ಸೌಂದರ್ಯ ವರ್ಧಕ ಗಳನ್ನು ಬಳಸುತ್ತಿದ್ದರು
ಸಿಂಧೂ ಜನರು ತುಟಿಗೆ ಬಣ್ಣ, ಕಣ್ಣಿಗೆ ಕಾಡಿಗೆ, ತಲೆ ಕೂದಲಿಗೆ ಪರಿಮಳದ ತೈಲವನ್ನು ಉಪಯೋಗಿಸುತ್ತಿದ್ದರು.
ಸಿಂಧೂ ಬಯಲಿನ ಜನರು ಕೇಶಾಲಂಕಾರ ಸಂದರ್ಭದಲ್ಲಿ ಕಂಚಿನಿಂದ ಮತ್ತು ತಾಮ್ರದಿಂದ ತಯಾರಿಸಿದ ಕನ್ನಡಿಗಳನ್ನು ಬಳಸುತ್ತಿದ್ದರು ಮತ್ತು ಮೀಸೆಯನ್ನು ಬೋಳಿಸುತ್ತಿದ್ದರು.
ಗೃಹ ಉಪಯೋಗಕ್ಕೆ ಬಳಸುವ ವಸ್ತುಗಳು
ಈ ನಾಗರಿಕತೆಯಲ್ಲಿ ಜನರು ಆ ಕಾಲದಲ್ಲಿ ಇತರ ನಾಗರಿಕತೆಯ ಜನರು ಹೊಂದಿದ್ದ ಸುಧಾರಿತ ಜೀವನ ಸೌಕರ್ಯಗಳನ್ನು ಪಡೆದಿದ್ದರು.
ಶ್ರೀಮಂತರ ಮನೆಯಲ್ಲಿ ಕುರ್ಚಿ, ಸುಖಾಸನ, ಕಾಲ್ಮಣಿ, ಮಂಚ, ಮೇಜು ಮುಂತಾದ ಪೀಠೋಪಕರಣ ಇದ್ದವು.
ಇವರು ಶೃಂಗಾರ ಸಾಧನಗಳನ್ನು ಇಡಲು ಲೋಹದ, ಹಸ್ತಿದಂತ ಮಣ್ಣಿನ ಹಾಗೂ ಶಿಲೆಯ ವಸ್ತುಗಳನ್ನು ಮನೆಯ ಉಪಯೋಗಕ್ಕೆ ಬಳಸುತ್ತಿದ್ದರು.
ಹೆಚ್ಚಾಗಿ ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ಬಳಸುತ್ತಿದ್ದರು.
ಮನೋ ರಂಜನೆ / ಕ್ರೀಡೆಗಳು
ಇವರು ಅನೇಕ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು.
ಪಗಡೆ ಆಟ, ಗೂಳಿ ಕಾಳಗ, ಬೇಟೆಗಾರಿಕೆ, ಪಕ್ಷಿ ಕಾಳಗ, ಚದುರಂಗದಾಟ ಮುಂತಾದವು ಈ ಜನರ ಮನೋರಂಜನೆಯ ಚಟುವಟಿಕೆಗಳಾಗಿವೆ
ಇವರ ಆಟಿಕೆಗಳು ಗುಂಡು, ಚೆಂಡು, ಜೇಡಿಮಣ್ಣಿನಿಂದ ತಯಾರಿಸಿದ ಆಟಿಕೆಗಳಿಂದ ಆಟವಾಡುತ್ತಿದ್ದರು.
ಪಗಡೆ ಆಟವು ಸಿಂಧೂ ನಾಗರಿಕತೆಯ ಜನರ ನೆಚ್ಚಿನ ಆಟವಾಗಿತ್ತು.
ಧಾರ್ಮಿಕ ಜೀವನ
ಈ ನಾಗರಿಕತೆಯ ಜನರು ಧಾರ್ಮಿಕ ವಿಷಯದಲ್ಲಿ ತುಂಬಾ ನಂಬಿಕೆ ಉಳ್ಳವರಾಗಿದ್ದರು.
ಧರ್ಮವೂ ತಮಗೆ ಶಾಶ್ವತ ಆನಂದವನ್ನು ಕೊಡುತ್ತದೆ ಅದರೊಂದಿಗೆ ಸಮಾಧಾನಕರವಾದ ವೃತ್ತಿಯನ್ನು ಬೆಳೆಸಿಕೊಳ್ಳುವುದೇ ಧರ್ಮವೆಂದು ಹೇಳಲಾಗುತ್ತಿದ್ದರು.
ಸಿಂಧೂ ಬಯಲಿನ ನಾಗರಿಕತೆಯ ಜನಾಂಗವು ತಮ್ಮದೇ ಆದ ಕಲ್ಪನಾ ಭಾವನೆಗಳ ಮೂಲಕ ತಮ್ಮ ಬದುಕಿನಲ್ಲಿ ಬರುವಂತಹ ತೊಂದರೆಗಳನ್ನು ಪರಿಹರಿಸಿಕೊಳ್ಳುತ್ತಿದ್ದರು.
ತಮ್ಮ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ನಡವಳಿಕೆಯನ್ನು ರೂಪಿಸಿದ್ದರು.
ಸಿಂಧೂ ಜನರು ಅನೇಕ ದೇವರ ಆರಾಧನೆಯನ್ನು ಮಾಡುತ್ತಿದ್ದರು.
ಇವರು ಎಲ್ಲಾ ದೇವತೆಗಳನ್ನು ಆರಾಧಿಸುತ್ತಿದ್ದರು ಪ್ರಕೃತಿ ಹಾಗೂ ಇನ್ನಿತರ ಶಕ್ತಿಗಳನ್ನು ಅವರು ಆರಾಧಿಸುತ್ತಿದ್ದರು.
ಮಹೆಂಜೋದಾರದಲ್ಲಿ ಒಂದು ವಿಗ್ರಹವು ಶಿವನ ಸುತ್ತಲೂ ಅನೇಕ ಖಡ್ಗ ಮೃಗಗಳ ಮಧ್ಯದಲ್ಲಿ ತೋರಿಸಲ್ಪಟ್ಟ ಅನೇಕ ಪಶುಗಳ ಮಧ್ಯದಲ್ಲಿ ಶಿವನು ಇರುವುದರಿಂದ ಆತನನ್ನು” ಪಶುಪತಿ ” ಎನ್ನುವ ಹೆಸರಿನಿಂದ ಪೂಜಿಸಲಾಗುತ್ತಿದೆ
ಮಾತೃ ದೇವತೆ
ಮಾತೃದೇವತೆ ಸಿಂಧೂ ಜನರ ಪ್ರಮುಖ ದೇವತೆ
ಸಿಂಧೂ ನಾಗರಿಕತೆಯಲ್ಲಿ ಬಹಳಷ್ಟು ಮಣ್ಣಿನ ಹೆಣ್ಣುಮೂರ್ತಿಗಳು ಪತ್ತೆಯಾಗಿವೆ
ಸ್ತ್ರೀ ಜೀವನದ ಮೂಲ ಶಕ್ತಿ ಎಂದು ಭಾವಿಸಿ ಪೂಜಿಸುತ್ತಿದ್ದರು.
ಕೆಲವು ಮೂರ್ತಿಗಳು ದೀಪಾಲಂಕೃತ ವಾಗಿದ್ದು ಅದನ್ನು ಇತಿಹಾಸಕಾರರು ದೀಪಲಕ್ಷ್ಮಿ ಎಂದು ಗುರುತಿಸಿದರು.
ಮಾತೃದೇವತೆ ಇಂದಿನ ದುರ್ಗ, ಕಾಳಿ ಮತ್ತು ಲಕ್ಷ್ಮಿ ಆರಾಧನೆಯ ಮೂಲ ಎಂದು ಹೇಳುತ್ತಾರೆ.
3.ಪ್ರಾಣಿಗಳ ಪೂಜೆ
ಸಿಂಧೂ ಜನರು ಅನೇಕ ಪ್ರಾಣಿಗಳನ್ನು ಪೂಜಿಸುತ್ತಿದ್ದರು.
ಹುಲಿ ಜಿಂಕೆ ಮೊಸಳೆ ಖಡ್ಗಮೃಗ ಇವುಗಳನ್ನು ಅವರು ಪೂಜಿಸುತ್ತಿದ್ದರು
ಇವರು ಕಲ್ಲು ಮತ್ತು ಮರಗಳ ಪೂಜೆಯನ್ನು ಮಾಡುತ್ತಿದ್ದರು.
ಇವರು ಹಾವುಗಳನ್ನು ಸಹ ಪೂಜೆ ಮಾಡುತ್ತಿದ್ದರು
ಇವರು ಸೂರ್ಯನನ್ನು ಸಹ ಪೂಜೆ ಮಾಡುತ್ತಿದ್ದರು.
ಶವ ಸಂಸ್ಕಾರ ಪದ್ಧತಿ
ಈ ಸಂಸ್ಕೃತಿಯಲ್ಲಿ ಜನರು ಮೂರು ವಿಧದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು ಅವುಗಳೆಂದರೆ.
ಸತ್ತವರ ದೇಹಗಳ ಜೊತೆಯಲ್ಲಿ ಆಹಾರ ಪದಾರ್ಥಗಳನ್ನು ಇಟ್ಟು ಹೋಳುತ್ತಿದ್ದರು.
ಸತ್ತವರ ದೇಹವನ್ನು ಸಂಪೂರ್ಣವಾಗಿ ಸುಟ್ಟುವ ಪದ್ಧತಿ ಸಹ ಇತ್ತು.
ಸತ್ತವರ ಶರೀರವನ್ನು ನಿರ್ಜನ ಪ್ರದೇಶದಲ್ಲಿಟ್ಟು ಪ್ರಾಣಿ ಪಕ್ಷಿಗಳು ತಿನ್ನಲು ಬಿಡುತ್ತಿದ್ದರು
ಮೂಡನಂಬಿಕೆಗಳು
ಈ ನಾಗರಿಕತೆ ಜನರು ಬಹಳ ಮೂಢನಂಬಿಕೆಯನ್ನು ನಂಬುತ್ತಿದ್ದರು.
ಇವರ ಅನೇಕ ರೀತಿಯ ತಾಯಿತಗಳನ್ನು ಕಟ್ಟಿಕೊಳ್ಳುತ್ತಿದ್ದರು.
ಇದರಿಂದ ತಮಗೆ ಆಗುವ ಅಪಾಯಗಳನ್ನು ತಪ್ಪಿಸಿಕೊಳ್ಳಲು ತಾಯಿತವನ್ನು ಕಟ್ಟಿಕೊಳ್ಳುತ್ತಿದ್ದರು.
ಕಮಲದ ಚಿನ್ಹೆಯನ್ನು ಹಿಂದೂ ಜನರು ಒಂದು ಅದೃಷ್ಟ ಚಿಹ್ನೆಯಾಗಿ ಬಳಸುತ್ತಿದ್ದರು.
ಬೆಕ್ಕು ರಸ್ತೆಗೆ ಅಡ್ಡ ಬಂದರೆ ಅದೇನೋ ಕೆಲಸ ಆಗುವುದಿಲ್ಲ ಎಂದು ನಂಬುತ್ತಿದ್ದರು.
ಕೆಲವೊಮ್ಮೆ ಕಾಗೆಗಳು ಹೆಚ್ಚು ಕೂಗುತ್ತಿದ್ದರೆ ಮನೆಗೆ ಸಂಬಂಧಿಕರು ಬರುವ ಸೂಚನೆಯನ್ನು ನಂಬುತ್ತಿದ್ದರು.
ಅಲ್ಲದೆ ಭೂತ ಪಿಶಾಚಿಗಳಲ್ಲಿ ಸಹ ನಂಬಿಕೆಯನ್ನು ಹೊಂದಿದ್ದರು.
ನಾಗರಿಕತೆಯಲ್ಲಿ ಪ್ರಮುಖವಾದ ಸಿಂಧೂ ನಾಗರಿಕತೆಯ ಜನರು ಆರ್ಥಿಕವಾಗಿ ಮುಂದುವರೆದವರು, ವಿವಿಧ ಸಮಕಾಲಿನ ನಾಗರಿಕತೆಗಳ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದರು, ಅಲ್ಲದೆ ಅವರ ಜೀವನವು ಶ್ರೀಮಂತಿಕೆ ಜೀವನವಾಗಿತ್ತು. ವ್ಯವಸಾಯ, ಉದ್ದಿಮೆ, ವ್ಯಾಪಾರ ರಫ್ತು ಮತ್ತು ಆಮದುಗಳನ್ನು ಮಾಡುತ್ತಿದ್ದರು.
ವ್ಯಾಪಾರ
ಸಿಂಧೂ ನಾಗರಿಕತೆಯಲ್ಲಿ ವ್ಯಾಪಾರವು ಉತ್ತಮ ಮಟ್ಟದಲ್ಲಿತೆಂದು ದೊರೆತ ದಾಖಲೆಗಳಿಂದ ತಿಳಿಯಬಹುದು.
ಅವರು ವ್ಯವಸ್ಥಿತವಾಗಿ ಸಾರಿಗೆ ಸಂಪರ್ಕ ವ್ಯವಸ್ಥೆ ಹೊಂದಿದ್ದರಿಂದ ಜನರಿಗೆ ಅವಶ್ಯಕ ವಸ್ತುಗಳನ್ನು ಸಕಾಲದಲ್ಲಿ ಸರಬರಾಜು ಮಾಡಲಾಗುತ್ತಿತ್ತು. ನಮಗೆ ಕಂಡುಬರುವ ಉಗ್ರಾಣಗಳು, ಮುದ್ರೆಗಳು ಏಕ ರೀತಿಯ ತೂಕ ಮತ್ತು ಅಳತೆ ಸಿಂಧೂ ನಾಗರಿಕತೆಯ ಆಂತರಿಕ ವ್ಯಾಪಾರ ನಡೆಯುತ್ತಿತ್ತು, ಮತ್ತು ವ್ಯಾಪಾರ ವಹಿವಾಟುಗಳನ್ನು ವಸ್ತು ವಿನಿಮಯ ರೂಪದಲ್ಲಿ ಮಾಡುತ್ತಿದ್ದರು. ಲೋಥಲ್ ನಲ್ಲಿ ದೊರೆತಿರುವ ಹಡಗುಕಟ್ಟೆ ಇವರ ದೇಶಿಯ ಮತ್ತು ವಿದೇಶಿಯ ವ್ಯಾಪಾರದ ಮೇಲೆ ಬೆಳಕು ಚೆಲ್ಲುತ್ತದೆ.
ವಿದೇಶಿ ವ್ಯಾಪಾರ
ಈ ನಾಗರಿಕತೆಯ ಪ್ರಮುಖ ನಗರಗಳಲ್ಲಿ ಒಂದಾದ ಹರಪ್ಪ ನಗರದಲ್ಲಿ ಮುದ್ರೆಗಳು ಪಶ್ಚಿಮ ಏಷ್ಯಾದ ಅನೇಕ ನೆಲೆಗಳಲ್ಲಿ ಸಿಕ್ಕಿರುವುದರಿಂದ ಸಿಂದೂ ಜನರು ವಿದೇಶಿ ವ್ಯಾಪಾರ ಹೊಂದಿದ್ದರು ಎಂದು ತಿಳಿಸುತ್ತದೆ. ಲೋಥಾಲ್ ಮತ್ತು ಬಾಲ್ಕೋಟ್ ನಗರಗಳು ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದ್ದವು. ಇಲ್ಲಿಯ ಮೆಸಪಟೋಮಿಯ ಹಾಗೂ ಇನ್ನಿತರ ಪಶ್ಚಿಮ ಏಷ್ಯಾ ದೇಶಗಳ ಜೊತೆ ವ್ಯಾಪಾರ ವಹಿವಾಟನ್ನು ಮಾಡಲಾಗುತ್ತಿತ್ತು. ದೇಶಿಯ ಉತ್ಪಾದನೆ ವಸ್ತುಗಳನ್ನು ರಫ್ತು ಮಾಡಿ ವಿದೇಶಗಳಿಂದ ಚಿನ್ನ ಮತ್ತು ಬೆಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದರು.
ಕೈಗಾರಿಕೆಗಳು
ಸಿಂಧೂ ಬಯಲಿನ ನಾಗರಿಕತೆಯಲ್ಲಿ ಕೃಷಿ ಮತ್ತು ಪಶು ಸಂಗೋಪನೆ ಅಲ್ಲದೆ ಕೈಗಾರಿಕೆಯಲ್ಲೂ ಸಹ ಅವರು ಮುಂದುವರೆದಿದ್ದರೂ.
ಗೃಹ ಉಪಯೋಗಿ ವಸ್ತುಗಳು : ಈ ನಾಗರಿಕತೆಯಲ್ಲಿ ಗೃಹ ಉಪಯೋಗಿ ವಸ್ತುಗಳು ಅತ್ಯಂತ ನವೀನತೆಯಿಂದ ಕೂಡಿರುತ್ತವೆ. ಮನೆಗೆ ಬೇಕಾದ ವಸ್ತುಗಳನ್ನು ಮಣ್ಣಿನಿಂದ, ಕಲ್ಲು ,ಚಿಪ್ಪು, ಪಿಂಗಾಣಿ, ದಂತ ಮತ್ತು ಲೋಹಗಳಿಂದ ತಯಾರಿಸುತ್ತಿದ್ದರು. ಜೇಡಿಮಣ್ಣಿನಿಂದ ಮಡಿಕೆಗಳು ತರಿಸುತ್ತಿದ್ದರು. ಅವುಗಳೆಂದರೆ ಬಾಣಲೆಗಳು, ತಟ್ಟೆ, ಲೋಟ, ಜಾರುಗಳ ವಸ್ತುಗಳನ್ನು ಸಂಗ್ರಹಿಸಿಡಲು ದೊಡ್ಡ ಬಡಿಗೆಗಳನ್ನು ತಯಾರು ಮಾಡುತ್ತಿದ್ದರು. ಕಂಚು ಮತ್ತು ತಾಮರದಿಂದ ಸೂಜಿ ಕೊಡಲಿ ಚಾಕು ಮೀನು ಗಾಳ ಗಳನ್ನು ತಯಾರಿಸುತ್ತಿದ್ದರು.
ವೈಜ್ಞಾನಿಕ ಜ್ಞಾನ
ಸಿಂಧೂ ಬಯಲಿನ ನಾಗರಿಕತೆಯ ಜನರಿಗೆ ವೈಜ್ಞಾನಿಕ ಮನೋಭಾವನೆ ಇತ್ತೆಂದು ಕೆಲವು ಅವಶೇಷಗಳಿಂದ ತಿಳಿದು ಬಂದಿದೆ.ಹರಪ್ಪ ಸಂಸ್ಕೃತಿಯ ಜನರಿಗೆ ಗಣಿತಶಾಸ್ತ್ರದ ಬಗ್ಗೆ ತಿಳಿದಿತ್ತು. ಇವರು ಸಂಖ್ಯೆಗಳನ್ನು ಕಲಿತಿದ್ದರು.
ಪ್ರಪಂಚದಲ್ಲಿ ಪ್ರಥಮ ಬಾರಿಗೆ ಸಮುದ್ರದ ಅಲೆಗಳ ಉಪಯೋಗ ತಿಳಿದಿದ್ದು ಮತ್ತು ಅಲೆಗಳಿಂದ ಹಡಗುಗಳನ್ನು ಚಲಿಸಿಕೊಂಡು ಲೋಥಾಲ್ ಬಂದರಿಗೆ ಬರುವಂತಹ ವ್ಯವಸ್ಥೆ ಮಾಡಿರುವುದು ಅವರ ವೈಜ್ಞಾನಿಕ ಜ್ಞಾನವನ್ನು ತಿಳಿಸುತ್ತದೆ. ಮತ್ತು ಗಿಡಮೂಲಿಕೆಗಳಿಂದ ಔಷಧಿಯನ್ನು ತಯಾರಿಸುತ್ತಿದ್ದರು.
ಲೋಹಜ್ಞಾನ
ಸಿಂಧೂ ನಾಗರಿಕತೆಯ ಜನರು ಪ್ರಮುಖವಾಗಿ ಬಳಸುತ್ತಿದ್ದ ಲೋಹವೆಂದರೆ ಅದು ತಾಮ್ರವಾಗಿದೆ. ತಾಮ್ರದಿಂದ ಕ್ಷೌರ ಕತ್ತಿಗಳು, ಚಾಕು ಮತ್ತು ಬಾಣಗಳನ್ನು ತಯಾರಿಸುತ್ತಿದ್ದರು. ಹಾಗೆಯೇ ಆರ್ಸೆನಿಕ್ ಮತ್ತು ನಿಕ್ಕಾಲ್ ಇತ್ಯಾದಿ ಲೋಹಗಳ ಪರಿಚಯ ಜನರಿಗೆ ಇತ್ತೆಂದು ತಿಳಿಯಬಹುದು.
ಮಡಿಕೆಗಳು
ಸಿಂಧೂ ಬಯಲಿನ ನಾಗರಿಕತೆಯಲ್ಲಿ ವಿವಿಧ ಆಕಾರದ ಮಡಿಕೆಗಳು ದೊರೆತಿವೆ. ಸ್ಥಳೀಯವಾಗಿ ದೊರಕುವ ಜೇಡಿಮಣ್ಣಿನ ಜೊತೆಗೆ ಸುಣ್ಣ ಮತ್ತಿತರ ವಸ್ತುಗಳನ್ನು ಸೇರಿಸಿ ಕುಂಬಾರ ಚಕ್ರದಿಂದ ಮಡಿಕೆ ತಯಾರಿಸಿ ಬೆಂಕಿಯ ಆವುಗೆಯ ಗೂಡಿನಲ್ಲಿ ಸುಡುತ್ತಿದ್ದರು. ಮಡಿಕೆ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದಿಂದ ರೇಖಾಚಿತ್ರವನ್ನು ರಚಿಸುತ್ತಿದ್ದರು ಮತ್ತು ಸಾಗು ಪ್ರಾಣಿಗಳನ್ನಿಡಲು ಪಂಜರಗಳನ್ನು ತಯಾರಿಸುತ್ತಿದ್ದರು.
ದಂತ ಮತ್ತು ಸಮುದ್ರ ಚಿಪ್ಪುಗಳ ಕುಶಲ ವಸ್ತುಗಳು
ಈ ನಾಗರಿಕತೆಯ ಜನರು ಪ್ರಾಣಿಗಳ ದಂತಗಳಿಂದ ಬಾಚಣಿಕೆಗಳನ್ನು ಬಳಸುತ್ತಿದ್ದರು ಮತ್ತು ಮನುಷ್ಯನ ಪ್ರತಿ ಕೃತಿಗಳನ್ನು ದಂತದಿಂದ ಕೆತ್ತನೆ ಮಾಡುತ್ತಿದ್ದರು. ಮತ್ತೊಂದು ಕುಶಲ ಕಲೆಯೆಂದರೆ ಕಪ್ಪು ಚಿಪ್ಪುಗಳನ್ನು ಅಳವಡಿಸಿ ಆಭರಣಗಳನ್ನು ತಯಾರಿಸುತ್ತಿದ್ದರು.
ಕತ್ತರಿ ಮತ್ತು ಸಾಣಿ
ಲೋಹ ಮತ್ತು ಶಿಲೆಯನ್ನು ಬೇಕಾದ ಆಕಾರದಲ್ಲಿ ಕತ್ತರಿಸುವ ಮತ್ತು ಆಕಾರಕ್ಕೆ ಸಾಣಿ ಹಿಡಿಯುವ ಕುಶಲ ಕಲೆ ತಿಳಿದಿದ್ದರೂ. ಸಾಬೂನು, ಕಲ್ಲಿನ ಮುದ್ರೆಗಳು, ಆಭರಣಗಳು ಮತ್ತು ತೂಕದ ಬಟ್ಟುಗಳನ್ನು ಈ ವಿಧಾನಗಳಿಂದ ತಯಾರಿಸುತ್ತಿದ್ದರು.
ಯುದ್ಧೋಪಕರಣಗಳು
ಸಿಂಧೂ ನಾಗರಿಕತೆಯ ಜನರು ಶಾಂತಿ ಪ್ರಿಯರು, ಅವರ ನಾಗರಿಕತೆಯಲ್ಲಿ ಅನೇಕ ಅವಶೇಷಗಳು ದೊರೆತಿವೆ. ಕಂಚಿನ 40 cm ಉದ್ದದ ಗರಗಸ 45 cm ತಾಮ್ರದ ಎರಡು ಕತ್ತಿಗಳು ಸಿಕ್ಕಿವೆ. ಮೋನೆಯಿರುವ ಭರ್ಚಿ, ಚಾಕು, ಬಾಣ ಮುಂತಾದವುಗಳನ್ನು ಉಪಯೋಗಿಸುತ್ತಿದ್ದರು, ಇವರು ಖುಷಿ ಮತ್ತು ವ್ಯಾಪಾರದಲ್ಲಿ ಹೆಚ್ಚು ತಮ್ಮ ಜೀವನ ರಕ್ಷಿಸುವುದಕ್ಕೋಸ್ಕರ ಮೇಲಿನ ಸಲಕರಣೆಗಳನ್ನು ಹೊಂದಿದ್ದಾರೆ ಹೊರತು ಬೇರೆಯವರ ಮೇಲೆ ಆಕ್ರಮಣ ನಡೆಸಲು ಅಲ್ಲಾ ಎಂದು ಇತಿಹಾಸಕಾರ ಅಭಿಪ್ರಾಯ.
ಸಿಂಧೂ ನಾಗರಿಕತೆಯ ಪತನಕ್ಕೆ ಕಾರಣಗಳು
ನದಿಗಳು ತಮ್ಮ ಹರಿವಿನ ದಿಕ್ಕನು ಬದಲಾಯಿಸಿದ್ದರಿಂದ ನಗರಗಳು ಹಾಳಾಗಿರಬಹುದು
ನದಿಗಳು ನಗರಗಳಿಂದ ದೂರ ಹರಿದು ಭೂಮಿಯನ್ನು ಹೊರಡು ಮಾಡಿರಬಹುದು
ಈ ನಾಗರಿಕತೆಯಲ್ಲಿ ಸತತ ಪ್ರವಾಹಗಳು ಮತ್ತು ಮಣ್ಣಿನ ಸವೆತಗಳು ಜೀವನದ ವಿನಾಶಕ್ಕೆ ಕಾರಣವಾಗಿರಬಹುದು
ಕೃಷಿ ಭೂಮಿಯು ಅತಿಯಾದ ಬಳಕೆ ಮಾಡಿರುವುದರಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಂಡಿರಬಹುದು
ಸಾಂಕ್ರಾಮಿಕ ರೋಗಗಳು ಹರಡುವುಕೆಯಿಂದ ಅಲ್ಲಿನ ಜನಸಂಖ್ಯೆ ನಾಶವಾಗಿರಬಹುದು
ಮಳೆಯ ಕೊರತೆಯಿಂದ ಅಲ್ಲಿನ ಭೂಪ್ರದೇಶ ಬರಡು ಭೂಮಿಯಾಗಿರಬಹುದು
ಸಿಂಧೂ ನಾಗರಿಕತೆಯ ಜನರ ಮೇಲೆ ಪದೇ ಪದೇ ಮಂಗೋಲಿಯನ್ನರ ದಾಳಿಗಳಿಂದ ಅಲ್ಲಿನ ಜನರು ನಶಿಸಿಹೋಗಿರಬಹುದು.
ದೊಡ್ಡ ಪ್ರಮಾಣದ ಅರಣ್ಯ ನಾಶ ಮತ್ತು ಪದೇ ಪದೇ ಪ್ರವಾಹಗಳು ಆಗುತ್ತಿದರಿಂದ ಸಿಂಧೂ ನಾಗರಿಕತೆ ನಾಶವಾಗಿರಬಹುದು
ಸಿಂಧೂ ನಾಗರಿಕತೆಯ ಅವನತಿಗೆ ಇವೆಲ್ಲ ಕಾರಣಗಳು ಹಂತ ಹಂತವಾಗಿ ನಡೆದಿರುವುದರಿಂದ ಅಲ್ಲಿನ ನಾಗರಿಕತೆ ನಾಶವಾಗಿರಬಹುದು ಎಂದು ಅಭಿಪ್ರಾಯವಾಗಿದೆ.
ವಿಜಯನಗರ ಸಾಮ್ರಾಜ್ಯ ಸಂಗಮನ ಐವರು ಮಕ್ಕಳದ ಹರಿಹರ, ಬುಕ್ಕ ,ಕಂಪಣ್ಣಾಯ,ಮಾರಪ್ಪ ಮತ್ತು ಮುದ್ದಪ್ಪ ಎಂಬುವರು ಈ ಸಾಮ್ರಾಜ್ಯವನ್ನು ಸ್ಥಾಪಿಸಿದರೆಂದು ಅಭಿಪ್ರಾಯ . ಆದರೆ ರಾಬರ್ಟ್ ಸೀವೆಲ್ ನ ಅಭಿಪ್ರಾಯ ಏನಿದೆ ಎಂದರೆ ಓರoಗಲ್ಲಿನ ಪ್ರತಾಪ ರುದ್ರದೇವನ ಆಸ್ಥಾನದಲ್ಲಿದ್ದ ಹರಿಹರ ಮತ್ತು ಬುಕ್ಕರಾಯ ಎಂಬ ಸಹೋದರರು ಮುಸ್ಲಿಮರ ದಾಳಿಯಿಂದ ವಾರಂಗಲ್ ನಾಶವಾದ ಮೇಲೆ ಆನೆಗೊಂದಿಯ ಕಪಿಲ ರಾಯನ ಆಸ್ಥಾನದಲ್ಲಿ ಉನ್ನತ ಅಧಿಕಾರವನ್ನು ಪಡೆದರು. ಮಧ್ಯ ದೆಹಲಿಯಿಂದ ಆನೆಗೊಂದಿಗೂ ಬಂದ ಮಹಮ್ಮದ್ ಬಿನ್ ತುಘಲಕ್ ಪ್ರತಿನಿಧಿ ತನ್ನ ಆಳ್ವಿಕೆಯಲ್ಲಿ ಯಶಸ್ಸು ಕಾಣದ ಕಾರಣವಾಗಿ ಹರಿಹರನನ್ನು ರಾಜನನ್ನಾಗಿ ಮತ್ತು ಬುಕ್ಕನನ್ನು ಮಂತ್ರಿ ಆಗಿ ಮಾಡಿ ಹಿಂದಿರುಗಿದನು. ಈ ಸಹೋದರರೇ ಮುಂದೆ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದರು
ಕನ್ನಡ ಮೂಲದ ಪ್ರಕಾರ ವಿಜಯನಗರದ ಸ್ಥಾಪಕರು ಬೇರೆ ಕಡೆಯಿಂದ ಬಂದವರಲ್ಲ. ಅವರು ನಮ್ಮ ಕನ್ನಡ ನಾಡಿನವರೇ ಎಂಬುದು ಫಾದರ್ ಹೇರಾಸ್, ಬಿ ಎ ಸಾಲೆತ್ತೂರು , ಆಂಧ್ರ ಪ್ರೊಫೆಸರ್ K ಸತ್ಯನಾರಾಯಣ ಮತ್ತು PB ದೇಸಾಯಿ ಅವರ ವಾದವಾಗಿದೆ. ಮುಸ್ಲಿಂ ವಿದ್ವಾಂಸ ಫರಿಸ್ತ ವಿಜಯನಗರ ಅರಸರನ್ನು ಕರ್ನಾಟಕ್ ರಾಯರ್ ಎಂದು ಸಂಬೋಧಿಸಿದರು ಎಂದು PB ದೇಸಾಯಿ ಅವರು ವಿಜಯನಗರ ಮೂಲವನ್ನು ಪತ್ತೆಚ್ಚಿದ್ದಾರೆ.
ಶಾಸನಗಳು ದೊರಕಿರುವುದು :
ವಿಜಯನಗರ ಅರಸರುಗಳು ಹೊರಡಿಸಿರುವ ಶಾಸನಗಳಲ್ಲಿ ಸಿಕ್ಕಿರುವ 5000 ಶಾಸನಗಳಲ್ಲಿ ಅರ್ಧದಷ್ಟು ಕನ್ನಡದಲ್ಲಿ ಇವೆ ಎಂದು ತಿಳಿದುಬಂದಿದೆ. ತಮಿಳುನಾಡು ಆಂಧ್ರ ಪ್ರದೇಶದಲ್ಲಿ ದೊರಕಿರುವ ಶಾಸನಗಳು ಕೂಡ ಕನ್ನಡದಲ್ಲಿ ಇರುವುದು ಕಂಡುಬಂದಿದೆ
ಕರ್ನಾಟಕದ ಬೇಲೂರಿನ ಕೇಶವ ದೇವಸ್ಥಾನ ಮತ್ತು ಹಂಪಿಯಲ್ಲಿರುವ ವಿರೂಪಾಕ್ಷ ದೇವಸ್ಥಾನ ಸಂಗಮ ಸಹೋದರರ ಆರಾಧ್ಯ ದೈವ ಆಗಿರುವುದು ಕೂಡ ಕನ್ನಡ ಮೂಲವನ್ನು ಎತ್ತಿ ಹಿಡಿಯುತ್ತದೆ
ಜಾoಬವತೀ ಕಲ್ಯಾಣ ಎಂಬ ಸಂಸ್ಕೃತ ನಾಟಕದಲ್ಲಿ ಶ್ರೀ ಕೃಷ್ಣದೇವರಾಯನನ್ನು ಕರ್ನಾಟಕ ರಾಜ್ಯ ರಮಾ ರಮಣ ಎಂದು ಕರೆಯಲಾಗಿದೆ
ಶ್ರೀ ವಿರುಪಾಕ್ಷ ಇವರ ರಾಜ ಮುದ್ರೆ ಮತ್ತು ವರಾಹ ಸಾಮ್ರಾಜ್ಯದ ರಾಜ ಲಾಂಛನವಾಗಿದೆ.
ತೆಲುಗು ಮೂಲ :
ಕನ್ನಡ ಮೂಲದ ಪ್ರಕಾರ ವಿಜಯನಗರದ ಸ್ಥಾಪಕರು ಬೇರೆ ಕಡೆಯಿಂದ ಬಂದವರಲ್ಲ. ಅವರು ನಮ್ಮ ಕನ್ನಡ ನಾಡಿನವರೇ ಎಂಬುದು ಫಾದರ್ ಹೇರಾಸ್, ಬಿ ಎ ಸಾಲೆತ್ತೂರು , ಆಂಧ್ರ ಪ್ರೊಫೆಸರ್ K ಸತ್ಯನಾರಾಯಣ ಮತ್ತು PB ದೇಸಾಯಿ ಅವರ ವಾದವಾಗಿದೆ. ಮುಸ್ಲಿಂ ವಿದ್ವಾಂಸ ಫರಿಸ್ತ ವಿಜಯನಗರ ಅರಸರನ್ನು ಕರ್ನಾಟಕ್ ರಾಯರ್ ಎಂದು ಸಂಬೋಧಿಸಿದರು ಎಂದು PB ದೇಸಾಯಿ ಅವರು ವಿಜಯನಗರ ಮೂಲವನ್ನು ಪತ್ತೆಚ್ಚಿದ್ದಾರೆ.
ಹರಿಹರನ ಆಳ್ವಿಕೆ : ಸಂಗಮ ವಂಶದ ಮೊದಲ ದೊರೆ ಹರಿಹರ .ಇವನು ಕ್ರಿ.ಶ 1336 ರಿಂದ ಹಿಡಿದು ಎರಡು ದಶಕಗಳ ಕಾಲದವರೆಗೆ ರಾಜ್ಯವನ್ನು ಆಳುತ್ತಾನೆ. ತಂದೆ ಭಾವನ ಸಂಗಮ ತಾಯಿ ಮರವ್ವೆ ನಾಯಕಿ .ಕೆಲವು ಸಿದ್ಧಾಂತಗಳ ಪ್ರಕಾರ ಹಕ್ಕ ಮತ್ತು ಬುಕ್ಕ ವಾರಂಗಲ್ ನ ಕಾಕತೀಯ ರಾಜನ ಸೈನ್ಯದಲ್ಲಿ ಕಮಾಂಡರ್ಗಳಾಗಿದ್ದರು. ವಾರಂಗಲ್ ರಾಜನನ್ನು ಮಹಮ್ಮದ್ ಬಿನ್ ತುಘಲಕ್ ಯುದ್ಧದಲ್ಲಿ ಸೋಲಿಸಿ ಹಕ್ಕ ಮತ್ತು ಬುಕ್ಕನ್ನು ಸೆರೆಹಿಡಿದು ದೆಹಲಿಗೆ ಕಳುಹಿಸಲಾಯಿತು ಅಲ್ಲಿ ಇಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರವಾದರು. ಆ ನಂತರ ಋಷಿ ವಿದ್ಯಾರಣ್ಯರ ಪ್ರಭಾವದಿಂದ ಹಿಂದೂ ಧರ್ಮಕ್ಕೆ ಮರಳಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.
ಹರಿಹರನು ಮೊದಲು ಹೊಯ್ಸಳರ ಮಾಂಡಲಿಕನಾಗಿದ್ದನು, ಆದ ನಂತರ ಸ್ವಾತಂತ್ರ್ಯ ರಾಜ್ಯವನ್ನು ಸ್ಥಾಪಿಸಿದನು
ಚಾಲುಕ್ಯರು ಆಳಿದ ಬಾದಾಮಿ, ಉದಯಗಿರಿ, ಮೊದಲಾದವುಗಳನ್ನು ಕೋಟೆಗಳಿಂದ ಸುರಕ್ಷಿತ ಗೊಳಿಸಿ ಅಲ್ಲಿ ಅವನ ನಂಬಿಕಸ್ತರನ್ನು ನೇಮಿಸಿದನು
ಹೊಯ್ಸಳರ ಮೂರನೇ ಬಲ್ಲಾಳ ಸತ್ತು ಹೋದ ಮೇಲೆ ಅವನು ಸಂಪೂರ್ಣ ರಾಜ್ಯದ ಮೇಲೆ ಹತೋಟಿಯನ್ನು ಸ್ಥಾಪಿಸಿದನು. ಈ ಮಹತ್ವ ಕಾರ್ಯದಲ್ಲಿ ಇವನ ಸಹೋದರರು ಇವನ ಬೆನ್ನೆಲುಬು ಆಗಿ ನಿಂತಿದ್ದರು.
ಇವನ ಕಾಲದಲ್ಲಿ ಅಲ್ಲಾ-ಉದ್- ಹಸನ್ ಬಹುಮನ್ ಷಾ ಎಂಬುವನು 1347ರಲ್ಲಿ ಗುಲ್ಬರ್ಗದಲ್ಲಿ ಬಹಮನಿ ರಾಜ್ಯವನ್ನು ಸ್ಥಾಪಿಸುತ್ತಾನೆ
ಈ ಎರಡು ರಾಜ್ಯಗಳ ನಡುವೆ ನಿರಂತರ ಕದನ ನಡೆಯುತ್ತಿದ್ದವು ತಾಳಿಕೋಟೆ ಕದನ ( 1565 ಜನವರಿ 23 )ವಿಜಯನಗರದ ಪತನಕ್ಕೆ ಕಾರಣವಾಯಿತು.
ಪ್ರಾಕ್ತನ ಇಲಾಖೆಯ ಇತ್ತೀಚಿನ ಸಂಶೋಧನೆಗಳು:
1985ರಿಂದ ಹಂಪೆಯಲ್ಲಿ ಉತ್ಖನನ ಹಾಗೂ ಸಂಶೋಧನೆ ಹಿಂದಿಗಿಂತ ಸ್ವಲ್ಪ ಚುರುಕಾಗಿ ನಡೆಯಲಾರಂಭಿದೆ. ಭಾರತ ಸರ್ವೇಕ್ಷಣ ಇಲಾಖೆ ಮತ್ತು ಕರ್ನಾಟಕ ಪ್ರಾಚ್ಯವಸ್ತು ಇಲಾಖೆಗಳು ಒಟ್ಟಾಗಿ ನಡೆಸಿರುವ ಉತ್ಪನನದ ಫಲವಾಗಿ ಕುತೂಹಲ ಅಂಶಗಳು ಬೆಳಕಿಗೆ ಬರಲಾರಂಭಿಸಿದೆ.ಸಂಶೋಧನೆಯಿಂದ ಬೆಳಕಿಗೆ ಬಂದಿರುವ ವಿಜಯನಗರ ಕಾಲದ ವಾಸ್ತುಶಿಲ್ಪ ನಗರ ಯೋಜನೆ, ಕೋಟೆ ನಿರ್ಮಾಣ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ ಮೊದಲಾದ ಸೌಲಭ್ಯಗಳ ಬಗ್ಗೆ ಅಂದಿನ ನಗರ ವಾಸ್ತುಶಿಲ್ಪಿಗಳು ಯೋಚಿಸಿರುವ ರೀತಿ ಎಲ್ಲರಿಗೂ ಕುತೂಹಲ ಹುಟ್ಟಿಸುತ್ತವೆ. ಲಭ್ಯವಿರುವ ಈಗಿನ ಮಾಹಿತಿಯ ಪ್ರಕಾರ ಹಂಪಿ ನಗರದ ವಿಸ್ತೀರ್ಣ ಸುಮಾರು 26 ಚದರ ಮೈಲುಗಳೆಂದು ಅಂದಾಜು ಮಾಡಲಾಗಿದ್ದು. ರಾಜಾಂಗಣ ಪ್ರದೇಶವನ್ನು ಶೋಧಿ ಸಲಾಗಿದ್ದು ಅಲ್ಲಿ ಮಣ್ಣಿನಡಿಯಲ್ಲಿ ಅಡಗಿ ಇದ್ದ ಭವ್ಯ ಕಟ್ಟಡಗಳ ಅಡಿಪಾಯಗಳನ್ನು ನೆಲದವರೆಗೆ, ಶೋಧಿಸಿ ಅವುಗಳನ್ನು ಮೂಲ ಸ್ವರೂಪದಲ್ಲೇ ಜೋಡಿಸಲಾಗಿದೆ. ಅರಸರ ಅರಮನೆಯ ಅಡಿಪಾಯ ಹಾಗೂ ಅರಮನೆಗೆ ಹೊಂದಿಕೊಂಡಂತೆ ಇದ್ದ ಇತರ ಕಟ್ಟಡಗಳ ಅಡಿಪಾಯಗಳು, ಪೂಜೆ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಲು ನಿರ್ಮಿಸಿದ್ದ ವಿಶೇಷವಾದ ಭವನದ ಅಡಿಪಾಯ, ಯಜ್ಞಕುಂಡ, ಸೇವಾ ಕಾರಗೃಹಗಳು ಮತ್ತು ಅಂಗರಕ್ಷಕ ಪಡೆಯವರ ನಿವಾಸಗಳ ಅಡಿಪಾಯಗಳನ್ನು ಶೋಧಿಸಲಾಗಿದೆ. ಯಜ್ಞಕುಂಡದಲ್ಲಿ ಬೂದಿ ಸಹ ದೊರಕಿದೆ.
ವಿದೇಶೀ ಪ್ರವಾಸಿಗರಾದ ಪಯಾಸ್, ನ್ಯೂನಿಜ್ ಮತ್ತು ಅಬ್ದುಲ್ ರಜಾಕ್ ಅವರ ದಾಖಲೆಗಳನ್ನು ಅಧಾರವಾಗಿಟ್ಟುಕೊಂಡು ಈ ಪ್ರದೇಶದಲ್ಲಿ ನಡೆಸಿದ ಉತ್ಪನನ ಸಂಶೋಧಕರಿಗೆ ಪ್ರೋತ್ಸಾಹದಾಯಕವಾಗಿದೆ. ರಾಜನ ಅರಮನೆಯಿಂದ ರಾಜಸಭಾಂಗಣಕ್ಕೆ ಹೋಗಲು ಇರುವ ಮೆಟ್ಟಿಲುಗಳು, ಇದರ ದಕ್ಷಿಣಕ್ಕಿರುವ ರಾಣಿ ನಿವಾಸ, ಪದ್ಮಸರೋವರ ಹಾಗೂ 40 40 ಅಡಿಗಳ ಕಲ್ಯಾಣಿಮೂಲಸ್ವರೂಪದಲ್ಲೇ ಇದೆ. ಸುಮಾರು 40 ಎಕರೆಗಳಷ್ಟು ವಿಸ್ತಾರದಲ್ಲಿರುವ ರಾಜಾಂಗಣದಲ್ಲಿ ನಾಣ್ಯಗಳು, ವಿಗ್ರಹಗಳು, ಮಡಕೆಗಳು, ಸುಣ್ಣ ಹಾಗೂ ಗಾರೆಯಿಂದ ನಿರ್ಮಿತವಾದ ಭಿತ್ತಿಫಲಕಗಳು ದೊರೆತಿವೆ. ಪಿಂಗಾಣಿ ಪಾತ್ರೆಗಳು ಚೀನಿ ಭಾಷೆಯ ಲಿಪಿಯನ್ನೊಳಗೊಂಡಿವೆ.
ರಾಜಧಾನಿ ಹಂಪೆಯ ಮುಖ್ಯ ಕೇಂದ್ರ ಅರಮನೆ. ಇದರ ರಕ್ಷಣೆಗೆ ಅವಶ್ಯವಿದ್ದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಕ್ಕೆ ಸಾಕ್ಷಾಧಾರ ದೊರೆತಿವೆ. ಅಂಗರಕ್ಷಕ ಪಡೆ ಅರಮನೆ ಸನಿಹದಲ್ಲೇ ಇದ್ದಿತು. ಇದಲ್ಲದೆ ಒಟ್ಟಾರೆ ರಾಜಧಾನಿಯ ರಕ್ಷಣೆಗಾಗಿ ಏಳು ಸುತ್ತಿನ ಕೋಟೆ ಇದ್ದು ನಾಶವಾಗಿರುವುದು ಬೆಳಕಿಗೆ ಬಂದಿದೆ.
ವಿಜಯನಗರ ಸಾಮ್ರಾಜ್ಯದ ವಿದೇಶೀ ದಾಖಲೆಗಳು ವಿಜಯನಗರದ ಹಿರಿಮೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವಂತಹುದಾಗಿದೆ. ಆದರ ಹಿರಿಮೆಯನ್ನು ಕಣ್ಣಾರೆ ಕಂಡು ಬೆರಗಾದ ವಿದೇಶಿಯರ ಅನುಭವ ಬಣ್ಣಿಸಲಸಾಧ್ಯ. ಅವರು ವಿವಿಧ ದೇಶ ಹಾಗೂ ಭಾಷೆಗಳಿಗೆ ಸೇರಿದವರಾದರೂ ವಿಜಯನಗರದ ಹಿರಿಮೆ ಹಾಗೂ ಅದರ ಭವ್ಯತೆಯ ಬಗ್ಗೆ ಅವರೆಲ್ಲರದೂ ಒಂದೇ ಅಭಿಪ್ರಾಯ. ಚೀನಾದ ಅನಾಮಿಕ, ಇಟಲಿಯ ನಿಕೊಲೊಕಾಂಟಿ, ಪರ್ಶಿಯಾದ ಅಬ್ದುಲ್ ರಜಾಕ್, ರಷ್ಯಾದ ನಿಕಿಟನ್, ಪೋಚ್‌ಗಲ್‌ನ ಬಾರ್ಬೋಸ, ಡೊಮಿಂಗೋ ಫಯಾಸ್ ಮತ್ತು ನ್ಯುನಿಜ್ ಇವರೆಲ್ಲರ ಪ್ರವಾಸ ಕಥನಗಳು, ಅನಿಸಿಕೆಗಳು ವಿಜಯನಗರದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಗಿವೆ
ಸಾಳುವ ಮತ್ತು ತುಳುವ ವಂಶಗಳು
ಸಾಳುವ ವಂಶ
ಸಾಳುವ ವಂಶವು ವಿಜಯನಗರ ಸಾಮ್ರಾಜ್ಯದ ದ್ವಿತೀಯ ರಾಜವಂಶವಾಗಿದೆ.
ಸಾಳುವ ವಂಶವು ಸಂಗಮ ವಂಶದ ನಂತರ ಹುಟ್ಟಿಕೊಂಡಿತು ಕ್ರಿಸ್ತಶಕ 15ನೇ ಶತಮಾನದ ಕೊನೆಯ ಕಾಲದಲ್ಲಿ ಸಾಳುವ ವಂಶವು ಪ್ರಭಾವಶಾಲಿ ಮತ್ತು ಶಕ್ತಿಶಾಲಿಯಾಗಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿತು.
ಸಾಳುವ ವಂಶವನ್ನು ನರಸಿಂಹ ದೇವರಾಯನು ಕ್ರಿ.ಶ 1485 ರಲ್ಲಿ ಸ್ಥಾಪಿಸಿದನು ಸಂಗಮರ ಕಾಲದಲ್ಲಿ ಮುಸ್ಲಿಮರ ದಾಳಿಗಳಿಂದ ವಿಜಯನಗರ ಸಾಮ್ರಾಜ್ಯ ದುರ್ಬಲವಾಗಿದ್ದು ಆ ಸಮಯದಲ್ಲಿ ನರಸಿಂಹನು ತನ್ನ ಪ್ರತಿಭೆಯಿಂದ ತನ್ನ ಶಕ್ತಿಯಿಂದ ಶತ್ರುಗಳ ದಾಳಿಯನ್ನು ತಡೆದು ಸಾಮ್ರಾಜ್ಯವನ್ನು ರಕ್ಷಿಸಿದನು.
ನರಸಿಂಹನು ಸಾಳುವ ವಂಶವನ್ನು ಕ್ರಿಸ್ತ ಶಕ 1485 ರಿಂದ 1491 ರವರೆಗೆ ಸಾಮ್ರಾಜ್ಯವನ್ನು ಆಳಿದನು.
ತಾಳುವ ಪದದ ಅರ್ಥ ಸಾಳುವ ಎಂಬುವುದು ಆ ಕಾಲದ ಕ್ಷತ್ರಿಯ ಕುಲದವರು ಎಂದು ಹೇಳುತ್ತಾರೆ.
ತುಳುವ ವಂಶ
ತುಳುವ ವಂಶ ವಿಜಯನಗರ ಸಾಮ್ರಾಜ್ಯದ ಮೂರನೇ ರಾಜವಂಶವಾಗಿದ್ದು ಸಾಳುವ ವಂಶದ ನಂತರ ಅಧಿಕಾರಕ್ಕೆ ಬರುತ್ತದೆ
ಈ ವಂಶದ ಮೊದಲ ಅರಸ ವೀರ ನರಸಿಂಹ ಇವನ ನಂತರ ಕೃಷ್ಣದೇವರಾಯನು ಈ ಸಾಮ್ರಾಜ್ಯದ ಶ್ರೇಷ್ಠ ಆಡಳಿತಗಾರನಾಗಿದ್ದನು ಮತ್ತು ವಿಶಾಲಸಾಮ್ರಾಜ್ಯವನ್ನು ಸ್ಥಾಪಿಸಿದನು
ಕೃಷ್ಣದೇವರಾಯನು ಕಲೆ ವಾಸ್ತು ಶಿಲ್ಪ ಸಾಹಿತ್ಯಕ್ಷದಲ್ಲಿ ಬಹಳಷ್ಟು ಸುಧಾರಣೆ ಮತ್ತು ಸಾಧನೆಗಳನ್ನು ಮಾಡುತ್ತಾನೆ
ಕೃಷ್ಣದೇವರಾಯ ಸಮರ್ಥ ಆಡಳಿತಗಾರ ಅಪ್ರತಿಮ ವೀರ ಘನವಿದ್ವಾಂಸ ವಿಜಯನಗರ ಅರಸರಲ್ಲಿ ಶ್ರೇಷ್ಠ ಅರಸನಾಗಿದ್ದನು
ಸದಾಶಿವ ರಾಯನ ಕಾಲದಲ್ಲಿ ಆಡಳಿತದ ಮೇಲ್ವಿಚಾರಣೆ ಮಾಡುತ್ತಿರುವ ಸಮಯದಲ್ಲಿ ರಾಮರಾಯನ ವಿದೇಶಾಂಗ ನೀತಿಯ ಪರಿಣಾಮವಾಗಿ ರಕ್ಕಸ ತಂಗಡಿಯಲ್ಲಿ ಬಹುಮನಿ ಸೈನ್ಯದಿಂದ ಅತ್ಯಂತ ಹೀನಾಯವಾಗಿ ಸಾಮ್ರಾಜ್ಯದ ಅವನತಿಗೆ ಕಾರಣವಾಗುತ್ತಾನೆ
ಹಂಪಿ – ಕಾಲದ ಒಂದು ಶಾಂತ ಗುಂಡಿ ಬೆಂಗಳೂರಿನ ಗದ್ದಲದಿಂದ ಸುಮಾರು 350 ಕಿ.ಮೀ ದೂರದಲ್ಲಿ, ತುಂಗಭದ್ರಾ ನದಿಯ ದಡದ ಮೇಲೆ ನಿಂತಿರುವ ಹಂಪಿ ಒಂದು ಕನಸಿನಂತಹ ಜಾಗ. ಇಲ್ಲಿ ಬೃಹತ್ ಬಂಡೆಗಳು ಆಕಾಶಕ್ಕೆ ತಲೆ ಎತ್ತಿ ನಿಂತು, ಹಳೆಯ ವಿಜಯನಗರದ ರಾಜಧಾನಿಯ ಭಗ್ನಾವಶೇಷಗಳನ್ನು ಕಾಪಾಡಿಕೊಂಡಿವೆ. ಸೂರ್ಯನ ಕಿರಣಗಳು ಕಲ್ಲಿನ ಮೇಲೆ ಬಿದ್ದಾಗ ಚಿನ್ನದಂತೆ ಹೊಳೆಯುತ್ತವೆ, ಮಟಂಗ ಬೆಟ್ಟದ ಮೇಲೆ ನಿಂತು ಸೂರ್ಯೋದಯ ನೋಡಿದರೆ ಜಗತ್ತೇ ಮರೆತುಹೋಗುತ್ತದೆ. ಕೊರಾಕಲ್ ದೋಣಿಯಲ್ಲಿ ನದಿ ದಾಟಿ, ವಿಠ್ಠಲ ದೇವಸ್ಥಾನದ ಸಂಗೀತ ಸ್ತಂಭಗಳನ್ನು ತಟ್ಟಿದರೆ ಇನ್ನೂ ಆ ಯುಗದ ರಾಜ-ರಾಣಿಯರ ನಗು ಕೇಳಿಸುವಂತೆ ಭಾಸವಾಗುತ್ತದೆ. ಇಲ್ಲಿ ಇತಿಹಾಸವೇ ಬದುಕುತ್ತದೆ, ಪ್ರತಿ ಕಲ್ಲು ಒಂದು ಕಥೆ ಹೇಳುತ್ತದೆ – ನಡೆದಾಡುವಾಗ ಕಾಲ ನಿಂತುಹೋಗಿ, ಮನಸ್ಸು ಮಾತ್ರ ಹಳೆಯ ರಾಜಪಥಗಳಲ್ಲಿ ಓಡಾಡುತ್ತದೆ. ಫೆಬ್ರವರಿಯ ತಂಗಾಳಿಯಲ್ಲಿ ಹಂಪಿ ಹೋದರೆ, ಬಿಸಿಲು ಕಾಡದೆ, ಹೃದಯ ತುಂಬಿ ಬರುತ್ತದೆ da… ಇದು ಕೇವಲ ಪ್ರವಾಸವಲ್ಲ, ಒಂದು ಭಾವನೆಯ ಪ್ರಯಾಣ!