
ಸಿಂಧೂ ಬಯಲಿನ ನಾಗರಿಕತೆಯ ಪರಿಚಯ
ನಾಗರಿಕತೆಗಳ ತೊಟ್ಟಿಲು ಎಂದು ಕರೆಯುವ ಸಿಂಧೂ ನಾಗರಿಕತೆ, ಭಾರತದ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾಗಿದೆ. ಇದು ಸುಮಾರು ಕ್ರಿಸ್ತಪೂರ್ವ 2500 ರಿಂದ 1700 ರ ವರೆಗೂ ಅಸ್ತಿತ್ವದಲ್ಲಿತ್ತು. ಈ ನಾಗರಿಕತೆಯು ಸಿಂಧೂ ಮತ್ತು ಅದರ ಉಪನದಿಗಳ ಕಣಿವೆಗಳಲ್ಲಿ ಹರಡಿತ್ತು. ಈ ನಾಗರಿಕತೆಯು ಈಗಿನ ಪಾಕಿಸ್ತಾನ ವಾಯುವ್ಯ ಭಾರತ ಮತ್ತು ಆಫ್ಘಾನಿಸ್ತಾನದ ಭಾಗಗಳನ್ನು ಒಳಗೊಂಡಿದೆ.
- ಸಿಂಧೂ ನಾಗರಿಕತೆಯನ್ನು ನಾಗರಿಕತೆಗಳ ತೊಟ್ಟಿಲು ಎಂದು ಕರೆಯುತ್ತಾರೆ.
- 1862 ರಲ್ಲಿ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್ ಸಿಂಧೂ ನಾಗರಿಕತೆಯನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದರು.
- ಈ ನಾಗರಿಕತೆಯ ಮೊದಲ ಕುರುಹುಗಳು ಲಾಹೋರ್ ನಲ್ಲಿ ರೈಲ್ವೆ ಮಾರ್ಗ ಹಾಕೋವಾಗ 1856 ರಲ್ಲಿ ಪತ್ತೆಯಾಗಿದೆ.
- ದಯಾರಾಮ್ ಸಹನಿ ಅವರು 1921 ರಲ್ಲಿ ಸಿಂಧೂ ಬಯಲಿನ ಹರಪ್ಪ ನೆಲೆಯನ್ನು ಹುಡುಕುವ ಮೂಲಕ ಈ ನಾಗರಿಕತೆಯ ಅಧ್ಯಯನ ಕೈಗೊಂಡರು.
- ಭಾರತದ ಪುರಾತತ್ವ ಇಲಾಖೆಯ ಪಿತಾಮಹ ಅಲೆಕ್ಸಾಂಡರ್ ಕಮಿಂಗ್ ಹ್ಯಾಮ್.
- ಲಾಲ್ ಬಹದ್ದೂರ್ ಕೆಎನ್ ದೀಕ್ಷಿತ್ ಭಾರತದ ಪ್ರಾರ್ಥನಾ ಇಲಾಖೆ ಅಧ್ಯಕ್ಷರಾದ ಮೊದಲ ಭಾರತೀಯರು.
- ಹಿಂದೂ ಜನರು ದ್ರಾವಿಡ ಜನಾಂಗಕ್ಕೆ ಸೇರಿದವರು ಎಂದು ಹೇಳಲಾಗಿದೆ.
- ಇತ್ತೀಚಿನ ಸಂಶೋಧನೆಗಳಿಂದ ಈ ನಾಗರಿಕತೆಯನ್ನು ಸಿಂಧೂ ನಾಗರಿಕತೆಯ ಬದಲಾಗಿ ಹರಪ್ಪ ಸಂಸ್ಕೃತಿ ಎಂಬ ಹೆಸರಿನಿಂದ ಕರೆಯುತ್ತಾರೆ.
ನಗರ ಯೋಜನೆ ಮತ್ತು ಪ್ರಮುಖ ಕಟ್ಟಡಗಳು

ಸಿಂಧು ನಾಗರಿಕತೆಯ ಪ್ರಮುಖ ಕೇಂದ್ರಗಳಾದ ಹರಪ್ಪ ಮತ್ತು ಮಹೆಂಜೋದಾರೋ ನಗರಗಳನ್ನು ಒಂದೇ ರೀತಿಯಲ್ಲಿ ಕಟ್ಟಲಾಗಿದೆ. ಮಹೆಂಜೋದಾರೋ ಎಂಬ ಪ್ರಾಚೀನ ನಾಗರಿಕತೆಯ ನಗರ ಯೋಜನೆಗೆ ಮಾದರಿಯಾಗಿದೆ ಇದು ಜಗತ್ತಿನಲ್ಲಿ ಕ್ರಮಬದ್ಧವಾಗಿ ಕಟ್ಟಲಾಗಿದೆ ಎಂದು ಹೆಗ್ಗಳಿಕೆಯನ್ನು ಹೊಂದಿದೆ.
- ಈ ನಾಗರಿಕತೆಯು ಭಾರತದ ಮೊಟ್ಟ ಮೊದಲ ನಾಗರಿಕತೆಯಾಗಿದೆ.
- ಹರಪ್ಪ ಮತ್ತು ಮಹೆಂಜೋದಾರೋ ನಗರ ವ್ಯವಸ್ಥೆ ಬೇರೆ ಯಾವ ನಾಗರಿಕಗಳಲ್ಲಿ ಕಂಡು ಬರುವುದಿಲ್ಲ.
- ನಗರಗಳು ಕ್ರಮಬದ್ಧವಾಗಿ ನಿರ್ಮಾಣ ಮಾಡಲಾಗಿದ್ದು ಮನೆಗಳು ಸಾಲು ಪಟ್ಟಣಗಳ ಚೌಕದ ವಿನ್ಯಾಸ, ಒಳಚಂಡಿ ವ್ಯವಸ್ಥೆ , ರಸ್ತೆ ಇವೆಲ್ಲವೂ ವ್ಯವಸ್ಥಿತವಾಗಿ ನಿರ್ಮಿಸಲಾಗಿತ್ತು.
ಮನೆಗಳು

ಸಿಂಧೂ ಬಯಲಿನ ನಾಗರಿಕತೆಯ ಪ್ರಮುಖ ಪಟ್ಟಣಗಳಾದ ಹರಪ್ಪ ಮತ್ತು ಮಹೆಂಜೋದಾರೂದಲ್ಲಿ ಸಣ್ಣ ಹಾಗೂ ದೊಡ್ಡ ಮನೆಗಳು ಇದ್ದವು. ಕೇವಲ ಎರಡು ಕೋಣೆಗಳನ್ನು ಹೊಂದಿರುವ ಮನೆಗಳು ಮತ್ತು ಎರಡು ಮೂರು ಅಂತಸ್ತಿನ ಮನೆಗಳನ್ನು ಹೊಂದಿದ್ದರು. ಮನೆಗಳನ್ನು ಅವರು ಸುಟ್ಟ ಇಟ್ಟಿಗೆಗಳಿಂದ ಕಟ್ಟುತ್ತಿದ್ದರು ಪ್ರತಿಯೊಂದು ಮನೆಗಳು ಸಾಮಾನ್ಯವಾಗಿ ಮತ್ತು ಸುಂದರವಾಗಿ ಕಾಣುತ್ತಿದ್ದವು ಪ್ರತಿಯೊಂದು ಮನೆಗಳು ಸ್ವಲ್ಪ ಜಾಗವನ್ನು ಬಿಟ್ಟು ಮನೆಗಳನ್ನು ಕಟ್ಟು ಕೊಳ್ಳುತ್ತಿದ್ದರು ಪ್ರತಿಯೊಂದು ದೊಡ್ಡ ಮನೆಗೆ ಅಂಗಳವಿತ್ತು ಪಾಠಶಾಲೆ ಅಡುಗೆಮನೆ ಬಚ್ಚಲು ಮನೆ ಮತ್ತು ಬಾವಿಗಳು ಇದ್ದವು, ಎರಡು ಮೂರು ಅಂತಸಿನ ದೊಡ್ಡ ಮನೆಗಳಲ್ಲಿ ಸುಮಾರು 25 ಕೋಣೆಗಳನ್ನು ಒಳಗೊಂಡು ಇರುತ್ತಿದ್ದವು. ಸ್ನಾನದ ಗೃಹ ನೀರು ಹೋಗಲು ಕಾರಣಗಳು ಇದ್ದವು
- ದೊಡ್ಡ ಪ್ರಮಾಣದ ಮನೆ ಮತ್ತು ಕೋಣೆಗಳನ್ನು ಹೊಂದಿದ್ದ ಒಂದಿದ್ದ ಮನೆಯ ಮೇಲ್ಚಾವಣಿಗೆ ಹುಲ್ಲು ಮತ್ತು ಮಣ್ಣನ್ನು ಬಳಸಲಾಗಿದೆ.
- ಮೇಲಿನ ಮಹಡಿಯನ್ನು ಮರದಿಂದ ನಿರ್ಮಿಸಲಾಗಿದ್ದು ಮೆಟ್ಟಿಲುಗಳನ್ನು ಇಟ್ಟಿಗೆ ಮತ್ತುಕಟ್ಟಿಗೆಯಿಂದ ನಿರ್ಮಿಸಿದ್ದರು.
- ಮನೆ ನಿರ್ಮಾಣಕ್ಕೆ ಸುಟ್ಟ ಇಟ್ಟಿಗೆಗಳನ್ನು ಬಳಸಿದ್ದರು.
- ಗೋಡೆಗಳನ್ನು ಕಟ್ಟುವಾಗ ಇಟ್ಟಿಗೆ ಜೊತೆಗೆ ಜೇಡಿಮಣ್ಣನ್ನು ಬಳಸಲಾಗುತ್ತಿತ್ತು.
Table of Contents
ರಸ್ತೆಗಳು
ಸಿಂಧೂ ನಾಗರಿಕತೆಯಲ್ಲಿ ರಸ್ತೆಗಳು ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ರಸ್ತೆಗಳ ವಿನ್ಯಾಸ
- ಈ ನಾಗರಿಕತೆಯ ರಸ್ತೆಗಳು ಪೂರ್ವ ಪಶ್ಚಿಮ ಮತ್ತು ಉತ್ತರ ದಕ್ಷಿಣ ದಿಕ್ಕಿನಲ್ಲಿ ನೇರವಾಗಿ ನಿರ್ಮಿಸಲಾಗಿದ್ದವು.
- ರಸ್ತೆಗಳನ್ನು ಸಮಕೋನದಲ್ಲಿ ನಿರ್ಮಿಸಿ, ನಗರವನ್ನು ಚೌಕಾಕಾರದ ವಿಭಾಗದಲ್ಲಿ ಹಂಚಲಾಗಿತ್ತು.
ಮುಖ್ಯಬೀದಿಗಳು

- ಈ ನಗರದ ಮುಖ್ಯಬೀದಿಗಳ ಅಗಲ 9 ಅಡಿಯಿಂದ 34 ಅಡಿ ಆಗಿದ್ದವು
- ಮಹೆಂಜೋದಾರೂದ ಮುಖ್ಯಬೀದಿಗಳು 32 ಅಡಿ ಅಗಲ ಮಾಡಿದ್ದರು
- ಇತರೆ ಬೀದಿಗಳು ಸಾಮಾನ್ಯವಾಗಿ ಹನ್ನೊಂದರಿಂದ 12 ಅಡಿಗೆ ಅಗಲವಿದ್ದವು
- ಲೋತಾಲ್ ಪಟ್ಟಣದಲ್ಲಿ 38 ರಿಂದ 39 ಅಡಿ ಅಗಲದ ಹೆದ್ದಾರಿ ಪತ್ತೆಯಾಗಿದೆ
- ರಸ್ತೆಗಳನ್ನು ನಿರ್ಮಿಸಲು ಮುರಿದ ಇಟ್ಟಿಗೆ ಮತ್ತು ಮಡಿಕೆ ಚೂರುಗಳಿಂದ ರಸ್ತೆಗಳನ್ನು ನಿರ್ಮಿಸಿದ್ದರು
- ಪ್ರತಿಯೊಂದು ರಸ್ತೆಯ ಪಕ್ಕದಲ್ಲಿ ಬಾವಿ ಮತ್ತು ಕಸದ ತೊಟ್ಟಿಗಳು ಇದ್ದವು.
- ಸಿಂಧೂ ನಾಗರಿಕತೆಯಲ್ಲಿ ಬೀದಿ ದೀಪದ ಸ್ತಂಭಗಳನ್ನು ಬಳಸುತ್ತಿದ್ದರು.
ಒಳಚರಂಡಿ

ನಗರ ಯೋಜನೆಯ ಇನ್ನೊಂದು ಪ್ರಮುಖ ಅಂಶವೆಂದರೆ ಒಳ ಚರಂಡಿ ವ್ಯವಸ್ಥೆಯಾಗಿದೆ.
- ಇಲ್ಲಿನ ನಗರಗಳು ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಾಣವಾಗಿದೆ
- ಒಳ ಚರಂಡಿ ವ್ಯವಸ್ಥೆ, ನಾಗರೀಕತೆಯ ಶ್ಲಾಘನೀಯ ಒಂದು ಸಾಧನೆಯಾಗಿದೆ
- ಅಡುಗೆ ಮತ್ತು ಸ್ನಾನ ಕೊಳದ ನೀರು ಸಣ್ಣ ಚರಂಡಿ ಮೂಲಕ ರಸ್ತೆ ಪಕ್ಕದ ಚರಂಡಿಗೆ ಹರಿಯುತ್ತಿತ್ತು
- ರಸ್ತೆ ಪಕ್ಕದ ಚರಂಡಿ ನೀರು ದೊಡ್ಡ ಚರಂಡಿಗೆ ಸೇರಿ ನಂತರ ನದಿಗೆ ಸೇರುವ ವ್ಯವಸ್ಥೆ ಇತ್ತು
- ಚರಂಡಿಗಳನ್ನು ಸುಟ್ಟ ಇಟ್ಟಿಗೆ ಮತ್ತು ಗಾರೆಯಿಂದ ಕಟ್ಟಲಾಗಿದೆ .
- ನಿರಂತರ ಸ್ವಚ್ಛತೆ ಮಾಡಲು ಕಂಡಿಗಳನ್ನು ಅಳವಡಿಸಲಾಗಿತ್ತು.
- ಸಣ್ಣ ಚರಂಡಿಗಳ ಆಳ ಒಂದರಿಂದ ಮೂರು ಅಡಿ ದೊಡ್ಡ ಚರಂಡಿಗಳು 2.5 ರಿಂದ 5 ಅಡಿ ಇದ್ದವು.
- ನಗರ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯದ ಕಡೆ ಜನರು ಜಾಗೃತಿಯನ್ನು ಹೊಂದಿದ್ದರು.
ಸಾರ್ವಜನಿಕ ಸ್ನಾನಗೃಹ

- ಸಿಂಧೂ ನಾಗರಿಕತೆಯ ಮಹೋನ್ ದಾರದಲ್ಲಿ ಪತ್ತೆಯಾದ ದೊಡ್ಡದಾದ ಸ್ನಾನ ಗೃಹವು ಸಿಂಧೂ ಜನರು ಸ್ವಚ್ಛತೆಗೆ ಮಹತ್ವ ನೀಡುತ್ತಿದ್ದರು ಎಂಬುದನ್ನು ತಿಳಿಯಬಹುದು.
- ಮಹೆಂಜೋದಾರದ ದೊಡ್ಡ ಸ್ನಾನಗೃಹವು ಉತ್ತರದಿಂದ ದಕ್ಷಿಣಕ್ಕೆ 180 ಅಡಿ ಮತ್ತು ಪೂರ್ವದಿಂದ ಪಶ್ಚಿಮಕ್ಕೆ 108 ಅಡಿ ಸುತ್ತತೆಯನ್ನು ಹೊಂದಿದ್ದು ಇದರ ಹೊರಗಡೆಯೂ ಏಳರಿಂದ ಎಂಟು ಹಡಿ ದಪ್ಪವಾಗಿದೆ.
- ಈ ಕಟ್ಟಡವನ್ನು ಜಿಪ್ಸಂ ಮತ್ತು ಗಾರೆ ಮಣ್ಣಿನಿಂದ ನಿರ್ಮಿಸಲಾಗಿದೆ ಇದರ ಸುತ್ತಲೂ ಪ್ರಾಂಗಣಗಳಿವೆ
- ಮಹೆಂಜೋದಾರೋವಿನ ದೊಡ್ಡ ನಾನ ಗೃಹದ ಮಧ್ಯ ಭಾಗವೂ 39 ಅಡಿ ಉದ್ದ 23 ಅಡಿ ಅಗಲ ಎಂಟು ಅಡಿ ಆಳವನ್ನು ಹೊಂದಿದ್ದು ಎರಡು ಬದಿಯಲ್ಲಿ ಮೆಟ್ಟಿಲುಗಳು ಮತ್ತು ಸುತ್ತಲೂ ಕೊಠಡಿಗಳನ್ನು ನಿರ್ಮಿಸಲಾಗಿದೆ.
- ಈ ಕೊಠಡಿಯಲ್ಲಿರುವ ಬಾವಿಯಿಂದ ನೀರು ಹಾಯಿಸಿ ಕೊಳವನ್ನು ತುಂಬುತ್ತಿದ್ದರು.
- ಇಲ್ಲಿ ಬಿಸಿನೀರು ಸ್ನಾನಕ್ಕೆ ಅವಕಾಶವಿತ್ತು.
- ಇಲ್ಲಿ ಸಣ್ಣ ಸ್ಥಾನದ ಕೊಳಗಳನ್ನು ಪುರೋಹಿತರು ಮತ್ತು ದೊಡ್ಡ ಸ್ಥಾನದ ಕೊಳಗಳನ್ನು ಸಾರ್ವಜನಿಕರು ಬಳಸುತ್ತಿದ್ದರು.
- ಬಳಸಿದ ನೀರನ್ನು ಹೊರ ತೆಗೆಯಲು 1.8 ಮೀಟರ್ ಎತ್ತರವಿದ್ದ ಹಾಗೂ ಮೇಲ್ಬಾಗದ ಮುಚ್ಚಿದ ಚರಂಡಿ ವ್ಯವಸ್ಥೆ ಇತ್ತು.
- ಈ ಕಟ್ಟಡವು ಸರಿಸುಮಾರು 5,000 ವರ್ಷಗಳ ಕಾಲ ಗಟ್ಟಿಯಾಗಿರುವುದರಿಂದ ಸಿಂಧೂ ಜನರ ಕಲೆಯ ಸಂಕೇತವಾಗಿದೆ
ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪ click here
ಉಗ್ರಾಣಗಳು
ಸಿಂಧೂ ನಾಗರಿಕತೆಯಲ್ಲಿ ಆಶ್ಚರ್ಯ ಗೊಳಿಸುವ ಮತ್ತೊಂದು ಕಟ್ಟಡವೆಂದರೆ ಅದು ಬೃಹತ್ ಸಾರ್ವಜನಿಕ ಉಗ್ರಾಣಗಳಿವೆ. ಇದು ಹರಪ್ಪ ನಗರದಲ್ಲಿ ಕಂಡು ಬಂದಿದೆ.
- ಸಿಂಧೂ ನಾಗರಿಕತೆಯಲ್ಲಿ ಆಶ್ಚರ್ಯ ಗೊಳಿಸುವ ಮತ್ತೊಂದು ಕಟ್ಟಡವೆಂದರೆ ಅದು ಬೃಹತ್ ಸಾರ್ವಜನಿಕ ಉಗ್ರಾಣಗಳಿವೆ. ಇದು ಹರಪ್ಪ ನಗರದಲ್ಲಿ ಕಂಡು ಬಂದಿದೆ.
- ಈ ನಾಗರಿಕತೆಯ ವ್ಯವಸ್ಥೆಯಲ್ಲಿ ತೆರಿಗೆಯನ್ನು ಧಾನ್ಯಗಳ ರೂಪದಲ್ಲಿ ಸಂಗ್ರಹಿಸುತ್ತಿದ್ದರು
- ಈ ಜಗದಲ್ಲಿ ಹೆಚ್ಚಾಗಿ ಗೋಧಿ, ಬಾರ್ಲಿ ಧಾನ್ಯಗಳನ್ನು ಸ್ವೀಕರಿಸುತ್ತಿದ್ದರು
- ಸಂಗ್ರಹಿಸಿದ ಧಾನ್ಯಗಳನ್ನು ದೊಡ್ಡ ಪ್ರಮಾಣದ ಕಟ್ಟಡಗಳಲ್ಲಿ ಶೇಖರಿಸಿ ಇಡಲಾಗುತ್ತಿತ್ತು ಈ ಕಟ್ಟಡಗಳನ್ನೇ ಉಗ್ರಾಣಗಳೆಂದು ಕರೆಯುತ್ತಾರೆ.
- ಇದು 169 ಅಡಿ ಉದ್ದ, 135 ಅಡಿ ಅಗಲವಾಗಿದೆ. ಇರಲಿ ಕೆಲವು ಒಂದೊಂದು ಸಾಲಿನಲ್ಲಿ 6 ರಂತೆ 3 ಸಾಲುಗಳಲ್ಲಿ 12 ಉಗ್ರಾಣಗಳಿವೆ.
- ಹರಪ್ಪ ಮತ್ತು ಮಹೆಂಜೋದಾರೋ ಈ ಎರಡು ಪ್ರಾಂತ್ಯಗಳಲ್ಲದೆ ಇತರೆ ಸ್ಥಳಗಳಾದ ಲೋಥಾಲ್, ಕಾಲಿ ಬಂಗನ್ ಸ್ಥಳಗಳಲ್ಲಿಯೂ ಉಗ್ರಾಣಗಳು ದೊರೆತಿವೆ.
ಸಿಂಧೂ ನಾಗರಿಕತೆಯ ಜನರ ಸಾಮಾಜಿಕ ಜೀವನ
ಸಿಂಧೂ ನಾಗರಿಕತೆಯ ಜನರು ಉತ್ತಮ ಸಾಮಾಜಿಕ ಜೀವನ ಪದ್ಧತಿಯನ್ನು ಹೊಂದಿದ್ದರು. ಅವರು ಸಂಘ ಜೀವಿಗಳಾಗಿದ್ದರು ಮತ್ತು ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದರು. ಅಲ್ಲದೆ ಅವರು ಸಂಸ್ಕೃತರಾಗಿದ್ದರು.ಈ ಜನರು ಸಾಮಾಜಿಕವಾಗಿ ಬಹಳ ಮುಂದುವರೆದಿದ್ದವರು ವ್ಯವಸಾಯ ಮತ್ತು ಪಶು ಪಾಲನೆ ಇವರ ಮುಖ್ಯ ಕಸುಬಾಗಿತ್ತು.
ಸಾಮಾಜಿಕ ವರ್ಗಗಳು
ಸಾಮಾಜಿಕ ವರ್ಗದಲ್ಲಿ ನಾಲ್ಕು ವರ್ಗಗಳು ಇವೆ ಅವುಗಳೆಂದರೆ ಕೃಷಿಕರು, ಪುರೋಹಿತರು, ವರ್ತಕರು ಮತ್ತು ಕುಶಲ ಕಾರ್ಮಿಕರು
- ಸಮಾಜದಲ್ಲಿ ಎಲ್ಲಾ ವರ್ಗದವರು ಒಂದೇ ಕಡೆ ವಾಸವಾಗಿರುವಂತೆ ವಿವಿಧ ವರ್ಗದ ಬಡಾವಣೆಗಳನ್ನು ಮಾಡಿಕೊಂಡಿದ್ದರು.
- ಕೃಷಿ ಕಾರ್ಮಿಕರ ಬಡಾವಣೆಗಳ ಬೇರೆ ಶ್ರೀಮಂತರು ಮತ್ತು ಆಡಳಿತಗಾರರ ಬಡಾವಣೆಗಳು ಬೇರೆ ಬೇರೆ ಇರುತ್ತಿದ್ದವು.
- ಈ ನಾಗರಿಕತೆಯಲ್ಲಿ ಯಾವುದೇ ಭೇದಭಾವವಿಲ್ಲದೆ ಕೂಡಿ ಬಾಳುತ್ತಿದ್ದರೂ.
- ಹರಪ್ಪ ಸಂಸ್ಕೃತಿಯ ಸಾಮಾಜಿಕ ವ್ಯವಸ್ಥೆಯಲ್ಲಿ ಪುರೋಹಿತರು ದೇಶವನ್ನು ಆಳುತ್ತಿದ್ದರು. ಕೃಷಿಕರು ಕೃಷಿಯನ್ನು ಅವಲಂಬಿಸಿದ್ದರು ವರ್ತಕರು ವ್ಯಾಪಾರ ಮತ್ತು ಕಾರ್ಮಿಕರು ಕೆಳದರ್ಜೆಯ ಕೆಲಸದಲ್ಲಿ ನಿರತರಾಗಿದ್ದರು.
ಆಹಾರ ಪದ್ಧತಿ
- ಈ ಸಂಸ್ಕೃತಿಯ ಜನರು ಸಸ್ಯಹಾರಿ ಮತ್ತು ಮಾಂಸಾಹಾರಿಗಳಾಗಿದ್ದರು.
- ಸಸ್ಯಹಾರಿಗಳು ಗೋಧಿ, ಬಾರ್ಲಿ, ಅಕ್ಕಿ, ಸಜ್ಜೆ, ಹಾಲು ಮತ್ತು ತರಕಾರಿಗಳನ್ನು ತಮ್ಮ ಆಹಾರವಾಗಿ ಬಳಸುತ್ತಿದ್ದರು.
- ಮಾಂಸಾರಿಗಳು ಧನ, ಕೋಳಿ, ಮೀನು, ಕುರಿ, ಹಂದಿ, ಮೊಲ ಮತ್ತು ಪಕ್ಷಿಗಳನ್ನು ತಿನ್ನುತ್ತಿದ್ದರು.
- ಹಣ್ಣು, ಖರ್ಜೂರ ಮತ್ತು ದಾಳಿಂಬೆಗಳನ್ನು ಸಹ ಸೇವಿಸುತ್ತಿದ್ದರು.
- ಇವರು ಆಹಾರವನ್ನು ಇಟ್ಟು ಮಾಡಿ ತಿನ್ನುವ ಪದ್ಧತಿಯನ್ನು ಚೆನ್ನಾಗಿ ಕಲಿತಿದ್ದರು.
- ಹಾಲು, ಮೊಸರು , ಬೆಣ್ಣೆ ಉಪಯೋಗದ ಆಧಾರದ ಮೇಲೆ ಸಿಂಧೂ ಬಯಲಿನ ನಾಗರಿಕರಿಗೆ ಹೈನುಗಾರಿಕೆ ಚೆನ್ನಾಗಿ ಗೊತ್ತಿರುವುದು ತಿಳಿದು ಬಂದಿದೆ
ಉಡುಪುಗಳು
ಹರಪ್ಪ ಸಂಸ್ಕೃತಿಯ ಅನೇಕ ಮೂರ್ತಿ ಶಿಲ್ಪಿಗಳು ಹಾಗೂ ವರ್ಣ ಚಿತ್ರಗಳು ಅವರು ಧರಿಸುತ್ತಿದ್ದ ವಸ್ತ್ರಗಳ ಮಾಹಿತಿಯನ್ನು ನೀಡುತ್ತದೆ.
ಇವರು ಹೆಚ್ಚಾಗಿ ಹತ್ತಿ ಮತ್ತು ಉಣ್ಣೆಯ ಬಟ್ಟೆಗಳನ್ನು ಧರಿಸುತ್ತಿದ್ದರು ಸ್ತ್ರೀ ಪುರುಷರ ಉಡುಪುಗಳಲ್ಲಿ ಅಷ್ಟೊಂದು ವ್ಯತ್ಯಾಸಗಳು ಕಾಣುವುದಿಲ್ಲ ಇವರು ಎರಡು ಮುಖ್ಯ ಉಡುಪುಗಳನ್ನು ಧರಿಸುತ್ತಿದ್ದರು. ಅವುಗಳೆಂದರೆ ಒಂದು ಅವರ ಸೊಂಟಕ್ಕೆ ಸುತ್ತಿಕೊಂಡ ವಸ್ತ್ರ, ಅಂದರೆ ಧೋತಿ ಅಥವಾ ಪಂಚೆಯನ್ನು ಹೊಲುತ್ತದೆ. ಇನ್ನೊಂದು ಶಾಲಿನಂತಹ ಹೊದಿಕೆಯನ್ನು ಎಡ ಭುಜದ ಮೇಲಿನಿಂದ ಬಲಗೈಯವರೆಗೂ ಹಾದು ಬರುವಂತೆ ಉಡುಪುಗಳನ್ನು ಹಾಕಿಕೊಳ್ಳುತ್ತಿದ್ದರು
- ಈ ನಾಗರಿಕತೆಯಲ್ಲಿ ಹೆಣ್ಣು ಮತ್ತು ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಆಭರಣಗಳನ್ನು ಧರಿಸುತ್ತಿದ್ದರು
- ಇವರು ತಮ್ಮ ಆಭರಣಗಳನ್ನು ಚಿನ್ನ, ಬೆಳ್ಳಿ, ತಾಮ್ರ, ದಂತ ಇನ್ನು ಹಲವು ಬೆಲೆ ಬಾಳುವ ವಸ್ತುಗಳಿಂದ ಆಭರಣಗಳನ್ನು ತಯಾರಿಸುತ್ತಿದ್ದರು.
- ಕಿವಿಯೋಲೆ, ಕೈ ಬೆರಳಿನ ಉಂಗುರಗಳು ಮತ್ತು ಖಡಗ ಮುಂತಾದ ಆಭರಣಗಳನ್ನು ಧರಿಸುತ್ತಿದ್ದರು.
- ಬಡ ಜನರು ಸಾಮಾನ್ಯವಾಗಿ ಕಪ್ಪೇ ಚಿಪ್ಪಿನಿಂದ ಮಾಡಿದ ಹಾಗೂ ಕಂಚು ಹಿತ್ತಾಳೆಯ ಆಭರಣಗಳನ್ನು ಧರಿಸುತ್ತಿದ್ದರು
ಅಲಂಕಾರ ವ್ಯವಸ್ಥೆ
- ಸಿಂಧು ಜನರು ಅಲಂಕಾರ ಪ್ರಿಯರಾಗಿದ್ದರು
- ಸಿಂಧೂ ಜನರು ಸೌಂದರ್ಯ ವರ್ಧಕ ಗಳನ್ನು ಬಳಸುತ್ತಿದ್ದರು
- ಸಿಂಧೂ ಜನರು ತುಟಿಗೆ ಬಣ್ಣ, ಕಣ್ಣಿಗೆ ಕಾಡಿಗೆ, ತಲೆ ಕೂದಲಿಗೆ ಪರಿಮಳದ ತೈಲವನ್ನು ಉಪಯೋಗಿಸುತ್ತಿದ್ದರು.
- ಸಿಂಧೂ ಬಯಲಿನ ಜನರು ಕೇಶಾಲಂಕಾರ ಸಂದರ್ಭದಲ್ಲಿ ಕಂಚಿನಿಂದ ಮತ್ತು ತಾಮ್ರದಿಂದ ತಯಾರಿಸಿದ ಕನ್ನಡಿಗಳನ್ನು ಬಳಸುತ್ತಿದ್ದರು ಮತ್ತು ಮೀಸೆಯನ್ನು ಬೋಳಿಸುತ್ತಿದ್ದರು.
ಗೃಹ ಉಪಯೋಗಕ್ಕೆ ಬಳಸುವ ವಸ್ತುಗಳು
ಈ ನಾಗರಿಕತೆಯಲ್ಲಿ ಜನರು ಆ ಕಾಲದಲ್ಲಿ ಇತರ ನಾಗರಿಕತೆಯ ಜನರು ಹೊಂದಿದ್ದ ಸುಧಾರಿತ ಜೀವನ ಸೌಕರ್ಯಗಳನ್ನು ಪಡೆದಿದ್ದರು.
- ಶ್ರೀಮಂತರ ಮನೆಯಲ್ಲಿ ಕುರ್ಚಿ, ಸುಖಾಸನ, ಕಾಲ್ಮಣಿ, ಮಂಚ, ಮೇಜು ಮುಂತಾದ ಪೀಠೋಪಕರಣ ಇದ್ದವು.
- ಇವರು ಶೃಂಗಾರ ಸಾಧನಗಳನ್ನು ಇಡಲು ಲೋಹದ, ಹಸ್ತಿದಂತ ಮಣ್ಣಿನ ಹಾಗೂ ಶಿಲೆಯ ವಸ್ತುಗಳನ್ನು ಮನೆಯ ಉಪಯೋಗಕ್ಕೆ ಬಳಸುತ್ತಿದ್ದರು.
- ಹೆಚ್ಚಾಗಿ ಮಣ್ಣಿನಿಂದ ಮಾಡಿದ ಪಾತ್ರೆಗಳನ್ನು ಬಳಸುತ್ತಿದ್ದರು.
ಮನೋ ರಂಜನೆ / ಕ್ರೀಡೆಗಳು
- ಇವರು ಅನೇಕ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರು.
- ಪಗಡೆ ಆಟ, ಗೂಳಿ ಕಾಳಗ, ಬೇಟೆಗಾರಿಕೆ, ಪಕ್ಷಿ ಕಾಳಗ, ಚದುರಂಗದಾಟ ಮುಂತಾದವು ಈ ಜನರ ಮನೋರಂಜನೆಯ ಚಟುವಟಿಕೆಗಳಾಗಿವೆ
- ಇವರ ಆಟಿಕೆಗಳು ಗುಂಡು, ಚೆಂಡು, ಜೇಡಿಮಣ್ಣಿನಿಂದ ತಯಾರಿಸಿದ ಆಟಿಕೆಗಳಿಂದ ಆಟವಾಡುತ್ತಿದ್ದರು.
- ಪಗಡೆ ಆಟವು ಸಿಂಧೂ ನಾಗರಿಕತೆಯ ಜನರ ನೆಚ್ಚಿನ ಆಟವಾಗಿತ್ತು.
ಧಾರ್ಮಿಕ ಜೀವನ
- ಈ ನಾಗರಿಕತೆಯ ಜನರು ಧಾರ್ಮಿಕ ವಿಷಯದಲ್ಲಿ ತುಂಬಾ ನಂಬಿಕೆ ಉಳ್ಳವರಾಗಿದ್ದರು.
- ಧರ್ಮವೂ ತಮಗೆ ಶಾಶ್ವತ ಆನಂದವನ್ನು ಕೊಡುತ್ತದೆ ಅದರೊಂದಿಗೆ ಸಮಾಧಾನಕರವಾದ ವೃತ್ತಿಯನ್ನು ಬೆಳೆಸಿಕೊಳ್ಳುವುದೇ ಧರ್ಮವೆಂದು ಹೇಳಲಾಗುತ್ತಿದ್ದರು.
- ಸಿಂಧೂ ಬಯಲಿನ ನಾಗರಿಕತೆಯ ಜನಾಂಗವು ತಮ್ಮದೇ ಆದ ಕಲ್ಪನಾ ಭಾವನೆಗಳ ಮೂಲಕ ತಮ್ಮ ಬದುಕಿನಲ್ಲಿ ಬರುವಂತಹ ತೊಂದರೆಗಳನ್ನು ಪರಿಹರಿಸಿಕೊಳ್ಳುತ್ತಿದ್ದರು.
- ತಮ್ಮ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ನಡವಳಿಕೆಯನ್ನು ರೂಪಿಸಿದ್ದರು.
- ಸಿಂಧೂ ಜನರು ಅನೇಕ ದೇವರ ಆರಾಧನೆಯನ್ನು ಮಾಡುತ್ತಿದ್ದರು.
- ಇವರು ಎಲ್ಲಾ ದೇವತೆಗಳನ್ನು ಆರಾಧಿಸುತ್ತಿದ್ದರು ಪ್ರಕೃತಿ ಹಾಗೂ ಇನ್ನಿತರ ಶಕ್ತಿಗಳನ್ನು ಅವರು ಆರಾಧಿಸುತ್ತಿದ್ದರು.
ಸಿಂಧೂ ನಾಗರಿಕತೆಯ ಪ್ರಮುಖ ದೇವತೆಗಳು
- ಪಶುಪತಿ
ಮಹೆಂಜೋದಾರದಲ್ಲಿ ಒಂದು ವಿಗ್ರಹವು ಶಿವನ ಸುತ್ತಲೂ ಅನೇಕ ಖಡ್ಗ ಮೃಗಗಳ ಮಧ್ಯದಲ್ಲಿ ತೋರಿಸಲ್ಪಟ್ಟ ಅನೇಕ ಪಶುಗಳ ಮಧ್ಯದಲ್ಲಿ ಶಿವನು ಇರುವುದರಿಂದ ಆತನನ್ನು” ಪಶುಪತಿ ” ಎನ್ನುವ ಹೆಸರಿನಿಂದ ಪೂಜಿಸಲಾಗುತ್ತಿದೆ - ಮಾತೃ ದೇವತೆ
- ಮಾತೃದೇವತೆ ಸಿಂಧೂ ಜನರ ಪ್ರಮುಖ ದೇವತೆ
- ಸಿಂಧೂ ನಾಗರಿಕತೆಯಲ್ಲಿ ಬಹಳಷ್ಟು ಮಣ್ಣಿನ ಹೆಣ್ಣುಮೂರ್ತಿಗಳು ಪತ್ತೆಯಾಗಿವೆ
- ಸ್ತ್ರೀ ಜೀವನದ ಮೂಲ ಶಕ್ತಿ ಎಂದು ಭಾವಿಸಿ ಪೂಜಿಸುತ್ತಿದ್ದರು.
- ಕೆಲವು ಮೂರ್ತಿಗಳು ದೀಪಾಲಂಕೃತ ವಾಗಿದ್ದು ಅದನ್ನು ಇತಿಹಾಸಕಾರರು ದೀಪಲಕ್ಷ್ಮಿ ಎಂದು ಗುರುತಿಸಿದರು.
- ಮಾತೃದೇವತೆ ಇಂದಿನ ದುರ್ಗ, ಕಾಳಿ ಮತ್ತು ಲಕ್ಷ್ಮಿ ಆರಾಧನೆಯ ಮೂಲ ಎಂದು ಹೇಳುತ್ತಾರೆ.
3.ಪ್ರಾಣಿಗಳ ಪೂಜೆ
- ಸಿಂಧೂ ಜನರು ಅನೇಕ ಪ್ರಾಣಿಗಳನ್ನು ಪೂಜಿಸುತ್ತಿದ್ದರು.
- ಹುಲಿ ಜಿಂಕೆ ಮೊಸಳೆ ಖಡ್ಗಮೃಗ ಇವುಗಳನ್ನು ಅವರು ಪೂಜಿಸುತ್ತಿದ್ದರು
- ಇವರು ಕಲ್ಲು ಮತ್ತು ಮರಗಳ ಪೂಜೆಯನ್ನು ಮಾಡುತ್ತಿದ್ದರು.
- ಇವರು ಹಾವುಗಳನ್ನು ಸಹ ಪೂಜೆ ಮಾಡುತ್ತಿದ್ದರು
- ಇವರು ಸೂರ್ಯನನ್ನು ಸಹ ಪೂಜೆ ಮಾಡುತ್ತಿದ್ದರು.
ಶವ ಸಂಸ್ಕಾರ ಪದ್ಧತಿ
- ಈ ಸಂಸ್ಕೃತಿಯಲ್ಲಿ ಜನರು ಮೂರು ವಿಧದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು ಅವುಗಳೆಂದರೆ.
- ಸತ್ತವರ ದೇಹಗಳ ಜೊತೆಯಲ್ಲಿ ಆಹಾರ ಪದಾರ್ಥಗಳನ್ನು ಇಟ್ಟು ಹೋಳುತ್ತಿದ್ದರು.
- ಸತ್ತವರ ದೇಹವನ್ನು ಸಂಪೂರ್ಣವಾಗಿ ಸುಟ್ಟುವ ಪದ್ಧತಿ ಸಹ ಇತ್ತು.
- ಸತ್ತವರ ಶರೀರವನ್ನು ನಿರ್ಜನ ಪ್ರದೇಶದಲ್ಲಿಟ್ಟು ಪ್ರಾಣಿ ಪಕ್ಷಿಗಳು ತಿನ್ನಲು ಬಿಡುತ್ತಿದ್ದರು
ಮೂಡನಂಬಿಕೆಗಳು
ಈ ನಾಗರಿಕತೆ ಜನರು ಬಹಳ ಮೂಢನಂಬಿಕೆಯನ್ನು ನಂಬುತ್ತಿದ್ದರು.
- ಇವರ ಅನೇಕ ರೀತಿಯ ತಾಯಿತಗಳನ್ನು ಕಟ್ಟಿಕೊಳ್ಳುತ್ತಿದ್ದರು.
- ಇದರಿಂದ ತಮಗೆ ಆಗುವ ಅಪಾಯಗಳನ್ನು ತಪ್ಪಿಸಿಕೊಳ್ಳಲು ತಾಯಿತವನ್ನು ಕಟ್ಟಿಕೊಳ್ಳುತ್ತಿದ್ದರು.
- ಕಮಲದ ಚಿನ್ಹೆಯನ್ನು ಹಿಂದೂ ಜನರು ಒಂದು ಅದೃಷ್ಟ ಚಿಹ್ನೆಯಾಗಿ ಬಳಸುತ್ತಿದ್ದರು.
- ಬೆಕ್ಕು ರಸ್ತೆಗೆ ಅಡ್ಡ ಬಂದರೆ ಅದೇನೋ ಕೆಲಸ ಆಗುವುದಿಲ್ಲ ಎಂದು ನಂಬುತ್ತಿದ್ದರು.
- ಕೆಲವೊಮ್ಮೆ ಕಾಗೆಗಳು ಹೆಚ್ಚು ಕೂಗುತ್ತಿದ್ದರೆ ಮನೆಗೆ ಸಂಬಂಧಿಕರು ಬರುವ ಸೂಚನೆಯನ್ನು ನಂಬುತ್ತಿದ್ದರು.
- ಅಲ್ಲದೆ ಭೂತ ಪಿಶಾಚಿಗಳಲ್ಲಿ ಸಹ ನಂಬಿಕೆಯನ್ನು ಹೊಂದಿದ್ದರು.
ಆರ್ಥಿಕ ಜೀವನ
ನಾಗರಿಕತೆಯಲ್ಲಿ ಪ್ರಮುಖವಾದ ಸಿಂಧೂ ನಾಗರಿಕತೆಯ ಜನರು ಆರ್ಥಿಕವಾಗಿ ಮುಂದುವರೆದವರು, ವಿವಿಧ ಸಮಕಾಲಿನ ನಾಗರಿಕತೆಗಳ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದರು, ಅಲ್ಲದೆ ಅವರ ಜೀವನವು ಶ್ರೀಮಂತಿಕೆ ಜೀವನವಾಗಿತ್ತು. ವ್ಯವಸಾಯ, ಉದ್ದಿಮೆ, ವ್ಯಾಪಾರ ರಫ್ತು ಮತ್ತು ಆಮದುಗಳನ್ನು ಮಾಡುತ್ತಿದ್ದರು.
ವ್ಯಾಪಾರ
ಸಿಂಧೂ ನಾಗರಿಕತೆಯಲ್ಲಿ ವ್ಯಾಪಾರವು ಉತ್ತಮ ಮಟ್ಟದಲ್ಲಿತೆಂದು ದೊರೆತ ದಾಖಲೆಗಳಿಂದ ತಿಳಿಯಬಹುದು.
ಅವರು ವ್ಯವಸ್ಥಿತವಾಗಿ ಸಾರಿಗೆ ಸಂಪರ್ಕ ವ್ಯವಸ್ಥೆ ಹೊಂದಿದ್ದರಿಂದ ಜನರಿಗೆ ಅವಶ್ಯಕ ವಸ್ತುಗಳನ್ನು ಸಕಾಲದಲ್ಲಿ ಸರಬರಾಜು ಮಾಡಲಾಗುತ್ತಿತ್ತು. ನಮಗೆ ಕಂಡುಬರುವ ಉಗ್ರಾಣಗಳು, ಮುದ್ರೆಗಳು ಏಕ ರೀತಿಯ ತೂಕ ಮತ್ತು ಅಳತೆ ಸಿಂಧೂ ನಾಗರಿಕತೆಯ ಆಂತರಿಕ ವ್ಯಾಪಾರ ನಡೆಯುತ್ತಿತ್ತು, ಮತ್ತು ವ್ಯಾಪಾರ ವಹಿವಾಟುಗಳನ್ನು ವಸ್ತು ವಿನಿಮಯ ರೂಪದಲ್ಲಿ ಮಾಡುತ್ತಿದ್ದರು. ಲೋಥಲ್ ನಲ್ಲಿ ದೊರೆತಿರುವ ಹಡಗುಕಟ್ಟೆ ಇವರ ದೇಶಿಯ ಮತ್ತು ವಿದೇಶಿಯ ವ್ಯಾಪಾರದ ಮೇಲೆ ಬೆಳಕು ಚೆಲ್ಲುತ್ತದೆ.
ವಿದೇಶಿ ವ್ಯಾಪಾರ
ಈ ನಾಗರಿಕತೆಯ ಪ್ರಮುಖ ನಗರಗಳಲ್ಲಿ ಒಂದಾದ ಹರಪ್ಪ ನಗರದಲ್ಲಿ ಮುದ್ರೆಗಳು ಪಶ್ಚಿಮ ಏಷ್ಯಾದ ಅನೇಕ ನೆಲೆಗಳಲ್ಲಿ ಸಿಕ್ಕಿರುವುದರಿಂದ ಸಿಂದೂ ಜನರು ವಿದೇಶಿ ವ್ಯಾಪಾರ ಹೊಂದಿದ್ದರು ಎಂದು ತಿಳಿಸುತ್ತದೆ. ಲೋಥಾಲ್ ಮತ್ತು ಬಾಲ್ಕೋಟ್ ನಗರಗಳು ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದ್ದವು. ಇಲ್ಲಿಯ ಮೆಸಪಟೋಮಿಯ ಹಾಗೂ ಇನ್ನಿತರ ಪಶ್ಚಿಮ ಏಷ್ಯಾ ದೇಶಗಳ ಜೊತೆ ವ್ಯಾಪಾರ ವಹಿವಾಟನ್ನು ಮಾಡಲಾಗುತ್ತಿತ್ತು. ದೇಶಿಯ ಉತ್ಪಾದನೆ ವಸ್ತುಗಳನ್ನು ರಫ್ತು ಮಾಡಿ ವಿದೇಶಗಳಿಂದ ಚಿನ್ನ ಮತ್ತು ಬೆಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದರು.
ಕೈಗಾರಿಕೆಗಳು
ಸಿಂಧೂ ಬಯಲಿನ ನಾಗರಿಕತೆಯಲ್ಲಿ ಕೃಷಿ ಮತ್ತು ಪಶು ಸಂಗೋಪನೆ ಅಲ್ಲದೆ ಕೈಗಾರಿಕೆಯಲ್ಲೂ ಸಹ ಅವರು ಮುಂದುವರೆದಿದ್ದರೂ.
ಗೃಹ ಉಪಯೋಗಿ ವಸ್ತುಗಳು : ಈ ನಾಗರಿಕತೆಯಲ್ಲಿ ಗೃಹ ಉಪಯೋಗಿ ವಸ್ತುಗಳು ಅತ್ಯಂತ ನವೀನತೆಯಿಂದ ಕೂಡಿರುತ್ತವೆ. ಮನೆಗೆ ಬೇಕಾದ ವಸ್ತುಗಳನ್ನು ಮಣ್ಣಿನಿಂದ, ಕಲ್ಲು ,ಚಿಪ್ಪು, ಪಿಂಗಾಣಿ, ದಂತ ಮತ್ತು ಲೋಹಗಳಿಂದ ತಯಾರಿಸುತ್ತಿದ್ದರು. ಜೇಡಿಮಣ್ಣಿನಿಂದ ಮಡಿಕೆಗಳು ತರಿಸುತ್ತಿದ್ದರು. ಅವುಗಳೆಂದರೆ ಬಾಣಲೆಗಳು, ತಟ್ಟೆ, ಲೋಟ, ಜಾರುಗಳ ವಸ್ತುಗಳನ್ನು ಸಂಗ್ರಹಿಸಿಡಲು ದೊಡ್ಡ ಬಡಿಗೆಗಳನ್ನು ತಯಾರು ಮಾಡುತ್ತಿದ್ದರು. ಕಂಚು ಮತ್ತು ತಾಮರದಿಂದ ಸೂಜಿ ಕೊಡಲಿ ಚಾಕು ಮೀನು ಗಾಳ ಗಳನ್ನು ತಯಾರಿಸುತ್ತಿದ್ದರು.
ವೈಜ್ಞಾನಿಕ ಜ್ಞಾನ
ಸಿಂಧೂ ಬಯಲಿನ ನಾಗರಿಕತೆಯ ಜನರಿಗೆ ವೈಜ್ಞಾನಿಕ ಮನೋಭಾವನೆ ಇತ್ತೆಂದು ಕೆಲವು ಅವಶೇಷಗಳಿಂದ ತಿಳಿದು ಬಂದಿದೆ.ಹರಪ್ಪ ಸಂಸ್ಕೃತಿಯ ಜನರಿಗೆ ಗಣಿತಶಾಸ್ತ್ರದ ಬಗ್ಗೆ ತಿಳಿದಿತ್ತು. ಇವರು ಸಂಖ್ಯೆಗಳನ್ನು ಕಲಿತಿದ್ದರು.
ಪ್ರಪಂಚದಲ್ಲಿ ಪ್ರಥಮ ಬಾರಿಗೆ ಸಮುದ್ರದ ಅಲೆಗಳ ಉಪಯೋಗ ತಿಳಿದಿದ್ದು ಮತ್ತು ಅಲೆಗಳಿಂದ ಹಡಗುಗಳನ್ನು ಚಲಿಸಿಕೊಂಡು ಲೋಥಾಲ್ ಬಂದರಿಗೆ ಬರುವಂತಹ ವ್ಯವಸ್ಥೆ ಮಾಡಿರುವುದು ಅವರ ವೈಜ್ಞಾನಿಕ ಜ್ಞಾನವನ್ನು ತಿಳಿಸುತ್ತದೆ. ಮತ್ತು ಗಿಡಮೂಲಿಕೆಗಳಿಂದ ಔಷಧಿಯನ್ನು ತಯಾರಿಸುತ್ತಿದ್ದರು.
ಲೋಹಜ್ಞಾನ
ಸಿಂಧೂ ನಾಗರಿಕತೆಯ ಜನರು ಪ್ರಮುಖವಾಗಿ ಬಳಸುತ್ತಿದ್ದ ಲೋಹವೆಂದರೆ ಅದು ತಾಮ್ರವಾಗಿದೆ. ತಾಮ್ರದಿಂದ ಕ್ಷೌರ ಕತ್ತಿಗಳು, ಚಾಕು ಮತ್ತು ಬಾಣಗಳನ್ನು ತಯಾರಿಸುತ್ತಿದ್ದರು. ಹಾಗೆಯೇ ಆರ್ಸೆನಿಕ್ ಮತ್ತು ನಿಕ್ಕಾಲ್ ಇತ್ಯಾದಿ ಲೋಹಗಳ ಪರಿಚಯ ಜನರಿಗೆ ಇತ್ತೆಂದು ತಿಳಿಯಬಹುದು.
ಮಡಿಕೆಗಳು
ಸಿಂಧೂ ಬಯಲಿನ ನಾಗರಿಕತೆಯಲ್ಲಿ ವಿವಿಧ ಆಕಾರದ ಮಡಿಕೆಗಳು ದೊರೆತಿವೆ. ಸ್ಥಳೀಯವಾಗಿ ದೊರಕುವ ಜೇಡಿಮಣ್ಣಿನ ಜೊತೆಗೆ ಸುಣ್ಣ ಮತ್ತಿತರ ವಸ್ತುಗಳನ್ನು ಸೇರಿಸಿ ಕುಂಬಾರ ಚಕ್ರದಿಂದ ಮಡಿಕೆ ತಯಾರಿಸಿ ಬೆಂಕಿಯ ಆವುಗೆಯ ಗೂಡಿನಲ್ಲಿ ಸುಡುತ್ತಿದ್ದರು. ಮಡಿಕೆ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದಿಂದ ರೇಖಾಚಿತ್ರವನ್ನು ರಚಿಸುತ್ತಿದ್ದರು ಮತ್ತು ಸಾಗು ಪ್ರಾಣಿಗಳನ್ನಿಡಲು ಪಂಜರಗಳನ್ನು ತಯಾರಿಸುತ್ತಿದ್ದರು.
ದಂತ ಮತ್ತು ಸಮುದ್ರ ಚಿಪ್ಪುಗಳ ಕುಶಲ ವಸ್ತುಗಳು
ಈ ನಾಗರಿಕತೆಯ ಜನರು ಪ್ರಾಣಿಗಳ ದಂತಗಳಿಂದ ಬಾಚಣಿಕೆಗಳನ್ನು ಬಳಸುತ್ತಿದ್ದರು ಮತ್ತು ಮನುಷ್ಯನ ಪ್ರತಿ ಕೃತಿಗಳನ್ನು ದಂತದಿಂದ ಕೆತ್ತನೆ ಮಾಡುತ್ತಿದ್ದರು.
ಮತ್ತೊಂದು ಕುಶಲ ಕಲೆಯೆಂದರೆ ಕಪ್ಪು ಚಿಪ್ಪುಗಳನ್ನು ಅಳವಡಿಸಿ ಆಭರಣಗಳನ್ನು ತಯಾರಿಸುತ್ತಿದ್ದರು.
ಕತ್ತರಿ ಮತ್ತು ಸಾಣಿ
ಲೋಹ ಮತ್ತು ಶಿಲೆಯನ್ನು ಬೇಕಾದ ಆಕಾರದಲ್ಲಿ ಕತ್ತರಿಸುವ ಮತ್ತು ಆಕಾರಕ್ಕೆ ಸಾಣಿ ಹಿಡಿಯುವ ಕುಶಲ ಕಲೆ ತಿಳಿದಿದ್ದರೂ. ಸಾಬೂನು, ಕಲ್ಲಿನ ಮುದ್ರೆಗಳು, ಆಭರಣಗಳು ಮತ್ತು ತೂಕದ ಬಟ್ಟುಗಳನ್ನು ಈ ವಿಧಾನಗಳಿಂದ ತಯಾರಿಸುತ್ತಿದ್ದರು.
ಯುದ್ಧೋಪಕರಣಗಳು
ಸಿಂಧೂ ನಾಗರಿಕತೆಯ ಜನರು ಶಾಂತಿ ಪ್ರಿಯರು, ಅವರ ನಾಗರಿಕತೆಯಲ್ಲಿ ಅನೇಕ ಅವಶೇಷಗಳು ದೊರೆತಿವೆ. ಕಂಚಿನ 40 cm ಉದ್ದದ ಗರಗಸ 45 cm ತಾಮ್ರದ ಎರಡು ಕತ್ತಿಗಳು ಸಿಕ್ಕಿವೆ. ಮೋನೆಯಿರುವ ಭರ್ಚಿ, ಚಾಕು, ಬಾಣ ಮುಂತಾದವುಗಳನ್ನು ಉಪಯೋಗಿಸುತ್ತಿದ್ದರು, ಇವರು ಖುಷಿ ಮತ್ತು ವ್ಯಾಪಾರದಲ್ಲಿ ಹೆಚ್ಚು ತಮ್ಮ ಜೀವನ ರಕ್ಷಿಸುವುದಕ್ಕೋಸ್ಕರ ಮೇಲಿನ ಸಲಕರಣೆಗಳನ್ನು ಹೊಂದಿದ್ದಾರೆ ಹೊರತು ಬೇರೆಯವರ ಮೇಲೆ ಆಕ್ರಮಣ ನಡೆಸಲು ಅಲ್ಲಾ ಎಂದು ಇತಿಹಾಸಕಾರ ಅಭಿಪ್ರಾಯ.
ಸಿಂಧೂ ನಾಗರಿಕತೆಯ ಪತನಕ್ಕೆ ಕಾರಣಗಳು
- ನದಿಗಳು ತಮ್ಮ ಹರಿವಿನ ದಿಕ್ಕನು ಬದಲಾಯಿಸಿದ್ದರಿಂದ ನಗರಗಳು ಹಾಳಾಗಿರಬಹುದು
- ನದಿಗಳು ನಗರಗಳಿಂದ ದೂರ ಹರಿದು ಭೂಮಿಯನ್ನು ಹೊರಡು ಮಾಡಿರಬಹುದು
- ಈ ನಾಗರಿಕತೆಯಲ್ಲಿ ಸತತ ಪ್ರವಾಹಗಳು ಮತ್ತು ಮಣ್ಣಿನ ಸವೆತಗಳು ಜೀವನದ ವಿನಾಶಕ್ಕೆ ಕಾರಣವಾಗಿರಬಹುದು
- ಕೃಷಿ ಭೂಮಿಯು ಅತಿಯಾದ ಬಳಕೆ ಮಾಡಿರುವುದರಿಂದ ಭೂಮಿಯು ತನ್ನ ಫಲವತ್ತತೆಯನ್ನು ಕಳೆದುಕೊಂಡಿರಬಹುದು
- ಸಾಂಕ್ರಾಮಿಕ ರೋಗಗಳು ಹರಡುವುಕೆಯಿಂದ ಅಲ್ಲಿನ ಜನಸಂಖ್ಯೆ ನಾಶವಾಗಿರಬಹುದು
- ಮಳೆಯ ಕೊರತೆಯಿಂದ ಅಲ್ಲಿನ ಭೂಪ್ರದೇಶ ಬರಡು ಭೂಮಿಯಾಗಿರಬಹುದು
- ಸಿಂಧೂ ನಾಗರಿಕತೆಯ ಜನರ ಮೇಲೆ ಪದೇ ಪದೇ ಮಂಗೋಲಿಯನ್ನರ ದಾಳಿಗಳಿಂದ ಅಲ್ಲಿನ ಜನರು ನಶಿಸಿಹೋಗಿರಬಹುದು.
- ದೊಡ್ಡ ಪ್ರಮಾಣದ ಅರಣ್ಯ ನಾಶ ಮತ್ತು ಪದೇ ಪದೇ ಪ್ರವಾಹಗಳು ಆಗುತ್ತಿದರಿಂದ ಸಿಂಧೂ ನಾಗರಿಕತೆ ನಾಶವಾಗಿರಬಹುದು
- ಸಿಂಧೂ ನಾಗರಿಕತೆಯ ಅವನತಿಗೆ ಇವೆಲ್ಲ ಕಾರಣಗಳು ಹಂತ ಹಂತವಾಗಿ ನಡೆದಿರುವುದರಿಂದ ಅಲ್ಲಿನ ನಾಗರಿಕತೆ ನಾಶವಾಗಿರಬಹುದು ಎಂದು ಅಭಿಪ್ರಾಯವಾಗಿದೆ.
ತಾಳಿಕೋಟೆ ಕದನ ಅಥವಾ ರಕ್ಕಸ ತಂಗಡಿ ಕದನ 1565ರಲ್ಲಿ
ದಯಾರಾಮ್ ಸಾಹ್ನಿ 1921ರಲ್ಲಿ ಹರಪ್ಪದಲ್ಲಿ ಕಂಡುಹಿಡಿದರು
ಪಾಕಿಸ್ತಾನ ಮತ್ತು ಭಾರತದ ಭಾಗಗಳಲ್ಲಿ ಸಿಂಧೂ ನದಿಯು ಹರಿಯುತ್ತದೆ.
ಹರಪ್ಪ ಮತ್ತು ಮಹೆಂಜೋದಾರೊ ಸಿಂಧೂ ನಾಗರಿಕತೆಯ ಪ್ರಮುಖ ನಗರಗಳು.
ಸುಮಾರು 3300 BCE ರಿಂದ 1300 BCE.
ಹರಪ್ಪ
ಕಂಚಿನಯುಗ
LATEST POST
ಆದಿಕವಿ ಪಂಪ
ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು
ಭಾರತದ 7 ಅದ್ಭುತಗಳು 2025
ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು
………………………………………………………………….

1 thought on “ಸಿಂಧೂ ಬಯಲಿನ ನಾಗರಿಕತೆ”