ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ 

ಸ್ಥಾಪನೆಯ ಬಗ್ಗೆ ವಿದ್ವಾಂಸರಲ್ಲಿ ಅನೇಕಅಭಿಪ್ರಾಯಗಳು ಇವೆ.


ಸಂಗಮನ ಐವರು ಮಕ್ಕಳದ ಹರಿಹರ, ಬುಕ್ಕ ,ಕಂಪಣ್ಣಾಯ,ಮಾರಪ್ಪ ಮತ್ತು ಮುದ್ದಪ್ಪ ಎಂಬುವರು ಈ ಸಾಮ್ರಾಜ್ಯವನ್ನು ಸ್ಥಾಪಿಸಿದರೆಂದು ಅಭಿಪ್ರಾಯ . ಆದರೆ ರಾಬರ್ಟ್ ಸೀವೆಲ್ ನ ಅಭಿಪ್ರಾಯ ಏನಿದೆ ಎಂದರೆ ಓರoಗಲ್ಲಿನ ಪ್ರತಾಪ ರುದ್ರದೇವನ ಆಸ್ಥಾನದಲ್ಲಿದ್ದ ಹರಿಹರ ಮತ್ತು ಬುಕ್ಕರಾಯ ಎಂಬ ಸಹೋದರರು ಮುಸ್ಲಿಮರ ದಾಳಿಯಿಂದ ವಾರಂಗಲ್ ನಾಶವಾದ ಮೇಲೆ ಆನೆಗೊಂದಿಯ ಕಪಿಲ ರಾಯನ ಆಸ್ಥಾನದಲ್ಲಿ ಉನ್ನತ ಅಧಿಕಾರವನ್ನು ಪಡೆದರು. ಮಧ್ಯ ದೆಹಲಿಯಿಂದ ಆನೆಗೊಂದಿಗೂ ಬಂದ ಮಹಮ್ಮದ್ ಬಿನ್ ತುಘಲಕ್ ಪ್ರತಿನಿಧಿ ತನ್ನ ಆಳ್ವಿಕೆಯಲ್ಲಿ ಯಶಸ್ಸು ಕಾಣದ ಕಾರಣವಾಗಿ ಹರಿಹರನನ್ನು ರಾಜನನ್ನಾಗಿ ಮತ್ತು ಬುಕ್ಕನನ್ನು ಮಂತ್ರಿ ಆಗಿ ಮಾಡಿ ಹಿಂದಿರುಗಿದನು. ಈ ಸಹೋದರರೇ ಮುಂದೆ ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದರು

ವಿಜಯನಗರ ಸಾಮ್ರಾಜ್ಯ ಆಳ್ವಿಕೆ

ವಿಜಯನಗರ ಸಾಮ್ರಾಜ್ಯದ ಇಬ್ಬರು ಸಹೋದರರ ಮೂಲದ ಎರಡು ಸಿದ್ಧಾಂತಗಳು

    • ಕನ್ನಡ ಮೂಲ :

ಕನ್ನಡ ಮೂಲದ ಪ್ರಕಾರ ವಿಜಯನಗರದ ಸ್ಥಾಪಕರು ಬೇರೆ ಕಡೆಯಿಂದ ಬಂದವರಲ್ಲ. ಅವರು ನಮ್ಮ ಕನ್ನಡ ನಾಡಿನವರೇ ಎಂಬುದು ಫಾದರ್ ಹೇರಾಸ್, ಬಿ ಎ ಸಾಲೆತ್ತೂರು , ಆಂಧ್ರ ಪ್ರೊಫೆಸರ್ K ಸತ್ಯನಾರಾಯಣ ಮತ್ತು PB ದೇಸಾಯಿ ಅವರ ವಾದವಾಗಿದೆ. ಮುಸ್ಲಿಂ ವಿದ್ವಾಂಸ ಫರಿಸ್ತ ವಿಜಯನಗರ ಅರಸರನ್ನು ಕರ್ನಾಟಕ್ ರಾಯರ್ ಎಂದು ಸಂಬೋಧಿಸಿದರು ಎಂದು PB ದೇಸಾಯಿ ಅವರು ವಿಜಯನಗರ ಮೂಲವನ್ನು ಪತ್ತೆಚ್ಚಿದ್ದಾರೆ.

ಶಾಸನಗಳು ದೊರಕಿರುವುದು :

        • ವಿಜಯನಗರ ಅರಸರುಗಳು ಹೊರಡಿಸಿರುವ ಶಾಸನಗಳಲ್ಲಿ ಸಿಕ್ಕಿರುವ 5000 ಶಾಸನಗಳಲ್ಲಿ ಅರ್ಧದಷ್ಟು ಕನ್ನಡದಲ್ಲಿ ಇವೆ ಎಂದು ತಿಳಿದುಬಂದಿದೆ. ತಮಿಳುನಾಡು ಆಂಧ್ರ ಪ್ರದೇಶದಲ್ಲಿ ದೊರಕಿರುವ ಶಾಸನಗಳು ಕೂಡ ಕನ್ನಡದಲ್ಲಿ ಇರುವುದು ಕಂಡುಬಂದಿದೆ

        • ಕರ್ನಾಟಕದ ಬೇಲೂರಿನ ಕೇಶವ ದೇವಸ್ಥಾನ ಮತ್ತು ಹಂಪಿಯಲ್ಲಿರುವ ವಿರೂಪಾಕ್ಷ ದೇವಸ್ಥಾನ ಸಂಗಮ ಸಹೋದರರ ಆರಾಧ್ಯ ದೈವ ಆಗಿರುವುದು ಕೂಡ ಕನ್ನಡ ಮೂಲವನ್ನು ಎತ್ತಿ ಹಿಡಿಯುತ್ತದೆ

        • ಜಾoಬವತೀ ಕಲ್ಯಾಣ ಎಂಬ ಸಂಸ್ಕೃತ ನಾಟಕದಲ್ಲಿ ಶ್ರೀ ಕೃಷ್ಣದೇವರಾಯನನ್ನು ಕರ್ನಾಟಕ ರಾಜ್ಯ ರಮಾ ರಮಣ ಎಂದು ಕರೆಯಲಾಗಿದೆ

        • ಶ್ರೀ ವಿರುಪಾಕ್ಷ ಇವರ ರಾಜ ಮುದ್ರೆ ಮತ್ತು ವರಾಹ ಸಾಮ್ರಾಜ್ಯದ ರಾಜ ಲಾಂಛನವಾಗಿದೆ.

ತೆಲುಗು ಮೂಲ :

ಕನ್ನಡ ಮೂಲದ ಪ್ರಕಾರ ವಿಜಯನಗರದ ಸ್ಥಾಪಕರು ಬೇರೆ ಕಡೆಯಿಂದ ಬಂದವರಲ್ಲ. ಅವರು ನಮ್ಮ ಕನ್ನಡ ನಾಡಿನವರೇ ಎಂಬುದು ಫಾದರ್ ಹೇರಾಸ್, ಬಿ ಎ ಸಾಲೆತ್ತೂರು , ಆಂಧ್ರ ಪ್ರೊಫೆಸರ್ K ಸತ್ಯನಾರಾಯಣ ಮತ್ತು PB ದೇಸಾಯಿ ಅವರ ವಾದವಾಗಿದೆ. ಮುಸ್ಲಿಂ ವಿದ್ವಾಂಸ ಫರಿಸ್ತ ವಿಜಯನಗರ ಅರಸರನ್ನು ಕರ್ನಾಟಕ್ ರಾಯರ್ ಎಂದು ಸಂಬೋಧಿಸಿದರು ಎಂದು PB ದೇಸಾಯಿ ಅವರು ವಿಜಯನಗರ ಮೂಲವನ್ನು ಪತ್ತೆಚ್ಚಿದ್ದಾರೆ.

 ಹರಿಹರನ ಆಳ್ವಿಕೆ

ಸಂಗಮ ವಂಶದ ಮೊದಲ ದೊರೆ ಹರಿಹರ .ಇವನು ಕ್ರಿ.ಶ 1336 ರಿಂದ ಹಿಡಿದು ಎರಡು ದಶಕಗಳ ಕಾಲದವರೆಗೆ ರಾಜ್ಯವನ್ನು ಆಳುತ್ತಾನೆ. ತಂದೆ ಭಾವನ ಸಂಗಮ ತಾಯಿ ಮರವ್ವೆ ನಾಯಕಿ .ಕೆಲವು ಸಿದ್ಧಾಂತಗಳ ಪ್ರಕಾರ ಹಕ್ಕ ಮತ್ತು ಬುಕ್ಕ ವಾರಂಗಲ್ ನ ಕಾಕತೀಯ ರಾಜನ ಸೈನ್ಯದಲ್ಲಿ ಕಮಾಂಡರ್ಗಳಾಗಿದ್ದರು. ವಾರಂಗಲ್ ರಾಜನನ್ನು ಮಹಮ್ಮದ್ ಬಿನ್ ತುಘಲಕ್ ಯುದ್ಧದಲ್ಲಿ ಸೋಲಿಸಿ ಹಕ್ಕ ಮತ್ತು ಬುಕ್ಕನ್ನು ಸೆರೆಹಿಡಿದು ದೆಹಲಿಗೆ ಕಳುಹಿಸಲಾಯಿತು ಅಲ್ಲಿ ಇಬ್ಬರು ಇಸ್ಲಾಂ ಧರ್ಮಕ್ಕೆ ಮತಾಂತರವಾದರು. ಆ ನಂತರ ಋಷಿ ವಿದ್ಯಾರಣ್ಯರ ಪ್ರಭಾವದಿಂದ ಹಿಂದೂ ಧರ್ಮಕ್ಕೆ ಮರಳಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.

        • ಬದ್ರ ನದಿಯ ಮೇಲೆ ರಾಜ್ಯವನ್ನು ಸ್ಥಾಪಿಸುತ್ತಾನೆ .
        • ಹರಿಹರನು ತನ್ನ ಖಡ್ಗ ಮತ್ತು ತಮ್ಮಂದಿರ ನೆರವಿನಿಂದ ರಾಜಕೀಯ ಆಸ್ಥಿರತೆಯ ನಡುವೆ ಶಾಂತಿಯಿಂದ ಆಳ್ವಿಕೆ ಮಾಡುತ್ತಾನೆ.

        • ವಿಜಯನಗರ ಸಾಮ್ರಾಜ್ಯವು ತುಂಗಭದ್ರ ನದಿಯ ತೀರದಲ್ಲಿ ಸ್ಥಾಪಿಸಲಾಗಿದೆ

        • ವಿಜಯನಗರದ ರಾಜಧಾನಿ ಕಿಷ್ಕಿಂದೆಯೇ ಅಂದರೆ ಈಗಿನ ಹಂಪಿ

        • ವಿದ್ಯಾರಣ್ಯ ಕ್ರಿಯಾಶಕ್ತಿ ಪಂಡಿತರು ಹರಿಹರನ ಗುರುಗಳಾಗಿದ್ದರು

        • ಹರಿಹರನು ಮೊದಲು ಹೊಯ್ಸಳರ ಮಾಂಡಲಿಕನಾಗಿದ್ದನು, ಆದ ನಂತರ ಸ್ವಾತಂತ್ರ್ಯ ರಾಜ್ಯವನ್ನು ಸ್ಥಾಪಿಸಿದನು

        • ಚಾಲುಕ್ಯರು ಆಳಿದ ಬಾದಾಮಿ, ಉದಯಗಿರಿ, ಮೊದಲಾದವುಗಳನ್ನು ಕೋಟೆಗಳಿಂದ ಸುರಕ್ಷಿತ ಗೊಳಿಸಿ ಅಲ್ಲಿ ಅವನ ನಂಬಿಕಸ್ತರನ್ನು ನೇಮಿಸಿದನು

        • ಹೊಯ್ಸಳರ ಮೂರನೇ ಬಲ್ಲಾಳ ಸತ್ತು ಹೋದ ಮೇಲೆ ಅವನು ಸಂಪೂರ್ಣ ರಾಜ್ಯದ ಮೇಲೆ ಹತೋಟಿಯನ್ನು ಸ್ಥಾಪಿಸಿದನು. ಈ ಮಹತ್ವ ಕಾರ್ಯದಲ್ಲಿ ಇವನ ಸಹೋದರರು ಇವನ ಬೆನ್ನೆಲುಬು ಆಗಿ ನಿಂತಿದ್ದರು.

        • ಇವನ ಕಾಲದಲ್ಲಿ ಅಲ್ಲಾ-ಉದ್- ಹಸನ್ ಬಹುಮನ್ ಷಾ ಎಂಬುವನು 1347ರಲ್ಲಿ ಗುಲ್ಬರ್ಗದಲ್ಲಿ ಬಹಮನಿ ರಾಜ್ಯವನ್ನು ಸ್ಥಾಪಿಸುತ್ತಾನೆ

        • ಈ ಎರಡು ರಾಜ್ಯಗಳ ನಡುವೆ ನಿರಂತರ ಕದನ ನಡೆಯುತ್ತಿದ್ದವು ತಾಳಿಕೋಟೆ ಕದನ ( 1565 ಜನವರಿ 23 )ವಿಜಯನಗರದ ಪತನಕ್ಕೆ ಕಾರಣವಾಯಿತು.

https://youtu.be/8Oor_I4_PwM?si=9XLMJ81rcAhXUVpI

ಪ್ರಾಕ್ತನ ಇಲಾಖೆಯ ಇತ್ತೀಚಿನ ಸಂಶೋಧನೆಗಳು:

1985ರಿಂದ ಹಂಪೆಯಲ್ಲಿ ಉತ್ಖನನ ಹಾಗೂ ಸಂಶೋಧನೆ ಹಿಂದಿಗಿಂತ ಸ್ವಲ್ಪ ಚುರುಕಾಗಿ ನಡೆಯಲಾರಂಭಿದೆ. ಭಾರತ ಸರ್ವೇಕ್ಷಣ ಇಲಾಖೆ ಮತ್ತು ಕರ್ನಾಟಕ ಪ್ರಾಚ್ಯವಸ್ತು ಇಲಾಖೆಗಳು ಒಟ್ಟಾಗಿ ನಡೆಸಿರುವ ಉತ್ಪನನದ ಫಲವಾಗಿ ಕುತೂಹಲ ಅಂಶಗಳು ಬೆಳಕಿಗೆ ಬರಲಾರಂಭಿಸಿದೆ.ಸಂಶೋಧನೆಯಿಂದ ಬೆಳಕಿಗೆ ಬಂದಿರುವ ವಿಜಯನಗರ ಕಾಲದ ವಾಸ್ತುಶಿಲ್ಪ ನಗರ ಯೋಜನೆ, ಕೋಟೆ ನಿರ್ಮಾಣ ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ ಮೊದಲಾದ ಸೌಲಭ್ಯಗಳ ಬಗ್ಗೆ ಅಂದಿನ ನಗರ ವಾಸ್ತುಶಿಲ್ಪಿಗಳು ಯೋಚಿಸಿರುವ ರೀತಿ ಎಲ್ಲರಿಗೂ ಕುತೂಹಲ ಹುಟ್ಟಿಸುತ್ತವೆ. ಲಭ್ಯವಿರುವ ಈಗಿನ ಮಾಹಿತಿಯ ಪ್ರಕಾರ ಹಂಪಿ ನಗರದ ವಿಸ್ತೀರ್ಣ ಸುಮಾರು 26 ಚದರ ಮೈಲುಗಳೆಂದು ಅಂದಾಜು ಮಾಡಲಾಗಿದ್ದು. ರಾಜಾಂಗಣ ಪ್ರದೇಶವನ್ನು ಶೋಧಿ ಸಲಾಗಿದ್ದು ಅಲ್ಲಿ ಮಣ್ಣಿನಡಿಯಲ್ಲಿ ಅಡಗಿ ಇದ್ದ ಭವ್ಯ ಕಟ್ಟಡಗಳ ಅಡಿಪಾಯಗಳನ್ನು ನೆಲದವರೆಗೆ, ಶೋಧಿಸಿ ಅವುಗಳನ್ನು ಮೂಲ ಸ್ವರೂಪದಲ್ಲೇ ಜೋಡಿಸಲಾಗಿದೆ. ಅರಸರ ಅರಮನೆಯ ಅಡಿಪಾಯ ಹಾಗೂ ಅರಮನೆಗೆ ಹೊಂದಿಕೊಂಡಂತೆ ಇದ್ದ ಇತರ ಕಟ್ಟಡಗಳ ಅಡಿಪಾಯಗಳು, ಪೂಜೆ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಲು ನಿರ್ಮಿಸಿದ್ದ ವಿಶೇಷವಾದ ಭವನದ ಅಡಿಪಾಯ, ಯಜ್ಞಕುಂಡ, ಸೇವಾ ಕಾರಗೃಹಗಳು ಮತ್ತು ಅಂಗರಕ್ಷಕ ಪಡೆಯವರ ನಿವಾಸಗಳ ಅಡಿಪಾಯಗಳನ್ನು ಶೋಧಿಸಲಾಗಿದೆ. ಯಜ್ಞಕುಂಡದಲ್ಲಿ ಬೂದಿ ಸಹ ದೊರಕಿದೆ.

ವಿದೇಶೀ ಪ್ರವಾಸಿಗರಾದ ಪಯಾಸ್, ನ್ಯೂನಿಜ್ ಮತ್ತು ಅಬ್ದುಲ್ ರಜಾಕ್ ಅವರ ದಾಖಲೆಗಳನ್ನು ಅಧಾರವಾಗಿಟ್ಟುಕೊಂಡು ಈ ಪ್ರದೇಶದಲ್ಲಿ ನಡೆಸಿದ ಉತ್ಪನನ ಸಂಶೋಧಕರಿಗೆ ಪ್ರೋತ್ಸಾಹದಾಯಕವಾಗಿದೆ. ರಾಜನ ಅರಮನೆಯಿಂದ ರಾಜಸಭಾಂಗಣಕ್ಕೆ ಹೋಗಲು ಇರುವ ಮೆಟ್ಟಿಲುಗಳು, ಇದರ ದಕ್ಷಿಣಕ್ಕಿರುವ ರಾಣಿ ನಿವಾಸ, ಪದ್ಮಸರೋವರ ಹಾಗೂ 40 40 ಅಡಿಗಳ ಕಲ್ಯಾಣಿಮೂಲಸ್ವರೂಪದಲ್ಲೇ ಇದೆ. ಸುಮಾರು 40 ಎಕರೆಗಳಷ್ಟು ವಿಸ್ತಾರದಲ್ಲಿರುವ ರಾಜಾಂಗಣದಲ್ಲಿ ನಾಣ್ಯಗಳು, ವಿಗ್ರಹಗಳು, ಮಡಕೆಗಳು, ಸುಣ್ಣ ಹಾಗೂ ಗಾರೆಯಿಂದ ನಿರ್ಮಿತವಾದ ಭಿತ್ತಿಫಲಕಗಳು ದೊರೆತಿವೆ. ಪಿಂಗಾಣಿ ಪಾತ್ರೆಗಳು ಚೀನಿ ಭಾಷೆಯ ಲಿಪಿಯನ್ನೊಳಗೊಂಡಿವೆ.

ರಾಜಧಾನಿ ಹಂಪೆಯ ಮುಖ್ಯ ಕೇಂದ್ರ ಅರಮನೆ. ಇದರ ರಕ್ಷಣೆಗೆ ಅವಶ್ಯವಿದ್ದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದಕ್ಕೆ ಸಾಕ್ಷಾಧಾರ ದೊರೆತಿವೆ. ಅಂಗರಕ್ಷಕ ಪಡೆ ಅರಮನೆ ಸನಿಹದಲ್ಲೇ ಇದ್ದಿತು. ಇದಲ್ಲದೆ ಒಟ್ಟಾರೆ ರಾಜಧಾನಿಯ ರಕ್ಷಣೆಗಾಗಿ ಏಳು ಸುತ್ತಿನ ಕೋಟೆ ಇದ್ದು ನಾಶವಾಗಿರುವುದು ಬೆಳಕಿಗೆ ಬಂದಿದೆ.

ವಿಜಯನಗರ ಸಾಮ್ರಾಜ್ಯದ ವಿದೇಶೀ ದಾಖಲೆಗಳು ವಿಜಯನಗರದ ಹಿರಿಮೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವಂತಹುದಾಗಿದೆ. ಆದರ ಹಿರಿಮೆಯನ್ನು ಕಣ್ಣಾರೆ ಕಂಡು ಬೆರಗಾದ ವಿದೇಶಿಯರ ಅನುಭವ ಬಣ್ಣಿಸಲಸಾಧ್ಯ. ಅವರು ವಿವಿಧ ದೇಶ ಹಾಗೂ ಭಾಷೆಗಳಿಗೆ ಸೇರಿದವರಾದರೂ ವಿಜಯನಗರದ ಹಿರಿಮೆ ಹಾಗೂ ಅದರ ಭವ್ಯತೆಯ ಬಗ್ಗೆ ಅವರೆಲ್ಲರದೂ ಒಂದೇ ಅಭಿಪ್ರಾಯ. ಚೀನಾದ ಅನಾಮಿಕ, ಇಟಲಿಯ ನಿಕೊಲೊಕಾಂಟಿ, ಪರ್ಶಿಯಾದ ಅಬ್ದುಲ್ ರಜಾಕ್, ರಷ್ಯಾದ ನಿಕಿಟನ್, ಪೋಚ್‌ಗಲ್‌ನ ಬಾರ್ಬೋಸ, ಡೊಮಿಂಗೋ ಫಯಾಸ್ ಮತ್ತು ನ್ಯುನಿಜ್ ಇವರೆಲ್ಲರ ಪ್ರವಾಸ ಕಥನಗಳು, ಅನಿಸಿಕೆಗಳು ವಿಜಯನಗರದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಸಹಕಾರಿಯಾಗಿವೆ 

              ಸಾಳುವ ಮತ್ತು ತುಳುವ ವಂಶಗಳು

                           ಸಾಳುವ ವಂಶ

        •  ಸಾಳುವ ವಂಶವು ವಿಜಯನಗರ ಸಾಮ್ರಾಜ್ಯದ ದ್ವಿತೀಯ ರಾಜವಂಶವಾಗಿದೆ.

        •  ಸಾಳುವ ವಂಶವು ಸಂಗಮ ವಂಶದ ನಂತರ ಹುಟ್ಟಿಕೊಂಡಿತು ಕ್ರಿಸ್ತಶಕ 15ನೇ ಶತಮಾನದ ಕೊನೆಯ ಕಾಲದಲ್ಲಿ ಸಾಳುವ ವಂಶವು ಪ್ರಭಾವಶಾಲಿ ಮತ್ತು ಶಕ್ತಿಶಾಲಿಯಾಗಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿತು.

        • ಸಾಳುವ ವಂಶವನ್ನು ನರಸಿಂಹ ದೇವರಾಯನು ಕ್ರಿ.ಶ 1485 ರಲ್ಲಿ ಸ್ಥಾಪಿಸಿದನು ಸಂಗಮರ ಕಾಲದಲ್ಲಿ ಮುಸ್ಲಿಮರ ದಾಳಿಗಳಿಂದ ವಿಜಯನಗರ ಸಾಮ್ರಾಜ್ಯ ದುರ್ಬಲವಾಗಿದ್ದು ಆ ಸಮಯದಲ್ಲಿ ನರಸಿಂಹನು ತನ್ನ ಪ್ರತಿಭೆಯಿಂದ ತನ್ನ ಶಕ್ತಿಯಿಂದ ಶತ್ರುಗಳ ದಾಳಿಯನ್ನು ತಡೆದು ಸಾಮ್ರಾಜ್ಯವನ್ನು ರಕ್ಷಿಸಿದನು. 

        • ನರಸಿಂಹನು ಸಾಳುವ ವಂಶವನ್ನು ಕ್ರಿಸ್ತ ಶಕ 1485 ರಿಂದ 1491 ರವರೆಗೆ ಸಾಮ್ರಾಜ್ಯವನ್ನು ಆಳಿದನು.

        • ತಾಳುವ ಪದದ ಅರ್ಥ ಸಾಳುವ ಎಂಬುವುದು ಆ ಕಾಲದ ಕ್ಷತ್ರಿಯ ಕುಲದವರು ಎಂದು ಹೇಳುತ್ತಾರೆ.  

                                  ತುಳುವ ವಂಶ  :

        • ತುಳುವ ವಂಶ ವಿಜಯನಗರ ಸಾಮ್ರಾಜ್ಯದ ಮೂರನೇ ರಾಜವಂಶವಾಗಿದ್ದು ಸಾಳುವ ವಂಶದ ನಂತರ ಅಧಿಕಾರಕ್ಕೆ ಬರುತ್ತದೆ

        • ಈ ವಂಶದ ಮೊದಲ ಅರಸ ವೀರ ನರಸಿಂಹ ಇವನ ನಂತರ ಕೃಷ್ಣದೇವರಾಯನು ಈ ಸಾಮ್ರಾಜ್ಯದ ಶ್ರೇಷ್ಠ ಆಡಳಿತಗಾರನಾಗಿದ್ದನು ಮತ್ತು ವಿಶಾಲಸಾಮ್ರಾಜ್ಯವನ್ನು ಸ್ಥಾಪಿಸಿದನು

        • ಕೃಷ್ಣದೇವರಾಯನು ಕಲೆ ವಾಸ್ತು ಶಿಲ್ಪ ಸಾಹಿತ್ಯಕ್ಷದಲ್ಲಿ ಬಹಳಷ್ಟು ಸುಧಾರಣೆ ಮತ್ತು ಸಾಧನೆಗಳನ್ನು ಮಾಡುತ್ತಾನೆ

        • ಕೃಷ್ಣದೇವರಾಯ ಸಮರ್ಥ ಆಡಳಿತಗಾರ ಅಪ್ರತಿಮ ವೀರ ಘನವಿದ್ವಾಂಸ ವಿಜಯನಗರ ಅರಸರಲ್ಲಿ ಶ್ರೇಷ್ಠ ಅರಸನಾಗಿದ್ದನು

        • ಸದಾಶಿವ ರಾಯನ ಕಾಲದಲ್ಲಿ ಆಡಳಿತದ ಮೇಲ್ವಿಚಾರಣೆ ಮಾಡುತ್ತಿರುವ ಸಮಯದಲ್ಲಿ ರಾಮರಾಯನ ವಿದೇಶಾಂಗ ನೀತಿಯ ಪರಿಣಾಮವಾಗಿ ರಕ್ಕಸ ತಂಗಡಿಯಲ್ಲಿ ಬಹುಮನಿ ಸೈನ್ಯದಿಂದ ಅತ್ಯಂತ ಹೀನಾಯವಾಗಿ ಸಾಮ್ರಾಜ್ಯದ ಅವನತಿಗೆ ಕಾರಣವಾಗುತ್ತಾನೆ

1 thought on “ವಿಜಯನಗರ ಸಾಮ್ರಾಜ್ಯ”

Leave a Comment