ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ ಇಲ್ಲಿದೆ
ವಿಜಯನಗರ ಸಾಮ್ರಾಜ್ಯ (೧೩೩೬ ೧೬೪೬) ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಸಾಮ್ರಾಜ್ಯಗಳಲ್ಲಿ ಒಂದಾಗಿದೆ.ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಹರಿಹರ ಮತ್ತು ಬುಕ್ಕರಾಯ.
ವಿಜಯನಗರ ಸಾಮ್ರಾಜ್ಯೋ ತುಂಗಭದ್ರ ನದಿಯ ತೀರದಲ್ಲಿ ಹರಡಿದೆ .ಈ ಸಾಮ್ರಾಜ್ಯವು ಕೇವಲ ರಾಜಕೀಯ ಬಲದಿಂದ ಮಾತ್ರವಲ್ಲ ತನ್ನ ವಿಶಿಷ್ಟ ಕಲೆ ಮತ್ತು ವಾಸ್ತುಶಿಲ್ಪದಿಂದಲೂ ಪ್ರಸಿದ್ಧಿಯಾಗಿದೆ.ವಿಜಯನಗರ ಅಂದರೆ ಇಂದಿನ ಹಂಪಿ ಯು ಜಗತ್ತಿಗೆ ಗಮನ ಸೆಳೆಯುತ್ತಿದೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದೆ.
ವಿಜಯನಗರದ ಪ್ರತಿಯೊಂದು ಕಲ್ಲು ದೇವಸ್ಥಾನ ಮತ್ತು ಅರಮನೆಗಳು, ವಿಜಯನಗರದ ಶೌರ್ಯ ಮತ್ತು ಸಂಸ್ಕೃತಿ ಇನ್ನು ಬದುಕು ಉಳಿದಿದೆ ಎಂದು ತೋರಿಸಿಕೊಡುತ್ತದೆ.

ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ
ವಿಜಯನಗರ ಸಾಮ್ರಾಜ್ಯದಕಲೆ
ವಿಜಯನಗರ ಸಾಮ್ರಾಜ್ಯ ದ್ರಾವಿಡ ಶೈಲಿಯಲ್ಲಿದೆ. ಧಾರ್ಮಿಕ ಭಕ್ತಿ ಶೌರ್ಯ ಮತ್ತು ವೈಭವವನ್ನು ಪ್ರತಿಬಿಂಬುಸುತ್ತದೆ. ದೇವಲಾಯಗಳ ಗೋಡೆಗಳು ಸ್ತಂಭಗಳು ಮಂಟಪಗಳು ಆನೆ ಕುದುರೆ ಸೈನಿಕರು ನೃತ್ಯ ಗಾರ್ತಿಗಯರು ಮತ್ತು ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ. ದೇವಾಲಯಗಳ ಒಳಗೆ ಬಿತ್ತಿ ಚಿತ್ರಗಳಲ್ಲಿ ರಾಮಾಯಣ ಮಹಾಭಾರತ ಮತ್ತು ಪುರಾಣಗಳ ದೃಶ್ಯಗಳನ್ನು ಬಣ್ಣಗಳಿಂದ ಬಿಡಿಸಲಾಗಿದೆ.
ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆ
ಸಾಮ್ರಾಜ್ಯ ಅರಸರುಗಳ ಕಾಲದಲ್ಲಿ ಶಿಲ್ಪ ಕಲೆಯು ಬಹಳ ಪ್ರಗತಿಯನ್ನು ಕಂಡಿ ಬಂದಿದೆ ಹಂಪಿಯ ದೇವಾಲಯಗಳಲ್ಲಿ ಶಿವಾ, ವಿಷ್ಣು ಸೂರ್ಯ, ಕೃಷ್ಣ, ನಟರಾಜ, ಯೋಗ ಲಕ್ಷ್ಮಿ ನರಸಿಂಹ ಮತ್ತು ಮಾದನಿಕ ವಿಗ್ರಹಗಳು ವಿಜಯನಗರದ ಕಲೆಯನ್ನು ಎತ್ತಿ ತೋರಿಸುತ್ತದೆ.
ಯೋಗಲಕ್ಷ್ಮಿ ನರಸಿಂಹ 6.7 ಮೀಟರ್ ಗಳಷ್ಟು ಎತ್ತರವಿರುವ ಬೃಹತ್ ಶಿಲ್ಪ. ಇದನ್ನು ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನು ಉಗ್ರನರಸಿಂಹ ಎಂದು ಕರೆಯುತ್ತಾರೆ. ನರಸಿಂಹನು ಯೋಗಾಸನದಲ್ಲಿ ಕುಳಿತಿರುವ ಹಾಗೆ ತೋರಿಸಲಾಗಿದೆ. ಲೇಪಾಕ್ಷಿಯ ಏಕಶಿಲೆಯ ನಂದಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಂದಿಯಾಗಿದೆ. ಇದು 30 ಅಡಿ ಉದ್ದ ಮತ್ತು 20 ಅಡಿ ಎತ್ತರವಿದೆ. ಲೇಪಾಕ್ಷಿಯಲ್ಲಿರುವ ನಾಗಲಿಂಗ 7 ಎಡೆಗಳನ್ನು ಎತ್ತಿ ಮಲಗಿರುವ ಸರ್ಪದ ಮೇಲೆ ಲಿಂಗವನ್ನು ಸ್ಥಾಪಿಸಲಾಗಿದೆ. ಇದೆಲ್ಲವೂ ಶಿಲ್ಪಕಲೆಗೆ ಉದಾಹರಣೆಯಾಗಿದೆ.
ವಿಜಯನಗರ ಸಾಮ್ರಾಜ್ಯ ದ ಚಿತ್ರಕಲೆ
ವಿಜಯನಗರ ಅರಸರುಗಳ ಕಾಲದಲ್ಲಿ ಚಿತ್ರಕಲೆ ಸಾಕಷ್ಟು ಉನ್ನತಿಯನ್ನು ಹೊಂದಿತ್ತು. ವಿಜಯನಗರ ಅರಸರ ಕಾಲದಲ್ಲಿ ಚಿತ್ರಕಲೆ ಬಿತ್ತಿ ಚಿತ್ರಗಳಲ್ಲಿ ಮಾತ್ರವಲ್ಲದೆ ಜನ ಜೀವನದಲ್ಲಿ ಜನಪ್ರಿಯ ಕಲೆಯಾಗಿ ಬೆಳೆದಿತ್ತು , ರಾಜನ ಅಂತಪುರದಲ್ಲಿ ದೇಶ ವಿದೇಶಗಳ ಜನರ ಜೀವನವನ್ನು ವಿವರಿಸುವ ಚಿತ್ರಗಳನ್ನು ಕಾಣಬಹುದು.
ವಿಜಯನಗರದ ಅರಸರುಗಳು ಉನ್ನತ ದರ್ಜೆಯ ಕಲಾವಿದರನ್ನು ತಮ್ಮ ಬಳಿ ಇಟ್ಟುಕೊಂಡು ಚಿತ್ರಕಲೆ ಉನ್ನತಿಗಾಗಿ ಶ್ರಮಿಸಿದರು. ಇವರ ಪ್ರೋತ್ಸಾಹದ ಫಲವಾಗಿ ಹಂಪಿಯಲ್ಲಿರುವ ದೇವಸ್ಥಾನದ ರಂಗಮಂಟಪದ ಮೇಲ್ಚಾವಣಿಯಲ್ಲಿ ಕಲ್ಯಾಣ ಸುಂದ ಮತ್ತು ಪಾರ್ವತಿಯರ ವಿವಾಹದ ದೃಶ್ಯವನ್ನು ಕಾಣಬಹುದು.
ತಾಂಜ ಊರಿನಲ್ಲಿರುವ ರಾವಣ ಕೈಲಾಸವನ್ನು ಎತ್ತುತ್ತಿರುವ ದೃಶ್ಯ ಮತ್ತು ಬ್ರಹ್ಮ ಮಹೇಶ್ವರರಿಗೆ ಸಂಬಂಧಿಸಿದ ಚಿತ್ರಗಳನ್ನು ಸಹ ನಾವು ಕಾಣಬಹುದು.
Table of Contents
ವಿಜಯನಗರ ಸಾಮ್ರಾಜ್ಯ ದ ವಾಸ್ತುಶಿಲ್ಪ
ವಿಜಯನಗರ ವಾಸ್ತುಶಿಲ್ಪ ದ್ರಾವಿಡಸಲ್ಲಿಯ ಶ್ರೇಷ್ಠ ರೂಪ ಆಗಿದೆ, ವಿಜಯನಗರ ವಾಸ್ತುಶಿಲ್ಪವನ್ನು 4 ಭಾಗಗಳಾಗಿ ನೋಡಬಹುದು.
- ದೇವಾಲಯ ವಾಸ್ತು ಶಿಲ್ಪ
- ಇಸ್ಲಾಮಿಕ್ ವಾಸ್ತು ಶಿಲ್ಪ
- ಪೌರವಾಸ್ತು ಶಿಲ್ಪ
- ಮಿಲಿಟರಿ ಅಥವಾ ಸೇನಾ ವಾಸ್ತು ಶಿಲ್ಪ
1) ದೇವಾಲಯ ವಾಸ್ತು ಶಿಲ್ಪ :
ವಿಜಯನಗರದಲ್ಲಿ ದೇವಾಲಯಗಳ ನಿರ್ಮಾಣಕ್ಕಾಗಿ ವಿಜಯನಗರದ ಹೆಸರು ಬಹಳ ಪ್ರೇರಣೆ ಕೊಟ್ಟಿದ್ದರು. ಧಾರ್ಮಿಕ ಉತ್ಸವ ನಿತ್ಯ ಜರುಗುತ್ತಿದ್ದ ಉತ್ಸವ 15 ದಿನಗಳಿಗೆ ಒಮ್ಮೆ ನಡೆಯುತ್ತಿದ್ದ ಉತ್ಸವ ತಿಂಗಳಿಗೊಮ್ಮೆ ಆಡುತ್ತಿದ್ದೋತ್ಸವ ವರ್ಷಕ್ಕೊಮ್ಮೆ ನಡೆಯುತ್ತಿದ್ದ ಉತ್ಸವಗಳಿಗೆ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದರು.ಪೂಜಾ ಸಂದರ್ಭದಲ್ಲಿ ನೃತ್ಯ ಮತ್ತು ಸಂಗೀತಗಳ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತು.ದೇವಾಲಯಗಳ ನಿರ್ಮಾಣಕ್ಕಾಗಿ ಗ್ರಾನೆಟ್ ಮತ್ತು ಬೆಣಚು ಕಲ್ಲುಗಳನ್ನು ಬಳಸುತ್ತಿದ್ದರು.
ವಿಜಯನಗರ ಸಾಮ್ರಾಜ್ಯದ ದೇವಾಲಯಗಳ ವಾಸ್ತುಶಿಲ್ಪದ ಮುಖ್ಯ ಅಂಗಗಳು:
- 1 ಗರ್ಭಗೃಹ: ದೇವರು ಅಥವಾ ದೇವತೆಯನ್ನು ಪ್ರತಿಷ್ಠಾಪಿಸಿದ ಸ್ಥಳ
- ಸುಕನಾಸಿ : ಗರ್ಭಗೃಹದ ಪಕ್ಕದ ಕೋಣೆ
- ಅಂತರಾಳ : ಸುಖನಾಸಿ ಮತ್ತು ರಂಗಮಂಟಪದ ಮಧ್ಯ ಬರುವ ಭಾಗ
- ರಂಗಮಂಟಪ : 4 ಅಥವಾ 16 ಕಂಬಗಳ ಹಜಾರ ಸಭೆಗಳನ್ನು ಮಾಡುವುದಕ್ಕೆ ಇದ್ದ ಜಾಗ
- ಮಹಾ ರಂಗ ಮಂಟಪ ಹಾಗೂ ರಾಯ ಗೋಪುರಗಳು: ಮಹದ್ವಾರಗಳ ಮೇಲೆ ಕಟ್ಟಲ್ಪಡ್ತಿದ್ದ ಗೊಬ್ಬರಗಳು
ಪ್ರಮುಖ ದೇವಾಲಯಗಳು
- ವಿರೂಪಾಕ್ಷ ದೇವಾಲಯ
- ವಿಠಲ ಸ್ವಾಮಿ ದೇವಾಲಯ
- ಹಜಾರ ರಾಮಸ್ವಾಮಿ ದೇವಾಲಯ
1 ವಿರುಪಾಕ್ಷ ದೇವಾಲಯ :
ಈ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ. ಕೃಷ್ಣದೇವರಾಯ 1509 ರಲ್ಲಿ ದೇವಾಲಯದ ಮುಂದೆ ರಂಗ ಮಂಟಪವನ್ನು ನಿರ್ಮಿಸಿದನು. ಈ ದೇವಾಲಯದಲ್ಲಿ 2 ರಾಯ ಗೋಪುರಗಳನ್ನು ಕಾಣಬಹುದು, ಅದರಲ್ಲಿ ಒಂದು 165 ಅಡಿ ಎತ್ತರವಾಗಿದೆ. ದೇವಾಲಯದ ಒಳಾಂಗಣದಲ್ಲಿ ವಿರೂಪಾಕ್ಷನ ಗರ್ಭಗೃಹದ ಜೊತೆಗೆ ಭುವನೇಶ್ವರಿ, ಪಾತಾಳೇಶ್ವರಿ, ದುರ್ಗಿ ಮತ್ತು ಗಣಪತಿಯ ಗುಡಿಗಳು ಇದೆ.

- ವಿಜಯನಗರದ ದೇವಾಲಯಗಳು ಸಾಮಾನ್ಯವಾಗಿ ಶಿಲೆ (ಗ್ರಾನೈಟ್) ಅನ್ನು ಬಳಸಿ ಕಟ್ಟಲಾಗಿದೆ. ಗೋಪುರಗಳ ನಿರ್ಮಾಣಕ್ಕೆ ಇಟ್ಟಿಗೆ ಮತ್ತು ಗಾರೆಯನ್ನು ಬಳಸಲಾಗಿದೆ.
- ದೇವಾಲಯಗಳಲ್ಲಿ ಗರ್ಭಗುಡಿ, ಸುಖನಾಸಿ, ನವರಂಗ, ಕಲ್ಯಾಣ ಮಂಟಪ, ವಸಂತ ಮಂಟಪ ಕಾಣಬಹುದು.
- ಕಂಬಗಳಿಂದ ಕೂಡಿದ ದೇವಾಲಗಳನ್ನು ಕಾಣಬಹುದು.
- ದ್ರಾವಿಡ ಶೈಲಿಯಲ್ಲಿರುವ ಕಂಬಗಳು ಅತ್ಯಂತ ಮನಮೋಹಕವಾಗಿ ಕೆತ್ತಲಾಗಿದೆ.
- ಕಂಬಗಳ ಮೇಲೆ ಮುಂದಿನ ಕಾಲು ಎತ್ತಿ ನಿಂತಿರುವ ಕುದುರೆ ಮತ್ತು ಹುಲಿ ಶಿಲ್ಪವನ್ನು ಕಾಣಬಹುದು.
- ಕಂಬಗಳ ಬೋಧಿಗೆಯ ಮೇಲಿಂದ ಚಾಚಿರುವ ಲೋಕದಲ್ಲಿ ಅನೇಕ ಸುರಳಿಗಳನ್ನು ಕೆತ್ತಿ ಅಂತಿಮವಾಗಿ ಕೆಳಕ್ಕೆ ಬಗ್ಗಿರುವ ಕಮಲದ ಮೊಗ್ಗನ್ನು ಬಿಡಿಸಲಾಗಿದೆ.
2 ವಿಠಲ ದೇವಾಲಯ :

ವಿಠಲ ದೇವಾಲಯವು ವಿಷ್ಣು ಅವತಾರ ಎಂದು ಹೇಳಲಾಗುತ್ತದೆ. ವಿಠಲ ಸ್ವಾಮಿ ದೇವಾಲಯವನ್ನು ಪ್ರೌಢ ದೇವರಾಯನ ಕಾಲ ಅವಧಿಯಲ್ಲಿ ಆರಂಭಿಸಿದರು ಈ ಕಾರ್ಯವನ್ನು 1565 ರವರೆಗೆ ಮುಂದುವರಿಸಿದರು. ಸುಮಾರು 500 ಅಡಿ ಉದ್ದ 310 ಅಗಲವಾದ ವಿಸ್ತೃತ ಅಂಗಳದ ಮಧ್ಯೆ ಈ ದೇವಾಲಯವನ್ನು ಪೂರ್ವಕ್ಕೆ ನಿರ್ಮಿಸಲಾಗಿದೆ. ಈ ಅಂಗಳದ ಸುತ್ತಲೂ 3 ಸಾಲು ಕಂಬಗಳಿಂದ ಕೂಡಿದ ಮಂಟಪದ ಸಾಲುಗಳಿವೆ. ಈ ದೇವಾಲಯವನ್ನು ಪೂರ್ವ ಉತ್ತರ ಮತ್ತು ದಕ್ಷಿಣ ಪ್ರವೇಶ ದ್ವಾರಗಳಿಂದ ಪ್ರವೇಶಿಸಬಹುದು. ಈ ದೇವಾಲಯ ಗರ್ಭಗೃಹ, ಅರ್ಧ ಮಂಟಪ ಹಾಗೂ ಮಹಾಮಂಟಪಗಳನ್ನು ಒಳಗೊಂಡಿರುತ್ತದೆ.
3 ಹಜಾರ ರಾಮಸ್ವಾಮಿ ದೇವಾಲಯ :

ಹಜಾರ ರಾಮಸ್ವಾಮಿ ದೇವಾಲಯವನ್ನು 15ನೇ ಶತಮಾನದಲ್ಲಿ ಕೃಷ್ಣದೇವರಾಯ ತನ್ನ ಪೂರ್ವದ ದಿಗ್ವಿಜಯಗಳ ಸವಿನೆನಪಿಯಾಗಿ ಪೂರ್ವಕ್ಕೆ ಮುಖ ಮಾಡಿ ಈ ದೇವಾಲಯವನ್ನು ನಿರ್ಮಿಸಿದನು. ಈ ದೇವಾಲಯದಲ್ಲಿ ಒಂದು ಸಾವಿರದಷ್ಟು ಶಿಲ್ಪಗಳನ್ನು ಕಾಣಬಹುದು, ಆ ಶಿಲ್ಪಗಳು ಸುಬ್ರಮಣ್ಯ, ಗಣೇಶ, ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಶಿಲ್ಪ ದೃಶ್ಯಗಳಾಗಿವೆ. ಈ ದೇವಾಲಯ ರಾಜ ಕುಟುಂಬದವರಿಗೆ ಮಾತ್ರ ಮೀಸಲಾಗಿತ್ತು.
2) ಇಸ್ಲಾಮಿಕ್ ವಾಸ್ತುಶಿಲ್ಪ :
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಲ್ಲಿ ಮುಸ್ಲಿಮರ ಬಡಾವಣೆಗಳು ಇದ್ದವು. ಇದರಲ್ಲಿ ಶ್ರೀಮಂತ ಮುಸ್ಲಿಮರು ಹಲವರು ಕಟ್ಟಡಗಳನ್ನು ನಿರ್ಮಿಸಿದರು. ಅವುಗಳೆಂದರೆ ಸಮಾಧಿಗಳು, ಗೋರಿಗಳು , ಮತ್ತು ಮಸೀದಿಗಳು, . ಈ ಕಟ್ಟಡಗಳು ಇಸ್ಲಾಮಿಕ್ ವಾಸ್ತು ಶೈಲಿಯ ಲಕ್ಷಣಗಳಾದ ಗುಮ್ಮಟಗಳು ಮತ್ತು ಕಮಾನುಗಳು ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ.
3) ಪೌರವಾಸ್ತು ಶಿಲ್ಪ :
ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಅರಮನೆಗಳು, ಮಹಾನವಮಿ ದಿಬ್ಬ ರಾಜನ ಸಭಾಭವನ ಕೊಳ ಕಮಲ ಮಹಲ್ ರಾಣಿ ಸ್ನಾನ ಗೃಹ ಆನೆಲಾಯ ಮೇಲ್ಚಾವಣಿ ಇರುವ ಬಾವಿ ಮುಂತಾದವು ಪೌರ ವಾಸ್ತುಶಿಲ್ಪದ ಅಡಿಯಲ್ಲಿ ಬರುತ್ತದೆ.
- ಅರಮನೆ : ಟಂಕಶಾಲೆಯ ಪ್ರದೇಶದಲ್ಲಿ ಒಂದು ಅರಮನೆ ಇದ್ದು ಆ ಅರಮನೆ ತುಂಬಾ ಮುಖ್ಯವಾದದ್ದು. ಉತ್ಸವಗಳನ್ನು ಮಾಡುವಾಗ ಈ ಅರಮನೆಗಳನ್ನು ಬಳಸುತ್ತಿದ್ದರು ಇಲ್ಲಿಗೆ ಜನರು, ಪ್ರವಾಸಿಗರು ಮತ್ತು ಅಧಿಕಾರಿಗಳು ಬರುತ್ತಿದ್ದರು. ವಿಜಯನಗರ ಕಾಲದಲ್ಲಿ ರಾಜರು ಅಧಿಕಾರಿಗಳು ಅರಮನೆಯಲ್ಲಿ ವಿವಿಧ ಕಾರ್ಯ ಆಚರಣೆಗಳನ್ನು ಕಾಲದಿಂದ ಕಾಲಕ್ಕೆ ನಡೆದ ಯುದ್ಧಗಳ ಕಾರಣ ಕೆಲವು ಅರಮನೆಗಳು ಹಾಳಾಗಿದೆ
- ಮಹಾನವಮಿ ದಿಬ್ಬ :
O* 14ನೇ ಶತಮಾನದ ಮಧ್ಯ ಭಾಗದಲ್ಲಿ ರಚಿಸಲ್ಪಟ್ಟ ಮಹಾನ್ ನವಮಿ ಉತ್ಸವದ ಈ ದಿಬ್ಬ ಹಂಪಿಯಲ್ಲಿ ನಿರ್ಮಿಸಲಾಗಿದೆ.
O* ಇದನ್ನು ಸಿಂಹಾಸನದ ವೇದಿಕೆಯನ್ನು ಸಹ ಕರೆಯುತ್ತಾರೆ.
O* ಇದು ಸುಮಾರು 22 ಚದರ ಮೀಟರ್ ಪ್ರದೇಶದಲ್ಲಿ 10 ಮೀಟರ್ ಎತ್ತರವಿರುವ ಹಾಗೆ ಕಟ್ಟಲಾಗಿದೆ.
O* ಮಹಾನವಮಿ ಹಬ್ಬವನ್ನು ನಿರ್ಮಿಸಲು ಗ್ರಾನೈಟ್ ಮತ್ತು ಕ್ಲೋರೈಟ್ ಕಲ್ಲುಗಳನ್ನು ಬಳಸಲಾಗಿದೆ.
O* ಮಹಾನ್ ನವಮಿ ದಿಬ್ಬ ಹೊರಮೈ ಉಬ್ಬು ಕೆತ್ತನೆಗಳಿಂದ ಅಲಂಕೃತ ಗೊಂಡಿದೆ. ಅವುಗಳೆಂದರೆ ಆನೆಗಳು, ಒಂಟೆಗಳು, ಕುದುರೆಗಳು ಮತ್ತು ಯುದ್ಧದ ದೃಶ್ಯಗಳು ಇತ್ಯಾದಿ. - ಕಮಲ್ ಮಹಲ್ : ಕಮಲ್ ಮಹಲ್ ಇಂಡೋ ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ವಿಜಯನಗರ ಸಾಮ್ರಾಜ್ಯದ ಅತ್ಯಂತ ಸುಂದರವಾದ ರಾಜಮನೆತನದ ಕಟ್ಟಡಗಳಲ್ಲಿ ಒಂದಾಗಿದೆ. ಈ ಕಟ್ಟಡದಲ್ಲಿ ತೆರೆದ ಕಮಾನುಗಳನ್ನು ಅಳವಡಿಸಲಾಗಿದೆ ಕಮಾನುಗಳನ್ನು ಬಳ್ಳಿಗಳು ಹೂವುಗಳು ಹಂಸಗಳಿಂದ ಅಲಂಕರಿಸಲಾಗಿದೆ . ಕಮಲ ಮಹಲ್ 9 ಗೋಪುರಗಳನ್ನು ಒಳಗೊಂಡಿದೆ.
- ರಾಣಿಯ ಸ್ನಾನ ಗೃಹ : ಪ್ರಾಣಿಯ ಸ್ನಾನ ಗೃಹಗಳನ್ನು ಚೌಕಕಾರವಾಗಿ ನಿರ್ಮಿಸಲಾಗಿತ್ತು. ಇದರ ಸುತ್ತಮುತ್ತ ನಾಲೆಗಳು ಹರಿದು ಹೋಗುತ್ತಿತ್ತು. ಪೂರ್ವ ದಿಕ್ಕಿನಲ್ಲಿರುವ ಗುಂಡಿಗಳ ಸಹಾಯದಿಂದ ಸ್ನಾನ ಗೃಹಕ್ಕೆ ನೀರನ್ನು ಒದಗಿಸಿಕೊಡುತ್ತಿದ್ದರು. ಈ ಸ್ನಾನ ಗೃಹದ ಕಟ್ಟಡವು ವಿಭಿನ್ನ ವಾಸ್ತು ಶೈಲಿಗಳ ಮಿಶ್ರಣ ವಾಗಿದೆ
- ಆನೆಲಾಯ : ಇದು ಸರಿಸುಮಾರು 85 ಮೀಟರ್ ಉದ್ದವಿರುವ ಆಯತಾಕಾರದ ಕಟ್ಟಡವಾಗಿದೆ. ಈ ಕಟ್ಟಡವು ಪಶ್ಚಿಮಾಭಿಮುಖವಾಗಿ ಚೌಕಾಕಾರದ 11 ಕೊಠಡಿಗಳನ್ನು ಹೊಂದಿದೆ. ಪತಿ ಕೊಠಡಿಯು ಪ್ರವೇಶ ದ್ವಾರಗಳಲ್ಲಿ ಕಮಾನುಗಳನ್ನು ಕಾಣಬಹುದು.
4) ಮಿಲಿಟರಿ ಅಥವಾ ಸೇನಾ ವಾಸ್ತು ಶಿಲ್ಪ :
- ವಿಜಯನಗರ ಅರಸರುಗಳು ತಮ್ಮ ರಾಜಧಾನಿ ಹಾಗೂ ಬೇರೆ ಬೇರೆ ಪ್ರದೇಶಗಳನ್ನು ಶತ್ರುಗಳಿಂದ ಕಾಪಡಲ್ಲಿ ಕೋಟೆಗಳನ್ನು ನಿರ್ಮಿಸುತ್ತಿದ್ದರು.
- ಈ ರೀತಿ ನಿರ್ಮಾಣ ಮಾಡಿದ ಕೋಟೆಗಳು ಮಿಲಿಟರಿ ಅಥವಾ ಸೇನಾ ವಾಸ್ತುಶಿಲ್ಪದಲ್ಲಿ ಪ್ರಮುಖವಾದವು ಯಾವೆಂದರೆ ವಿಜಯನಗರ ರಾಜಧಾನಿ ಹಂಪಿ ಏಳು ಕೋಟಿಗಳಿಂದ ಸುತ್ತುವರೆಯಲ್ಪಟ್ಟಿರುತ್ತದೆ.
- ಕೋಟೆಗಳಲ್ಲಿ ಹಲವು ರೀತಿಯ ಬಾಗಿಲುಗಳು ಗಮನಿಸಬಹುದು ನೀವು ಕೋಟೆಗೆ ಪ್ರಧಾನವಾದ ಬಾಗಿಲನ್ನು ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.
- ಸಾಮಾನ್ಯ ದ್ವಾರಗಳನ್ನು ಬಾಗಿಲು ಎಂದು ಕರೆಯುತ್ತಿದ್ದರು. ಉದಾಹರಣೆ ಪೆನುಕೊಂಡೆ ಬಾಗಿಲು.
LATEST POSTS
ಕೊಡಗು ಪ್ರವಾಸ ಮಾಡಬೇಕಾದ 4 ಅದ್ಭುತ ಕಾರಣಗಳು
ಕರ್ನಾಟಕದ ಏಳು ಅದ್ಭುತಗಳು – ನೋಡಲೇಬೇಕಾದ 7 ಅಚ್ಚರಿಯ ಸ್ಥಳಗಳು
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ.
ಹಂಪಿಯ ಮೊದಲನೆ ಹೆಸರು ಏನಿತ್ತು
ಹಂಪಿಯ ಮೊದಲನೆ ಹೆಸರು ‘ಪಂಪಾ’ ಎಂದಿತ್ತು
ಹಂಪಿಯ ಪ್ರಸಿದ್ಧ ದೇವಾಲಯ ಯಾವುದು
ವಿರೂಪಾಕ್ಷ ದೇವಸ್ಥಾನ
ತಾಳಿಕೋಟೆ ಯುದ್ಧ ಯಾವ ವರ್ಷ ನಡೆಯಿತು
ಕ್ರಿ.ಶ. 1565ರಲ್ಲಿ.
ವಿಜಯನಗರದ ಪ್ರಸಿದ್ಧ ದೇವಾಲಯಗಳ ಉದಾಹರಣೆಗಳು ಯಾವುವು
ಹಂಪಿಯ ವಿರೂಪಾಕ್ಷ ದೇವಾಲಯ, ವಿಠ್ಠಲಸ್ವಾಮಿ ದೇವಾಲಯ ಮತ್ತು ಹಜಾರರ ರಾಮಸ್ವಾಮಿ ದೇವಾಲಯ ಪ್ರಮುಖವು.
ಹಂಪಿಯಲ್ಲಿರುವ ಸಂಗೀತ ಸ್ತಂಭಗಳು ಯಾವ ದೇವಾಲಯದಲ್ಲಿ ಕಂಡುಬರುತ್ತವೆ
ವಿಠ್ಠಲಸ್ವಾಮಿ ದೇವಾಲಯದಲ್ಲಿ.
12.ಹಜಾರರ ರಾಮಸ್ವಾಮಿ ದೇವಾಲಯ ಎಲ್ಲಿದೆ
ಹಂಪಿಯಲ್ಲಿ.
ವಿರೂಪಾಕ್ಷ ದೇವಾಲಯ ಯಾವ ನಗರದಲ್ಲಿದೆ
ಹಂಪಿ.
ಹಂಪಿಯ ಸ್ಮಾರಕಗಳಿಗೆ ಯುನೆಸ್ಕೋ ನೀಡಿರುವ ಮಾನ್ಯತೆ ಏನು
ವಿಶ್ವ ಹೇರಿಟೇಜ್ ತಾಣ.
ವಿಜಯನಗರ ಶಿಲ್ಪಗಳಲ್ಲಿ ಮುಖ್ಯವಾಗಿ ಯಾವ ವಿಷಯಗಳನ್ನು ಕೆತ್ತಲಾಗಿದೆ
ಪೌರಾಣಿಕ ಕಥೆಗಳು, ನೃತ್ಯ–ಸಂಗೀತ ದೃಶ್ಯಗಳು.
ಹಂಪಿಯ ಪ್ರಸಿದ್ಧ ಉತ್ಸವ ಮಂಟಪದ ಹೆಸರು ಏನು
ಹಜಾರ ಮಂಟಪ.
ಹಂಪಿಯ ವಿಠ್ಠಲಸ್ವಾಮಿ ದೇವಾಲಯದಲ್ಲಿರುವ ರಥವನ್ನು ಏನೆಂದು ಕರೆಯುತ್ತಾರೆ
ಕಲ್ಲಿನ ರಥ.
2 thoughts on “ಅದ್ಭುತ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪದ ಸಂಪೂರ್ಣ ಮಾಹಿತಿ”