
ಮಹಾತ್ಮ ಗಾಂಧೀಜಿಯವರು ನಮ್ಮ ಭಾರತ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟ ಗಾರರಾಗಿದ್ದರು . ಅವರು ಅಕ್ಟೋಬರ್ 2 ರಂದು 1869 ರಲ್ಲಿ ಗುಜರಾತಿನ ಪೂರ ಬಂದರು ಗ್ರಾಮದಲ್ಲಿ ಜನಿಸಿದರು.
ಮಹಾತ್ಮ ಗಾಂಧೀಜಿಯವರ ತಂದೆಯ ಹೆಸರು ಕರಮಚಂದ್ ಗಾಂಧಿ ಮತ್ತು ತಾಯಿಯ ಹೆಸರು ಪುತಲೀ ಬಾಯಿ ಗಾಂಧಿಯವರ ಪೂರ್ಣ ಹೆಸರು ಮೋಹನ್ ದಾಸ್ ಕರಮಚಂದ್ ಗಾಂಧಿ, ನಾವೆಲ್ಲರೂ ಅವರನ್ನು ಬಾಪು ಮತ್ತು ರಾಷ್ಟ್ರಪಿತ ಎಂದು ಕರೆಯುತ್ತೇವೆ.
ಗಾಂಧೀಜಿಯವರು ತಮ್ಮ ಆರಂಭಿಕ ಶಿಕ್ಷಣವನ್ನು ಪೋರ ಬಂದರ್ ನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ರಾಜ್ ಕೋಟ್ ನಲ್ಲಿ ಪೂರ್ಣಗೊಳಿಸಿದರು. ಅವರು ಇಂಗ್ಲೆಂಡಿಗೆ ಹೋಗಿ ಕಾನೂನು ಓದಿ ಕಾನೂನಿನ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
Table of Contents

ಮಹಾತ್ಮ ಗಾಂಧೀಜಿಯವರ ತತ್ವಗಳು
- ಸತ್ಯ (ನಿಜ): ಮಹಾತ್ಮ ಗಾಂಧೀಜಿ ಅವರು ಎಲ್ಲಾ ಸಮಯದಲ್ಲೂ ಸತ್ಯದ ಶಕ್ತಿಯನ್ನು ಒತ್ತಿ ಹೇಳಿದರು ಮಾತಿನಲ್ಲಿ ಮಾತ್ರವಲ್ಲ, ಮನಸ್ಸಿನಲ್ಲೂ ನಿಜ ಮತ್ತು ಸತ್ಯತೆ ಇರಬೇಕು ಎಂದು ಪ್ರತಿಪಾದಿಸಿದರು.
- ಅಹಿಂಸಾ (ಹಿಂಸೆ ಮಾಡಬೇಡಿ): ಯಾವುದೇ ಜೀವಿಗೆ ಹಾನಿ ಮಾಡಬಾರದು, ಮಾತು, ಚಿಂತನೆ, ಕಾರ್ಯಗಳಲ್ಲಿ ತಾಳ್ಮೆ ಇರಬೇಕು.ಇದನ್ನು ಸತ್ಯದ ಹಾದಿ ಎಂದು ಪರಿಗಣಿಸಲಾಗಿದೆ.
- ಬ್ರಹ್ಮಚರ್ಯ (ಸ್ವ ನಿಯಂತ್ರಣ): ಮನಸ್ಸಿನ ಎಲ್ಲಾ ಇಚ್ಛೆಗಳನು ನಿಯಂತ್ರಿಸಬೇಕು, ಬ್ರಹ್ಮಚರ್ಯ ಎಂದರೆ ಸಂಪೂರ್ಣ ಜೀವನಶೈಲಿಯ ಬದಲಾವಣೆ, ಕೇವಲ ಬ್ರಹ್ಮಚರ್ಯವಲ್ಲ, ಮತ್ತು ಆಹಾರ ಪದ್ಧತಿ ಮತ್ತು ದೈನಂದಿನ ಜೀವನದ ಇತರ ಅಂಶಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣವನ್ನು ಸಹ ಒಳಗೊಂಡಿದೆ.
- ಅಸ್ತೇಯ (ಚೋರಿ ಮಾಡಬೇಡಿ): ಹೊರಗಿನ ವಸ್ತುಗಳನ್ನು ಕಳ್ಳತನ ಮಾಡಬೇಡಿ, ಅಗತ್ಯವಿಲ್ಲದ ವಸ್ತುಗಳು ಬೇಡ.ಬೇರೆ ಅವರ ಸ್ವತ್ತು ಅಥವಾ ಹಕ್ಕನ್ನು ಅನ್ಯಾಯವಾಗಿ ಪಡೆದರೆ ಅದು ನೈತಿಕ ತಪ್ಪು, ಹಂಚುವ ಮನೋಭಾವ ಹಾಗೂ ಸರಳ ಬದುಕು ಎಲ್ಲರಿಗು ಸಮಾನತೆ ತರಲು ಸಹಕಾರಿ. ಎಂದು ಅಸ್ತೇಯ ಬಗ್ಗೆ ಹೇಳಿದ್ದಾರೆ.
- ಅಪರಿಗ್ರಹ (ಕಡಿಮೆ ಸ್ವಾಮ್ಯ): ಅನಾವಶ್ಯಕ ವಸ್ತುಗಳನ್ನು ಸಂಗ್ರಹಿಸಬೇಡಿ, ಅಗತ್ಯವಿಲ್ಲದದ್ದನ್ನು ಒಬ್ಬ ವ್ಯಕ್ತಿಯು ತನ್ನಲ್ಲಿಯೇ ಸಂಗ್ರಹಿಸಬಾರದು ಮತ್ತು ಜನರು ತಮ್ಮ ಜೀವನವನ್ನು ಸರಳ ರೀತಿಯಲ್ಲಿ ನಡೆಸಬೇಕು ಎಂದು ಅವರು ಪ್ರತಿಪಾದಿಸಿದರು.
- ಶರೀರಶ್ರಮ (ದೇಹಕಾರ್ಯ): ಪ್ರತಿಯೊಬ್ಬ ವ್ಯಕ್ತಿಯು ದೈನಂದಿನ ಆಹಾರಕ್ಕೋಸ್ಕರ ದೈಹಿಕ ಶ್ರಮದಿಂದ ಗಳಿಸಬೇಕು ಮತ್ತು ತಮ್ಮ ಬೌದ್ಧಿಕ ಪ್ರತಿಭೆಯನ್ನು ಸಮಾಜದ ಸೇವೆಗೆ ಬಳಸಬೇಕು ಎಂದು ಗಾಂಧಿ ನಂಬಿದ್ದರು.
- ಆಸ್ವಾದ (ಆಹಾರದ ನಿಯಂತ್ರಣ): ಆಹಾರವನ್ನು ಕೇವಲ ದೇಹದ ಪೋಷಣೆಗೆ ಮಾತ್ರ ಸೇವಿಸಬೇಕು. ಅಗತ್ಯಕ್ಕಿಂತ ಹೆಚ್ಚು ಪೋಷಣೆ ಮಾಡಿದರೆ ಆಸ್ವಾದ ತತ್ವಕ್ಕೆ ವಿರುದ್ಧವಾಗಿತ್ತು.
- ಅಭಯ (ಭಯ ಮುಕ್ತತೆ): ರೋಗ, ಗಾಯ, ಸಾವು, ಸಂಪತ್ತಿನ ನಷ್ಟ, ಬಡತನ, ಪ್ರತಿಷ್ಠೆಯ ನಷ್ಟ, ಪ್ರೀತಿಪಾತ್ರರ ನಷ್ಟ, ಸಾವು,ಯಾವುದರಿಂದಲೂ ಭಯಪಡಬೇಡಿ, ಧೈರ್ಯದಿಂದ ಬದುಕಿ ಎಂಬುದು ಗಾಂಧೀಜಿ ಅವರ ತತ್ವ ಆಗಿತ್ತು.
- ಸರ್ವ-ಧರ್ಮ-ಸಮಾನತ್ವ ಎಲ್ಲಾ ಧರ್ಮಗಳಿಗೆ ಸಮಾನ ಗೌರವ ನೀಡಬೇಕು.
- ಸ್ವದೇಶಿ (ದೇಶೋದ್ಯಮ ಪ್ರೋತ್ಸಾಹ): ದೇಶದ ಜನರಿಗೆ ಪ್ರಯೋಜನವಾಗದ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಬದಲು ಜನರು ತಮ್ಮ ತಾಯ್ನಾಡಿನಿಂದಲೇ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಅವರು ಅಧಿಕಾರ ನೀಡಿದರು.
- ಅಸ್ಪೃಶ್ಯತ ನಿವಾರಣ (ಅಸ್ಪೃಶ್ಯತೆ ಬಗೆಹರಿಸಬೇಕು): ಮಹಾತ್ಮ ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಟೀಕಿಸಿದರು, ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಹಕ್ಕು ಮತ್ತು ಗೌರವ ಇರಬೇಕು.ಮತ್ತು ಅಸ್ಪೃಶ್ಯರಿಗೆ ‘ಹರಿಜನ’ ಎಂಬ ಹೆಸರನ್ನು ನೀಡಿದರು.
ಮಹಾತ್ಮ ಗಾಂಧೀಜಿಯವರ ಈ ತತ್ವಗಳನ್ನು ನಮ್ಮೆಲ್ಲರ ಜೀವನದಲ್ಲಿ ಪಾಲಿಸಿಕೊಂಡು ಹೋಗಬೇಕು. ಇದು ನಮ್ಮ ಬದುಕನ್ನು ಸರಳ ಮತ್ತು ಸತ್ಯ ಸಹಭಾಗಿತ್ವದ ಮಾರ್ಗದರ್ಶಕ ವಾಗಿಸುತ್ತದೆ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ
ಮಹಾತ್ಮ ಗಾಂಧೀಜಿಯವರ ಪಾತ್ರ
ಖೇಡ ಸತ್ಯಾಗ್ರಹ 1918
- ರೈತರಿಗೆ ಆರ್ಥಿಕ ಹಿಂಸೆಯಿಂದ ರಕ್ಷಿಸುವ ಹೋರಾಟ ವಾಗಿತ್ತು.
- 1918ರಲ್ಲಿ ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯಲ್ಲಿ ನಡೆದ ಪ್ರಮುಖ ಸತ್ಯಾಗ್ರಹ.
- ಆ ಕಾಲದಲ್ಲಿ ಭಾರೀ ಮಳೆ ಹಾಗೂ ಬರದ ಕಾರಣ ಬೆಳೆ ನಾಶವಾಯಿತು. ರೈತರು ಭಾರೀ ಸಂಕಷ್ಟಕ್ಕೆ ಒಳಗಾದರು.
- ಬೆಳೆ ಹಾನಿಯಾದರೂ, ಬ್ರಿಟಿಷ್ ಸರ್ಕಾರವು ಭೂಮಿಕರ (Land Revenue) ತೆರಿಗೆ ಮನ್ನಾ ಮಾಡದೆ, ರೈತರಿಂದ ಬಲವಂತವಾಗಿ ತೆರಿಗೆ ವಸೂಲಿ ಮಾಡಲು ಯತ್ನಿಸಿತು.
- ಬೆಳೆ ಹಾನಿಯಿಂದ ತೆರಿಗೆ ಪಾವತಿಸಲು ಸಾಧ್ಯವಿಲ್ಲ ಎಂದು ರೈತರ ತೆರಿಗೆ ಮನ್ನಾ ಮಾಡಬೇಕು ಎಂದು ಹೋರಾಟ ಮಾಡುತ್ತಾರೆ
ಚಂಪಾರಣ್ ಸತ್ಯಾಗ್ರಹ – 1917
- ಇದು ಮಹಾತ್ಮ ಗಾಂಧೀಜಿಯವರ ಮೊದಲ ಸತ್ಯಾಗ್ರಹ ಆಗಿತ್ತು, ಬಿಹಾರ ರಾಜ್ಯದ ಚಂಪಾರಣ್ ಜಿಲ್ಲೆಯಲ್ಲಿ ನಡೆಯಿತು.
- ಚಂಪಾರಣ್ ಪ್ರದೇಶದ ರೈತರು ನೀಲ ಬೆಳೆ (Indigo cultivation) ಬೆಳೆಸಬೇಕೆಂದು ಬ್ರಿಟಿಷ್ ಜಮೀನುದಾರರು ರೈತರಿಗೆ ಬಲವಂತ ಮಾಡುತ್ತಿದ್ದರು.
- ರೈತರು ಇದರಿಂದ ಬಹಳ ನಷ್ಟಪಟ್ಟು ಬಡತನಕ್ಕೆ ತಳ್ಳಲ್ಪಟ್ಟಿದ್ದರು.
- ಬೆಳೆಯನ್ನು ಬೆಳೆಯದೇ ಇದ್ದರೂ ಕೂಡಾ ಭೂಮಿಯ ತೆರಿಗೆ (rent) ಪಾವತಿಸಬೇಕಾಗಿತ್ತು.
- 1917 ರಲ್ಲಿ ಗಾಂಧಿ ಅವರು ಚಂಪಾರಣ್ ಪ್ರದೇಶದ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಹ್ವಾನಿಸಿದರು.
- ಗಾಂಧೀಜಿ ಅವರು ರೈತರ ಪರವಾಗಿ ಸತ್ಯಾಗ್ರಹ ನಡೆಸಿ, ಅವರ ನ್ಯಾಯಕ್ಕಾಗಿ ಹೋರಾಟ ಮಾಡಿದರು.
- ಇದು ಗಾಂಧೀಜಿಯ ಅಹಿಂಸೆ ಮತ್ತು ಸತ್ಯಾಗ್ರಹ ತತ್ವದ ಮೊದಲ ದೊಡ್ಡ ಪ್ರಯೋಗ ಆಗಿದೆ.
- ಬ್ರಿಟಿಷ್ ಸರ್ಕಾರವು ಚಂಪಾರಣ್ ಕೃಷಿ ಸಮಿತಿ ರಚಿಸಿ,
- ರೈತರು ನೀಲ ಬೆಳೆಯನ್ನು ಬಲವಂತವಾಗಿ ಬೆಳೆಸುವ ಪದ್ಧತಿ ರದ್ದು ಮಾಡಲಾಯಿತು.
ದಂಡಿ ಉಪ್ಪಿನ ಯಾತ್ರೆ 1930
- ಬ್ರಿಟಿಷರು ಸಾಮಾನ್ಯ ಜನರಿಗೆ ಉಪ್ಪು ತಯಾರಿಸಲು ಅಥವಾ ಮಾರಾಟ ಮಾಡಲು ನಿರ್ಬಂಧ ಹೇರಿದ್ದರು.
- ಎಲ್ಲರೂ ಬಳಸುವ ಉಪ್ಪಿಗೂ ತೆರಿಗೆ ಹಾಕಲಾಗುತ್ತಿತ್ತು.ಇದನ್ನು ಜನರ ಜೀವನದ ಮೇಲೆ ಬಲವಂತದ ಶೋಷಣೆ ಎಂದು ಗಾಂಧೀಜಿ ವಿರೋಧಿಸಿದರು.
- 1930ರ ಮಾರ್ಚ್ 12ರಂದು ಗಾಂಧೀಜಿ ಅಹಮದಾಬಾದ್‌ನ ಸಬರ್ಮತಿ ಆಶ್ರಮದಿಂದ 78 ಅನುಯಾಯಿಗಳೊಂದಿಗೆ ಪಾದಯಾತ್ರೆ ಆರಂಭಿಸಿದರು.
- ಸುಮಾರು 390 ಕಿಮೀ ದೂರವನ್ನು 24 ದಿನಗಳಲ್ಲಿ ನಡೆದು ಏಪ್ರಿಲ್ 6ರಂದು ಗುಜರಾತ್‌ನ ದಂಡಿ ತೀರಕ್ಕೆ ತಲುಪಿದರು.
- ಅಲ್ಲಿ ಸಮುದ್ರದ ನೀರಿನಿಂದ ಉಪ್ಪು ತಯಾರಿಸಿ ಕಾನೂನು ಉಲ್ಲಂಘನೆ ಮಾಡಿದರು.
- ಈ ಚಳುವಳಿಗೆ ಲಕ್ಷಾಂತರ ಜನರು ಸೇರಿಕೊಂಡರು.
- ದೇಶದಾದ್ಯಂತ ಉಪ್ಪು ಸತ್ಯಾಗ್ರಹ ಹರಡಿತು.ಗಾಂಧೀಜಿ ಹಾಗೂ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಬಂಧಿತರಾದರು.
ಅಹಮದಾಬಾದ್ ಮಿಲ್ಲು ಮುಷ್ಕರ (1918)
- ಮಿಲ್ಲು ಮಾಲೀಕರು ಕಾರ್ಮಿಕರ ವೇತನ ಕಡಿತ ಮಾಡಲು ಯೋಚಿಸಿದಾಗ, ಕಾರ್ಮಿಕರು ತೊಂದರೆಗೆ ಸಿಲುಕಿದರು.
- ಗಾಂಧೀಜಿ ಕಾರ್ಮಿಕರ ಪಕ್ಷ ವಹಿಸಿ, ಅವರ ನ್ಯಾಯವಾದ ವೇತನಕ್ಕಾಗಿ ಮುಷ್ಕರ ಮಾಡಲು ನೆರವಾದರು. ಇದರಲ್ಲಿ ಅವರು ಉಪವಾಸವೂ ಕೂಡ ಆರಂಭಿಸಿದರು.
ರೌಲಟ್ ಆಕ್ಟ್ ವಿರೋಧ (1919)
- ಬ್ರಿಟಿಷ್ ಸರಕಾರ ಒಂದು ಕ್ರೂರ ಕಾನೂನು ಮಾಡಿತು. ಈ ಕಾನೂನಿನ ಪ್ರಕಾರ, ಯಾರನ್ನಾದರೂ ಬಂಧಿಸಬಹುದು, ವಿಚಾರಣೆ ಮಾಡದೆ ಜೈಲಿಗೆ ಹಾಕಬಹುದು.
- ಈ ಕರಾಳ ಕಾನೂನು ಗೆ ವಿರೋಧಿಸಿ ಗಾಂಧೀಜಿ ದೇಶವ್ಯಾಪಿ ಸತ್ಯಾಗ್ರಹ ಮಾಡಲು ಕರೆ ನೀಡಿದರು.
ಅಸಹಕಾರ ಚಳುವಳಿ (1920–22)
- ಗಾಂಧೀಜಿ ಜನರಿಗೆ ಒಂದು ಸರಳ ಯೋಜನೆ ತಂದರು: “ಬ್ರಿಟಿಷ್ ಸರಕಾರಕ್ಕೆ ಸಹಕರಿಸಬೇಡಿ.”
- ಕ್ರಮ ಜನರು ಬ್ರಿಟಿಷ್ ಸರಕಾರಿ ಶಾಲೆ-ಕಾಲೇಜು, ನ್ಯಾಯಾಲಯ, ಕಚೇರಿಗಳನ್ನು ಬಿಟ್ಟು ಬಂದರು. ವಿದೇಶಿ ಬಟ್ಟೆ ಬಳಸುವುದನ್ನು ನಿಲ್ಲಿಸಿ, ಸ್ವದೇಶಿ ಬಟ್ಟೆಗಳನ್ನು ಧರಿಸಲಾರಂಭಿಸಿದರು
ಭಾರತ ಬಿಟ್ಟಿ ತೊಲಗಿ ಚಳುವಳಿ (1942)
- ಬ್ರಿಟಿಷರನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿದ ಗಾಂಧೀಜಿ, “ಭಾರತ ಬಿಟ್ಟು ತೊಲಗಿ” (Quit India) ಎಂದು ಘೋಷಿಸಿದರು.
ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುವ ಮೊದಲು ಗಾಂಧಿಯವರು ಅನ್ಯಾಯ ಮತ್ತು ವರ್ಗ ವಿಭಜನೆಯ ವಿರುದ್ಧ ಹೋರಾಡಲು ದಕ್ಷಿಣ ಆಫ್ರಿಕಾದಲ್ಲಿ ವಾಸಿಸುತ್ತಿದ್ದರು
ಹತ್ತು ವರ್ಷಗಳಲ್ಲಿ ಗಾಂಧಿಯವರು ಅಲ್ಲಿನ ಸತ್ಯಾಗ್ರಹದ ತತ್ವವನ್ನು ಪ್ರಚಾರ ಮಾಡಿದರು ಮತ್ತು ದೇಶವನ್ನು ವರ್ಗ ಅಥವಾ ಜನಾಂಗೀಯಾ ತಾರತಮ್ಯವಿಲ್ಲದೆ ಸಮಾಜದತ್ತ ಪ್ರೇರೇಪಿಸಿದರು ಗಾಂಧಿಯವರು 1893ರಲ್ಲಿ ಡರ್ಬನ್ ಗೆ ಬಂದರು
ಗಾಂಧಿಯವರು ಸ್ವಲ್ಪ ಸಮಯದೊಳಗೆ ದಕ್ಷಿಣ ಆಫ್ರಿಕಾದ ಭಾರತೀಯ ಸಮುದಾಯದ ನಾಯಕರಾದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಅಹಿಂಸಾತ್ಮಕ ಚಳುವಳಿಯಲ್ಲಿ ಅವರ ಪಾಲ್ಗೊಳ್ಳುವಿಕೆ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪ್ರೇರಣೆಯಾಗಿತ್ತು. ಅಲ್ಲಿಯವರನ್ನು ಒಬ್ಬ ನಾಯಕ ಎಂದು ಗೌರವಿಸುತ್ತಿದ್ದರು.
1893 ರಿಂದ 1914ರವರೆಗೆ ಗಾಂಧಿಯವರು ವಕೀಲರಾಗಿ ಮತ್ತು ಸಾರ್ವಜನಿಕ ಕಾರ್ಯಕರ್ತರಾಗಿ ಕೆಲಸ ಮಾಡಿದರು.
1901ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದರು ಮತ್ತು ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡಲು ಪ್ರಾರಂಭಿಸಿದರು ಅವರು ಮುಫಸಿಲ್ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳನ್ನು ಗೆದ್ದಲು ಮತ್ತು ಅವರ ಆತ್ಮವಿಶ್ವಾಸ ಹೆಚ್ಚಾಯಿತು.
ರಾಷ್ಟ್ರಪಿತ ಗೌರವ
- ಗಾಂಧಿಯವರು ವಿಶ್ವಾದ್ಯಂತ ಮಹಾತ್ಮ ಗಾಂಧಿಯಂತೆ ಚಿರಪರಿಚಿತರು. ಮಹಾತ್ಮ ಅಥವಾ ಮಹಾನ್ ಆತ್ಮ ಎಂಬ ಗೌರವ ಸೂಚಕ ಪದವನ್ನು ಅವರಿಗೆ ಮೊದಲು ನೀಡಿದವರು ಮಿಸ್ಟರ್ ರವೀಂದ್ರನಾಥ ಠಾಗೂರ್ ರವರು ಆಗಿದ್ದಾರೆ.
- ಭಾರತದಲ್ಲಿ ಮಹಾತ್ಮ ಗಾಂಧೀಜಿಯವರನ್ನು ಬಾಪೂ ಎಂದು ಕರೆಯುತ್ತಿದ್ದರು ಮೊದಲ ಬಾರಿಗೆ ಸುಭಾಷ್ ಚಂದ್ರ ಬೋಸ್ ಅವರು ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆದರು.
- ಭಾರತದಲ್ಲಿ ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಅಧಿಕೃತವಾಗಿ ಗೌರವಿಸಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂಬ ಸ್ಮರಣೀಯ ದಿನವನ್ನಾಗಿಸಿ ರಾಷ್ಟ್ರೀಯ ರಜಾ ದಿನವನ್ನಾಗಿಸಿ ಮತ್ತು ವಿಶ್ವದ್ಯಂತ ಈ ದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ.
ಮಹಾತ್ಮ ಗಾಂಧೀಜಿಯವರ ಪೂರ್ಣ ಹೆಸರೇನು
ಮೋಹನದಾಸ್ ಕರಂಚಂದ್ ಗಾಂಧೀ
ಗಾಂಧೀಜಿಯವರ ಜನ್ಮ ದಿನಾಂಕ ಮತ್ತು ಸ್ಥಳ ಯಾವುದು
ಅಕ್ಟೋಬರ್ 2, 1869, ಪೋರಬಂದರ್, ಗುಜರಾತ್
ಗಾಂಧೀಜಿಯವರ ತಂದೆಯ ಹೆಸರೇನು
ಕರಂಚಂದ್ ಗಾಂಧೀ
ಗಾಂಧೀಜಿಯವರ ತಾಯಿಯ ಹೆಸರೇನು
ಪುತ್ಲೀಬಾಯಿ
ಗಾಂಧೀಜಿಯವರ ಪತ್ನಿಯ ಹೆಸರೇನು
ಕಸ್ತೂರಬಾ ಗಾಂಧಿ
ಗಾಂಧೀಜಿ ಯಾವ ದೇಶದಲ್ಲಿ ವಕೀಲರ ಶಿಕ್ಷಣ ಪಡೆದರು
ಇಂಗ್ಲೆಂಡ್
ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಎಷ್ಟು ವರ್ಷಗಳ ಕಾಲ ಇದ್ದರು
ಸುಮಾರು 21 ವರ್ಷಗಳು (1893-1914)
ಗಾಂಧೀಜಿ ಭಾರತಕ್ಕೆ ದಕ್ಷಿಣ ಆಫ್ರಿಕಾದಿಂದ ಯಾವಾಗ ಮರಳಿದರು
1915
ಗಾಂಧೀಜಿಯವರ ಮೊದಲ ಸತ್ಯಾಗ್ರಹ ಭಾರತದಲ್ಲಿ ಎಲ್ಲಿ ನಡೆಯಿತು
ಚಂಪಾರಣ್, ಬಿಹಾರ (1917)
ಅಸಹಕಾರ ಚಳುವಳಿ ಯಾವಾಗ ಪ್ರಾರಂಭವಾಯಿತು
1920
ಉಪ್ಪು ಸತ್ಯಾಗ್ರಹ ಯಾವಾಗ ನಡೆಯಿತು
1930
ದಂಡಿ ಸತ್ಯಾಗ್ರಹ ಯಾವಾಗ ನಡೆಯಿತು
1930
ಭಾರತ ಬಿಟ್ಟು ತೊಲಗಿ ಚಳುವಳಿ ಯಾವಾಗ ಪ್ರಾರಂಭವಾಯಿತು
ಆಗಸ್ಟ್ 8, 1942
ಗಾಂಧೀಜಿಯವರ ಆತ್ಮಕಥೆಯ ಹೆಸರೇನು
ಸತ್ಯದ ಪ್ರಯೋಗಗಳು ಅಥವಾ My Experiments with Truth
ಗಾಂಧೀಜಿ ಸ್ಥಾಪಿಸಿದ ಆಶ್ರಮದ ಹೆಸರೇನು
ಸಾಬರಮತಿ ಆಶ್ರಮ, ಅಹಮದಾಬಾದ್
ಗಾಂಧೀಜಿಗೆ ಮಹಾತ್ಮ ಎಂಬ ಬಿರುದನ್ನು ಯಾರು ನೀಡಿದರು
ರವೀಂದ್ರನಾಥ ಟಾಗೋರ್
ಗಾಂಧೀಜಿ ಯಾವ ತತ್ವವನ್ನು ಅನುಸರಿಸಿದರು
ಸತ್ಯ ಮತ್ತು ಅಹಿಂಸೆ
ಗಾಂಧೀಜಿ ಯಾವಾಗ ಹತ್ಯೆಯಾದರು
ಜನವರಿ 30, 1948
ಗಾಂಧೀಜಿಯನ್ನು ಯಾರು ಹತ್ಯೆ ಮಾಡಿದರು
ನಾಥೂರಾಮ್ ಗಾಡ್ಸೆ
ಗಾಂಧೀಜಿಯವರ ಜನ್ಮದಿನವನ್ನು ಭಾರತದಲ್ಲಿ ಯಾವುದಾಗಿ ಆಚರಿಸುತ್ತಾರೆ
ಗಾಂಧಿ ಜಯಂತಿ ಮತ್ತು ಅಂತರರಾಷ್ಟ್ರೀಯ ಅಹಿಂಸಾ ದಿನ
ಗಾಂಧೀಜಿಯವರ ನೆಚ್ಚಿನ ಭಜನೆ ಯಾವುದು
ರಘುಪತಿ ರಾಘವ ರಾಜಾರಾಮ್
3 thoughts on “ಮಹಾತ್ಮ ಗಾಂಧೀಜಿ”