ತಾಳಿಕೋಟೆ ಕದನದ ಪರಿಚಯ:
ತಾಳಿಕೋಟೆ ಕದನ ಅಥವಾ ರಕ್ಕಸ ತಂಗಡಿ ಕದನ 1565ರಲ್ಲಿ ಈ ಕದನ ನಡೆಯಿತು ಈ ಕದನವು ಇಡೀ ದಕ್ಷಿಣ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಯುದ್ಧಗಳಲ್ಲಿ ಒಂದಾಗಿದೆ. ಈ ಕಧನವು ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಕೋಟೆಯಾಗಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ದೊಡ್ಡ ರೀತಿಯ ಪೆಟ್ಟುಕೊಟ್ಟು ಧಖ್ಖನ್ ಮತ್ತು ದಕ್ಷಿಣ ಭಾರತದಲ್ಲಿ ಮುಸ್ಲಿಮರ ಸಾರ್ವಭೌಮತ್ವ ಪಡೆಯಲು ಸಹಾಯ ಮಾಡಿ ಕೊಟ್ಟಿದೆ. ಈ ಯುದ್ಧವು ವಿಜಯನಗರ ಸೈನ್ಯಗಳ ಸೋಲಿನೊಂದಿಗೆ ಮುಕ್ತಾಯವಾಗಿತ್ತು ವೈಭವದಿಂದ ಕೋಡಿದ್ದ ಮಹಾನಗರವಾದ ವಿಜಯನಗರ ವಿನಾಶದಿಂದ ಮುಕ್ತಾಯವಾಯಿತು. ಇದರಿಂದ ಉಂಟಾದ ವಿನಾಶದಿಂದ ವಿಜಯನಗರ ಸಾಮ್ರಾಜ್ಯ ಸಂಪೂರ್ಣವಾಗಿ ನೆಲಕಚ್ಚಿ ಮತ್ತೆ ಎದ್ದೇಳಲು ಆಗದಂತಹ ಸ್ಥಿತಿಯನ್ನು ತಲುಪಿತು.
Table of Contents
ಯಾವುದೇ ಯುದ್ಧಗಳಾಗಲಿ ಪ್ರತಿಯೊಂದು ಯುದ್ದಕ್ಕೂ ಅದರದ್ದೆ ಆದ ಕಾರಣಗಳು ಇರುತ್ತವೆ ಈ ಯುದ್ಧದ ಕಾರಣಗಳು ತಿಳಿಯೋಣ

ಯುದ್ಧಕ್ಕೆ ಕಾರಣಗಳು
ರಾಜಕೀಯ ಒಡಕು :
- ರಾಮಾಯಣ ಸಹೋದರರು ಮತ್ತು ಸೈನಿಕ ಸೇನಾಪತಿಗಳ ನಡುವೆ ವಿಶ್ವಾಸ ನಂಬಿಕೆ ಇಲ್ಲದ ಕಾರಣ
- ಸುಲ್ತಾನರ ಒಕ್ಕೂಟ ಸುಲ್ತಾನರ ನಾಲ್ಕು ಮುಸ್ಲಿಂ ರಾಜ್ಯಗಳು ಅಂದರೆ ಬಿಜಾಪುರ ಗೋಲ್ಕೊಂಡ ಅಹಮದ್ನಗರ ಬೀದರ್ ಒಟ್ಟುಗೂಡಿ ತಾಳಿಕೋಟೆ ಕದನಕ್ಕೆ ಆಹ್ವಾನ ಕೊಟ್ಟರು
- ಅಸಮರ್ಥ ನಾಯಕತ್ವ ವಿಜಯನಗರದ ಸೈನಿಕ ರಾಮಾಯಣ ನಾಯಕನಾಗಿದ್ದನು ಅವನು ವೃದ್ಧನು ಮತ್ತು ಅಹಂಕಾರನಾಗಿದ್ದನು ಸೈನ್ಯದ ಇನ್ನೆರಡು ವಿಭಾಗಗಳು ಸಾಕಷ್ಟು ವಯಸ್ಸಾದ ಅವನ ತಮ್ಮಂದಿರಾದ ವೆಂಕಟದ್ರಿ ಮತ್ತು ತಿರುಮಲ ಕೈ ಕೆಳಗಿದ್ದವು ಬಹಮನಿ ಸೈನ್ಯಗಳು ಯುವಕ ಉತ್ಸಾಹಿ ಮತ್ತು ಛಲದ ಸುಲ್ತಾನರ ಮುಖಂಡತ್ವವನ್ನು ಪಡೆದಿದ್ದವು
- ಕದನದಲ್ಲಿ ರಾಮಾಯಣ ಸೈನ್ಯ ಅಧಿಕಾರಿಗಳು ದ್ರೋಹ ಮಾಡಿ ಸುಲ್ತಾನರಿಗೆ ಸಹಾಯ ಮಾಡಿದರು
ಧಾರ್ಮಿಕ ದುರ್ಬಲತೆಗಳು:
- ತಾಳಿಕೋಟೆ ಕದನಕ್ಕೆ ಪ್ರಮುಖವಾದದ್ದು ಧಾರ್ಮಿಕತೆ ಹಿಂದೂ ಮುಸ್ಲಿಮರ ಸಂಘರ್ಷ ರಾಮಾಯಣ ಹಿಂದೂ ಧರ್ಮದ ಪಕ್ಷಪಾತ ಮಾಡುತ್ತಿರುವುದು ಸುಲ್ತಾನರ ಕಣ್ಣಿಗೆ ಯುದ್ಧಕ್ಕೆ ಬರಲು ಸಹಾಯ ಮಾಡಿತು
- ತಾಳಿಕೋಟೆ ಕದನದ ಸಮಯದಲ್ಲಿ ಸೇನೆಯಲ್ಲಿ ಧರ್ಮ ವಿಭಜನೆಯಾಗಿತ್ತು ಹಿಂದೂ ಮುಸ್ಲಿಮರ ಸೈನ್ಯದ ನಡುವೆ ಒಗಟು ಇರಲಿಲ್ಲ
- ಧಾರ್ಮಿಕ ಸಹಿಷ್ಣುತೆ ಕಡಿಮೆಯಾಗಿದ್ದು ಸೈನ್ಯದಲ್ಲಿ ಸಂತುಷ್ಟಿ
- ಕದನ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಮುಖವಾದ ದೇವಾಲಯಗಳ ರಕ್ಷಣೆ ಗೋಸ್ಕರ ತನ್ನ ಸೈನ್ಯದ ಅರ್ಧದಷ್ಟು ಸೈನ್ಯವನ್ನು ದೇವಾಲಯಗಳ ರಕ್ಷಣೆಗೆ ಕಳಿಸುತ್ತಾನೆ.
ಸೈನ್ಯದ ದುರ್ಬಲತೆ :
- ತಾಳಿಕೋಟೆ ಕದನದಲ್ಲಿ ಹಳೆಯ ರೀತಿ ಯುದ್ಧ ತಂತ್ರಗಳನ್ನು ರಾಮರಾಯ ಬಳಸಿಕೊಂಡದ್ದು ಮತ್ತು ಆನೆಗಳು ಕತ್ತಿ ವರಸೆಗಳ ಮೇಲೆ ಅವಲಂಬನೆ ಯಾಗಿದ್ದರಿಂದ ಯುದ್ಧಕ್ಕೆ ಕಾರಣ
- ಆಧುನಿಕ ಶಾಸ್ತ್ರಗಳ ಕೊರತೆ . ಸುಲ್ತಾನ ಹತ್ತಿರ ಆಧುನಿಕ ಶಸ್ತ್ರಗಳು ತೋಪುಗಳು ಮತ್ತು ಫಿರಂಗಿಗಳು ಇವುಗಳ ಮುಂದೆ ರಾಮರಾಯ ನಿಲ್ಲಲು ಆಗಿಲ್ಲ
- ಸಂಚಾರ ಮತ್ತು ಸರಬರಾಜು ಸಮಸ್ಯೆ, ಸೈನ್ಯಕ್ಕೆ ಯುದ್ಧದ ನಡುವೆ ಸಂಚಾರ ಮಾಡಲು ಮತ್ತು ಸರೋವರಜು ಶಸ್ತ್ರಗಳನ್ನು ಮಾಡಲು ತೊಂದರೆ ಆಗುತ್ತಿತ್ತು .
ವಿಜಯನಗರ ಸಾಮ್ರಾಜ್ಯ ಸೈನಿಕವಾಗಿ ಮತ್ತು ಆರ್ಥಿಕವಾಗಿ ಸಮರ್ಥವಾಗಿದ್ದರೂ ತಾಳೀಕೋಟೆ ಯುದ್ಧದಲ್ಲಿ ಸೋಲುಂಟಾಗಲು ಕಾರಣವೇನು ಎಂಬುದು ಇತಿಹಾಸಕಾರರ ಜಿಜ್ಞಾಸೆಗೆ ಒಳಗಾಗಿದೆ. ಇದಕ್ಕೆ ಅವರು ಹಲವಾರು ಕಾರಣಗಳನ್ನು ನೀಡುತ್ತಾರೆ. ಅವೆಂದರೆ,
ಸಮರ್ಥ ಸೈನ್ಯದ ಕೊರತೆ: ವಿಜಯನಗರ ಸೈನ್ಯದ ಸಂಖ್ಯಾಬಲ ದೊಡ್ಡದಾಗಿದ್ದರೂ ಅದರ ಹೋರಾಟ, ಶಕ್ತಿ ಮತ್ತು ದಕ್ಷತೆಗಳು ಸಮರ್ಥವಾಗಿರಲಿಲ್ಲ. ಬಹುಮನಿಯ ಸೈನ್ಯಗಳಂತೆ ಅದು ಆಧುನಿಕ ಶಸ್ತ್ರಾಸ್ತ್ರಗಳನ್ನು ಮತ್ತು ಯುದ್ಧ ವಿದ್ಯೆಯನ್ನು ಕರಗತಗೊಳಿಸಿಕೊಂಡಿರಲಿಲ್ಲ. ರಾಮರಾಯನು ಅಶ್ವಪಡೆಗೆ ಕುದುರೆಗಳನ್ನು ದೊರಕಿಸಿಕೊಟ್ಟಿದ್ದನು. ಇದರಿಂದಾಗಿ ವಿಜಯನಗರದ ಅಶ್ವಪಡೆಯು ಕೃಷ್ಣದೇವರಾಯನ ಕಾಲದಷ್ಟು ಶಕ್ತವಾಗಿರಲಿಲ್ಲ. ಬಹಮನಿಯ ಸೈನ್ಯಗಳು ಪರ್ಷಿಯಾದ ಕುದುರೆಗಳಿಂದ ಸುಸಜ್ಜಿತವಾಗಿದ್ದು ಯುದ್ಧರಂಗದಲ್ಲಿ ತಮ್ಮ ಮಿಂಚಿನ ವೇಗದಿಂದ ಚಲಿಸುತ್ತ ಅವುಗಳ ಹೋರಾಟ ಶಕ್ತಿಯನ್ನು ಇಮ್ಮಡಿಗೊಳಿಸಿದ್ದವು. ವಿಜಯನಗರದ ಸೈನ್ಯಗಳು ಆನೆಗಳನ್ನು ಹೆಚ್ಚಾಗಿ ಯುದ್ಧದಲ್ಲಿ ತೊಡಗಿಸಿದುದು ಮತ್ತು ಅವಲಂಬಿಸಿದ್ದು ಅವರಿಗೆ ಅನಾನುಕೂಲಕರವಾಯಿತು. ಆನೆಗಳ ಚಲನೆ ನಿಧಾನವಾಗಿತಲ್ಲದೆ ಶತೃಗಳ ಫಿರಂಘಿ ದಾಳಿಗಳಿಂದ ಭೀತವಾದ ಆನೆಗಳು ಸಿಕ್ಕಾಪಟ್ಟೆನುಗ್ಗಿ ತಮ್ಮ ಸೈನಿಕರನ್ನೇ ತುಳಿದು ನಾಶಮಾಡುತ್ತಿದ್ದವು.
ಕೆಳದರ್ಜೆಯ ಶಸ್ತ್ರಾಸ್ತ್ರಗಳು: ವಿಜಯನಗರದ ಸೈನ್ಯಗಳು ಬಳಸುತ್ತಿದ್ದ ಶಸ್ತ್ರಾಸ್ತ್ರಗಳೂ ಕೂಡ ಬಹಳ ಹಳೆಯ ಕಾಲದವಾಗಿದ್ದವು. ಸುಲ್ತಾನರ ಸೈನ್ಯಗಳು ಲೋಹದಿಂದ ಮಾಡಿದ ಬಾಣಗಳನ್ನು ಉಪಯೋಗಿಸುತ್ತಿದ್ದರೆ, ವಿಜಯನಗರ ಸೈನ್ಯಗಳು ಬೊಂಬಿನ ಬಾಣಗಳನ್ನು ಬಳಸುತ್ತಿದ್ದವು. ವಿಜಯನಗರದ ಅಶ್ವದಳಗಳು ಹಳೆಯ ಈಟಿ ಮತ್ತು ಕತ್ತಿಗಳನ್ನು ಬಳಸುತ್ತಿದ್ದವು. ಇವರ ಈಟಿಗಳು ಏಳು ಅಡಿಗಿಂತ ಉದ್ದವಾಗಿರಲಿಲ್ಲ. ಶತೃಸೈನ್ಯದವರು 15 ಅಥವಾ 16 ಅಡಿ ಉದ್ದದ ಈಟಿಗಳನ್ನು ಉಪಯೋಗಿಸುತ್ತಿದ್ದರು. ಇದು ಆ ಸೈನ್ಯಗಳ ಶಕ್ತಿಯನ್ನು ವೃದ್ಧಿಗೊಳಿಸಿದ್ದಿತು. ಇದಲ್ಲದೆ ಸುಲ್ತಾನರು ತಮ್ಮ ಪಡೆಗಳನ್ನು ಇತ್ತೀಚಿನ ಫಿರಂಘಿಗಳಿಂದ ಬಲಪಡಿಸಿದ್ದರು. ಐರೋಪ್ಯ ಸೈನಿಕರ ಮತ್ತು ಗೋವಾದ ಕೈಸ್ತರ ಕೈಯಲ್ಲಿ ಈ ಫಿರಂಘಿ ಪಡೆ ಇದ್ದಿತು. ಇದು ವಿಜಯನಗರದ ಪ್ರಭಲ ನ್ಯೂನತೆಯಾಗಿದ್ದಿತು.
ಅಸಮರ್ಥ ನಾಯಕತ್ವ: ವಿಜಯನಗರದ ಸೈನ್ಯಕ್ಕೆ ರಾಮರಾಯನು ನಾಯಕನಾಗಿದ್ದನು. ಅವನು ವೃದ್ದನು, ಅಹಂಭಾವದವನು ಆಗಿದ್ದನು. ಸೈನ್ಯದ ಇನ್ನೆರಡು ವಿಭಾಗಗಳು ಸಾಕಷ್ಟುವಯಸ್ಸಾದ ಅವನ ತಮ್ಮಂದಿರಾದ ವೆಂಕಟಾದ್ರಿ ಮತ್ತು ತಿರುಮಲರ ಕೈಕೆಳಗಿದ್ದವು. ಆದರೆ ಬಹಮನಿ ಸೈನ್ಯಗಳು ಯುವಕ, ಉತ್ಸಾಹಿ, ಮತ್ತು ಛಲದ ಸುಲ್ತಾನರ ಮುಂಖಡತ್ವವನ್ನು ಪಡೆದಿದ್ದವು. ರಾಮರಾಯನ ಆಕಸ್ಮಿಕ ಮರಣದ ತರುವಾಯ ವೆಂಕಟಾದ್ರಿ ಮತ್ತು ತಿರುಮಲರು ಹೇಡಿಗಳಂತೆ ವರ್ತಿಸಿದರು. ಅವರು ತಮ್ಮ ಸೈನ್ಯಗಳನ್ನು ಸಂಘಟಿಸಿ ತಮ್ಮ ರಾಜಧಾನಿಯಾದ ವಿಜಯನಗರವನ್ನಾದರೂ ಉಳಿಸಿಕೊಳ್ಳಲು ಹೋರಾಟ ನಡೆಸಬಹುದಾಗಿತ್ತು, ಆದರೆ ಅವರು ಯುದ್ಧರಂಗದಿಂದ ಓಡಿ ಹೋದುದಲ್ಲದೆ ತಮ್ಮ ರಾಜಧಾನಿಯನ್ನೂ ತೊರೆದು ದೂರ ತೆರಳಿದರು. ಇದು ಅತ್ಯಂತ ಅವಮಾನಕರ ಕೃತ್ಯವಾಗಿದ್ದಿತು.
ನಂಬಿಕೆ ದ್ರೋಹ: ವಿಜಯನಗರದ ಸೋಲಿಗೆ ಮೋಸ ಪ್ರಮುಖ.ಕಾರಣವಾಯಿತು. ಮಧ್ಯಭಾಗದಲ್ಲಿ ಗಿಲಾನಿ ಸಹೋದರರು ರಾಮರಾಯನಿಗೆ ಮೋಸ ಮಾಡಿ ತಮ್ಮ ಸೈನಿಕರೊಂದಿಗೆ ಶತೃಪಕ್ಷವನ್ನು ಸೇರಿದರು. ಇದು ವಿಜಯನಗರದ ಸೈನ್ಯದಲ್ಲಿ ಅಸ್ತವ್ಯಸ್ತತೆಯನ್ನುಂಟು ಮಾಡಿತು. ರಾಮರಾಯನು ಅಂತಹವರನ್ನು ಬರಮಾಡಿಕೊಂಡು ತನ್ನ ಸೈನ್ಯದಲ್ಲಿನ ಮುಸ್ಲಿಂ ಸೈನಿಕರ ದಂಡನಾಯಕತ್ವವನ್ನು ವಹಿಸಿದುದು ಅವನು ಮಾಡಿದ ಘೋರ ಅಪರಾಧವಾಗಿದ್ದಿತು. ಇವರು ಮಾಡಿದ ಮೋಸ ವಿಜಯನಗರದ ಸೈನಿಕರ ಹೋರಾಟಕ್ಕೆ ಮಾರಕವಾಗಿ ಅವುಗಳ ಸೋಲಿಗೆ ಕಾರಣವಾಯಿತು.

ತಾಳಿಕೋಟೆ ಕದನದ ಪರಿಣಾಮಗಳು :
ಈ ಯುದ್ಧ ದರ್ಶನ ಭಾರತ ಮತ್ತು ಭಾರತೀಯ ಇತಿಹಾಸದ ನಿರ್ಣಾಯಕ ಯುದ್ಧಗಳಲ್ಲಿ ಒಂದಾಗಿದೆ
- ವಿಜಯನಗರ ಸಾಮ್ರಾಜ್ಯ 3 ಶತಮಾನಗಳಿಂದ ಹಿಂದೂ ಧರ್ಮ ಮತ್ತು ಸಂಸ್ಕೃತಿಗೆ ಭದ್ರತೆ ಮತ್ತು ರಕ್ಷಣೆ ಕೊಡುತ್ತಿದ್ದ ಸಾಮ್ರಾಜ್ಯ ತಾಳಿಕೋಟೆ / ರಕ್ಕಸ ತಂಗಡಿ ಕದನದಿಂದ ನಾಶವಾಗಿತ್ತು
- ದಕ್ಷಿಣ ಭಾರತದಲ್ಲಿ ಮತ್ತೊಮ್ಮೆ ಅಲೈಕ್ಯತೆ ಭದ್ರತೆ ಮತ್ತು ಅವ್ಯವಸ್ಥೆಗಳು ತಲೆದೂರಿ ರಾಜಕತೆ ಎಲ್ಲೆಡೆ ನೆಲೆಸಿದವು ಹಿಂದೂ ಸಂಸ್ಕೃತಿ ಮತ್ತು ಧರ್ಮಗಳಿಗೆ ಗರ ಹೊಡೆಯಿತು
- ಈ ಯುದ್ಧದಿಂದಾಗಿ ವಿಜನಗರ ಸಾಮ್ರಾಜ್ಯದ ಪ್ರಭಲತೆ ಮತ್ತು ವೈಭವಗಳು ಸಂಪೂರ್ಣ ನಾಶವಾಗಿತ್ತು.
- ಈ ಯುದ್ಧದ ಪರಿಣಾಮವಾಗಿ ಸುಲ್ತಾನರು ಪ್ರಬಲವಾಗಿ ಮತ್ತು ಅಧಿಪತ್ಯವನ್ನು ಎಲ್ಲೆಡೆ ವಿಸ್ತರಿಸಲು ದಾರಿ ಮಾಡಿತು
- ಭಾರತದಲ್ಲಿ ಪಾಳೆಗಾರರು ಸ್ವತಂತ್ರವಾಗಿ ಪ್ರಭುತ್ವ ನಡೆಸಲು ಮುಂದಾಗುತ್ತಾರೆ
- ಸುಲ್ತಾನರು ಯುದ್ಧ ಗೆದ್ದ ಮೇಲೆ ವಿಜಯನಗರ ಸಾಮ್ರಾಜ್ಯದ ದೇವಾಲಯಗಳನ್ನು ಲೂಟಿ ಮಾಡಿದರು
- ಕೊನೆಯಲ್ಲಿ ವಿಜಯನಗರ ಸಾಮ್ರಾಜ್ಯ ಹಾಳಾಯಿತು ಇದರ ನಂತರ ಅರವೀಡು ಸಂತತಿ ಆಳ್ವಿಕೆಗೆ ಮುಂದೆ ಬರುತ್ತದೆ.
1 thought on “ತಾಳಿಕೋಟೆ ಕದನ Talikote kadana in kannada”